ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಜೇ..ಡ ಕೊಲ್ಲಬೇಡ..

April 5, 2008 - 3:48pm — ಗಣೇಶ

ಸೌಂದರ್ಯ ಒಂದೊಂದೇ ಮೆಟ್ಟಿಲು ಹತ್ತಿ ಆ ಮುಚ್ಚಿದ ಕೋಣೆಯ ಬಳಿ ಹೋಗುವಳು. ಬೀಗ ತೆಗೆದಳು... ಬಾಗಿಲು ತೆರೆಯುವಳು... ಭಯಬೀಳಬೇಡಿ.
ಕಣ್ಣು ತೆರೆಯಿರಿ. ನಾಗವಲ್ಲಿಯಲ್ಲ..
ಆ ರೂಮಲ್ಲಿದ್ದ ಜೇಡರಬಲೆ,ಜೇಡದ ಬಗ್ಗೆ ಬರೀತೀನಿ ಅಷ್ಟೇ.

ಈ ಜೇಡಗಳು,ಆ ಮುಚ್ಚಿದ ಕತ್ತಲೆ ಕೋಣೆಯಲ್ಲಿ ವರ್ಷಾನುಗಟ್ಟಲೆ ಬಲೆ ಕಟ್ಟಿಕೊಂಡು ಯಾಕಿರುತ್ತದೆ? ಅಲ್ಲಿ ಅದಕ್ಕೆ ಆಹಾರ ಸಿಗುತ್ತದೆಯೇ? ಸಿಗದಿದ್ದಾಗ ಏನು ಮಾಡುತ್ತವೆ ಎಂದು ಜೇಡದ ಬಗ್ಗೆ ತಿಳಿಯಲು ಇನ್ನೊಂದು ಬಲೆ-‘www’ಗೆ ಹೊಕ್ಕೆ.

೩೫೦ ಮಿಲಿಯನ್ ವರ್ಷಗಳ ಇತಿಹಾಸವಿರುವ ಜೇಡ ತಾನೇ ಮೊದಲು world wide - web ಹೆಣೆದದ್ದು.ಅಂಟಾರ್ಟಿಕಾ ಬಿಟ್ಟರೆ ಉಳಿದೆಲ್ಲಾ ಖಂಡಗಳಲ್ಲೂ ವ್ಯಾಪಿಸಿದೆ.

ಜೇಡ ಪ್ಯಾರಾಚೂಟ್‌ನ್ನು ಹಾರಿಸಿದ್ದು ಗೊತ್ತಾ?
ಜೇಡರಮರಿ ತನ್ನ ದಾರದಿಂದ ಬಲೆ ನೇಯ್ದು ಗಾಳಿ ಬೀಸುವುದಕ್ಕೆ ಕಾದು, ನಂತರ ಬೀಸಿದ ದಿಕ್ಕಿಗೆ ಕಿಲೋಮೀಟರ್‌ಗಟ್ಟಲೆ ಹಾರುತ್ತಿದ್ದವು. ಸಮುದ್ರವನ್ನೂ ದಾಟುತ್ತಿದ್ದವು.

೩೭,೫೦೦ಕ್ಕೂ ಮಿಕ್ಕಿ ವಿವಿಧ ತರಹದ ಜೇಡಗಳನ್ನು ಗುರುತಿಸಿದ್ದಾರೆ.

ಜೇಡಗಳು ತಮ್ಮ ಹಿಂಬದಿಯಲ್ಲಿ, ೨ರಿಂದ ೬ರಷ್ಟಿರುವ ‘spinnerets’ ದ್ರವಿಸುವ ದಾರದಿಂದ ಬಲೆಯನ್ನು ನೇಯುತ್ತದೆ. ತನ್ನ ಕಾಲಡಿಯಲ್ಲಿ ವಿಶೇಷ ಎಣ್ಣೆ ಇರುವುದರಿಂದ ಬಲೆಯಲ್ಲಿ ತಾನೇ ಸಿಕ್ಕಿ ಬೀಳುವುದಿಲ್ಲ.

ಹೆಣ್ಣು ಗಂಡುಗಳ ಮಿಲನಕ್ರಿಯೆ ತಾಸುಗಟ್ಟಲೆ ನಡೆಯಬಹುದು. ಇದರಿಂದಾಗಿ ಹೆಣ್ಣಿಗೆ ಹಸಿವು ಜಾಸ್ತಿಯಾಗಿ, ಮಿಲನದ ಸಮಯದಲ್ಲೇ ಅಥವಾ ನಂತರ ಗಂಡನ್ನು ತಿನ್ನುವುದು.
ಇದನ್ನು ತಪ್ಪಿಸಿಕೊಳ್ಳಲು ಕೆಲಗಂಡು ಜೇಡಗಳು ಹೆಣ್ಣಿಗೆ ಮಿಲನಕ್ಕೆ ಮೊದಲೇ ನೊಣ ಇತ್ಯಾದಿ ಕೀಟಗಳನ್ನು ಲಂಚವಾಗಿ ನೀಡುವುದು. ಈಗ ಹೇಳಿ, ಲಂಚ ಕೊಡುವುದು ತಪ್ಪಾ?

ಜೇಡಗಳು ತನ್ನ ತೂಕದಷ್ಟೇ ತೂಕದ ಜೀವಂತ ಬಲಿಯನ್ನು ತನ್ನ ಬಲೆಯಲ್ಲಿ ಸೆರೆಹಿಡಿದು ತಿನ್ನಬಲ್ಲುದು. ಏನೂ ಸಿಗದಿದ್ದರೆ ತಿಂಗಳಾನುಗಟ್ಟಲೆ ಉಪವಾಸನೂ ಇರಬಲ್ಲವು!

ವಿಷಕಾರಿ ಜೇಡಗಳಿದ್ದರೂ ಮಾನವನಿಗೆ ತಾನಾಗಿಯೇ ತೊಂದರೆ ಕೊಟ್ಟಿಲ್ಲ.
ಸ್ವಚ್ಛ,ಸುಂದರ ಮನೆ ಎಂದರೆ ಎಲ್ಲೂ ಜೇಡರ ಬಲೆ ಇರಬಾರದು-ಹಿಂದಿನಿಂದ ಬಂದ ರೂಢಿ. ಗೋಡೆಯಲ್ಲಿ ನೇತಾಡುತ್ತಿರುವ ಬಲೆಯನ್ನು ಬೇಕಿದ್ದರೆ ತೆಗೆಯಿರಿ. ಆದರೆ ಪಾಪ, ಕಸಬರಿಕೆಯಲ್ಲಿ ಅದನ್ನು ಹೊಡೆದು ಕೊಲ್ಲಬೇಡಿ. ಎಲ್ಲೋ ಒಂದು ಕಡೆ ಪುನಃ ಬಲೆ ನೇಯಲಿ ಬಿಡಿ. ಯಾರಿಗೊತ್ತು? ಮುಂದೆ ಜೇಡರ ಬಲೆಯೂ ನಮ್ಮ ಉಪಯೋಗಕ್ಕೆ ಬರಬಹುದು.ಸಮಾನ ತೂಕದ ನೆಲೆಯಲ್ಲಿ ನೋಡಿದಾಗ ಜೇಡರಬಲೆಯು ಸ್ಟೀಲ್‌ಗಿಂತ
ದುಪ್ಪಟ್ಟು ಗಟ್ಟಿ ಎಂದು ಸಾಬೀತಾಗಿದೆ.ಜತೆಗೆ ಇಲಾಸ್ಟಿಕ್ ಗುಣವೂ ಇದೆ.

ಇಷ್ಟನ್ನೂ ನೀವು ಓದಿದ್ದೀರೆಂದರೆ, ನಿಮಗೆ ನಿಜಕ್ಕೂ ಜೇಡದ ಬಗ್ಗೆ ತಿಳಕೊಳ್ಳಲು ಆಸಕ್ತಿಯಿದೆ. ವಿಕಿಪೀಡಿಯಾದಲ್ಲಿ ಇನ್ನಷ್ಟೂ ಮಾಹಿತಿಯಿದೆ.ಓದಿ.
೨೦೦೬ರಲ್ಲೇ ‘ಭಲೇ ಭಲೇ ಜೇಡರಬಲೆ’ ಎಂಬ ಲೇಖನವನ್ನು ನಮ್ಮ ಸಂಪದಿಗರೇ ಆದ ಶ್ರೀವತ್ಸ ಜೋಷಿಯವರು ಸೊಗಸಾಗಿ ಚಿತ್ರಸಮೇತ ದಟ್ಸ್ ಕನ್ನಡದಲ್ಲಿ ಬರೆದಿದ್ದಾರೆ
ನೋಡಿ-
http://thatskannada.oneindia.in/column/vichitranna/031006spiderweb.html

  • ಜ್ಞಾನವಾಹಿನಿ
~.~
  • Login or register to post comments
  • 390 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 10:49am — csomsekraiah

ಉ: ಜೇ..ಡ ಕೊಲ್ಲಬೇಡ..

csomsekraiah's picture

ಪ್ರೀತಿಯ ಗಣೇಶ್, ಎಷ್ಟೊಂದು ವಿವರಗಳನ್ನು ಸರಳವಾಗಿ ಅಷ್ಟೇ ಕಲಾತ್ಮಕವಾಗಿ ನೀಡೀದ್ದೀರಿ ಜೇಡನದೆ ಮೊದಲ ’ವರ್ಲ್ಡ್ ವೈಡ್ ವೆಬ್’ ನಿಮ್ಮ ಕಲ್ಪನೆಗೆ ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 11:22pm — ಗಣೇಶ

ಉ: ಜೇ..ಡ ಕೊಲ್ಲಬೇಡ..

ಗಣೇಶ's picture

ಧನ್ಯವಾದಗಳು ಸೋಮಣ್ಣನವರೆ,
ಗಣೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
  • ಸಂಶೋಧನೆಗೂ ಆವಿಷ್ಕಾರಕ್ಕೂ ವ್ಯತ್ಯಾಸ ಇದೆಯೇ?
  • ಪಿ ಬಿ ಶ್ರೀನಿವಾಸ್
  • ವಸುಧೈವ ಕುಟುಂಬಕಂ
  • ಧರೆಗೆ ಡವಡವ - ಡಿಮ್ ಡಿಮ್ ಡಿಂಡಿಮ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator