ಸಾಯಬೇಕು ಅನ್ನಿಸಿದ ಆ ಕ್ಷಣ
ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.
ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001
ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.
ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.
ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರು
ನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.
ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................
ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು.
"hey roopa what ru doing here. . come let us go down" ಎಂದಳು
" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ
"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "
ಎಂದಳು
" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲ
ಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.

- Login or register to post comments
- 751 hits
- Email this page





RSS:
ಪ್ರತಿಕ್ರಿಯೆಗಳು
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೂಪಾರವರೇ,
ನಿಮ್ಮ ಅನುಭವ ಕಥನವನ್ನು ಓದಿದಾಗ ನನಗೆ ಅನಿಸಿದ್ದು ಯಾವುದೋ ದುರ್ಬಲ ಕ್ಷಣದಲ್ಲಿ, ಮನಸ್ಸು ಖಾಲಿಯಾಗಿಹೋದಾಗ, ಅಸಹಾಯಕತೆ ತಲೆದೋರಿದಾಗ ಜೀವ ತೆಗೆದುಕೊಳ್ಳುವ ಪ್ರಯತ್ನವನ್ನು ಮಾನವ ಮಾಡುತ್ತಾನೆ. ಕೆಲವರು ಅದರಲ್ಲಿ ಯಶಸ್ವಿಯಾದರೂ, ಅದು ಹೊಗಳುವ ಪ್ರಯತ್ನವಲ್ಲ. ಪರಿಸ್ಥಿತಿಯನ್ನು ಎದುರಿಸಲಾಗದ ಹೇಡಿತನ ಎನ್ನಬಹುದು. ಇರಲಿ, ನೀವು ನಿಮ್ಮ ಸ್ನೇಹಿತೆಯ ಮಾತನ್ನು ಕೇಳಿದ್ದಕ್ಕೆ ಅಭಿನಂದನೆಗಳು. ನೀವು ಬದುಕುಳಿದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು.
ಅಂದಹಾಗೆ, ನಾನು ಹೈದರಾಬಾದಿನಲ್ಲಿ ನಮ್ಮ ಬ್ಯಾಂಕಿನ ಪ್ರಮುಖ ಶಾಖೆಯ ಪ್ರಬಂಧಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ದಿನ ನಿತ್ಯವೂ ಒಂದಲ್ಲಾ ಒಂದು ತೊಂದರೆಯನ್ನು ಎದುರಿಸಬೇಕಾಗುತ್ತಿತ್ತು. ಈಗ ಆ ರಾಜ್ಯದ ಬಹು ಪ್ರಮುಖ ಸ್ಥಾನದಲ್ಲಿರುವವರೊಬ್ಬರು ನನಗೆ ಒಂದು ದಿನ ಫೋನಾಯಿಸಿ, ನೀನು ಇಂಥವರಿಗೆ ಇಂತಹ ಹಣ ಸಹಾಯ ಮಾಡದಿದ್ದರೆ, ನಾಳೆ ಬೆಳಗ್ಗೆಯ ಹೊತ್ತಿಗೆ ನಿನ್ನ ದೇಹದ ತುಂಡುಗಳನ್ನು ನಿನ್ನ ಹೆಂಡತಿಗೆ ಕಳುಹಿಸಿಕೊಡುತ್ತೇನೆ, ತಿಳಿದಿರಲಿ ಎಂದು ಹೆದರಿಸಿದ್ದರು. ನಾನು ಅವರ ಮಾತಿಗೆ ಬಗ್ಗಿದ್ದರೆ, ಇಂದು ಕೆಲಸದಿಂದ ವಜಾ ಮಾಡಿಸಿಕೊಂಡು ಮನೆಯಲ್ಲಿ ಕೂರಬೇಕಾಗುತ್ತಿತ್ತು. ಆದ್ದರಿಂದ ನಾವು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ದೇವರು ಯಾವುದಾದರೂ ಒಂದು ದಾರಿಯನ್ನು ಇಟ್ಟೇ ಇರುತ್ತಾನೆ. ಆತ್ಮ ವಿಶ್ವಾಸದಿಂದ ಮುಂದುವರೆಯಬೇಕು ಅಷ್ಟೆ.
ಧನ್ಯವಾದಗಳು. ವಂದನೆಗಳೊಂದಿಗೆ,
ಎ.ವಿ. ನಾಗರಾಜು
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಆತ್ಮಹತ್ಯೆ ನನಗೆ ಹೇಡಿತನ ಅನ್ನಿಸುವುದಿಲ್ಲ. ತೀರ ಅಸಹಾಯಕತೆ, ಜಿಗುಪ್ಸೆ etc. ಅನ್ನಿಸುತ್ತೆ. ಕೆಲವರಿಗೆ ಇದೇ ಮುಕ್ತಿ. ಇನ್ನು ಕೆಲವರಿಗೆ ಇದು ಬಲಿದಾನ. ಏನಾದರೂ ಅಂತ್ಯ ದುರಂತವೆ.
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ನಿಮ್ಮ ಜೀವನದ ಅತಿ ನೋವಿನ ಸಂಗತಿ ಹಂಚಿಕೊಂಡಿದ್ದೀರಿ. ಅದೇ ನೀವು ಬಹಳ ಧರ್ಯಶಾಲಿಗಳೆಂದು ಸಾರಿ ಹೇಳುತ್ತೆ. ಏಕೆಂದರೆ, ಮನುಷ್ಯ ಮುಖವಾಡ ಕಳಚಲೂ ಸಹ ಗುಂಡಿಗೆ ಗಟ್ಟಿ ಇರಬೇಕು. ನಾನಂತೂ ಇನ್ನೂ ಕನ್ನಡಿಯ ಮುಂದೆ ನಿಲ್ಲಲೂ ಭಯಪಡುವವಳು...ನಿಮ್ಮ ಆ ಸ್ನೇಹಿತೆಗೆ ನನ್ನದೂ ಒಂದು ನಮನ, ನಿಮ್ಮನ್ನು ಇಲ್ಲಿ ಭೇಟಿ ಮಾಡಲು ಉಳಿಸಿದ್ದಕ್ಕಾಗಿ. ನೆನಪಿಡಿ, ಈ ಜೀವನ ಬೇವು ಬೆಲ್ಲ, ಬಲ್ಲಾತಗೆ ನೋವೆ ಇಲ್ಲ!
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಆತ್ಮೀಯ ಕಲ್ಪನಾರವರೆ
ನಿಮ್ಮ ಮಾತುಗಳಿಗೆ ಧನ್ಯವಾದಗಳು
ಚಿಕ್ಕ ವಯಸಿನಲ್ಲಿಯೇ ಏನೇನೂ ಸಾಧನೆ ಮಾಡಿದ, ಮಾದುತ್ತಿರುವ supreeth ,hari prasad nadig , rajesh hegde ಅಥವ ಅಂತಹ ಇನ್ನೂ ಕೆಲವರನ್ನು ನೋಡಿದಾಗ
ನಾನೇನು ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಈಗಲೂ ಕಾಡುತ್ತವೆ. ಮತ್ತು ಅವರ ಜೀವನೋತ್ಸಾಹ ಕಂಡಾಗ ಅಭಿಮಾನ ಹಾಗು ಅಚ್ಚರಿಯಾಗುತ್ತವೆ.
ಕಾಲು ಶತಮಾನ ದಾಟಿದರೂ ಇನ್ನೂ ಸಾಧನೆ ಎಂಬ ಮರೀಚೀಕೆಯ ಹಿಂದೆಯೆ ಇದ್ದೇನೆ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೀ ರೂಪಾಬಿಎಲರಾವ್, ನೀವು ನಮ್ಮ ಮುರಳಿಯನ್ನು ಭೇಟಿಯಾಗಲೇಬೇಕು.
ರೂಪಾಬಿರಾವ್ ಅವರೆ, ನಾವು ಕೆಲವು ಗೆಳೆಯರು ಇಂಜಿನಿಯರಿಂಗ್ ಸೇರಿದಾಗ ಒಂದು ಡಿಸ್ಕಶನ್ ಮಾಡಿದ್ವಿ. ಅದು ಹೀಗಿತ್ತು. "ಈಗ ನೋಡ್ರಪ್ಪಾ ನಾವುಗಳು, ಇಂಜಿನಿಯರಿಂಗ್ ಸಖತ್ತಾಗಿ ಮಾಡ್ತೀವಿ ಅಂತಿಟ್ಟುಕೊಳ್ಳೋಣ, ಆದರೂ ದುರದೃಷ್ಟ ದುಡ್ಡೇ ಸಿಗಲ್ಲ, ಅದನ್ನ ಒಬ್ಬ ಹೇಗೆ ಎದುರಿಸಬೇಕು ಅಂತ ?" ಇದು ಟಾಪಿಕ್ಕು. ಆ ಡಿಸ್ಕಶನ್ನಿನಲ್ಲಿ ಒಬ್ಬ ಒಂದು ಮಾತು ಹೇಳಿದ್ದ. "ಏನೇ ಆದರೂ ನಾನು ಆತ್ಮಹತ್ಯೆ ಅಂತೂ ಮಾಡಿಕೊಳ್ಳಲ್ಲಪ್ಪಾ. ಇಂಡಿಯಾದಲ್ಲಿ ಕೆಲವು ಜಾಗಕ್ಕೆ ಹೋದರೆ, ಯಾರು ಏನು ಎತ್ತ ವಿಚಾರಿಸದೆ, ಊಟ ಹಾಕಿ ಕಳಿಸ್ತಾರೆ. ಸಿಕ್ಕಾಪಟ್ಟೆ ಮುದುಡಿಹೋದ ಸಂದರ್ಭದಲ್ಲಿ ಇದಕ್ಕಿಂತ ಇನ್ನೇನು ಬೇಕು ಅಂತ ಹೇಳಿದ್ದ". ಇದು ನಮಗೆ ತುಂಬಾ ನಗು ತರಿಸಿತ್ತಾದರೂ, ಆ ಮಾತುಗಳನ್ನು ತಳ್ಳಿಹಾಕಲು ಸಾಧ್ಯವಾಗಿರಲಿಲ್ಲ.
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೂಪಾ ಅಕ್ಕ,
ಹರಿಪ್ರಸಾದ್, ರಾಜೇಶ್ ಹೆಗಡೆಯವರ ಜೊತೆಗೆ ನನ್ನ ಹೆಸರನ್ನೂ ಸೇರಿಸಿಬಿಟ್ಟಿರುವುದು ನನ್ನನ್ನು ಮುಜುಗರಕ್ಕೆ ಈಡು ಮಾಡಿದೆ. ನಾನು ಮಾಡಿರುವುದು ಹಾಗೂ ಮಾಡುತ್ತಿರುವುದೆಲ್ಲವೂ ಹುಡುಗಾಟವಷ್ಟೇ, ಸಾಧನೆ ಎಂಬ ಹೆಸರು ತುಂಬಾ ಭಾರ ಎನ್ನಿಸುತ್ತದೆ.
ಕಳೇದ ವಾರ ಇಂಗ್ಲೀಷ್ ನಿಯತಕಾಲಿಕೆಯೊಂದರಲ್ಲಿ ಭಾರತದ ಯುವಕರು ಆತ್ಮಹತ್ಯೆ ಮಾಡಿಕೊಳ್ಳವ ‘ಸಾಧನೆ’ಯಲ್ಲಿ ಜಗತ್ತಿನಲ್ಲೇ ನಂಬರ್ ಒನ್ ಸ್ಥಾನದಲ್ಲಿರುವುದನ್ನು ಓದಿದ್ದೆ. ಬಹುತೇಕ ಆತ್ಮಹತ್ಯೆಗಳಿಗೆ ಕಾರಣ ಪರೀಕ್ಷೆಗಳು ಹಾಗೂ ಅವು ಹುಟ್ಟಿಸುವ ಆತಂಕ. ಓದು ಮುಗಿಸಿಕೊಂಡು ಮುಂದೆ ಹೋಗಿರುವವರಿಗೆ ನಮ್ಮ ಈ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ಹುಟ್ಟಿಸುತ್ತಿರುವ ಆತಂಕವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದು.
ಅದರಲ್ಲೂ ಈ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಕೇಳಿದ್ದನ್ನೆಲ್ಲಾ ಪಡೆಯುತ್ತಾ ಬೆಳೆದ ಮಗುವಿಗೆ ಸೋಲೆಂಬುದೇ ತಿಳಿದಿರುವುದಿಲ್ಲ, ಸೋಲನ್ನು ಒಪ್ಪಿಕೊಳ್ಳುವುದು, ಅದರೊಂದಿಗೆ ಅನುಸಂಧಾನ ಮಾಡಿಕೊಳ್ಳುವುದು ಹೇಗೆ ಎಂಬ ಅನುಭವವೇ ಇರುವುದಿಲ್ಲ. ಹೀಗಾಗಿ ಅವರಿಗೆ ಸೋಲೆಂಬುದು ತಮ್ಮ ಜೀವಕ್ಕಿಂತ, ತಮ್ಮ ಬದುಕಿನ ಇತರೆಲ್ಲಾ ಸಂತೋಷಗಳಿಗಿಂತ ಮಹತ್ವದ ಅಂಶವಾಗಿಬಿಡುತ್ತದೆ. ಮೊದಲನೆಯ ತರಗತಿಯಿಂದಲೂ ಕ್ಲಾಸಿಗೆ ಫರ್ಸ್ಟ್ ಬರುತ್ತಿದ್ದ ನನಗೆ ಪಿಯುಗಾಗಿ ಮನೆ ಬಿಟ್ಟು ಹೋದಾಗ ಏಕಾಗ್ರತೆ ಸಾಧ್ಯವಾಗದೆ ಓದು ಹಿಂದುಳಿದಾಗ ನಾನು ಅನುಭವಿಸಿದ ಯಾತನೆಯನ್ನು ನೆನೆದರೆ ಖಿನ್ನನಾಗುತ್ತೇನೆ. ಪರೀಕ್ಷೆ ಮುಗಿದ ಕೂಡಲೆ ಹಾಸ್ಟೆಲ್ಲಿನ ಬಾತ್ ರೂಮ್ ಬಾಗಿಲು ಗಿಡಿದು ಕೊಂಡು ಜೋರಾಗಿ ನೀರು ಬಿಟ್ಟುಕೊಂಡು ಮನಸಾರೆ ಅತ್ತಿದ್ದೇನೆ, ಮುಷ್ಟಿ ಬಿಗಿಯಾಗಿಸಿಕೊಂಡು ಗೋಡೆಗಳನ್ನು ಗುದ್ದಿ ನನ್ನ ಭಾವೋದ್ವೇಗವನ್ನು ಹರಿಬಿಟ್ಟಿದ್ದೇನೆ. ಅದೆಷ್ಟು ಬಾರಿ ನಾನು ಈ ಕ್ಷಣವೇ ಇಲ್ಲವಾಗಿಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕಲ್ಪಿಸಿಕೊಂಡಿದ್ದೇನೆ. ಆದರೆ ಅದ್ಯಾವ ಜೀವನ ಮೋಹವೋ, ನನಗೆಂದೂ ಜೀವವನ್ನು ತೆಗೆದುಕೊಳ್ಳುವುದು ಪ್ರತಿ ಗುರುವಾರ ವಿಶ್ವೇಶ್ವರ ಭಟ್ಟರ ‘ನೂರೆಂಟು ಮಾತು’ ಅಂಕಣಕ್ಕಾಗಿ ಕಾಯುವುದಕ್ಕಿಂತ ಮುಖ್ಯ ಎನ್ನಿಸಲೇ ಇಲ್ಲ!
ನಿಮ್ಮ ಅನುಭವ ನನ್ನಲ್ಲಿ ಹುಟ್ಟಿಸಿದ ನೆನಪುಗಳಿವು....
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಸುಪ್ರೀತ್ರ್
ನಿಮ್ಮ ಈ ಬರವಣಿಗೆ ನಿಮಗೆ ಸಮಾಜದ ಮೇಲೆ ಇರುವ ಕಳಕಳಿ ನಿಮ್ಮ ಬ್ಲಾಗ್‌ಗಳಿಂದ ಸ್ಪಷ್ಟವಾಗಿವೆ ಈ ಹದಿನೆಂಟು ಹತ್ತೊಂಬತ್ತು ವಯಸಿಗೇ ಓದಿನ ಜೊತೆ ಪತ್ರಿಕೆಯೊಂದರ ಸಂಪಾದಕತ್ವನ ಜವಾಬ್ಧಾರಿ ಕಡಿಮೆಯೇನಲ್ಲ ಆದ್ದರಿಂದ ನಿಮ್ಮ ಕೆಲಸ ನನಗೆ ಸಾಧನೆಯೆಂದೇ ತೋರಿದೆ.
ಕ್ಲಬ್ಬ್ಬು ಪಬ್ಬು , ಹುಡುಗಿಯರು ಎಂದು ಅಲೆಯುವ ಯುವಜನಾಂಗದಲ್ಲಿ ಅವೆಲ್ಲವುಗಳ ಮಧ್ಯದಲ್ಲೂ ನಿಮ್ಮಿರುವಿಕೆ ಸಾರುತ್ತಿರುವುದೇ ಸಾಧನೆ.
ಹದಿವಯಸಿನವರು ನಿಮ್ಮಿಂದ ಕಲಿಯಬಹುದಾದದ್ದು ಬಹಳಷ್ಟು ಇವೆ
http://thereda-mana.blogspot.com/
ರೂಪ
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೂಪಾರವರ ಬರಹ ಮತ್ತು ನಿಮ್ಮ ಪ್ರತಿಕ್ರಿಯೆ ಎರಡನ್ನೂ ಓದಿದೆ. ಬಹುಷಃ ಎಲ್ಲರ ಬದುಕಿನಲ್ಲೂ ಒಂದಲ್ಲಾ ಒಂದು ಘಟ್ಟದಲ್ಲಿ ‘ಯಾಕೆ ಬದುಕಬೇಕು ಇನ್ನು’ ಎನ್ನುವಂಥ ಸಂಕಟ, ನಿರಾಶೆ ಮನಸ್ಸನ್ನು ಆವರಿಸುವುದು ಇದ್ದೇ ಇರುತ್ತದೇನೋ. ಸೋಲು, ಅಪಮಾನ ಅಥವಾ ಅಂಥದ್ದರ ಭೀತಿ, ಅಸಹಾಯಕ ಸ್ಥಿತಿ, ಪಾಪಪ್ರಜ್ಞೆ, ಹಠಮಾರಿತನ ಮತ್ತು ಮೂರ್ಖತನಕ್ಕೆ ಕೂಡ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಬರುವವರಿದ್ದಾರೆ. ನಿಮ್ಮಂತೆ, ರೂಪಾರವರಂತೆ ಬದುಕನ್ನು ಕಳೆದುಕೊಂಡು ಬಿಡಬಹುದಾದ ಆ ಒಂದು ಅನಿಷ್ಟ ಕ್ಷಣವನ್ನು ಹಾದುಬಂದವರು, ನಮ್ಮಂಥವರು ಆತ್ಮಹತ್ಯೆ ಹೇಡಿತನ, ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಬೇಕು, ಈಸಬೇಕು ಇದ್ದು ಜೈಸಬೇಕು ಎಂದೆಲ್ಲ ಎಷ್ಟೇ ಹೇಳಿದರೂ ಆತ್ಮಹತ್ಯೆ ನಡೆಯುತ್ತಲೇ ಇದೆ. ಇವರ ಸಾವಿಗೆ ಬದುಕಿರುವ ನಾವೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರು; ಇವರು ಎಸೆದು ಹೋಗುತ್ತಿರುವುದು ನಾವೂ ನೀವೂ ಸೇರಿ ನಿರ್ಮಿಸಿರುವ ಜಗತ್ತನ್ನು, ಪರಿಸ್ಥಿತಿಯನ್ನು. ಪ್ರತಿಯೊಂದು ಆತ್ಮಹತ್ಯೆಯೂ ಕಾಡುತ್ತ ಉಳಿಯುತ್ತದೆ, ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸಿ ಹೋಗುತ್ತದೆ. ಹೇಳಿ ಹೋಗು ಕಾರಣಾ ಎನ್ನುವ ಆರ್ತ ಹಾಡು ಹೃದಯದಿಂದ ಚೀರಿಡುತ್ತಲೇ ಇರುತ್ತದೆ.
ನಾನು ಕಂಡಂತೆ ಆತ್ಮಹತ್ಯೆಯ ನಿರ್ಧಾರ ನಿಧಾನವಾಗಿ, ಹಂತಗಳಲ್ಲಿ ಮತ್ತು ಸುಮಾರು ಹದಿನೈದು ಇಪ್ಪತ್ತು ದಿನಗಳಲ್ಲಿ ಮೂಡಿ ಗಟ್ಟಿಯಾಗುತ್ತದೆಯೇ ಹೊರತು ಅಚಾನಕವಾಗಿ ಮೂಡುವುದಿಲ್ಲ. ಹಾಗೆ ಕಂಡುಬರುವ ಸಂದರ್ಭಗಳಲ್ಲೂ ಒಂದು ಆತ್ಮಹತ್ಯಾತ್ಮಕ ನಿಲುವು ಅಂಥ ವ್ಯಕ್ತಿಯ ಸುಪ್ತಪ್ರಜ್ಞೆಯಲ್ಲಿ ಕೆಲವು ಕಾಲದಿಂದಲೂ ಹೆಡೆಯಾಡಿಸುತ್ತ ಇದ್ದಿರುತ್ತದೆ. ಅದು ಇತರರ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಒಮ್ಮೆ ಅಂಥ ನಿರ್ಧಾರಕ್ಕೆ ಬಂದ ವ್ಯಕ್ತಿ ಎಲ್ಲ ಬುದ್ಧಿಮಾತು, ಸಾಂತ್ವನ, ಧೈರ್ಯದ ಮಾತುಗಳಿಗೆ ಕಿವುಡನಂತೆ ತಲೆಯಾಡಿಸುತ್ತಾನೆಯೇ ಹೊರತು ಸ್ಪಂದಿಸುವುದಿಲ್ಲ ಎನ್ನುವುದು ಗಾಭರಿ ಹುಟ್ಟಿಸುವ ವಿದ್ಯಮಾನ. ನನಗೆ ಹೇಳಬೇಕೆನಿಸಿದ ಮಾತು ಇದು. ನಮ್ಮ ಯಾವ ಮಾತೂ ವಾಸ್ತವವಾಗಿ ಆತ ಆಗಲೇ ಕಟ್ಟಿಕೊಂಡ ನಿರ್ಧಾರದ ಒಂದು ಮೊಟ್ಟೆಯನ್ನು ಒಡೆದು ಅವನ ಮನಸ್ಸಿನ ಒಳಗೆ ಪ್ರವೇಶಿಸುವುದೇ ಇಲ್ಲ. ಆತ ಎಲ್ಲ ಬಾಗಿಲುಗಳನ್ನು ಮುಚ್ಚಿಕೊಂಡು ಬಿಡುವ ಮುನ್ನವೇ ಏನಾದರೂ ಸಾಧ್ಯವೇ ಹೊರತು ಆ ಮೇಲಿನದು ವ್ಯರ್ಥ.
ಆತ್ಮಹತ್ಯೆಯಿಂದ ಆತ ಅಥವಾ ಆಕೆಯ nearest and dearest ಸಂಬಂಧಿಗಳು, ಬಂಧುಗಳು ನಿಜವಾಗಿ ಬದುಕಿದ್ದೂ ಸಾಯುವವರು. post mortem ವಿಧಿಯಿಂದ ತೊಡಗಿ ಉಳಿದ ಬದುಕಿನ ಉದ್ದಕ್ಕೂ ಅವರು ಹೊರುವ ಘೋರ ನರಕದ ಸಣ್ಣ ಕಲ್ಪನೆಯಾದರೂ ನಮಗಿರಬೇಕು. ಆಗ ಬಹುಷಃ ನಮ್ಮ ಆತ್ಮಹತ್ಯೆಯಂಥ ಶಿಕ್ಷೆಯನ್ನು ನಾವು ಬೇರೆಯವರಿಗೆ ಕೊಡಲು ಹಿಂಜರಿಯಬಹುದೇನೋ!
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ನರೇಂದ್ರರೇ,
"ಆತ್ಮಹತ್ಯೆಯಿಂದ ಆತ ಅಥವಾ ಆಕೆಯ nearest and dearest ಸಂಬಂಧಿಗಳು, ಬಂಧುಗಳು ನಿಜವಾಗಿ ಬದುಕಿದ್ದೂ ಸಾಯುವವರು." ಕೆಲವೊಮ್ಮೆ ಈ ಸಂಬಂಧಿಗಳು "dearest" ಆಗಿರುವುದಿಲ್ಲ!
ನಾನು ಹೀಗೂ ಒಮ್ಮೊಮ್ಮೆ ಯೋಚಿಸುತ್ತೇನೆ. ಅಕಸ್ಮಾತ್ ನನಗೆ ಪಾರ್ಶುವಾಯು ತಗುಲಿದರೆ ಅಥವಾ ಕೋಮಾ ಅಥವಾ ಜೀವನ ಪೂರ್ತಿ ಹಾಸಿಗೆಯಲ್ಲಿ ಕೊಳೆಯಬೇಕಾಗುವ ಯಾವುದೇ ಖಾಯಿಲೆ ತಗುಲಿದರೂ ನಾನು ಆತ್ಮಹತ್ಯೆಯನ್ನು ಸರಿ ಅನ್ನುತ್ತೀನೇನೋ? ನನ್ನ ಸಂಸಾರಕ್ಕೆ ಹೊರೆಯಾಗಿ, ಅವರ ಬಾಳೂ ಸ್ಥಗಿತಗೊಳ್ಳುವಂತೆ ಮಾಡುವುದಕ್ಕಿಂತ ಆತ್ಮಹತ್ಯೆ ಮೇಲಲ್ಲವೇ? ಇಂತಹ ಸಮಯದಲ್ಲಿ ಅವರು ಬದುಕಿದ್ದೂ ಸಾಯುವವರಾಗುವುದಿಲ್ಲ, ನಾನು ಸತ್ತ ಮೇಲೆ ಬದುಕುವವರಾಗುತ್ತಾರೆ ಅನ್ನಿಸುತ್ತೆ.
ವಿಪರ್ಯಾಸವೆಂದರೆ, ನಮ್ಮ ಸಮಾಜದಲ್ಲಿ, ಮೇಲೆ ನಾನು ಉಲ್ಲೇಖಿಸಿದ ಯಾವುದೇ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ಕಡಿಮೆ! ಹೆಚ್ಚಾಗಿ ನಾವು ನೋಡುವುದು, ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ ಅಥವಾ ಭಗ್ನಪ್ರೇಮಿ ಅಥವ ದಬ್ಬಾಳಿಕೆಯಲ್ಲಿ ಬೇಸತ್ತ ಗೃಹಿಣಿ. ಇವರೆಲ್ಲಾ ಇನ್ನೂ ಬದುಕಿನಲ್ಲಿ ಕಣ್ಣು ಬಿಡುತ್ತಿರುವವರು, ಆಗಲೇ ತಾಳ್ಮೆ ಕಳೆದುಕೊಂಡು ಹತಾಶೆಯಿಂದ ಕೈಚೆಲ್ಲುತ್ತಾರೆ. ಅದೇ ನೋಡಿ, ನೂರು ವರ್ಷದ ಹಣ್ಣು ಹಣ್ಣು ಮುದುಕರಲ್ಲಿ ಜೀವನಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ
ಇಂತಹ ಯುವಜನಾಂಗಕ್ಕೆ ನೀವು ಹೇಳಿರುವ ಮಾತು ಖಂಡಿತ ಅನ್ವಯವಾಗುತ್ತೆ.
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಸಾರ್
ನಿಮ್ಮ ಪ್ರತಿಕ್ರಿಯೆಗೆ ಧನ್ಯ್ವವಾದಗಳು
ನಾನು ಅನುಭವಿಸಿದಂತ ಈ ಆತ್ಮಹತ್ಯೆ ಅನ್ನುವುದು ಒಂದು ಪ್ರಿ -ಪ್ಲಾನ್ಡ್ ಆಗಿರಲು ಸಾಧ್ಯವಿಲ್ಲ.
ಸಮಯಕ್ಕೆ ಸಂಧರ್ಭಕ್ಕೆ spantenious ಆಗಿ ಬರುವ ಯೋಚನೆ.
ನನ್ನ ವಿಷಯದಲ್ಲಂತೂ ಆ ನನ್ನ ಸ್ನೇಹಿತೆ ಬರದಿದ್ದಲ್ಲಿ ನನ್ನ ಮನಸಿಗೆ ತೋಚಿದ ಆ ಆಲೋಚನೆ ನಿಜ ಮಾಡಿಬಿಡುತಿದ್ದೆ. ಆದರೆ ಆ ಕ್ಶಣಕ್ಕೆ ಸರಿಯಾಗಿ ಅವಳು ಬಂದು ಆ ಆವೇಶವನ್ನು ಮರೆಸಿದಳು. ಅವಳ ಮಾತಿನಿಂದ ನಾನು ಪ್ರಭಾವಿತಳಾಗಿ ಆತ್ಮಹತ್ಯೆಯ ಆಲೊಚನೆ ಕಳೆದುಕೊಂಡೆ ಎಂದರೆ ಅದು ಸುಳ್ಳ್ಳಾಗುತ್ತದೆ. ಆದರೆ ವಾಸ್ತವವನ್ನು ಯೋಚಿಸಲು ನನಗೆ ಸಮಯ ದೊರೆತಂತಾಯಿತು.
ಆದರೆ ಆತ್ಮಹತ್ಯೆ ಮಾಡಿಕೊಳ್ಳುವ್ವರಿಗೆಲ್ಲಾ ಈ ರೀತಿಯ ಸಂಧರ್ಭ ದೊರಕುತ್ತದೆ ಎನ್ನುವಂತಿಲ್ಲ.
ನನ್ನ ಪ್ರಕಾರ ಆ ಒಂದು ಕ್ಶಣವನ್ನು ನಾವು ಕಳೆದವಾದರೆ ಮತ್ತೊಮೆ ಆತ್ಮಹತ್ಯೆ ಎನ್ನುವ ಯೋಚನೆ ಬರುವುದು ಅಪರೂಪ.
ಏನೆ ಆಗಲಿ ಸಾರ್ ನಿಮ್ಮ ಬರವಣಿಗೆ ಶೈಲಿ ಬಹಳ ಚೆನ್ನಾಗಿದೆ
http://thereda-mana.blogspot.com/
ರೂಪ
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಪಾಶ್ಚಾತ್ಯದೇಶಗಳಂತೆ ನಮ್ಮಲ್ಲೂ ತೀವ್ರ ಕಾಯಿಲೆಯಿಂದ ನರಳುತ್ತಿರುವವರಿಗೆ ಅವರ ಸ್ವ ಇಚ್ಚೆಯಂತೆ ದಯಾ ಮರಣ ಕರುಣಿಸುವ ಸೌಲಭ್ಯ ಸರಿಯೇ?. ಇತ್ತೀಚೆಗೆ ಜರ್ಮನಿಯಲ್ಲಿ ಮಹಿಳೆಯೊಬ್ಬಳು ತೀವ್ರ ಕಾಯಿಲೆಯಿಂದ ನರಳುತ್ತಿದ್ದುದರಿಂದ ಮತ್ತು ಅದರಿಂದ ವಿಮುಕ್ತಿ ಇಲ್ಲವೆಂದು ವೈದ್ಯರಿಂದ ಅರಿತಮೇಲೆ ದಯಾಮರಣ ದಯಪಾಲಿಸುವಂತೆ ಅನುಮತಿಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಅಕಸ್ಮಾತ್ ಮತ್ತೊಮ್ಮೆ ಯಾರಾದರೂ ಆತ್ಮ ಹತ್ಯೆ ಮಾಡ್ಕೊಳ್ಳೋ ತೀರ್ಮಾನ ಮಾಡಿದ್ದರೆ ನನ್ನ ಒಮ್ಮ್ಮೆ ಕಾಣುವುದು ...
ಆತ್ಮ ಹತ್ಯೆ ಅ೦ದರೆ ತಮ್ಮನ್ನು ತಾವು ಕೊ೦ದು ಕೊಳ್ಳುವುದಷ್ಟೆ ಅಲ್ಲಾ..ತಮ್ಮ ಅಸ್ಥಿತ್ತ್ವವನ್ನು ತಾವೇ ನಿರಾಕರಿಸುವುದು.
ಇದರ ಬಗ್ಗೆ ಕೃಷ್ಣಾ ಚೆನ್ನಾಗಿ ಮಾತಾಡ್ತಾನೇ !
http://www.bhagavad-gita.org/Gita/verse-13-23.html
ಕ್ಷೇತ್ರ - ಕ್ಷೇತ್ರ ಜ್ಞ ಯೋಗದಲ್ಲಿ ಈ ಮಾತು ಬರುತ್ತೆ.
"ಆರು ತಮ್ಮ ಅಸ್ಥಿತ್ತ್ವದ ಮೂಲ ಸತ್ಯವನ್ನು ಶೋಧಿಸುವರೋ
ಅವರು ನನ್ನನ್ನೇ ಎಲ್ಲೆಲ್ಲೂ ಯಾವಾಗಲೂ ಕಾಣುವರು,
ಇವರು ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಾ ಕೇಳೈ ಅರ್ಜುನ"
ಮತ್ತೊ೦ದು ದೇಹದ ಮೇಲೆ ತೀರಾ ಅಭಿಮಾನ ಉಳ್ಳವರು ಆತ್ಮ ಹತ್ಯೆ ಮಾಡಿಕೊಳ್ಳುವುದು ಹೆಚ್ಚು ! ಸಿಲ್ಕ್ ಸ್ಮಿತಾ - ಮು೦ತಾದ
ಸಿನಿಮಾ ತಾರೆಗಳು ತಮ್ಮ ಜೀವನದಲ್ಲಿ ಅನೇಕ ಯಮದೂತರನ್ನು (ಸಿನಿಮಾ ವಿಲನ್ ಗಳು ) ಅಪ್ಪಿ ಕೊನೆಗೆ ಸಾವನ್ನು
ಅಪ್ಪುವುದು ಯಾಕೆ ಅ೦ತಾ ಯೋಚನೇ ಮಾಡಿದ್ದೆ..
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
"ಅಕಸ್ಮಾತ್ ಮತ್ತೊಮ್ಮೆ ಯಾರಾದರೂ ಆತ್ಮ ಹತ್ಯೆ ಮಾಡ್ಕೊಳ್ಳೋ ತೀರ್ಮಾನ ಮಾಡಿದ್ದರೆ ನನ್ನ ಒಮ್ಮ್ಮೆ ಕಾಣುವುದು ..."
ಮುರಳಿಯವರೆ
ಇದು ಯಾಕೆ ಅಂತ ಅರಿವಾಗಲಿಲ್ಲ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಗುಱುಱಾಜ
www.kannadaguru.blogspot.com
"ಜೀವನವೆ೦ಬ ಪತ್ತೆದಾರಿ ಕಾದ೦ಬರಿ" ಎ೦ಬ ನನ್ನ ಸ೦ಗ್ರಹ ಓದಿ ರೂಪಾ.ಸಾಯಬೇಕೆ೦ಬ ಕ್ಷಣದಿ೦ದ ದೂರ ಬ೦ದವರ ಯಶೋಗಾಥೆ ಗೊತ್ತಾಗುತ್ತದೆ
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಮುರಳಿಯವರೆ
ಇದು ಯಾಕೆ ಅಂತ ಅರಿವಾಗಲಿಲ್ಲ
ನನಗೂ ಒಂದು ಫೋನ್ ಮಾಡೋಕ್ ಹೇಳ್ರಿ..
ಆತ್ಮಹತ್ಯೆ ಅಂದರೇನೆ ತನ್ನನ್ನು ತಾನೇ ಕೊಂದುಕೊಳ್ಳುವದು.. ನರೇಂದ್ರ ಅವರು ಹೇಳಿದಂತೆ ಅದೊಂದು ಪ್ರಿ-ಪ್ಲಾನ್ಡ್ ಮರ್ಡರ್ ಆಗಿರಬಹುದು ಇಲ್ಲ ಆಗಿನ ಮಟ್ಟಿನ ಆತುರದ ತೀರ್ಮಾನ ಆಗಿರಬಹುದು... ಏನೇ ಇದ್ದರು ಕೊಲೆ ಕೊಲೆನೇ...
ಹತ್ತನೇ ತರಗತಿ ಫೇಲ್ ಆದ ಹುಡುಗ/ಹುಡುಗಿಗೆ ತನ್ನನ್ನು ತಾನು ಕೊಂದುಕೊಳ್ಳುವ ವಿಚಾರ ಬರುವ ಮೊದಲು ಅವನ ಕೈಯಲ್ಲಿ ಚಾಕು ಮತ್ತು ಫೇಲ್ ಮಾಡಿದ ಮಾಸ್ತರ್ ಸಿಕ್ಕು ಬಿಟ್ಟರೆ ಅವನ ಸಿಟ್ಟೆಲ್ಲ ಮಾಸ್ತರನ ಕೊಲೆಯಲ್ಲಿ ತೀರುತ್ತೆ.
ಅದು ತನ್ನ ಅಳತೆಗೆ ಮೀರಿದ್ದು ಅನ್ನುವದು ಅವರಿಗೆ ಗೊತ್ತಿರುತ್ತೆ.. ಆಗ ಆ ಸಿಟ್ಟು-ಸೆಡವೆಲ್ಲ ತನ್ನ ಕಡೆಗೇ ತಿರುಗಿ ಸಾಯುವ ವಿಚಾರ ಸುಳಿಯತೊಡಗುತ್ತದೆ;...
ಇದಕ್ಕೆ solution ಅಂದರೆ "ಸಂಸ್ಕಾರ".. ಸಣ್ಣವರಿದ್ದಾಗಿಂದಲೂ ಮಕ್ಕಳಿಗೆ ತಿಳುವಳಿಕೆ ಹೇಳ್ತಿರಬೇಕು, ತಿದ್ದಿ ತೀಡೀ ಗುಣವನ್ನು ಹದಗೊಳಿಸಬೇಕು... ಗೀತಾ ಸಾರ .. ಕಳೆದುಕೊಳ್ಳಲು ನೀನು ತಂದಿರುವದಾದರೂ ಏನು? .. ಅಂತೆಲ್ಲ ಇದೆಯಲ್ಲ... ಅಂತ ಮಾತುಗಳನ್ನು ದನಿ, ಓದುಗಳಲ್ಲಿ ಹೇಳುತ್ತಿರಬೇಕು...
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಇಂತಹ ಸಂದರ್ಭಗಳಲ್ಲಿಯೇ ನಮಗೆ ಸನ್ಮಾನ್ಯ ಡಿವಿಜಿಯವರು ಹತ್ತಿರವಾಗುವುದು.ಅವರು ಹೇಳ್ತಾರೆ.........
ದ್ರಾಕ್ಶಿರಸವೇನಲ್ಲ ಜೀವನದ ತಿರುಳಾರ್ಗುಂ
ಇಕ್ಶುದಂಡದವೊಲದು ಕಷ್ಟ ಭೋಜನವೇ..........
ರದನೋದಯಜ್ವರಕೆ ಸಿಲುಕದಿಹ ಶಿಶುವಿರದು
ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು..........
ಬದುಕೊಂದು ಕದನವೆಂದಂಜಿಬಿಟ್ಟೋಡುವನು
ವಿಧಿಯ ಬಾಯಿಗೆ ಕವಳವಾಗದುಳಿಯುವನೇ?...........
ಅಂದರೆ ಪ್ರತಿಯೊಬ್ಬರಿಗೂ ಜೀವನ ಬೇವು ಬೆಲ್ಲಗಳ ಮಿಶ್ರಣ. ಸುಖವಿರುವಾಗ ನಮಗೆ ಯಾರೂ ಬೇಡ. ಆದರೆ ದುಃಖದಲ್ಲಿ ನಾವು ಆಸರೆಯನ್ನು ಹುಡುಕುತ್ತೇವೆ.ದಾರಿಯನ್ನು ಅರಸುತ್ತೇವೆ. ಆಗ ಮತ್ತೆ ಡಿವಿಜಿ ನೆನಪಾಗ್ತಾರೆ.......
ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡಂ
ಧೀರಪಥವನೆ ಬೆದಕು ಸಕಲ ಸಮಯದೊಡಂ........
ಹೋರು ಧೀರತೆಯಿಂದ ಮೊಂಡುತನದಿಂ ಬೇಡ
ವೈರಹಗೆತನ ಬೇಡ ಹಿರಿನಿಯಮವಿರಲಿ..........
ಏನದಡಮೊಪ್ಪು ಸಿದ್ದನಿರು ಸಕಲಕುಂ
ಎದ್ದು ಕುಣಿಯಲಿ ಕರ್ಮ ದೈವ ನಿದ್ರಿಸಲಿ..........
ಹೀಗೆ ಬಾಳಿಗೆ ಧೈರ್ಯ, ಆತ್ಮವಿಶ್ವಾಸ ಹಾಗೂ ಭರವಸೆ ಕೊಡ್ತಾರೆ......ನನಗೆ.......ನಿಮಗೆ........
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಶಾಲೆಯಲ್ಲಿದ್ದಾಗ ನಾವು ಕೆಲವು ಗೆಳೆಯರು ಯಾವ ರೀತಿ ಸಾಯೋಕಿಷ್ಟಪಡತಿವಿ ಅನ್ನೋದರ ಬಗ್ಗೆ ಚರ್ಚೆ ಮಾಡಿದ್ವಿ, ಆಗ ನನ್ನ ವಿಚಾರ ಹೀಗಿತ್ತು... “ಸಾಯೋದಾದರೇ ನಾನು ಆತ್ಮಹತ್ಯೆ ಮಾಡ್ಕೋಂಡು ಸಾಯೋಕಿಷ್ಟಪಡತಿನಿ, ಆದರೆ ಜೀವನದಲ್ಲಿನ ಜಿಗುಪ್ಸೆ ಇಂದಲ್ಲ, ಜೀವನದಲ್ಲಿ ಇನ್ನೇನೂ ಸಾಧಿಸೋದು ಉಳಿದಿಲ್ಲ ಅನ್ನಿಸಿದ ದಿನ ಆತ್ಮಹತ್ಯೆ ಮಾಡ್ಕೋತಿನಿ (ಆ ದಿನ ಬರೋದೆ ಇಲ್ಲ...) ಹಾಗು ಆತ್ಮಹತ್ಯೆ ಮಾಡ್ಕೋಳೋಕೆ ಚಾಕು, ನೇಣು ಹಾಕೋಳ್ಳುವುದು ಇತ್ಯಾದಿ ರೀತಿಗಳಿಂದ ಗಾಯ, ನೋವು ಆಗೋತ್ತೆ, ಅದಕ್ಕೆ ವಿಷ ಸೇವಿಸೋದು ಸುಲಭ, ಆದರೇ ವಿಷ ಕಹಿ ಇರೋದರಿಂದ ಅದಕ್ಕೆ ಸಕ್ಕರೆ ಸೇರಿಸಿ ಕುಡಿತಿನಿ"
ಇವಾಗ್ಲೂ ಗೆಳೆಯರೇಲ್ಲರೂ ಸೇರದಾಗ ಇದನ್ನ ನೆನಸ್ಕೋಂಡು ನಗ್ತಿರ್ತೀವಿ.
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ನಿಮ್ಮ ಕಥೆಯನ್ನು ಓದಿ ನನ್ನ ದಣಿದ ಕಣ್ಣುಗಳು ಗಳಗಳನೆ ಅಳತೊಡಗಿದವು. ಅದಕ್ಕೆ ಕಾರಣ ನನ್ನ ಸ್ವಂತ ಅನುಭವ ಕೋಡ ಹೌದು.
ಆತ್ಮಹತ್ಯೆ ಪ್ರೀ ಪ್ಳಾಂಡ್ ಅಂತ ಹೇಳೊದಕ್ಕೆ ಅದು ಮಕ್ಕಳ ಹಾವು ಏಣಿ ಆಟ ಅಲ್ಲ, ಮೇಲೆ ಹೋದ ಮೇಲೆ ಮತ್ತೆ ಹಾವಿನ ಬಾಲ ಹಿಡಿದು ಕೆಳಗೆ ಬರೋಣ ಅನ್ನೋಕೆ.
ಅದು ಪ್ರೀ ಪ್ಳಾಂಡ್ ಆಗಿಯೇ ಇದ್ದಲ್ಲಿ ಅದು ಸಮಯದ ದವಡೆಯಲ್ಲಿ,ನೋವಿನ ಜಿಗಿತದಲ್ಲಿ ನರಳಿದ ಮನಸಿನೆ ಮೇಲಿನ ಪರಿಣಾಮವಸ್ಟೆ ಸರಿ. ಅಂತಹ ಸಂದರ್ಭದಲ್ಲಿ ಕ್ಷಣ ಮಾತ್ರವೆ ಅಲ್ಲ. ದಿನಗಳಾದರು ನಮ್ಮ ಮನಸಿನಲ್ಲಿ ಸದಾ ಆತ್ಮಹತ್ಯೆಯ ಪ್ರಕ್ರಿಯೆ ನಡೆಯುತ್ತಲೇ ಇರುತ್ತವೆ.
ಭಾರತ ಅಲ್ಲದೆ, ಮತ್ತೊಂದು ಪಾಶ್ಚಾತ್ಯ ದೇಶವಾದಲ್ಲಿ, ಜನ ಕುಡಿದು, ಕುಡಿದು ಸಾಯುತ್ತಾರೆ. ಇಲ್ಲವೆ ತಲೆಕೆಡಿಸಿಕೊಂಡು ತನಗೆ ಒದಗಿದ ಸ್ತಿತಿಗೆ ಸೇಡು ಎನ್ನುತ್ತ ಸೈಕೊಗಳತರಹ ಸಿಕ್ಕವರನ್ನ ಕೊಲ್ಲುತ್ತಾರೆ.
ಮನಸು ವಾಸ್ತವ ಸ್ತಿತಿಗೆ ನರಳಿ, ಒರಳಿದಾಗೆ ಜೀವದ ಮೇಲಿನ ಜಿಗುಪ್ಸೆ ಹೇಳತೀರದು.
ಒಟ್ಟಿನಲ್ಲಿ ನಿಮ್ಮ ಆ ಸ್ನೇಹಿತೆ ನಿಮ್ಮ ಪಾಲಿಗೆ ದೇವರೇ ಸರಿ. ಹಚ್ಚಿ ಅವರಿಗೆ ತುಪ್ಪದ ದೀಪ.
ನಿಮ್ಮ ಕಥೆ ಕೇಳಿ ನನ್ನ ಜೀವನದಲ್ಲಿ ನಾನು ಅನುಭವಿಸಿದ ಒಂದು ಅನುಭವದ ತಿಣುಕನ್ನ ಸಮಯ ಸಿಕ್ಕಾಗ ಬರೆಯುವೆ.
-ಯುವಪ್ರೇಮಿ