ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
ಮಲೆನಾಡಿನಲ್ಲಿ ಎರೆಯಪ್ಪ ಅನ್ನುವ ತಿಂಡಿ ಇದೆ. (ಇದನ್ನು ಕೆಲವು ಪ್ರದೇಶಗಳಲ್ಲಿ ಪಡ್ಡು ಎಂದೂ ಕರೆಯುತ್ತಾರೆ). ದೋಸೆ ಹಿಟ್ಟು ಬಟ್ಟಲು ಬಟ್ಟಲಾದ ಕಾವಲಿಯ ಮೇಲೆ ಹಾಕಿ ಬೇಯಿಸಲಾದ ತಿಂಡಿ ಇದು. ಕರ್ನಾಟಕದ ಬಾಕಿ ಪ್ರದೇಶಗಳಲ್ಲಿ ಏನನ್ನುತ್ತಾರೋ ತಿಳಿಯದು.
ಇದು ಥಾಯ್ ಲ್ಯಾಂಡಿನಲ್ಲಿಯೂ ಇದೆ. ದೋಸೆ ಹಿಟ್ಟಿನ ಬದಲಾಗಿ , ತೆಂಗಿನಕಾಯಿ ಹಾಲು , ಸಕ್ಕರೆಯ ಮಿಶ್ರಣ ಉಪಯೋಗಿಸುತ್ತಾರೆ (ಇನ್ನೂ ಏನು ಹಾಕಿರುತ್ತಾರೋ ಗೊತ್ತಿಲ್ಲ).
ಬೆಂದ ಮೇಲೆ ತೆಳ್ಳಗೆ ಪದರಪದರವಾಗಿದ್ದು ಚೆನ್ನಾಗಿರುತ್ತದೆ.
- Login or register to post comments
- 954 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಇದು ದಾವಣಗೆರೆ ಕಡೆ ತುಂಬ ಫೇಮಸ್ :-)
ಪಡ್ಡು ಅಂತಾನೆ ಕರೀತಾರೆ ಅಲ್ಲಿ...
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಫಾದರ್ಸ್ ಡೇಗೆ ಅಪ್ಪ ಸ್ಪೆಷಲ್ ಎಂಬ ತಲೆಬರಹದೊಂದಿಗೆ ಅಪ್ಪ (ಕರಾವಳಿಯಲ್ಲಿ ಈ ತಿಂಡಿಯ ಹೆಸರು) ಕುರಿತ ವಿಚಿತ್ರಾನ್ನ ಅಂಕಣದಲ್ಲಿ ಬರೆದಿದ್ದ ಲೇಖನ ಇಲ್ಲಿದೆ ಮತ್ತು ಅದಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆಗಳ ಸಂಕಲನ ಇಲ್ಲಿದೆ.
ನಮ್ ಮನೇಲಿ ಎರೆಯಪ್ಪ ಮಾಡೋದು ತುಸು ತಾಯ್‌ಲೇಂಡ್ ತೆರವೇ!!
ಎರೆಯಪ್ಪ ಒಂದು ಸೀತಿಂಡಿ...
ನಮ್ ಎರೆಯಪ್ಪ ನಿಮ್ದಕ್ಕಿಂತ ಬೇರೆ ಅನ್ನಿಸ್ತದೆ.
ಹರಿಪ್ರಸಾದ್, ನೀವು ಹೇಳಿದ್ದು ತಪ್ಪಿರಬಹುದು. ಯಾಕೇಂದ್ರೆ ಪಡ್ಡು ಗುಳಿ ಇರುವ ಬಳಪದಕಲ್ಲಿನ ತವೆ ಅಥವಾ ಎರಕದ ಕಾವಲಿಯಲ್ಲಿ ಮಾಡುವ ತಿಂಡಿ. ಇದಕ್ಕೆ ಪಕ್ಕಾ ದೋಸೆಯ ಹಿಟ್ಟನ್ನೇ ಬಳಸುತ್ತಾರೆ ನಮ್ಮ ಕಡೆ. ಇದು ರುಚಿಯಲ್ಲಿ ಉಪ್ಪಾಗಿದ್ದು ಗೋಲಾಕಾರದಲ್ಲಿರುತ್ತದೆ. ಇದಕ್ಕೆ ಗುಳಿಯಪ್ಪ ಅಂತಲೂ ಕರೆಯುತ್ತಾರೆ. ಎರೆಯಪ್ಪ ಮಧ್ಯದಲ್ಲಿ ದಪ್ಪಗಿದ್ದು ತುದಿಯಲ್ಲಿ ತೆಳುವಾಗಿಯೂ ಗರಿಗರಿಯಾಗಿಯೂ ಇರುತ್ತದೆ. ಪಡ್ಡಿನ ಹಿಟ್ಟಿನಲ್ಲಿ ಉದ್ದಿನಬೇಳೆ, ಮೆಂತ್ಯ ಮೊದಲಾದವಿದ್ದರೆ. ಎರೆಯಪ್ಪನ ಹಿಟ್ಟು ಅಂದ್ರೆ ತಿರುವಿದ ಅಕ್ಕಿ, ಕಾಯಿ, ಬೆಲ್ಲಗಳ ಮಿಶ್ರಣವಾಗಿರುತ್ತದೆ. ಕೆಲವರು ಗರಿಗರಿಯಾಗಲು ಸ್ವಲ್ಪ ಗೋಧಿಹಿಟ್ಟನ್ನೂ ಬಳಸುತ್ತಾರೆ. ಎರೆಯಪ್ಪ ಮಾಡಲು ಎಣ್ಣೆಯ ಪ್ರಮಾಣ ಹೆಚ್ಚಾಗಿ ಬೇಕು. ಪಡ್ಡಿಗೆ ಹಾಗಲ್ಲ.ಹಾಗಾಗಿ ಮಹೇಶ್ ಹೇಳಿದ್ದು ಸರಿ. ಅಥವಾ ಈ ತಿಂಡಿಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳೂ ಇರಬಹುದೇ?
ನಿಮ್ಮಲ್ಲರ ಪ್ರತಿಕ್ರಿಯೆಗಳಿಗೆ ವಂದನೆಗಳು.
ನಮ್ಮಲ್ಲಿ ಎರೆಯಪ್ಪ ದೋಸೆ ಹಿಟ್ಟಿನಿಂದ ಮಾಡುತ್ತಾರೆ. ಸಿಹಿ ಇಲ್ಲ. ತಟ್ಟೆ ಆಕಾರದ ದೋಸೆಯ ಬದಲು ಕಿರು ಇಡ್ಲಿ ಆಕಾರದ ದೋಸೆ ಅಂದುಕೊಳ್ಳಿ.
ಆದರೆ , ಈ ಪ್ರತಿಕ್ರಿಯೆಗಳನ್ನು ಓದಿದ ಮೇಲೆ ಈ ಹೆಸರಿನ ಸಿಹಿತಿಂಡಿಯನ್ನೂ ಕನ್ನಡಿಗರು ಸವಿಯುತ್ತಿರಬಹುದು ಎಂಬ ಗುಮಾನಿ ಬರುತ್ತಿದೆ. :-)
ನಾರಾಯಣ, ಸಿಂಪಲ್ಲಾಗಿ ಹೇಳಬೇಕಂದೆ ನಮ್ ಕಡೆ ಎರೆಯಪ್ಪ = ತೂತಿರದ ಸೀ ವಡೆ ;)
ಲೋ ವಡೆಯೇ
ಸಜ್ಜಪ್ಪನ ಹಾಗೆ ಎರೆಯಪ್ಪ..
ಸಜ್ಜಿಗೆ ಅಪ್ಪ = ಸಜ್ಜಪ್ಪ
ಹಾಗೆ ಇಲ್ಲಿ ಎರೆಯಪ್ಪ ಇಲ್ವೇ ಎಡೆಯಪ್ಪ.. ಗಾರಿಗೆ ಅಂತಾರಂತೆ
ಎಡೆಯಪ್ಪ = ಎಡೆಗೆ ಮಾಡಿದ ಅಪ್ಪ/ಅಪ್ಪಂ = ಚರಪಿಗೆ ಮಾಡಿದುದು
ದೋಸೆ ತರ ಇರೋ ಇನ್ನೊಂದು ತಿಂಡಿ ವಿಯಟ್ನಾಮ್ನಲೂ ಮಾಡ್ತಾರೆ...
ಆದರೆ ನಮ್ಮ ಮಸಾಲ ದೋಸೆಯಷ್ಟು ದಪ್ಪ/ ಸೆಟ್ ದೋಸೆಯಷ್ಟು ಅಗಲ ಇರತ್ತೆ. ನಮ್ಮ ಮಸಾಲೆದೋಸೆಯ ಮಸಾಲೆ ಜಗದಲ್ಲಿ..ದನ/ಕುರಿ/ಕೋಳಿ/ಆಡು ಯಾವ ಮಾಂಸ ಬೇಕೋ ಅದು.
ಮಾಂಸಕ್ಕೆ ತಕ್ಕಂತೆ ಬೆಲೆ....
ಆಮೇಲೆ... ದೋಸೆಯನ್ನ ಸುರುಳಿ ಸುತ್ತಿ..ಎಂತೆಂತದೋ ಎಲೆಗಳ ಜೊತೆ.. ತಿನ್ನೊಕೆ ಕೊಡ್ತಾರೆ...
ಸದ್ಯ.. ನಾನು.. ಅಷ್ಟೊಂದು ಪ್ರಯೋಗ ಮಾಡೊಕೆ ಹೊಗ್ಲಿಲ್ಲ. ಬರಿ ದೋಸೆ ಸಾಕಮ್ಮ ತಾಯಿ.. ಅಂತ.. ದೋಸೆ ಮಾತ್ರ ತಿಂದು ಬಂದೆ...
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???