ನೀ...
ನೀ ಬಿಟ್ಟುಹೋದರೂ
ಮತ್ತೆ ಬಂದು ಕಾಡುತಿರುವೆ ನೆನಪುಗಳಾಗಿ
ನೀ ಬಾಡಿಹೋದರೂ
ತುಂಬುತಿರುವೆ ಬಣ್ಣವನು ಅರಳುವ ಈ ಹೂವಿಗಾಗಿ
ನೀ ಕಾಣದಿದ್ದರೂ
ಕಣ್ಣೊಳಗೆ ಬಂದು ಅವಿತು ಬೆಳಕಾಗಿರುವೆ
ನೀ ಇರದಿದ್ದರೂ
ಇರುವಿಕೆಯ ಅನಿಸನ್ನು ಮನಕ್ಕೆ ತಟ್ಟುತಿರುವೆ
ನೀ ಎಲ್ಲೂ ಹೋಗಿಲ್ಲ
ನನ್ನಲ್ಲೆ ಇರುವೆ ನನ್ನೊಳಗೆ ಒಂದಾಗಿ, ನನ್ನ ಬಲವಾಗಿ

- Login or register to post comments
- 266 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: