ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

April 1, 2008 - 9:10pm — rajeshnaik111

ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.

ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.

ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.

ಇಷ್ಟನ್ನೆಲ್ಲಾ ಓದಿದ ಬಳಿಕ ಗುತ್ತಲದ ಶಿಗ್ಗಾವಿ ಮಾಸ್ತರರ ಮನೆಗೆ ಭೇಟಿ ನೀಡಲೇಬೇಕೆಂದು ನಿರ್ಧಾರ ಮಾಡಿದ್ದೆ. ಹಾಗೇನೆ ನಾವು ಗುತ್ತಲ ತಲುಪಿದಾಗ ೪ ಗಂಟೆಯಾಗಿತ್ತು. ಕೋತಿಗಳು ಸಂಜೆಯ ಊಟಕ್ಕೆ ಬರುವ ಸಮಯ. ಅಲ್ಲಲ್ಲಿ ಕೇಳಿ ಶಿಗ್ಗಾವಿ ಮಾಸ್ತರರ ಮನೆ ತಲುಪಿದಾಗ ಅಲ್ಲಿ ಕೋತಿಗಳೇ ಇಲ್ಲ! ಮನೆಯೆಡೆ ನಡೆದುಕೊಂಡು ಹೋದರೆ ಯಾರ ಸುಳಿವೂ ಇಲ್ಲ. ಕಡೆಗೆ ನಿಧಾನವಾಗಿ ಅನುಸೂಯಮ್ಮನವರು ಹೊರಗಡೆ ಬಂದರು. ಅವರ ಹಣೆ ಮೇಲೆ ಕುಂಕುಮ ಮರೆಯಾಗಿರುವುದನ್ನು ಗಮನಿಸಿದ ಕೂಡಲೇ ಕೋತಿಗಳ ಗೈರುಹಾಜರಿಗೆ ಕಾರಣ ತಿಳಿದುಬಿಟ್ಟಿತು. ಶಿಗ್ಗಾವಿ ಮಾಸ್ತರರು ತೀರಿಕೊಂಡಿರಬೇಕು ಎಂದು ಊಹಿಸಿದೆ. ನನ್ನ ಊಹೆ ಸರಿಯಾಗಿತ್ತು. ಶಿಗ್ಗಾವಿ ಮಾಸ್ತರರು ಒಂದು ವರ್ಷದ ಹಿಂದೆ ತೀರಿಕೊಂಡರು. ಅವರ ಮರಣದ ಬಳಿಕ ಒಂದೆರಡು ಬಾರಿ ಆಗಮಿಸಿದ ಕೋತಿಗಳು ನಂತರ ಬರಲೇ ಇಲ್ಲ. ಈಗಲೂ ೧೫ ದಿನಗಳಿಗೊಮ್ಮೆ ಮನೆಯ ಮುಂದಿರುವ ಮರಗಳ ಮೇಲೆ ನಾಲ್ಕೈದು ಕೋತಿಗಳು ಬಂದು ಮನೆಯಡೆ ನೋಡಿ ಹಾಗೆ ಹೊರಟುಹೋಗುತ್ತವೆಯೋ ವಿನ: ಮನೆಯೊಳಗೆ ಬರುವುದಿಲ್ಲ.

ಶಿಗ್ಗಾವಿ ಮಾಸ್ತರರ ಮರಣದ ಬಳಿಕ ಒಂದೆರಡು ಬಾರಿ ಮನೆಯೊಳಗೆ ಬಂದ ಕೋತಿಗಳಿಗೆ ತಮ್ಮ ಪ್ರೀತಿಯ ಶಿಗ್ಗಾವಿ ಮಾಸ್ತರರು ಇಲ್ಲದ ಮನೆ ಬೀಕೋ ಅನಿಸಿರಬೇಕು ಅಥವಾ ಅವರು ನೀಡಿದ ಪ್ರೀತಿ, ಪ್ರೀತಿಯ ಮಾತುಗಳು ಮತ್ತು ಸಲುಗೆ ಉಳಿದವರಿಂದ ಸಿಗದೇ ಇರಲು ಬರುವುದನ್ನೇ ನಿಲ್ಲಿಸಿರಬಹುದು. ಈಗಲೂ ಆಗಾಗ ಬಂದು ಇಣುಕಿ ಹೋಗುವುದರ ಹಿಂದೆ ಏನು ಕಾರಣವಿರಬಹುದು...ಆ ಕೋತಿಗಳಿಗೇ ಗೊತ್ತು. ಶಿಗ್ಗಾವಿ ಮಾಸ್ತರರು ಅನಾರೋಗ್ಯದ ಕಾರಣ ತೀರಿಕೊಂಡಾಗ ಅವರ ದೇಹವನ್ನು ಮಣ್ಣು ಮಾಡಲು ಒಯ್ದಾಗ ಕೋತಿಗಳಿಗೆ ಹೇಗೆ ಸುದ್ದಿ ಸಿಕ್ಕಿತೋ ದೇವರೇ ಬಲ್ಲ. ಮುಂಜಾನೆ ೧೧ ಕ್ಕೆ ಆಗಮಿಸಿ ಊಟ ಮುಗಿಸಿ ಕೋತಿಗಳು ತೆರಳಿದ ಸ್ವಲ್ಪವೇ ಸಮಯದ ಬಳಿಕ ಶಿಗ್ಗಾವಿ ಮಾಸ್ತರರು ಕೊನೆಯುಸಿರೆಳೆದಿದ್ದಾರೆ. ಸಂಜೆ ಊರ ಹೊರಗೆ ಅವರ ಅಂತ್ಯಕ್ರಿಯೆಯ ನಡೆಯುವ ಸ್ಥಳದಲ್ಲಿ ಸುತ್ತಲಿರುವ ಮರಗಳ ಮೇಲೆ ಕೋತಿಗಳು ತುಂಬಿಕೊಂಡಿದ್ದವು! ಅಂತ್ಯಕ್ರಿಯೆಯ ಬಳಿಕ ಜನರೆಲ್ಲಾ ಮರಳಿದರೂ ಕೋತಿಗಳು ಅಲ್ಲೇ ಠಿಕಾಣಿ ಹೂಡಿದ್ದವು. ಎಲ್ಲಿಯ ಸಂಬಂಧ!

ಇದನ್ನೆಲ್ಲಾ ಅನುಸೂಯಮ್ಮನವರ ಜೊತೆಗೆ ಮಾತುಕತೆಗೆ ಇಳಿದಾಗ ಅವರು ಹೇಳಿದ ವಿಷಯಗಳು. ನಂತರ ಒಂದಷ್ಟು ಫೋಟೋಗಳನ್ನು ಅವರು ತೋರಿಸಿದರು. ಶಿಗ್ಗಾವಿ ಮಾಸ್ತರರನ್ನು ಮತ್ತು ಕೋತಿಗಳನ್ನು ಕಾಣಲು ಬಂದ ನಾನು ಈಗ ಬರೀ ಫೋಟೋಗಳನ್ನೇ ನೋಡಿ ತೃಪ್ತಿಪಡಬೇಕಾಯಿತು. ಇದ್ದ ಎಲ್ಲಾ ಫೋಟೋಗಳ 'ಫೋಟೋ' ತೆಗೆದೆ, ಆಷ್ಟಾದರೂ ಇರಲಿ ಎಂದು. ಈ ಫೋಟೋಗಳನ್ನು ನೋಡಿದರೇ ತಿಳಿಯುವುದು, ಎಷ್ಟರ ಮಟ್ಟಿಗೆ ಕೋತಿಗಳು ಶಿಗ್ಗಾವಿ ಮಾಸ್ತರರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದವೆಂದು. ಸಣ್ಣ ಮರಿ ಇರುವ ತಾಯಿ ಮಂಗಗಳೂ ಶಿಗ್ಗಾವಿ ಮಾಸ್ತರರ ಬಳಿ ಬಂದು ಕುಳಿತುಕೊಳ್ಳುವುದಾದರೆ ಅಲ್ಲಿರುವ ನಂಬಿಕೆ ಯಾವ ಮಟ್ಟದ್ದಿರಬಹುದು ಎಂದು ತಿಳಿದುಕೊಳ್ಳಬಹುದು.

ಸುಮಾರು ೪೫ ನಿಮಿಷಗಳ ಕಾಲ ಅನುಸೂಯಮ್ಮನವರೊಡನೆ ಮಾತನಾಡಿ, ಚಹಾ ಕುಡಿದು, ಅವರಿಗೆ ವಿದಾಯ ಹೇಳಿ ಹೊರಟೆವು. ಮನದ ತುಂಬಾ ಶಿಗ್ಗಾವಿ ಮಾಸ್ತರರೇ ತುಂಬಿಕೊಂಡಿದ್ದರು.

ಹೆಚ್ಚಿನ ಚಿತ್ರಗಳನ್ನು ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.

ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.

ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.

ಇಷ್ಟನ್ನೆಲ್ಲಾ ಓದಿದ ಬಳಿಕ ಗುತ್ತಲದ ಶಿಗ್ಗಾವಿ ಮಾಸ್ತರರ ಮನೆಗೆ ಭೇಟಿ ನೀಡಲೇಬೇಕೆಂದು ನಿರ್ಧಾರ ಮಾಡಿದ್ದೆ. ಹಾಗೇನೆ ನಾವು ಗುತ್ತಲ ತಲುಪಿದಾಗ ೪ ಗಂಟೆಯಾಗಿತ್ತು. ಕೋತಿಗಳು ಸಂಜೆಯ ಊಟಕ್ಕೆ ಬರುವ ಸಮಯ. ಅಲ್ಲಲ್ಲಿ ಕೇಳಿ ಶಿಗ್ಗಾವಿ ಮಾಸ್ತರರ ಮನೆ ತಲುಪಿದಾಗ ಅಲ್ಲಿ ಕೋತಿಗಳೇ ಇಲ್ಲ! ಮನೆಯೆಡೆ ನಡೆದುಕೊಂಡು ಹೋದರೆ ಯಾರ ಸುಳಿವೂ ಇಲ್ಲ. ಕಡೆಗೆ ನಿಧಾನವಾಗಿ ಅನುಸೂಯಮ್ಮನವರು ಹೊರಗಡೆ ಬಂದರು. ಅವರ ಹಣೆ ಮೇಲೆ ಕುಂಕುಮ ಮರೆಯಾಗಿರುವುದನ್ನು ಗಮನಿಸಿದ ಕೂಡಲೇ ಕೋತಿಗಳ ಗೈರುಹಾಜರಿಗೆ ಕಾರಣ ತಿಳಿದುಬಿಟ್ಟಿತು. ಶಿಗ್ಗಾವಿ ಮಾಸ್ತರರು ತೀರಿಕೊಂಡಿರಬೇಕು ಎಂದು ಊಹಿಸಿದೆ. ನನ್ನ ಊಹೆ ಸರಿಯಾಗಿತ್ತು. ಶಿಗ್ಗಾವಿ ಮಾಸ್ತರರು ಒಂದು ವರ್ಷದ ಹಿಂದೆ ತೀರಿಕೊಂಡರು. ಅವರ ಮರಣದ ಬಳಿಕ ಒಂದೆರಡು ಬಾರಿ ಆಗಮಿಸಿದ ಕೋತಿಗಳು ನಂತರ ಬರಲೇ ಇಲ್ಲ. ಈಗಲೂ ೧೫ ದಿನಗಳಿಗೊಮ್ಮೆ ಮನೆಯ ಮುಂದಿರುವ ಮರಗಳ ಮೇಲೆ ನಾಲ್ಕೈದು ಕೋತಿಗಳು ಬಂದು ಮನೆಯಡೆ ನೋಡಿ ಹಾಗೆ ಹೊರಟುಹೋಗುತ್ತವೆಯೋ ವಿನ: ಮನೆಯೊಳಗೆ ಬರುವುದಿಲ್ಲ.

ಶಿಗ್ಗಾವಿ ಮಾಸ್ತರರ ಮರಣದ ಬಳಿಕ ಒಂದೆರಡು ಬಾರಿ ಮನೆಯೊಳಗೆ ಬಂದ ಕೋತಿಗಳಿಗೆ ತಮ್ಮ ಪ್ರೀತಿಯ ಶಿಗ್ಗಾವಿ ಮಾಸ್ತರರು ಇಲ್ಲದ ಮನೆ ಬೀಕೋ ಅನಿಸಿರಬೇಕು ಅಥವಾ ಅವರು ನೀಡಿದ ಪ್ರೀತಿ, ಪ್ರೀತಿಯ ಮಾತುಗಳು ಮತ್ತು ಸಲುಗೆ ಉಳಿದವರಿಂದ ಸಿಗದೇ ಇರಲು ಬರುವುದನ್ನೇ ನಿಲ್ಲಿಸಿರಬಹುದು. ಈಗಲೂ ಆಗಾಗ ಬಂದು ಇಣುಕಿ ಹೋಗುವುದರ ಹಿಂದೆ ಏನು ಕಾರಣವಿರಬಹುದು...ಆ ಕೋತಿಗಳಿಗೇ ಗೊತ್ತು. ಶಿಗ್ಗಾವಿ ಮಾಸ್ತರರು ಅನಾರೋಗ್ಯದ ಕಾರಣ ತೀರಿಕೊಂಡಾಗ ಅವರ ದೇಹವನ್ನು ಮಣ್ಣು ಮಾಡಲು ಒಯ್ದಾಗ ಕೋತಿಗಳಿಗೆ ಹೇಗೆ ಸುದ್ದಿ ಸಿಕ್ಕಿತೋ ದೇವರೇ ಬಲ್ಲ. ಮುಂಜಾನೆ ೧೧ ಕ್ಕೆ ಆಗಮಿಸಿ ಊಟ ಮುಗಿಸಿ ಕೋತಿಗಳು ತೆರಳಿದ ಸ್ವಲ್ಪವೇ ಸಮಯದ ಬಳಿಕ ಶಿಗ್ಗಾವಿ ಮಾಸ್ತರರು ಕೊನೆಯುಸಿರೆಳೆದಿದ್ದಾರೆ. ಸಂಜೆ ಊರ ಹೊರಗೆ ಅವರ ಅಂತ್ಯಕ್ರಿಯೆಯ ನಡೆಯುವ ಸ್ಥಳದಲ್ಲಿ ಸುತ್ತಲಿರುವ ಮರಗಳ ಮೇಲೆ ಕೋತಿಗಳು ತುಂಬಿಕೊಂಡಿದ್ದವು! ಅಂತ್ಯಕ್ರಿಯೆಯ ಬಳಿಕ ಜನರೆಲ್ಲಾ ಮರಳಿದರೂ ಕೋತಿಗಳು ಅಲ್ಲೇ ಠಿಕಾಣಿ ಹೂಡಿದ್ದವು. ಎಲ್ಲಿಯ ಸಂಬಂಧ!

ಇದನ್ನೆಲ್ಲಾ ಅನುಸೂಯಮ್ಮನವರ ಜೊತೆಗೆ ಮಾತುಕತೆಗೆ ಇಳಿದಾಗ ಅವರು ಹೇಳಿದ ವಿಷಯಗಳು. ನಂತರ ಒಂದಷ್ಟು ಫೋಟೋಗಳನ್ನು ಅವರು ತೋರಿಸಿದರು. ಶಿಗ್ಗಾವಿ ಮಾಸ್ತರರನ್ನು ಮತ್ತು ಕೋತಿಗಳನ್ನು ಕಾಣಲು, ಫೋಟೋ ತೆಗೆಯಲು ಬಂದ ನಾನು ಈಗ ಬರೀ ಫೋಟೋಗಳನ್ನೇ ನೋಡಿ ತೃಪ್ತಿಪಡಬೇಕಾಯಿತು. ಇದ್ದ ಎಲ್ಲಾ ಫೋಟೋಗಳ 'ಫೋಟೋ' ತೆಗೆದೆ, ಆಷ್ಟಾದರೂ ಇರಲಿ ಎಂದು. ಈ ಫೋಟೋಗಳನ್ನು ನೋಡಿದರೇ ತಿಳಿಯುವುದು, ಎಷ್ಟರ ಮಟ್ಟಿಗೆ ಕೋತಿಗಳು ಶಿಗ್ಗಾವಿ ಮಾಸ್ತರರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದವೆಂದು. ಸಣ್ಣ ಮರಿ ಇರುವ ತಾಯಿ ಮಂಗಗಳೂ ಶಿಗ್ಗಾವಿ ಮಾಸ್ತರರ ಬಳಿ ಬಂದು ಕುಳಿತುಕೊಳ್ಳುವುದಾದರೆ ಅಲ್ಲಿರುವ ನಂಬಿಕೆ ಯಾವ ಮಟ್ಟದ್ದಿರಬಹುದು ಎಂದು ತಿಳಿದುಕೊಳ್ಳಬಹುದು.

ಸುಮಾರು ೪೫ ನಿಮಿಷಗಳ ಕಾಲ ಅನುಸೂಯಮ್ಮನವರೊಡನೆ ಮಾತನಾಡಿ, ಚಹಾ ಕುಡಿದು, ಅವರಿಗೆ ವಿದಾಯ ಹೇಳಿ ಹೊರಟೆವು. ಮನದ ತುಂಬಾ ಶಿಗ್ಗಾವಿ ಮಾಸ್ತರರೇ ತುಂಬಿಕೊಂಡಿದ್ದರು.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 258 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2008 - 3:39am — rameshbalaganchi

ಉ: ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

rameshbalaganchi's picture

ರಾಜೇಶ್ ನಾಯ್ಕರೆ, ನಿಮ್ಮ ಬರಹ ಕುತೂಹಲಕಾರಿಯಾಗಿತ್ತು. ಚಿತ್ರವೂ ಪೂರಕವಾಗಿದೆ. ಮನುಷ್ಯ ಮತ್ತು ಆದಿಮ ಪ್ರಾಣಿಗಳ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಪೂರೈಸಲಾಗದೇನೋ!! ಅಗೆದಷ್ಟೂ ಹೊಸ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತವೆ!! ಶಿಗ್ಗಾವಿ ಮಾಸ್ತರರ ಅನುಕಂಪೆ ಪ್ರಾಣಿಗಳ ಮನ ಕಲಕಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2008 - 11:45am — Sunil Jayaprakash

ಉ: ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

Sunil Jayaprakash's picture

ಕೋತಿಮಂಗಣ್ಣಗಳು ಶಿಗ್ಗಾವಿ ಮಾಸ್ತರ ಮೇಲೆ ಇಟ್ಟಿದ್ದ ಸಲುಗೆ ನೋಡಿದರೆ ತುಂಬಾ ಸಂತೋಷವಾಗುತ್ತದೆ. ಶಿಗ್ಗಾವಿ ಮಾಸ್ತರರ ಆ ಅಕ್ಕರೆ, ಆ ಆತ್ಮೀಯತೆ ನನ್ನನ್ನು ಒಂದು ಕ್ಷಣ ಮೂಕನನ್ನಾಗಿಸಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
  • ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
  • ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
  • ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
  • ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 34 ಅತಿಥಿಗಳು ಆನ್ಲೈನ್ ಇರುವರು.

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator