ಅರ್ಪಣೆ
ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ
ನಿಮ್ಮ ಪಾದಗಳ ನೋಡಿ ನಡಿಗೆ ಕಲಿತೆ
ನಿಮ್ಮ ಮಾತುಗಳ ಕೇಳಿ ನುಡಿಯ ಕಲಿತೆ
ನಿಮ್ಮ ಹೆಜ್ಜೆಯಲಿ ಹೆಜ್ಜೆ ಇಡುವುದ ಕಲಿತೆ
ನಿಮ್ಮ ದಿಗ್ದರ್ಶನದಲಿ ಬಾಳುವೆ ಕಲಿತೆ
ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ
ಕೋಪದಲಿ ಇತ್ತ ಬೆತ್ತದ ಗಾಯ
ಕೈ ಮೈ ಸವರಲು ಮಾಸಿತು
ಮರಳಿ ಬರಲಾರದ ಆ ಜೀವ
ಮನದ ಗಾಯ ಹೇಗೆ ಮಾಸೀತು
ಇಂದು ನಾನಿರುವೆ ನಿಮ್ಮ ಸ್ಥಾನದಲಿ
ಅಂದಿನ ನನ್ನನು ಕಾಣುತಿಹೆ ಮಗನಲಿ
ಅವಗೆ ನಾ ಕಲಿಸುವೆ ನೀವು ಕಲಿಸಿದ ಪಾಠ
ಶ್ರದ್ಧೆಯಿಂದ ನಿಮಗೆ ಒಪ್ಪಿಸುತಿಹೆ ಮನೆ ಪಾಠ
ಈಗಲೂ ನೀವು ಬರಲು ನಾ ಕೂಸಾಗುವೆ
ಕೂಸುಮರಿ ಆಡಲು ನಿಮ್ಮ ಹೆಗಲೇರುವೆ
ತೀರಿಸಲಾರದ ಪಿತೃ ಋಣವ ತೀರಿಸುವೆ
ಬಾರದಿರೆ ಕೊರಗಿ ಕೊರಗಿ ಸೊರಗುವೆ
ಸುರಿಸಲಾರೆ ನಾ ಕಂಬನಿಯ ಧಾರೆ
ನೆನಪಲಿ ಮನವು ಸುರಿಸುತಿದೆ ವರ್ಷಾಧಾರೆ
ಪಿತೃ ಋಣವಾಗಿ ಅರ್ಪಿಸುತಿಹೆ ತಿಲಾಂಜಲಿ
ಜೊತೆಗೆ ಈ ನನ್ನ ಈ ಪುಟ್ಟ ಶ್ರದ್ಧಾಂಜಲಿ

- Login or register to post comments
- 656 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸಂಸ್ಕೃತದ ಪದ್ಯದ ನೆನಪು.
ನಿಮ್ಮ ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ ಸಾಲುಗಳು ನನಗೆ ಒಂದು ಸಂಸ್ಕೃತದ ಪದ್ಯ ನೆನಪಿಗೆ ಬಂತು.
ತಪ್ಪಿಗಳಿದ್ದಲಿ ಯಾರಾದರು ತಿಳಿಸಿ.
ಬಹಳ ಇಷ್ಟವಾಯಿತು ಈ ಸಾಲುಗಳು.
ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ
ಜನನಾದಾರಭ್ಯ ಷಡ್ ವರ್ಷ ಪರ್ಯಂತಂ ಪ್ರೀತ್ಯಾ ಪೋಷಯೇತ್,
ಷಡ್ ವರ್ಷಾದಾರಭ್ಯ ಷೋಡಷ ವರ್ಷ ಪರ್ಯಂತಂ ತಾಡಯೇತ್,
ಷೋಡಷ ವರ್ಷಾದಾರಭ್ಯ ಪುತ್ರಂ ಮಿತ್ರವದಾಚರೇತ್.
ಈ ನಿಮ್ಮ ಪದ್ಯ, ಕನ್ನಡ ಕವನಗಳೂ ಕೂಡ ಎಷ್ಟು ಪರಿಣಾಮಕಾರಿಯಾಗಬಹುದು ಎಂಬುದನ್ನು ನಿರೂಪಿಸುತ್ತಿದೆ ಎಂದು ಭಾವಿಸುವೆ. ಅಂದಹಾಗೆ ಭಾವನೆಗಳಿಗ ಭಾಷೆಯೇ ಬೇಕಿಲ್ಲವಲ್ಲ.
ಸುಭಾಷಿತ
ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್
ಪ್ರಾಪ್ತೇ ತು ಷೋಢಶೇ ವರ್ಷೇ ಪುತ್ರಂ ಮಿತ್ರವದಾಚರೇತ್
ಇದು ನನಗೆ ಜ್ಞಾಪಕವಿರುವ ಸಾಲುಗಳು. ತಪ್ಪುಗಳಿದ್ದಲ್ಲಿ ಸರಿಪಡಿಸಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಪದ್ಯ ಮತ್ತು ತಾತ್ಪರ್ಯ
ಹೌದು ನೀವು ಬರೆದದ್ಪು ಸರಿಯಾದ ಸುಭಾಷಿತ, ನಾನು ಬೇಕೆಂದೇ ಪದ್ಯವನ್ನು ಹಾಕಲಿಲ್ಲ. ಅದರ ತಾತ್ಪರ್ಯವನ್ನೇ(??) ಪದ್ಯದ ರೂಪದಲ್ಲಿ ಹಾಕಿದೆ.

ಅಂದ ಹಾಗೆ ನಾನು ಬರೆದುದರಲ್ಲೊಂದು ತಪ್ಪು ಸಹ ಇದೆ.
ಜನನಾದಾರಭ್ಯ ಪಂಚ ವರ್ಷ ಪರ್ಯಂತಂ ಪ್ರೀತ್ಯಾ ಪೋಷಯೇತ್,
ಈ ಸುಭಾಷಿತಗಳ ಬಗೆಗೊಂದು ಚರ್ಚೆ ಆರಂಭಿಸೋಣ