ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

April 10, 2008 - 11:02am — omshivaprakash

ಆಗಲೇ ನಗಲಿಕ್ಕೆ ಶುರು ಮಾಡಿದ್ರಾ? ಹೌದು  ನಾನಿವತ್ತು ನಿಮಗೆ ಲೈಫ್ ರಿಯಾ ಅನ್ನೋ ತಂತ್ರಾಂಶದ ಬಗ್ಗೆ ಹೇಳಬೇಕು ಅಂತ್ಲೇ ಕುಳಿತಿದ್ದು. ಇದ್ದಕ್ಕಿದ್ದಂತೆ ಮಲೇರಿಯ , ಲೌವೇರಿಯಾ ಎಲ್ಲ  ಕಣ್ಣ ಮುಂದೆ ಬಂದು ಆ ಹಳೆಯ ಹಿಂದಿ ಹಾಡನ್ನ  ಒಂದು ಸಾಲು ಗುನು ಗುನಿಸುವಂತಾಯಿತು. ಹಾಗಿದ್ರೆ ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ?

ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್ ಸೈಟ್ಗಳು ಎಷ್ಟಿವೆ ಅಂತಂದ್ರೆ  ಎಲ್ಲರೂ ನೂರು ನೂರೈವತ್ತು ಕೊಂಡಿಗಳನ್ನ  ಬುಕ್ ಮಾರ್ಕನಲ್ಲಿ ಟ್ಟು ಕೊಂಡು ಪಿಳಿ ಪಿಳಿ ಕಣ್ಬಿಟ್ಟು ನೋಡ್ತಿರ್ತೀವಿ.ಇವುಗಳನ್ನ ನಿಜವಾಗಿ ಮತ್ತೆ ತೆರೆದು ನೋಡುವುದು ಕನಸಿನಲ್ಲೇ ಮಾಡಬೇಕಾದ ಕಾರ್ಯ ಏಕೆಂದರೆ, ಯಾವ ವೆಬ್ ಸೈಟ್ ಅಪ್ಡೇಟ್ ಆಗಿದೆ , ಯಾವುದರಲ್ಲಿ ಹೊಸ ಬ್ಲಾಗ್  ಪೋಸ್ಟ ಹಾಕಿದಾರೆ ಅಂತ ನಮಗ್ಯಾರಾದ್ರೂ  ಅಪ್ಡೇಟ್ ಮಾಡಿದಾಗಲೇ ಗೊತ್ತಾಗೋದು,ಆಗಲೇ ನಾವು ಆ ವೆಬ್ ಸೈಟ್ ಮತ್ತೆ ನೋಡೋ ಗೋಜಿಗೆ ಹೋಗೋದು. ಇಲ್ಲಾಂದ್ರೆ ಹೊಸ ತಾಣಗಳತ್ತ , ಚೆಂದವಾದ ಚಿತ್ರ ಪಟಗಳನ್ನ ಹೊತ್ತ ಪುಟಗಳತ್ತ  ನಮ್ಮ ಗಮನ ಹರಿಯೋದು ಮಾನವ ಸಹಜ ಗುಣತಾನೆ.

ಹೌದು, ಎಷ್ಟೋ ತಾಣಗಳು ಕೆಲವು ಸಲ ಹೇಳ ಹೆಸರಿಲ್ಲದಂತೆ ಕಾಣೆಯಾಗ್ತವೆ ಇಲ್ಲಾ ಹೊಸದೊಂದು ವಿಷಯವನ್ನ ಹೊತ್ತು ಮರುಜನ್ಮ ಪಡೀತವೆ ಅಷ್ಟರಲ್ಲಿ ಮೇಲೆ ಹೇಳಿದ ಹಾಗೆ ನಮ್ಮ ಬುಕ್ ಮಾರ್ಕ ಬುಟ್ಟಿಯಲ್ಲಿ ಬೆಚ್ಚಗೆ ಹುದುಗಿ ಕೊಂಡಿರ್ತವೆ. ಇದನ್ನ ತಪ್ಪಿಸೋದ್ ಹ್ಯಾಗೆ? ನಮ್ಮ ಗಮನ ಸೆಳೆದ, ದಿನವೂ ಒಮ್ಮೆ ಈ ಪುಟವನ್ನ ನೋಡಲೇ ಬೇಕೆಂದು ಕೊಂಡಿದ್ದ ಪುಟಗಳತ್ತ ನಮಗೆ ಸಮಯ ಸಿಕ್ಕಾಗ ಕಣ್ಣಾಯಿಸಿ ಒಮ್ಮೆ ನೋಡೋದು ಹೇಗೆ? ಇದಕ್ಕೆಲ್ಲ ಉತ್ತರ  RSS Feed Reader (ಆರೆಸ್ಸೆಸ್ ಫೀಡ್ ರೀಡರ್) ಉಪಯೋಗಿಸೋದು . ವಿ.ಸೂ:ರಾಷ್ಟೀಯ ಸ್ವಯಂ ಸೇವಕ ಸಂಗಕ್ಕೂ ಇದಕ್ಕೂ ಎಳ್ಳಷ್ಟೂ ಸಂಬಂದವಿಲ್ಲ.

RSS (ರಿಯಲಿ ಸಿಂಪಲ್ ಸಿಂಡಿಕೇಷನ್ ) ಬ್ಲಾಗ್ ಗಳ, ವೆಬ್ ಸೈಟ್ ಪುಟಗಳ ಮಾಹಿತಿ ಬದಲಾದಂತೆಲ್ಲ ಅದರ ತುಣುಕನ್ನ ಇಲ್ಲ ಬದಲಾದ ಭಾಗವನ್ನ ನಿಮ್ಮ ಮುಂದಿಡುವ ಕಾರ್ಯವನ್ನ ಮಾಡುತ್ತದೆ.RSS ಫೀಡ್ ರೀಡರ್ ನಿಮ್ಮ ಕಂಪೂಟರಿನಲ್ಲಿ ಸ್ಥಾಪಿಸಿ ಕೊಂಡಿದ್ದರೆ ಇಂಟರ್ನೆಟ್ ಲಭ್ಯವಿದ್ದಾಗ ಅದರಲ್ಲಿ ಸೇರಿಸಿದ ವೆಬ್ ಸೈಟ್ ಮತ್ತು ಬ್ಲಾಗುಗಳ ಮಾಹಿತಿಯನ್ನ  RSS ಮೂಲಕ  ಸಂಗ್ರಹ ಮಾಡಿ ಕೊಳ್ತದೆ, ನೀವು ನಿಮಗಿಷ್ಟ ಬಂದಾಗ ಅದರೆಡೆ ಗಮನ ನೀಡ ಬಹುದು. ಕೆಲ ವೆಬ್ ಸೈಟ್ ಗಳನ್ನ ನಾವು ದಿನ ನಿತ್ಯ ಓದದೆ  ಅದನ್ನ ಲೈಬ್ರರಿ ಯಂತೆ ಉಪಯೋಗಿಸೋದಾದ್ರೆ ನೀವು ಫೀಡ್ ರೀಡರ್ನಲ್ಲಿ ಸಂಗ್ರಹಿಸಿಟ್ಟು ಕೊಂಡ ಮಾಹಿತಿಯನ್ನ ಮುಂದೊಂದು ದಿನ ಸರ್ಚ್ ಮಾಡಬಹುದು ಇಂಟರ್ನೆಟ್ ಇಲ್ಲದಾಗ ಕೂಡ.

ಲೈಫ್ ರಿಯಾ ಇಂತದೇ ಒಂದು ಫೀಡ್ ರೀಡರ್. ಲಿನಕ್ಸ್ ನಲ್ಲಿ ಸಕತ್ತಾಗಿ ಕೆಲಸ ಮಾಡ್ತದೆ. ಉಬುಂಟು ಹಾಕಿ ಕೊಂಡವರು ಸಿನಾಪ್ಟೆಕ್ ನಲ್ಲಿ ಇದನ್ನ ಹುಡುಕಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇಲ್ಲಾ, ಕೆಳಗಿನ ಸಾಲನ್ನ ನಿಮ್ಮ ಕನ್ಸೋಲಿನಲ್ಲಿ ಕೀಲಿಸಿ (ಇಂಟರ್ನೆಟ್ ಕನೆಕ್ಷನ್ ಇರಬೇಕು).

sudo aptitude install liferea

ಹೇಗೆ ಸಂಪದವನ್ನ ಲೈಫ್ ರಿಯಾದಲ್ಲಿ ಹಾಕಿ ಕೊಳ್ಳೋದು ? ಅಥವಾ ಇತರೆ ಬ್ಲಾಗ್ ಗಳನ್ನ ಇದರಲ್ಲಿ ಹೇಗೆ ನೋಡೋದು ಅಂತೀರಾ?

ಕೆಳಗೆ ಕಾಣಿಸ್ತಿರೋ ಚಿತ್ರ ಯಾವುದೇ ವೆಬ್ ಸೈಟ್ ನಲ್ಲಿ RSS ಇರೋದನ್ನ ಸೂಚಿಸುತ್ತೆ. ಸಂಪದದ ಎಲ್ಲ ಪುಟಗಳಲ್ಲೂ ಇದನ್ನ ನೋಡ ಬಹುದು. ಸಂಪದದಲ್ಲಿನ ನಿಮ್ಮ ಬ್ಲಾಗಿಗೆ ಕೂಡ ಪ್ರತ್ಯೇಕವಾದ RSS ಕೊಂಡಿ ನೀಡಲಾಗಿದೆ. ಅದನ್ನೇ ನೀವು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು.

ಇದರೊಂದಿಗೆ, ನಿಮ್ಮ ಬ್ರೌಸರ್  ಕೂಡ RSS ಮಾಹಿತಿಯನ್ನ ಅಡ್ರೆಸ್ ಬಾರ್ ನಲ್ಲಿ ನೀಡತ್ತೆ. ಅದರ ಒಂದು ಉದಾಹರಣೆ ಇಲ್ಲಿದೆ.

ಈ ಕೊಂಡಿಯ ವಿಳಾಸವನ್ನ ನೀವು ಲೈಫ್ ರಿಯಾಗೆ ನೀಡಿದರಾಯಿತು. ಸಂಪದ ಮತ್ತು ಇತರೆ ಬ್ಲಾಗುಗಳನ್ನ ನೀವು ಇದರಲ್ಲಿ ಓದ ಬಹುದು. (ಕಂಟೆಟ್ ನಿಮ್ಮ ಹಾರ್ಡಿಸ್ಕ್ ಗೆ ಸೇವ್ ಆಗುವುದರಿಂದ ಆಫ್ ಲೈನ್ ಕೂಡ ನೋಡಬಹುದು)

ನನ್ನ ಲೈಫ್ ರಿಯಾ ಇಲ್ಲಿದೆ ನೋಡಿ. ಸಂಪದದ ಪಾಡ್ಕಾಸ್ಟ್ ಅನ್ನ ಇಲ್ಲಿಂದಲೇ ಕೇಳೋದು, ನೋಡೋದು. ಕಾಮೆಂಟ್ಗಳನ್ನ ಲೈಫ್ ರಿಯಾ ನಲ್ಲಿ ನೋಡೋದು ತುಂಬಾ ಸುಲಭ . ಬ್ಲಾಗ್ ಕಮೆಂಟ್ ನೋಡಿಕೊಳ್ಳುವವರಿಗೆ, ಕಂಟೆಟ್  ಮ್ಯಾನೇಜರಿಗೆ ಲೈಫ್ ರಿಯಾ ಪರ್ಸನಲ್ ಅಸಿಸ್ಟಂಟ್ ಇದ್ದಾಗೆ. ನಮ್ಮ ಹರಿಯನ್ನೇ ಕೇಳಿ ನೋಡಿ Eye-wink

ಇದರ ಇನ್ನೊಂದು ಉಪಯೋಗ ನಿಮ್ಮ ಗಮನಕ್ಕೆ ಬಂತಾ?
ಬಂದಿರಲಿಕ್ಕಿಲ್ಲ ಬಹಳ ಜನರಿಗೆ. ನೀವು  ಪ್ರತಿಸಲ ಬ್ಲಾಗ್ ಅಥವಾ ವೆಬ್ ಸೈಟ್ ಸಂಪರ್ಕಿಸಿದಾಗ ಬೇಕು ಬೇಡವಾದ್ದೇಲ್ಲಾ ಅಂದರೆ ಜಾಹೀರಾತುಗಳೂ ನಿಮ್ಮ ಬ್ರೌಸರ್ ನಲ್ಲಿ ಬಂತು ಕುಳಿತು ಬಿಡ್ತಾವೆ. ಅದಕ್ಕೂ ಬ್ಯಾಂಡ್ವಿಡ್ತ್ ಬೇಕಲ್ವಾ? ನಾವು ಎಲ್ಲದಕ್ಕೂ ಕಾಸು ಖರ್ಚು ಮಾಡಬೇಕು. Eye-wink ಆಫೀಸಿನಲ್ಲಿ ಬ್ರೌಸ್ ಮಾಡವರಿಗೆ ಈ ತೊಂದರೆ ಇಲ್ಲ ಬಿಡಿ. ಈ ಬ್ಯಾಂಡ್ವಿಡ್ತ್ ಗೆ ನೀವು ತೆರುವ ಎಷ್ಟೋ  ಹಣವನ್ನ ನೀವು  ಇಲ್ಲಿ ಉಳಿಸ ಬಹುದು. ಮತ್ತೆ ಇಂಟರ್ನೆಟ್ ಇಲ್ಲದಾಗ್ಲೂ ಕೂಡ ಕಂಟೆಂಟ್ ಉಪಯೋಗಕ್ಕೆ ಬರತ್ತೆ. ಪೇಜ್ಗಳನ್ನ ಕುದ್ದಾಗಿ  ಉಳಿಸಿಡಬೇಕಿಲ್ಲ.

ಆರೆಸ್ಸೆಸ್ ರೀಡರ್ ಗಳು ಬಹಳಷ್ಟಿವೆ. ಲೈಫ್ ರಿಯಾ ಒಮ್ಮೆ ಉಪಯೋಗಿಸಿ ನೋಡ್ರಲ್ಲ ಮತ್ತೆ.

 ಧನ್ಯವಾದಗಳೊಂದಿಗೆ,
ನಿಮ್ಮ, <a href="http://platonic.techfiz.info"> ಓಂ ಶಿವಪ್ರಕಾಶ </a>
 

  • ಮಾಹಿತಿ ಫಲಕ
~.~
  • Login or register to post comments
  • 736 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 10, 2008 - 11:10am — hpn

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

hpn's picture

ಶಿವು,

RSS ನಲ್ಲೂ ಜಾಹಿರಾತು ಹಾಕುತ್ತಿದ್ದಾರೆ ಇತ್ತೀಚೆಗೆ ಗಮನಿಸಿಲ್ವಾ? ಎಲ್ರೂ ಹಾಗೆ ಮಾಡುತ್ತಿಲ್ಲದಿರುವುದರಿಂದ ಅಷ್ಟು ಕಷ್ಟವಾಗಿಲ್ಲ, RSS ಮೂಲಕ ಪುಟಗಳನ್ನು ಟ್ರಾಕ್ ಮಾಡುವವರಿಗೆ.

ಓದುಗರಿಗೆ ವಿ.ಸೂ: RSS - Really Simple Syndication, ಇದು ನಮ್ಮ ದೇಶದ RSS ಅಲ್ಲ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 10, 2008 - 11:18am — hpn

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

hpn's picture

ಮತ್ತೊಂದು ವಿಷಯ ಸೇರಿಸಿಲ್ಲ. DBus messages ಬಳಸಿ ಲೈಫ್ ರಿಯಾ ಗೆ ಬ್ರೌಸರಿನಿಂದ ನೇರ add ಮಾಡಿಕೊಳ್ಳಬಹುದು. ಈ ಸ್ಕ್ರೀನ್ ಶಾಟ್ ನೋಡು:
liferea-firefox
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 10, 2008 - 11:39am — Sunil Jayaprakash

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

Sunil Jayaprakash's picture

ಗೂಗಲ್ ರೀಡರ್ ಅನ್ನು ಇದಕ್ಕೆ ಹೋಲಿಸಿ ಸ್ವಲ್ಪ ತಿಳಿಸಿಕೊಡಲು ಸಾಧ್ಯವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 10, 2008 - 12:14pm — omshivaprakash

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

omshivaprakash's picture

ಗೂಗಲ್ ರೀಡರ್ನಲ್ಲಿ ಅರೆಸ್ಸೆಸ್ ಓದಲು ನಿಮಗೆ ಇಂಟರ್ನೆಟ್ ನ ಅವಶ್ಯಕತೆ ಇದೆ. ಇಲ್ಲಿ, ಒಮ್ಮೆ ರೀಡರ್ update ಆದ ನಂತರ ನಿಮಗೆ ಇಂಟರ್ನೆಟ್ ನ ಅಗತ್ಯವಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಂಟೆಂಟ್ ನಿಮ್ಮ ಸಿಸ್ಟಮ್ ನಲ್ಲಿ ಉಳಿಸಿಕೊಳ್ಳೋ ಅವಕಾಶ ಲೈೞ್ ರಿಯಾ ನೀಡುತ್ತದೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 10, 2008 - 12:23pm — hpn

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

hpn's picture

ಹೌದು ಮಾರಾಯ. ಸ್ಟೋರ್ ಮಾಡಿಟ್ಟುಕೊಳ್ಳಬಹುದು. ಲ್ಯಾಪ್ ಟಾಪ್ ನಲ್ಲಿ ಆಫ್ಲೈನ್ ಓದಲಿಕ್ಕೂ ಉಳಿಸಿಟ್ಟುಕೊಳ್ಳಬಹುದು. ಜೊತೆಗೆ ಪ್ರತಿ ಸಾರಿ ಲಾಗಿನ್ ಆಗಬೇಕು ಗೂಗಲ್ ರೀಡರ್ ಗೆ. ಅಲ್ಲದೆ ಗೂಗಲ್ ಗೆ ನೀನು ಮಾಡುತ್ತಿರೋದೆಲ್ಲದರ ಬಿಟ್ಟಿ ತಿಳುವಳಿಕೆ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 12, 2008 - 12:23am — createam

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

createam's picture

ನಾನೂ ಮುಂಚೆ omea reader ಅನ್ನೋ feed reader ಅನ್ನು ಉಪಯೋಗಿಸ್ತಾ ಇದ್ದೆ, ನೀವು ಹೇಳಿದ ಹಾಗೆ offline reading ಏನೋ ಸರಿ, ಆದ್ರೆ disk space ತಿನ್ನುತ್ತೆ ಗುರು. ಅದನ್ನ clean up ಮಾಡೊದೇ ದೊಡ್ಡ ತಲೆನೋವಾಗುತ್ತೆ. ಇದೇ ಕಾರಣಕ್ಕೆ ನಾನು ಗೂಗಲ್ ರೀಡರ್ ಮೊರೆ ಹೋದೆ. Google gears ಅನ್ನು ಉಪಯೋಗಿಸಿ ಇದನ್ನೂ offline ಅಲ್ಲಿ ಬಳಸಬಹುದು. Gears ಅನ್ನು google reader ಜೊತೆ ಉಪಯೋಗಿಸಿದ್ದೀನಿ ಆದ್ರೆ ಎಶ್ಟು feedಗಳನ್ನು ಅದು offlineಗೆ ತರುತ್ತದೆ ಅನ್ನೋದರ ಬಗ್ಗೆ ಸರಿಯಾದ ಮಾಹಿತಿ ನನ್ನ ಹತ್ರ ಇಲ್ಲ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 12, 2008 - 12:38am — omshivaprakash

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

omshivaprakash's picture

ಡಿಸ್ಕ್ ಸ್ಪೇಸ್ ತಿನ್ನತ್ತೆ ನಿಜ. ಎಷ್ಟು ತಿನ್ನಬೇಕು ಅಂತ ನಾವೇ ಹೇಳ ಬಹುದಾಗಿದ್ದು. ಅದು ತನ್ನಂತಾನೇ ಹಳೆಯ ವಿಷಯಗಳನ್ನ ಅರ್ಥ ಮಾಡಿಕೊಳ್ಳುವಷ್ಟು ಬುದ್ದಿವಂತ ಸಾರ್. Eye-wink ಟೈಮ್ ಸಿಕ್ಕಾಗ ಓದ್ತೀವಿ. ಇಂಟರ್ನೆಟ್ ಇಲ್ಲಾಂದ್ರೆ ಆಮೇಲೇನು ಮಾಡೋದು ಆ ಹೊತ್ತಿ ನಲ್ಲಿ. Eye-wink ಹೌದು ಮತ್ತಿನ್ನಿಷ್ಟು ಆರೆಸ್ಸೆಸ್ ರೀಡರ್ಗಳೂ ಲಭ್ಯವಿವೆ. ಲೈಫ್ ರಿಯಾ, ಲೈಟಾಗಿ, ಕ್ಯೂಟಾಗಿ ಕಂಡಿದ್ದರಿಂದ ಅದರ ಮೇಲೆ ನನಗೆ ಇಷ್ಟವಾಯಿತು ಅನ್ನ ಬಹುದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 12, 2008 - 12:41am — omshivaprakash

ಉ: ಲೌವೇರಿಯಾ ಅಲ್ಲ , ಇದು ಲೈಫ್ ರಿಯಾ

omshivaprakash's picture

ಗೂಗಲ್ ಬಗೆಗಿನ ಈ ಇಂಗ್ಲೀಷ್ ಲೇಖನ ಓದಿ ನೋಡಿ.
ಅದರ ಬಗ್ಗೆಯೂ ಚಿಂತಿಸ ಬೇಕಿದೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • ಗೂಗಲ್ ಕಡತಗಳು (Docs) ಕನ್ನಡದಲ್ಲಿ
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 134 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator