Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

April 16, 2008 - 9:15pm — cmariejoseph

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆತ್ಮವಿಕಾಸಕ್ಕೆ ಇಂಬಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ಈ ಗ್ರಂಥಾಲಯಕ್ಕೆ ಈಗ ಇಪ್ಪತ್ತೈದು ವರ್ಷ ವಯಸ್ಸು. ಇಪ್ಪತ್ತೈದು ವರ್ಷಗಳ ಹಿಂದೆ ಪುಟ್ಟದಾಗಿ ಪ್ರಾರಂಭವಾದ ಈ ಪ್ರಯತ್ನದಲ್ಲಿ ಅದು ಅಂದು ಒಂದು ಟ್ರಂಕಿನಲ್ಲಿಟ್ಟ ಕೆಲವೇ ಪುಸ್ತಕಗಳ ಸಂಗ್ರಹವಾಗಿತ್ತು. ಇಂದು ಅದು ಬೆಳೆದು ಹದಿನೈದು ಕಪಾಟುಗಳಲ್ಲಿ ತುಂಬಿರುವ ಮೌಲಿಕ ಪುಸ್ತಕಗಳ ಸಂಗ್ರಹವಾಗಿದೆ. ಅಂದು ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಪುಸ್ತಕದೆರವಲು ಇಂದು ಅಧಿಕೃತ ಮಾನ್ಯತೆ ಗಳಿಸಿದೆ. ಮೊದಲು ಪುಸ್ತಕಗಳೆಂದರೆ ಪತ್ತೇದಾರಿ ಮತ್ತು ಸ್ತ್ರೀಸಾಹಿತ್ಯವಷ್ಟೇ ಎನಿಸಿದ್ದ ಭಾವನೆ ಹೋಗಿ ಇಂದು ಅಧ್ಯಾತ್ಮ, ಮಕ್ಕಳಸಾಹಿತ್ಯ, ವಿಜ್ಞಾನ, ಹಾಸ್ಯ, ಕವನ, ಕತೆ, ಕಾದಂಬರಿ, ಮನೋವಿಕಾಸ, ಆರೋಗ್ಯ, ವ್ಯಕ್ತಿಚಿತ್ರ, ಸಾಹಿತ್ಯಚಿಂತನೆ, ಇತಿಹಾಸ, ನಾಟಕ ಮುಂತಾದ ಎಲ್ಲ ಪ್ರಕಾರಗಳ ಸಂಗ್ರಹ ಇಲ್ಲಿದೆ. ಕೊಡುಗೆಯಾಗಿ ನೀಡಿದ ಪುಸ್ತಕಗಳು, ಚಂದಾ ಹಣದಿಂದ ಖರೀದಿಸಿದ ಪುಸ್ತಕಗಳ ಜೊತೆಗೆ ಕಾರ್ಖಾನೆಯ ಆಡಳಿತವರ್ಗವು ಪ್ರತಿವರ್ಷವೂ ತಾನೇ ಕೊಟೇಷನ್ ಕರೆದು ಐದುಸಾವಿರ ರೂಪಾಯಿಗಳ ಮೌಲ್ಯದ ಕನ್ನಡ ಪುಸ್ತಕ ಖರೀದಿಸಿಕೊಡುವುದರಿಂದ ಇಂದು ಈ ಪುಸ್ತಕಭಂಡಾರದಲ್ಲಿರುವ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಕೆಲಸದಿಂದ ನಿವೃತ್ತಿ ಹೊಂದುವ ಸದಸ್ಯರಿಗೆ ಪುಸ್ತಕದ ಉಡುಗೊರೆ ನೀಡಲಾಗುತ್ತದೆ. ಅಂತೆಯೇ ಆ ನಿವೃತ್ತ ಸದಸ್ಯರೂ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವುದುಂಟು. ಈ ಸಾರಿಯ ಯುಗಾದಿಗೆ ಎಲ್ಲ ಸದಸ್ಯರಿಗೂ ಬೇವುಬೆಲ್ಲದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಕೋಶ’ವನ್ನು ಹಂಚಿದೆವು. ಈ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಕಸಾಪ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ ಅವರಂತೂ ತುಂಬಾ ಆನಂದಿಸಿದರು.

ಗ್ರಂಥಾಲಯಕ್ಕೆ ಹೊಸಪುಸ್ತಕ ಬಂದ ಕೂಡಲೇ ಅದಕ್ಕೊಂದು ದಪ್ಪರಟ್ಟಿನ ಹೊದಿಕೆ ಹಾಕಿ ನಂಬರು ಬರೆದು ಠಸ್ಸೆ ಒತ್ತಿ ಪಟ್ಟೀಕರಣಗೊಳಿಸಿ ಇಡಲಾಗುತ್ತದೆ. ಪುಸ್ತಕ ವಿತರಣೆಗೆಂದೇ ಕನ್ನಡದಲ್ಲಿ ಒಂದು ವಿಶಿಷ್ಟ ತಂತ್ರಾಂಶ ರೂಪಿಸಲಾಗಿದೆ. ಈ ಅಚ್ಚಗನ್ನಡ ಮಾಹಿತಿ ಇರುವ ತಂತ್ರಾಂಶದ ಸಹಾಯದಿಂದ ಪುಸ್ತಕದ ವಿತರಣೆ ಅತ್ಯಂತ ಸುಲಭಸಾಧ್ಯವಾಗಿದೆ. ಏಕೆಂದರೆ ಈ ಗ್ರಂಥಾಲಯ ಕಾರ್ಯನಿರತವಾಗುವುದು ಪ್ರತಿದಿನ ಊಟದ ವೇಳೆಯಲ್ಲಿ ಮಾತ್ರ. ಪುಸ್ತಕ ಹಿಡಿದು ಬರುವವರ ದೊಡ್ಡ ದಂಡು ಇರುವ ಅಲ್ಪ ಸಮಯದಲ್ಲಿ ತನ್ನ ಅಭೀಷ್ಟೆ ಪೂರೈಸಿಕೊಳ್ಳಲು ಈ ತಂತ್ರಾಂಶ ಗರಿಷ್ಠ ಸಹಾಯ ನೀಡುತ್ತದೆ. ಪುಸ್ತಕದ ಶೀರ್ಷಿಕೆ ಗೊತ್ತಿಲ್ಲ ಮಗುವಿಗೆ ಸಂಬಂಧಿಸಿದ್ದು ಎಂದರೆ ಸಾಕು. ಬೆರಳ ತುದಿಗಳಲ್ಲೇ ನಿಮ್ಮ ಮಗು, ತಾಯಿ ಮಗು, ಮಗುವಿಗೊಂದು ಹೆಸರು ಈ ರೀತಿಯಾಗಿ ಮಗು ಇರುವ ಎಲ್ಲ ಶೀರ್ಷಿಕೆಗಳನ್ನೂ ತೋರಿಸುತ್ತದೆ. ಪುಸ್ತಕದ ಹೆಸರಿನೊಂದಿಗೆ ಲೇಖಕರು ಅನುವಾದಕರು ಪ್ರಕಾಶಕರು ಬೆಲೆ ಲಭ್ಯವಿದೆ/ಲಭ್ಯವಿಲ್ಲ ಇತ್ಯಾದಿ ಮಾಹಿತಿಗಳು ಕಾಣುತ್ತವೆ. ಪುಸ್ತಕಗಳನ್ನು ಪ್ರಕಾರಾದಿ, ಲೇಖಕರಾದಿ, ಶೀರ್ಷಿಕೆಯಾದಿ ಹುಡುಕಬಹುದು. ಮೊದಲೇ ಓದಿದ್ದ ಪುಸ್ತಕವೊಂದನ್ನು ಆಯ್ಕೆ ಮಾಡಿಕೊಂಡಾಗ ಈಗಾಗಲೇ ಅದನ್ನು ಓದಿದ್ದೀರಿ ಮತ್ತೊಮ್ಮೆ ಬೇಕೇ ಎಂಬಂತಹ ಪ್ರಶ್ನೆಗಳೂ ಕಾಣಬರುತ್ತವೆ. ಅವಧಿ ಮೀರಿ ಹಿಂದಿರುಗಿಸಿದಾಗ ಇಂತಿಷ್ಟು ದಂಡ ಪಾವತಿಸಿ ಎಂಬ ಸಂದೇಶವೂ ಕಾಣುತ್ತದೆ. (ಈ ತಂತ್ರಾಂಶವನ್ನು ರೂಪಿಸಿದ ಕರ್ತವ್ಯ ಐ ಟಿ ಸಲ್ಯೂಷನ್ಸಿನ ಸಿದ್ಧಾರೂಢ ಅವರನ್ನು ಸದಾ ಸ್ಮರಿಸುತ್ತೇವೆ.)

ಕಾರ್ಖಾನೆಯ ಮೊದಲ ಮನುಷ್ಯನಿಂದ ಹಿಡಿದು ಅತ್ಯಂತ ಕೆಳಮನುಷ್ಯನವರೆಗೂ ಎಲ್ಲರೂ ಸದಸ್ಯರಾಗಿರುವ ಈ ಗ್ರಂಥಾಲಯದ ಗುರುತಿನ ಚೀಟಿಯು ಅತ್ಯಂತ ವಿಶಿಷ್ಟವಾಗಿದೆ. ಅದರಲ್ಲಿ ಸದಸ್ಯನ ಹೆಸರು ಸಂಖ್ಯೆ ವಿಭಾಗ ಮತ್ತು ದೂರವಾಣಿಗಳು ಕನ್ನಡದಲ್ಲಿ ಮುದ್ರಿತವಾಗಿವೆ. ಜ್ಞಾನಪೀಠ ಪುರಸ್ಕೃತ ಕನ್ನಡಿಗರ ವರ್ಣಚಿತ್ರದ ಕೊಲಾಜ್ ಇದೆ. ಹಿಂಬದಿಯಲ್ಲಿ ನಿಬಂಧನೆಗಳ ಜೊತೆಗೆ ಕನ್ನಡದ ಅಂಕಿಗಳ ಪರಿಚಯವಿದೆ. ಕನ್ನಡೇತರರೂ ಈ ಗುರುತಿನ ಚೀಟಿಯನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತಾರೆ.

ಕಾರ್ಮಿಕರು ಸ್ವಯಂಪ್ರೇರಣೆಯಿಂದ ಇಲ್ಲಿಗೆ ಬಂದು ಮುಕ್ತ ಸಾಹಿತ್ಯಿಕ ಚರ್ಚೆ ನಡೆಸುತ್ತಾರೆ, ಕಪಾಟುಗಳ ಧೂಳು ಒರೆಸುತ್ತಾರೆ, ಹರಿದ ಪುಸ್ತಕಗಳಿಗೆ ಗೋಂದು ಹಚ್ಚುತ್ತಾರೆ, ಪುಸ್ತಕ ವಿತರಣೆಯಲ್ಲಿ ನನಗೆ ನೆರವಾಗುತ್ತಾರೆ. ಅವರೊಂದಿಗೆ ಬರುವ ಅನ್ಯಭಾಷಿಕರು ಗ್ರಂಥಾಲಯವನ್ನು ನೋಡಿ ನಿಜಕ್ಕೂ ಇದೊಂದು ವಿಸ್ಮಯ ಎಂದು ಹೊಗಳುತ್ತಾರೆ. ಕಾರ್ಖಾನೆಗೆ ಭೇಟಿ ನೀಡುವ ಅನ್ಯವಿಭಾಗದವರಂತೂ ನಮ್ಮ ಗ್ರಂಥಾಲಯವನ್ನು ನೋಡಲೇಬೇಕಾದ ಸ್ಥಳ ಎಂಬಂತೆ ಬಂದು ವೀಕ್ಷಿಸಿ ಹೋಗುತ್ತಾರೆಂದರೆ ಅದಕ್ಕಿಂತ ಹೆಮ್ಮೆಯ ವಿಷಯ ನಮಗಿನ್ನೇನಿದೆ?

  • ಪ್ರಚಲಿತ
Ornamental seperator
  • Login or register to post comments
  • 569 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2008 - 10:34am — Shivakumar.Revadi

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

Shivakumar.Revadi's picture

ಜೋಸೆಫ಼್ರೆ.............ಮೊದಲು ನಿಮಗೆ ನಮಸ್ಕಾರ.....

"ಅಂದು ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಪುಸ್ತಕದೆರವಲು"
"ಗ್ರಂಥಾಲಯವನ್ನು ನೋಡಲೇ ಬೇಕಾದ ಸ್ಥಳ ಎಂದು ವೀಕ್ಶಿಸಿ ಹೊಗುತ್ತಾರೆ"

ಇವೆರಡೇ ಸಾಲುಗಳು, ನೀವು ನಡೆದ ಹಾದಿ ಮತ್ತು ಪಟ್ಟ ಪರಿಶ್ರಮವನ್ನು ಪ್ರತಿಬಿಂಬಿಸುತ್ತವೆ,
ಇದಲ್ಲದೇ ಕನ್ನಡದ ಬಗ್ಗೆ ಜನರಲ್ಲಿ ಉಂಟಾದ ಬದಲಾವಣೆಯ ಸೂಚಿ ಎಂದು ಸಹ ಹೇಳಬಹುದು.

ಮತ್ತೊಮ್ಮೆ ನಿಮ್ಮ ಕನ್ನಡ ಸೇವೆಗೆ ತಲೆ ಬಾಗುವೆ.

  • Login or register to post comments
  • link
  • Email this ಪ್ರತಿಕ್ರಿಯೆ
April 17, 2008 - 12:39pm — vikashegde

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

vikashegde's picture

ಅಭಿನಂದನಾರ್ಹವಿದು.
ಕನ್ನಡದ ಕೆಲಸ ಮಾಡುತ್ತಿರುವ ಎಚ್.ಎ.ಲ್ ಎಲ್ಲಾರಿಗೂ ಧನ್ಯವಾದಗಳು.

ನೀವು ಬಳಸಿಕೊಳ್ಳುತ್ತಿರುವ ಸಾಫ್ಟ್ ವೇರ್ ಬಹಳ ಚೆನ್ನಾಗಿದ್ದಂತೆ ಅನ್ನಿಸುತ್ತಿದೆ. ಅದನ್ನು ಬೇರೆ ಕಡೆಗಳಲ್ಲೂ ಪರಿಚಯಿಸಿದರೆ ಚೆನ್ನ.

  • Login or register to post comments
  • link
  • Email this ಪ್ರತಿಕ್ರಿಯೆ
April 18, 2008 - 10:27pm — yuvapremi

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

yuvapremi's picture

ನಿಮ್ಮ ಮಾತಿನಲ್ಲಿ ಮುತ್ತಿನಂತಹ ವಿಶಯವನ್ನು ಸಾರಿದಿರಿ.
ಕನ್ನಡದ ಪುಸ್ತಕಗಳು ಹೇಳ ಇಲ್ಲವಂತಾಗುತ್ತಿರುವ ಇಂದಿನ ಪೀಳಿಗೆಯವರಲ್ಲಿ, ಹೆಚ್.ಏ.ಎಲ್ ನಲ್ಲಿನ ಕೆಲಸದ ಒತ್ತದದಲ್ಲಿಯೊ ಒಂದು ಸುಂದರ ಗ್ರಂಥಾಲವನ್ನು ಸೃಷ್ಟಿಸಿ ಸಾಕುತ್ತಿರುವ ನಿಮಗೆ ನಮ್ಮ ಅಭಿನಂದನೆಗಳು.

ನಾನೊ ಕೊಡ ನನ್ನ ಚಿಕ್ಕಂದಿನಿಂದ ಹೆಚ್.ಏ.ಎಲ್ ನಿಂದ ನಮ್ಮ ಮಾವ ಎರವಲು ಪಡೆದು ತರುತ್ತಿದ್ದ ಪುಸ್ತಕಗಳನ್ನು,ವಾರ ಪತ್ರಿಕೆಗಳನ್ನೊ ಓದುತ್ತ ಬೆಳೆದಿದ್ದೇನೆ.

-ಯುವಪ್ರೇಮಿ

  • Login or register to post comments
  • link
  • Email this ಪ್ರತಿಕ್ರಿಯೆ
April 19, 2008 - 10:12pm — cmariejoseph

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

cmariejoseph's picture

"ನಮ್ಮ ಮಾವ ಎರವಲು ಪಡೆದು ತರುತ್ತಿದ್ದ ಪುಸ್ತಕಗಳನ್ನು. . . ಓದುತ್ತ ಬೆಳೆದಿದ್ದೇನೆ."

ದಯವಿಟ್ಟು ನಿಮ್ಮ ಆ ಮಾವನ ಹೆಸರು ತಿಳಿಸಿ. ಈಗಲೂ ಅವರು ಎಚ್‌ಎಎಲ್ ಸೇವೆಯಲ್ಲಿದ್ದಾರೆಯೇ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
April 19, 2008 - 11:10am — ವೈಭವ

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ವೈಭವ's picture

ಸವಿಯೊದಗು ಜೋಸೆಪರೆ, ನಿಮ್ಮ ಈ ಕೆಲಸಕ್ಕೆ ಇನ್ನಶ್ಟು ನೆರವು ಒದಗಿಬರಲಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
April 19, 2008 - 10:14pm — cmariejoseph

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

cmariejoseph's picture

ಇತರ ಸಂಸ್ಥೆಗಳಲ್ಲೂ ಇಂಥದೊಂದು ಕನ್ನಡದ ಕೆಲಸ ನಡೆಯಲು ಈ ಲೇಖನ ಪ್ರೇರಣೆ ನೀಡಿದರೆ ನನಗದೇ ಸಂತೋಷ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
April 20, 2008 - 11:46am — narendra

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

narendra's picture

ನಿಮ್ಮ ಲೇಖನ ಖಂಡಿತ ಅನೇಕ ಸಂಸ್ಥೆಗಳಲ್ಲಿ ಇಂಥ ಪ್ರಯತ್ನ ನಡೆಯುವುದಕ್ಕೆ ಪ್ರೇರಕವಾಗಲಿದೆ. ಸ್ಥಳಾಭಾವ, ಸಮಯಾನುಕೂಲ ಮತ್ತು ಓದುವ ಆಸಕ್ತಿ ಇವು ಮೂರು ನಮಗೆ ಕಂಡ ದೊಡ್ಡ ತೊಡಕುಗಳು. ನಿವಾರಿಸಲಾಗದವೇನಲ್ಲ. ನಿಮ್ಮ ಲೇಖನ ಚೆನ್ನಾಗಿದೆ. ಓದುವ ಹವ್ಯಾಸದ ರುಚಿ ಹೆಚ್ಚಿಸುವ ಇಂಥ ಲೇಖನಗಳು ಸಂಪದದಲ್ಲಿ ಹೆಚ್ಚಲಿ.

  • Login or register to post comments
  • link
  • Email this ಪ್ರತಿಕ್ರಿಯೆ
April 22, 2008 - 3:27pm — yajamanfrancis

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

yajamanfrancis's picture

sumaaru 2500 rashtu pustakada sangraha mattu vitarane summane kelasada maatalla. nimage olleyadaagali.. kannadakkooo.
(unicode thondare ide.. haagagi english nalli bareyalagide. odugaru dhaaraaligalaagatakkaddu)

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

  • Login or register to post comments
  • link
  • Email this ಪ್ರತಿಕ್ರಿಯೆ
April 22, 2008 - 3:29pm — yajamanfrancis

ಉ: ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

yajamanfrancis's picture

melinadannu dayamaadi 3500 endu odikollabekaagi manavi.

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಪುಟ್ಟ ರಾಜಕುಮಾರ -little prince
  • 'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...
  • ಪುಸ್ತಕ ಬಿಡುಗಡೆ
  • ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator