ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

April 6, 2008 - 11:05am — venkatesh

ಯುಗಾದಿ ಹಬ್ಬದ ಆಚರಣೆ :

ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ : ೧೩-೦೪-೨೦೦೮ ನೇ ರವಿವಾರ, ಯುಗಾದಿಹಬ್ಬವನ್ನು ಆಚರಿಸುತ್ತಾರೆ. ಆಂಧ್ರದವರೂ, ಸೋಮವಾರದಂದೇ ಯುಗಾದಿಯನ್ನು ಆಚರಿಸುತ್ತಾರೆ.

ಉಷಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮಂಟಪವನ್ನು ಅಲಂಕರಿಸಿ, ಅಭ್ಯಂಜನವನ್ನು ಮಾಡಿ, ಸಂಧ್ಯಾವಂದನೆಗಳನ್ನು ನೆರವೇರಿಸಿ, ಶ್ರೀ ಮಹಾಗಣಪತಿ ಪೂಜಾ ಪೂರ್ವಕ, ನೂತನ ವರ್ಷದ ಪಂಚಾಂಗ ಸಹಿತ, ಕುಲದೇವತೆಯನ್ನು ಅರ್ಚಿಸಬೇಕು. ತದನಂತರ, ಬೇವು-ಬೆಲ್ಲಗಳನ್ನು ಭುಜಿಸಿ, ಸನ್ಮಿತ್ರರೊಡನೆಯೂ, ಸುಜನರುಗಳಳಿಂದ ಕೂಡಿರುವ ಸಭೆಯಲ್ಲಿ ದೈವಜ್ಞರು ಪಠನಮಾಡುವ "ಪಂಚಾಂಗ ಶ್ರವಣ," ವನ್ನು ಆಲಿಸಬೇಕು. ಬೇವು-ಬೆಲ್ಲವನ್ನು ಸಾಮಾನ್ಯವಾಗಿ ಮನೆಯ ಯಜಮಾನರು, ಮನೆಯವರಿಗೆಲ್ಲಾ ಕೊಡುವ ಪದ್ಧತಿ ಇದೆ. ಪರಿವಾರದವರು, ಪ್ರಸಾದವನ್ನು ಸೇವಿಸುವಾಗ, ಕೆಳಗಿನ ಶ್ಲೋಕವನ್ನು ಹೇಳಿ ಸೇವಿಸತಕ್ಕದ್ದು.

" ಶತಾಯುರ್ವತ್ರದೇಹಾಯ ಸರ್ವಸಂಪತ್ಕರಾಯಚ.

ಸರ್ವಾರಿಷ್ಠವಿನಾಶಾಯ ನಿಂಕಂದಳ ಭಕ್ಷಣಂ ".

ಅರ್ಥಾತ್, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ. ಎಂದು ಹೇಳಿ ಸೇವಿಸಬೇಕು.

ಆಸ್ತಿಕರ ಗಮನಕ್ಕೆ :

ದೃಗ್ಗಣಿತ ಪಂಚಾಂಗ ರೀತ್ಯ ತಾ. ೦೬-೦೪-೨೦೦೮ ನೇ ರವಿವಾರ * ಅಮಾ. ೭-೪೫ (ಬೆ ೯-೨೫) ಉಪರಿ ಚೈತ್ರ ಶುಕ್ಲ ಪ್ರಥಮಾ ೫೧-೫೦ ( ಬೆ. ಝಾ. ೬-೦೯) ಬಂದಿರುವುದರಿಂದ ದೃಗ್ಗಣಿತ ರೀತ್ಯ ತಾ. ೦೬-೦೪-೨೦೦೮ ನೇ ಭಾನುವಾರ ಚಾಂದ್ರಮಾನ ಯುಗಾದಿಯಾಗುತ್ತದೆ. ಮಹಾರಾಷ್ಟ್ರದಲ್ಲಿ, " ಗುಡಿಪಾಡ್ವ," ಹಬ್ಬವನ್ನು ಭಾನುವಾರ, ಅಂದರೆ, ಈ ದಿನ, ೦೬-೦೪-೨೦೦೮ ರಂದು, ಆಚರಿಸುತ್ತಿದ್ದಾರೆ.

-ಪಂಚಾಂಗಕರ್ತರು : ಒಂಟಿಕೊಪ್ಪಲ್, ಪಂಚಾಂಗ ಮಂದಿರದ, ಮೈಸೂರು ಪಂಚಾಂಗ. [೧೨೨ ನೆಯ ವರ್ಷದ ಪ್ರಕಟಣೆ]

  • ಪ್ರಚಲಿತ
~.~
  • Login or register to post comments
  • 354 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2008 - 8:33am — rameshbalaganchi

ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

rameshbalaganchi's picture

ವೆಂಕಟೇಶ್ ಅವರೆ,
ನಿಮ್ಮ ಲೇಖನದಲ್ಲಿ ನೀವು ಉದ್ಧರಿಸಿದ ಸಂಸ್ಕೃತಶ್ಲೋಕದಲ್ಲಿ ಸ್ವಲ್ಪ ತಪ್ಪಿದೆ. ಹೀಗೆ ತಿದ್ದುಕೊಳ್ಳಬಹುದು.
ಶತಾಯುರ್ವಜ್ರದೇಹಾಯ, ಸರ್ವಸಂಪತ್ಕರಾಯ ಚ|
ಸರ್ವಾರಿಷ್ಠವಿನಾಶಾಯ ನಿಂಬಕಂ ದಲಭಕ್ಷಣಮ್||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2008 - 2:19pm — venkatesh

ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

venkatesh's picture

ಆತುರದಲ್ಲಿ, ಶತಾಯುರ್ವತ್ರದೇಹಾಯ, ಎಂದು ತಪ್ಪಾಗಿ ಟೈಪಿಸಿದ್ದೇನೆ.

" ಶತಾಯುರ್ವಜ್ರದೇಹಾಯ "

-ಎಂದಿರಬೇಕಾಗಿತ್ತು. ತಪ್ಪಿಗೆ ಕ್ಷಮೆಯಿರಲಿ.

ನಾನು ಕೇಳಿದಂತೆ, ಯುಗಾದಿ ಪಂಡುಗ ವಚ್ಚಿಂದಿ, ಎಂದು ನಮ್ಮಗೆಳೆಯರು ಹೇಳಿದ್ದನ್ನು ಕೇಳಿದ್ದೆ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2008 - 12:30pm — mahesha

ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

mahesha's picture

ಪಂಡುಗ ಅಂದ್ರೆ ಹಬ್ಬ.. ತೆಲುಗರು ಸಾಮಾನ್ಯ ಉಗಾದಿ ಅಂತಾರೆ.

ಉಗಾದಿ ಹಬ್ಬದ ಸವಿಹಾರಯ್ಕೆಗಳನಿಬರಿಗೂ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2008 - 5:38am — venkatesh

ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

venkatesh's picture

ಚಂದ್ರದರ್ಶನ :

ಯುಗಾದಿಯ ದಿನ ಸಾಯಂಕಾಲ ಸೂರ್ಯಾಸ್ತವಾದ ಮೇಲೆ, ಸ್ವಲ್ಪಹೊತ್ತಿಗೆ, ಬಿದಿಗೆ ಚಂದ್ರನ ದರ್ಶನ ಅತಿ ಪ್ರಶಸ್ತ್ಯವಾದ ಕಾರ್ಯಗಳಲ್ಲೊಂದು. ಚಂದ್ರನ ಒಂದು ರೇಖೆಮಾತ್ರ ಆದಿನ ಅವಲೋಕಿಸಲು, ಲಭ್ಯವಾಗುತ್ತದೆ. ಇದರ ತರಿವಾಯ ಮನೆಯ ಹಿರಿಯರಿಗೆ, ನಮಸ್ಕಾರಮಾಡಬೇಕು. ಒಂದು ವೇಳೆ ಗಣಪತಿಹಬ್ಬದ ದಿನ ಅಕಸ್ಮಾತ್ ಚಂದ್ರದರ್ಶನ ಮಾಡಿದ್ದರೆ, ಯುಗಾದಿಯ ದಿನದ ಚಂದ್ರದರ್ಶನದಿಂದ ಅದರ ನಿವಾರಣೆ ಯಾಗುತ್ತದೆ. ಇದು ಶಾಸ್ತ್ರ ಸಮ್ಮತವಾದ ಮಾತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭
  • "ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ.
  • ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !
  • ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !
  • ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator