ಎಲ್ಲಿರುವೆ ನೀ ಗೆಳೆತಿ..!!
ಎಲ್ಲಿರುವೆ ನೀನು ಗೆಳತಿಯೆ
ನನ್ನ ನೆನೆವುದ ಮರೆತೆಯೆ
ನಿನ್ನೊಳು ನನ್ನನು ಅರಿತೆಯ
ನನ್ನ ಸೇರೆ ನೀ ಬರುವೆಯ..!!
ನಿನ್ನ ಹುಡುಕದ ಊರು ಇಲ್ಲ
ನಿನ್ನನು ನೆನೆಯದ ಕ್ಷಣಗಳೆ ಇಲ್ಲ
ನಿದಿರೆಯ ತುಂಬ ನಿನ್ನದೆ ಭ್ರಾಂತು
ನರಳಿದೆ ಮನಸು ನಿನ್ನಲಿ ಸೋತು
ಸೇರು ಬಾರೆ ಎಲ್ಲಿರುವೆ ನೀ ಗೆಳತಿ...!
ನಿನ್ನ ನೋಡುವ ಕಾತುರ ಉಕ್ಕಿ
ಹಾಡಿದೆ ಒಲವಿನ ಪ್ರಣಯದ ಹಕ್ಕಿ
ಎಣಿಸಲು ನಿನ್ನಯ ಮಾತಿನ ಮುತ್ತ
ಹುಡುಕಿಹೆ ನಿನ್ನನು ಅತ್ತಾ ಇತ್ತ
ಬಾರೆ ಸೇರು ಎಲ್ಲಿರುವೆ ನೀ ಗೆಳತಿ..!
ಹುಡುಕಿದ ಮುಖಗಳು ನಿನ್ನವಲ್ಲ
ಮಾತುಗಳವು ನಿನ್ನ ಹೋಲುವುದಿಲ್ಲ
ನಿನ್ನಯ ಹೆಜ್ಜೆಯ ದನಿ ಇದು ಅಲ್ಲ
ಒಲವಿನ ಗಂಧವ ನಾ ಕಾಣಲೆ ಇಲ್ಲ
ಬಾರೆ ಸೇರು ಎಲ್ಲಿರುವೆ ನೀ ಗೆಳತಿ..!
ಗೀಚಿದ ಸಾಲವು ಕವಿತೆಗಳಲ್ಲ
ವಿರಹದ ಹಾಡನು ಕೇಳುವರಿಲ್ಲ
ನಿನ್ನ ಕಲ್ಪನೆಯೊಂದೆ ಎನಗಿಹ ಶಕ್ತಿ
ಜೀವಕೆ ಸಂಜೀವಿನಿ, ಜೀವಕೆ ಸಂಜೀವಿನಿ
ಬಾರೆ ಬಾರೆ ಎಲ್ಲಿರುವೆ ನೀ ಗೆಳತಿ..!
ನಿನ್ನನು ನೋಡುವ ಹಸಿವು ಕಾಣೆ
ಒಲವೊಳು ಹೊರಳುವ ಕನಸು ಕಾಣೆ
ಸೇರಲು ನಿನ್ನನು ಬರುವೆನು ನಾನು
ಕಂಡೊಡೆ ನನ್ನನು ಚುಂಬಿಸೆ ನೀನು
ಬಾರೆ ಬಾರೆ ಎಲ್ಲಿರುವೆ ನೀ ಗೆಳತಿ..!
ಎಲ್ಲಿರುವೆ ನೀನು ಗೆಳತಿಯೆ
ನನ್ನ ನೆನೆವುದ ಮರೆತೆಯೆ
ನಿನ್ನೊಳು ನನ್ನನು ಅರಿತೆಯ
ನನ್ನ ಸೇರೆ ನೀ ಬರುವೆಯ..!!
-ಯುವಪ್ರೇಮಿ

- Login or register to post comments
- 351 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಎಲ್ಲಿರುವೆ ನೀ ಗೆಳೆತಿ..!!
"ಎಲ್ಲಿರುವೆ ನೀ ಗೆಳೆತಿ..!!" ಕವಿತೆಯು ಪ್ರತಿ ಯುವ ಪ್ರೇಮಿಗಳ ವಿರಹದ ಹೃದಯ ಮಾತಂತೆ ಢವ ಗುಟ್ಟಿದೆ......ಅಂತೆಯೆ ಚಿತ್ರವು ಅರ್ಥಫೂರ್ಣವಾಗಿದೆ.
ನಾ ಮೆಚ್ಚಿದ ಸಾಲುಗಳು...
ಹುಡುಕಿದ ಮುಖಗಳು ನಿನ್ನವಲ್ಲ
ಮಾತುಗಳವು ನಿನ್ನ ಹೋಲುವುದಿಲ್ಲ
ನಿನ್ನಯ ಹೆಜ್ಜೆಯ ದನಿ ಇದು ಅಲ್ಲ
ಒಲವಿನ ಗಂಧವ ನಾ ಕಾಣಲೆ ಇಲ್ಲ
ಬಾರೆ ಸೇರು ಎಲ್ಲಿರುವೆ ನೀ ಗೆಳತಿ..!
ಸ್ನೇಹದಿಂದ,
ಪಿ.ಗಣೇಶ
ಉ: ಎಲ್ಲಿರುವೆ ನೀ ಗೆಳೆತಿ..!!
ಅನಂತ ವಂದನೆಗಳು ಗಣೇಶ್ ರವರಿಗೆ..!
ವಿರಹದ ವೇದನೆ ಸಹಿಸಲಾಗದ ಒಂದು ಅನುಭವವೆ ಸರಿ...!!
ವಂದನೆಗಳು
-ಯುವಪ್ರೇಮಿ