ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

April 26, 2008 - 11:40pm — omshivaprakash

ಲಿನಕ್ಸ್ ಹಬ್ಬ ಮಾಡ್ತೀವಿ ಬನ್ನಿ ಅಂದದ್ದೇ ತಡ ಎಲ್ಲೆಡೆಯಿಂದ ಅದರ ಉಪಯೋಗ ಪಡೀಲಿಕ್ಕೆ, ಹಬ್ಬ ಮಾಡಬೇಕು ಅಂದ್ಕೊಂಡ ನಮ್ಮೆಲ್ಲರಿಗೆ ಸಹಾಯ ಮಾಡಲಿಕ್ಕೆ ಎಲ್ಲೆಡೆಯಿಂದ ಸಂದೇಶಗಳು ನಮಗೆ ಬರಲಾರಂಬಿಸಿದವು. ನಾವಂದು ಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕ್ರಮದ ಸುದ್ದಿಗೆ ಸ್ವಂದಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.

ಕಾರ್ಯಕ್ರಮ ನಾವು ಅಂದುಕೊಂಡಂತೆ ಇಂದು ಬೆಳಗ್ಗೆ ೧೦:೩೦ ಕ್ಕೆ ಸುಂದರ ಐ.ಐ.ಎಸ್.ಸಿ ಕ್ಯಾಂಪಸ್ಸಿನ ಸೂಪರ್ ಕಂಪ್ಯೂಟರ್ ವಿಭಾಗದ ಕಟ್ಟಡದ ೨೦೨ ನೇ ಕೊಠಡಿಯಲ್ಲಿ ಶುರು ಆಯಿತು. ಮುಂಜಾವಿನಲ್ಲೇ ಬಂದ ಸಂಪದ ಬಳಗದ ಗೆಳೆಯರಿಗೆ ಎಲ್ಲರನ್ನ ಬರಮಾಡಿಕೊಂಡು ಅವರಿಗೆ ಲಿನಕ್ಸ್ ಔತಣ ಬಡಿಸಲಿಕ್ಕೆ ಆತುರ ಮತ್ತು ಕಾತುರ. ಬಂದ ತಕ್ಷಣ ಗ್ನೂ/ಲಿನಕ್ಸ್ ಹಬ್ಬದ ಶುಬ್ರ ಟಿ-ಶರ್ಟ್ ಹಾಕಿಕೊಂಡು ಹೇಗೆ ಎಲ್ಲವನ್ನ ನಿಭಾಯಿಸ ಬೇಕು ಅನ್ನೋದನ್ನ ಪಟ ಪಟನೆ ಎಲ್ಲರಿಗೆ ಅರುಹಿದ ಹರಿ ಮತ್ತೆ ಕೆಲವರು ರೆಜಸ್ಟ್ರೇಷನ್ ಡೆಸ್ಕ್ ನ ಕಡೆ, ಐ.ಐ.ಎಸ್.ಸಿ ಗೇಟಿನ ಕಡೆ ಕಾಲು ಹಾಕಿದರು. ಉಳಿದ ನಾವೆಲ್ಲ, ರೆಜಿಸ್ಟ್ರೇಷನ್ ಕಿಟ್, ನೆಟ್ವರ್ಕ್, ಎಲೆಕ್ಟ್ರಿಸಿಟಿ, ಪ್ರೊಜೆಕ್ಟರ್, ಸಿ.ಡಿ ಅಂತ ಒಂದೊಂದೇ ಕೆಲಸಗಳನ್ನಹಂಚಿ ಕೊಂಡು ತಯಾರಗುತ್ತಿರುವಷ್ಟರಲ್ಲೆ, ಹೊತ್ತು ಕಳೆದು ಹಬ್ಬಕ್ಕೆ ಬಂಧುಗಳು ಆಗಮಿಸಲಿಕ್ಕೆ ಶುರುಮಾಡಿದರು. ನಮ್ಮ ಕೆಲಸ ಶುರು.

ಎಲ್ಲರಿಗೂ ನಾವುಗಳು ಸಿದ್ದ ಪಡಿಸಿದ ಸಿ.ಡಿ ಕೊಟ್ಟು, ಎಲ್ಲರನ್ನ ಲಿನಕ್ಸ್ ಇನ್ಸ್ಟಾಲೇಷನ್ ಗೆ ಅಣಿ ಪಡಿಸೋ ಹೊತ್ತಿಗೆ, ನಮ್ಮ ಹರಿ ಮತ್ತು ಶಶಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಏತಕ್ಕೆ ಗ್ನು/ಲಿನಕ್ಸ್ ಹಬ್ಬ ಆಚರಿಸುತ್ತಿದ್ದೇವೆ ಅನ್ನೋದನ್ನ ಎಲ್ಲರ ಮುಂದೆ ಬಿಡಿಸಿ ಹೇಳಿದರು. ಹಬ್ಬದ ಸಲಹೆಯನ್ನ ಮುಂದಿಟ್ಟ ಶ್ರೀನಿಧಿ ಮಾತನಾಡಿ, ಬಸ್ ನಲ್ಲಿ ನಿದ್ದೆ ಮಾಡುವ ಸಮಯದಲ್ಲಿ ಅದು ತಮಗೆ ಹೊಳೆದ ಬಗೆಯನ್ನ ವಿವರಿಸಿ ಹೇಗೆ ಇದು ಎಲ್ಲರಿಗೆ ತಂತ್ರಾಂಶವನ್ನ, ತಂತ್ರಜ್ಞಾನ ಜನ ಸಾಮಾನ್ಯನ ಹತ್ತಿರ ಹೇಗೆ ತರಬಲ್ಲದು ಅನ್ನೋದನ್ನ ವಿವರಿಸಿದರು. ನಂತರ ಇನ್ಸ್ತಾಲೇಷನ್ ಹ್ಯಾಗೆ ಮಾಡೋದು ಅನ್ನೂದನ್ನ ಎಲ್ಲರಿಗೆ ವಿವರಿಸಿದರು.

ಹತ್ತು ಹಲವು ಬಗೆಯ ಲ್ಯಾಪ್ ಟಾಪ್ ಗಳು, ಒಂದೆರಡು ಡೆಸ್ಕ್ಟಾಪ್ ಗಳೂ ಕೂಡ ಐ.ಐ.ಎಸ್.ಸಿ ಯ ಮೆಟ್ಟಿಲನ್ನ ಹತ್ತಿದವು. ಇಲ್ಲಿ ಆಲ್ಲಿ ಕಾಣಿಸಿ ಕೊಂಡ ಕೆಲವು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ತೊಂದರೆಗಳನ್ನ ಬಿಟ್ಟರೆ ಮತ್ತೆಲ್ಲರೂ ಕನ್ನಡವನ್ನ ಹಲವು ತಂತ್ರಾಂಶಗಳ ಮೇಲೆ ಉಪಯೋಗಿಸಿ ತಲೆದೂಗಿಸಿದರು. "ಹೇ! ಕನ್ನಡ. ನನಗೆ ಇನ್ಸ್ರಿಪ್ಟ್ ಬೇಕು, KGP ಬೇಕು, ನುಡಿ ತರ ಟೈಪ್ ಮಾಡಬೇಕು' ಅನ್ನೋದು ಕೇಳಿ ಬಂದ್ರೆ, "ಓಕೆ! ಇದೋ ನೋಡಿ ಈಗಾಗಲೇ ಅದನ್ನ ನಿಮ್ಮ ಕಂಪ್ಯೂಟರಿನಲ್ಲಿ ಅದು ಇದೆ" ಅಂತ ಎಲ್ಲರಿಗೆ ತಿಳಿಸಿ ಉಪಯೋಗಿಸಲಿಕ್ಕೆ ಎಲ್ಲರನ್ನು ಹುರಿದುಂಬಿಸಿತು ತಂಡ. ಕೆಲವರು ಮೊದಲ ಬಾರಿಗೆ ಕನ್ನಡವನ್ನ ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಕೊಳ್ಳಲು ಕಲಿತು ಖುಶಿ ಪಟ್ಟರು.

ಇದೆಲ್ಲದರ ಮದ್ಯೆ ಸಮಯವನ್ನ ಮರೆತ ಎಲ್ಲರಿಗೆ ಹೊಟ್ಟೆ ಚುರುಗುಟ್ಟುವಷ್ಟರಲ್ಲಿ ಘಂಟೆ ೨. ಸಣ್ಣ ಸಣ್ಣ ಗುಂಪುಗಳಲ್ಲಿ ನಾವೂ ಕೂಡ ಹೊರ ಹೋಗಿ ಐ.ಐ.ಎಸ್.ಸಿ ನಲ್ಲಿನ ಸುಂದರವಾದ ಹೋಟೆಲ್ "ನೇಸರ" ದಲ್ಲಿ ಊಟ ಮಾಡಿದೆವು. ಆಗಲೂ ಏನಾಯ್ತು, ಹೇಗೆ ನಡೀತು, ಮುಂದೆ ಬರೋರಿಗೆ ಹೇಗೆ ಡೆಮೋ ಕೊಡ ಬೇಕು ಅನ್ನೋ ಚರ್ಚೆ. ತುಂಬಾ ಜನ ಬಂದದ್ದರಿಂದ ಇನ್ಸ್ಟಾಲೇಷನ್ನಲ್ಲಿ ಭಾಗವಹಿಸಲಿಕ್ಕೆ ಬಂದವರಿಗೆ
ಕಾರ್ಯಕ್ರಮದಲ್ಲಿ ಅನುವು ಮಾಡಿಕೊಟ್ಟಿದ್ದರಿಂದ ಕೆಲವರು ಹೊರನೆಡೆಯ ಬೇಕಾಯ್ತು ಕೂಡ,
ಇದೆಲ್ಲ ಒಳಗಿದ್ದ ನಮಗೆ ತಿಳಿಯುವುದರೊಳಗೆ ಮಧ್ಯಾನ ಕಳೆದಿತ್ತು. ಅವರೆಲ್ಲರೂ ನಮಗೆ
ಐ.ಐ.ಎಸ್.ಸಿ ಕಾರ್ಯಕ್ರಮ ನೆಡೆಸಲು ಕಲ್ಪಿಸಿದ್ದ ಸೀಮಿತ ಶಕ್ತಿಯನ್ನ ಅರ್ಥಸಿ ಕೊಂಡು
ನಮ್ಮೊಂಡನೆ ಸಹಕರಿಸಿದ್ದಾರೆ, ಅವರಿಗೂ ನಮ್ಮೆಲ್ಲರ ಧನ್ಯವಾದಗಳು. ಬೇಜಾರ್ ಮಾಡ್ಕೂಬೇಡಿ ನಿಮ್ಮನ್ನ ಮತ್ತೊಮ್ಮೆ ಹಬ್ಬಕ್ಕೇ ಕರೆದೇ ಕರೀತೀವಿ. ಹಾ! ನಿಮಗೆ ಸಿ.ಡಿ ತಲಿಪಿಸೋದನ್ನ ಮರೆಯೊಲ್ಲ.

ಸರ ಸರ ಹಿಂತಿರುಗಿ ನೆಡೆದು ಬಂದ ನಮಗೆ ಕಂಡಿದ್ದು ಬೆಳಗ್ಗೆ ಇದ್ದಕ್ಕಿಂತ ಹೆಚ್ಚಿದ್ದ ಜನ. ತನಂತಾನೆ ಎಲ್ಲರೂ ಕೆಲಸಕ್ಕೆ ಸಜ್ಜು, ಮತ್ತೊಂದು ಪ್ರೆಸೆಂಟೆಷನ್, ಪ್ರಶ್ನಾವಳಿ.


ಲಿನಕ್ಸ್ನಲ್ಲಿ ಯಾವ ಯಾವ ತಂತ್ರಾಂಶಗಳಿವೆ, ಹೇಗೆ, ಎಲ್ಲಿ ಅದನ್ನ ಪಡೀ ಬಹುದು ಅನ್ನೋದನ್ನ ತಿಳಿಸಿ ಕೊಟ್ವಿ. ನಿಮ್ಮವೆಬ್ ಕ್ಯಾಮರ, ಸ್ಪ್ರೆಡ್ ಶೀಟ್, ಡಾಕ್ಯುಮೆಂಟ್ ಎಡಿಟರ್, ವಿಡಿಯೋ ಎಡಿಟರ್, ಆಡಿಯೋ ಎಡಿಟರ್, ಮೈ ನವಿರೇಳಿಸುವ ವಿಂಡೋಸ್ ವಿಸ್ತಾ ಗಿಂತಲೂ ಮುಂಚೆಯೇ ಜಗತ್ತಿಗೆ ೩-ಡಿ ಆನಿಮೇಷನ್ಇರುವ ವಿಂಡೋಮ್ಯಾನೇಜರ್ ತಂದ ಕಾಂಪಿಜ್ ನ ಸಣ್ಣ ಡೆಮೋಎಲ್ಲರ ಮುಂದಿಡಲಾಯಿತು.

ಫೆಡೋರಾದ ಪ್ರಸಾದ್ ಅವರು, ಫೆಡೋರಾದಲ್ಲಿ ಈಗಾಗಲೇ ಕನ್ನಡದ ಬಗೆಗಾಗಿರುವ ಕೆಲಸಗಳನ್ನ, ಇಡೀ ಆಪರೇಟಿಂಗ್ ಸಿಸ್ಟಂ ನಲ್ಲಿ ಕನ್ನಡದಲ್ಲಿ ಹೇಗೆ ನೋಡೋದು ಅನ್ನೋದನ್ನ ತಿಳಿಸಿ ಕೊಟ್ಟು, ನಾವೆಲ್ಲ ಕೈಜೋಡಿಸಿದರೆ, ಎಲ್ಲ ಮೆನು ಮತ್ತು ವಿಂಡೋಗಳನ್ನ ಸಂಪೂರ್ಣ ಕನ್ನಡದಲ್ಲೇ ಬಹು ಬೇಗ ನೋಡ ಬಹುದು ಎಂದರು.

ಡೇಲ್ ನ ಪೀಟರ್ ಗೆ ಲಿನಕ್ಸ್ ಉಪಯೋಗಿಸೋರನ್ನ ಕಂಡರೆ ಎಲ್ಲಿಲ್ಲದ ಖುಶಿ, ಬೆಳಗ್ಗೆನೇ ಬಂದು ನಮ್ಮೆಲ್ಲರೊಂದಿಗೆ ಬೆರತ ಅವರು ಲಿನಕ್ಸ್ ತಮ್ಮ ಮನೆಯಲ್ಲಿ ತಮ್ಮ ಪತ್ನಿ, ಅಪ್ಪ ಅಮ್ಮ ಮತ್ತು ಮಕ್ಕಳು ಎಲ್ಲರಿಗೂ ಹೇಗೆ ಉಪಯುಕ್ತವಾಗಿದೆ ಅನ್ನೋದನ್ನ ಹೇಳಿದರು.

ಕೊನೆಗೆ, ಬಂದವರೆಲ್ಲಿ ಅನೇಕರು ಮಾತನಾಡಿ ಇಂತಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ, ಕೆಲ ಸರ್ಕಾರಿ ಕಚೇರಿಗಳಲ್ಲಿ, ಮತ್ತಿತರ ಸ್ಥಳಗಳಲ್ಲಾದರೆ ಮತ್ತೂ ಉತ್ತಮ ನಾವೂ ನಿಮ್ಮೊಡನೆ ಕೈ ಜೋಡಿಸ್ತೇವೆ ಎಂದದ್ದು ತಂಡದ ಎಲ್ಲರಿಗೂ ಮುಂದೆ ನಾವು ಮುಂದಿನ ಜವಾಬ್ದಾರಿಯನ್ನ ನೆನಪಿಸುವುದರೊಂದಿಗೆ, ಹುರಿದುಂಬಿಸಿತು. ಹಸನ್ಮುಖರಾಗಿ ಒಬ್ಬೊಬ್ಬರೆ ಎಲ್ಲರೊಂದಿಗೆ ಕೆಲಕ್ಷಣಗಳನ್ನ ಕಳೆದು, ತಮ್ಮ ಲ್ಯಾಪ್ಟಾಪ್ ಗಳಲ್ಲಿಲಿನಕ್ಸ್ ಇನ್ಸ್ಟಾಲ್ ಮಾಡಿಸಿ ಕೊಂಡು ಹೊರನೆಡೆದ ಎಲ್ಲರನ್ನ ನೋಡಿ ನಮಗೆಲ್ಲ ಸಂತಸವಾಯಿತು. ಹರಿ, ಎಲ್ಲರಿಗೆ, ಗುಂಪಾಗಿ ಹೋಗ್ಬೇಡಿ ಒಬ್ಬೊಬ್ಬರೇ ಹೋಗಿ ಅಂತ ಮೊದಲೇ ಹೇಳೋದನ್ನ ಮರೀಲಿಲ್ಲ

ಹಬ್ಬದ ಪ್ರತಿಯೊಂದೂ ಕ್ಷಣಗಳನ್ನೂ ಲೇಖನವಾಗಿ ಬರೀ ಬಹುದು. ಅಷ್ಟೊಂದನ್ನ ಈ ಹಬ್ಬ ನಮ್ಮ ಮುಂದಿಟ್ಟಿದೆ, ಖುಷಿ ಕೊಟ್ಟಿದೆ, ಕಲಿಸಿದೆ. ಕಾರ್ರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ನಿಮಗೆ ಹಬ್ಬದ ಬಗ್ಗೆ ಏನೆನ್ನಿಸಿತು ಅಂತ ಬರೆದರೆ, ನಮಗೆಲ್ಲರಿಗೂ ಮುಂದಿನ ಬಾರಿ ಕಾರ್ಯಕ್ರಮ ಆಯೋಜಿಸೊದಕ್ಕೆ ತುಂಬಾ ಸಹಾಯವಾಗ್ತದೆ.

ಹಬ್ಬಕ್ಕೆ ಬಂದು, ನಮ್ಮೆಲ್ಲರೊಡನೆ ಬೆರೆತು ಕೊಂಚ ಕ್ಷಣಗಳನ್ನ ಕಳೆದೆ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ನಮಗೆ ಕಾರ್ಯಕ್ರಮ ನೆಡೆಸಲು ಅನುವು ಮಾಡಿಕೊಟ್ಟ ಐ.ಐ.ಎಸ್.ಸಿ ಯ ಆಡಳಿತ ಮಂಡಳಿಗೆ ಅಲ್ಲಿನ ಅಧಿಕಾರಿವರ್ಗದ ಎಲ್ಲರಿಗೂ ನಮ್ಮ ನುಡಿ ನಮನಗಳು. ಇದೆಲ್ಲದರ ನಡುವೆ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸಿನ ಜವಾಬ್ದಾರಿಯನ್ನ ವಹಿಸಿಕೊಂಡು ಎಲ್ಲವೂ ಸುಲಭವಾಗಿ ನೆಡೆಯುವಂತೆ ಮಾಡಿದ ಡಾಟ ಲೈಫ್ ಸೈಕಲ್ ಕಂಪನಿಯ ಸಂಜಯ್ ಅವರಿಗೂ ತುಂಬು ಮನಸ್ಸಿನ ಧನ್ಯವಾದಗಳು.

ಹಬ್ಬ ಸಾಂಗವಾಗಿ ನೆಡೆಯಲು ಸಹಾಯಮಾಡಿದ ತಂಡದ ಎಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಆತ್ಮೀಯ ಧನ್ಯವಾದಗಳು ಕೂಡ. ಇದೇ ತಂಡ ಇನ್ನೂ ಅನೇಕ ಕಾರ್ಯಕ್ರಮಗಳನ್ನ ಸಂಪದಿಗರ ಮುಂದಿಡಲಿ ಎಂದು ಹಾರೈಸುತ್ತ.


ನಿಮ್ಮ,

ಓಂ ಶಿವಪ್ರಕಾಶ್.

ಕೆಲವು ಫೋಟೋಗಳು ಇಲ್ಲಿವೆ:
http://picasaweb.google.com/omshivaprakash/GnuLinuxHabba

  • ಮಾಹಿತಿ ಫಲಕ
~.~
  • Login or register to post comments
  • 805 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 27, 2008 - 12:15am — ravikh

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

ravikh's picture

ಈ ಹಬ್ಬಾನೇ ಒಂದು ಸೂಪರ್ ಸಾಧನೆ ಬಿಡ್ರಿ... ಈ ಹಬ್ಬಾನ ಈ ಸಲ miss ಮಾಡ್ಕೊಂಡೋರ್ಗೆ ಮತ್ತೊಮ್ಮೆ ಹಬ್ಬ ಮಾಡಿ ಕರಿಯೋಣ... ಇನ್ನು ಕೆಲ ತಿಂಗಳಲ್ಲಿ...

ವಂದನೆಗಳೊಂದಿಗೆ,
ರವಿಶಂಕರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 1:37pm — rajx

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

rajx's picture

As I missed the sessions, I am curious to see the demos of the event. can any one please update it, stuffs other than installation also if possible.

this tool may help
http://xvidcap.sourceforge.net/#intro

--rajx

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 10:49am — Sunil Jayaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

Sunil Jayaprakash's picture

ಕೊಸರು - ಈ ನಮ್ಮ ಓಂಶಿವ ಇದ್ದಾನಲ್ಲಾ ತುಂಬಾ ಪಾಕಡ. ಕೊನ್-ಕೊನೆಯಲ್ಲಿ ಬಂದ ಹೆಂಗಸರಿಗೆ ಒಂದು ರೀತಿ ಹರಿಶಿಣ ಕುಂಕುಮವನ್ನೂ ಕೊಟ್ಟು ಕಳುಹಿದ Eye-wink

ಎಷ್ಟೆಲ್ಲ ಜನ, ಏನೇನೆಲ್ಲ ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಿಂದ ಬಂದಿದ್ರು. ಅಲ್ವಾ. ಅಷ್ಟೆಲ್ಲ ಜನರಿಗೆ ಲಿನಕ್ಸಿನಲ್ಲಿ ಕನ್ನಡದ ಸಾಧ್ಯತೆಯನ್ನು ತೋರಿಸಿಕೊಟ್ಟ ಈ ಹಬ್ಬ ನಿಜಕ್ಕೂ ನನಗೆ ತುಂಬಾ ಖುಷಿಯನ್ನು ನೀಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 12:06pm — smurthygr

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

smurthygr's picture

ಹಬ್ಬ ಚೆನ್ನಾಗಿ ನಡೆದದ್ದು ತಿಳಿದು ತುಂಬಾ ಸಂತೋಷ. ಬೆಂಗಳೂರಿನಲ್ಲಿ ಇದ್ದಿದ್ದರೆ ಮತ್ತು ಲ್ಯಾಪ್ ಟಾಪ್ ಇದ್ದಿದ್ದರೆ ನಾನೂ ಬಂದು ಲಿನಕ್ಸ್ ನಲ್ಲಿ ಕನ್ನಡ ಹಾಕಿಕೊಳ್ಳಬಹುದಿತ್ತು! ಉಬುಂಟು ಹಾರ್ಡಿ ಹೆರಾನ್‌ನಲ್ಲಿ ಕನ್ನಡ out of box ಬರುತ್ತಾ? ನೋಡೋಣ.
ಇರಲಿ. ಕಂಗ್ರಾಚುಲೇಷನ್‌ಗಳು. (ಕನ್ನಡದಲ್ಲಿ ಏನು? ಶುಭಾಶಯ ?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 3:32pm — chiramshi

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

chiramshi's picture

ಓಂ ರವರೆ...
ಹಬ್ಬ ಮಿಸ್ ಮಾಡ್ಕೊಂಡ ಬೇಜಾರು ಒಂದು ಕಡೆ ಇದ್ರೂ.. ಎಲ್ಲಾ ಸಾಂಗವಾಗಿ ನಡೆದದ್ದು ಕೇಳಿ ಸಂತೋಷ ಆಯ್ತು..
ಆದರೆ...ವರದಕ್ಶಿಣೆ ಬೇಡಾ ಅನ್ನೋರನ್ನ ಅನುಮಾನದಿಂದ ನೋಡೋ ಈ ಕಾಲದಲ್ಲಿ...ಲಿನಕ್ಸ್ ನ ಈ ಉಚಿತ ಸಿ ಡಿ ವಿತರಣೆ ಹಾಗೂ.. ಅದನ್ನ ಪೈರಸಿ ಇಲ್ಲದೆ ಕಾಪಿ ಮಾಡೋದು..ಇದೆಲ್ಲಾ...ಯಾವ ಉದ್ದೇಶಕ್ಕಾಗಿ..?? ಜನರಿಗೆ..ಉಚಿತವಾಗಿ.. ತಂತ್ರಾಂಶ/ ಅದರ ಅನುಕೂಲಗಳು ಸಿಗಲಿ ಅಂತಾನೋ.. ಅಥವಾ ಅದರ ಹಿಂದೆ ಬೇರೆ ಏನಾದ್ರೂ ಇದ್ಯಾ....ಲಿನಕ್ಸ್ ಎಲ್ಲರಿಗೂ ಪರಿಚಯ ಆದ್ಮೆಲೆ..ಇದೂ ಎಲ್ಲ ರಂತೆ.. ಅಂದ್ರೆ..ಕೆಲವೊಮ್ಮೆ.. ಮೇಳಗಳಲ್ಲಿ.. ಹೊಸ ತಂಪು ಪಾನೀಯ/ಹೊಸ ಶಾಂಪೂ...ಉಚಿತ ವಿತರಣೆ ಇರತ್ತಲ್ಲ ಹಾಗೋ..?? ಪಬ್ಲಿಸಿಟಿಗೋಸ್ಕರ..

ನಾನು ಎಲ್ರನ್ನೂ ಕೆಣಕ್ತಿದ್ದಿನಿ ಅಂತ ತಪ್ಪು ತಿಳ್ಕೊಬೇಡಿ..

ಲಿನಕ್ಸ್ ನ ಕೆಲವು screenshots ನೋಡಿದೆ..xp ಉಪಯೊಗಿಸ್ತಿರೋ/ ವಿಸ್ತಾ ನೋಡಿರೋ ನನಗೆ.. ಲಿನಕ್ಸ್ ತುಂಬಾ ಆಕರ್ಷಕವಾಗಿ ಕಾಣಿಸ್ತು..
ಆದ್ದರಿಂದ xp & linux ಇವುಗಳಲ್ಲಿ.. ಪೈರಸಿ ವಿಷ್ಯ ಬಿಟ್ಟು ಬೇರೆ ಯಾವ ಯಾವ ವಿಷಯದಲ್ಲಿ..ಲಿನಕ್ಸ್..xp ಗಿಂತ ಉತ್ತಮ ಅಂತ ವಿವರವಾಗಿ ತಿಳಿಸ್ಕೊಟ್ರೆ.. ತುಂಬಾ ಉಪಯೋಗ ಆಗತ್ತೆ..ಉಪಯೋಗಿಸೊಕ್ಕೂ confidence ಇರತ್ತೆ.

ನಿಮ್ಮವ
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 4:57pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

ಚಿ.ರಂ.ಶಿ. ಅವರೆ,

ನೀವು ಕೇಳಿದ್ದು ಒಳ್ಳೇದೇ ಆಯಿತು. ಲಿನಕ್ಸ್ ಬಗ್ಗೆ ಅನೇಕ ಲೇಖನಗಳನ್ನ ಆಗಲೇ ಸಂಪದದಲ್ಲಿ ನೀವು ಓದಿರ ಬಹುದು. ಮತ್ತೆ ಕೆಲವು ನಿಮ್ಮೆಡೆಗೆ ಬರಲಿವೆ ಕೂಡ. ಪೈರಸಿ ಭೂತ ಒಂದೇ ಅಲ್ಲ, ಸೆಕ್ಯೂರಿಟಿ ಮಟ್ಟಿಗೆ, ತಂತ್ರಾಂಶ ಸ್ವಾವಲಂಬನೆ ಬೇಕಾದಾಗ, ನಮ್ಮ ಸರ್ಕಾರದ ಖಜಾನೆಯ ಹಣವನ್ನ ಅಂದರೆ ನಮ್ಮದೇ ಹಣ ಯಾವುದೇ ವಿದೇಶಿ ಕಂಪೆನಿಯ ಖಜಾನೆ ತುಂಬುವಿದನ್ನ
ತಪ್ಪಿಸಲು, ಕಡಿಮೆ ಬೆಲೆಯ ಹಾರ್ಡ್ವೇರ್ ಇದ್ದಾಗಲೂ ತಲೇ ನೋವಿಲ್ಲದೆ ನಮಗೆ ಬೇಕಾದ ಎಲ್ಲ ಕೆಲಸಗಳನ್ನ ಮಾಡಿ ಕೊಳ್ಳಲು, ವಿದ್ಯುತ್ ಉಳಿಸಲಿಕ್ಕೆ ಮುಂತಾದ ಕಾರಣಗಳಿಂದ ಲಿನಕ್ಸ್ ನಮಗೆಲ್ಲಾ ಬಹು ಉಪಯೋಗಿ.

ನಮ್ಮೊಡನೆ ಸೇರಿದ ಪೀಟರ್, ಯಾವುದೇ ದೇಶ FOSS (Free and OpenSource Software) ಉಪಯೋಗಿಸಲಿಕ್ಕೆ ಶುರುಮಾಡಿದರೆ ೬ ಬಿಲಿಯನ್ ನಷ್ಟು ತಂತ್ರಾಂಶವನ್ನ ಯಾವುದೇ ಖರ್ಚಿಲ್ಲದೇ ತನ್ನ ದೇಶದ ಯುವಶಕ್ತಿ ಇಂದಲೇ ಪಡೆಯಬಲ್ಲದು ಅನ್ನೋದನ್ನ ಕೂಡ ತಿಳಿಸಿದರು. ಇನ್ನೂ ತುಂಬಾ ಇದರ ಬಗ್ಗೆ ಬರೆಯಬಹುದು. ಮುಂದೆ ಬರಲಿರುವ ಲಿನಕ್ಸಾಯಣದ ಕೆಲವು ಆವೃತ್ತಿಗಳು ಮತ್ತಷ್ಟು ಬೆಳಕನ್ನ ಇದರೆಡೆಗೆ ಚೆಲ್ಲಲಿವೆ.

ಇದು ನಮ್ಮ ಕಂಕುಳಲ್ಲೇ ಇರುವ ತಂತ್ರಾಂಶಕ್ಕೆ , ನಮ್ಮಲ್ಲೇ ಇರುವ ತಂತ್ರಾಂಶ ನಿಪುಣರಿಂದ ಜನಸಾಮಾನ್ಯರ ಕಡೆಗೆ ತರುವು ಒಂದು ಸಣ್ಣ ಪ್ರಯತ್ನ. ಇದಕ್ಕೆ ಪಬ್ಲಿಸಿಟಿ ಸಿಕ್ಕರೆ ತಪ್ಪಿಲ್ಲ ಅಂದುಕೊಳ್ತೀನಿ Smiling ಏನಂತೀರಿ?

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 5:01pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

* ಇದು ನಮ್ಮ ಕಂಕುಳಲ್ಲೇ ಇರುವ ತಂತ್ರಾಂಶವನ್ನ , ಉಚಿತವಾಗಿ ನಾವುಗಳೇ ಅಭಿವೃದ್ದಿ ಪಡಿಸಿರುವ ತಂತ್ರಾಂಶಗಳನ್ನ , ನಮ್ಮಲ್ಲೇ ಇರುವ ತಂತ್ರಾಂಶ ನಿಪುಣರಿಂದ ಜನಸಾಮಾನ್ಯರ ಮುಂದೆ ತರುವು ಒಂದು ಸಣ್ಣ ಪ್ರಯತ್ನ. ಇದಕ್ಕೆ ಪಬ್ಲಿಸಿಟಿ ಸಿಕ್ಕರೆ ತಪ್ಪಿಲ್ಲ ಅಂದುಕೊಳ್ತೀನಿ Smiling ಏನಂತೀರಿ?

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 5:24pm — chiramshi

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

chiramshi's picture

ನನ್ನಿ... ಶ್ರೀ ಯವರೇ..
ನಾನೂ ಸಹ "change is permanent" ಅನ್ನೋ ತತ್ವಕ್ಕೆ ಬದ್ದನಾಗಿರುವವ. ಖಂಡಿತ ಲಿನಕ್ಸ್ ನ್ನು ಸ್ವಾಗತಿಸುತ್ತೇನೆ. ನಿಮ್ಮೆಲ್ಲರ ಪ್ರಯತ್ನಕ್ಕೆ ನನ್ನ ಸಹಕಾರವೂ ಇದೆ. ಬಹುಶಃ ಇದರ ಬಗ್ಗೆ ಹೆಚ್ಚು ಹೆಚ್ಚು ತಿಳಿದಷ್ಟು ಒಳ್ಳೆಯದು.

ಇದನ್ನು ಇಲ್ಲಿಯವರೆಗೆ ಕೆಲವೇ ಮಂದಿ ಉಪಯೋಗಿಸುತ್ತಿದ್ದರಿಂದ ಹೆಚ್ಚು ತಿಳಿಯುವ ಅವಕಾಶವಿರಲಿಲ್ಲವೇನೋ... ನೆನ್ನೆಯ ಹಬ್ಬದ ನಂತರ ಖಂಡಿತ ಹಲವು ಜನ ಇದನ್ನು ಉಪಯೋಗಿಸಿ ಇದರ ಸಾಧಕ/ಭಾದಕಗಳ್ಳನ್ನು ಸಂಪದಿಗರಿಗೆ ತಿಳಿಸುತ್ತಾರೆಂದು ಆಶಿಸುತ್ತೇನೆ.

ನಿಮಗೆ ಪ್ರತಿ ಕ್ರಿಯೆ ಬರೆದ ನಂತರ ಸ್ವಲ್ಪ ನಿಮ್ಮ ಹಳೇ ಬರಹಗಳ ಕಡೆ ಕಣ್ಣಾಡಿಸಿದೆ.. ಉಪಯೊಗಕಾರಿಯಾಗಿದ್ದವು....
ಆದರೆ.. ಲಿನಕ್ಸ್..ಗೆ (as a business/company) ಹೇಗೆ ಉಪಯೊಗಕಾರಿ??

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 10:03pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

ಮುಂದಿನ ಹಬ್ಬಕ್ಕೆ ಬನ್ನಿ ಸಾರ್, ಎಲ್ಲವನ್ನೂ ತಿಳಿಸುವ. MySQL ಇತ್ತೀಚೆಗೆ ೨ ಬಿಲಿಯನ್ ದುಡ್ಡು ಮಾಡಿಕೊಂಡದ್ದು ನಿಮ್ಮ ಪ್ರಶ್ನೆಗಳಿಗೆ ತಟ್ಟನೆಯ ಉತ್ತರವಾಗಬಹುದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 12:12pm — veenadsouza

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

veenadsouza's picture

I really missed this habba...
Sad

veenadsouza

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 9:33pm — nag4pl

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

nag4pl's picture

ಚೇ.. ಆ ದಿನ ಪರೀಕ್ಷೆ ಇತ್ತು..
ಕಾಲೇಜ್ ಪಕ್ಕದಲ್ಲಿದ್ದ್ರು ಬರೋಕ್ ಆಗಲಿಲ್ಲ..

Linuxನ ಅಂಚೆ ಮೂಲಕ ತಲುಪಿಸೋ ಯೋಜನೆ ಇದೆ ಅಂಥ ಕೇಳಿ ಖುಷ್ ಆಯ್ತು..

ನಿಜಾ ನಾ...??
ಕಳಿಸ್ತಿರಾ ಸರ್..?
... ನಾಗರಾಜ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 9:35pm — nag4pl

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

nag4pl's picture

ಮತ್ತೆ ಕಾರ್ಯಕ್ರಮ ಆಯೋಜಿಸ್ತಿರೋ ಹೇಗೆ..?

ಆದ್ರೆ ಒಳ್ಳೆದು.. ಖಂಡಿತ ಅವಕಾಶ ಕಳ್ಕೊಳಲ್ಲ...!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 9:41pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

ನಾಗರಾಜ್ ರವರೆ,

ಸಧ್ಯದಲ್ಲೇ ಮತ್ತೊಂದು ಕಾರ್ಯಕ್ರಮವನ್ನ ನಿರೀಕ್ಷಿಸಿ Smiling .

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2008 - 10:00pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

ಲಿನಕ್ಸ ಅಂಚೆ ಮೂಲಕ ಕಳಿಸೋ ಯೋಜನೆ ಇದೆ ಆದರೆ, ನಾವೆಲ್ಲ ಸ್ವಯಂಸೇವಕರು, ಎಷ್ಟೋ ಮಂದಿಗೆ ಲಿನಕ್ಸ್ ತಲುಪಿಸೋ ಕೆಲಸ ಶುರು ಮಾಡಿದ್ದೇವೆ, ಸಂಖ್ಯೆ ಬಹಳಿರುವುದರಿಂದ ನಿಮಗೆ ಲಿನಕ್ಸ್ ಅಂಚೆಯ ಮೂಲಕ ತಲುಪುವುದು ಸ್ವಲ್ಪ ತಡವಾಗಬಹುದು, ಆದರೆ ಎಲ್ಲರಿಗೂ ಲಿನಕ್ಸ್ ತಲುಪುವುದಂತೂ ನಿಜ.. ಮತ್ತಷ್ಟು ಜನ ನಮ್ಮೊಂದಿಗೆ ಕೈ ಜೋಡಿಸಿದರೆ ಚೆನ್ನ. ನಿಮಗೆಲ್ಲ ಲಿನಕ್ಸ್ iso ದ ಕೊಂಡಿ ತಲುಪಿಸುವ ಯೋಜನೆ ಕೂಡ ಇದೆ. ಇಂಟರ್ನೆಟ್ ಇರುವವರು ಅದನ್ನ ಡೌನ್ ಲೋಡ್ ಮಾಡಿ ಕೊಂಡು ಸಿ.ಡಿ ಬರ್ನ್ ಮಾಡಿಕೊಳ್ಳಬಹುದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2008 - 12:35pm — veenadsouza

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

veenadsouza's picture

link kaluhisuva kelasa bega madi sir....

veenadsouza
http://veenamanasu.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 1, 2008 - 8:53pm — omshivaprakash

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

omshivaprakash's picture

ವೀಣಾ ಅವರೆ, ಇಂದು ರಾತ್ರಿ ನಾವುಗಳು ಚರ್ಚಿಸಿ ಕನ್ನಡವನ್ನ ಸುಲಭವಾಗಿ ಉಪಯೋಗಿಸಲು ಬೇಕಿರುವ ಎಲ್ಲ ತಂತ್ರಾಂಶಗಳನ್ನ ಜೋಡಿಸಿ CUSTOMIZE ಮಾಡಿರುವ ಲಿನಕ್ಸ್ ತಂತ್ರಾಂಶದ (Ubuntu) ಕೊಂಡಿಯನ್ನ ನಿಮ್ಮೆಲ್ಲರ ಮುಂದಿಡಲಿದ್ದೇವೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 12:26pm — nag4pl

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

nag4pl's picture

...ಸಂತೋಷ.. ಸರ್..

ಆದಷ್ಟು ಬೇಗ ಆಯೋಜಿಸಿ...

.... ಶುಭಹಾರೈಕೆ ಗಳೊಂದಿಗೆ..
ನಾಗರಾಜ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 1, 2008 - 7:15pm — smurthygr

ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

smurthygr's picture

ಇಂಟರ್‌ನೆಟ್‌ನಲ್ಲಿ ಇಳಿಸಿಕೊಳ್ಳಲು ಬಹುಶಃ ಎಲ್ಲಾ ಲಿನಕ್ಸ್ ವಿತರಣೆಗಳು ಉಚಿತವಾಗಿ ಸಿಕ್ಕುತ್ತವೆ. ಗೂಗ್‌ಲ್ ಮಾಡಿದರೆ ಸಾಕು. ಸುಮಾರು ೭೦೦ ಎಂ.ಬಿ.ಯಿಂದ ಸುರುವಾಗಬಹುದು. ಇಂಟರ್‌ನೆಟ್ ದರದ ಬಗ್ಗೆ ಚಿಂತೆಯಿಲ್ಲದಿದ್ದರೆ ಇದೇ ಸುಲಭ. ಇಂಟರ್‌ನೆಟ್ ದರ ಜಾಸ್ತಿಯಾಗುತ್ತೆ ಅನ್ನಿಸಿದರೆ (ನನ್ನಂತೆ) ಸಿ.ಡಿ.ಯೇ ಬೇಕೆಂದರೆ ಉಬುಂಟು (Gnome Desktop) / ಕುಬುಂಟು (KDE desktop) ಪೂರ್ತಿ ಉಚಿತವಾಗಿ ಸಿಕ್ಕುತ್ತೆ (ಅಂಚೆ ವೆಚ್ಚವೂ ಅವರದ್ದೇ). ಇಲ್ಲಿ ರಿಜಿಸ್ಟರ್‍ ಆಗಿ ನಿಮ್ಮ ವಿಳಾಸ ಕೊಟ್ಟು ಯಾವುದು ಬೇಕೆಂದು ತಿಳಿಸಿ:
http://shipit.ubuntu.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!
  • ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!
  • ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?
  • ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
  • ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ??
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator