Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

May 9, 2008 - 4:38pm — ಗಣೇಶ

ಸಿನೆಮಾ ನಟನಟಿಯರು ಏನೇ ಪ್ರಚಾರ ಮಾಡಲಿ,
ಪೆಪ್ಸಿ, ಕೊಕಾಕೋಲ, ಗೊರಟಿಲ್ಲದ ಮಾವಿನ ಜ್ಯೂಸ್ ಎಲ್ಲಾ
ಪುನರ್ಪುಳಿ (ಕೋಕಂ) ಜ್ಯೂಸ್‌ನ ಎದುರಿಗೆ ಬಚ್ಚಾಗಳು.

ಎಂಥಾ ಕಲರ್-ಕೆಂಪು ಕೆಂಪು.. ನ್ಯಾಚುರಲ್ ಬಣ್ಣ.
ಹುಳಿ-ಸಿಹಿ ರುಚಿ, ಹೊಟ್ಟೆ,ತಲೆ,ಮೈಗೆ ತಂಪು ತಂಪು.
ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.

೨೦ ರಿಂದ ೩೦ ಅಡಿ ಎತ್ತರ ಬೆಳೆಯುವ ಕೋಕಂ ಮರ ದ.ಭಾರತದ ಕೊಂಕಣ,ಗೋವಾ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದು.
ಸಿಪ್ಪೆ ಕೆಂಪು ಬಣ್ಣದಿದ್ದು ಒಳಗಿನ ಹಣ್ಣು ಸಿಹಿ-ಹುಳಿ ರುಚಿ.
ಬೀಜ ೫-೭ ಇರುವುದು.

ಬೆಳೆದ ಹಣ್ಣುಗಳನ್ನು ಹಿಚುಕಿ, ಬೀಜ ತೆಗೆದು,ಸಿಪ್ಪೆ ಜತೆಯಲ್ಲಿ ಬೇಯ್ಸಿ, ಸೋಸಿ, ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಬೆರೆಸಿ, ಪಾಕ ಮಾಡಿ ಬಾಟಲಲ್ಲಿ ತುಂಬಿಸಿ ಇಟ್ಟುಕೊಂಡರಾಯಿತು.-ಪುನರ್ಪುಳಿ ಜ್ಯೂಸ್.

ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ತೆಗೆದಿಟ್ಟುಕೊಂಡರೆ, ಯಾವ ಕಾಲಕ್ಕೂ ಸಾರು ಮಾಡಲು ಆಗುವುದು. ಪಿತ್ತಕ್ಕೆ ಒಳ್ಳೆಯದಂತೆ.

ಇನ್ನು ಬೀಜಗಳನ್ನು ಒಣಗಿಸಿ, ನೀರಲ್ಲಿ ಕುದಿಸಿ ಆರಿಸಿದಾಗ- ಬೀಜದೊಳಗಿದ್ದ ಎಣ್ಣೆ ಅಂಶ ನೀರಲ್ಲಿ ತೇಲತೊಡಗುತ್ತದೆ. ಈ ತೈಲವನ್ನು ಬೆಣ್ಣೆಯಂತೆ (kokum butter) ತೆಗೆಯಬಹುದು. ಈ ತೈಲ ಗಾಯಗಳಿಗೆ ಅದರಲ್ಲೂ ಸುಟ್ಟಗಾಯಗಳಿಗೆ ರಾಮಬಾಣ.

ಸಂ : ವೃಕ್ಷಾಮ್ಲ, ತಿತಿಡೀಕ, ರಕ್ತಪೂರಕ.

ಕ : ಮುರುಗಲು, ಬೀರುಂಡ.

ಇಂ : kokaum butter tree, red mango, mangosteen.
*********************************************

ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ, ಕ್ರಿಕೆಟ್ ಆಟ ಮುಗಿಸಿ (ಜಗಳದಲ್ಲಿ), ಹತ್ತಿರದ ತೋಟಕ್ಕೆ ( ಕಾಡು ಎನ್ನಬಹುದು) ನುಗ್ಗುತ್ತಿದ್ದೆವು.
ತೋಟದ ಮಾಲಿಕರ ಮಕ್ಕಳೂ ನಮ್ಮ ಜತೆ ಇರುವುದರಿಂದ ಭಯವಿರಲಿಲ್ಲ.
ಎಷ್ಟೊಂದು ಹಣ್ಣಿನ ಮರಗಳು- ಗೇರು,ಮಾವು,ಹಲಸು, ಹೆಬ್ಬಲಸು,ನೇರಿಳೆ..

ಗೇರು ಹಣ್ಣು ಎಷ್ಟು ಬೇಕಾದರೂ ತಿನ್ನಬಹುದು. ಬೀಜ ಅಲ್ಲೇ ಬಿಸಾಡಬೇಕು. ಇದೊಂದೇ ಕಟ್ಟುಪಾಡು.
ಈ ಹೆಬ್ಬಲಸು (ಪೆಜಕ್ಕಾಯಿ) ಬಹಳ ಎತ್ತರಕ್ಕೆ ಬೆಳೆಯುವ ಮರ. ಮಕ್ಕಳು ಇದಕ್ಕೆ ಹತ್ತಲು ಕಷ್ಟ. ‘ನಿಜ’ ಮಂಗಗಳಿಗೆ ಈ ಒಂದು ಹಣ್ಣಾದರೂ ಉಳಿಯಲಿ ಎಂದು ದೇವರು ಮಾಡಿದ ವ್ಯವಸ್ಥೆ ಇರಬೇಕು. ಆದರೂ ನಾವು ಕಲ್ಲು ಹೊಡೆದು ಬೀಳಿಸಿ,
ಅರ್ಧಂಬರ್ದ ಬಜ್ಜಿಯಾದುದನು ತಿನ್ನುತ್ತಿದ್ದೆವು.

---ಈ ಹೆಬ್ಬಲಸನ್ನು ಹಲಸಿಗೆ ಕಸಿಕಟ್ಟಲು ಸಾಧ್ಯವಿಲ್ಲವೇ?

---ಕೊಟ್ಟೇಹಣ್ಣು ಮತ್ತು ನಾಣಿಲೆ (ತುಳು ಹೆಸರುಗಳು?) ಯ ವಿವರ (ಕನ್ನಡ,ಸಂಸ್ಕೃತ ಹೆಸರು) ಯಾರಿಗಾದರೂ ಗೊತ್ತಿದೆಯಾ?
(ನಾಣಿಲೆ-ಉದ್ದಕ್ಕೆ,ತೆಳು ಹಣ್ಣು.ಸಪೋಟದ ಬೀಜದ ತರಹ ಒಂದು ಬೀಜವಿರುವುದು)

-ಗಣೇಶ.

  • ಜ್ಞಾನವಾಹಿನಿ
Ornamental seperator
  • Login or register to post comments
  • 453 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 5:00pm — roopablrao

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

roopablrao's picture

ಪುನರ್ಪುಳಿ (ಕೋಕಂ) ಜ್ಯೂಸ್‌ !
ಇದೇ ಮೊದಲ ಸಲ ಕೇಳ್ತಿದ್ದೇನೆ ಹೆಸರನ್ನ
ಚಿತ್ರ ಅಥವ ಫೋಟೊ ಇದ್ದರೆ ಚೆನ್ನಾಗಿತ್ತು
ಎಲ್ಲಿ ಸಿಗುತ್ತೆ ಇದು?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 11:49pm — ಗಣೇಶ

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಗಣೇಶ's picture

ಪಕ್ಕದಲ್ಲಿ (ಪರಿಚಯದ ಚಿತ್ರದಲ್ಲಿ) ೩ ಹಣ್ಣಿನ ಚಿತ್ರ, ೨ ಕತ್ತರಿಸಿದ ಹಣ್ಣುಗಳ ಚಿತ್ರವಿದ್ದರೆ ಅದು ಪುನರ್ಪುಳಿ ಹಣ್ಣಿನ ಚಿತ್ರ.

ಕಿಶೋರ್ ಪಟವರ್ಧನ್ ರವರು ತಮ್ಮ ಪ್ರತಿಕ್ರಿಯೆಯಲ್ಲಿ ಇನ್ನೊಂದು ಚಿತ್ರ ಕೊಟ್ಟಿರುವರು.
-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 5:25pm — gururajkodkani

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

gururajkodkani's picture

ಗುಱುಱಾಜ
www.kannadaguru.blogspot.com

ಮಲೆನಾಡಿನ ಊರುಗಳಲ್ಲಿ ಜಾಸ್ತಿ. ಈ ಕೋಕ್೦ ಸಿರಸಿ,ಸಿದ್ದಾಪುರ ಮತ್ತು ಯಲ್ಲಾಪುರಗಳಲ್ಲಿ ತು೦ಬಾ ಪ್ರಸಿದ್ದಿ.ಆರೋಗ್ಯಕ್ಕೆ ತು೦ಬಾ ಒಳ್ಳೆಯದು ತಾವು rooh ಅafza ಎ೦ಬ ತ೦ಪು ಪಾನೀಯದ ಬಗ್ಗೆ ಕೇಳಿದ್ದೀರಾ..? ಕೋಕ೦ನ ಎಸ್ಸೆನ್ಸ್ ಮೂಲಕವೇ ಅದನ್ನು ತಯಾರು ಮಾಡುವುದು.

  • Login or register to post comments
  • link
  • Email this ಪ್ರತಿಕ್ರಿಯೆ
May 12, 2008 - 12:09am — ಗಣೇಶ

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಗಣೇಶ's picture

ಗುರುರಾಜರವರೆ,
rooh afza ದವರು 9x ಚಾನಲ್ ನಲ್ಲಿ 'ಯೆ ಹೇ ಜಲ್ವಾ' ಎಂಬ ಡ್ಯಾನ್ಸ್ ಕಾಂಪಿಟಿಷನ್ ಪ್ರೋಗ್ರಾಂ ನಡೆಸುತ್ತಿದ್ದಾರೆ. ರಾಖಿ ಸಾವಂತ್, ಹುಸ್ಸೈನ್, ರೋನಿತ್ ಎಲ್ಲಾ ಕಾಂಪಿಟಿಷನ್ ನಲ್ಲಿ ಇದ್ದಾರೆ. ಚೆನ್ನಾಗಿದೆ.
ವಿಷಯ ಅದಲ್ಲ-

ಅಲ್ಲಿ ಜಡ್ಜ್ ಗಳ ಎದುರಲ್ಲಿ ಗ್ಲಾಸ್ ಲೋಟಾಗಳಲ್ಲಿ rooh afza ಇಟ್ಟಿರುತ್ತಾರೆ. ಹಲವಾರು ವಾರದಿಂದ ನೋಡುತ್ತಿದ್ದೇನೆ- ಒಬ್ಬನೇ ಒಬ್ಬ ಜಡ್ಜ್ ಅದನ್ನು ಕುಡಿದಿಲ್ಲ! ಮುಂದಿನ ಸಂಡೆ ನೋಡಬೇಕು.

ಇನ್ನು ರೂಹ್ ಅಫ್ ಜಾದಲ್ಲಿ ಹಲವು ಬಗೆ ಹಣ್ಣು,ತರ್ಕಾರಿ,ಹೂಗಳು ಇವೆಯಂತೆ.ಕೋಕಂ ಇರಲೂ ಬಹುದು. ನನಗೆ ಗೊತ್ತಿಲ್ಲ. ನಾವು ಚಿಕ್ಕವರಿದ್ದಾಗ ಆರೋಗ್ಯಕ್ಕೆ ಒಳ್ಳೆಯದೆಂದು ಇದರ ಜ್ಯೂಸ್ ಮಾಡಿ ಕುಡಿಸುತ್ತಿದ್ದರು. ರುಚಿ ಇಷ್ಟವಾಗದಿದ್ದರೂ ಕಲರ್,ಪರಿಮಳ ಇಷ್ಟವಾಗುತಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 8:00pm — smurthygr

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

smurthygr's picture

ಖಾದಿ ಭಂಡಾರಗಳಲ್ಲಿ ಸಿಕ್ಕುತ್ತೆ. ಧರ್ಮಸ್ಥಳದ ಸಿರಿ ಗೃಹೋದ್ಯೋಗ ದವರಿಂದಲೂ ಸಿಕ್ಕುತ್ತೆ. ಮಂಗಳೂರಿನ ವಸ್ತುಗಳನ್ನು ಮಾರುವ ಅಂಗಡಿಗಳಲ್ಲೂ ಸಿಕ್ಕಬಹುದು. ಗಣೇಶರು ಹೇಳಿದ್ದಷ್ಟೇ ಅಲ್ಲದೇ, ಬೊಜ್ಜು ಕರಗಿಸಲೂ ಉಪಯುಕ್ತ!

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 9:25pm — hamsanandi

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

hamsanandi's picture

ಮಹಾರಾಷ್ಟ್ರದಲ್ಲೂ ( ಪಶ್ಚಿಮ ಮಹಾರಾಷ್ಟ್ರ, ಕೊಂಕಣಗಳಲ್ಲಿ) ಕೋಕಂ ಪ್ರಸಿದ್ಧವೇ. ಅಲ್ಲಿ ನಾನಿದ್ದ ವರ್ಷಗಳಲ್ಲಿ, ಕೋಕಂ ಶರಬತ್ತನ್ನು ಕುಡಿಯುತ್ತಿದ್ದ ನೆನಪು ಬಂತು. ಸೆಖೆಗಾಲಕ್ಕೆ ಒಳ್ಳೇ ಪಾನೀಯ ಅದು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 11:59pm — ಗಣೇಶ

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಗಣೇಶ's picture

>ಬೊಜ್ಜು ಕರಗಿಸಲು ಉಪಯುಕ್ತ!

ಡಯಟ್ ಕೋಲಾ ಬಿಡಿ,
ಕೋಕಂ ಕುಡಿಯಿರಿ,
ಸ್ಲಿಂ ಆಗಿ.

-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 11:28pm — hpn

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

hpn's picture

sarasaparilla (ಸೊಗದೆ ಬೇರು) ಶರಬತ್ತು ಕೂಡ ಚೆನ್ನಾಗಿರತ್ತೆ.

ಕೋಕಮ್ ಚೆನ್ನಾಗಿರಬಹುದು. ಆದರೆ ಜನಪ್ರಿಯ ಆಗಬೇಕಾದರೆ ಅದನ್ನು ಸೂಕ್ತ ರೀತೀಲಿ ಪ್ಯಾಕೇಜ್ ಮಾಡಿ ಮಾರ್ಕೆಟಿಂಗ್ ಮಾಡುವ ಕೆಲಸ ಆಗಬೇಕು. ಯಾರಾದರೂ ಇನ್ವೆಸ್ಟ್ ಮಾಡಿ. ಒಂದು ಉದ್ಯಮವಾಗತ್ತೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 9:14am — kishorpatwardhan

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

kishorpatwardhan's picture

http://images.google.com/imgres?imgurl=http://goabagayatdar.com/images/p...

ಇಲ್ಲಿ ಕೋಕಂ ಚಿತ್ರ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 11, 2008 - 12:17am — ಗಣೇಶ

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಗಣೇಶ's picture

ಕೋಲಾ ಕುಡಿಸಿ ಕುಡಿಸಿ, ಜನರ ಆರೋಗ್ಯ ಹಾಳು ಮಾಡಿದಕ್ಕೆ ಪ್ರಾಯಶ್ಚಿತ್ತವಾಗಿ,
'ಕೋಕಂ' ಕೋಲಾವನ್ನು (ಬೇಸಿಗೆಯ ೨ ತಿಂಗಳಾದರೂ) ಕೋಲಾ ಕಂಪನಿಯವರೇ ಮಾರ್ಕೆಟ್ ಮಾಡಲಿ.
-ಗಣೇಶ.

ಪ್ರತಿಕ್ರಿಯೆ ನೀಡಿದ ರೂಪಾ, ಗುರುರಾಜ, ಹಂಸಾನಂದಿ, smruthygr, hpn, ಕಿಶೋರ್
ಎಲ್ಲರಿಗೂ ನನ್ನಿ.

'ನಾಣಿಲೆ' ಮತ್ತು 'ಕೊಟ್ಟೆ' ಹಣ್ಣಿನ ಬಗ್ಗೆ ವಿವರ ಸಿಕ್ಕಿದರೆ ತಿಳಿಸಿ.
-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
May 11, 2008 - 7:29pm — prasannasp

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

prasannasp's picture

<<<<<<<<<<ಕೋಲಾ ಕುಡಿಸಿ ಕುಡಿಸಿ, ಜನರ ಆರೋಗ್ಯ ಹಾಳು ಮಾಡಿದಕ್ಕೆ ಪ್ರಾಯಶ್ಚಿತ್ತವಾಗಿ,
'ಕೋಕಂ' ಕೋಲಾವನ್ನು (ಬೇಸಿಗೆಯ ೨ ತಿಂಗಳಾದರೂ) ಕೋಲಾ ಕಂಪನಿಯವರೇ ಮಾರ್ಕೆಟ್ ಮಾಡಲಿ.
-ಗಣೇಶ.>>>>>>>>>

ಹಾಗೆ ಪೆಪ್ಸಿ ಕಂಪನಿಯವರಿಗೆ ಅದರ ಬಗ್ಗೆ ತಿಳಿಸಿದರೆ ಅದಕ್ಕೂ ಕಾಪಿರೈಟು-ಪೇಟೆಂಟು ತಗಂಡು, ಬೇರೆಯವರು ಅವ್ರಹತ್ರ ಕೊಂಡ್ಕೊಳ್ದೆ ಪುನರ್ಪುಳಿ ಕುಡೀಬಾರ್ದು ಅಂತಾರೆ Laughing out loud . ಅಲ್ದೆ ಅದ್ರ ಎಸೆನ್ಸ್ ಹಾಕಿ ಒರಿಜಿನಲ್ಲು ಅಂತ ಟೋಪಿಹಾಕಿ ದುಡ್ಡು ಮಾಡ್ಕಂತಾರೆ. Smiling

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"

  • Login or register to post comments
  • link
  • Email this ಪ್ರತಿಕ್ರಿಯೆ
May 11, 2008 - 11:33pm — ಗಣೇಶ

ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಗಣೇಶ's picture

ಪ್ರಸನ್ನ,

ಎಲ್ಲಿ ಸಿಕ್ಕಿತು ನಿಮಗೆ ಈ ಮಗುವಿನ (ಪರಿಚಯದಲ್ಲಿ ಹಾಕಿದ) ಚಿತ್ರ. ವ್ಹಾ..
(ನಿಮ್ಮ ಪ್ರತಿಕ್ರಿಯೆ ಓದಿ ಅದೇ ಭಂಗಿಯಲ್ಲಿ ಕುಳಿತಿದ್ದೆ)
ಕೋಲಾದವರ ಕರಾಮತ್ತು ಆ ಮಗುವಿಗೂ ವಿವರಿಸಿದ್ದೀರಾ?
ಅಥವಾ ಸಿ.ಇ.ಟಿ ಪ್ರಶ್ನೆ ಪತ್ರಿಕೆ ಅದರ ಎದುರಿಗೆ ಇಟ್ಟಿದ್ದೀರಾ?
ಪಾಪ.....

-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆತ ಹಣ್ಣುಗಳು
  • ಹಣ್ಣುಗಳು
  • ಮಲೆನಾಡಿನ ಬ್ಯಾಸಿಗಿ ದಿನಚರಿ......!
  • ಆಯಿ ಮದ್ದು...
  • ನಾವು ಶಾಲೆಗೆ ಹೋಗುವ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಇತ್ತೀಚಿನ ಪ್ರತಿಕ್ರಿಯೆಗಳು

  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
  • manoharvp
    ಉ: ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
    May 12, 2008 - 11:12am
  • harshab
    ಉ: ಭಾವಾಭಿಷೇಕ
    May 12, 2008 - 10:36am
  • shobha.koppad
    ಉ: ಹೀಗೊಂದು ಊರು !
    May 12, 2008 - 9:44am
  • ವೈಭವ
    ಉ: ಸುಭಾಷಿತಗಳು
    May 12, 2008 - 8:10am
  • ವೈಭವ
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 8:07am
  • kalpana
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 7:16am
  • venkatesh
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 6:51am
  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.

ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator