ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

May 16, 2008 - 9:22am — hpn

ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಆಹಾರದ ಬೆಲೆ ಏರಿಕೆಯಿಂದ ಭಾರತದಲ್ಲಿರುವ ೧.೫ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಬಹಳ ತೊಂದರೆಯಾಗಲಿದೆ ಎಂದು ಯೂನಿಸೆಫ್ ಎಚ್ಚರ ನೀಡಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.

ಸಿಟಿಗಳಲ್ಲಿರುವವರಿಗೆ ಬಹುಶಃ ಬೆಲೆ ಏರಿಕೆಯ ಹಬೆ ಇನ್ನೂ ಅಷ್ಟಾಗಿ ತಟ್ಟುತ್ತಿರುವಂತೆ ಕಾಣುತ್ತಿಲ್ಲ. ದಿನಗೂಲಿ ಅಥವ ಕಡಿಮೆ ಸಂಬಳದ ನೌಕರಿಗಳಲ್ಲಿರುವ ಸಂಸಾರಗಳಿಗೆ ಬಹುಶಃ ವ್ಯತ್ಯಾಸ ಹೆಚ್ಚು ಗೊತ್ತಾಗಬಹುದು.

ಬಿಬಿಸಿ ವರದಿಯಲ್ಲಿ ಪಟ್ಟಿ ಮಾಡಿರುವ ಕೆಲವು ಅಂಶಗಳು:
• ಇಡಿಯ ವಿಶ್ವದಲ್ಲಿ ಆಗಲೇ ಸರಿಯಾಗಿ ಆಹಾರ ಲಭ್ಯವಾಗದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.
• ಈಗಿನ ತೊಂದರೆಗಿಂತ ಮುಂಚೆಯೇ ಅರ್ಧಕ್ಕರ್ಧ ಭಾರತದ ಮಕ್ಕಳಲ್ಲಿ ಕುಂಟಿತ ಬೆಳವಣಿಗೆ ಕಂಡುಬಂದಿದೆ.
• ಬಡತನದಲ್ಲಿರುವ ಮಂದಿ ಎಂದಿನಂತೆ ಹೆಚ್ಚು. ಬೆಲೆ ಮಾತ್ರ ಇಮ್ಮಡಿಯಾಗಿದೆ.
• ಐದು ವರ್ಷಕ್ಕಿಂತ ಕೆಳಗಿನವರಲ್ಲಿ ೪೮% ಮಕ್ಕಳಿಗೆ ಸರಿಯಾದ ಆಹಾರ ಲಭ್ಯವಾಗುತ್ತಿಲ್ಲ. (ಪಾಕಿಸ್ತಾನದಲ್ಲಿ ಇದು ೩೭%, ಬಾಂಗ್ಲಾದೇಶದಲ್ಲಿ ೪೩% - ಎರಡೂ ಭಾರತಕ್ಕಿಂತ ಕಡಿಮೆ!)
• ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಿದೆ. (ಕೇವಲ ರಾಷ್ಟ್ರದ ಬಜೆಟ್ಟಿನ ೨.೨% ಅಂಶ ಮಾತ್ರ ಕೃಷಿಗೆ ಹೋಗುತ್ತಿದೆ)
• ಬಡತನದಿಂದ ಮಾತ್ರವಲ್ಲ ಸರಿಯಾದ ಕ್ವಾಲಿಟಿ ಆಹಾರ ಸಿಗದೆ ಕೂಡ ತೊಂದರೆ.

  • ಪ್ರಚಲಿತ
~.~
  • Login or register to post comments
  • 334 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 17, 2008 - 4:38pm — ಸಂಗನಗೌಡ

ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

ಸಂಗನಗೌಡ's picture

ಈ ಸಂಗತಿಗಳು ದಿಟಕ್ಕೂ ದಿಗಿಲು ಮೂಡಿಸುವಂತಿವೆ.

*೫ ವರುಶದ ಕೆಳಗಿನ ಮಕ್ಕಳಲ್ಲಿ ನೂರರಲ್ಲಿ ೪೮ ಮಕ್ಕಳು malnutrition ಇಂದಾಗಿ ಕುಂಟಿತ ಬೆಳವಣಿಗೆಯವರಾಗಿದ್ದಾರಂತೆ. ಅಂದರೆ ಹೆಚ್ಚು-ಕಡಿಮೆ ಯಾವುದೇ ಇಬ್ಬರು ಮಕ್ಕಳಲ್ಲಿ ಒಬ್ಬ ಕುಂಟಿತ ಬೆಳವಣಿಗೆಯವ.
*ನೂರರಲ್ಲಿ ಮುವತ್ತು ಮಕ್ಕಳು ಕಡಿಮೆ ತೂಕದವರಾಗಿ ಹುಟ್ಟುತ್ತಾರೆ.
*ಈಗ ಕೂಳು ದಿನಿಸು ತುಟ್ಟಿ ಆಗಿರುವದರಿಂದ, ಇನ್ನೂ ೧.೫ ರಿಂದ ೧.೮ ಮಿಲಿಯನ್ ಅಂದರೆ ೧೫ ರಿಂದ ೧೮ ಲಕ್ಷ ಮಕ್ಕಳು(ಈಗಾಗಲೇ ಐವತ್ತು ಮಿಲಿಯನ್ ಅಂದರೆ ೫ ಕೋಟಿ ಮಕ್ಕಳು malnutrition ಅಂದರೆ ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದಾರೆ!!!) ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲಿದ್ದಾರೆ.
*ಬಡವರು ಊಟದ ಸಂಕೆಗಳನ್ನು ಕಡಿಮೆಗೊಳಿಸಿಕೊಳ್ಳುತ್ತಿದ್ದಾರಂತೆ. ಮೂರು ಹೊತ್ತು ತಿನ್ನುತ್ತಿದ್ದವರು ಎರಡು ಹೊತ್ತಿಗೆ, ಎರಡು ಹೊತ್ತಿನವರು ಒಂದು ಹೊತ್ತಿಗೆ ಹಿಂಬಡತಿ ಹೊಂದುತ್ತಿದ್ದಾರೆ.
*ಮುನ್ನೂರು ಮಿಲಿಯನ್ ಅಂದರೆ ಮುವತ್ತು ಕೋಟಿ ಮಂದಿ ದಿನಕ್ಕೆ ಒಂದು ಡಾಲರಿಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ.
*ಇದರಿಂದ ಸಾಲೆಯಿಂದ ಹೊರಬರುವ ಮಕ್ಕಳ ಸಂಕೆ ಹೆಚ್ಚಲಿದೆ.
*industrialization ಮತ್ತು outsourcing services ಮೇಲೆ ಹೆಚ್ಚಿಗೆ ಹಣ ಸರಕಾರ ಹೂಡುತ್ತಿದೆ. ರೈತಕಿ(ಬೇಸಾಯ) ಮೇಲೆ national budget ನ 2.2% ಅಸ್ಟೇ ಹೂಡಲಾಗುತ್ತಿದೆ.
*ರೈತರು ಕೂಳು ಕಾಳುಗಳನ್ನು ಹೆಚ್ಚು ಬೆಳೆಯಬೇಕಿದೆ.
*ಕೂಳು ಕಡಿಮೆ ಬಿದ್ದಾಗ ಹೊರಗಿನಿಂದ ತರಿಸಲಾಗುತ್ತದೆ, ಅದರ ಬದಲು ಒಳ್ಳೆ ಬೆಂಬಲ ಬೆಲೆ ಕೊಟ್ಟು ಕೂಳು ದಿನಿಸು ಬೆಳೆಯಲು ರೈತರನ್ನು ಸರಕಾರ ಹುರುದುಂಬಿಸಬೇಕು.
*ರೈತರಿಂದ ಹಿಡಿದು ಎಲ್ಲರೂ ಇಂಡಸ್ಟ್ರಿಯಲೈಜೇಶನ್‍ಗೇ ಹೆಚ್ಚಿನ ಒತ್ತು ಕೊಡುತ್ತ ಹೊಂಟಿದ್ದಾರೆ. ಇದು ಸರಿ ಅಲ್ಲ. ರೈತರಲ್ಲೂ ಕೂಳು ದಿನಿಸು ಹೆಚ್ಚಿನ ಲಾಬ ತರದೆಂಬ ಅನಿಸಿಕೆ ಇದೆ, ಅದಕ್ಕೆ ಕಬ್ಬು, ಅಡಕೆ, ಮುಂತಾದ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
*ಒಟ್ಟಿನಲ್ಲಿ ಇಂಡಿಯನ್ಸ್ ಅಗ್ರಿಕಲ್ಚರ್‍ಗೆ ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೇ ಮದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2008 - 4:53pm — ಸಂಗನಗೌಡ

ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

ಸಂಗನಗೌಡ's picture

ಒಟ್ಟಿನಲ್ಲಿ ಇಂಡಿಯದವರು ಅಂದರೆ ನಾವು ರೈತಾಕಿ‍ಗೆ(ಅಗ್ರಿಕಲ್ಚರ್‍ಗೆ) ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೆ ಮದ್ದು.**

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
  • ಬೆಲೆ ಏರಿಕೆಯೆಂಬ ವಿಷವ್ಯೂಹ
  • ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
  • ಕನ್ನಡದ entrepreneur
  • ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator