ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಳೇ ಚಂದಮಾಮ ಇಲ್ಲಿದ್ದಾನೆ

ಹಳೇ ಚಂದಮಾಮ ಇಲ್ಲಿದ್ದಾನೆ

ಶಾಲೆಗೆ ರಜೆ ಬಂದ್ರೆ ಸಾಕು, ಆಟ ಆಟ ಆಟ... ಸಂಜೆ ಕತ್ತಲಾದ ಮೇಲೆ ಮನೆಗೆ ಬಂದು, ಟೈಂಪಾಸ್ ಗೆ ಮೊರೆ ಹೋಗ್ತಾ ಇದ್ದದ್ದು "ಚಂದಮಾಮ"ನ ಬಳಿ.

ಸನ್ 1947 ರ ಜುಲೈ ತಿಂಗಳಲ್ಲಿ ಬಿ. ನಾಗಿರೆಡ್ಡಿ ಯವರು ಸ್ವಾತಂತ್ರ್ಯಾನಂತರದ ಪೀಳಿಗೆಗೆ ಭಾರತದ ಸಂಸ್ಕೃತಿ, ಸಾಹಿತ್ಯ, ಕಲೆ, ಪುರಾಣಗಳನ್ನು ಅತ್ಯಂತ ಸರಳವಾದ ಕಥೆಗಳ ಮೂಲಕ ಹೇಳಿಕೊಡುವ ಹಾಗು ಅರಿವು ಮೂಡಿಸುವ ಸಲುವಾಗಿ "ಚಂದಮಾಮ"ನನ್ನು ಭೂಮಿ ಮೇಲೆ ತಂದರು. ಆ ಹಳೆಯ ಸುಮಾರು ಅಷ್ಟೂ ಸಂಚಿಕೆಗಳು ನಮಗೆ ಇವಾಗ ಮತ್ತೆ ದೊರಕಿಸುವ ನಿಟ್ಟಿನಲ್ಲಿ "ಚಂದಮಾಮ"ನನ್ನು ಅಂತರ್ಜಾಲಕ್ಕೆ ತಂದಿದ್ದಾರೆ. ಇದರಲ್ಲಿ 1949ರ ಜುಲೈನಿಂದ, 1958ರ ಡಿಸೆಂಬರ್ ವರೆಗಿನ ಸಂಚಿಕೆಗಳನ್ನು PDF ರೂಪದಲ್ಲಿ ಲಭ್ಯವಿದೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಇಂಗ್ಲಿಷ್ ಹಾಗು ಹಿಂದಿಯಲ್ಲಿ ಹಳೆಯ ಸಂಚಿಕೆಗಳು ಫ್ರೀ ಡೌನ್ಲೋಡಿಗೆ (Free Download) ಇದೆ. ಹಳೆಯ ಎಲ್ಲಾ ಸಂಚಿಕೆಗಳೂ ಸಧ್ಯಕ್ಕೆ ಇಲ್ಲವಾದರೂ, ಇನ್ನು ಕೆಲವು ತಿಂಗಳುಗಳಲ್ಲಿ ದೊರೆಯಬಹುದು.

ಮತ್ತೆ ನಮ್ಮೆಲ್ಲರ ಪ್ರೀತಿಯ ಮಾಮನನ್ನು ನೋಡುವ ಬನ್ನಿ.

ಅಂತರ್ಜಾಲದಲ್ಲಿ ಹಳೆಯ "ಚಂದಮಾಮ"ನನ್ನು ಇಲ್ಲಿ ನೋಡಿರಿ.

http://www.chandamama.com/content/story_archive_pdf/archive.php

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

http://somari-katte.blogspot.com

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kadakolla05's picture

ಶಂಕರ ರವರೇ,
ನಿಮ್ಮ ಈ ಕಾರ್ಯಕ್ಕೆ ನಾವೆಲ್ಲ ಋಣಿಗಳು.

ಧನ್ಯವಾದಗಳೋಂದಿಗೆ
ಕುಮಾರಸ್ವಾಮಿ.ಕಡಾಕೊಳ್ಳ.
ಪುಣೆ
28/05/08

msprasad's picture

ಧನ್ಯವಾದಗಳು.
ನಿಮ್ಮ ಅಭಿಮಾನವೇ ನಮಗ ಅಕ್ಕಿ ಬೇಳೆ

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte....

Aravind M.S's picture

ಪ್ರಸಾದ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಹೊಸ ಚಂದಮಾಮದ ಅವತಾರ ನೋಡಿ ಬೇಸತ್ತಿದ್ದ ನನಗೆ ತಮ್ಮ ಸೂಚನೆ ಜೀವವೇ ಕೊಟ್ಟಿದೆ. ಏಕೆಂದರೆ ಆ ಹಳೆಯ ಚಂದಮಾಮಗಳ ಗುಣ ಮಟ್ಟ ಈಗ ಕಾಣುತ್ತಿಲ್ಲ.

೧೯೫೮ ರ ನಂತರದ ಚಂದಮಾಮಗಳೂ ಸಿಗಬಹುದೇ ? ಏಕೆಂದರೆ ನಾನು ಆಡುತ್ತಿರುವ / ನೋಡಿದ ಗುಣಮಟ್ಟದ ಪುಸ್ತಕಗಳು ೧೯೭೦ ರಿಂದ ಬಂದವುಗಳು
- ಅರವಿಂದ್

anil.ramesh's picture

ಶ೦ಕರ ಪ್ರಸಾದ್ ಅವರೇ,

ನನ್ನ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಮನೆಯವರಿಗ೦ತೂ ತು೦ಬಾ ಖುಷಿ ಆಯ್ತು... ೧೯೫೮ ನ೦ತರದ ಸ೦ಚಿಕೆ ನನಗೂ ಬೇಕು...

ಅನಿಲ್ ರಮೇಶ್.

msprasad's picture

ನಿಮ್ಮ ಅಭಿಮಾನಕ್ಕೆ ತುಂಬ ಧನ್ಯವಾದಗಳು.
ಚಂದಮಾಮ ಪ್ರಕಾಶನವು ಇನ್ನೂ ಹಳೆಯ ಪ್ರತಿಗಳನ್ನು ಡಿಜಿಟಲ್ ಮಾಧ್ಯಮಕ್ಕೆ ತರುವ ಕೆಲಸ ಮಾಡುತ್ತಿದೆ.
ನಾನು ಚಂದಮಾಮಕ್ಕೆ ಈ-ಮೇಲ್ ಮಲ್ಸಿದ್ದೆ. ಆದ್ರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte....

Aravind M.S's picture

ಪ್ರಸಾದರೆ / ಆಸಕ್ತ ಸಂಪದಿಗರೆ,

ಈ ತೊಂದರೆಗೆ ಏನಾದರೂ ಕುರುಹು ಸಿಗಬಹುದೆ. ಈ ಲೇಖನ ಓದಿದಾಗ ತೆರೆಯುತ್ತಿದ್ದುದು ಈಗ ಏನು ತಡೆಯಲಾಗಿದೆಯೋ ತಿಳಿಯುತ್ತಿಲ್ಲ

- ಅರವಿಂದ

Aravind M.S's picture

ಮರಳಿ ಯತ್ನ - ದಯವಿಟ್ಟು ಸಹಾಯ ಮಾಡ್ತೀರಾ, ೧೯೮೦ರ ಜೂನ್ ನಿಂದ ಸುಮಾರು ೮ ತಿಂಗಳು ಪ್ರಸಾರವಾದ 'ಧೂಮಕೇತು' ಎಂಬ "ಮಾಂತ್ರಿಕ ಪ್ರಪಂಚದ ಮಾಯಾ ಅರಣ್ಯ, ರಾಜಕೀಯ ಕುತಂತ್ರದ ವಿರುದ್ಧದ ಸಾಹಸದ ಕತೆಗಳ" ಇಳಿಸಿಕೊಳ್ಳುವ ಹವಣಿಕೆಯಲ್ಲಿರುವೆನು. ಕೊಂಡಿ ಸಿಕ್ಕರೆ ನಾನು ಧನ್ಯ. ೫೨ರ ನಂತರದ್ದು ಸಿಗುವುದು ಕಷ್ಟವೇ. ಆದರೆ ೫೨ರ ಮುಂಚಿನ ಕೊಂಡಿಯೂ ತೆರೆಯುತ್ತಿಲ್ಲವೇಕೋ ತಿಳಿಯದಾಗಿದೆ

- ಅರವಿಂದ

msprasad's picture

Aravind,
ನಾನು ಇದೆ ವಿಚಾರವಾಗಿ chandamama.com ಗೆ ಈ-ಅಂಚೆ ಬರೆದಿದ್ದೆ.
ಆದ್ರೆ ಅವರ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ನಿಮ್ಮ ಹಾಗೆ ನಾನು ಕೂಡ ಆ "ಧೂಮಕೇತು"ವಿನ ಅಭಿಮಾನಿ.
ನೋಡೋಣ, ಮತ್ತೆ ಪ್ರಯತ್ನಮಾಡ್ತೀನಿ. ಇನ್ನೊಮ್ಮೆ ಅವರಿಗೆ ಈಮೇಲ್ ಬರೀತೀನಿ.

ಶಂಕ್ರ

Aravind M.S's picture

ಶಂಕರ್,

ಉತ್ತರ ಬಂದರೆ ದಯವಿಟ್ಟು ತಿಳಿಸಿ.

ಅದು ಸಿಕ್ಕಿದರೆ ನಾನು ಧನ್ಯ :)

- ಅರವಿಂದ

msprasad's picture

ಖಂಡಿತಾ ಅರವಿಂದ, ನಿಮಗೆ ತಿಳಿಸ್ತೀನಿ.
ಅಲ್ಲಿವರೆಗೆ ಎಂಜಾಯ್ :)

ಕಟ್ಟೆ ಶಂಕ್ರ
http://somari-katte....

shreekant.mishrikoti's picture

ಹಳೇ ಚಂದಮಾಮ ಇಲ್ಲಿ ಓದಬಹುದು ;
http://www.chandamam...

ಮೊದಲು ಪೀಡಿಎಫ್ ರೂಪದಲ್ಲಿತ್ತು ; ಈಗ ಫ್ಲ್ಯಾಷ್ ನಲ್ಲಿದೆ . ಅಲ್ಲಿಯೇ ಓದಬೇಕು .

Aravind M.S's picture

೧೯೫೪ - ಜನವರಿಯಿಂದ ಶುರುಆಗಿದೆ ನೋಡಿ, ಓದಿ ಆನಂದಿಸಿರಿ.

(೧೯೮೦ ರಿಂದ ಬಂದುದು ಇದರ ಪುನರ್ಪ್ರಕಟಣೆ ಅಷ್ಟೆ)