ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಆಶಯ

December 31, 2005 - 4:15pm — tvsrinivas41

ನಿನ್ನೆ ಹುಟ್ಟಿದ ವರುಷ,
ಹುಟ್ಟುವಾಗಲೇ ಹರುಷ
ತರುವ ಸಂಕೇತ ತೋರಹತ್ತಿತ್ತು
ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ
ಸಂತಸಕ್ಕಿಂತ ಹೆಚ್ಚಿನ ವಿರಸ
ಅತ್ತು ಕರೆದು ದಣಿದು
ಮನತಣಿಸಿತು - ಇನ್ನೇನು ಸತ್ತಿತು
ಆಗದಿರಲಿ ಹೊಸ ವರುಷ ಹಳೆ ವರುಷ

ರಾಜಕೀಯ ದಳ್ಳುರಿ,
ಅಕ್ಕ ಪಕ್ಕದ ಮನೆಯವರೊಡನೆ ವೈಮನಸ್ಯ
ಪಕ್ಕದ ಮನೆಯ ಹುಡುಗರಿಗೆ
ನಮ್ಮ ಹುಡುಗರಿಂದ ಹೊಡೆತ
ಅವರಿಂದ ಮರುಹೊಡೆತದ ಬೆದರಿಕೆ
ಎಂದು ಕೊನೆಯಾಗುವುದೀ ಮಕ್ಕಳಾಟ
ದಿನ ಎದುರಿಸಿವುದೊಂದು ಪ್ರಾಣ ಸಂಕಟ
ನಾಳೆ ಸಾಯುತಿದೆ ಹಳೆ ವರುಷ
ಆಗದಿರಲಿ ಹೊಸ ವರುಷ ಹಳೆ ವರುಷ

ಅಲ್ಲಿ ನೋಡಲಿ ಒಬ್ಬನ ಗದ್ದಲ
ಇಲ್ಲಿ ನೋಡಲಿ ಇನ್ನೊಬ್ಬನ ಮುನಿಸು
ಎಂದಿಗೂ ಕನಸಾಗಿಯೆ ಉಳಿದ ನಮ್ಮ ಕನಸು
ಮಧ್ಯೆ ಪಕ್ಕದ ಮನೆಗೆ ಹೋಗಿರುವ
ಪರಮಾತ್ಮನಾಡಿಸುತಿಹ ಆಟ
ಕೆಲಸ ಕಾರ್ಯವಿಲ್ಲದೇ ಕಾಲ ಕಳೆಯುತಿಹ
ವಿರೋಧಿಗಳು ಆಡಿಸುವ ಬುಗುರಿಯಾಟ
ಹೆಚ್ಚುತಿದೆ ಅಮ್ಮನ ಬಡತನವೆಂಬ ಅನಾರೋಗ್ಯ
ಆಗದಿರಲಿ ಹೊಸ ವರುಷ ಹಳೆ ವರುಷ

ಅತ್ತ ಮಣ್ಣಿಗಾಗಿ ಪಕ್ಕದ
ಮನೆಯವರೊಂದಿಗೆ ನಿರಂತರ ಹೊಡೆದಾಟ
ನಿಸರ್ಗದತ್ತ ನೀರಿಗಾಗಿ
ಬೀದಿ ನಲ್ಲಿಯ ಪಕ್ಕ ಬಡಿದಾಟ
ನಿಸರ್ಗ ಆಗದಿಂದು ಚಿರಂಜೀವಿ
ಜಗಳ ಬಡಿದಾಟ ಹೊಡೆದಾಟ ಚಿರಂತನ
ಆಗದಿರಲಿ ಹೊಸ ವರುಷ ಹಳೆ ವರುಷ

ದಿನಂಪ್ರತಿ ಹೊಡೆದಾಟ ಬಡಿದಾಟ
ರಕ್ತಪಾತ, ದರೋಡೆ, ಕಳ್ಳತನ
ಕೊಲೆ ಸುಲಿಗೆ ಇವುಗಳದ್ದೇ ವರದಿ
ಶಾಂತಿಯ ಮಾತುಗಳಿಗಿಲ್ಲ ಸರದಿ
ಮಧ್ಯೆ ಸಿಲುಕಿ ನಲುಗಿ ಹೋಗುತಿಹ ಅಮ್ಮ
ಆಗದಿರಲಿ ಹೊಸ ವರುಷ ಹಳೆ ವರುಷ

ಇತ್ತ ಹಿರಿ ಕಿರಿಯ ಮಕ್ಕಳಲ್ಲಿ ವೈಮನಸ್ಯ
ನಿರ್ವಿಚಾರದ ವೈಚಿತ್ರ್ಯ
ಒಂದೇ ಮನೆಗೆ ಬೇಕಂತೆ ಎರಡು ಅಡುಗೆ ಕೋಣೆ
ಕಟ್ಟ ಬೇಕಂತೆ ಮಧ್ಯೆ ಗೋಡೆ
ಅದಕಾಗಿ ಮೇಲ್ಮಕ್ಕಳ ಜಗಳ
ಹತಾಶಳಾಗಿಹ ಅಮ್ಮನ ಕಳವಳ
ಹರಿದು ಹಂಚಿಹೋಗುತಿಹುದವಳ ಸೀರೆ
ಯಾರಿಗೆ ಇದೆ ಅವಳ ಮಾನದ ಪರಿವೆ
ಆಗದಿರಲಿ ಹೊಸ ವರುಷ ಹಳೆ ವರುಷ

ಬ್ರಾಹ್ಮಣರ ಸಂಪ್ರದಾಯದಂತೆ
ಶ್ರಾದ್ಧ ಬಯಸದ ವರುಷ
ಬೂದಿಯಿಂದೆದ್ದು ಬರುವ ಫೀನಿಕ್ಸಿನಂತೆ
ನಾಳೆ ಮರು ಹುಟ್ಟುವುದು ಇನ್ನೊಂದು ವರುಷ
ಮನ ಆಶಿಸುವುದು ಸಂತಸ
ಆಗದಿರಲಿ ಹೊಸ ವರುಷ ಹಳೆ ವರುಷ

ಹೊಸ ಚಿಣ್ಣನಾದರೂ ತರಲಿ
ಎಲ್ಲರ ಮನೆ ಮನಕೂ ಸಂತಸ ಸಮೃದ್ಧಿ
ಆಗದಿರಲಿ ಹೊಸ ವರುಷ ಹಳೆ ವರುಷ

  • ಕಾವ್ಯ ಮತ್ತು ಕವನ
~.~
  • Login or register to post comments
  • 620 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 31, 2005 - 9:24pm — Sunil Jayaprakash

ಸದಾಶಯ

Sunil Jayaprakash's picture

ವರ್ಷದ ಅಂತ್ಯದಲ್ಲಿ ಕೊಂಚ ಪಾರ್ಟಿಸುವ ಗುಂಗಿನಲ್ಲಿ ಇರೋಣ ಅಂತಿದ್ದೆ. ಆದರೆ ನಿಮ್ಮ ಆಶಯದ ಹಿಂದಿನ ಕಾರಣ ನನ್ನ ಮನಸ್ಸನ್ನು ಸ್ವಲ್ಪ ಕದಡಿತು ಅನ್ನಸುತ್ತೆ. ಎಲ್ಲೆಲ್ಲೂ ವೈಮನಸ್ಸು. ಆದರೆ ಒಂದು ವಿಷಯದಲ್ಲಿ ಸಂತೋಷ ಪಡಬಹುದು. ಅದೆಂದರೆ ಕನ್ನಡ ಸಿನಿಮಾ, ಈ ಬಾರಿ ಒಳ್ಳೆಯ(ಪ್ರಶ್ನಾರ್ಥಕ) ಚಲನಚಿತ್ರಗಳು ಹಾಗು ಮುಖ್ಯವಾಗಿ ಉತ್ತಮವಾದ(ಪ್ರಶ್ನಾರ್ಥಕ) ಹಾಡುಗಳು ದಾಖಲಾಗಿವೆ.
ಅಂದಹಾಗೆ ನನ್ನ ಆಶಯವೇನು ಗೊತ್ತೆ.
ಜೋಗಿ ಚಿತ್ರತಂಡದ ಕ್ಷಮೆ ಕೋರುತ್ತಾ, ಆಗದಿರಲಿ ನಮ್ಮ ಮಾವ ಲಾಡೆನ್ನು, 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 31, 2005 - 10:52pm — tvsrinivas41

ಪ್ರಸಕ್ತ ಪರಿಸ್ಥಿತಿ

tvsrinivas41's picture

ಇದರಿಂದ ಮನಸ್ಸನ್ನು ಯಾಕೆ ಕದಡಿಕೊಳ್ತೀರ? ದಿನಂಪ್ರತಿ ನಡೆಯೋ ಗೋಳುಗಳನ್ನು ಒಗ್ಗೂಡಿಸಿದ್ದೀನಿ ಅಷ್ಟೇ. ನೋಡುತ್ತಿದ್ದಾಗ ಏನೂ ಅನ್ನಿಸೋಲ್ಲ. ವಿಚಾರಕ್ಕೆ ತೆಗೆದುಕೊಂಡರೆ ಮನಸ್ಸು ಅಲ್ಲೋಲ ಕಲ್ಲೋಲವಾಗತ್ತೆ.

ಲಾಡೆನ್ ಬಗ್ಗೆ ಕನ್ನಡ ಸಿನೆಮಾ ಇದೆಯಾ? ಸಿನೆಮಾ ನೋಡೋದು ಬಿಟ್ಟು ೧೬ ವರ್ಷಗಳಾಯ್ತು. ನನಗೇನೂ ಗೊತ್ತಿಲ್ಲ.

ನೀವು ನಿಮ್ಮ ಪಾಡಿಗೆ ಪಾರ್ಟಿ ಮಾಡಿ. ದಿನಾ ಸಾಯೋರಿಗೆ ಅಳೋವ್ರು ಯಾರು?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 1, 2006 - 4:49am — ಶ್ಯಾಮ ಕಶ್ಯಪ

ಹೌದು ಕಣ್ರೀ

ಶ್ಯಾಮ ಕಶ್ಯಪ's picture

ಈ ಬಾರಿ ನಿಜವಾಗಲೂ ಕನ್ನಡ ಚಲನಚಿತ್ರಗಳು ಚೆನ್ನಾಗಿ ಓಡಿದಾವೆ. ಬುದ್ಧಿವಾದಿಗಳಿಗೆ ಇಷ್ಟ ಆಗ್ಲಿ ಬಿಡ್ಲಿ,ಎಲ್ಲಾ ವರ್ಗದವರಿಗೂ ಹಿಡಿಸಿದೆಯೋ ಇಲ್ಲವೋ, ಪಿಕ್ಚರ್‍ಗಳಂತೂ ಹಿಟ್ ಆಗಿದಾವೆ.ಹಾಡುಗಳೂ ಅಷ್ಟೆ, ಉತ್ತಮ,ಪ್ರಶ್ನಾರ್ಥಕ (who cares) ಹಾಡುಗಳು.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ~ಶುಭಾಶಯಗಳು~
  • ಕಾವೇರಿ
  • ಏಳಾಯ್ತು...ವರುಷ ಏಳಾಯ್ತು
  • ಯುಗಾದಿ ...
  • ಹೊಸ ಸಂವತ್ಸರಾಂಭರದ ಶುಭಹಾರೈಕೆಗಳು
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator