ಅಶ್ರು ಧಾರೆ..!!
ಹೃದಯ ಮಿಡಿತವೆ ಅಳದಿರು,ಒಡಳ ಸಿಡಿತವೆ ಅಳದಿರು
ನಯನ ಧಾರೆಯೆ ಅಳದಿರು,ಮನದ ಮೌನವೆ ಅಳದಿರು
ಗೆಳತಿ ನನ್ನ ತೊರೆಯಲು, ನೀವು ಬಳಲಿ ಅಳದಿರಿ
ನೀವು ಬಳಲೀ ಅಳದಿರಿ..!!
ಪ್ರೇಮ ಪತ್ರವೆ ಅಳದಿರು,ಪ್ರಣಯ ಕವಿತೆಯೆ ಅಳದಿರು
ಭಾವ ಜೀವವೆ ಅಳದಿರು,ವಿರಹ ರಾಗವೆ ಅಳದಿರು
ಅವಳು ನನ್ನ ಮರೆಯಲು, ನೀವು ಮರುಗಿ ಅಳದಿರಿ
ನೀವು ಮರುಗೀ ಅಳದಿರಿ..!!
ವನದ ಹಸಿರೆ ಅಳದಿರು,ಸುಳಿವ ಗಾಳಿಯೆ ಅಳದಿರು
ಬಾನ ಮೆಘವೆ ಅಳದಿರು,ಹಾಡು ಹಕ್ಕಿಯೆ ಅಳದಿರು
ಅವಳು ಪರನ ವರಿಸಿಲು,ನೀವು ಶಪಿಸಿ ಅಳದಿರಿ
ನೀವು ಶಪಿಸೀ ಅಳದಿರಿ..!!
ಗುಡಿಯ ರಂಗನೆ ಅಳದಿರು,ಕೊಳಲ ಊದದೆ ಅಳದಿರು
ಉರಿವ ಧೊಪವೆ ಅಳದಿರು,ಬೆಳಗೊ ದೀಪವೆ ಅಳದಿರು
ನನ್ನ ಬಾಳು ಬಾವಿ ಸೇರಲು,ನೀವು ಬೆವತು ಅಳದಿರಿ
ನೀವು ಬೆವತೊ ಅಳದಿರಿ..!!
-ಯುವಪ್ರೇಮಿ

- Login or register to post comments
- 488 hits
- Email this page





RSS:
ಪ್ರತಿಕ್ರಿಯೆಗಳು
ಉ: ಅಶ್ರು ಧಾರೆ..!!
ರೀ ಯುವಪ್ರೇಮಿಗಳೇ..
ತುಂಬಾ ಚನ್ನಾಗಿದೆ... ಕವನ ಮತ್ತು ಚಿತ್ರ................
ಒಡಳ ಅಲ್ಲ ಒಡಲ
ಮೆಘ ಅಲ್ಲ ಮೇಘ
"ನನ್ನ ಬಾಳು ಬಾವಿ ಸೇರಲು,ನೀವು ಬೆವತು ಅಳದಿರಿ
ನೀವು ಬೆವತೊ ಅಳದಿರಿ..!!"
ಇದು ಎಲ್ಲ ಜವ್ವನಿಗರಿಗೆ ಬರುವ ಮಾಮೂಲಿ ಯೋಚನೆ!!
[ ಪುರಂದರ ದಾಸ ಈ ಹಾಡು "ಆದದ್ದೆಲ್ಲ ಒಳಿತೇ ಆಯಿತು! ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು||]]
ಹೋದಳವಳು ಒಳಿತೇ ಆಯಿತು
ಹೊಸ ಹುಡುಗಿಯ ಹುಡುಕಲು ಇನ್ನೂ ಒಳ್ಳೇದಾಯಿತು || ಹೋದಳವಳು ಒಳಿತೇ ಆಯಿತು||
ಅವಳ ನೆನೆಪಲಿ ಯಾಕೆ ಕೊರಗು
ಅವಳ ಮೇಲೆ ಇನ್ಯಾಕೆ ಮರುಗು|| ಹೋದಳವಳು ಒಳಿತೇ ಆಯಿತು||
=====================================
ಮಾಯ್ಸ!
ಉ: ಅಶ್ರು ಧಾರೆ..!!
ವಂದನೆಗಳು ಮಹೇಶ್ ರವರೆ,
ಹೌದು, ಕೆಲವು ತಪ್ಪುಗಳು ನನ್ನ ಗಮನಕ್ಕೆ ಬರಲಿಲ್ಲ.
ಆದರ ಅದನ್ನು ಸರಿಪಡಿಸುವ ಮುನ್ನ ಸಂಪದದಲ್ಲಿ ಸೇರಿಸಿ ಆಗಿತ್ತು.
ಆದ ಕಾರಣ ತಪ್ಪುಗಳನ್ನು ತಿದ್ದಲು ಆಗಲಿಲ್ಲ.
ನೀವು ಹೇಳಿದ್ದು ಅಪ್ಪಟ ಸತ್ಯ.
|| ಒಳಿತಾಯ್ತು ಅವಳು ಹೋಗಿ
ಇರಬಹುದು ಈಗ ನಾ ಹಾಯಾಗಿ
ಮಿಸ್ಸು ಕಾಲಿನ ಕಾಟವಿಲ್ಲ
ಮಿಸ್ಸು ಮಾಡುವ ಮಾತೊ ಇಲ್ಲ
ಒಳಿತಾಯ್ತು ಹೋಗಿ ಅವಳು
ಹೊಸತನ್ನು ಕೇಳಿದೆ ಈ ಕಂಗಳು ||
ಹೊಸದಾಗಿ ತಿದ್ದಿದ ಕವನ ಇಲ್ಲಿದೆ :
ಹೃದಯ ಮಿಡಿತವೆ ಅಳದಿರು,ಒಡಲ ಸಿಡಿತವೆ ಅಳದಿರು
ನಯನ ಧಾರೆಯೆ ಅಳದಿರು,ಮನದ ಮೌನವೆ ಅಳದಿರು
ಗೆಳತಿ ನನ್ನ ತೊರೆಯಲು, ನೀವು ಬಳಲಿ ಅಳದಿರಿ
ನೀವು ಬಳಲಿ ಅಳದಿರಿ..!!
ಪ್ರೇಮ ಪತ್ರವೆ ಅಳದಿರು,ಪ್ರಣಯ ಕವಿತೆಯೆ ಅಳದಿರು
ಭಾವ ಜೀವವೆ ಅಳದಿರು,ವಿರಹ ರಾಗವೆ ಅಳದಿರು
ಅವಳು ನನ್ನ ಮರೆಯಲು, ನೀವು ಮರುಗಿ ಅಳದಿರಿ
ನೀವು ಮರುಗಿ ಅಳದಿರಿ..!!
ವನದ ಹಸಿರೆ ಅಳದಿರು,ಸುಳಿವ ಗಾಳಿಯೆ ಅಳದಿರು
ಬಾನ ಮೇಘವೆ ಅಳದಿರು,ಹಾಡು ಹಕ್ಕಿಯೆ ಅಳದಿರು
ಅವಳು ಪರನ ವರಿಸಿಲು,ನೀವು ಶಪಿಸಿ ಅಳದಿರಿ
ನೀವು ಶಪಿಸಿ ಅಳದಿರಿ..!!
ಗುಡಿಯ ರಂಗನೆ ಅಳದಿರು,ಕೊಳಲ ಊದದೆ ಅಳದಿರು
ಉರಿವ ಧೊಪವೆ ಅಳದಿರು,ಬೆಳಗೊ ದೀಪವೆ ಅಳದಿರು
ಎನ್ನ ಬಾಳು ಬಿರಿಯಲು,ನೀವು ಕೊರಗಿ ಅಳದಿರಿ
ನೀವು ಕೊರಗಿ ಅಳದಿರಿ..!!
-ಯುವಪ್ರೇಮಿ
ಉ: ಅಶ್ರು ಧಾರೆ..!!
ಇರಲಿ ಬಿಡಿ..
ನಿಂಮ ಬ್ಲಾಗಲ್ಲಿ ಹಾಕಿಕೊಂಡರೆ ತಿದ್ದಬೋದು
=====================================
ಮಾಯ್ಸ!
ಉ: ಅಶ್ರು ಧಾರೆ..!!
ಯುವಪ್ರೆಮಿಗಳೇ...
ಒಳಿತಾಯ್ತು ಅವಳು ಹೋಗಿ
ಇರಬಹುದು ಈಗ ನಾ ಹಾಯಾಗಿ
ಮಿಸ್ಸು ಕಾಲಿನ ಕಾಟವಿಲ್ಲ
ಮಿಸ್ಸು ಮಾಡುವ ಮಾತೊ ಇಲ್ಲ
ಒಳಿತಾಯ್ತು ಹೋಗಿ ಅವಳು
ಹೊಸತನ್ನು ಕೇಳಿದೆ ಈ ಕಂಗಳು ||
ಎಂತಹ ಆತ್ಮವಾಂಚನೆ ನಿಮ್ಮದು.
ಮಹೇಶ್ ರವರ ಪ್ರತಿಕ್ರಿಯೆಗೆ ಮತ್ತ್ಯಾವುದೋ ವಚನಕೆ ಕರಗಿ ಬದಲಾಗುವ ಪ್ರೀತಿ ನಿಮ್ಮದಾಗಿದ್ದರೆ
ನಿಮ್ಮಲ್ಲಿ ಅಂತಹ ಭಾವ ತೀವ್ರತೆಯ ಕಾವ್ಯ ಸ್ಪುರಿಸುತ್ತಿರಲ್ಲಿಲ್ಲ.
ಹಾಗಿದ್ದರೆ ಹೇಳಿ...
ಎಸ್ಟು ಹುಡುಗಿಯರಿಗೆ ಮಿಸ್ ಕಾಲ್ ಕೊಟ್ಟಿದ್ದೀರಿ....
ನಿಮ್ಮ ಹುಡುಗಿಗೆ..ಮೆಸ್ಸೇಜು , ಮಿಸ್ಸಕಾಲ್ ಮಾಡ್ಬಹುದಿತ್ತು ಆನ್ನಿಸಿಲ್ವಾ...
ಆ ಭಾವನೆಯೇ...ನಿಮ್ಮನ್ನು ನಿಮ್ಮ ಪ್ರೇಮದಲ್ಲಿ..ತೋಯಿಸಿಲ್ಲಾವಾ...
ಮನುಷ್ಯನು ತನ್ನ ತೋರಿಕೆಯನ್ನು....ನಗ್ನ ಗೊಳಿಸಲು...
ಅಂತರಂಗವನ್ನು..ಅನಾವರನಗೊಳಿಸಲು...
ಆಹಂಕಾರವನ್ನು ತೊರೆದು ಶರಣಾಗಿ ಮಗುವಾಗಲು ...
ಆತ್ಮಾವಲೊಕನದ ಸಮಯದಲಿ ಸುರಿಯುವ ಮನಸಿನ ಆಂದೋಲನದ ವೇಗೊತ್ಕರ್ಶಕ್ಕೆ ಕಡಿವಾಣ ಹಾಕಿ ಶಾಂತಗೊಲಿಸುಲು ಪ್ರೀತಿಯಿಂದ ಮಾತ್ರ ಸಾದ್ಯ.
ಹಾಗೆ ನಿಮಗೆ ಮತ್ತೊಂದು ಸಲಹೆ. ಪ್ರೀತಿಗೆ ವಯಸ್ಸಾಗುವುದಿಲ್ಲ. ಹಾಗಾಗಿ ಯುವಪ್ರೆಮಿ...ಮುದುಕಪ್ರೆಮಿ ಎಂಬುದೆಲ್ಲ ಸುಳ್ಳು.
ಉ: ಅಶ್ರು ಧಾರೆ..!!
ದೀಪು ಹುಡುಗೀನ ಹುಡುಗಾನ?
=====================================
ಮಾಯ್ಸ!
ಉ: ಅಶ್ರು ಧಾರೆ..!!
ಅಲೋಚನೆ..ವಿವೇಚನೆ.... ಸ0ವೇದನೆಗಳಿರುವ ವ್ಯಕ್ತಿ.