ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

April 7, 2008 - 1:13pm — ASHOKKUMAR

 

(ಇ-ಲೋಕ-69)(07/4/2008)
ಕಂಪ್ಯೂಟರೀಕರಣಗೊಂಡ ಬ್ಯಾಂಕುಗಳ ವ್ಯವಹಾರ ಪಾರದರ್ಶಕವಾಗಿರುತ್ತವೆ,ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರ ಸರಿಯಿರುತ್ತದೆ ಎಂಬ ತಿಳುವಳಿಕೆ ಹೊಂದಿದ ಬ್ಯಾಂಕು ಗ್ರಾಹಕರು ನೀವಾಗಿದ್ದರೆ,ಎಚ್ಚೆತ್ತು ಕೊಳ್ಳಿ.ಸರಿಯಾಗಿ ಅಭಿವೃದ್ಧಿ ಪಡಿಸದ ತಂತ್ರಾಂಶ ಕಾರಣ,ಬ್ಯಾಂಕು ಸಾಲದ ಮೇಲೆ ಬೀಳುತ್ತಿರುವ ಬಡ್ಡಿಯೇ ತಪ್ಪಾಗಿರಬಹುದು!
ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕಿನಲ್ಲಿ ಮನೆ ಕಟ್ಟಲು ಸಾಲ ತೆಗೆದು ಕೊಂಡ ಈ ಬರಹಗಾರನ ಅನುಭವವನ್ನೇ ಕೇಳಿ.ಸಾಲ ತೆಗೆದುಕೊಂಡದ್ದು ಮೂರು ವರ್ಷಗಳ ಕೆಳಗೆ.ಮಾಸಿಕ ಕಂತಿಗಿಂತ ಹೆಚ್ಚೇ ಕಟ್ಟಿ ಸಾಲದಿಂದ ಮುಕ್ತನಾಗುವ ಕನಸು ಕಾಣುತ್ತಾ,ಸಾಮರ್ಥ್ಯಕ್ಕನುಸಾರವಾಗಿ ತಿಂಗಳೂ ತಿಂಗಳೂ ಕಂತು ಕಟ್ಟುತ್ತಾ ಬಂದೆ.ಆದಾಯಕರ ಪಾವತಿಸಲು ಲೆಕ್ಕ ಕೊಡಬೇಕಿದ್ದರಿಂದ ಇತ್ತೀಚೆಗೆ ಸಾಲದ ವಿವರಗಳನ್ನು ಪಡೆದುಕೊಂಡಾಗ,ಪಾವತಿಯಾದ ಬಡ್ಡಿಯ ಮೊತ್ತ ಲೆಕ್ಕಕ್ಕಿಂತ ಹೆಚ್ಚೆನಿಸಿತು.ವಿಚಾರಿಸಿದಾಗ,"ಹಾಗಾಗಲು ಸಾಧ್ಯವಿಲ್ಲ,ಬಡ್ಡಿ ಲೆಕ್ಕಗಳೆಲ್ಲಾ ಕಂಪ್ಯೂಟರೇ ಮಾಡುವುದು",ಎಂಬ ಹಾರಿಕೆಯ ಉತ್ತರ ಸಿಕ್ಕಿತು.ಯಾಕಾದರೂ ಇರಲಿ ಎಂದು ಒಂದು ತಿಂಗಳ ಬಡ್ಡಿಯನ್ನು ಲೆಕ್ಕ ಹಾಕಿ ನೋಡಿದಾಗ,ನಿಜವಾಗಿ ತೆರಬೇಕಾದ್ದಕ್ಕಿಂತ ಒಂದು ಸಾವಿರದಷ್ಟು ಹೆಚ್ಚು ಬಡ್ಡಿ ವಿಧಿಸಿದ್ದು ಕಂಡು ಬಂತು.ಬ್ಯಾಂಕ್ ಅಧಿಕಾರಿಯನ್ನು ಭೇಟಿಯಾಗಿ ವಿಚಾರಿಸಿದಾಗ ಎಲ್ಲವೂ ಸರಿಯಾಗಿದೆ ಎಂಬ ನಿಲುವು.ಬಡ್ಡಿ ಲೆಕ್ಕ ಹಾಕುವ ವಿಧಾನ ತೋರಿಸಿ ಎಂದು ಪಟ್ಟು ಹಿಡಿದಾಗಲಷ್ಟೇ,"ಏನೋ ತಪ್ಪು ಸಂಭವಿಸಿದ್ದ್ದು ಹೌದು...ಏನದು ತಪ್ಪು ನೋಡುತ್ತೇವೆ..",ಎಂಬ ಸಮಜಾಯಿಷಿಕೆ.ಕೊನೆಗೂ ಬಂತು ನೋಡಿ ತಪ್ಪು ಲೆಕ್ಕಕ್ಕೆ ಕಾರಣ-ಅದು ತಂತ್ರಾಂಶದಲ್ಲಿನ ತಪ್ಪು!ನಿಗದಿತ ಮಾಸಿಕ ಕಂತಿನ ಪ್ರಕಾರ ಪಾವತಿಸಿದಾಗ ಎಷ್ಟು ಸಾಲದ ಮೊತ್ತ ಉಳಿಯುತ್ತದೆಯೋ,ಅದರ ಪ್ರಕಾರವೇ ತಂತ್ರಾಂಶವು ಪ್ರತಿ ತಿಂಗಳೂ ಬಡ್ಡಿ ಲೆಕ್ಕ ಹಾಕುತ್ತದೆ. ಯಾವನಾದರೂ ಸಾಲಗಾರ ಅಧಿಕ ಮರುಪಾವತಿ ಮಾಡಿದ್ದರೆ,ಅವನ ಖಾತೆಯ ಲೆಕ್ಕಾಚಾರಗಳೆಲ್ಲಾ ತಪ್ಪು ತಪ್ಪು!ಬ್ಯಾಂಕಿನವರಿಗೆ ತಂತ್ರಾಂಶ ತಪ್ಪು ಲೆಕ್ಕಾಚಾರ ಹಾಕುತ್ತಿರುವುದು ಗೊತ್ತಿಲ್ಲವೇ?ಗೊತ್ತಿದೆಯಂತೆ. ಆ ಬಗ್ಗೆ ಪ್ರಧಾನ ಕಚೇರಿಗೆ ಅವರು ವರದಿ ಕೊಟ್ಟಿದ್ದಾರಂತೆ.ಹಾಗಿದ್ದರೂ ಗ್ರಾಹಕನ ಖಾತೆಯ ಲೆಕ್ಕಗಳನ್ನು ಅವರು ತನಿಖೆಗೇಕೆ ಒಳಪಡಿಸುವುದಿಲ್ಲ?ಗ್ರಾಹಕನು ಹೇಳಿದಾಗಲೂ ಹಾರಿಕೆಯ ಉತ್ತರ ನೀಡುವುದೇಕೆ?ಅನಿವಾರ್ಯವಾದಾಗ ಮಾತ್ರಾ ಗುಟ್ಟು ಬಿಟ್ಟು ಕೊಡುವುದೇಕೆ? ತಪ್ಪುಗಳನ್ನು ಸರಿ ಪಡಿಸುವ ಭರವಸೆಗಳು ನಿಜವಾಗಿಯೂ ಕಾರ್ಯಗತವಾಗುತ್ತವೆಯೇ?ಸಮಯವೇ ಹೇಳಬೇಕು.
ಕಾರು ಕಳ್ಳನನ್ನು ಹಿಡಿಯಲು ಅಂತರ್ಜಾಲ ತಾಣದ ಬಳಕೆ
ಕೆನಡಾದ ಶಾನ್‍ಗೆ ತನ್ನ ನಿಸ್ಸಾನ್ ಕಾರನ್ನು ಮಾರಬೇಕಿತ್ತು.ಜಪಾನಿ ಮೋಡೆಲ್ ಈ ಕಾರು ಅಲ್ಲಿನ ಇತರ ಕಾರುಗಳಂತಲ್ಲದೆ ಬಲಬದಿ ಚಾಲಕನ ಸೀಟು ಹೊಂದಿರುವಂತದ್ದು.ಕಾರು ಖರೀದಿಸಲು ಬಂದ ವ್ಯಕ್ತಿ ಪರೀಕ್ಷಾರ್ಥ ಚಾಲನೆ ಮಾಡಲು ಕಾರು ತೆಗೆದು ಕೊಂಡು ಹೋದ.ಹಾಗೆ ಹೋದ ಕಾರಿಗೆ ಶಾನ್ ಕಾದದ್ದೇ ಬಂತು-ಕಾರು ವಾಪಸ್ಸು ಬರಲೇ ಇಲ್ಲ!’ಖರೀದಿಸಲು’ ಬಂದಾತ ಕೈಕೊಟ್ಟದ್ದು ಗೊತ್ತಾದಾಗ ತಡವಾಯಿತು.ಮಾಲಕ ಸುಮ್ಮನಿರಲಿಲ್ಲ.ಪೊಲೀಸ್ ದೂರು ನೀಡಿ ಸುಮ್ಮನಿರಲಿಲ್ಲ.ಅಂತರ್ಜಾಲ ತಾಣ Beyond.caದಲ್ಲಿ ತನ್ನ ಕಳುವಾದ ಕಾರಿನ ವಿವರಗಳನ್ನು ಪ್ರಕಟಿಸಿ,ತಾಣದ ಬಳಕೆದಾರರ ಸಹಾಯ ಕೋರಿದ.ಅಮೆರಿಕಾದಲ್ಲಿ ಅಪರೂಪವಾದ ಬಲಬದಿಯ ಕಾರು ಚಾಲಕನ ಸೀಟು,ಜತೆಗೆ ಕದ್ದವನ ಕೈಯಲ್ಲಿ ಬೆರಳುಗಳು ಮೊಂಡಾಗಿರುವ ಸುಳಿವುಗಳು ಬಹಳ ಗಮನಾರ್ಹವಾಗಿದ್ದುವು.ಕಾರಿನ ಬಗೆಗಿನ ತಾಣವಾದ್ದರಿಂದ ಅದರ ಬಳಕೆದಾರರು ಕಳ್ಳನ ಪತ್ತೆಗೆ ನೆರವು ನೀಡಬಹುದು ಎಂಬ ಶಾನ್‍ನ ಲೆಕ್ಕಾಚಾರ ತಪ್ಪಾಗಲಿಲ್ಲ.ಜೇಮ್ಸ್ ಎಂಬ ಈ ತಾಣದ ಬಳಕೆದಾರ ಕಾರಿನಲ್ಲಿ ಸಾಗುತ್ತಿರುವಾಗ ನಿಸ್ಸಾನ್ ಕಾರೊಂದು ಎದುರಾಯಿತು.ಕಾರು ಚಾಲಕನ ಕೈಬೆರಳನ್ನು ನೋಡಿ,ಅದು ಕಳವಾದ ಕಾರೇ ಎಂದು ಖಚಿತ ಪಡಿಸಲು,ಜೇಮ್ಸ್ ತನ್ನ ಕೈಬೀಸಿದ.ಕಾರು ಚಾಲಕ ಕೈಬೀಸಿ ಪ್ರತಿಕ್ರಿಯಿಸಿದಾಗ,ಮೊಡು ಬೆರಳುಗಳು ಕಂಡಿತು.ಜೇಮ್ಸ್ "ಕಳವಿನ ಕಾರು ಚಲೋದಾಗಿದೆ", ಎಂದು ಕೂಗಿದಾಗ,ಕಳ್ಳ ಪ್ರತಿಭಟಿಸಿದ-"ಕಾರು ಕದ್ದದ್ದಲ್ಲ",ಎಂಬ ಮರುನುಡಿ ಬಂತು.ಆದರೆ ಕಾರು ನೂರು ಮೈಲು ವೇಗದಲ್ಲಿ ಓಡತೊಡಗಿತು.ಜೇಮ್ಸ್ ಕಾರು ಬೆನ್ನಟ್ಟುವ ಸಾಹಸಕ್ಕಿಳಿಯದೆ,ಪೊಲೀಸರಿಗೆ ಸುದ್ದಿ ಮುಟ್ಟಿಸಿದ.ಪೊಲೀಸರು ಕಾರು ಅಡ್ಡಹಾಕಲು ಯಶಸ್ವಿಯಾದರು.ಚಾಲಕನ ಬಂಧನದ ವಿಡಿಯೋ ಕ್ಲಿಪ್ಪಿಂಗ್ ಯುಟ್ಯೂಬ್ ತಾಣದಲ್ಲಿ ಸಾರ್ವಜನಿಕವೂ ಆಗಿದೆ.
ರಸ್ತೆ ಸಾರಿಗೆ ಸಂಕೇತ ನೀಡಲು ಎಲ್ ಇ ಡಿ ಬಳಕೆ
ಲಂಡನ್‍ನಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಟ್ರಾಫಿಕ್ ದೀಪಗಳನ್ನು ಕ್ರಮಕ್ರಮವಾಗಿ ಈಗಿನ ಬಲ್ಬ್‍ಗಳಿಂದ ಎಲ್ ಇ ಡಿ ದೀಪಗಳಿಗೆ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಎಲ್ ಇ ಡಿ ಬೆಳಕು ಬೀರುವ ಅರೆವಾಹಕಗಳಿಂದ ತಯಾರಿಸಿದ ಡಯೋಡುಗಳು.ಚೈನಾದಂತಹ ದೇಶವೂ ಎಲ್ ಇ ಡಿ ಬಳಕೆಗೆ ಭಾರೀ ಮಟ್ಟದಲ್ಲಿ ಕೈಯಿಕ್ಕಿದೆ.ಚೀನಾದಿಂದ ಬರುತ್ತಿರುವ ಎಲ್ ಇ ಡಿ ಟಾರ್ಚುಗಳನ್ನು ನೀವೂ ಖರೀದಿಸಿರಬಹುದು.ಆದರೆ ನಾವ್ಯಾಕೋ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಯೇ ಇಲ್ಲ.ಇಲೆಕ್ಟ್ರಾನಿಕ್ಸ್‍ನಲ್ಲಿ "ಮೂರ್"‍ನ ನಿಯಮ ಇರುವಂತೆ ಎಲ್ ಇ ಡಿ ಬಗ್ಗೆ ಹೈಟ್ಸ್ ನಿಯಮವಿದೆ.ಅದರ ಪ್ರಕಾರ ವರ್ಷದಿಂದ ವರ್ಷಕ್ಕೆ ಎಲ್ ಇ ಡಿ ದೀಪಗಳ ಪ್ರಕಾಶವಿ ಇಪ್ಪತ್ತು ಪಟ್ಟು ಅಧಿಕವಾಗಲಿದೆ, ಜತೆಗೆ ಪ್ರತಿ ಲ್ಯುಮೆನ್ ಪ್ರಕಾಶಕ್ಕೆ ತಗಲುವ ಖರ್ಚು ಹತ್ತು ಪಟ್ಟು ಇಳಿಯಲಿದೆ!
ಪಾವತಿ ಸಮಸ್ಯೆ:ಅಂತರ್ಜಾಲ ಬಂದ್?
ಅಂತರ್ಜಾಲ ಸೇವೆ ನೀಡುವ ಐಎಸ್‍ಪಿ ಮತ್ತು ನ್ಯೂಮೆಕ್ಸಿಕೋನ ನವಜೋದ ಟ್ರಾಯ್ ನಡುವಣ ವಿವಾದದ ಕಾರಣ ನವಜೋ ದೇಶಕ್ಕೆ ಅಂತರ್ಜಾಲ ಸಂಪರ್ಕ ಬಂದಾಗುವ ಭೀತಿ ತಲೆದೋರಿದೆ.ಅಂತರ್ಜಾಲ ಸೇವೆಗೆ ವಿಧಿಸಿದ ಶುಲ್ಕ ಹೆಚ್ಚಾಗಿದೆ ಎಂದು ತಕರಾರು ಒಡ್ಡಿ ದೂರಸಂಪರ್ಕ ಪ್ರಾಧಿಕಾರ ಎರಡು ಮಿಲಿಯನ್ ಡಾಲರು ಪಾವತಿ ತಡೆ ಹಿಡಿದಿತ್ತು. ಈ ಹಣ ತನ್ನ ಕೈಸೇರದಿದ್ದರೆ,ತಾನು ನೀಡಬೇಕಾಗಿರುವ ಉಪಗ್ರಹ ಸೇವೆ ಸಂಬಂಧಿ ಶುಲ್ಕ ಪಾವತಿಸಲಸಾಧ್ಯ.ಹಾಗಾಗಿ ಉಪಗ್ರಹ ಸೇವೆ ಲಭ್ಯವಾಗದೆ,ಅಂತರ್ಜಾಲ ಸಂಪರ್ಕವು ಸೋಮವಾರದ ನಂತರ ಸಿಗದು ಎಂದು ಸೇವಾದಾತೃ ಎಚ್ಚರಿಸಿದೆ.ಇಪ್ಪತ್ತೇಳು ಸಾವಿರ ಜನಸಂಖ್ಯೆಯುಳ್ಳ ನವಜೋ ನಾಗರಿಕರು ಅಂತರ್ಜಾಲ ಸೇವೆ ಪಡೆಯುತ್ತಾರೋ ಎನ್ನುವುದು ಈ ಲೇಖನವನ್ನು ನೀವು ಓದುವ ವೇಳೆಗೆ ಗೊತ್ತಾದೀತು.

udayavani

ashokworld

*ಅಶೋಕ್‍ಕುಮಾರ್ ಎ

  • ಪ್ರಚಲಿತ
~.~
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 10, 2008 - 1:05pm — smurthygr

ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

smurthygr's picture

ಗ್ರಾಹಕರು ನಿಜಕ್ಕೂ ಗಮನಿಸಬೇಕಾದ ವಿಷಯ. ಆದರೆ ನಾವೇ ಬಡ್ಡಿ ಲೆಕ್ಕ ಹಾಕುವುದು ಹೇಗೆ? EMI ಲೆಕ್ಕಾಚಾರ ಹೇಗೆ ಅಂತ ದಯವಿಟ್ಟು ತಿಳಿಸಲು ಸಾಧ್ಯವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2008 - 9:32pm — ASHOKKUMAR

ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

ASHOKKUMAR's picture

emi calculation
emi = ((P *R)(1+R)^N)/ 12((1+R)^N)-1)

P- principle amount
N- number of years
R-rate of interest

ಒಂದು ತಿಂಗಳ ಬಡ್ಡಿ ಲೆಕ್ಕ ಹಾಕಲು ಒಂದು ವರ್ಷದ ಬಡ್ಡಿ ಲೆಕ್ಕ ಹಾಕಿ 12ರಿಂದ ಭಾಗಿಸಿದರೆ ಬಡ್ಡಿಯ ಅಜಮಾಸು ಮೊತ್ತ ಸಿಗುತ್ತದೆ.
ಉದಾ : ಬಾಕಿಯಿರುವ ಸಾಲ ಮೊತ್ತ-7,00,000
ಬಡ್ಡಿ ದರ 10% ಆದರೆ 7,00,000*0.10=70,000 /year
ತಿಂಗಳಿಗೆ ಬಡ್ಡಿ: 70000*ತಿಂಗಳಲ್ಲಿರುವ ದಿನ/365=5833.33
ಬ್ಯಾಂಕಿನವರು ತಿಂಗಳ ಕೊನೆಯ ದಿನ ಬಡ್ಡಿ ಲೆಕ್ಕ ಹಾಕುತ್ತಾರೆ. ನೀವು ಐದನೇ ತಾರೀಕಿಗೆ ಕಂತು ಪಾವತಿಸಿದರೆ, ಬಾಕಿ ಮೊತ್ತ ಮೊದಲ ಐದು ದಿನ 7,00,000 ಇದ್ದರೆ ಐದರ ನಂತರ ಬಾಕಿ ಮೊತ್ತ (7,00,000-ಪಾವತಿಸಿದ ಕಂತಿನ ಮೊತ್ತ) ಆಗಿರುವ ಕಾರಣ ಬಡ್ಡಿಯನ್ನು
(70,000*5/365)+((7,00,000-ಪಾವತಿಸಿದ ಕಂತಿನ ಮೊತ್ತ) *25/365) ಎಂದು ಲೆಕ್ಕ ಹಾಕ ಬೇಕು.
ವರ್ಷದಲ್ಲಿ 365, ದಿನ ತಿಂಗಳಲ್ಲಿ 30 ದಿವಸ ಆಗಿದ್ದರೆ).
ಅರ್ಥವಾದೀತೇ? Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2008 - 7:19pm — smurthygr

ಉ: ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

smurthygr's picture

ಸಂತಸ. ನನ್ನಿ. ಪ್ರಯತ್ನಿಸಿ ನೋಡುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
  • ಡಿಟಿಎಚ್ ಮೂಲಕವೂ ಖರೀದಿಸಿ!
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ
  • ಗೂಗಲ್‍ಗೆ ಪೆಂಟಾಗನ್ ನಿಷೇಧ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator