ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಕೆಂಪೆಗೌಡರು ಬೆಂಗಳೂರಿನ ನಿರ್ಮಾಪಕರು. ಅದು ನಿರ್ವಿವಾದದ ಮಾತು. ಆದರೆ, ನಮ್ಮ ನವ-ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ಅಂದ್ರೆ, ಸರ್ . ಎಮ್. ವಿ ಯವರದಲ್ಲವೇ ? ಪಂಪ, ಕನ್ನಡದ ಆದಿಕವಿ. ಬಸವಣ್ಣನವರು, ಅದರ್ಶಪ್ರಿಯರು. ನೃಪತುಂಗ- ಮಹಾ ಚಕ್ರವರ್ತಿ. ಅಕ್ಕಮಹದೇವಿ, ಹೆಸರಾಂತ ಶಿವ ಶರಣೆ. ಕಿತ್ತೂರು ಚೆನ್ನಮ್ಮ, ಇತ್ಯಾದಿ.
ಆದರೆ, ತಂತ್ರಜ್ಞಾನ, ನವ್ಯ, ಆಧುನಿಕ ವ್ಯಹಹಾರಗಳು, ಉದ್ಯಮ ಕ್ಷೇತ್ರಗಳ ನಿರ್ಮಾಣ ಇವೆಲ್ಲಾ ಗಣನೆಗೆ ತೆಗೆದುಕೊಳ್ಳಬೇಡವೇ ? ಸದ್ಯ. ಡಾ. ರಾಜ್ ಕುಮಾರ್ ಹೆಸರನ್ನು ತರಲಿಲ್ಲ. ರಾಜ್ ಹೆಸರನ್ನು ಒಂದು ಭವ್ಯ ಕಲಾಮಂದಿರವನ್ನು ಕಟ್ಟಿದಾಗ ಬಳಸಿ. ಕೆಂಪೇ ಗೌಡರ ಹೆಸರು ಅಮರವಾಗಿದೆ. ಬೆಂಗಳೂರು ಪೂರ್ತಿ ಅವರದೇ. ಅವರ ನೀಲ ನಕ್ಷೆಯನ್ನೇ ನಾವು ಇಂದಿಗೂ ಅನುಸರಿಸುತ್ತಿದ್ದೇವೆ. ಅಲ್ಲವೇ ?
ಎಲ್ಲಾ ಬಿಟ್ಟು ಆಧಿನಿಕ ಏರ್ಪೋರ್ಟ್ ಗೆ ಅವರ ಹೆಸರ್ಯಾಕೆ ಸ್ವಾಮಿ ? ಡಾ. ವಿಶ್ವೇಶ್ವರಯ್ಯನವರಿಗಿಂತಾ ಭಾರಿ ದೊಡ್ಡೋರು. ಹಿರಿಯರು ಅವರು. ಅಲ್ಲವೇ !
ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ನಮ್ಮ ರೈತಮಕ್ಕಳ ಜೀವನನ ಬಂಗಾರಮಾಡಿದ ಮಾನುಬಾವನ್ನ ಮರಯಕ್ಕಾದೀತೇನಣ್ಣ ? ಒಸಿ ಅಂಗೇ ಇಚಾರಮಾಡಿ.
ಕಾಲ ಇನ್ನು ಮಿಂಚಿಲ್ಲ ಕಣಣ್ಣ. ಉಸಾರು, ಅನ್ನಕೊಟ್ಟೋರ್ನ ಮರ್ಯೋದು ಯಾವ್ನ್ಯಾಯ. ಇದೆಲ್ಲಾ, ಈನ ಬುದ್ದೀನ ಏಳ್ಕೊಟ್ಟೊರು ಯಾರು ಅಂತೀನಿ ?

- Login or register to post comments
- 849 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !
- ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
- ವಿಮಾನಪುರ
- ಡಾ. 'ರಾಜ್' ಅಮರರಾದರು !
- ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ

RSS:
ಪ್ರತಿಕ್ರಿಯೆಗಳು
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಅಜ್ಜ
ವಿಸ್ವೇಸ್ವರಯ್ಯನೋರ ಹೆಸರಾಗೆ ನಮ್ ನಾಡಲ್ಲಿ ಆಗಲೇ ಒಂದು ಯುನಿವರಿಸಿಟಿ, ಕಾಲುವೆ ಇವೆಲ್ಲ ಅವೆ.
ಬೆಂಗಳೂರಿನ ಏರ್‍ಪೋರ್ಟಿಗೆ ಕೆಂಪೇಗೌಡರ ಹೆಸರೇ ಸರಿ. ಮಯಿಸೂರಿನ ಏರ್‍ಪೋರ್ಟಿಗೆ ವಿಶ್ವೇಶ್ವರಯ್ಯನ ಹೆಸರು ಇಡಲಿ, ಅವರು ಎಶ್ಟೇ ಆದ್ರೂ ಮಯಿಸೂರಿನ ದಿವಾನರಾಗಿದ್ದೋರು. ಆದ್ರೆ ಬೆಂಗಳೂರು ಎಂದು ಕೆಂಪೇಗೌಡ ಕಟ್ಟಿದ ಊರು ಎಂದು ಮಂದಿ ಹೇಳೋದು.
ಬೆಳಗಾವಿಯಲ್ಲಿ ಬತ್ತಾ ಇರೋ ಏರ್‍ಪೋರ್ಟಿಗೆ ’ಕಿತ್ತೂರು ಚನ್ನಮ್ಮ’ ಏರ್‍ಪೋರ್ಟು ಎಂದು ಯೆಸರು ಇಡಬೇಕೇ ಹೊರತು ಮದಕರಿನಾಯಕನ ಏರ್‍ಪೋರ್ಟು ಅಂತ ಇಟ್ರ ಸಂದಾಕ್ಕಿರತಯ್ತಾ?
ಬೆಂಗಳೂರು ಅಂದ್ ಮ್ಯಾಕೆ ಕೆಂಪೇಗೌಡಂಗೇ ಮೊದಲ ಜಾಗ!
=====================================
ಮಾಯ್ಸ!
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ವಿಶ್ವೇಶ್ವರಯ್ಯನವರನ್ನು ಬರೇ ಮೈಸೂರಿಗೆ ಸೀಮಿತ ಮಾಡ್ತೀದಿಯೇನೋ ಗಮಾಡು!
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಸೀಮಿತ ಮಾಡಲಿಲ್ಲ..
ಹಾಗೆ ನೋಡಿದರೆ ದೇವನಹಳ್ಳಿಯಲ್ಲಿ ಟಿಪ್ಪು ಹುಟ್ಟಿದ್ದು..
ನಿಂದೊಂದು.. ಕೆಂಪೇಗೌಡನ ಹೆಸರು ಹಾಗಾದರೆ, ಬಳ್ಳಾರಿ ಏರ್‍ಪೋರ್ಟಿಗೆ ಇಡೋದಾ?
ವಿಶ್ವೇಶ್ವರಯ್ಯ ಯುನಿವರಿಸಿಟಿಯನ್ನ ಕೆಂಪೇಗೌಡ ಯುನಿವರಿಸಿಟಿ ಅನ್ನೋದಾ?
ಕೆಂಪೇಗೌಡಂಗೆ ಬೆಂಗಳೂರಲ್ಲಿ ಬಿಟ್ಟು ಬೇರೆ ಎಲ್ಲಿ ಜಾಗ?ಒತ್ತು?
ಎಲ್ಲಾದಕ್ಕೂ ವಿಶ್ವೇಶ್ವರಯ್ಯ ಅಂತ ಹೆಸರು ಇಡಬೇಕಾ?
ಗುಬಾಲ್
=====================================
ಮಾಯ್ಸ!
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಹಾಗಿದ್ರೆ ಟಿಪ್ಪುಗೆ ದೇವನಹಳ್ಳಿಯಲ್ಲಿ ಬುಟ್ರೆ ಬೇರೆಲ್ಲಿ ಜಾಗ! ಒತ್ತು?
ಅವನ ಹೆಸ್ರೇ ಇಟ್ಬುಡದಾ? ಗುಲ್ಡು
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಹು.. ಅವಂದೇ ಹೆಸರು ಮಡಗಣ..
ಟಿಪ್ಪು ಏನ್ ಕಡಮೆಯಾ?
=====================================
ಮಾಯ್ಸ!
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಇಲ್ಲ ಯಾರೂ ಕಡಿಮೆ ಏನಿಲ್ಲ. ಒಬ್ರುಕ್ಕಿನ್ನ ಒಬ್ರುದ್ದು ಜಾಸ್ತಿನೇ ಐತೆ.
ಅದ್ಕೆ ಹಿಂಗೆ ಒಬ್ಬ ಅವರದ್ದಿಡ್ಬೆಕು ಅಂದ್ರೆ ಇನ್ನೊಬ್ಬ ಇನ್ನೊಬ್ರದ್ದಿಡ್ಬೆಕು ಅಂತಾನೆ
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಅವಂಗೆಲ್ಲೈತೆ ಜಾಗ ಇದನ್ ಬಿಟ್ರೆ ಅನ್ನೋದ್ ಸರಿ ಅಲ್ಲಕಣ್ಮಗ. ಇಸ್ಯ ಇಂಗೈತೆ ಮಗ- ನೋಡು, ಬೆಂಗ್ಳೂರ್ನಾಗೆ ಇಮಾನದ್ ಕಾರ್ಕಾನೆ ಬರಕ್ಕೆ ಯಾರಯ್ಯ ಅಂದ್ರೆ ಕೆಂಪೇಗೌಡ್ರ ಎಸ್ರು ಏಳ್ತೀಯ ? ಯೋಚ್ನೆ ಮಾಡಣ್ಣಯ್ಯ. ಯಾವ ಸ್ವಾರ್ಥನೂ ಇಲ್ದೆ, ಅಯ್ನೋರು ಇವೆಲ್ಲ ಜನ ಇತದ್ ಕೆಲ್ಸ ಮಾಡಿದ್ರು. ಅವರಿಗೆ ಎಸ್ರಿಡೋದು ಇವೆಲ್ಲಾ ಗೊತ್ತೇ ಇರ್ಲಿಲ್ಲ. ನಮ್ ಬೆಂಗ್ಳೂರ್ನೊರ್ಗೆ ಬಿಟ್ರೆ ಯಾರಿಗ್ ಗೊತ್ತು ನಮ್ ಕೆಂಪೇಗೌಡ್ರ ಎಸ್ರು. ಅದಲ್ದೆ. ತಂತ್ರಜ್ಞಾನ ಇಸ್ಯ ನಾವ್ ಮಾತಾಡ್ತಿರೋದು. ಸ್ವಿಮಿಂಗ್ ಪೂಲ್, ನಗರ ಸಭೆ, ಉದ್ಯಾನವನ ಎಲ್ಲ ಇವ್ಯಲ್ಲಪ್ಪಾ ಇಡಿ. ಯಾರ್ಬ್ಯಾಡಾ ಅಂತಾರೆ.
ನಮ್ ಕನ್ನಡ್ದೋರ್ ಅಷ್ಟಿಲ್ದೆ ಎಲ್ಲೂ ಎಸ್ರ್ ಮಾಡಂಗಿಲ್ಲ. ಎಲ್ರೂ ಕನ್ನಡ್ದೋರ್ನ್ ಇಡ್ಕಂಡು ದನಕ್ ಬಡ್ದಂಗ್ ಬಡ್ಯೋರೆ. ಇದರ್ಲಾದ್ರು ಒಮ್ಮತ ಬ್ಯಾಡ್ವೇನಪ್ಪ. ಸಿಟ್ಕಬ್ಯಾಡ ಕಣಣ್ಣ. ನಿಂಗ್ ಎಂಗ್ ಬ್ಯಾಕೊ ಅಂಗ್ ಮಾಡ್ಕ ! ನೀನೇ ಗೆದ್ದೆ. ಓಗು.
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಇದಪ್ಪ ಮಾತೂಂದ್ರೆ..
ಊರತುಂಬಾ ಕೆಂಪೇಗೌಡ್ರು ಹೆಸ್ರು ಎಲ್ಲಾದಕ್ಕೂ ಇಟ್ಟವ್ರೆ.
ಕೆಂಪೇಗೌಡ್ರು ಬೆಂಗಳೂರನ್ನ ಕಟ್ಟಿದ್ದಕ್ಕೆ ಬೆಂಗಳೂರಿನ ಎಲ್ಲದಕ್ಕೂ ಅವರ ಹೆಸ್ರಿಟ್ಟವ್ರೆ. ಅದು ಸರಿನೇಯ. ಆದ್ರೆ ಅಯ್ನೋರ ಇಸ್ಯ ಹಂಗಲ್ಲ.
ನಂಗಂತೂ "ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ"ವೇ ಸೆಂದಾಗೈತೆ.
ಇದ್ಕೂ ಮ್ಯಾಲೆ ಅವರವರಿಷ್ಟ. ಓಬತ್ತೀನಿ.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಮಹೇಸ್ ಹೇಳೋ ಮಾತಲ್ಲಿ ಅರಿತ ಇದೆ ಸರ್... ಸರ್ ಎಂ.ವಿ ಅವರ ಹೆಸರು ಆಗಲೇ ಜಗತ್ತಿಗೇ ಗೊತ್ತಿದೆ. ಕೆಂಪೇಗೌಡರಿಗೆ ಬೆಂಗಳೂರ ಬಿಟ್ಟರೆ ಇಲ್ಲ ಅದಕ್ಕೆ ಅದೇ ಹೆಸರು ಇಡಬೇಕು ಅನ್ನುವದನ್ನು ಒಪ್ಪಲಾಗದಿದ್ದರೂ,.. ಜಗತ್ತಿಗೆ ಅಸ್ಟಾಗಿ ಗೊತ್ತಿರದ ಆದರೆ ಗೊತ್ತುಪಡಿಸಬೇಕಿರುವ ಹೆಸರನ್ನು ಇಡಬೇಕೆಂಬುದು ನನ್ನ ಅಂಬೋಣ...
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಮಹೇಸ್ ಹೇಳೋ ಮಾತಲ್ಲಿ ಅರಿತ ಇದೆ ಸರ್... ಸರ್ ಎಂ.ವಿ ಅವರ ಹೆಸರು ಆಗಲೇ ಜಗತ್ತಿಗೇ ಗೊತ್ತಿದೆ. ಕೆಂಪೇಗೌಡರಿಗೆ ಬೆಂಗಳೂರ ಬಿಟ್ಟರೆ ಇಲ್ಲ ಅದಕ್ಕೆ ಅದೇ ಹೆಸರು ಇಡಬೇಕು ಅನ್ನುವದನ್ನು ಒಪ್ಪಲಾಗದಿದ್ದರೂ,.. ಜಗತ್ತಿಗೆ ಇನ್ನೂ ಅಸ್ಟಾಗಿ ಗೊತ್ತಿರದ ಆದರೆ ಗೊತ್ತುಪಡಿಸಬೇಕಿರುವ ಹೆಸರನ್ನು ಇಡಬೇಕೆಂಬುದು ನನ್ನ ಅಂಬೋಣ...
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಎಂಗ್ ಏಳ್ಬೆಕೊ ತಿಳಿತಿಲ್ವೆ. ಈಗ ನಿಮ್ಮಗಳ್ ಏಳ್ಕೆ ನೊಡಿದ್ರೆ, ಕೆಂಪೇಗೌಡ್ರ ಎಸ್ರ್ನ ಪ್ರಸಿದ್ಧಿಪಡ್ಸೊದ್ ಮುಕ್ಯ ಅಂತ್ ನನಗು ಅನ್ನಿಸ್ತದೆ. ಆದ್ರೆ ಯಾಕೆ ? ವಿಕಿಪೀಡ್ಯದಾಗ್ ಓಗಿ ಕಿಲಿಕ್ ಅಂದ್ರ ಸಾಕು. ಬೆಂಗ್ಳೂರ್ ಇಸ್ಯ ಅದೇ ಬತ್ತದೆ. ಅಜ್ಜಿ ಕಾಳ್ಬೇಯ್ಸಿ ಕೊಟ್ಟಿದ್ದು. ಮತ್ತೆ ನಮ್ ಕೆಂ. ಗೌಡ್ರ ಇಸ್ಯ ಎಲ್ಲಾ ಒಂದೊಂದೆ ಬತ್ತದೆ. ನಮಗೆ ಜಾಗತಿಕ ವಿಸ್ವದಾಗೆ ಬೆಂಗ್ಳೂರಿನ್ ಮಾತ್ವ ಮುಕ್ಯ ಅಲ್ವ್ರ. ಈಗೇನೊ ಅದು ಐಟಿನಾಗಿ ಮುಂದೈತೆ ಅಂತವ ಎಲ್ಲ ಲಬಲಬ ಬಡ್ಕಂತರೆ. ಆದ್ರೆ ಯೂರೊಪ್ ನೊರು, ಅಮ್ರಿಕದೊರು, ಬೆಂಗ್ಳೂರ್ನ ನೋಡೊ ಕಣ್ಣೇ ಬೇರೆ ಅಂತಾವ ನಮ್ ದೊಗ್ನಾಳ್ ಸಾಯೇಬ್ರು ಅಪ್ಣೆ ಕೊಡ್ಸವ್ರೆ, ನನ್ಕಂದ. ಅದ್ಕೆ ನಾನೂ ಏಳಾದು, ಯಾವ್ ಗೌಡ್ರ್ನ್ನೂ ಪ್ರಸಿದ್ದಿ ಪಡ್ಸೊದ್ ಬಿಟ್ಟು, ನಮ್ ಊರು ವಿಸ್ವದಾಗೆ ಬರಿ ಒಂದ್ ಕೆಂಪೇಗೌಡ್ರ್ ಕಟ್ಟಿದ್ ಚಿಕ್ ಆಳ್ಳಿ ಗ್ರಾಮ ಅಲ್ಲ. ಅದ್ ಅಂಗೇ ಓಗಿ ಓಗಿ ಕೈಗೆಟಕ್ದಂಗಾಗಗೈತೆ. ಗಟಾನು ಗಟಿಗಳಾದ ಇಸ್ವೇಸ್ವರಯ್ಯನೊರ್ ಆಸೀರ್ವಾದ್ದಿಂದ ಬೊ ಮುಂದೈತೆ. ಎಲ್ರು ಬನ್ರಿ. ನಿಮ್ ಅಣನ ಇಲ್ಲಿ ಆಕಿ ನಮ್ ದೇಸ್ದ ಏಳ್ಗೆ ಮಾಡಿ. ಇಲ್ಲಿ ಬಯ ಇಲ್ಲ. ಜನ ಒಳ್ಳೇರು ಅನ್ನೊದ್ನ ಸಾಬೀತ್ ಮಾಡೊದ್ ಬಿಟ್ಟು. ಪಾಲೀಸ್ ಮಾಡಿ ಅವರ್ನೆಲ್ಲಾ ಬುಟ್ಟೀನಲ್ ಮಡಿಕ್ಕೊಳದ್ ಬಿಟ್ಟು ಎಸ್ರು ಪಸ್ರು ಅಂತಾವ ನಾವ್ ನಾವೇ ಕಿತ್ತಾಡೊದ್ ಸರೀನಾ. ಓದ್ದೊರು ನೀವೆ ಇಂಗಾದ್ರೆ ಎಂಗೆ ಅಂತೀನಿ. ಅಳ್ಳಿ ಮುಕ್ಕ ನಂಗ್ಕೂಡ ತಿಳಿತೈತಲ್ಲಪ್ಪ. ನೀನೊಳ್ಳೆ !
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಕೆಲವರ ಗಮಾಡು ಬುದ್ಧಿ ಏನು ಮಾಡಿದ್ರೂ ಹೋಗಲ್ಲ.
ಮಹಾತ್ಮಾಗಾಂಧಿ ಎಲ್ಲೋ ಒಂದು ಪೋರಬಂದರಿನಲ್ಲಿ ಹುಟ್ಟಿದ್ದರು. ಆದ್ದರಿಂದ ಅವರ ಸೇವೆ ಏನೇ ಆಗಿದ್ದರೂ ಆ ಊರ್ಬಿಟ್ಟು ಹೊರಗಡೆ ಅವರ ಹೆಸರಿಡಬಾರದಾ? ಏಕೆ ಪ್ರತಿಊರಿನಲ್ಲೂ ಒಂದು ಮಹಾತ್ಮಾ ಗಾಂಧಿ ರಸ್ತೆ ಅಂತ ಇರಬೇಕಿತ್ತು? ಅದು ಅವರ ದೇಶಸೇವೆಗಾಗಿ ಕೊಡುವ ಗೌರವ ಅಷ್ಟೆ.
ಹಾಗೆಯೇ ಈ ವಿಶ್ವೇಶ್ವರಯ್ಯ. ಅವರ ಸಾಧನೆ ಏನು ಕಡಿಮೆಯೇ. ಹೆಚ್.ಎ.ಎಲ್, ಭದ್ರಾವತಿ ಕಬ್ಬಿಣಕಾರ್ಖಾನೆ, ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರುಣಿಸಿದ್ದು. ಅಷ್ಟು ಸಾಲದೆಂಬಂತೆ ಆ ಕಾಲದಲ್ಲಿ ಮುಂಬೈ ಮೊದಲಾದ ಸರ್ಕಾರಗಳೂ ಇವರ ಸೇವೆಯನ್ನು ಬಳೆಸಿಕೊಂಡಿವೆ. ಹಾಗಿದ್ದಾಗ ವಿಶ್ವೇಶ್ವರಯ್ಯ ಎಂದರೆ ಮೈಸೂರಿಗೆ ಸೀಮಿತವಾಗಬೇಕು ಎಂಬುದು ಮೂರ್ಖವಾದ.
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಯಾಕ್ ಮೈಸೂರ್ ಗೆ ಸೀಮಿತ ಅನ್ನಸ್ತೈತೆ ಅಂದ್ರೆ. ಆಗ ಮೈಸೂರ್ ರಾಜ್ಯ ಇತ್ತಲ್ಲ. ಅರಿಅರ ನೆ ಕೊನೆ ನಿಲ್ದಾಣ. ಮುಂದಿನದೆಲ್ಲಾ ಬಾಂಬೆ ಪ್ರಾವಿನ್ಸ ಅಂತಿತ್ತು. ಕರ್ನಾಟ್ಕ ಆಗಿದ್ ಈಚ್ಗಲ್ವ್ರ. ಅದಕ್ಕೆ. ಮಹಾರಾಷ್ಟದೊರ್ ನಮ್ಜತೆ ಯಾವಾಗ್ಲು ಕಾಲ್ಕೆರೊಂಡ್ ಜಗಳಕ್ ಬಂದ್ರು ನೊವೆ, ಅವ್ರ , [ಆರ್. ಇ. ಸಿಗೆ] ನಾಗ್ಪುರ್ದಾಗೆ ನಮ್ ಐನೊರ್ ಎಸ್ರನ ಮಡ್ಗವ್ರೆ. ಅವ್ರ ಬಗ್ಗೆ ಬಾರಿ ಇಸ್ವಾಸ ಗೌರವ. ಅವ್ರಿಗೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಕಾಲೇಜ್ ಆಪೀಸ್ಗೊಗಿ. ಅಲ್ಲಿ ಅವರ್ ಪೊಟೊನೆ ಮೊದ್ಲು ಕಾಣಾದು.
ಬ್ಯಾರೆ ಊರಿನ್ ಜನಕ್ಕೆ ಒಳ್ಳೆ ಇಂಪ್ರೆಸನ್ ಬರ್ಬೇಕು. ಅದ್ಮುಕ್ಯ. ನಾವೆಲ್ಲ ಮೇಲ್ ಮ್ಯಾಲೆ ಓಗೊದನ್ನು ಇಚಾರ ಮಾಡೊದ್ ಬಿಟ್ಟು ಓಬಿರಾಯನ್ ಕಾಲ್ದಾಗೆ ಇದ್ದೋರ್ ಇಸ್ಯ ಇಂತ ನವೀನ್ ಕಾಲ್ಗಟ್ಟದಾಗಿ ಯೊಚ್ನೆ ಮಾಡೊದ್ ಸರಿನಾ ? ಅದು ನನ್ ಪೈಂಟ್.
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಬೆಂಗ್ಳ್ರೂರು ಬರೀ ಒಂದು ಊರಾಗಿ ಉಳಿದಿಲ್ಲಾ ಈವಾಗ (ತುಮುಕೂರು, ಹುಬ್ಬಳ್ಳಿ, ಬೆಳಗಾವಿ ಹಂಗೆ), ಕರ್ನಾಟಕದ ರಾಜಧಾನಿ ಆಗಿ ಬಹಳ ದಿನ(ವರ್ಷಗಳೇ) ಆಗಿದೆ. ಕರ್ನಾಟಕ ಸುದ್ದಿ ಆಗಿರೋದರಲ್ಲಿ ಸರ್ ಎಂ. ವಿ. ಅವರ ಕಾಣಿಕೆ ತುಂಬಾನೆ ಇದೆ. (ಕ್ವಿಕ್ ರೆಫರೆನ್ಸ್- ವೆಂಕಟೇಶ್ ಅವರ ಇದರ ಹಿಂದಿನ ಲೇಖನ).
ಹಾಗೆ ನೋಡಿದರೆ, ಕೆಂಪೇಗೌಡರು, ರಾಜರು, ಜನ-ಸಾಮಾನ್ಯರ ಬಗ್ಗೆ ಕಾಳಜಿ ಇದ್ದವರು, ಅವರ ಹೆಸರಲ್ಲಿ ಆಗ್ಲೇ ಬಸ್ ನಿಲ್ದಾಣವಿದೆ. ಚಿತ್ರದುರ್ಗದ ಏರ್-ಪೋರ್ಟ್ ಗೆ "ಮದಕರಿನಾಯಕ ಏರ್-ಪೋರ್ಟ್ " ಅಂತ ಹೆಸರಿಡಲೇಬೇಕು (ಅದು ಕರ್ನಾಟಕದ ಒಂದು ಭಾಗ ಮಾತ್ರ, ಮತ್ತು ಅಲ್ಲಿ ಮದಕರಿನಾಯಕನ ನಂತರ ನಾಡು ಕಟ್ಟೋ ಕೆಲಸ ಯಾರೂ ಮಾಡಿಲ್ಲ.)
ಮತ್ತೇ ಪ್ಲೀಸ್, ಯಾವ ’ಸುಲ್ತಾನ’ರ ಹೆಸ್ರೂ ಇಲ್ಲಿ ಬೇಡ, ನಾವು ಓದಿದ-ತಿಳಿದ(?) ಇತಿಹಾಸದ ಬಗ್ಗೆ, ನಮಗೆ ಚೆನ್ನಾಗಿ ಗೊತ್ತಿದೆ. ಇರಲಿ, ಆ ವಿಷಯ ಈಗ ಬೇಡ.
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಮತ್ತೇ ಪ್ಲೀಸ್, ಯಾವ ’ಸುಲ್ತಾನ’ರ ಹೆಸ್ರೂ ಇಲ್ಲಿ ಬೇಡ, ನಾವು ಓದಿದ-ತಿಳಿದ(?) ಇತಿಹಾಸದ ಬಗ್ಗೆ, ನಮಗೆ ಚೆನ್ನಾಗಿ ಗೊತ್ತಿದೆ. ಇರಲಿ, ಆ ವಿಷಯ ಈಗ ಬೇಡ.
ಮುತ್ನಂತ ಮಾತಾಡ್ದೆ ಕಣಣ್ಣ. ನಿಂಗಡ್ಬಿದ್ದೆ. ನೀನೇ ನಮ್ ಗುರು.
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಅಯ್ಯೋ ಸಾಮಿ ವೆಂಕಟೇಶಪ್ಪೋರೇ, ನಾನು ವಯಸ್ನಾಗೆ-ಗ್ಯಾನದಾಗೆ ನಿಮ್ಗಿಂತ ಭೋ ಸಣ್ಣೋನು.., ಅಡ್ಡ-ಬೀಳ ಮಾತೆಲ್ಲಾ ಆಡಬ್ಯಾಡಿ. ಎನೋ ಸರಿ ಅನ್ಸಿದುನಾ ಏಳ್ದೆ.....
ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಬಿಡ್ರಿ. ಏನೋ ಏಳ್ದೆ. ನಿಮ್ಮಂತೊರ್ ಏಳ್ದಂಗೆ ಕೇಳೋದೆ ಅಲ್ವ್ರ. ನಮ್ದೇನೈತೆ. ರಿಟೈರೆಡ್ ಅಂತ ಎಲ್ರು ಮೂಲೇಲ್ ಕೂಡ್ಸವ್ರೆ !