Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಾರ್ತಾ ಮಾಧ್ಯಮದ ಈ ಪಾಡು - "ಐಟಂ ಕ್ವೀನ್ ಯಾರು ?"

May 2, 2008 - 11:24am — msprasad
ಐಟಂ ಕ್ವೀನ್

ವಾರ್ತಾ ಮಾಧ್ಯಮ ಈ ಮಟ್ಟದ ಹಪಾಹಪಿತನ ಬರಬಾರದಿತ್ತು.

ಅಲ್ಲಾ ಕಣ್ರೀ, ಬಿತ್ತರಿಸೋಕ್ಕೆ ಸುದ್ದಿ ಇಲ್ಲಾಂದ್ರೆ, ಸುಮ್ನೆ ಇರೋದನ್ನ ಬಿಟ್ಟು, ಬಾಲಿವುಡ್ಡಿನ ಮುಂದಿನ "ಐಟಂ ಕ್ವೀನ್ ಯಾರು ?" ಅನ್ನೋ ಸರ್ವೇ ಮಾಡ್ತಾರಲ್ಲಾ, ಇವರಿಗೇನು ಸ್ವಲ್ಪವಾದ್ರೂ ನೈತಿಕ ಜವಾಬ್ದಾರಿ ಅನ್ನೋದು ಇದೀಯಾ ?

ನೋಡಿ.. ಐಟಂ ಕ್ವೀನ್ ಕೌನ್ ?

ಇದರ ಚಿತ್ರ ನೋಡಬೇಕಾದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ

ಇದು ನನ್ನ ಕಣ್ಣಿಗೆ ಬಿದ್ದಿದ್ದು ನಿನ್ನೆ ಬೆಳಿಗ್ಗೆ. ಮೇ ೧ರಂದು ಆಫೀಸಿಗೆ ರಜೆ. ಎದ್ದ ಸ್ವಲ್ಪ ಹೊತ್ತಿಗೆ ಟೀವಿ ಹಾಕಿದೆ. ಚಾನೆಲುಗಳ ಮಧ್ಯೆ ಹಂಗೇ ಓಡಾಡುತ್ತಾ ಇರಬೇಕಾದ್ರೆ, "ಆಜ್ ತಕ್" ಚಾನೆಲ್ ನಲ್ಲಿ ಕಂಡಿದ್ದು ಈ ದೃಶ್ಯ. ತಕ್ಷಣ ಮೊಬೈಲಿಂದ ಇದರ ಒಂದು ಚಿತ್ರ ತೆಗೆದೆ.

ಕರೀಂ ತೆಲಗಿಯ (ಛಾಪಾ ಕಾಗದ ಹಗರಣದವನು) ಜೀವನ ಆಧಾರಿತ "ಮುದ್ರಾಂಕ್" ಅನ್ನೋ ಒಂದು ಫಿಲಂ ಮಾಡ್ತಾ ಇದಾರೆ, ಆ ಫಿಲಂನ ಒಂದು ಐಟಂ ಸಾಂಗಿಗಾಗಿ ರಾಖಿ ಸಾವಂತ್ ಹಾಗು ಇನ್ನೊಬ್ಳು ಯಾರೋ ಐಟಂ ಗರ್ಲ್ ಗಳ ನಡುವೆ ಪೈಪೋಟಿಯಂತೆ. ಅದನ್ನ ದೊಡ್ಡ ನ್ಯಾಷನಲ್ ಇಶ್ಯೂ ಥರ ಬಿತ್ತರಿಸುತ್ತಿದ್ರು.

ನಮ್ಮ ಮಾದ್ಯಮದವರು ಈ ಥರ ಹಪಾಹಪಿತನಕ್ಕೆ ಬೀಳಬಾರದಿತ್ತು.

ಇನ್ನೂ ಹೊಲಸು ಅಂದ್ರೆ, ಹಾಲಿವುಡ್ ನ ಕೆಲವು ನಟಿ ನಟರು, ಅವರ ತೆವಲು / ತೀಟೆ ತೀರಿಸ್ಕೊಳ್ಳೋಕ್ಕೆ, ತಮ್ಮ ಅತ್ಯಂತ ಪ್ರೈವೇಟ್ ಕ್ಷಣಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ಕೆಲವರು ಅಂದ್ರೆ ಹೊಟೇಲ್ ಉದ್ಯಮಿ ಹಾಗು ಬಿಲಿಯನೇರ್ ಪ್ಯಾರಿಸ್ ಹಿಲ್ಟನ್, ಪ್ಲೇಬಾಯ್ ಹಾಗು ಬೇವಾಚ್ ಖ್ಯಾತಿಯ ಪಮೇಲಾ ಆಂಡರ್ಸನ್, WWF ಕುಸ್ತಿಯ ಮಹಿಳಾ ಕುಸ್ತಿ ಪಟು ಚೈನಾ ಇತ್ಯಾದಿ.

ಇದನ್ನೂ ಕೂಡಾ ಆಜ್ ತಕ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾರೆ. ಈ ತೆರನಾದ, ನಮಗೆ ಯಾವ್ದೇ ರೀತಿ ಪ್ರಯೋಜನವಿಲ್ಲದ, ಮೂರು ಕಾಸಿನ ಅರಿವು ಮೂಡಿಸದ ಇಂಥ ವಾರ್ತೆಗಳನ್ನು ಪ್ರಸಾರ ಮಾಡಿದ್ರೆಷ್ಟು, ಬಿಟ್ರೆಷ್ಟು ?

ಬೆಳಿಗ್ಗೆ ಬೆಳಿಗ್ಗೆ ಇಂಥದ್ದನ್ನು ನೋಡಿ, ಮೂಡ್ ಆಫ್. ಅಂದ್ರೆ ನಾನೇನು ಫುಲ್ಲ್ ಬೇಜಾರಾಗಿ ಕೂತಿದ್ದೆ ಅಂತ ಅಲ್ಲಾ, ಅದ್ರೂ ಏನೋ ಒಂಥರಾ ಮುಜುಗರ.

ಸಂಜೆ ನಮ್ಮ ಅನಂತನಾಗ್, ಗೋಲ್ಡನ್ ಸ್ಟಾರ್ ಗಣೇಶ ನಟಿಸಿರುವ "ಅರಮನೆ" ಚಿತ್ರಕ್ಕೆ ನಾನು ನನ್ನ ಹಾಫ್ ಶರ್ಟ್ (ಅರ್ಧಾಂಗಿ) ಹೋದ್ವಿ ಕಣ್ರೀ.... ಫುಲ್ಲ್ ಮೂಡ್ ವಾಪಸ್ ಬಂತು. ಬಹಳ ಚೆನ್ನಾಗಿದೆ ಈ ಚಿತ್ರ. A Pure Family Entertainer.

ಅನಂತನಾಗ್ ಅವರ ಪ್ರಬುದ್ಧ ಅಭಿನಯ, ಗಣೇಶನ ಮಾಮೂಲ್ ಲವಲವಿಕೆಯ ಆಕ್ಟಿಂಗ್, ಹೊಸಾ ನಾಯಕಿ ರೋಮಾ.... ಸೊಗಸಾಗಿದೆ ಕಣ್ರೀ..

ಇನ್ನೂ ಸ್ವಲ್ಪ ಹೊಗಳಬೇಕು ಅನ್ನುಸ್ತಾ ಇದೆ, ಯಾಕಂದ್ರೆ, ನಮ್ಮ ಮೈಸೂರಲ್ಲಿ ಮ್ಯಾಕ್ಸಿಮಂ ಶೂಟಿಂಗ್ ನಡೆದಿರೋದು... ಅದಕ್ಕೆ. ಮಿಸ್ ಮಾಡ್ಕೋಬೇಡ್ರೀ, ಚಿತ್ರ ಬಹಳಾ ಚೆನ್ನಾಗಿದೆ. ನೋಡಿ.

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ನಮ್ಮ ಸೋಮಾರಿ ಕಟ್ಟೆಗೊಮ್ಮೆ ಭೇಟಿಕೊಡಿ

http://somari-katte.blogspot.com

  • ಚಿಂತನೆ
Ornamental seperator
  • Login or register to post comments
  • 328 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 3, 2008 - 3:49pm — shreedn

ಉ: ವಾರ್ತಾ ಮಾಧ್ಯಮದ ಈ ಪಾಡು - "ಐಟಂ ಕ್ವೀನ್ ಯಾರು ?"

shreedn's picture

ಶಂಕರ್ ಅವರೇ, ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇದೆಯಾ ಅಂತ ಕೇಳಿದ್ದೀರಿ... ಇದಕ್ಕೆ ಮಾಧ್ಯಮದ ಒಳಗಿದ್ದು ಕೆಲವು ವಿಷಯಗಳನ್ನ ಅರ್ಥಮಾಡ್ಕೊಂಡಿರೋ ಅನುಭವದ ಹಿನ್ನೆಲೆಯಲ್ಲಿ ಈ ನನ್ನ ಪ್ರತಿಕ್ರಿಯೆ.
ನೀವು ಕೇಳ್ತಾ ಇರೋ ಪ್ರಶ್ನೆ ಪ್ರತಿಯೊಬ್ರೂ ಕೇಳ ಬೇಕು, ಅಂತಹ ಚಾನೆಲ್-ಗಳನ್ನು ನೋಡಲೇ ಬಾರದು. ಜನರಿಗೆ ಬೇಕಾದ್ದೇ ಕೊಡಬೇಕಾದ್ದು ಚಾನೆಲ್-ಗಳಿಗೆ ಅನಿವಾರ್ಯವಾದ ಕಾರಣ, ನೀವೆಲ್ಲ ಸೇರಿ ಬುದ್ಧಿ ಕಲ್ಸಿದ್ರೆ ಎಲ್ಲಾ ಚಾನೆಲ್-ಗಳೂ ತಂತಾನೇ ಹಾದಿಗೆ ಬರ್ತವೆ. ಆದ್ರೆ ಮೊದ್ಲು ಯಾವುದು ಸರಿ ಯಾವುದು ತಪ್ಪು ಅಂತ ಅರ್ಥ ಮಾಡ್ಕಂಡು ಬೇಡದ್ದನ್ನ ಇದು ಬೇಡ ಅಂತ ಸ್ಪಷ್ಟವಾಗಿ ಹೇಳೋ ಬುದ್ಧಿ ವೀಕ್ಷಕರಲ್ಲಿ ಬೆಳೆಯ ಬೇಕು ಅಷ್ಟೆ.
ಒಂದು ಉದಾಹರಣೆ ಕೊಡ್ತೀನಿ, ಕನ್ನಡದಲ್ಲಿ ಅತಿ ಹೆಚ್ಚು ಟಿ ಆರ್ ಪಿ ಇರುವ ಕಾರ್ಯಕ್ರಮಗಳಲ್ಲಿ ಕಥೆ ಆಧರಿತವಲ್ಲದ ಕಾರ್ಯಕ್ರಮಗಳಲ್ಲಿ 'ಹೀಗೂ ಉಂಟೇ'ಗೆ ( ಟಿವಿ9) ಅತಿ ಹೆಚ್ಚು ವೀಕ್ಷಕರಿದ್ದಾರೆ. ಇದರ ವೀಕ್ಷಕವೃಂದ ದೊಡ್ಡದಿದೆ ಅಂತ ತಿಳಿದ ಮೇಲೆ ಈಗ ಕಸ್ತೂರಿಯಲ್ಲಿ 'ಅಗೋಚರ', ಈಟಿವಿಯಲ್ಲಿ 'ವಿಸ್ಮಯ' ಆರಂಭವಾಗಿವೆ. 'ವಿಸ್ಮಯ' ವೀಕ್ಷಕರಿಗೆ ಒಂಚೂರು ಜಾಗೃತಿಯ ಪಾಠ ಹೇಳಹೊರಟಿತ್ತು, ಟಿ ಆರ್ ಪಿ ಯುದ್ಧದಲ್ಲಿ ಸೋತು ಹೋಯ್ತು.

ಜನ ನೋಡ್ತಾರೆ ಅನ್ನುವುದು ಸಾಧಿತವಾದ ತಕ್ಷಣ ಅಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರ್ತವೆ. ನೋಡದೆ ಇದ್ರೆ ಜನ ನೋಡುವಂತಹದು ಏನು ಅಂತ ಹುಡುಕ್ತಾರೆ. ಹಾಗಾಗಿ ತನಗೇನು ಇಷ್ಟ ಅಂತ ವೀಕ್ಷಕರು ವಾಹಿನಿಗಳಿಗೆ ನೋಡುವ, ಅಥವಾ ನೋಡದಿರುವ ಮೂಲಕವೇ ಗೊತ್ತು ಪಡಿಸುವುದು ಬಹಳ ಮುಖ್ಯ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಟೋ ಅಣಿಮುತ್ತುಗಳು
  • ಪ್ರತಿಭೆ V/S ಎಸ್ಎಂಎಸ್
  • ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
  • ಆಯಿಲ್ ಕುಟ್ಟಿ
  • ಒಂದೆರಡು ರೇಖಾಚಿತ್ರಗಳು
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator