ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ?
ಒಟ್ಟು ಜನಸಂಖ್ಯೆ ೫.೨೮ ಕೋಟಿ
ಕನ್ನಡಿಗರು ೩.೪೮ ಕೋಟಿ (೬೬%)
ಉರ್ದು ಭಾಷಿಕರು ೫೫.೩೯ ಲಕ್ಷ
ತೆಲುಗರು ೩೬.೯೮ ಲಕ್ಷ
ಮರಾಠಿಗರು ೧೮.೯೨ ಲಕ್ಷ
ತಮಿಳರು ೧೮.೭೪ ಲಕ್ಷ
ಹಿಂದಿ ಭಾಷಿಕರು ೧೩.೪೪ ಲಕ್ಷ
ಮಲಯಾಳಿಗಳು ೭.೦೧ ಲಕ್ಷ
ಗುಜರಾತಿಗಳು ೧.೦೨ ಲಕ್ಷ
ಬೆಂಗಾಲಿಗಳು ೪೧,೨೫೬
ಒರಿಯಾ ಭಾಷಿಕರು ೧೬,೫೨೮
ಪಂಜಾಬಿ ೧೫,೫೭೨
ಸಿಂಧಿ ೧೪,೬೯೪
ಕರ್ನಾಟಕದವರೇ ಆಗಿದ್ದು ಬೇರೆ ಭಾಷೆ ಆಡುವವರು
ತುಳು ಭಾಷಿಕರು ೧೭ ಲಕ್ಷ
ಕೊಂಕಣಿ ಭಾಷಿಕರು ೭.೬೮ ಲಕ್ಷ
ನೆರೆ ರಾಜ್ಯಗಳಲ್ಲಿ ಕನ್ನಡಿಗರ ಜನಸಂಖ್ಯೆ
ಮಹಾರಾಷ್ಟ್ರ ೧೨.೫೪ ಲಕ್ಷ
ತಮಿಳುನಾಡು ೧೦.೪೫ ಲಕ್ಷ
ಗೋವಾ ೭೪,೬೧೫
ದೆಹಲಿ ೧೦,೫೨೫
ಲಕ್ಷದ್ವೀಪ ೩೯
ಆಧಾರ : Times Of India (ಮುಂಬಯಿ ಆವೃತ್ತಿ ) ಏಪ್ರಿಲ್ ೧೭,೨೦೦೮

- Login or register to post comments
- 645 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ತುಂಬಾ ಉಪಯುಕ್ತ ಮಾಹಿತಿ ರೀ...
ಬಹುಶಃ ಬೆರೆ ಯಾವ ರಾಜ್ಯದಲ್ಲೂ ಇಸ್ಟೋಂದು ವೈವಿಧ್ಯತೆ ಇಲ್ಲ ಅಂದ್ಕೋತೀನಿ...
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ತಮಿಳು ನಾಡಿನ ಮುಸ್ಲೀಮರು ತಮಿಳರೆಂದೇ ಗುರುತಿಸಿಕೊಳ್ಳೋದು, ಹಾಗೆ ಕೇರಳದವರು ಕೂಡ.. ಆದರೆ ಅವರು ಉರ್ದು ಬೆರೆಸಿದ ತಮಿಳು, ಮಳಯಾಳಿಯನ್ನೇ ಆಡುವುದು..
ಇನ್ನು ಕರ್ನಾಟಕದ ಮುಸ್ಲಿಮರ ಉರ್ದು, ಹಯಿದರಾಬಾದಿನ ಉರ್ದುಗಿಂತ ಎಶ್ಟು ಬೇರೆಯಾಗಿದೆ..
ಇನ್ನು ಕಾಸರಗೋಡಿನಲ್ಲಿ ಕನ್ನಡಿಗರು ಎಮ್ಮೆಲ್ಯೆಗಳಾಗಿ, ಕನ್ನಡದಲ್ಲಿ ಆಣೆ ತಗೊಳ್ತಾರೆ. ಸೊಲ್ಲಪುರದಲ್ಲಿ ಕನ್ನಡಿಗರು ಎಲೆಕ್ಶನ್ ಗೆದ್ದಿದ್ದಾರೆ....
ಇನ್ನು ಅನಂತಪುರ, ಕರ್ನೂಲು, ಮಂತ್ರಾಲಯ( ಇಲ್ಲಂತೂ ಬರೀ ಕನ್ನಡ ಬೋರ್ಡು), ರಾಯದುರ್ಗ, ಆದೋನಿಗಳಲ್ಲಿ ಎಶ್ಟು ಕನ್ನಡಿಗರಿದ್ದಾರೆ....
ಮಹಾರಾಶ್ಟ್ರದಲ್ಲಿ ಮರಾಟಿ ಮಂದಿ ಈಗ ಎಶ್ಟು ಪರ್ಸೆಂಟು? ಅಲ್ಲೂ ದೊಡ್ಡ ಹಿಂದಿ ಮತ್ತು ಉರ್ದು ಮುಸ್ಲಿಮರಿದ್ದಾರಲ್ಲ!!
ಕರ್ನಾಟಕ ತೆಂಕಣ ಜಿಲ್ಲೆಗಳಲ್ಲಿ ಕನ್ನಡಿಗರ ಸಂಕೆ ಹೆಚ್ಚು ಮಂಡ್ಯದಲ್ಲಿ ೯೬%. ಇನ್ನು ಬಾಗಲಕೋಟೆ, ಗದಗ, ಕೊಪ್ಪಳಗಳಲ್ಲಿ ಕನ್ನಡಿಗರು ತುಂಬಾ ಹೆಚ್ಚಿದ್ದಾರೆ ಎಂದು ನನ್ನ ಎಣಿಕೆ.. ಬರೀ ಗಡಿ ಜಿಲ್ಲೆಗಳಲ್ಲಿ ಬೇರೆ ನುಡಿಗರು ವಲಸೆ ಬಂದಿದ್ದಾರೆ..
ಅವರು ಬಂದು ಅಲ್ಲಿ ನೆಲೆಸಲು, ನಮ್ಮ ಹಿಸ್ಟರಿಯೇ ಓಸುಗರ.
ಬೆಳಗಾವಿ ಹಿಂದೆ ದೊಡ್ಡ ಪಟ್ಟಣ, ಅದಕ್ಕೆ ಹಲವು ನೆಲಗಳಿಂದ ವ್ಯಾಪಾರಿಗಳು, ಕೆಲಸಗಾರರು ಬಂದು ನೆಲೆಸಿದರು, ಹೀಗೆ ಬಳ್ಳಾರಿ(ಹಂಪೆ), ಬೀದರ( ನಿಜಾಮರ ಕಾಲದಲ್ಲಿ ದೊಡ್ಡ ಊರು), ಬಿಜಾಪುರ, ಬೆಂಗಳೂರು, ಮಂಗಳೂರು.... ಕಾರವಾರ ಕೂಡ( ಇದರ ಹೆಸರು ಇಜಿಪ್ಟಲ್ಲಿ ಸಿಕ್ಕಿದೆ ಅಲ್ವ)
ಹಿಂದಿನಿಂದಲೂ ಕನ್ನಡನೆಲದಲ್ಲಿ ಪೊೞಲು/ಹೊಳಲು/ಪಟ್ಟಣಗಳು ಹೆಚ್ಚು. ಪಟ್ಟಣಗಳೆಂದರೆ ಅಲ್ಲಿ ಬೇರೆ ನುಡಿಗಾರರು ಬಂದು ನೆಲೆಸಿರ್ತಾರೆ..
ಮಾದರಿಗೆ ಚನ್ನಯ್-ಅಲ್ಲಿ ತೆಲುಗರು ಹೆಚ್ಚು. ಹಯಿದರಾಬಾದಲ್ಲಿ ಉರ್ದು ಹೆಚ್ಚು.
ಕಂನಡಿಗರು ಇನ್ನು ಹೆಚ್ಚಾಗಬೇಕು.. ಕಂನಡಿಗರು ಹೆಚ್ಚು ಮಕ್ಕಳನ್ನು ಹಡೆಯಬೇಕು ಎಂಬ ಸಾರು ಏನ್ಗುರು ಬ್ಲಾಗು ಓದಿದ ನೆನೆಪು
=====================================
ಮಾಯ್ಸ!
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
"ಹಿಸ್ಟರಿಯೇ ಓಸುಗರ" ಅಂದ್ರೆ ಏನು? ಅದೇನೋ ರೋಗವಿದೆಯಲ್ಲಾ ಹಿಸ್ಟೀರಿಯಾ ಅಂತ ಅದರ ಬಗ್ಗೆ ಹೇಳುತ್ತಿದ್ದೀರಾ?
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಕರ್ನಾಟಕದಲ್ಲಿ ಇತೆರ ಭಾಷೆಗಳವರು ಇರುವುದಕ್ಕೆ ಕೆಲ ಐತಿಹಾಸಿಕ ಕಾರಣಗಳು ಇಂತಿವೆ:
ಮುಸ್ಲಿಮ್ ದೊರೆಗಳ ಆಡಳಿತ ( ದಕ್ಷಿಣದಲ್ಲಿ ಹೈದರಾಲಿ, ಟಿಪ್ಪುಸುಲ್ತಾನ್, ಅತ್ತ ಉತ್ತರದಲ್ಲಿ ಆದಿಲ್ಶಾಹಿ, ಬಹಮನಿ ನಂತರ ಹೈದರಾಬಾದಿನ ನಿಜಾಮ) - ಇದರಿಂದ ಉರ್ದು ಭಾಷಿಕರು ಜಾಸ್ತಿಯಾಗಿರಲಬಹುದು.
ಹಳೆಯ ಮೈಸೂರಿನಲ್ಲಿ ತಮಿಳರು - ಇದು ಮೈಸೂರು ಒಡೆಯರ ಕಾಲದಿಂದ ಆದದ್ದು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಿಂದ ಶುರುವಾಯಿತು ಅನ್ನುತ್ತಾರೆ. ಆಮೇಲೆ ತಮಿಳು ವಿರೋಧಿ ಹೊಗೆ ಶುರುವಾಗಿ Mysore for Mysorians ಅಂತ ಗಲಾಟೆ ಆಗಿತ್ತು ಅಂತ ಎಲ್ಲೋ ಓದಿದ್ದು.
ಉತ್ತರ ಕನಾಟಕದಲ್ಲಿ ಮರಾಠಿಗರು - ಉತ್ತರ ಕರ್ನಾಟಕದ ಒಂದು ಭಾಗ ಬ್ರಿಟಿಷರ ಕಾಲದಲ್ಲಿ ಮುಂಬಯಿ ಪ್ರೆಸಿಡೆನ್ಸಿಗೆ ಸೇರಿತ್ತು. ಆ ಕಾಲದಲ್ಲಿ ಮರಾಠಿಗರು ಬೇಕಾದಷ್ಟು ಜನ ಇಲ್ಲಿಗೆ ಬಂದಿರಬೇಕು. ( ಹಾಗೇ ಇಲ್ಲಿಂದ ನಮ್ಮವರು ಮುಂಬಯಿ ಸೇರಲಿಕ್ಕೂ ಬಹುಷಃ ಅದೇ ಕಾರಣ)
ಆಂಧ್ರ ಗಡಿಯಲ್ಲಿ ತೆಲುಗರು - ವಿಜಯನಗರದ ರಾಜರು ಕನ್ನಡ , ತೆಲುಗು ಎರಡನ್ನೂ ಪೋಷಿಸಿದರು. ಹಾಗಾಗಿ ಆ ಕಾಲದಲ್ಲಿ ತೆಲುಗರು , ಕನ್ನಡಿಗರು ಪರಸ್ಪರರ ನಾಡಿನಿಂದ ಅತ್ತಿತ್ತ ಹೋಗಿರಬಹುದು. ಅದಕ್ಕೇ ಬಳ್ಳಾರಿಯಲ್ಲಿ ತೆಲುಗರಿದ್ದರೆ ಆದೋನಿ , ಮಂತ್ರಾಲಯಗಳಲ್ಲಿ ಕನ್ನಡಿಗರಿದ್ದಾರೆ.
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಹಳೆಯ ಮೈಸೂರಿನ ತಮಿಳರ ಸಂಖ್ಯೆ ಮೈಸೂರಿನ ದಿವಾನರ ಕಾಲದಲ್ಲಿ ಹೆಚ್ಚಿದ್ದಿರಬಹುದಾದರೂ - ಸುಮಾರು ಅದಕ್ಕಿಂತ ಮೊದಲೇ (ರಾಮಾನುಜಾಚಾರ್ಯರ ಕಾಲದಿಂದಲೂ) ಇರಬಹುದಾದವರ ಸಂಖ್ಯೆಯೂ ಬಹಳಷ್ಟಿದೆ.
ಇವರಲ್ಲಿ ಹಲವರು ಮನೆಮಾತು ತಮಿಳು/ತಮಿಳಿನ ಉಪಭಾಷೆ ಆಗಿದ್ದರೂ, ನನಗೆ ತಿಳಿದಂತೆ, ತಮ್ಮನ್ನು ಕನ್ನಡಿಗರು ಎಂದುಕೊಳ್ಳುವುದೇ ಹೆಚ್ಚು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ನೀವು ಹೇಳಿದ್ದೂ ಸರಿ. ಉದಾಹರಣೆಗೆ ಸಂಕೇತಿಗಳು.
ಒಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಷಿಕರ ಮೂಲವನ್ನು ಹುಡುಕಿ ಹೊರಟರೆ ಬಹಳ ಕುತೂಹಲಕಾರಿಯಾಗಿರಬಹುದು.
ನಾನು ಈ ಲೇಖನದಲ್ಲಿ ಉದ್ಧರಿಸಿದ TOI ಸುದ್ದಿಯ ಪ್ರಕಾರ ಭಾರತದ ಸಂವಿಧಾನದಲ್ಲಿ scheduled (ಮಾನ್ಯತೆ ನೀಡಿರುವ?) ೨೨ ಭಾಷೆಗಳನ್ನೂ ಆಡುವವರು ಕರ್ನಾಟಕದಲ್ಲಿದ್ದಾರಂತೆ.
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಸಂಕೇತಿಗಳಿಗಿಂತ ಅಯ್ಯಂಗಾರೂ ಹೆಚ್ಚು ಅಂತ ನಂನ ಅನಿಸಿಕೆ..
ಸಂಕೇತಿಗಳು ಬರೀ ಹಾಸನದಲ್ಲಿ ಹೆಚ್ಚಿ ಇದ್ರೆ, ಅಯ್ಯಂಗಾರರು ಹಾಸನ, ಮಯಿಸೂರು, ಮಂಡ್ಯ, ಬೆಂಗಳೂರುಗಳಲ್ಲೀ ಇದ್ದಾರೆ(ಇದ್ದರು)
=====================================
ಮಾಯ್ಸ!
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಒಪ್ಪತಕ್ಕ ಮಾತು!
=====================================
ಮಾಯ್ಸ!
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಹಾಗೇನಿಲ್ಲ. ಬೇರೆ ರಾಜ್ಯಗಳಲ್ಲೂ ಕನ್ನಡಿಗರು ಇದ್ದಾರೆ.
ಅದು ಹಾಗಿರಲಿ,
ನಾನು ಹಿಂದೊಮ್ಮೆ ಲೇಕ್ ಟಹೊ(ಕಾಲಿಪೋರ್ನಿಯಾ)ಗೆ ಹೋಗಿದ್ದಾಗ ಏಸೊ ಮಂದಿ ಕನ್ನಡದಲ್ಲಿ(ಕನ್ನಡಿಗರು) ಮಾತಾಡೋದನ್ನ ಕೇಳಿದ್ದೆ.
ಕಾಲಿಪೋರ್ನಿಯಾದಾಗೆ ಸುಮಾರು ಏಸ್ ಮಂದಿ ಕನ್ನಡಿಗರು ಇರಬಹುದು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ಬೇ ಏರಿಯಾ ( ಸ್ಯಾನ್ ಹೊಸೆ, ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶ) ದಲ್ಲಿ ಸುಮಾರು ಐದರಿಂದ ಎಂಟು ಸಾವಿರ ಕನ್ನಡಿಗರಿರಬಹುದು ಅನ್ನುವುದು ನನ್ನ ಅಂದಾಜು.
ಸಾಂಟಾ ಕ್ಲಾರಾ ಕೌಂಟಿಯಲ್ಲಿ ಸುಮಾರು ೮೦೦೦೦ ಭಾರತ ಮೂಲದವರಿದ್ದಾರೆ - ಅದರ ೧೦% ಆದರೂ ಕನ್ನಡದವರಿರಬಹುದು ಎನ್ನಿಸುತ್ತೆ. ಆಗ, ನನ್ನ ಎಂಟು ಸಾವಿರ ಅಂದಾಜೂ ಸ್ವಲ್ಪ ಕಮ್ಮಿ ಇರಬಹುದು.
ಅಲ್ಲದೆ, ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟದ ( ಹೆಸರು ಉತ್ತರ ಕ್ಯಾಲಿಫೋರ್ನಿಯ ಅಂತಿದ್ದರೂ, ಇದು ಕೊಲ್ಲಿ ಪ್ರದೇಶಕ್ಕೇ ಸೀಮಿತ ಎನ್ನಬಹುದು) ಕಾರ್ಯಕ್ರಮಗಳಲ್ಲಿ ೧೦೦೦-೧೨೦೦ ಜನ ಭಾಗವಹಿಸುವುದು ಮಾಮೂಲು. ಅಲ್ಲದೆ, ನನ್ನ ಪರಿಚಿತರಲ್ಲಿ ಸುಮಾರು ೪ ಜನ ಕನ್ನಡಿಗರಲ್ಲಿ ಒಬ್ಬರು ಎನ್ನುವ ಹಾಗೇ ಕನ್ನಡಕೂಟದಲ್ಲಿ ಬರುವುದು. ಆ ರೀತಿಯಾಗಿ ನೋಡಿದರೂ, ಕಡಿಮೆ ಎಂದರೆ ೫೦೦೦ ಕನ್ನಡಿಗರಿರಬೇಕು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್‍ಕಾಸ್ಟ್ ಗಳು - http://hamsanandi.mypodcast.com/