ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್
ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
ಸ್ಕೈಪ್ ಉಪಯೋಗಿಸಿದ್ದೀರಾ? ದೂರ ದೂರಿಗೆ ಕಡಿಮೆ ಖರ್ಚಿನಲ್ಲಿ ಫೋನಾಯಿಸಲು ಅನುವು ಮಾಡಿ ಕೊಡುವ ಒಂದು ಮೆಸೆಂಜರ್ ಸ್ಕೈಪ್.
ಖರ್ಚಿಲ್ಲದೆ ಗೆಳೆಯರೊಂದಿಗೆ ಹರಟಲು, ವಿಡಿಯೋ ಮತ್ತು ಆಡಿಯೋ ಕಾನ್ಫರೆಂನ್ಸಿಂಗ್ ಕೂಡ ಮಾಡಬಹುದು. ಕೆಳಗಿನ ಚಿತ್ರ ಸ್ಕೈಪ್ ನ ಲಿನಕ್ಸ್ ಆವೃತ್ತಿಯದು. ಅದರಲ್ಲಿ ವಿಡಿಯೋ ಕ್ಯಾಮರ ಕೂಡ ಕೆಲಸ ಮಾಡ್ತಿದೆ. ಯಾವುದೇ ತಲೆ ನೋವಿಲ್ಲದೆ ತಂತಾನೆ ಎಲ್ಲಾ ಕಾರ್ಯಗಳನ್ನ ನಿರ್ವಹಿಸ್ತಿದೆ. ಸೂಪರ್ ಅಲ್ವಾ?
ಇದೇ ರೀತಿ ಲಿನಕ್ಸ್ ನಲ್ಲಿ ಎಕಿಗ (ekiga) ಅನ್ನೋ ಮತ್ತೊಂದು ತಂತ್ರಾಂಶವನ್ನ ಕೂಡ ಕೆದಕಿ ನೋಡಿ. VoIP ಬಗ್ಗೆ ಕೊಂಚ ಅರಿವು ನಿಮಗಾದೀತು. ತುಂಬಾ ಸುಲಭವಾಗಿ ಹೊಸದನ್ನ ಕೆದಕಿ ಕಲಿತು ಎಲ್ಲರಿಗೂ ಕಲಿಸಿ.
ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ;
- Login or register to post comments
- 806 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಯುಗಾದಿ ಹಬ್ಬದ ಶುಭಾಶಯಗಳು. :)
ಸ್ಕೈಪ್ ಇಷ್ಟು ಒಳ್ಳೆಯ ಮೆಸೆಂಜರ್ ಲಿನಕ್ಸ್ಗೆ ಬಿಟ್ಟಿರೋದು ಸ್ವಾಗತಾರ್ಹ. ಯಾಹೂನವರು ಬೇಗ ಇವರಿಂದ ಕಲಿಯಲಿ ಎಂದು ಆಶಿಸೋಣ.
-ವರುಣ ಭಟ್
ನಾನು dialup connection ಉಪಯೋಗಿಸ್ತಾ ಇದ್ದಿನಿ. ಸ್ಕೈಪ್ ಒಳ್ಳೇದಾ??? ಅಥವಾ ಯಾಹೂ..ಅಥವಾ ಕುಂಬ್ಳೆಯ ಗೂಗಲ್ಲೋ??
ಯಾರು ಹಿತವರು ನಮಗೆ ಈ ಮೂವರೊಳಗೆ??????
ಚಿ.ರಂ.ಶಿ.
--------------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???
ಸರ್, ಲಿನಕ್ಸ್ ನಲ್ಲಿ ನಿಮಗೆ ವಿಡಿಯೋ ಆಡಿಯೋ ಸಂವಾದದ ಸೇವೆಯನ್ನ ಎರಡನ್ನೂ ಸ್ಕೈಪ್ ಕೊಡತ್ತೆ. ಲಿನಕ್ಸ್ ನಲ್ಲಿ ಗೂಗಲ್ ಟಾಕ್ ಇನ್ಸ್ಟಾಲ್ ಮಾಡಿಕೊಳ್ಳಲಿಕ್ಕಾಗಲ್ಲ (ಆಡಿಯೋದೊಂದಿಗೆ) ಅದಕ್ಕೆ ಬೇರೆ ತಂತ್ರಾಂಶಗಳನ್ನೂ ಸೇರಿಸಿಕೊಳ್ಳ ಬೇಕಾಗತ್ತೆ. ಮತ್ತೆ ಯಾಹೂ ಅವರನ್ನ ಕೇಳಲೇ ಬೇಡಿ ಅವರ ಮೆಸೆಂಜರ್ ನಲ್ಲೂ ಆಡಿಯೋ ವಿಡಿಯೋ ಸಂವಾದ ಲಿನಕ್ಸ್ ನಲ್ಲಿ ಸಾದ್ಯವಿಲ್ಲ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಸರ್, ಲಿನಕ್ಸ್ ನಲ್ಲಿ ನಿಮಗೆ ವಿಡಿಯೋ ಆಡಿಯೋ ಸಂವಾದದ ಸೇವೆಯನ್ನ ಎರಡನ್ನೂ ಸ್ಕೈಪ್ ಕೊಡತ್ತೆ. ಲಿನಕ್ಸ್ ನಲ್ಲಿ ಗೂಗಲ್ ಟಾಕ್ ಇನ್ಸ್ಟಾಲ್ ಮಾಡಿಕೊಳ್ಳಲಿಕ್ಕಾಗಲ್ಲ (ಆಡಿಯೋದೊಂದಿಗೆ) ಅದಕ್ಕೆ ಬೇರೆ ತಂತ್ರಾಂಶಗಳನ್ನೂ ಸೇರಿಸಿಕೊಳ್ಳ ಬೇಕಾಗತ್ತೆ. ಮತ್ತೆ ಯಾಹೂ ಅವರನ್ನ ಕೇಳಲೇ ಬೇಡಿ ಅವರ ಮೆಸೆಂಜರ್ ನಲ್ಲೂ ಆಡಿಯೋ ವಿಡಿಯೋ ಸಂವಾದ ಲಿನಕ್ಸ್ ನಲ್ಲಿ ಸಾದ್ಯವಿಲ್ಲ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ