Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ

ಪ್ರೇಮಿಗಳ ಸಂಭಾಷಣೆ

April 24, 2008 - 12:29pm — msprasad

ಹಂಗೇ ಆಫೀಸ್ ಈ-ಮೇಲ್ ಗೆ ಫಾರ್ವರ್ಡ್ ಬಂದಿದ್ದನ್ನ ಇಲ್ಲಿಗೆ ಹಾಕ್ತಾ ಇದೀನಿ.

ವಿ.ಸೂ :

೧. ಸಂಭಾಷಣೆಯ ಮಧ್ಯೆ BRACKET ನಲ್ಲಿ ಬರೆದಿರೋದು ಮನಸ್ಸಿನ ಮಾತುಗಳು
೨. ಲವ್ ಮಾಡ್ತಾ ಇರೋರು ಇದನ್ನ ಓದಿ ಬಯ್ಕೊಂಡ್ರೆ ನಾನ್ ಏನೂ ಮಾಡಕ್ಕೆ ಆಗಲ್ಲಾ, ದಯವಿಟ್ಟು ಕ್ಷಮಿಸಿ....

ಶುರು :

ಆವಳು ಅವನಿಗೊಂದು ಮಿಸ್ಡ್ ಕಾಲ್ ಕೊಡ್ತಾಳೆ..... ಅವನು ಅವಳಿಗೆ ವಾಪಸ್ ಕಾಲ್ ಮಾಡ್ತಾನೆ

ಅವಳು : ಹಲೋ (ಹಲೋ ನಲ್ಲಿ "ಲೋ" ಅನ್ನೋ ಪದವನ್ನ ಸ್ವಲ್ಪ ಉದ್ದಕ್ಕೆ ಎಳೆಯುತ್ತಾ..)
ಅವನು : (ಅಯ್ಯೋ... ಇವತ್ತೇನ್ ಕುಯ್ತಾಳೋ..) ಹೈ, ಏನ್ ಹೇಳು
ಅವಳು : ಏನೂ ಇಲ್ಲಾ, ಸುಮ್ನೆ ಕಾಲ್ ಮಾಡ್ದೆ...
ಅವನು : (ಕಾಲ್ ಯಾವಾಗಾ ಮಾಡ್ದೆ ? ಮಿಸ್ಡ್ ಕಾಲ್ ತಾನೆ ಕೊಟ್ಟಿದ್ದು...) ಓಹ್, ಓಕೆ... ಏನ್ ಮಾಡ್ತಿದ್ದೆ ಚಿನ್ನು ??
ಅವಳು : ಈಗ್ತಾನೇ ಊಟ ಆಯ್ತು HONEY, ನೀನ್ ಏನ್ ಮಾಡ್ತಿದ್ದೆ ?
ಅವನು : ನಂದೂ ಈಗ್ತಾನೇ ಊಟ ಆಯ್ತು.. ಇವಾಗ "ಕುಣಿದು ಕುಣಿದು ಬಾರೆ" ಹಾಡು ಕೇಳ್ತಾ ಇದ್ದೆ ಎಫ್.ಎಂ ನಲ್ಲಿ
ಅವಳು : NICE SONG ಕಣೋ.. (ಹೀಗೆ ಹೇಳಿದ ಮೇಲೆ, "ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...." ಹಾಡನ್ನು ಗುನುಗುನಿಸುತ್ತಾಳೆ)
ಅವನು : (ಅಲ್ಲೇನ್ ಕಿಚುಗುಡ್ತಾ ಇದೀಯಾ??) ಏಯ್ !!! ನೀನ್ ಇಷ್ಟು ಚೆನ್ನಾಗಿ ಹಾಡ್ತೀಯಾ ? ನಂಗೆ ಗೊತ್ತೇ ಇರ್ಲಿಲ್ಲಾ
ಅವಳು GIGGLE ಮಾಡ್ತಾಳೆ
ಅವನು : ಹೇಯ್, ಇನ್ನೊಂದು ಸಲ ಹಾಡು, ಪ್ಲೀಸ್
ಅವಳು : ಇಲ್ಲಿ ಎಲ್ಲಾರು ಮಲ್ಗಿದಾರೆ, ಎಲ್ಲಾ ಭಯಪಡ್ತಾರೆ ಆಮೇಲೆ
ಅವನು : (ಕರೆಕ್ಟ್.. ಅವ್ರು ಯಾವ್ದೋ ಮೋಹಿನಿ ಪಿಶಾಚಿ ಅನ್ಕೋತಾರೆ) Come on... ಹಾಡು ಪ್ಲೀಸ್
ಅವಳು : ಏ.. ಹೋಗೋ, ನಾನೇನು ಅಷ್ಟೊಂದು ಚೆನ್ನಾಗಿ ಹಾಡಲ್ಲಾ....
ಅವನು : (ಅದು ಊರಿಗೇ ಗೊತ್ತು.....) ಸಖತ್ ಸ್ವೀಟ್ ಆಗಿತ್ತು ನೀನು ಹಾಡಿದ್ದು..ಪ್ಲೀಸ್ ಹಾಡು ಡಿಯರ್
ಅವಳು : ನಂಗೇನೋ ODD ಅನ್ನಿಸ್ತಾ ಇದೆ ಚಿನ್ನು
ಅವನು : ಅದ್ರಲ್ಲಿ ಏನಿದೆ ? ಚೆನ್ನಾಗೇ ಹಾಡ್ತೀಯಲ್ಲಾ
ಅವಳು : ನೀನೇ ಹೇಳ್ಬೇಕು ಅವನು : (ನಾನಾ, ನಾನೇನೋ ಬೇರೆ ದಾರಿ ಇಲ್ದೇ ಹೇಳ್ದೆ ) ಈಗ ಹಾಡ್ತೀಯೋ ಇಲ್ವೋ ?
ಅವಳು : ಯಾಕೋ ತಲೆ ತಿಂತೀಯಾ ?
ಅವನು : ಒಂದು ಜೋರಾಗಿ ಊಂಹ್ ಅಂತಾ ಉಸಿರು ಬಿಡುತ್ತಾ..... ಸರಿ ಬಿಡು
ಅವಳು : ನನ್ ವಾಯ್ಸ್ ಏನು ಅಷ್ಟು ಚೆನ್ನಾಗಿಲ್ಲ.. ಬಿಡು
ಅವನು : (ಕತ್ತೆ ಕೂಡಾ ನಾಚ್ಕೊಳೋ ವಾಯ್ಸು) ಹೂಂ
ಅವಳು : ಸರಿ, ಇಷ್ಟೊಂದು ಕೇಳ್ತಿದೀಯಾ, ಒಂದೇ ಓಂದ್ಯ್ STANZA ಹಾಡ್ತೀನಿ, ಆಯ್ತಾ ?
ಅವನು : (ಇನ್ನೇನ್ ಕಾದಿದ್ಯೋ..) ಗ್ರೇಟ್
ಅವಳು : ಯಾವ ಹಾಡ್ ಹಾಡ್ಲಿ ?
ಅವನು : ( ನೀನ್ ಯಾವ ಹಾಡ್ ಹಾಡಿದ್ರೇನು ? ನನ್ ನಿದ್ರೆ ಅಂತೂ ಹಾಳಾಗಿ ಹೋಯ್ತು...) hmmmm... "ಈ ನಿಂಬೆ ಹಣ್ಣಿನಂಥ ಹುಡುಗಿ..." ಪ್ರೇಮಲೋಕ ಫಿಲಂನಿಂದ ?
ಅವಳು : ಒಳ್ಳೇ ಸಾಂಗು, ಆದ್ರೆ ಲಿರಿಕ್ಸ್ ಜ್ನಾಪಕ ಇಲ್ಲಾ
ಅವನು : (TEXT BOOK ಬಿಟ್ರೆ ನಿಂಗೇನ್ ಜ್ನಾಪಕ ಇರುತ್ತೆ ಹೇಳು ?) ಗೀತ ಫಿಲಂನಿಂದ "ಸಂತೋಷಕೆ ಹಾಡು ಸಂತೋಷಕೆ" ?
ಅವಳು : ಇಲ್ಲಾ, ಅದೇ ಹಾಡು ಹೇಳ್ತೀನಿ
ಅವನು : (ಎಲ್ಲಾ ಒಂದೇ, ಯಾವ್ ಹಾಡಾದ್ರೇನು ಕಿವಿ ತೂತಾಗಕ್ಕೆ ?) Cool
ಅವಳು ಗಂಟಲು ಸರಿ ಮಾಡ್ಕೊಂಡು, ಹಾಡಿನ ಒಂದು ಲೈನ್ ಗುನುಗುನಿಸಿ
ಅವಳು : ಏಯ್ ಬೇಡ ಚಿನ್ನು, ಯಾಕೋ ನಾಚಿಕೆ ಆಗ್ತಾ ಇದೆ ನಂಗೆ
ಅವನು : ಹಾಡು ಹಾಡು, ನಿನ್ನ ಹಾಡಿನ ಸವಿಗೆ ನಾನು ಮುಳ್ಗಿ ಮುಳ್ಗೀ ತೇಲಬೇಕು...
ಅವಳು : ನೋಡು, ಗಲಾಟೆ ಶುರು ಮಾಡ್ತಿದ್ಯಾ
ಅವನು : (ಗೊತ್ತಯ್ತು ತಾನೆ, ಮತ್ತಿನ್ನೇನು ? ) No No.. ನೀನು ನಾಚಿಕೆ ಅಂದ್ಯಲ್ಲಾ, Just Tryin to make you cool
ಅವಳು : Hmmmmmmm
ಅವನು : ಪ್ಲೀಸ್ ಹಾಡೇ ಅವಳು : ನಾಳೆ ಹಾಡ್ಲಾ ?
ಅವನು : ( ಅಹ್ಹಾ, ತಪ್ಪುಸ್ಕೊಂಡೇ ಗುರೂ... ಎಸ್ಕೇಪು...) ಸರಿ ಕಣಮ್ಮಾ, ನಿಂಗೆ ಯಾವಾಗ ಹಾಡ್ಬೇಕು ಅನ್ಸುತ್ತೋ ಅವಾಗ ಹಾಡು
ಅವಳು : Hmmmmmm
ಅವನು : Good Night ಅವಳು : Good Night
ಅವಳು : Sweet Dreams... Take Care
ಅವನು : (ಜೀವ ಉಳೀತು..) Sweet Dreams to u too

ಸ್ವಲ್ಪ ಟೈಂ ಆದ್ಮೇಲೆ, ಅವಳು ಅವನಿಗೆ ಕಾಲ್ ಮಾಡ್ತಾಳೆ, ಅವನು (ಬಿಡಿ, ಅವಳೇನು ಕಾಲ್ ಮಾಡಲ್ಲಾ, ಬರೀ ಮಿಸ್ಡ್ ಕಾಲ್ ಕೇಸು)

ಅವಳು : ಹೇಯ್, ಮಲಗಿಬಿಟ್ಯಾ ?
ಅವನು : (ಇಲ್ಲಾ, ಕರೆಂಟು ಕಂಡು ಹಿಡೀತಾ ಇದೀನಿ )ಇಲ್ಲಾ ಕಣೋ...
ಅವಳು : ಏನ್ ಮಾಡ್ತಾ ಇದ್ಯಾ ?
ಅವನು : (ನಡು ರಾತ್ರಿಲಿ ಏನ್ ಐಸ್-ಪೈಸ್ ಆಡಕ್ಕಾಗತ್ತಾ ?) ಮ್ಯಾಚ್ ನೋಡ್ತಾ ಇದ್ದೆ
ಅವಳು : ಸರಿ, ನೀನು ಮ್ಯಾಚ್ ನೋಡ್ಕೋ
ಅವನು : (ಇದನ್ನ ಹೇಳಕ್ಕಾ ) Hey, its ok.. ಹಳೇ ಮ್ಯಾಚ್ ತಾನೇ, ಪರ್ವಾಗಿಲ್ಲ
ಅವಳು : ಅಲ್ಲಾ, ನಾನು ಹಾಡ್ಲಿಲ್ಲಾ ಅಂತಾ ನಿಂಗೆ ಬೇಜಾರ್ ಆಯ್ತಾ ? Did u feel bad ?

ಇದು ಬಹಳಾ TRICKY ಪ್ರಶ್ನೆ... ಸ್ವಲ್ಪ ಯೋಚನೆ ಮಾಡ್ತಾ ಇದಾನೆ ನಮ್ಮ ಪ್ರೇಮಿ

ಅವನು : ( Bad ಆ ?? This was the luckiest day in my life, since u didnt sing ) Bad ಅಂತಾ ಏನೂ ಇಲ್ಲಾ, ನೀನು comfortable ಆಗಿರ್ಬೇಕು. ನಾಳೆ ಹಾಡ್ತೀನಿ ಅಂದ್ಯಲ್ಲಾ, ಅದಕ್ಕೆ ನಾಳೆಗೆ ಕಾಯ್ತಾ ಇದೀನಿ (ಇವತ್ತು ತಪ್ಪಿಸ್ಕೊಂಡೆ ಅನ್ಕೊಂಡಿದ್ದೆ...)
ಅವಳು ಆ ಹಾಡಿನ 1 stanza ಹಾಡಿ ....
ಅವಳು : ಥೂ..... ಅವನು : ವಾವ್ ... Too Good
ಅವಳು : ಸುಳ್ಳು, ನಂಗೊತ್ತು ನನ್ನ ವಾಯ್ಸು ಎಷ್ಟು ಕಚ್ಚಡವಾಗಿದೆ ಅಂತಾ
ಅವನು : (ನಿಂಗೆ Self - realization ಅನ್ನೋದು ಇದೆ ಅಂತ ಆಯ್ತು) hey... U really sing well ಚಿನ್ನು
ಅವಳು : ಹೋಗೊ.. ಏನೋ ಹೇಳ್ಬೇಕಲ್ಲಾ ಅಂತಾ ಹೇಳ್ತೀಯಾ
ಅವನು : (ಛಿ ಕಳ್ಳೀ, ಕರೆಕ್ಟಾಗಿ ಕಂಡು ಹಿಡಿದುಬಿಟ್ಟೆ ??) ಛೆ ಛೆ, ನಿನ್ ವಾಯ್ಸು ಸರಿ ಇಲ್ದಿದ್ರೆ, ನಾನು ಇಷ್ಟೋತ್ತು ಕೇಳ್ತಾ ಇರ್ಲಿಲ್ಲಾ
ಅವಳು : Hmmmmmm ಅವನು : ನೀನು ಇಷ್ಟು ಚೆನ್ನಾಗಿ ಹಾಡ್ತ್ಯಾ ಅಂತ ಗೊತ್ತೇ ಇರ್ಲಿಲ್ಲಾ (ಮತ್ತೇ ಗೊತ್ತಾಗೋದು ಬೇಡಾ)
ಅವಳು : Hmmm... ಸರಿ, Good Night. ನೀನು ಮಲ್ಕೊ
ಅವನು : (ನಿನ್ನ ಹಾಡು ಕೇಳಿದ ಮೇಲೆ, ಇನ್ನೆಲ್ಲಿಯ ನಿದ್ರೆ ?? ) Good Night
ಅವಳು : Take Care ಅವನು : You Too
ಅವಳು : ಹೇಯ್...
ಅವನು : ( ಭಗವಂತಾ, ಇವತ್ತು ಇವಳು ನನ್ನ ಬಿಡಲ್ಲ ಅನ್ಸುತ್ತೆ... ಗುರುವೇ ಕಾಪಾಡು ) ಹಾಂ, ಹೇಳು
ಅವಳು : ಚಿನ್ನು, ನಿಜ್ವಾಗ್ಲೂ ನನ್ನ ವಾಯ್ಸು ಚೆನ್ನಾಗಿದ್ಯಾ ?
ಅವನು : ( ಯಪ್ಪಾ ದೇವ್ರೇ... ನಿನ್ನ ವಾಯ್ಸು ನೀನೇ ಒಂದ್ಸಲ ರೆಕಾರ್ಡ್ ಮಾಡಿ ಕೇಳು ) ನಿಜವಾಗ್ಲೂ, Of course
ಅವಳು : ಬರೀ ಸುಳ್ಳು ಅವನು : ( ಇವಳಜ್ಜಿ ನಾ ಬಡ್ಯಾ... ಇನ್ನು ಇವಳು ನಿದ್ರೆ ಮಾಡಕ್ಕೆ ಬಿಡ್ಲಿಲ್ಲಾಂದ್ರೆ...) Not at all ಚಿನ್ನಾ, ನೀನ್ ಚೆನ್ನಾಗಿ ಹಾಡ್ತ್ಯಾ... U sing really well
ಅವಳು : Hmm... ಏನೋ ಹೇಳ್ತೀಯಪ್ಪಾ ನೀನು.. ಸರಿ ಚಿನ್ನು, Good Night
ಅವನು : Good Night ( ಜೀವ ಉಳೀತು ಗುರೂ.....)

ಇದಾದ ಮೇಲೂ ಕೂಡಾ ಪಾಪ ಪ್ರೇಮಿಯು ಇನ್ನೂ 1 ಘಂಟೆಯ ಕಾಲ ತನ್ನ ಪ್ರಿಯತಮೆಗೆ ತನ್ನ ಹಾಡಿನ ಬಗ್ಗೆ ಇದ್ದ Doubtಗಳನ್ನು Clear ಮಾಡುತ್ತಾ, ಆಕೆ ಕಳಿಸಿದ SMSಗಳಿಗೆ ಉತ್ತರ ಕೊಡುತ್ತಾ ನಂತರ ಮಲಗಿ ನಿದ್ರೆ ಮಾಡಿದ

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ
http://somari-katte.blogspot.com

  • ಲಲಿತ ಪ್ರಬಂಧ, ಹಾಸ್ಯ
Ornamental seperator
  • Login or register to post comments
  • 378 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2008 - 2:01pm — girish.rajanal

ಉ: ಪ್ರೇಮಿಗಳ ಸಂಭಾಷಣೆ

girish.rajanal's picture

ಶಂಕರ್‍,
ಇದು ವಿಕಾಸ ಹೆಗಡೆ ಬರೆದಿದ್ದು!! ಬೇಕಾದರೆ ಅವರ ಬ್ಲಾಗಲ್ಲೂ (http://vikasavada.blogspot.com)ಇದೆ ನೋಡಿ..
ಸಖತ್ತಾಗಿದೆ. ಅವನಿಗೆ ಬಂದ ಕಮೆಂಟೂ ಸಖತ್ತಾಗಿದ್ವು. ಕಮೆಂಟ್ ಹಾಕಿ ವಿಕಾಸನ್ನ ಎ‌ರ್‍ರಾ ಬಿರ್‍ರಿ ಎಳೆದಾಡಿಬಿಟ್ಟಿದ್ರು. ಅವನೂ ಕೂಡ ಮಹಾ ಪಂಟ ಬಂದಿರೋ ಕಮೆಂಟಿಗೆ ಸಖತ್ತಾಗಿ ಉತ್ತರ ಕೊಟ್ಟಿದ್ದ.

ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
April 24, 2008 - 2:10pm — girish.rajanal

ಉ: ಪ್ರೇಮಿಗಳ ಸಂಭಾಷಣೆ

girish.rajanal's picture

ಮನ್ನಿಸಿ ಶಂಕರ್‍,
ವಿಕಾಸನಿಗೆ ಮಿಂಚಂಚೆಯಲ್ಲಿ ಇಂಗ್ಲೀಷಿನಲ್ಲಿ ಬಂದ ಪತ್ರವನ್ನು ಅವನು ಕನ್ನಡಕ್ಕೆ ಅನುವಾದಿಸಿ ಬರೆದಿದ್ದಾನೆ..
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
  • ಪ್ರಶ್ನೆ 250308.....?
  • ಪ್ರೀತಿಯ ನಂಬಿದೆ ನಾನು, ಮೋಸ ಹೋದೆನು ನಾನು..
  • ಭಾವಬಿಂದು
  • ** ಅರಳಿ ಬಿಡು ಮಲ್ಲೆ ಹೂವೆ **
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!
  • ಕಾರಂತರ ಜೀವಂತ ಪಾತ್ರಗಳು ೬ (೩)
  • ಕಾರಂತರ ಜೀವಂತ ಪಾತ್ರಗಳು ೬ (೨)
  • ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!
  • ವಿಂಡೋಸ್ ಪರ ಸರಕಾರಗಳ ಲಾಬಿ!

ಇತ್ತೀಚಿನ ಪ್ರತಿಕ್ರಿಯೆಗಳು

  • Prabhu Murthy
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 23, 2008 - 12:54am
  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator