ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ
ದೇವರನ್ನು ಕಾಣಬೇಕೆಂದು ಪ್ರಯತ್ನಿಸುತ್ತಾ ಅದಕ್ಕಾಗಿ ಬ್ರಹ್ಮಚರ್ಯವನ್ನು ಪಾಲಿಸಲು ಹೆಣಗುವವರು ಅಪವಿತ್ರರು. ಸೆಕ್ಸ್‌ನ ಬಗ್ಗೆ ಭಯಪಟ್ಟು, ಅದನ್ನು ದೂರ ಮಾಡಿ, ಸೆಕ್ಸ್‌ಗೆ ಪ್ರತಿಯಾಗಿ ದೇವರನ್ನು ಪಡೆಯುವ ಲಾಭಕ್ಕೆ ಆಸೆಪಡುತ್ತಿರುತ್ತಾರೆ. ಸೆಕ್ಸ್‌ನ ಬದಲಾಗಿ ದೇವರನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿ ಇರುವುದಿಲ್ಲ. ಶುದ್ಧಿ ಇರುವುದಿಲ್ಲ. ಶುದ್ಧವಾದ ಮನಸ್ಸು, ಶುದ್ಧವಾದ ಹೃದಯ ಇರದಿದ್ದರೆ ಸತ್ಯ ಕಾಣುವುದಿಲ್ಲ. ಕಠಿಣ ಶಿಸ್ತಿಗೆ ಒಳಪಟ್ಟ ಹೃದಯ, ದಮನಕ್ಕೆ ಒಳಗಾದ ಹೃದಯ, ಪ್ರೀತಿ ಎಂದರೇನೆಂದು ಅರಿಯಲಾರದು. ಅಭ್ಯಾಸಗಳಿಗೆ, ದೈಹಿಕ ಮಾನಸಿಕ ಸಂವೇದನೆಗಳಿಗೆ ಸಿಕ್ಕಿಬಿದ್ದ ಹೃದಯವೂ ಪ್ರೀತಿಯನ್ನು ಕಾಣಲಾರದು. ಆದರ್ಶವಾದಿಯಾದವನು ತಾನು ಕಲ್ಪಿಸಿಕೊಂಡ ಆದರ್ಶವನ್ನು ಅನುಸರಿಸುವವನು, ಅಷ್ಟೆ. ಆದ್ದರಿಂದಲೇ ಆತ ಪ್ರೀತಿಯನ್ನು ಅರಿಯಲಾರ. ತನ್ನ ಬಗ್ಗೆ ತಾನು ಚಿಂತಿಸದೆ ಉದಾರಿಯಾಗಿ ಇರಲಾರ. ಮನಸ್ಸು ಮತ್ತು ಹೃದಯಗಳು ಭಯರಹಿತವಾಗಿದ್ದಾಗ, ಇಂದ್ರಿಯ ಸಂವೇದನೆಗಳ ಅಭ್ಯಾಸದಿಂದ ಮುಕ್ತವಾಗಿದ್ದಾಗ, ಆಗ ಮಾತ್ರ ಔದಾರ್ಯ, ಕಾರುಣ್ಯ, ತೀವ್ರಭಾವ (ಕಂಪ್ಯಾಶನ್), ಪ್ರೀತಿ ಇರಬಲ್ಲವು. ಅಂಥ ಪ್ರೀತಿ ಪವಿತ್ರವಾದದ್ದು.
[ಅನುದಿನ ಚಿಂತನ ಪುಸ್ತಕದಿಂದ]

- Login or register to post comments
- 937 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಆದರ್ಶ ಅ೦ದರೆ ಏನು ?
ಆದರ್ಶ ಅ೦ದರೆ ಏನು ? ವಾಸ್ತವವಾಗಿ ನಾನು ಮುರಳಿ , ನಾಳೆ ಬೇರೆ ಯಾರನ್ನೋ ಆದರ್ಶವಾಗಿ
ಇಟ್ಕೊ೦ಡೂ ಬೇರೆ ಯಾರೋ ಆಗೋದೇನು ??
ನಿಮ್ಮ ಅನಿಸಿಕೆ ಏನು ??
Ideal ಗಳು ಸುಮ್ಮನೆ ನಮ್ಮ ಮನಸ್ಸಿನ Idea ಗಳೇ ??
ಮುರಳಿ
ಆದರ್ಶ ಎಂದರೆ
ಆದರ್ಶವೆನ್ನುವುದು ವ್ಯಕ್ತಿಯಲ್ಲ. ಅದು ಆಯಾ ಕಾಲದಲ್ಲಿ ಸಮಾಜಕ್ಕೊಳಿತಾಗಬಲ್ಲ ಸಾಮಾಜಿಕ ಮೌಲ್ಯಗಳು. ಮಾನವೀಯ ಮೌಲ್ಯಗಳು ಅಂತ ಏನನ್ನ ನಾವು ಇಂದು ಕರೀತೇವೆಯೊ ಅದು ಸರ್ವಕಾಲಿಕವಾಗಬೇಕು ಎಂಬ ನಿಯಮಗಳೇನು ಇಲ್ಲ. ನಾವು ಅನುಸರಿಸಬೇಕಾದುದು ಆದರ್ಶ ವ್ಯಕ್ತಿಯನ್ನಲ್ಲ. ತತ್ವಗಳನ್ನ. ಈ ತತ್ವಗಳೇ ಆದರ್ಶ. ನೀವು ಎಂದೆಂದಿಗೂ ಮುರಳಿಯೇ, ಅಥವಾ ನಾನು ಎಂದೆಂದಿಗೂ ನಾನೆ.
ಉದಾಹರಣೆಗೆ, ದೇಶಭಕ್ತಿಯೊಂದು ಆದರ್ಶ. ನಾನು(ವು) ಈ ಆದರ್ಶವನ್ನ ಅಳವಡಿಸಿಕೊಂಡ ಮಾತ್ರಕ್ಕೆ ನಾನು(ವು) ನೆಹರು ಅಥವಾ ಭಗತ್ ಸಿಂಗನಾಗವುದಿಲ್ಲ. ನಾನು(ವು) ಅಹಿಂಸಾ ತತ್ವವನ್ನ ಪಾಲಿಸಿದ ಮಾತ್ರಕ್ಕೆ ಗಾಂಧಿ ಅಥವಾ ಬುದ್ದನಾಗುವುದಿಲ್ಲ. ಅದು ನನ(ಮ) ಗೆ ಬೇಕೂ ಇಲ್ಲ. ನಾನು ನಾನಾಗಿಯೇ, ಅಥವಾ ನಾವು ನಾವುಗಿಯೇ ಈ ಸಮಾಜಕ್ಕೊಳಿತಾಗಬಲ್ಲ ತತ್ವಗಳನ್ನು ಆದರ್ಶ ವೆಂದು ಕರೆಯಬೇಕೇ ವಿನಃ ಆದರ್ಶ ವ್ಯಕ್ತಿಯೆನ್ನುವುದು ಸಮಂಜಸವಲ್ಲ.
ಸರಳತೆ ಆದರ್ಶ , ಹೆಚ್. ನರಸಿಂಹಯ್ಯನವರು ಈ ಆದರ್ಶ ಪಾಲಿಸಿದ ಉದಾತ್ತ ಜೀವಿ.
ನಿಮ್ಮ ಅನಿಸಿಕೆ ಏನು ??
"ಆದರ್ಶ ವ್ಯಕ್ತಿ" ನೂರಕ್ಕೆ ನೂರರಷ್ಟು ಸಮಂಜಸ
ನಿಮ್ಮ ಮಾತು ಕೂದಲು ಸೀಳುವಂತಾಯಿತು ಅನ್ನಿಸುತ್ತೆ. ಸಾಮಾನ್ಯ ಬಳಕೆಯಲ್ಲಿ "ಆದರ್ಶ ವ್ಯಕ್ತಿ" ಎಂದರೆ ಆದರ್ಶವನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ, ನಾವು ಯಾರಂತೆ ಇರಲು ಪ್ರಯತ್ನ ಮಾಡಬೇಕೊ ಅಂತಹ ವ್ಯಕ್ತಿ, ಇಂಗ್ಲಿಷಿನಲ್ಲ್ಲಿ exemplar ಎನ್ನುತ್ತಾರಲ್ಲ, ಅಂತಹ ವ್ಯಕ್ತಿ. ಆ ವ್ಯಕ್ತಿಯಂತೆ ಆಗುವುದೆ ಒಂದು ಆದರ್ಶ.
ಕಣ್ತೆರೆಸುವ ವಿಚಾರ
ಉತ್ತಮವಾದ ಕಣ್ತೆರೆಸುವ ವಿಚಾರಗಳು ಸಾರ್. ಯಾವುದೇ, ಅಸೆಗಳನ್ನೂ ಹತ್ತಿಕ್ಕಬಾರದು. ಹತ್ತಿಕ್ಕಲು ಅದು ಮನದ ಒಳಗೇ ಇದ್ದು ಒಮ್ಮೆ ಸ್ಫೋಟಗೊಳ್ಳುವ ಸನ್ನಿವೇಶ ಇರುತ್ತದೆ. ಅದರಿಂದ ಹೆಚ್ಚಿನದಾಗಿ ಅಪಾಯವೇ ಆಗುವುದು. ಎಲ್ಲವನ್ನೂ ಅನುಭವಿಸಿದವನೇ ಉತ್ತಮ. ಆದರೆ ಯಾವುದರಲ್ಲೂ ಅತಿಯಾಗಿ ಒಳಗಾಗಬಾರದು.
ಈ ವಿಷಯವನ್ನು ತುಂಬಾ ಚೆನ್ನಾಗಿ ಮಂಡಿಸಿದ್ದಾರೆ. ನೀವು ಅದನ್ನು ನಮಗೊದಗಿಸಿದ್ದೀರಿ. ಧನ್ಯವಾದಗಳು
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net