ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗಾಳಿಪಟ, ಒಂದು ಒಳ ನೋಟ...!!

April 15, 2008 - 10:08pm — yuvapremi

೧:

ಮುಂಗಾರು ಮಳೆ ಒಂದು ಅತ್ಯಧ್ಬುತ ಚಿತ್ರ ಅನ್ನೊದ್ರಲ್ಲಿ ಸಂಶಯ ಇಲ್ಲ.
ಮುಂಗಾರು ಮಳೆ ನಲ್ಲಿ ಕತೆ ಸಾದಾರಣವಾಗಿದ್ದರು, ಕತೆಗೆ ಅನುಗುಣವಾಗಿ ಗೊಣಗಿದ ಹಾಡುಗಳು ಎಲ್ಲ ನೋಡುಗರ ಮನದಲ್ಲಿ ಮನೆಮಾತಾಗಿದೆ.
ಮುಂಗಾರು ಮಳೆಯಲ್ಲಿ ಕೆಲವು ಲೋಪ ದೋಷಗಳು ಇದ್ದರು ಎಲ್ಲದರ ನಡುವೆ ತ್ಯಾಗಾತ್ಮಕ ಅಳುವಿಗೆ ಮನಸೋತು ಪ್ರತಿಯೊಬ್ಬರು ಚಿತ್ರವನ್ನ ಬಹಳ ಮೆಚ್ಚಿ ನೋಡಿದರು.

ನಾನು ಕೊಡ ನನ್ನ ಆಂದ್ರ ಗೆಳೆಯನಿಗೆ ಚಿತ್ರವನ್ನು ತೋರಿಸಿ, ಪ್ರತಿ ಸಂಭಾಷಣೆಯನ್ನು ತೆಲುಗಿನಲ್ಲಿ/ಇಂಗ್ಲಿಷ್ ನಲ್ಲಿ ಬದಲಿಸಿ ತಿಳಿಸಿದೆ. ಅದಾದ ನಂತರ ನನ್ನ ಗೆಳೆಯ ಮುಂಗಾರುಮಳೆ ಯನ್ನ ಯದ್ವಾ ತದ್ವ ಪ್ರೀತಿಸೋಕೆ ಶುರು ಮಾಡಿದ್ದಾನೆ. ಅಲ್ಲದೆ ಚಿತ್ರದ ಕೊನೆ ವಾಕ್ಯವಾದ "ಪ್ರೀತಿ ಮಧುರ, ತ್ಯಾಗ ಅಮರ" ಅನ್ನೊದನ್ನ ತನ್ನ ಕಂಪ್ಯುಟರ್ ವಾಲ್ ಪೇಪರ್ ಕೋಡ ಮಾಡಿಕೊಂಡಿದ್ದಾನೆ.

ಇದಾದ ನಂತರ ಏನಾಯ್ತು ಅನ್ನೊದೇ ನಮ್ಮ ವಿಶಯ ಇಲ್ಲಿ.

"ಯೋಗರಾಜ್ ಭಟ್" ರವರು ಮುಂಗಾರು ಮಳೆಯ ಯಶಸನ್ನ ಎನ್-ಕ್ಯಾಷ್ ಮಾಡಿಕೊಳ್ಳುವ ಉಪಾಯದಲ್ಲಿ, ದಯಾಳ್ ಎಂಬ ನಿರ್ಮಾಪಕನ ಜೊತೆಸೇರಿ, ಮುಂಗಾರಿನ ಮಳೆಯಲ್ಲಿ ಸುರಿಸಿದ ಮಳೆಯ ಅಬ್ಬರವನ್ನು "ಗಾಳೀಪಟ" ದಲ್ಲು ನುಗ್ಗಿಸಿ, ಚಿತ್ರದಲ್ಲಿ ಎಲ್ಲರು ಜಾರುವಂತೆ ಮಾಡಿದ್ದಾನೆ.

"ಯೋಗರಾಜ್ ಭಟ್" ರವರು ಗಣೇಶ್ ರವರನ್ನ ಮತ್ತೆ ತಮ್ಮ ಚಿತ್ರದಲ್ಲಿ ತಂದು, "ಮುಂಗಾರು ಮಳೆ" ಆಕ್ಸಿಡೆಂಟಲಿ ಯಶಸ್ವಿಪಡೆದ ಚಿತ್ರ ಅಲ್ಲ ಅನ್ನೊದನ್ನ ತೋರಿಸಲು ಹೊರಟಂತೆ ಹೇಳಿ, ಹಣ ಮಾಡುವ ಧಂದೆಗೆ ಇಳಿದಿದ್ದಾರೆ.

"ಗಾಳೀಪಟ" ಚಿತ್ರದ ಕತೆಯೊಂತು ಗೋಳಿನ ಕತೆ. ಐಸ್ ಕ್ರೀಮ ತಿನ್ನುತ ಚಿತ್ರವನ್ನು ವೀಕ್ಷಿಸುತಿದ್ದ ನನ್ನ ಬಾಯಿ ತಣ್ಣಗಿರದೆ ಒಂದೊಂದು ಚಿತ್ರದ ಸನ್ನಿವೇಶಕ್ಕು ಗೊಣಗುವಂತೆ ಪ್ರೇರೇಪಿಸುತಿತ್ತು.

ಚಿತ್ರದಲ್ಲಿನ ಪಾತ್ರದಾರಿಗಳೊ, ಯಾಕೆ ಕೇಳ್ತೀರ ಬಿಡಿ, ಮೊರು ಜನ ಬ್ರುಹಸ್ಪತಿಗಳು ಗಾಂಧಿಯ ಮೊರು ಕೋತಿಗಳು ಇವೆಯಲ್ಲ, ಅದೇ ಒಂದು ಕೋತಿ ಕಿವಿ ಮುಚ್ಚಿ, ಇನ್ನೊಂದು ಕಣ್ಣು ಮುಚ್ಚಿ, ಮತ್ತೊಂದು ಬಾಯಿ ಮುಚ್ಚಿರೊದು. ಹಾಗೆ ಇದೆ, ಈ ತ್ರಿಮೊರ್ತಿಗಳ ಜೋಡಿ.

ಈ ಮೊವರು ಮದ್ಯ ರಾತ್ರಿ, ಬೆಂಗಳೊರಿನ ಚಳಿಯಲ್ಲಿ ಈಜು ಮಾಡುತ್ತ ನಗರ ದಿಂದ ದೊರ ಹೋಗುವ ತೀರ್ಮಾನ ಹೇಗಿದೆ ಎಂದರೆ, ಚಿಕ್ಕ ಮಕ್ಕಳು ಮನೆಯಲ್ಲಿ ಕಾಸು ಕದ್ದು ಅಂಗಡಿನಲ್ಲಿ ತಿಂಡಿ ತರೋದಕ್ಕೆ ಓಡಿದಂತೆ ಇದೆ.
ರಾತ್ರೋ ರಾತ್ರೆ ಮೂವರು ಯುವಕರು,ಭಾರತದ ಯುವಜನರು ಈ ರೀತಿಯ ನಿರ್ಧಾರಗಳನ್ನ ತೆಗೆದುಕೊಳ್ಳುವಿಕೆಯನ್ನ ನಮ್ಮ ಗಾಂಧಿ,ಭಗತ್ ಸಿಂಗ್ ರವರು ಇಂದು ಬಂದು ನೋಡಿದರೆ ಅವರು ಭಾರತದ ಸ್ವಾತಂತ್ರದ ಬಗ್ಗೆ ತಾವು ಆಡಿದ ಮಾಡಿದ ತ್ಯಾಗಳು, ಸಂಗಮದಲ್ಲಿ ಸಂಧ್ಯಾವಂದನೆ ಮಾಡಿದಂತೆ ಆಯ್ತೆ ಅಂತ ಎದೆ ಒಡೆದು ಮತ್ತೆ ಪ್ರಾಣ ಬಿಡುತ್ತಾರೆ.

ಆಯ್ತು, ಮತ್ತೆ ಕತೆ ಕಡೆ ಮಾತಾಡೊಣ, ಇನ್ನು ಈ ಮುವ್ವರುಗಳು ಆ ನಿಸರ್ಗದ ಅದ್ಭುತ ಅಂತ ಹೊಗಳುವಂತ "ಮುಗಿಲು ಪೇಟೆಗೆ" ಹೇಗ ಬಂದರು ಅನ್ನೊದನ್ನ ಯಾರಾದರು ಗಮನಿಸಿದ್ದಿರ, ನನ್ನ ಪ್ರಕಾರ ಅವರು ಟೀ ಅಂಗಡಿಗೆ ಬೈಟು ಕಾಪಿ ಕುಡಿಯೋಕೆ ಬಂದತೆ ಕೇವಲ ೧ ನಿಮಿಷದ ಸಂಭಾಷಣೆಯ ಅಂತರದಲ್ಲಿ ಬಂದಿಳಿದು ಬಾಯಿಗೆ ಬಂದಂತೆ ಬಡಬಡಿಸುತ್ತ ತಮ್ಮ ತಾತನ ಮನೆಯ ಅಂಗಳದಲ್ಲಿ ನಿಲ್ಲುತಾರೆ.
ಅಲ್ಲಿಂದ ಮತ್ತೆ ಮತ್ತೆಲ್ಲೊ ಇರುವ ಅನಂತ್ ನಾಗ್ ಮನೆಗೆ ಹೊರಡುತಾರೆ. ಅಲ್ಲಿ ಇದ್ದಕಿದ್ದಂತೆ ಮೂವರು ಕೋತಿಗಳ ಕಣ್ಣುಗಳಿಗೆ ಹೆಂಡದಂತೆ ಮೊರು ಹೆಣ್ಣುಮಕ್ಕಳು ಕಾಣುತ್ತಾರೆ.

ಆ ಮುವ್ವರು ಹೆಣ್ಣುಮಕ್ಕಳೋ, ಒಬ್ಬರಿಗೊಬ್ಬರು ಎನ್ನುವಂತೆ, ಸತ್ತ ಹೆಣದ ಮುಂದೆ ಬಾಯಿ ಬಾಯಿ ಬಡಿದು ಕೊಳ್ಳುವಂತೆ ಮಾತನಾಡುತ್ತಾರೆ.
ನಮ್ಮ ಮನೆಯಲ್ಲಿ ಇಂತವರು ಇದ್ದಿದ್ರೆ, ಅವರನ್ನು ಸೀದ ಕರೆದುಕೊಂಡು ಹೋಗಿ ಕಾಡಿಗೆ ಬಿಟ್ಟು ಬಾಯ್ ಬಾಯ್ ಎನ್ನುತಿದ್ದೆ.
ಒಂದು ಭಾರತೀಯ ಹೆಣ್ಣಿನಲ್ಲಿ ಇರಬೇಕಾದ ಸೌಜನ್ಯತೆ,ಮಾತಿನ ಮೇಲಿನ ಹಿಡಿತ ಇದ್ಯಾವುದರ ಮೇಲು ಗಮನವಿಲ್ಲದ ಬಾಡಿಲ್ಯಾಂಗ್ವೇಜ್, ಅದರ ಜೊತೆಗೆ ಅರ್ಥವಾಗದ ಅವರ ಮೊಗಿನ ಸಂಭಾಷಣೆಗಳು.

ಕೃಷ್ಣ ಕೃಷ್ಣ, ಎಂತ ಕಾಲ ಬಂತಪ್ಪ....!!

ಭಾರತದ ಯಾವ ಮೊಲೆಯಲ್ಲು, ಮನಗೆ ಮೊರು ನಿಮಿಷದ ಮುಂಚೆಯಷ್ಟೆ ಬಂದವರ ಮೈ ಮೇಲೆ ಬೀಳುವ ಪ್ರಯತ್ನ ಮಾಡಿದಂತಹ ವಿಷಯ ನಾನು ಎಲ್ಲಿಯು ಕೇಳಿಲ್ಲ, ನೋಡಿಲ್ಲ, ಕೇಳಿದ್ದೇ ಆದಲ್ಲಿ ಅದು ವ್ಯಭಿಚಾರದವರ ಮನೆಯಲ್ಲಿ ನಡೆಯುವಂತಹ ಚಿತ್ರಗಳ ಮೊಲಕ ಮಾತ್ರ.

ಈ ಮುವ್ವರು ಹೆಣ್ಣು ಮಕ್ಕಳು ಮಕ್ಕಳಂತೆ ಇಲ್ಲದೆ, ಗೊಳಿಗಳಂತೆ ವರ್ತಿಸುತ್ತ ಚಿತ್ರದ ತುಂಬೆಲ್ಲ ರೋಲ್ ಕಾಲ್ ಮಾಡದ ನಾರಿ ಮಣಿಗಳತರಹ ಸಿಕ್ಕ ಸಿಕ್ಕ ಜನರನ್ನು ಸಿಗಿದು ಅಗಿದು ಬಿಡಿತ್ತಾ ಈಗಷ್ಟೆ ಬಂದಂತಹ ಮತ್ತೆ ಮುವ್ವರು ಹುಡುಗರ ಹಿಂದೆ ಬೀಳುವುದು ಎಷ್ಟರ ಮಟ್ಟಿಗೆ ಸರಿ ಕಾಣಿತಿದೆಯೊ ನನಗೆ ತಿಳಿಯುತಿಲ್ಲ.

ಗಣೇಶನ ದರ್ಶನ ಚಿತ್ರದ ಮೊದಲಿನಿಂದಲೊ ವಟ ವಟ ಮಾತಾಡುವ ಕಪ್ಪೆಯಂತೆ ಇದ್ದರೆ, ದುಶ್ಯಂತರ ಧೃಶ್ಯವಂತು ಆಟಕೆ ಬೇಕು, ಲೆಕ್ಕಕೆ ಇಲ್ಲದಂತಾಗಿದೆ. ಇನ್ನು ರಾಜೇಶ ಕೃಷ್ಣನಂತು ಕನ್ನಡದ ಚಿತ್ರದಲ್ಲಿ ಹಿಂದಿಯ ವಿರಹದ ಹಾಡು ಹಾಡುತ್ತ ಮೊಗನಿಗಿಂತ ಒಂದು ಕೈ ಮೇಲೆ, ಕಿವುಡನಿಗಿಂತ ಒಂದು ಕೈ ಕೆಳಗೆ ಇದ್ದಂತೆ ಇತ್ತು.

ಅಂದಹಾಗೆ, ರಾಜೇಶ ಕೃಷ್ಣ ವುಳ್ಳಂತಹ ಒಂದು ಹಾಡು "ನಾದೀಮ್ ದೀಂತನ" ದಲ್ಲಿ ರಾಜೇಶ ಕೃಷ್ಣ ರವರು ಎಷ್ಟರ ಮಟ್ಟಿಗೆ ಇನ್ವಾಲ್ಮೆಂಟ್ ತೋರಿಸಿದರು ಅನ್ನೋದನ್ನ ಗಮನಿಸಿದ್ದೀರ ?
ರಾಜೇಶ ಕೃಷ್ಣ ನಟನಾಗಿ ಮಾಡಬೇಕಿದ್ದವನೆಲ್ಲ ಅವನ ಜೊತೆಯ ನಟಿ ಮಾಡಿತ್ತಾಳೆ, ಇವನು ಸುಮ್ಮನೆ ನನ್ನದೇನು ಇಲ್ಲ, ನೀನು ಹೇಗೆ ಹೇಳ್ತೀಯೊ ಹಾಗೆ ಅಂತ ಕೊತು ಜೊತೆಗೆ ತಾಳ ಹಾಕುತ್ತಾನೆ.

ಗಣೇಶನ ಮಾತಿಗಿಳಿದರೆ, ಅವನು ಡೈಸಿಯನ್ನು ಕದ್ದು ನೋಡುವ ಬಗೆ ಹೇಗಿದೆ ಎಂದರೆ, ಅವನು ಹಿಂದೆಂದು ಹೆಣ್ಣನ್ನು ನೋಡಿಯೇ ಇಲ್ಲ ಎನ್ನುವಂತಿತ್ತು.
ಅವನ ಹಾವ ಬಾವಗಳೋ, ಹೇಳತೀರದು. ಮಾತಿಗೊಂದು ಮತ್ಲಬ್ ಹುಡುಕುತ್ತ, ಸೀನಿದಕೆಲ್ಲ ಕಾಮಿಡಿ ಮಾಡುತ್ತ ಟಿಪಿಕಲ್ ಕಾಮಿಡಿ ತರಹ ಇತ್ತು ಇವನ ವರ್ತನೆಗಳು.
ಗಣೇಶ್ ಡೈಸಿಯ ಶಾಲಾ ಕೊಟಡಿಗೆ ಬಂದು ಕಾಡಿನ ಮಕ್ಕಳಂತೆ ತೊರಿಸಿದ್ದ ಹುಡುಗರಿಗೆಲ್ಲ ಎಂತಹ ಮಾತುಗಳನ್ನು ಹೇಳುತಿದ್ದ ಎಂದರೆ, ಜೀವನವೆ ದಂಡ, ಪ್ರೀತಿ ಮಾಡದೆ ಜೀವಿಸುವವನು ಮುಠಾಳ ಎನ್ನುವ ಮಾತುಗಳು. ಅದಕೆಲ್ಲ ಆ ಮಕ್ಕಳು ನಕ್ಕು ನುಲಿಯುತ್ತಾರೆ. ಹೋಗಲಿ ಬಿಡಿ, ಅದು ಕಾಮಿಡಿ ಟೈಮು ಅಂದುಕೊಳ್ಳೋಣ.

ಇನ್ನು ದುಶ್ಯಂತನ ಪ್ರೇಯಸಿಯ ವಿಷಯಕ್ಕೆ ಬಂದರೆ, ನಾನು ಅಂತ ಹುಡುಗಿಯನ್ನ ಎಂತಹ ಕಾಡಿನಲ್ಲು ನೋಡಿಲ್ಲ ಬಿಡಿ.
ಹೆಸರಿಗೆ ಮೆಡಿಕಲ್ ಡಿಗ್ರಿ, ಆದರೆ ಅವಳ ಮಾತುಗಳೋ, ಮೈ ಮೇಲೆ ದೆವ್ವ ಬಂದಂತೆ ಕುಣಿಸುತ್ತಾಳೆ.
ಒಮ್ಮೆ ದುಶ್ಯಂತನು ತನ್ನನ್ನು ತಬ್ಬುತಿದ್ದ ಸಂದರ್ಭದಲ್ಲಿ ಅವಳು ದುಶ್ಯಂತನನ್ನು ತಳ್ಳಿ, ತುಳಿದು ಇನ್ನೇನು ಜೀವಂತ ಸಮಾಧಿ ಮಾಡುವಂತೆ ಕಾಣುತಿತ್ತು.
ಅದಾದ ನಂತರ, ತಮ್ಮ ಪ್ರೀತಿಯ ವಿಷಯವನ್ನ ಅನಂತ್ ನಾಗರಿಗೆ ತಿಳಿಸಿದಾಗ ಅವರು ಇಡೀ ಮುಗಿಲು ಪೇಟೆಯೇ ಮೈಮೇಲೆ ಬಿದ್ದಂಗೆ ಕುಳಿತುಬಿಟ್ಟರು.
ಕೊನೆಗೆ ಒಪ್ಪಿಗೆ ಕೊಟ್ತರು, ಅವರ ಮನಸನ್ನ ಕಾಡುತ್ತಿದ್ದ ಕಾರಣ ರಾತ್ರಿ ಎಲ್ಲರು ವಿಸ್ಕಿ ಕುಡಿಯುವ ಸಮಯದಲ್ಲಿ ಹೊರಬೀಳುತ್ತದೆ.

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನುವ ಗಾದೆ ಮಾತು ನಿಮಗೆ ತಿಳಿದಿರ ಬಹುದು.
ಯಾರೊಬ್ಬರು ತಮ್ಮ ಜೀವಮಾನದಲ್ಲೆಲ್ಲ ಒಂದು ಮನೆ ಕಟ್ಟಿ, ಒಂದು ಹೆಣ್ಣಿನ ಮದುವೆ ಮಾಡಿದರೆ ತಮ್ಮ ಜೀವನದಲ್ಲೆಲ್ಲ ಗಳಿಸಿ ಇಟ್ಟಂತಹ ಹಣವೆಲ್ಲ ಸಾಕಾಗದೆ ಎಲ್ಲಿ ಸಾಲ ಮಾಡಬೇಕೊ, ಎಲ್ಲಿ ತಾನು ಕಟ್ಟಿದ ಮನೆಯನ್ನ ಅಡವಿ ಇಡ ಬೇಕೊ ಎನ್ನುವ ಚಿಂತನೆಗಳು ಸಾದಾರಣವಾಗಿ ಎಲ್ಲ ಹೆಣ್ಣು ಎತ್ತಂತವರಿಗೆ ಬಂದೇಬರುತ್ತದೆ,

ಆದರೆ ಅನಂತರಿಗೆ ಬಂದದ್ದಾದರು ಏನು ?
ಏನು ? ಕಾರಣ ಏನು ಅಂತ ಕೇಳಿದಿರ ? ಕಾರಣ ಇಷ್ಟೆ, ತಾನು ತನ್ನ ಹೆಣ್ಣು ಮಕ್ಕಳನ್ನು ಮದುವೆ ಮಾಡುವ ಮುನ್ನ ಹಂದಿಯನ್ನ ಹೊಡೆಯಲಿಲ್ಲವಲ್ಲ ಅನ್ನುವುದು.

ಹುಲಿಯನ್ನು ಹೊಡೆದ ತಿಪ್ಪುವಿನಂತಹ ನಾಡಿನಲ್ಲಿ ಒಂದು ಹಂದಿ ಹೊಡೆಯಲಿಲ್ಲವಲ್ಲ ಅನ್ನುವ ಅಳುವಿನ ಮಾತುಗಳು ಕೇಳಿ ನನಗೆ ಅನ್ನಿಸಿದು ಏನೆಂದರೆ, ಮುಂದಿನ ಸಾರಿ ಯೋಗರಾಜರನ್ನು ಭೇಟಿ ಮಾಡೀ, ನಮ್ಮ ಊರಿನಿಂದ ಎರಡು ಹಂದಿಯನ್ನ ಅನಂತರಿಗೆ ಉಡುಗೊರೆ ಕೊಡಿಸಿ ಬಿಡುವ ಅನ್ನುವುದು.

ನಂತರ ಉಳಿದ ಜೋಡಿ ಎಂದರೆ, ದೈಸಿ ಹಾಗು ಗಣೇಶ್.
ಡೈಸಿ ಮೊದ ಮೊದಲು ಗಣೇಶನ ಕಾಮಿಡಿಗೆ ಹೇಗೆ ನಗುತಿದ್ದಳು ಎಂದರೆ, ಎಂತಹ ಯುವಕನೇ ಆಗಲಿ, ಅವನ ಮನಸಿನಲ್ಲಿ ಇಂತಹ ಒಂಟಿ ಹೆಣ್ಣಿನ ನಗು ಹೇಳಲಾರದ ಬಯಕೆಗಳನ್ನ ತರಿಸುತ್ತದೆ, ಗಣೇಶನ ವಿಷಯದಲಾದರೆ, ವಿಧವೆಯನ್ನ ಮದುವೆ ಮಾಡಿಕೊಳ್ಳಲು ಸಿದ್ದ ಎನ್ನುವದಕ್ಕು ಪ್ರೇರೇಪಿಸುತ್ತದೆ.
ನೀವು ಗಣೇಶ್ ನಂತವರು ಭುವಿಯ ಮೇಲೆ ಇನ್ನೊ ಇದ್ದಾರ್ಯೆ ಅಂತ ಬಾಯಿ ಬಾಯಿ ಬಿಡ ಬೇಡಿ, ಇಂತಹ ಸನ್ನಿವೇಷಗಳು ನಿಜ ಜೀವನಕ್ಕೆ ಬಹಳ ದೊರದ ಮಾತು. ಹತ್ತಿರವಾದರು ಅದು ಹೆಣ್ಣಿನ ಮುಖ ನೋಡಿ ಮದುವೆ ಆಗುವವರಲ್ಲ, ಹೆಣ್ಣು ತರುವ ಹಣದ ಕಂತೆ ನೋಡಿ ಅಷ್ಟೆ.

ಇಂತಹ ಬೆಟ್ಟು ತೋರುವ ಸಂದರ್ಭಗಳು ಚಿತ್ರದ ತುಂಬೆಲ್ಲ ಎದ್ದೆದ್ದು ಕಾಣುತ್ತವೆ ಎಂದರೆ ನನ್ನ ಪ್ರಕಾರ ತಪ್ಪೇನು ಇಲ್ಲ.

೨:

ಕೊನೆಯ ಸನ್ನಿವೇಷಗಳಲ್ಲಿ, ಗಣೇಶ್ ಮತ್ತೆ "ಮುಂಗಾರು ಮಳೆಯ" ದೇವದಾಸ ನಂತೆ ವರ್ತಿಸಲು, ತನ್ನನ್ನು ಯಾರೇ ಕಂಡರು ಅನುಕಂಪ ತೋರಿಸುವಂತೆ ಪ್ರೇರೇಪಿಸುವ ಮಾತುಗಳನ್ನು ಆಡುತ್ತಾನೆ.

ಅದೊ ಅಲ್ಲದೆ, ತನ್ನ ಕಾಸ ದೊಸ್ತಿಗಳಾದ, ದುಶ್ಯಂತ ಹಾಗು ರಾಜೇಶ್ ಕೃಷ್ಣನ ಮದುವೆಗೆ ಬರುವುದಿಲ್ಲ ಎನ್ನುತ್ತಾನೆ, ಇಲ್ಲೆ ನನಗೆ ಧಿಗಬ್ರಮೆ ಉಂಟಾಗಿದ್ದು.
ಅಲ್ಲಪ್ಪ, ಡೈಸಿ ಅದೇ ಮನೆನಲ್ಲಿ ಮುಂದೆಯೊ ಇದ್ದರೆ ಸರಿ, ಗಣೇಶ್ ಅಲ್ಲಿ ಬರುವುದು ಬೇಡ. ಆದರೆ ಡೈಸಿ ಸ್ವಿಡ್ಜರ್ಲ್ಯಾಂಡ್ ಗೆ ಹೋಗುತ್ತಾಳಲ್ಲ, ಆಗಾದರು ಮದುವೆಗೆ ಬರಬಹುದಲ್ಲವೆ ?
ಇಲ್ಲಿ ವಿಷಯ ಏನು ಅಂದರೆ, ಗಣೇಶ್, ತನ್ನನ್ನು ಬಿಟ್ಟು ಮತ್ತಿಬ್ಬರು ಮದುವೆ ಮಾಡಿಕೊಳ್ಳುತಿದ್ದಾರಲ್ಲ ಅನ್ನುವ ಹೊಟ್ಟೆ ಉರಿ ಇದ್ದಂತೆ ಕಾಣುತ್ತದೆ.

ಎಲ್ಲ ಆಯ್ತು, ಗಣೇಶ್ ಹಾಗು ದೈಸಿ ಒಂದೆ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುತ್ತಾರೆ,

ದಾರಿಯಲ್ಲಿ ಗಣೇಶ್ ಗಿಂತ ತಾನೇನು ಕಮ್ಮಿ ಅಂತ ಇನ್ನೊಬ್ಬ ಮರಿ ದೇವದಾಸು ಪೀ ಪೀ ಊದುತ್ತ ಅಡ್ಡಬಂದು ಅಲ್ಲೆಲ್ಲೊ ಮಕ್ಕಳು ಪಟ ಹಾರಿಸುತ್ತಿದ್ದಾರಂತ ಹೇಳುತ್ತಾನೆ.
ನಂತರ ಗಣೇಶ್ ಡೈಸಿ ಹೋಗಿವ ತೆಪ್ಪಕ್ಕೆ ಸುಳಿಸಿಕ್ಕಿ ಒಂದಷ್ಟು ನೀರು ಕುಡಿದು ಮೇಲೇಳುತ್ತಾರೆ. ಗಣೇಶ್ ಡೈಸಿ ಯನ್ನ ಹಿಡಿದು "ಇಷ್ಟೆಲ್ಲ ಆದಮೇಲು ನೀನು ನನ್ನನ್ನು ಬೇಡ ಅಂದರೆ ನಿನ್ನನ್ನೊ ನೀರಿಗೆ ತಳ್ಳಿ ನಾನೊ ಬೀಳುತ್ತೇನೆ" ಅನ್ನುತಾನೆ.

ಅಷ್ಟಕ್ಕೆ, ಡೈಸಿ ನದಿಗೆ ತನ್ನ ಕಣ್ಣೀರು ಸೇರಿಸಿ ಅಪ್ಪಿಕೊಳ್ಳುತ್ತಾರೆ.

ಹೀಗೆ ಇಷ್ಟು ಸುಲಬವಾಗಿ ಡೈಸಿ ತನ್ನನ್ನು ಒಪ್ಪುತ್ತಾಳೆ ಅನ್ನುವುದು ಗಣೇಶ್ ಗೆ ಮುಂಚೆಯೆ ತಿಳಿದಿದ್ದರೆ, ಮೊದಲೇ ಈ ಇಬ್ಬರು ನೀರಿನಲ್ಲಿ ಮುಳುಗಿ ಒಪ್ಪಿಗೆ ತೆಗೆದುಕೊಳ್ಳಬಹುದಿತ್ತು ಅಲ್ಲವ ?
ಇಲ್ಲಿ ಗಮನಿಸಬೇಕಾದುದು ಏನು ಅಂದರೆ,


೧)
ಡೈಸಿ ತನ್ನ ಗಂಡನ ನೆನಪುಗಳು ತನ್ನನ್ನು ಸುಖವಾಗಿ ಇಟ್ಟಿದೆ ಎಂದು, ಅದರ ನಡುವೆ ಯಾರನ್ನು ಬಿಡುವುದಿಲ್ಲ ಎಂದು ಕಡಾಕಂಡಿತವಾಗಿ ಹೇಳುತ್ತಾಳೆ.

೨)
ರಂಗಾಯಣ ರಘು ತನಗಿಂತ ಹಿರಿಯನವನಾಗಿದ್ದರು ಕೈಮುಗಿದು ತನ್ನ ಮಗನನ್ನು ಮಧುವೆ ಆಗುವಂತೆ ಬೇಡಿದರೊ ಕರಗದ ಮನಸು, ಪ್ರಾಣ ಹೋಗುವ ಸಮಯದಲ್ಲಿ ಒಪ್ಪುತ್ತಾಳೆ.

೩)
ತಾನು ವಿದವೆ ಎಂದು ತಿಳಿದಿದ್ದರು, ಗಣೇಶ್ ಮಾಡುವ ಕುಳಿ ಕಾಮಿಡಿಗಳಿಗೆ ಕಿಸಿ ಕಿಸಿ ಅಂತ ನಗುವುದು ಎಳ್ಳಶ್ಟು ಸರಿ ಇಲ್ಲದ ನಡವಳಿಕೆ.

ಮಾನವ ಎಂದಿದ್ದರು ಒಳ್ಳೆಯ ಅಂಶವನ್ನು ಮಾತ್ರ ತೆಗೆದು, ಒಳ್ಳೆಯದಲ್ಲದ ಅಂಶವನ್ನು ಗಾಳೆಗೆ ಬಿಡಬೇಕು ಸರಿ...!!
ಆದರೆ ಇರುವುದೆಲ್ಲ ಅನವಶ್ಯಕ ವಾದರೆ ಒಳ್ಳೆಯ ಅಂಶವನ್ನು ಎಲ್ಲಿ ಹುಡುಕ ಬೇಕು. ಅಥವ ಇದ್ದಿದ್ದರಲ್ಲೆ ಒಳ್ಳೆಯದನ್ನ ಆರಿಸಿ ತೃಪ್ತಿ ಪಡಬೇಕೆ ?

ಬಹಳಷ್ಟು ಜನರ ನಿರೀಕ್ಷೆಗೆ ಪಾತ್ರವಾದಂತ ಈ ಒಂದು ಚಿತ್ರ, ಅನಿರಿಕ್ಷಿತ ಕಾರಣಗಳಿಂದ ನಿರಾಸೆ ತಂದರು ಜನ ಎನೊ ಇರಬಹುದು ಎಂದು ಮೊದದಲು ತಿಯೇಟರುಗಳಿಗೆ ನುಗ್ಗಿ ನಿರ್ಮಾಪಕರಿಗೆ ದುಡ್ಡುಮಾಡಿ ಕೊಟ್ಟ ಜನರಿಗೆ ಏನು ಹೇಳಬೇಕು ನೀವೆ ಹೇಳಿ ?

ಜನ ಮರುಳೊ, ಜಾತ್ರೆ ಮರುಳೊ...!!

ಒಟ್ಟಿನಲ್ಲಿ, "ಗಾಳಿಪಟ" ಒಂದು ಸಾಮಾಜಿಕ ಕಳಕಳೆ ಇಲ್ಲದ, ಒಂದು ಹೆಣ್ಣು ಹೇಗೆ ವರ್ತಿಸಬೇಕೆಂಬುದು ಅರಿಯದ, ಪ್ರೀತಿ ಹೇಗೆ ಹುಟ್ಟಬೇಕೆಂಬುದು ತಿಳಿಯದ,ಯುವಕರು ಜೀವನದಲ್ಲಿ ಹೇಗೆ ತೀರ್ಮಾನಗಳನ್ನು ತೆಗೆದು ಮುನ್ನಡೆಯಬೇಕೆಂಬುದನ್ನು ತಿಳಿಸದ, ಏನೊ ಇಲ್ಲದಿದ್ದರು, ಏನೋ ಇದೆ ಎನ್ನುತ್ತ ಜನರನ್ನು ಮರಳಿ ಮರಳಿ ಬೆಪ್ಪರನ್ನಾಗಿಸಿದ ಅಪ್ಪಟ ಅವಸರಕ್ಕೆ ತೆಗೆದ ತರಲೆಗಳ ಚಿತ್ರ ಮಾತ್ರ.

ಚಿತ್ರದ ಬಿಡುಗಡೆಯ ನಂತರ "ಯೋಗರಾಜ ಭಟ್ಟರು" ಈ ಚಿತ್ರ ಒಂದು ಅಪ್ಪಟ ಕಮರ್ಶಿಯಲ್ ಚಿತ್ರವೆನ್ನುತ್ತ ತಮ್ಮನ್ನು ತಾವು ಸಮರ್ತಿಸಿಕೊಳ್ಳುತಿದ್ದರು, "ಗಾಳಿಪಟ" ಚಿತ್ರವು ಕಮರ್ಶಿಯಲ್ ಗುಂಪಿಗೊ ಸೇರಲು ಅರ್ಹತೆಗಳಿಲ್ಲದಂತಹ ಚಿತ್ರವಾಗಿದೆ.

ಒಂದು ನಿಜದ ಮಾತು ಏನು ಅಂದರೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ಹೊಸದನ್ನು ಪ್ರಯತ್ನಿಸದೆ, ಇರುವುದರಲ್ಲೆ ಒಳ್ಳೆಯದನ್ನು ಜನರು ಒಪ್ಪಿ ಒಪ್ಪಿ ನಮ್ಮ ಚಿತ್ರಗಳು ಯಾವ ಆಸ್ಕರ್ ಗಳಿಗೆ ಹೋದರು ಆಸ್ಕರ್ ಗೇಟಿನ ಆಚೆಯೆ ನಿಂತು ತುಕ್ಕು ಹಿಡಿಯುತ್ತಿವೆ. ಇದಕ್ಕೆ ಜನರು ಕಾರಣವೊ, ನಿರ್ದೇಶಕರು ಕಾರನವೊ ನೀವೆ ಯೋಚಿಸಿ...!

ಜನ ಮರುಳೊ, ಜಾತ್ರೆ ಮರುಳೊ...!!

-ಯುವಪ್ರೇಮಿ

  • ಸಿನೆಮಾ ವಿಮರ್ಶೆ
~.~
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 16, 2008 - 3:48pm — madhava_hs

ಉ: ಗಾಳಿಪಟ, ಒಂದು ಒಳ ನೋಟ...!!

madhava_hs's picture

ಗಾಳಿಪಟ ಒಂದು ಬಾಲಿಶ ಚಿತ್ರ.

ಮುಂಗಾರು ಮಳೆಯ ’ಅಮಲಿ’ ನಲ್ಲಿ ಮಾಡಿದ ಚಿತ್ರ.

ಮುಂ.ಮ ಮತ್ತು ಗಾಳಿಪಟ ನೋಡಿದವರಿಗೆ ಎರಡೂ ಚಿತ್ರಗಳ ನಿರ್ದೇಶಕರೂ ಒಂಬ್ರೇನಾ ಅಂತ ಅನುಮಾನ ಬರುವುದು ಸಹಜ.

ಮುಂ.ಮ ಗೆಲುವಿಗೆ ಕಾರಣರಾದವರು ಬಹಳಷ್ಟು ಜನ : ಪ್ರೀತಂ ಗುಬ್ಬಿ, ಮನೋ ಮೂರ್ತಿ, ಸೋನು ನಿಗಮ, ಯೊ.ಭ್ಹ, ಗಣೇಶ ಇತ್ಯಾದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2008 - 7:23pm — yuvapremi

ಉ: ಗಾಳಿಪಟ, ಒಂದು ಒಳ ನೋಟ...!!

yuvapremi's picture

ನೀವು ಹೇಳಿದ್ದು ಅಪ್ಪಟ ಸತ್ಯ ಮಾಧವ್ ರವರೆ..!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ
  • ಕನ್ನಡದಲ್ಲಿ ಸೈನ್ಸ್ ಫಿಕ್ಷನ್
  • ಝೆನ ಕಥೆ ೩೬: ಛತ್ರ
  • ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator