Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅನನ್ಯ ಅಲ್ಲಮ (೬)

April 13, 2008 - 11:33am — csomsekraiah

ಚಾಮರಸನ ಅಲ್ಲಮನು ,ಸ್ವಯಂ ಸಿದ್ದನಾದವನು ; ಲೋಕದ ಲೀಲೆಗಳಿಂದ ಅತೀತನಾದವನು . ಮಾಯೆ ಅವನಿಗೆ ಒಂದು ಸಮಸ್ಯೆಯೇ ಅಲ್ಲ; ತಮೋಹಾರಿಯಾದ ಅವನಿಗೆ , ತಮದ ಮಾಯೆ ಕೇವಲ ಒಂದು ಲೀಲೆ . ಮಮಕಾರ, ಮೋಹಿನಿಯರ ಮಗಳು ಮಾಯೆ ಹಾಗಲ್ಲ , ಅವಳು ಪಾರ್ವತಿಯ ತಾಮಸ ಕಳೆ .ಅವಳು ಹುಟ್ಟಿದ ಕೂಡಲೇ ಸಾಧಕರ ಸಾಧನೆಗಳು ನೀರಲ್ಲಿ ಮಾಡಿದ ಹೋಮದಂತೆ ಅವರ ಚಿತ್ತದಲ್ಲಿ ವಿಕಾರಗಳು ಮೊಳೆದೋರಿದವೆನ್ನುತ್ತಾನೆ ಚಾಮರಸ . ಅವಳು ಹುಟ್ಟಿದ್ದೇ ಅಲ್ಲಮನನ್ನು ಪ್ರಕೃತಿಯ ಪಾರವಶ್ಯದಲ್ಲಿ ಬಂಧಿಸಲು . ಇಲ್ಲಿ ಒಂದು ಸ್ವಯಂಪ್ರಭೆಯಾದರೆ ,ಇನ್ನೊಂದು ತಮದ ಹೊರಳಿ . ಒಂದು ಇರುವ ನೆಲೆಯಲ್ಲಿ ಇನ್ನೊಂದು ಇರುವುದು ಸಾಧ್ಯವೇ ಇಲ್ಲ .

ಹರಿಹರನ ಅಲ್ಲಮನ ರೀತಿಯೇ ಬೇರೆ ,ಅಲ್ಲಿ ಅವನು ಸ್ವಯಂ ಸಿದ್ದನಲ್ಲ , ಸಾಮಾನ್ಯ ನೆಲೆಗಟ್ಟಿನಿಂದಲೇ , ಅಸಾಮಾನ್ಯತೆಯೆಡೆಗೆ ಪಯಣ ತೊಡಗಿದ ನಿರಂತರ ಸಾಧಕ . ಎಲ್ಲರಂತೆಯೇ ಜನ್ಮ ತಳೆದ ಅಲ್ಲಮ , ಪ್ರಕೃತಿಯ ಎಲ್ಲಗುಣ ದೋಷಗಳ ಸಮ್ಮಿಶ್ರವಾಗಿಯೇ ಜನಿಸಿ , ಜೀವನದಲ್ಲಿ ಸಂಘಟಿಸುತ್ತಿದ್ದ ಘಟನೆಗಳೊಡನೆ ಸೆಣಸುತ್ತಲೇ ; ಸುಖ,ದುಃಖಗಳ ಸಮುದ್ರದಲ್ಲಿ ಬೆಂದು ಬಸವಳಿಯುತ್ತಲೇ ತನ್ನ ಸಾಧನಾ ಮಾರ್ಗವನ್ನು ;ಶಾಶ್ವತ ತತ್ವದ ಅರಿವನ್ನು ಖಚಿತಪಡಿಸಿಕೊಳ್ಳುತ್ತಾ , ಇತರರಿಗೆ ಮಾರ್ಗದರ್ಶಿಯಾದವನು .

ಚಾಮರಸನ ಅಲ್ಲಮನು ಮಾಯೆ ಯನ್ನು ಸಂಧಿಸಿದುದು ಬನವಸೆಯ ಮಧುಕೇಶ್ವರನ ಮಂದಿರದಲ್ಲಿ , ಏಕೆಂದರೆ ಅವಳು ಅಲ್ಲಿನ ಅರಸನಾದ ಮಮಕಾರನ ಮಗಳು . ಹರಿಹರನ ಅಲ್ಲಮ ಕಾಮಲತೆಯನ್ನು ಸಂಧಿಸುವುದು ,ತನ್ನ ಹುಟ್ಟೂರಾದ ಬಳ್ಳಿಗಾವೆಯ ಗೊಗ್ಗೇಶ್ವರ ಮಂದಿರದಲ್ಲಿ . ಅವಳು ಅಲ್ಲಿನ ಪ್ರಸಿದ್ದ ವರ್ತಕ ಧನಪಾಲನ ಮಗಳು . ಎರಡು ಕಡೆಗಳಲ್ಲಿಯೂ ಸಾಮ್ಯವಿರುವ ಒಂದು ವಿಷಯವೆಂದರೆ ,ಅವನು ತರುಣ , ಸುಂದರ, ಕಲಾವಿದ , ಅವನು ಅಪ್ರತಿಮ ಮದ್ದಲಿಗ.

ಅಲ್ಲಮನು ಪ್ರತಿ ದಿನ ಇಬ್ಬರು ಸಹಚರರೊಡನೆ , ಗೊಗ್ಗೇಶ್ವರನ ಮಂದಿರದಲ್ಲಿ ಶಿವನಿಗೆ ಮದ್ದಳೆಯ ಸೇವೆಯನ್ನು ಸಮರ್ಪಿಸುತ್ತಿದ್ದನು . ಅಲ್ಲಿಗೆ ಒಂದು ದಿನ ಆಗಮಿಸಿದ ಕಾಮಲತೆ ಅಲ್ಲಮನನ್ನು ಕಂಡು ಪ್ರಥಮ ನೋಟದಲ್ಲಿಯೇ ಮೋಹ ಪರವಶಳಾಗುತ್ತಾಳೆ . ಸ್ತ್ರೀ ಸಹಜವಾದ ಲಜ್ಜೆಯಿಂದ ಮುಕ್ತಳಾಗಿ , ನೆಟ್ಟ ನೋಟದಿಂದ ಅವನನ್ನೇ ನೋಡುತ್ತಾ , ಸುತ್ತಣ ಜನರ ಪರಿವೆಯೂ ಇಲ್ಲದೆ ಮೈ ಮರೆಯುತ್ತಾಳೆ . ಇಲ್ಲಿ ಅಲ್ಲಮನೂ ಚಾಮರಸನ ಅಲ್ಲಮನಂತೆ ಒಲಿದು ಬಂದ ನಾರಿಯನ್ನು , ನಿರಾಶಳನ್ನಾಗಿ ಮಾಡುವುದಿಲ್ಲ . ಕಾಮಲತೆಯ ಸುಮ ಕೋಮಲ ತನುವಿನಿಂದ ಆಕರ್ಷಿತನಾದ ಅಲ್ಲಮನು ,ಅವಳು ಅವನನ್ನು ಕಂಡು ಮರವಟ್ಟು ನಿಂತಂತೆಯೇ ್; ಆ ಮನ ಮೋಹಕ ರೂಪದ ಲಾವಣ್ಯ ರಾಶಿಗೆ ಮನವನ್ನು ಮಾರಿ ಮೂರ್ಛಿತನಾಗುತ್ತಾನೆ .

ಹರಿಹರನ ಅಲ್ಲಮ , ಲೋಕದ ಎಲ್ಲ ಸಾಮನ್ಯರಂತೆಯೇ , ಕಾಮಲತೆಯನ್ನು ಕಾಮಿಸಿ , ಪ್ರೇಮಿಸಿ ,ಅವಳೊಡನೆ ಅನುರೂಪನಾಗಿ ಸಂಸಾರ ನಡೆಸುತ್ತಾ ಲೌಕಿಕ ಬಂಧನದಲ್ಲಿ ಸ್ವರ್ಗವನ್ನು ಕಾಣುತ್ತಿರುವಾಗಲೇ ಅವಳ ಅಕಾಲ ಮರಣವಾಗುತ್ತದೆ .

ಹೃದಯ ಕಮಲದೊಳಗೊಂದು
ಮರಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತು
ಆ ತುಂಬಿಯ
ಗರಿಯ ಗಾಳಿಯಲಿ
ಮೂಲೋಕವೆಲ್ಲವೂ ತಲೆ ಕೆಳಗಾಯಿತ್ತು !

ಕಾಮಲತೆಯ ಮರಣದಿಂದ ವಿಚಲಿತನಾದ ಅಲ್ಲಮನು ,ಮರುಳನಾಗಿ ಅವಳಿಗಾಗಿ ಹಂಬಲಿಸಿ , ಮನದ ತುಂಬ ತುಂಬಿದ ಕಾಮಲತೆ ವಿಸ್ತಾರದ ಹೊರಗೆಲ್ಲಿಯೂ ಕಾಣದೆ ,ಭ್ರಮೆ ಹಿಡಿದು ಅವಳನ್ನು ಅರಸುತ್ತಾ ತಿರುಗುತ್ತಾನೆ . ಆಗ ಅವನಿಗೆ ಸಂಸಾರದ ಅನಿತ್ಯತೆ ಮನವರಿಕೆಯಾಯಿತೋ? ಕಾಲ ವಿಸ್ತಾರದ ಅಗಾಧದಲ್ಲಿ , ಬಾಳಿನ ಕ್ಷಣ ಭಂಗುರತೆ ಅರಿವಾಯಿತೋ ?ಅದಲ್ಲಕ್ಕೆ ಪೂರಕವಾದಂತೆ , ಅನಿಮಿಷನ ದುರ್ಲಭ ದರ್ಶನ ಸಂಘಟಿಸಿತೋ? ಅಲ್ಲಿಂದ ಮುಂದಣ ಅಲ್ಲಮ ಸಾಮಾನ್ಯ ಅಲ್ಲಮನಲ್ಲ ; ಸಾಮಾನ್ಯ ನಿಲುಕಿಗೆ ದೊರಕುವವನೂ ಅಲ್ಲ .

ಆಯಿತ್ತೇ ಉದಯಮಾನ
ಹೋಯಿತ್ತೇ ಅಸ್ತಮಾನ
ಅಳಿದವಲಾ ನೀರಲಾದ ನಿರ್ಮಿತಂಗಳೆಲ್ಲವೂ
ಕತ್ತಲೆಗವಿಯಿತ್ತು
ಮೂರು ಲೋಕದೋಳಗೆ
ಇದರಚ್ಚುಗವೇನು ಹೇಳಾ ಗುಹೇಶ್ವರಾ ?

ಅಲ್ಲಮನ ಯವ್ವನ ಕಾಲದ ಘಟನೆಗಳನ್ನು ಸವಿಸ್ತಾರವಾಗಿ ನಿರೂಪಿಸುವ ಮಹಾ ಕವಿಗಳು ಅವನ ಇಪ್ಪತ್ತು ವರ್ಷಗಳ ಹಿಂದಣ ಬಾಲ್ಯವನ್ನು ನಿರ್ಲಕ್ಷಿಸಿದ್ದಾರೆ , ಚಾಮರಸನಿಗಂತೂ ಅವನು ಕಾರಣ ಶಿಶುವಾದುದರಿಂದ ಬಾಲ್ಯದ ಶಿಶು ಲೀಲೆಯ ಅಗತ್ಯವೇ ಕಾಣದೆಯೇ ಹೋಗಿರಬಹುದು . ಸ್ವತಃ ಅಲ್ಲಮನ ವಚನಗಳಲ್ಲಿಯೂ ಬಾಲ್ಯದ ನೇರ ನೆನಪುಗಳಿಲ್ಲ . ಅವನ ಭಾವ ಪ್ರಪಂಚದ ಹಿನ್ನೆಲೆಯಲ್ಲಿ ಅವನ ಮಸುಕಾದ ಬಾಲ್ಯದ ಜಾಡನ್ನು ಕಲ್ಪಿಸಬಹುದು .

ಬದುಕಿನಲ್ಲಿ ಬಾಲ್ಯ ಅತ್ಯಂತ ಗಣನೀಯವಾದ ಕಾಲ .ಮನದ ಮೇಲೆ ಅಲ್ಲಿ ಮೂಡುವ ಭಾವ ಮುದ್ರಿಕೆಗಳು ,ಜನ್ಮಾಂತದವರೆಗೆ ಬೆಂಬಿಡದೆ ತಮ್ಮ ಪ್ರಭಾವಲಯವನ್ನು ವಿಸ್ತರಿಸುತ್ತಲೇ ಇರುತ್ತವೆ . ಅಂದು ಕಲಿತ ಮೊದಲ ತೊದಲ ನುಡಿ ,ತಾಯಿಯೆಂಬ ಸ್ಥಾಯಿ ಭಾವವಾಗಿ , ಇಡಿಯ ಜನ್ಮದುದ್ದಕ್ಕೂ , ವಿಚಾರ ಪ್ರಪಂಚದ ಹರವಿನೊಡನೆ ವಿಸ್ತಾರಗೊಳ್ಳುತ್ತಲೇ ಆಲೋಚನೆಗಳ ಮೂಲ ನೆಲೆಯಾಗಿ , ಸಂವಹನ ಸಿದ್ದವಾಗುತ್ತಿರುತ್ತದೆ .

ಅಂದು ಪರಿಭಾವಿಸಿದ ಪ್ರೇಮ ,ಲೋಕವನ್ನು ಪ್ರೇಮಮಯ ದೃಷ್ಟಿಯಿಂದ ;ಅಂದು ಸಹಿಸಿದ ಹೀಂಸೆ , ಕ್ರೌರ್ಯಗಳು ಲೋಕವನ್ನು ಹಿಂಸೆ ಕ್ರೌರ್ಯದ ದೃಷ್ಟಿಯಿಂದ ; ಅಂದು ಅನುಭವಿಸಿದ ನೇರ , ವಕ್ರ ಮಾರ್ಗಗಳು ,ಬಾಳಿನ ಉದ್ದದ ನೇರ ವಕ್ರ ಮಾರ್ಗಗಳಾಗಿ , ನಿಡುಗಾಲದ ಜೀವನದಲ್ಲಿ ವ್ಯಕ್ತಿತ್ವದ ಪ್ರೇರೇಪಣೆಯ ಮೂಲ ತಂತುಗಳಾಗುತ್ತವೆ . ಅಂದು ಕಲಿತ ವಿದ್ಯೆ ,ಮುಂದೆ ಬಾಳಿನಲ್ಲಿ ಕಲಿಯುವ ಎಲ್ಲ ವಿದ್ಯೆಗಳ ಪೂರ್ವ ವೇದಿಕೆಯಾಗಿ , ಸ್ಥಿರ ನೆಲೆಗಟ್ಟಾಗಿ ಮನೋಮುದ್ರಣವಾಗುತ್ತದೆ .

ತಾರುಣ್ಯದ ಘಟನೆಗಳ ಹೊರತಾಗಿ ತನ್ನ ಸುದೀರ್ಘ ಪಯಣದಲ್ಲಿ, ಸಾಧಕನಾಗಿ , ಸಿದ್ದನಾಗಿ , ಯೋಗಿಯಾಗಿ ,ಮಾಯಾನಿರಸನದ ಹಾದಿಯಲ್ಲಿ ತನ್ನದೇ ಪಥದಲ್ಲಿ ಚಲಿಸುತ್ತಾ , ತಾನರಿತ ಮಾರ್ಗದ ಸ್ಪಷ್ಟ ಪಯಣಿಗನಾಗಿ , ಹಿಂಬಾಲಿಸಿದ ಹಿಂಬಾಲಕರ ಗುರುವಾಗಿ ಚಲಿಸಿದ ಅಲ್ಲಮನ ಬಾಲ್ಯ ಎಂಥದಿರಬಹುದು ?

  • ಜ್ಞಾನವಾಹಿನಿ
Ornamental seperator
  • Login or register to post comments
  • 256 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 13, 2008 - 7:50pm — rameshbalaganchi

ಉ: ಅನನ್ಯ ಅಲ್ಲಮ (೬)

rameshbalaganchi's picture

ಸೋಮಶೇಖರಯ್ಯನವರೆ, ಎಷ್ಟು ಚೆನ್ನಾಗಿ ಬರೆಯುತ್ತೀರಿ!! ನಿಮ್ಮ ಲೇಖನ ಓದಿದರೆ ಬೆಳದಿಂಗಳಲ್ಲಿ ತಾರಸಿಯ ಮೇಲೆ ಕೂತು ಚಂದ್ರನನ್ನು ನೋಡುತ್ತ ಸುತ್ತಲ ಶಾಂತ ಲೋಕ ಕಂಡಂತಾಗುತ್ತದೆ. ತುಂಬಾ ಸಂತೋಷ. ಬರೆಯುತ್ತ ಹೋಗಿ.

  • Login or register to post comments
  • link
  • Email this ಪ್ರತಿಕ್ರಿಯೆ
April 14, 2008 - 4:06pm — csomsekraiah

ಉ: ಅನನ್ಯ ಅಲ್ಲಮ (೬)

csomsekraiah's picture

ರಮೇಶ್ ರವರಿಗೆ ನಿಮ್ಮ ಮನಸ್ಸಿಗಾದ ಸಂತೋಷವನ್ನು ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು . ಇದು ನನಗೂ ಸಂತಸದ ಸಂಗತಿ .

  • Login or register to post comments
  • link
  • Email this ಪ್ರತಿಕ್ರಿಯೆ
April 14, 2008 - 5:23pm — ಸಂಗನಗೌಡ

ಉ: ಅನನ್ಯ ಅಲ್ಲಮ (೬)

ಸಂಗನಗೌಡ's picture

ಸೋಮಶೇಖರಯ್ಯನವರೇ ... ಹೌದು ತುಂಬ ಚೆನ್ನಾಗಿ ಬರಿತಿರಾ ನೀವು... ಆದಸ್ಟು ಸರಳ ಆಡು-ನುಡಿಯ ಪದಗಳನ್ನೇ ಬಳಸಲು ನೋಡಿ.. ಅಲ್ಲಮನ ಯವ್ವನದ ಲವ್ ಅಫೇರ್ ಬಗ್ಗೆ ಗೊತ್ತೇ ಇರಲಿಲ್ಲ... thanks..

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 6:28pm — csomsekraiah

ಉ: ಅನನ್ಯ ಅಲ್ಲಮ (೬)

csomsekraiah's picture

ಸಂಗನ ಗೌಡರೆ ನೀವು ಚಾಮರಸನನ್ನು ಓದಬೇಕು , ಎಷ್ಟೊಂದು ಚೇತೋಹಾರಿಯಾದ ಬರವಣಿಗೆ , ಹಾಗೆಯೇ ಹರಿಹರನದೂ ಸಹ ,ನಾನು ಕಾಣಿಸಿರುವುದು ಸರಸ್ಸಿನ ಕೆಲವು ಹನಿಗಳನ್ನು ಮಾತ್ರ.ಮೂಲ ಕಾವ್ಯಗಳನ್ನು ಓದಿದರೆ ಕನ್ನಡದ ಓಜಸ್ಸು ಬೆರಗಾಗುವಂತಿದೆ .

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 7:26pm — rameshbalaganchi

ಉ: ಅನನ್ಯ ಅಲ್ಲಮ (೬)

rameshbalaganchi's picture

ನಿಮ್ಮ ಮಾತು ಅಪ್ಪಟ ನಿಜ ಸೋಮಶೇಖರಯ್ಯನವರೆ,

ನಿಮ್ಮ ಲೇಖನ ಮತ್ತು ಈ ಪ್ರತಿಕ್ರಿಯೆಯ ಮಹಿಮೆ ನೋಡಿ!! ನಾನು ಎಸ್. ಎಸ್.ಎಲ್. ಸಿ ಓದುತ್ತಿದ್ದ ಕಾಲದಲ್ಲಿ ಸಂಸ್ಕೃತ ಮೇಷ್ಟ್ರು ರಜೆ ಹಾಕಿದ್ದರೆ ಕನ್ನಡ ತರಗತಿಯಲ್ಲ್ಯಿ ಕೂತು ಹೆಚ್ಚು ಅರ್ಥವಾಗದಿದ್ದರೂ ಸ್ವಾರಸ್ಯವಿರುವಂತೆ ಕೇಳಿಸಿಕೊಳ್ಳುತ್ತಿದ್ದೆ. ಆಗಿನ ಪ್ರಭುಲಿಂಗ ಲೀಲೆಯಲ್ಲಿನ ಪದ್ಯಗಳು ಅವು ನನಗೆ ಪಠ್ಯವಲ್ಲದಿದ್ದರೂ- ಬಹುಶ: ಅದರ ನಾದಮಾಧುರ್ಯಕ್ಕಿರಬೇಕು- ತಟ್ಟನೆ ನೆನಪಿಗೆ ಬಂತು
ಆರು ನಮ್ಮನು ಜರೆದವರು ಜಂಭಾರಿಯೋ ದನುಜಾರಿಯೋ ಕಾಮಾರಿಯೋ
ತೋರವನ ಹೆಡೆತಲೆಗುಗಿವೆ ನಾಲಿಗೆಯ ಬೇರುಸಹಿತವೆ ಕೀಳುವೆನು
ಕೈವಾರವೇಕೆನುತೆದ್ದು ಬಂದನು ಧೀರತನದಲಿ ಸಿದ್ಧರಾಮನು ಗಜರಿ ಗರ್ಜಿಸುತ.
ಲೇಸು ಲೇಸೈ ಸಿದ್ಧರಾಮನೆ ವಾಸಿ . . . . . . . . .( ನೆನಪಿಲ್ಲ ಕ್ಷಮಿಸಿ)
ಸಾಸಿರಕೆ ವೆಗ್ಗಳಿಸಿತಲ್ಲಾ ಸುಡು ಯತಿತ್ವವನು
ಈಸು ಕೋಪಾಟೋಪ ರೋಷಾವೇಶವೇತಕೆ ಯೋಗಿಯಾದ
ನಿರಾಸೆವಂತಂಗೆನುತಲಿದ್ದನು ನಗುತ ಪ್ರಭುರಾಯ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನನ್ಯ ಅಲ್ಲಮ (೫)
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ಅನನ್ಯ ಅಲ್ಲಮ ೭
  • ಅನನ್ಯ ಅಲ್ಲಮ (೧)
  • ಭಾವಬಿಂದು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 2 ಅತಿಥಿಗಳು ಆನ್ಲೈನ್ ಇರುವರು.

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator