ಈಗಿನಂತೆ 5 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮನೆ ಮದ್ದು (೨) - ಅಮೃತ ಬಳ್ಳಿ
rajalaxmi's picture
ರಾಜಲಕ್ಷ್ಮಿ
18
Oct
2011
ಲೇಖನ

       ...

ಪ್ರತಿಕ್ರಿಯೆಗಳು: 9
ಹಿಟ್ಸ್ : 397
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
ಐಯಂಗಾರ್ ಪುಳಿಯೋಗರೆಯ ರಹಸ್ಯ!
keshavmysore's picture
ಕೇಶವ ಮೈಸೂರು
02
Dec
2011
ಲೇಖನ

ಹಂಸಾನಂದಿಯವರು ಪುಳಿಯೋಗರೆಯನ್ನು ಬಹುತೇಕ ಕನ್ನಡಿಗರು ಚೆನ್ನಾಗಿ ಮಾಡುವುದಿಲ್ಲವೆಂಬ ಭಾವನೆ ಬರುವಹಾಗೆ ಅಲವತ್ತುಕೊಂಡಿದ್ದನ್ನು( ! ) ಓದಿದ ಮೇಲೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 307
ಬೆಲೆ ಏರಿಕೆಯೆಂಬ ಮ್ಯೂಸಿಕಲ್ ಚೇರ್ ಆಟ!
uniquesupri's picture
ಸುಪ್ರೀತ್.ಕೆ.ಎಸ್
16
Sep
2011
ಲೇಖನ

 ನಮ್ಮ ಮನೆಯಲ್ಲಿನ ಗೌರಿ ಗಣಪತಿ ಹಬ್ಬದ ನೆನಪಾಗುತ್ತಿದೆ. ಮೊದಲ ದಿನ ಅಮ್ಮ ಗೌರಿಯನ್ನು ಕೂರಿಸಿ ಪೂಜೆ ನೆರವೇರಿಸುವುದು, ಮರು ದಿನ ನಾನು, ತಮ್ಮ, ಅಪ್ಪ ಗಣಪತಿಯನ್ನು...

ಪ್ರತಿಕ್ರಿಯೆಗಳು: 19
ಹಿಟ್ಸ್ : 345
ಕೈಲಾಸಂ ಎಂಬ ದುರಂತ ದಂತಕಥೆ
Narayana's picture
Narayana
16
Dec
2009
ಪುಟ

ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,606
ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ
devaru.rbhat's picture
ದೇವರು ಆರ್ ಭಟ್
30
Apr
2011
ಬ್ಲಾಗ್ ಬರಹ

ನಮ್ಮೂರಿನ ಸುತ್ತ ಮುತ್ತ  ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು...

ಪ್ರತಿಕ್ರಿಯೆಗಳು: 3
ಹಿಟ್ಸ್ : 739
’ಸೂಪರ್ ಮೂನ್’ ಅಪಾಯಕಾರಿಯಲ್ಲ
ಶ್ರೀಕಾಂತ ರಾವ್'s picture
ಶ್ರೀಕಾಂತ
13
Mar
2011
ಲೇಖನ

ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ,...

ಪ್ರತಿಕ್ರಿಯೆಗಳು: 13
ಹಿಟ್ಸ್ : 872
ತುಳು ಭಾಷೆ ಮತ್ತು ಲಿಪಿ
santhosh_87's picture
ಸಂತೋಷ್ ಎನ್. ಆಚಾರ್ಯ
17
Jun
2010
ಬ್ಲಾಗ್ ಬರಹ

ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು....

ಪ್ರತಿಕ್ರಿಯೆಗಳು: 41
ಹಿಟ್ಸ್ : 1,487
ನಾನು ಅಮ್ಮನ ಕಣ.
mahalakshmiharshavardhan's picture
ಮಹಾಲಕ್ಷ್ಮಿ ಹರ್ಷವರ್ಧನ್
18
Dec
2009
ಪುಟ

"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?"

ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,826
ಸುನೀತ ನೆನಪುಗಳಲ್ಲಿ ಅಶ್ವಥ್‌ ಜೀವಂತ
Chamaraj's picture
ಚಾಮರಾಜ ಸವಡಿ
29
Dec
2009
ಪುಟ

...

ಪ್ರತಿಕ್ರಿಯೆಗಳು: 27
ಹಿಟ್ಸ್ : 1,973

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ದಾಟುವ ಮುನ್ನ ಜಾರುವ ಮನ

ದಾಟುವ ಮುನ್ನ ಜಾರುವ ಮನ

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ. ಎಫ್‌.ಎಂ. ಚಾನೆಲ್‌ಗಳು ಬಂದ ನಂತರ, ಕಾಯುವುದು ಒಂಚೂರಾದರೂ ಸಹನೀಯ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಂತೆ ಸಹಜವಾಗಿ ರೇಡಿಯೋ ಆನ್‌ ಆಗುತ್ತದೆ. ಬೀಗರನ್ನು ಸ್ವಾಗತಿಸಿದಂತೆ, ಅತ್ಯಂತ ಔಪಚಾರಿಕವಾಗಿ ಕಾರ್ಯಕ್ರಮ ನಿರೂಪಿಸುವ ಸರ್ಕಾರಿ ಎಫ್‌.ಎಂ. ರೇನ್‌ಬೋ, ಅರಳು ಹುರಿದಂತೆ ಪಟಪಟ ಮಾತನಾಡುವ ಖಾಸಗಿ ಎಫ್‌.ಎಂ. ರೇಡಿಯೋ ಜಾಕಿಗಳು, ರೇಡಿಯೋದಲ್ಲಿ ಮಾತನಾಡಿದೆವೆಲ್ಲ ಎಂಬ ಸಂಭ್ರಮದಲ್ಲಿ ಬೀಗುವ ಪೆದ್ದು ಗೃಹಿಣಿಯರು, ಮೊದ್ದು ಗಂಡಸರು, ಒಂದು ಹಾಡಿಗಾಗಿ ಖಾಸಗಿ ಬದುಕಿನ ಸೂಕ್ಷ್ಮ ಸಂಗತಿಗಳನ್ನೆಲ್ಲ ಒದರುವ ಅವಿವೇಕಿ ಕೇಳುಗರು, ಇವುಗಳ ನಡುವೆ ಮೂಡಿ ಬರುವ ಸೊಗಸಾದ ಹಾಡುಗಳು, ಜೋಕ್‌ಗಳು- ಕೇಳುತ್ತ ಕೇಳುತ್ತ ಮನಸ್ಸು ಎಲ್ಲೋ ಜಾರುತ್ತ ಹೋಗುತ್ತದೆ. ಸಿಟಿ ಬಸ್‌ನಲ್ಲಿ ಸೀಟ್‌ ಸಿಕ್ಕಿದ್ದರೆ ಈ ಮಜಾ ಇನ್ನೂ ಹೆಚ್ಚು. ಇಯರ್‌ ಫೋನ್‌ ಕಿವಿಗೆ ಸಿಕ್ಕಿಸಿಕೊಂಡು, ಮಜವಾಗಿ ಹಾಡು ಕೇಳುತ್ತಿದ್ದಾಗ, ಅಲ್ಲೆಲ್ಲೂ ದೂರ ಸಿಗ್ನಲ್‌ ಹಸಿರಾಗುತ್ತದೆ. ಹಾಗಂತ ಬಸ್ಸೇನೂ ತಕ್ಷಣ ಚಲಿಸುವುದಿಲ್ಲ. ಭಯಂಕರವಾಗಿ ಆರ್ಭಟಿಸಿ ಹೊಗೆ ಉಗುಳುತ್ತ, ಜಗಳಕ್ಕೆ ಸಿದ್ಧವಾದ ಗೂಳಿಯಂತೆ ಗುಟುರು ಹಾಕುತ್ತ, ಅವಕಾಶ ಸಿಕ್ಕ ಕೂಡಲೇ ಮುಂದೆ ಹೋಗಲು ಸಿದ್ಧವಾಗುತ್ತದೆ. ಎದುರಾ ಬದುರಾ ಇರುವ ಟ್ರಾಫಿ‌ಕ್‌ ಹೋಗಲೋ ಬೇಡವೋ ಎಂಬಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ಎರಡನೇ ಗೇರ್‌ ಹಾಕಬೇಕೆನ್ನುವಷ್ಟರಲ್ಲಿ ಮತ್ತೆ ಟ್ರಾಫಿಕ್‌ ಜಾಮ್‌! ನಮ್ಮ ಬಸ್‌ ಹತ್ತು ಹೆಜ್ಜೆ ಮುಂದೆ ಹೋಗಿರುತ್ತದೆ. ಎದುರುಗಡೆಯಿಂದ ಒಂದು ಬಸ್‌ ಹತ್ತು ಹೆಜ್ಜೆ ನಮ್ಮತ್ತ ಬಂದಿರುತ್ತದೆ. ಕಿಟಕಿಗಳ ಪಕ್ಕ ಕಿಟಕಿಗಳು. ನಡುವೆ ಇದೆಯೋ ಇಲ್ಲವೋ ಎಂಬಂಥ ರಸ್ತೆ ವಿಭಜಕ. ಕೈ ಚಾಚಿದರೆ ಆ ಕಡೆಯ ಕಿಟಕಿಯನ್ನು ಸುಲಭವಾಗಿ ತಲುಪಬಹುದು. ಆಗ ಶುರುವಾಗುತ್ತದೆ ನೂರಾರು ಭಾವನೆಗಳ ತಾಕಲಾಟ. ಕಿಟಕಿಯ ಪಕ್ಕ ಕೂತವರಿಗೆ ಇತ್ತ ನೋಡಲು ಮುಜುಗರ. ಅಲ್ಲೆಲ್ಲೋ ಮಧ್ಯವಯಸ್ಕ ಪೋತಲನೊಬ್ಬ ನಮ್ಮ ಬಸ್‌ನಲ್ಲಿ ಕೂತಿದ್ದ ಹುಡುಗಿಯನ್ನು ನುಂಗುವಂತೆ ನೋಡುತ್ತಿರುತ್ತಾನೆ. ಆಂಟಿಗೆ ಜೀನ್ಸ್‌ ಹುಡುಗನ ಮೇಲೆ ಕಣ್ಣು. ಅದುವರೆಗೆ ಕಿಟಕಿಯಾಚೆಗೇ ಕಣ್ಣು ನೆಟ್ಟು ಕೂತಿದ್ದ ಹುಡುಗಿಯರು ಇದ್ದಕ್ಕಿದ್ದಂತೆ ಪ್ರಜ್ವಾವಂತೆಯರಾಗಿದ್ದಾರೆ. ಮೊಬೈಲ್‌ನತ್ತ, ಇಲ್ಲವೇ ಟಿವಿ ಪರದೆ ದಿಟ್ಟಿಸುತ್ತಿದ್ದಾರೋ ಎನ್ನುವಂತೆ ಬಿಟ್ಟ ಕಣ್ಣುಗಳಿಂದ ಎದುರು ಸೀಟ್‌ ನೋಡುವುದರಲ್ಲಿ ನಿರತರಾಗಿದ್ದಾರೆ. ಇದಪ್ಪ ಸೀನ್‌ ಎಂದರೆ! ಪಕ್ಕದ ಬಸ್‌ನ ಕಿಟಕಿಯತ್ತ ಮನಸ್ಸು ಸೆಳೆಯುತ್ತಿದ್ದರೂ ಕಣ್ಣು ಹೊರಳಿಸಲು ಏನೋ ಸಂಕೋಚ. ಎಂಥದೋ ಬಿಗುಮಾನ. ಇದ್ದಕ್ಕಿದ್ದಂತೆ ಪಕ್ಕದ ಬಸ್‌ನಲ್ಲಿ ಗುಮ್ಮ ಬಂದಿದೆಯೇನೋ ಎಂಬಂತೆ ಎಲ್ಲ ಮುಗುಮ್ಮಾಗಿದ್ದಾರೆ. ಅಂಥದೇ ಸಂದಿಗ್ಧ ನಮ್ಮ ಬಸ್‌ನಲ್ಲಿ ಕೂತವರಲ್ಲೂ. ನೋಡಲೂ ಆಗದ, ನೋಡದೇ ಇರಲೂ ಆಗದ ಮನಃಸ್ಥಿತಿ. ಆದರೂ ಆಸೆಬುರುಕ ಮನಸ್ಸು ಕಣ್ಣು ಹೊರಳಿಸುತ್ತದೆ. ಅಲ್ಲೇನಿದೆ? ಮೊಬೈಲ್‌ ಕೈಲಿ ಹಿಡಿದವರು, ಕಾಣದ ಪರದೆ ನೋಡುತ್ತ ಕೂತವರು, ಕೆಕ್ಕರಿಸುವ ಆಂಟಿಯರು, ಶಪಿಸುವ ಅಜ್ಜಿಯರು, ಹೆಣ್ಣೇ ಕಾಣದ ಅಂಕಲ್‌ ಗಾವಿಲರು- ದೇವರೇ, ಬೇಗ ಬಸ್‌ ಚಲಿಸಲಪ್ಪಾ ಎಂದು ಮನಸ್ಸು ಹಾರೈಸುವಾಗ ರೇಡಿಯೋದಲ್ಲಿ ಹಾಡು: ’ಜಿಂಕೆ ಮರೀನಾ, ಜಿಂಕೆ ಮರೀನಾ...’ ಅದನ್ನು ತಾನೂ ಕೇಳಿಸಿಕೊಂಡಿತೇನೋ ಎಂಬಂತೆ ಬಸ್‌ ಜಿಂಕೆ ಮರಿಯಂತೆ ನಡೆಯದಿದ್ದರೂ ಗಜ ಗಮನೆಯಾಗಿ ಚಲಿಸಲು ಪ್ರಾರಂಭಿಸುತ್ತದೆ. ಪಕ್ಕದ ಬಸ್‌ನ ಸಕಲ ಸೌಂದರ್ಯ, ಕುರೂಪ, ವಿಕ್ಷಿಪ್ತಗಳೆಲ್ಲ ನಿಧಾನವಾಗಿ, ಮನದಾಚೆಗೇನೋ ಎಂಬಂತೆ ಸರಿದು ಹೋಗುತ್ತವೆ. ಮತ್ತೆ ಮುಂದಿನ ಸಿಗ್ನಲ್‌ನಲ್ಲಿ ಇಂಥದೇ ಮತ್ತೊಂದು ಸೀನ್‌. ಅಲ್ಲೇನು ’ಜಿಂಕೆ ಮರಿ’ ಸಿಗುತ್ತದೋ, ’ಜಲಜಲ ಜಲಜಾಕ್ಷಿ’ ಸಿಗುತ್ತಾಳೋ, ’ಮಿನ ಮಿನ ಮೀನಾಕ್ಷಿ’ ಕಾಣಿಸುತ್ತಾಳೋ- ಅದು ಟ್ರಾಫಿಕ್‌ ಮಹಾತ್ಮೆಯ ಮರ್ಜಿ. ಆದರೆ, ಬದುಕು ಮಾತ್ರ ಸಿಗ್ನಲ್‌ನಿಂದ ಸಿಗ್ನಲ್‌ಗೆ ಕೆಂಪಾಗುತ್ತ ಹಸಿರಾಗುತ್ತ, ಯಾವುದೋ ಕನಸನ್ನು ಧೇನಿಸುತ್ತ, ಅದು ನನಸಾಗಲಿ ಎಂದು ಹಾರೈಸುತ್ತ ಹೋಗುತ್ತದೆ. ಪ್ರಯಾಣದ ಚಿಕ್ಕ ಅವಧಿಯನ್ನು ಸ್ಮರಣೀಯವಾಗಿಸುತ್ತದೆ. - ಚಾಮರಾಜ ಸವಡಿ
No votes yet
775 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ASHOKKUMAR's picture
18
Apr
2008
9:42
ಈ ಲೇಖನಕ್ಕೆ "ಸ್ಕೆಚ್" ಹಾಕಿದ್ದೂ ಟ್ರಾಫಿಕ್ ಜಾಮ್ ಆದಾಗಲೇ ಇರಬಹುದು ಅಲ್ಲವೇ? :) *ಅಶೋಕ್
mahesha's picture
21
Apr
2008
11:51
ರೀ ಚನ್ನಾಗಿದೆ ರೀ ನಿಮ್ಮ ಬರಹ. ನಾನ್ ಬಸ್ಸಲ್ಲಿ ಹೋಗಬೇಕು ಅಂದ್ರೆ, ನಮ್ ವಿದ್ಯಾರಣ್ಯಪುರದ ಬಸ್‌ ಸ್ಟಾಂಡುಗೆ( ಇಲ್ಲಿಂದ ಹೊರಡ್ತದೆ) ಹೋಗಿ ಸೀಟು ಹಿಡಿದು ಕುಳಿವೆನು. ಜೊತೆಗೊಂದು ಹೊತ್ತಗೆ ಇರಲೇಬೇಕು.. ಬಸ್ಸಲ್ಲಿ ಹೊತ್ತಗೆ ಓದೋ ಮಜವೇ ಬೇರೆ..... ಆ ಮಜ ಹಾಳಾದ್ದು, ಕಾರು ಓಡಿಸುವಾಗ ಸಿಗಲ್ಲ... ಒಂದು ಕಯ್ ಗೇರನ್ನು, ಇನ್ನೊಂದು ಅಂಕೆತಿಗರಿಯನ್ನ( ಸ್ಟೇರಿಂಗ್ ), ಇಂನು ಕಾಲಾದ್ರೂ ಆರಾಮಾಗಿರ್ತವಾ, ಒಂದು ಬ್ರೇಕ್ ಮತ್ತು ಆಗ್ಸಲರೇಟರ್‍ಗಳ ನಡುವೆ ತಿಣುಕಾಡ್ತಾ, ಇನ್ನು ಕ್ಲಚ್ಚು ಮೇಲೆ ಒತ್ತಲೋ ಬೇಡವೋ ಅಂತ ನೇತಾಡ್ತಾ.... ನಮ್ ಬೆಂಗಳೂರು ಬಸ್‌ ಬೇಗ ತಲುಪಿಗೆ ತಲುಪಿಸ್ತಾ ಇದ್ರೇ, ಯಾರಿಗೆ ಬೇಕೀ ಬಯಿಕು, ಕಾರು.. ಆರಾಮಾಗಿ ಬಸ್ಸಲ್ಲೇ ಎಶ್ಟು ಓದಬೋದಿತ್ತು. ===================================== ಮಾಯ್ಸ!
Chamaraj's picture
01
May
2008
3:29
ಥ್ಯಾಂಕ್ಸ್‌ ಮಹೇಶ್‌, ನಾನೂ ವಿದ್ಯಾರಣ್ಯಪುರದಿಂದ ಒಂದೂವರೆ ವರ್ಷ ಬಸ್‌ ಹಿಡಿದವನೇ. ಹಲವಾರು ಅತ್ಯುತ್ತಮ ಪುಸ್ತಕಗಳನ್ನು ಅಲ್ಲೇ ಓದಿದವನೇ. ಬಸ್‌ನಲ್ಲಿ ಪ್ರಯಾಣಿಸುವುದಷ್ಟೇ ಮಜಾ ಎಂದು ಹೇಳಲಾರೆ. ಆದರೆ, ಅದರ ಮಜಾನೇ ಬೇರೆ. ಹಾಗಂತ, ಕಾರ್‌, ಬೈಕ್‌ನಲ್ಲಿ ಹೋಗೋ ಮಜಾ ಇಲ್ಲಂತೀರಾ? ನೋಡೋಣ, ಇದೇ ಬ್ಲಾಗ್‌ನಲ್ಲಿ ಆ ಕುರಿತೂ ಒಂದಿನ ಬರೆದೇನು. ಪ್ರತಿಕ್ರಿಯೆ ನೀಡಿದ್ದಕ್ಕೆ ಥ್ಯಾಂಕ್ಸ್‌ - ಚಾಮರಾಜ ಸವಡಿ