ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮುಂಗಾರು ಮಳೆಯೇ...

May 28, 2008 - 7:50pm — rashmi_pai

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ಬಿದ್ದಾಗ ಹರಡುವ ಮಣ್ಣಿನ ಪರಿಮಳ....ಆಕಾಶದಲ್ಲಿ ಮೋಡ ಕವಿಯುತ್ತಿದ್ದಂತೆ ದುಂಬಿಗಳು ಹಾರಾಡುತ್ತವೆ..ದನಕರುಗಳು 'ಅಂಬಾ' ಎಂದು ಕೂಗುತ್ತಾ ಕೊಟ್ಟಿಗೆ ಸೇರುತ್ತವೆ..ಹೊರಗಿದ್ದ ಬಟ್ಟೆ ಬರೆ, ಕಟ್ಟಿಗೆ ಎಲ್ಲಾ ದಿಢೀರನೆ ಮನೆಯೊಳಗೆ ತಂದು ಹಾಕುವುದು, ಕೋಳಿ ಮರಿಗಳನ್ನು ಬೆಚ್ಚನೆಯ ಗೂಡಿನೊಳಗೆ ನೂಕುವುದು...ಇಂತದೆಲ್ಲಾ ನಮ್ಮ ಹಳ್ಳಿಯಲ್ಲಿ ಸರ್ವೇ ಸಾಮಾನ್ಯ. ಅಲ್ಲಿನ ಮುಂಗಾರು ಮಳೆಯ ಶೃಂಗಾರವೇ ಬೇರೆ. ದಿನವಿಡೀ ಹನಿ ಬಿಡದೆ ಸುರಿಯುವ ಮಳೆ, ಸುತ್ತಲೂ ಜಲಮಯ. ರಾತ್ರಿಯಾದರೇನೋ ಗುಡುಗು ಮಿಂಚುಗಳ ಆರ್ಭಟ. ಗಾಜಿನ ಕಿಟಕಿಗೆ ಮಿಂಚು ಬಡಿಯುವಾಗ, ಗುಡುಗಿಗೆ ಹೆದರಿ, ಕರೆಂಟು ಇಲ್ಲದ ರಾತ್ರಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮಲಗಿದ್ದು ಎಲ್ಲವೂ ನೆನಪಿನ ಪುಟದಲ್ಲಿ ಅಳಿಯಲಾರದ ಬರಹಗಳು.

ಪ್ರಸ್ತುತ ನನ್ನ ಪುಟ್ಟ ಹಳ್ಳಿಯ ಪ್ರತೀ ಮಳೆಯನ್ನು ಚೆನ್ನೈಯಲ್ಲಿ ಮಿಸ್ ಮಾಡುತ್ತಿದ್ದೇನೆ. ನಮ್ಮೂರಲ್ಲಿ ಇದೀಗ ಮಳೆ ಹನಿ ಲಾಸ್ಯವಾಡುತ್ತಿರುವ ಈ ವೇಳೆಯಲ್ಲಿ ಇಲ್ಲಿನ ಉರಿ ಬಿಸಿಲಿಗೆ ಬೆವರು ಹರಿಯುತ್ತದೆ. ಸೆಖೆ ಸೆಖೆ ಎಂದು ನಿದ್ದೆ ಮಾಡಲಾಗದ ಸ್ಥಿತಿ, ಕರೆಂಟು ಕೈ ಕೊಟ್ಟರಂತೂ ಹೇಳತೀರದು. ಅಂತೂ ರಾತ್ರಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ. ಉರಿ ಬಿಸಿಲಿನಲ್ಲಿ ನೀರಿನ ಅಭಾವ ಬೇರೆ, ಪ್ಯಾಕೇಜ್ಡ್‌ ವಾಟರ್ ಕುಡಿದು ಕುಡಿದು "ದೇವದಾಸನ ದಾರು ಬಾಟಲ್‌"ಗಳಂತೆ ನೀರಿನ ಬಾಟಲಿ ಹತ್ತಿರ ಇಟ್ಟು ಕೊಳ್ಳಲೇ ಬೇಕಾಗಿದೆ. (ಇಲ್ಲಿ ಕುಡಿ ನೀರಿಗೆ ಪ್ಯಾಕೇಜ್ಡ್ ವಾಟರ್ ಮಾತ್ರ ಗತಿ!). ಸ್ನಾನಕ್ಕೆ ಉಪ್ಪು ನೀರು. ಮೆಟ್ರೋ ನಗರದ ಜೀವನ ನರಕಮಯ ಎಂದೇ ಹೇಳಬಹುದು. ಆದ್ರೆ ಚೆನ್ನೈ ನಗರಕ್ಕೆ ಬಿಸಿಲೇ ಸೂಕ್ತ ಅಂತ ಅನಿಸುತ್ತದೆ. ಮಳೆ ಬಂದರಂತೂ ಈ ನಗರ ನರಕವಾಗುತ್ತದೆ. ಚರಂಡಿ ನೀರು ರೋಡಿನಲ್ಲಿ ಹರಿಯುತ್ತದೆ. ವಾಹನಗಳ ಟ್ರಾಫಿಕ್, ಕೆಸರೆರೆಚಾಟ ಇವುಗಳನ್ನೆಲ್ಲಾ ಸಹಿಸಿ ಆಫೀಸಿಗೆ ತಲುಪುವಾಗ ಹೈರಾಣಗಿ ಬಿಡುತ್ತೇವೆ.

ಇದನ್ನೆಲ್ಲಾ ಅನುಭವಿಸುವಾಗ ನಮ್ಮೂರಿನ ಮಳೆಯ ಮೇಲಿನ ಪ್ರೀತಿ ಮತ್ತೂ ಹೆಚ್ಚಾಗುತ್ತದೆ ಹಾಗೂ ಅಲ್ಲಿನ ನೆನಪು ಕಾಡುತ್ತದೆ. ಅಲ್ಲಿನ ಒಂದೊಂದು ಹನಿಯೂ ಪ್ರೇಮ ಕಾವ್ಯ ಬರೆಯುತ್ತದೆ ಎಂದೇ ಹೇಳಬಹುದು. ತೆರೆದ ಆಗಸದ ಹಾದರದ ಮೇಲೆ ಬೆಳ್ಮುಗಿಲನ್ನು ಕಾರ್ಮುಗಿಲು ತನ್ನ ತೆಕ್ಕೆಗೆಳೆದು ಕೊಂಡಾಗ ತಂಪಾದ ಗಾಳಿ ಪ್ರೀತಿಯ ಕಾವ್ಯಕ್ಕೆ ಮುನ್ನುಡಿ ಬರೆಯುತ್ತದೆ. ಗಿಡ ಮರಗಳು ಇದರೊಂದಿಗೆ ತಲೆದೂಗಿದಾಗ, ಪಕ್ಷಿಸಂಕುಲಗಳು ತನ್ನವರೊಂದಿಗೆ ಗೂಡು ಸೇರುವ ತವಕದಲ್ಲಿ ಚಿಲಿ ಪಿಲಿಗುಟ್ಟುತ್ತಾ ತಾಳ ಹಾಕುತ್ತವೆ. ಮಳೆಯನ್ನು ಆಹ್ವಾನಿಸುವ ಕಪ್ಪೆ ತನ್ನ ನಾದವನ್ನು ಹೊರಡಿಸುವಾಗ, ದುಂಬಿಗಳು ಚಿತ್ತಾರ ಬಿಡಿಸುತ್ತವೆ. ಇದಾದನಂತರ 'ಧೋ' ಎಂದು ಮಳೆಸುರಿದು ಇಳೆ ತಂಪಾಗಿಸುತ್ತದೆ. ಮನೆ ಮುಂದೆ ಉಕ್ಕಿ ಹರಿಯುವ ತೋಡು ಹಳ್ಳಗಳು..ನೀರಿನ ಜುಳು ಜುಳು ನಿನಾದದೊಂದಿಗೆ ತೋಡಿನಲ್ಲಿ ಏಳು ಬೀಳುತ್ತಾ ನೀರಿನೊಂದಿಗೆ ಸಾಗುವ ತೆಂಗಿನ ಕಾಯಿ, ಹಲಸು,ಅಡಿಕೆ, ಮಾವುಗಳು. ಹಳ್ಳದಲ್ಲಿ ಜಿಗಿಯುವ ತುಂಡು ಬಾಲದ ಕಪ್ಪೆಗಳು, ಅಂತಹಾ ಮಳೆಗೆ ಹೊರಗೆ ಕಾಲಿಡಲೂ ಕೂಡಾ ಅಸಾಧ್ಯ!!, ಚಳಿ ಎಂದೆನಿಸುವಾಗ ಜಗಿಯಲು ಸಾಂತಾಣಿ, ಹಪ್ಪಳ... ಇವುಗಳೆಲ್ಲದರ ಅನುಭವ ಅವರ್ಣನೀಯ.

ಮಳೆ ಸುರಿದಾದ ನಂತರ ಹಿತವಾದ ನೆಲ, ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಚಿಕ್ಕ ಧಾರೆಯಾಗಿ ತೋಡಿನಲ್ಲಿ ನೀರು ಹರಿಯುತ್ತಿರುತ್ತದೆ. ಮರದೆಲೆಯಿಂದ ಟಿಪ್ ಟಿಪ್ ಎಂದು ಬೀಳುವ ಹನಿಮುತ್ತುಗಳು. ಅದಾಗಲೇ ಸ್ನಾನ ಮಾಡಿ ಬಂದಂತೆ ಕಂಗೊಳಿಸುವ ಸ್ವಚ್ಛ ಸುಂದರವಾದ ಭೂಮಿ. ಆ ಸಂಜೆಗಳಲ್ಲಿ ಸೂರ್ಯ ಎಳೆ ಬಿಸಿಲು ಬೀರಿ ನಗುವಾಗ, ಬಯ್ಯ ಮಲ್ಲಿಗೆ ಬಿರಿದು ಕಂಪು ಸೂಸುವುದು ಇಲ್ಲಿನ ಸೌಂದರ್ಯಗಳಲ್ಲೊಂದು. ಮಳೆಗಾಲದ ಮಳೆಇಲ್ಲದ ರಾತ್ರಿಯಲ್ಲಂತೂ ಹುಳಕ್ಕೆ ರೆಕ್ಕೆ ಬಂದು ಹಾರುವ ಹಾತೆಗಳ ಉಪದ್ರವವೂ ಸಹಿಸಬೇಕು. ದೀಪದ ಬೆಳಕಿಗೆ ಹಾರುತ್ತಾ ಮನೆತುಂಬಿಕೊಳ್ಳುವ ಈ ಹಾತೆಗಳಿಂದ ಮುಕ್ತಿ ಪಡೆಯಲು ಮನೆಹೊರಗಿನ ಬಲ್ಬು ಮಾತ್ರ ಉರಿಸಿ, ಒಳಗೆ ಕತ್ತಲು ಮಾಡಿ, ಅಲ್ಪ ಹೊತ್ತಿಗೆ ಬಾಗಿಲು ಕಿಟಕಿ ಮುಚ್ಚಿ ಕುಳಿತು ಕೊಳ್ಳುವುದೂ ಒಂದು ಅನುಭವ. ಕರೆಂಟಿಲ್ಲದ ರಾತ್ರಿಯಲ್ಲಿ ಚಿಮಿಣಿ ದೀಪವನ್ನು ನೀರು ತುಂಬಿದ ಬಟ್ಟಲ ನಡುವೆ ಇಟ್ಟು ಓದಲು ಕುಳಿತಾಗಲೆಲ್ಲಾ ಬೆಳಕಿನ ಸುತ್ತ ಹಾರಿ ತನ್ನನ್ನೇ ಕಳೆದು ಕೊಳ್ಳುವ ಹಾತೆಯನ್ನೇ ಕಣ್ಬಿಟ್ಟು ನೋಡುವ ತವಕ. ಮಳೆಯ ಬಿರುಸಿನಿಂದಾಗಿ ಮೀನು ಹಿಡಿಯುವ ದೋಣಿಯನ್ನು ಮೀನುಗಾರರು ಕಡಲಿಗೆ ಇಳಿಸದೇ ಇದ್ದಾಗ, ಒಣ ಮೀನು ಸಾರಿನೊಂದಿಗೆ ಮಾಡಿದ ರಾತ್ರಿಯೂಟ. ಮಿಂಚು ಬರುತ್ತದೆಂದು ಟಿವಿ ಆಫ್ ಮಾಡಿದುದರ ಬೇಸರ. ಈ ಎಲ್ಲಾ ನೆನಪುಗಳು ಮನಸ್ಸನ್ನು ಕೆದಕುತ್ತಾ ಇವೆ. ಆದರೂ ಮುಂಗಾರು ಮಳೆಯ ಪ್ರೀತಿ ಎಲ್ಲಾ ನೆನಪುಗಳನ್ನು ಸಿಹಿಯಾಗಿರಿಸಿದೆ. ನೆನಪುಗಳ ಮಾತು ಮಧುರ ಅಲ್ಲವೇ?

  • ಅನುಭವ ಕಥನ
~.~
  • Login or register to post comments
  • 793 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2008 - 2:05am — hpn

ಉ: ಮುಂಗಾರು ಮಳೆಯೇ...

hpn's picture

ಇವುಗಳೆಲ್ಲದರ ಅನುಭವ ಅವರ್ಣನೀಯ.

ಖಂಡಿತ. ಬೆಂಗಳೂರು ಅಥವ ಚೆನ್ನೈನಲ್ಲಿ ಕುಳಿತು ಅದನ್ನು ನೆನೆಸಿಕೊಳ್ಳೋದೂ ಕಷ್ಟ.
ಸುಂದರ ಪರಿಸರದ ಆ ನೆನಪು ಇದ್ದರೆ ಒಂದಷ್ಟು ಹೊತ್ತು ಅಲ್ಲಿಗೆ teleport ಆಗಿಬಿಟ್ಟಿರುತ್ತೇವೆ. ಬಹುಶಃ ಇಂತಹ ಸನ್ನಿವೇಶಗಳು ಹೀಗೆ ಮಳೆ ಬಂದು ಸುತ್ತಲು ತಣ್ಣಗಿನ ವಾತಾವರಣ ಕೂಡಿದಾಗ.

ಊರ ಆಚೆ ಇರುವ ಮನೆಗೆ ಬಂದ ಮೇಲಂತೂ ನನಗೆ ಸುತ್ತ ಮುತ್ತಲೂ ಗುಬ್ಬಚ್ಚಿಯಿಂದ ಹಿಡಿದು ಕೊಕ್ಕರೆ, ನಾಗರಹಾವು(!), ಚೇಳುಗಳಿಂದ ಹಿಡಿದು ರಾತ್ರಿ ಹೊರಬರುವ ಗೂಬೆ - ಇವುಗಳನ್ನೆಲ್ಲ ನಿತ್ಯ ಕಾಣುವಾಗ ಶಿವಮೊಗ್ಗದಲ್ಲಿ ನಾವಿದ್ದ ಹೊಸ ಬಡಾವಣೆಯ ನೆನಪಾಗುತ್ತೆ. ಕಂಪ್ಯೂಟರಿನ ಮುಂದೆ ಕೂತು ಬೇಸರವಾದಾಗ ಒಂದಷ್ಟು ಹೊತ್ತು ಹೊರಹೋಗಿ ತಣ್ಣನೆ ಗಾಳಿಯಲ್ಲಿ ನಿಂತು ಹಕ್ಕಿಗಳ ಚಿಲಿಪಿಲಿ ಕೇಳಿ ಬಂದರೆ ಎಲ್ಲ anxiety ದೂರ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 8:01am — Prabhu Murthy

ಉ: ಮುಂಗಾರು ಮಳೆಯೇ...

Prabhu Murthy's picture

Quote:

ಇದನ್ನೆಲ್ಲಾ ಅನುಭವಿಸುವಾಗ ನಮ್ಮೂರಿನ ಮಳೆಯ ....

ಈ ಪ್ಯಾರಾ ತುಂಬಾ ಸೊಗಸಾಗಿದೆ. ಇಲ್ಲಿನ ಚಿತ್ರಣವನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.

ಸುರತ್ಕಲ್ಲಿನಲ್ಲಿ ನಾಕು ವರುಷ ಇದ್ದಾಗ ಆ ಕಡೆಯ ಮಳೆಯನ್ನು ಅನುಭವಿಸಿದ್ದೇನೆ. ಆದರೆ ನಮಗೆ ಚಳಿಗೆ ಹಿತವಾಗಿ ಜಗಿಯಲು ಬಿಸಿಬಿಸಿ ಹಪ್ಪಳ, ಸಂಡಿಗೆ ಇರುತ್ತಿರಲಿಲ್ಲ Sad ಮಳೆಯಲ್ಲೇ ಹಾಸ್ಟಲ್ಲಿನ ಮೆಸ್ ಗೆ ಓಡುವ ಬವಣೆ. ಕೆಲವು ಬಾರಿ ಭೀಕರವಾಗಿ ಮಳೆ ಹುಯ್ಯುವಾಗ ಬೀಚ್ ಗೆ ನಡೆದುಕೊಂಡು ಹೋಗಿ ಗಾಳಿಯ ಮತ್ತು ಅಲೆಗಳ ರಭಸವನ್ನು ಎದುರಿಸಿ ಹೇಗೋ ಜೀವ ಉಳಿಸಿಕೊಂಡು ವಾಪಸ್ಸಾಗುತ್ತಿದ್ದೆವು. ಇಂತಹ ಮೂರ್ಖತನದ ಹೊಣೆಗೇಡೀ ದಿನಗಳನ್ನೂ ಈ ಲೇಖನ ನೆನಪಿಸಿತು!

’ಬಯ್ಯ ಮಲ್ಲಿಗೆ’, ’ಸಾಂತಾಣಿ’ ಮತ್ತು ’ಹಾತೆ’ ಈ ಪದಗಳನ್ನು ಇಲ್ಲೇ ಮೊದಲಸಲ ಓದಿದ್ದು. ನಿಘಂಟನ್ನು ತೆಗೆದು ನೋಡಿದೆ; ’ಬಯ್ಯ’ ಮತ್ತು ’ಸಾಂತಾಣಿ’ ಸಿಗಲಿಲ್ಲ. ಅದರ ಪ್ರಕಾರ 'ಹಾತೆ' ಅಂದರೆ ಜಿರುಳೆ, cockroach ಎನ್ನಿಸುತ್ತದೆ. ’ಸಾಂತಾಣಿ’ ಎಂದರೆ ಸಂಡಿಗೆ ಇರಬಹುದು. ’ತೋಡು’ ಇದನ್ನು ಕಾಲುವೆ ಎನ್ನುವ ಅರ್ಥದ ನಾಮಪದವಾಗಿ ಬಳಸುವುದೂ ತಿಳಿಯಿತು. ನಿಮ್ಮ ಕಡೆಯ ಪದಗಳನ್ನು ಆದಷ್ಟೂ ತಪ್ಪದೇ ಬಳಸಿ ನನ್ನಂತಹ ನಗರದಲ್ಲಿ ಹುಟ್ಟಿಬೆಳೆದವರಿಗೆ ಪರಿಚಯ ಮಾಡಿಕೊಡಿ.

Quote:

ತೆರೆದ ಆಗಸದ ...

ಈ ಸಾಲು ’ತೆರೆದ ಆಗಸದ ಚಾದರದ ಮೇಲೆ...’ ಎಂದು ಇರಬೇಕು ಎನ್ನಿಸಿತು.

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 10:25am — hamsanandi

ಉ: ಮುಂಗಾರು ಮಳೆಯೇ...

hamsanandi's picture

ಬರಹ ಚೆನ್ನಾಗಿದೆ Smiling

ನಮ್ಮೂರಿನ ಮಳೆ ಅಷ್ಟು ಜೋರಲ್ಲದಿದ್ದರೂ, ಮನೆಯಮುಂದೆ ಹರಿಯುವ ಮಳೆನೀರಿನಲ್ಲಿ ಕಾಗದದ ದೋಣಿಗಳನ್ನು ಹರಿಯಬಿಟ್ಟದ್ದೂ, ಮತ್ತೆ, ನೀರಿನ ಅಭಾವವಿರುವಾಗ, ಸೂರುನೀರನ್ನೆಲ್ಲ ಸಂಗ್ರಹಿಸಿ ತೊಟ್ಟಿಗೆ ತುಂಬುತ್ತಿದ್ದುದ್ದೂ ನೆನಪಿಗೆ ಬಂತು!

ಹಾತೆ ಎಂದರೆ ದೀಪದಹುಳು, ಅಥವಾ ಮಿಡತೆ ಅಂತ ತೋರುತ್ತೆ

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:21am — keshavamurali

ಉ: ಮುಂಗಾರು ಮಳೆಯೇ...

keshavamurali's picture

ಬಯ್ಯ ಎಂದರೆ ತುಳುವಿನಲ್ಲಿ ಸಂಜೆ ಎಂದು ಅರ್ಥ. ಸಂಜೆ ಅರಳುವ ಮಲ್ಲಿಗೆಯ ಜಾತಿಯೊಂದಕ್ಕೆ ಬಯ್ಯ ಮಲ್ಲಿಗೆ ಎನ್ನುತ್ತಾರೆ.
ಸಾಂತಾಣಿ ಎಂದರೆ ಹಲಸಿನ ಬೀಜವನ್ನು ಕೆಂಡದಲ್ಲಿ ಸುಟ್ಟು ಮಾಡುವ ಒಂದು ತಿನಿಸು.
ಲೇಖನ ಸೊಗಸಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:28am — rashmi_pai

ಉ: ಮುಂಗಾರು ಮಳೆಯೇ...

rashmi_pai's picture

ಈ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು...

ಪ್ರಸ್ತುತ ಈ ಲೇಖನದಲ್ಲಿ ಕಣ್ತಪ್ಪಿನಿಂದ "ಚಾದರ" ಹಾದರ ಇಗಿ ಬಿಟ್ಟಿದೆ..ಕ್ಷಮೆಯಿರಲಿ.. ಹಿಂದಿಯಲ್ಲಿನ "ಚಾದರ್ " ನೆನಪಿಗೆ ಬಂದುದೇ ಈ ರೀತಿ ತಪ್ಪು ಬರಲು ಕಾರಣ ಎಂಬುದನ್ನು ಓದುಗರಿಗೆ ತಿಳಿಸುತ್ತಿದ್ದೇನೆ.

ಮತ್ತು ಇಲ್ಲಿ ಹೇಳಿದಂತಹಾ ಹಾತೆ ಅಂದರೆ ಮಿಡತೆಯೇ."ಹಾತೆ" ಕಾಸರಗೋಡು ಕನ್ನಡದಲ್ಲಿ ಬಳಕೆಯಲ್ಲಿದೆ. ತುಳುವಿನಲ್ಲಿ "ಪಾತೆ" ಅಂತ ಹೇಳ್ತಾರೆ.

ಬಯ್ಯ ಮಲ್ಲಿಗೆ ಅಂದರೆ ಸಂಜೆಯ ಹೊತ್ತಿನಲ್ಲಿ ಅರಳುವಂತಹ ಒಂದು ರೀತಿಯ ಹೂ. ಇಂದು ಹಳದಿ ಅಥವಾ ಪಿಂಕ್ ಬಣ್ಣಗಳಲ್ಲಿಯೂ ಇತರ ಮಿಶ್ರಬಣ್ಣದಲ್ಲಿಯೂ ಕಂಡು ಬರುತ್ತದೆ. (ತುಳುವಿನಲ್ಲಿ ಬಯ್ಯ = ಸಂಜೆ ) ಬಯ್ಯಮಲ್ಲಿಗೆ=ಸಂಜೆ ಮಲ್ಲಿಗೆ;

ಸಾಂತಾಣಿ ಅಂತ ಹೇಳಿದ್ರೆ ಹಲಸಿನ ಹಣ್ಣಿನ ಬೀಜವನ್ನು ಉಪ್ಪುಹಾಕಿ ಹದವಾಗಿ ಬೇಯಿಸಿದ ನಂತರ ಒಣಗಿಸಿಡುತ್ತಾರೆ. ಹೀಗೆ ಒಣಗಿಸಿದ ಹಲಸಿನ ಹಣ್ಣಿನ ಬೀಜ ತುಂಬಾ ಗಟ್ಟಿಯಾಗಿರುತ್ತದೆ. ಮಳೆಗಾಲಕ್ಕಾಗಿ ಇದನ್ನು ತಯಾರಿಸುವುದು ತುಳುನಾಡಿನಲ್ಲಿ ಸರ್ವೇ ಸಾಮಾನ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 5:11pm — ಸಂಗನಗೌಡ

ಉ: ಮುಂಗಾರು ಮಳೆಯೇ...

ಸಂಗನಗೌಡ's picture

’ಮಿಡತೆ’ಗೆ ಕನ್ನಡದಲ್ಲಿ ’ಪಾತರಗಿತ್ತಿ’ ಅಂತಾನೂ ಅಂತಾರೆ. ಕನ್ನಡದಲ್ಲಿ ’ಪ => ಹ’ ತಾನಪಲ್ಲಟ ನಡೆದಿರುವದರಿಂದ ಪಾತೆ=>ಹಾತೆ ಆಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2008 - 1:24am — ಮನಹ್ಪಠಲ

ಉ: ಮುಂಗಾರು ಮಳೆಯೇ...

ಮನಹ್ಪಠಲ's picture

ಪಾತರಗಿತ್ತಿ ಅ೦ದ್ರೆ ಚಿಟ್ಟೆ ಅಲ್ವ ಸ೦ಗನಗೌಡ್ರೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 12:43pm — ಮನಹ್ಪಠಲ

ಉ: ಮುಂಗಾರು ಮಳೆಯೇ...

ಮನಹ್ಪಠಲ's picture

ರಶ್ಮಿ’ಯವರೆ!! ನೀವು ಬರೆದ ಲೇಖನ ನೋಡಿದ ತಕ್ಷಣ ನನಗೆ ಮೈಸೊರಿನ ಹತ್ತಿರದ ನನ್ನ ಹಳ್ಳಿಯ ತೋಟದ ಮನೆ ನೆನಪಾಗುತ್ತೆ. ಏನೇನ್ ಹುಳ ಹುಪ್ಪಟಿಗಳಿವೆಯೋ ಮಳೆ ಸಮಯದಲ್ಲ೦ತೂ ಮನೆಯೊಳಗೆ ಹೊಕ್ಕ್ತಾ ಇದ್ದವು. ಒ೦ದು ಸಮಯದಲ್ಲಿ ನೋಡೋಕೆ ಖುಷಿ ಆದ್ರೂ, ಎಲ್ಲಿ ಕಚ್ಚುತ್ವೋ ಅ೦ತ ಭಯ ಬೇರೇ. ನಾನಿದ್ದಹಳ್ಳೀಲಿ ಆಸ್ಪತ್ರೆ ಇದ್ದ್ರು ವೈದ್ಯರು ಬೇರೇ ಇರ್ಲಿಲ್ಲ. ಮಳೆ ಯಾವದಿಕ್ಕಿನಿ೦ದ ಬರ್ತಾ ಇತ್ತು, ಬರೋದನ್ನೆ ಕಾಯ್ಥ ಇದ್ದ್ವು. ನಗರದಲ್ಲಿದ್ದೋರ್ಗೆ(city slickers) ಇದೆಲ್ಲ ಹೊಸತು ಬೇರೇ. ಈಗ ಮತ್ತೆ ಕೆಟ್ಟ ಪಟ್ಟಣ ಸೇರಿಕೊ೦ಡಿದೇವೆ ಣೊಡಿದ್ದೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 2:19pm — mahesha

ಉ: ಮುಂಗಾರು ಮಳೆಯೇ...

mahesha's picture

"ತೆರೆದ ಆಗಸದ ಹಾದರದ ಮೇಲೆ ಬೆಳ್ಮುಗಿಲನ್ನು ಕಾರ್ಮುಗಿಲು ತನ್ನ ತೆಕ್ಕೆಗೆಳೆದು ಕೊಂಡಾಗ ತಂಪಾದ ಗಾಳಿ ಪ್ರೀತಿಯ ಕಾವ್ಯಕ್ಕೆ ಮುನ್ನುಡಿ ಬರೆಯುತ್ತದೆ"

ಅಬ್ಬ.. ಎಂತಹ ಸಾಲು.. ಕಾರ್ಮುಗಿಲು ಗುಡುಗಿ, ಸಿಡಿಲಿಂದ ಆರ್ಬಟಿಸಿ ಬೆಳ್ಮುಗಿಲೊಟ್ಟಿಗೆ ಆಡಿದ ಕ್ರೀಡೆಯ ಬೆವರು ಹನಿಯೇ!! Smiling

ತುಂಬಾ ಚಂದವಾಗಿ ಬರೆದದ್ದೀರಿ ಎಂದು ನನಗೆ ಅನ್ನಿಸಿತು.

ಅಳಿಕೆಯಲ್ಲಿದ್ದಾಗ ಇದೇ ಅನುಬವ.. ಆ ಮಳೆ!! ಮೋಡಗಳ ಪಡೆ ದಾಳಿಟ್ಟು ’ಹೋ ಭೋ’ ಎಂದು ಬಿಡ್ಡುವಿಲ್ಲ ಬವರಗಯ್ದಂತೆ, ಆ ಅಬ್ಬರಕ್ಕೆ ಹದರಿ ಕೋಣೆಯಲ್ಲಿ ಅವಿತವರು, ಕೊಡೆಯೆಂಬ ’ರಕ್ಷೆ’ ಹಿಡಿದರೂ ಕೂಡ ಹೊರಗೆ ಇಟ್ಟ ಕಾಲನ್ನು ಮತ್ತೆ ಒಳಕ್ಕೆ ಎಳೆದುಕೊಳ್ಳವುದಂತೆ ಮಾಡುವ ಮಳೆ.

ಬೆಟ್ಟಗಾಡಿನ ಮಳೆಯೇ ಮಳೆ... ನಮ್ಮ ಬಯಲಲ್ಲಿ ಮಳೆಗಿಂತ, ಗಾಳಿಗಾಲ, ಚಳಿಗಾಲ ಸೊಗಸು!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 3:08pm — mananthprabhu

ಉ: ಮುಂಗಾರು ಮಳೆಯೇ...

mananthprabhu's picture

ಮಾಯ್ಸ
ನೀವು ಅಳಿಕೆ ಯಲ್ಲಿ ಕಲಿತದ್ದೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 8:12am — mahesha

ಉ: ಮುಂಗಾರು ಮಳೆಯೇ...

mahesha's picture

ಹು ರೀ..

ನೀವು ನನಗೆ ವಾರ್ಡನ್ ಆಗಿದ್ರೆ?

ನನ್ನ ವಾರ್ಡನ್ ಒಬ್ಬರ ಹೆಸರು ಹೀಗೆ ಪ್ರಭು ಅಂತ ಇತ್ತು.. ೯ ವರ್ಶಆದವು ಮಱೆತು ಹೋಗಿದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 10:59am — mananthprabhu

ಉ: ಮುಂಗಾರು ಮಳೆಯೇ...

mananthprabhu's picture

ಇಲ್ಲ ಮಾಯ್ಸ... ನನಗೆ ಆ ಶಾಲೆಯ ಬಗ್ಗೆ ಕೇಳಿ ಗೊತ್ತು... ನಮ್ ಕಡೆ ಅಳಿಕೆ ಶಾಲೆಯಲ್ಲಿ ಕಲಿತಿರುವ/ಕಲಿಯುತ್ತಿರುವ ಹುಡುಗರ ಬಗ್ಗೆ ಒ೦ದು ಅಭಿಪ್ರಾಯವಿದೆ..
ಹುಡುಗ ತು೦ಬಾ ಪೋಕ್ರಿಯಾಗಿದ್ರೆ.. ಕೆಟ್ಟ ಅಭ್ಯಾಸಗಳಿದ್ರೆ.. ಕಲಿಯೋ ಕಡೆ ಗಮನ ಕೊಡದಿದ್ರೆ.. ತು೦ಬಾ ಆಲಸಿಯಾಗಿದ್ರೆ..
ಅಳಿಕೆ ಶಾಲೆಗೆ ಕಳಿಸಿದ್ರೆ, ಬೆ೦ಡೆತ್ತಿ ಸರಿ ಮಾಡ್ತಾರೆ ಅನ್ನೊ ನ೦ಬಿಕೆ...
ನೀವೇನಾದ್ರು ಮೇಲೆ ಹೇಳಿರೋ ಗುಣಗಳನ್ನು ಹೊ೦ದಿದ್ರಾ Eye-wink
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:01am — mahesha

ಉ: ಮುಂಗಾರು ಮಳೆಯೇ...

mahesha's picture

ರೀ ನಮ್ ಶಾಲೆ ಬಗ್ಗೆ ಹಂಗೆಲ್ಲ ಅನ್ನಬೇಡಿ..

ನಾವು ಸೀಯಿಟಿ ರ್‍ಯಾಂಕು ಪಡೆಯೋದರಲ್ಲಿ ಮೊದಲು.. ಒಮ್ಮೆ ಕಳೆದ ಎಂಟು ವರ್ಶದ ರ್‍ಯಾಂಕು ಪಟ್ಟಿ ನೋಡಿ...

ಮಿಕ್ಕ ಸಂಗತಿ ಬಗ್ಗೆ ನಾನು ಹೇಳಲ್ಲ.! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:48am — mananthprabhu

ಉ: ಮುಂಗಾರು ಮಳೆಯೇ...

mananthprabhu's picture

ಮಾಯ್ಸ..
ನೀವ್ ಯಾಕ್ರಿ ಮ೦ಡ್ಯ ಬಿಟ್ಟು ಅಳಿಕೆಗೆ ಶಾಲೆಗೆ ಬ೦ದ್ರಿ?
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:51am — mahesha

ಉ: ಮುಂಗಾರು ಮಳೆಯೇ...

mahesha's picture

ಮಾಡಕ್ಕೆ ಕೆಲಸ ಇರಲಿಲ್ಲ... Smiling

ಇರಲಿ ಬಿಡಿ.. ಅದೆಲ್ಲ ಹೞೇ ಕತೆ..

’ಒಳಗೊಳಗೆ ಹರಿಯುವವಳು ಸದಾ ಗುಪ್ತಗಾಮಿನಿ, ನನ್ನ ಶಾಲ್ಮಲಾ" Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಕಂಪು
  • ಚೆನ್ನೈನಲ್ಲಿ ಮುಂಗಾರು ಮಳೆ!
  • ವರುಷಕ್ಕೊಂದು ಮುಂಗಾರು ಮಳೆ .... ಹರುಷಕ್ಕೊಂದು ಮುಂಗಾರು ಮಳೆ....
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
  • ಪ್ರೀತಿ ಸದಾ ಹಸಿರು........
Syndicate content

ಲೇಖಕರು

rashmi_pai's picture

ಪೂರ್ಣ ಹೆಸರು
Rashmi Pai

ಪರಿಚಯ

ನನ್ನ ಊರು ಗಡಿನಾಡಾದ ಕಾಸರಗೋಡು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ ಕತೆ, ಕವಿತೆ, ಭಾಷಣ ಮೊದಲಾದವುಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ನೆಚ್ಚಿನ ಗೆಳೆಯನಾದ ಪ್ರಕೃತಿಯೊಂದಿಗೆ ಒಡನಾಟ ನಡೆಸುವುದು ಹಾಗೂ ಸ್ವಪ್ನಲೋಕದಲ್ಲಿ ವಿಹರಿಸುವುದೆಂದರೆ ನನಗಿಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator