ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಡೇಟಿಂಗ್ ಎಂಬ ಟ್ರೆಂಡ್

May 29, 2008 - 7:21pm — rashmi_pai

"ನನ್ನ ಜೊತೆ ಡೇಟಿಂಗ್ ಮಾಡ್ತೀಯಾ?" ಅಂತ ಯಾವುದೇ ಮುಲಾಜಿಲ್ಲದೇ ಕೇಳುವ ಯುವಕ ಯುವತಿಯರು ನಮ್ಮ ಅಸುಪಾಸಿನಲ್ಲಿಯೇ ಸಾಕಷ್ಟು ಇದ್ದಾರೆ ಎಂಬ ವಿಷಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಇದು ಸತ್ಯವೇ. ಇದೀಗ ಹುಡುಗರಿಗಿಂತ ಹುಡುಗಿಯರೇ ಡೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಬಹುದು. ಮೆಟ್ರೋ ನಗರಗಳಲ್ಲಂತೂ ಡೇಟಿಂಗ್ ಅನ್ನುವುದು "ಫ್ಯಾಷನ್" ಆಗಿ ಬಿಟ್ಟಿದೆ. ಕಾಲೇಜು ಕ್ಯಾಂಪಸ್‌ಗಳಿಂದ ಆರಂಭವಾಗುವ ಈ 'ಕಲೆ'ಯು ಕಚೇರಿಗಳ ಕ್ಯಾಬಿನ್‌ಗೂ, ಸಿನಿಮಾ ಮಾಧ್ಯಮಗಳ ಪ್ರಭಾವದಿಂದಾಗಿ ಮೆಟ್ರೋ ನಾಗರಿಕತೆಯ ಭಾಗ ಎಂದೆನಿಸಿಕೊಳ್ಳುವಷ್ಟು ವ್ಯಾಪಿಸಿಕೊಂಡಿದೆ. ಅದೇ ವೇಳೆ ಪ್ರೀತಿ, ಪ್ರಣಯದ ಮುಂದಿನ ಹಂತವಾಗುವ ವಿವಾಹ, ಅನಂತರದ ಲೈಂಗಿಕ ಜೀವನ ಇವೆಲ್ಲಾ ಇಂದು ಕಟ್ಟುಕತೆಗಳಾಗಿ ಮಾರ್ಪಾಡು ಹೊಂದುವ ಹಂತದಲ್ಲಿದೆ.

ತಮ್ಮ ಸಂಗಾತಿಯನ್ನು ಪರಸ್ಪರ ಅರಿತುಕೊಳ್ಳಲು ಡೇಟಿಂಗ್ ಸಹಕಾರಿ ಎಂದು ಇಂದಿನ ಯುವಜನಾಂಗ ಇದಕ್ಕೆ ವಿವರಣೆ ನೀಡುತ್ತದೆಯಾದರೂ ಪ್ರಸಕ್ತ, ಈ ಡೇಟಿಂಗ್ ಯಾವ ಹಂತಕ್ಕೆ ತಲುಪುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿ. ಪರಸ್ಪರ ಪರಿಚಯ, ಆಸಕ್ತಿಗಳನ್ನು ಹಂಚಿಕೊಳ್ಳಲು ಮುಕ್ತ ವಾತಾವರಣವನ್ನು ಕಲ್ಪಿಸಿಕೊಡುವ ಡೇಟಿಂಗ್ ಇದೀಗ ಅರ್ಥ ಕಳೆದುಕೊಂಡು ಬರುತ್ತಿದೆ ಎಂದೇ ಹೇಳಬಹುದು. ಐಸ್‌ಕ್ರೀಂ ಮೆಲ್ಲುತ್ತಾ ಆರಂಭವಾಗುವ ಫಸ್ಟ್ ಡೇಟ್ ನಂತರ ಹಾಸಿಗೆಯತ್ತ ತಲುಪುತ್ತದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಇಂಟರ್ನೆಟ್ ಚಾಟ್‌‌, ಮೊಬೈಲ್ ಚಾಟ್‌ನಿಂದ ಆರಂಭವಾಗುವ ಡೇಟಿಂಗ್‌ಗಳ ಸಂಖ್ಯೆಯಲ್ಲಿಯೂ ಅತೀವ ವೃದ್ಧಿ ಕಂಡುಬಂದಿದೆ. ಆದರೆ ಇದೆಲ್ಲಾ ಸರ್ವೇಸಾಮಾನ್ಯವೆಂಬಂತಿರುವ ನಗರದ ಜೀವನ ಶೈಲಿ, ಡೇಟಿಂಗ್‌ಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ. ದೈನಂದಿನ ಜೀವನದಲ್ಲುಂಟಾಗುವ ಬದಲಾವಣೆಗಳು, ಕೆಲಸದ ಒತ್ತಡ, ಏಕಾಂಗಿತನ, ಮಾಧ್ಯಮಗಳ ಪ್ರಭಾವ ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ಇವೇ ಮೊದಲಾದವುಗಳು ಭಾರತೀಯ ಸಂಸ್ಕೃತಿಯ ಮೇಲೆ ಅದೆಷ್ಟು ಪ್ರಭಾವ ಬೀರಿದೆಯೆಂದರೆ ಯಾರ ಎದುರಲ್ಲಿಯೂ "ಐ ಡೋಂಟ್ ಕೇರ್" ಎಂದು ಹೇಳಲು ನಮ್ಮ ಯುವಕ ಯುವತಿಯರು ಯಾವುದೇ ಮುಜುಗರವನ್ನು ತೋರಿಸುವುದಿಲ್ಲ.

ಪ್ರೇಮ ಪವಿತ್ರ, ಸುಮಧುರ ಸಂಬಂಧ ಎಂದು ಹೇಳಿದರೂ, ಪ್ರೇಮದ ಅತಿರೇಕಕ್ಕೆ ತಲುಪಿದ ಪ್ರೇಮಿಗಳು ಸಂಬಂಧವನ್ನು ಸುದೃಢ ಪಡಿಸಲು ಅಥವಾ ನಾನು ನಿನ್ನನ್ನು ಅದೆಷ್ಟು ಪ್ರೀತಿಸುತ್ತೇನೆ ಎಂಬುದನ್ನು ತೋರಿಸುವ ನೆಪದಲ್ಲಿ ಸರ್ವಸ್ವವನ್ನೂ ಪ್ರೇಮಿಗೆ ಒಪ್ಪಿಸುತ್ತಾರೆ. ಇಂತಹಾ ಪ್ರೇಮ(ಕಾಮ) ನಾಟಕದಲ್ಲಿ ಸೋಲುವವರು ಹೆಣ್ಣು ಮಕ್ಕಳೇ..ಆಮೇಲೆ ಕಣ್ಣೀರಿಟ್ಟು ಏನು ಪ್ರಯೋಜನ? ಹೋದ ಮಾನ ತಿರುಗಿ ಬರುವುದೇ? ಇಂತಹ ಘಟನೆಗಳು ಒಂದು ಕಡೆಯಾದರೆ ಇತ್ತ ಯಾವುದೇ ನಾಚಿಕೆಯಿಲ್ಲದೆ "Just for Fun" ಎಂದು ಮೈಕೆಡವಿ ಬೀಗುವವರನ್ನೂ ಕಾಣಬಹುದು. ತಮ್ಮ ಜೀವನವೂ ಸಿನಿಮೀಯ ರೀತಿಯಲ್ಲಾಗಿರಬೇಕೆಂಬ ಬಯಕೆಯ ಗತ್ತಿನಲ್ಲಿ ನಡೆಯುವ ಈ ಯುವಕ ಯುವತಿಯರ ಮುಂದೆ ನಮ್ಮ ಹಳೇ ಸಿನಿಮಾಗಳ ನಾಯಕ ನಾಯಕಿಯರ ಪ್ರೇಮಕಥಾನಕಗಳು ಬರೀ ಬೇಜಾರು ಎನಿಸುತ್ತದೆ. ಇಂದು ಅಂತಹ ಕಥಾ ಪಾತ್ರಗಳು, ಸನ್ನಿವೇಶಗಳು ನಮಗೆ ಹಾಸ್ಯ ಪಾತ್ರಗಳಂತೆ ಭಾಸವಾಗುತ್ತವೆ. ಪ್ರಸ್ತುತ, ಏಕದಿನ ಪಂದ್ಯಗಳಂತೆ ಅಲ್ಪಕಾಲಾವಧಿಯ ಸ್ನೇಹ- ಸಂಬಂಧಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ.

ಇನ್ನೂ ಕೆಲವರಿಗೆ ವಿವಾಹದ ಮೊದಲು ಎಲ್ಲಾ ಕಾರ್ಯಗಳನ್ನು ಸರಿಯಾಗಿ ಅರಿತು 'ಪ್ರಮಾಣ ಪತ್ರ' ಪಡೆಯಬೇಕೆಂಬ ಹಂಬಲ. ತಾನು ಪ್ರೇಮಿಸಿದ ಹುಡುಗ/ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲದಿದ್ದರೂ ಸರಿ, ಅವನು/ ಅವಳೊಂದಿಗೆ ಅಲ್ಪ ಸುಖವನ್ನಾದರೂ ಅನುಭವಿಸಬೇಕು ಎಂಬ ಕಾತುರ. ತನ್ನನ್ನು ಈವರೆಗೆ ಪ್ರೇಮಿಸಿದನಲ್ಲಾ ಅವನಿಗಾಗಿ ಸ್ವಲ್ಪ ಕಾಲ ಸುಖ ಕೊಡುವುದು/ ಪಡೆಯುವುದರಲ್ಲಿ ತಪ್ಪೇನಿದೆ? ಎಂದು ಚಿಂತಿಸುವ ಇನ್ನು ಕೆಲವರು...ಹೀಗೆ ಡೇಟಿಂಗ್ ವಿಶೇಷಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸದ್ಯ, ಇದೀಗ ಭಾರತದಲ್ಲಿ ಪಾಶ್ಚಾತ್ಯರ ಅನುಕರಣೆ, ಅವರ ಆಚಾರಗಳನ್ನು ಮೈಗೂಡಿಸಿಕೊಂಡಿರುವ ಯುವಜನಾಂಗವು ಪಾಶ್ಚಾತ್ಯರಿಗಿಂತ ತಾವೇನು ಕಡಿಮೆಯಿಲ್ಲ ಅನ್ನುವಷ್ಟರ ಮಟ್ಟಿಗೆ ಬೆಳೆದು ಬಂದಿದೆ.

ಅದೇ ವೇಳೆ, ಕುಟುಂಬ ಸಂಪ್ರದಾಯಗಳ ಬಗ್ಗೆ ಎಳ್ಳಷ್ಟೂ ಅರಿಯದ, ಅಥವಾ ನವಯುಗಕ್ಕೆ ಸವಾಲಾಗಿ ನಿಂತಿರುವ ಯುವಕ ಯುವತಿಯರಿಗೆ ಇದೊಂದು "ಥ್ರಿಲ್" ಅಂತ ಅನಿಸಬಹುದು. ಸಂಪತ್ತಿನಲ್ಲಿ ಮೆರೆಯುವ ಯುವಜನಾಂಗದ ಈ 'FUN'ಗೆ ಬಲಿಯಾದ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳು!! ಬೆಳಕು ಕಾಣುವ ಮುನ್ನವೇ ಸಾವಿಗೆ ತಳ್ಳಲ್ಪಟ್ಟ ಕಂದಮ್ಮಗಳ ಸಂಖ್ಯೆಯೆಷ್ಟು? ಆತ್ಮಹತ್ಯೆಗಳೆಷ್ಟು? ಇದೆನ್ನೆಲ್ಲಾ ಯೋಚಿಸುವಾಗ "ಅಯ್ಯೋ ಪಾಪ!" ಎಂದೆನಿಸಿದರೂ ಡೇಟಿಂಗ್ ಬಗ್ಗೆ ಮತ್ತಷ್ಟು ಪ್ರಚಾರ ನೀಡುವ ಮಾಧ್ಯಮಗಳು, "ಡೇಟ್... ಇದೆಲ್ಲಾ ಸರ್ವೇ ಸಾಮಾನ್ಯ" ಎಂದು ಬೀಗುತ್ತಾ ನಡೆಯುವ ನಟ ನಟಿಯರು, ಅವರನ್ನು ಅನುಕರಿಸಿ ಹೊಂಡಕ್ಕೆ ಬೀಳುವ ಯುವ ಜನಾಂಗ "ಬುದ್ದಿವಂತ ತಲೆತಿರುಕರಂತೆ" ವರ್ತಿಸುತ್ತಿಲ್ಲವೇ? ಇಂತಹವುಗಳಿಂದಾಗಿಯೇ ವಿವಾಹ- ಕುಟುಂಬ ಸಂಬಂಧಗಳಲ್ಲಿ ಬಿರುಕು ಮೂಡತೊಡಗಿದೆ.ಪರಿಣಾಮವಾಗಿ ವಿವಾಹಗಳಿಗಿಂತ ವಿಚ್ಛೇದನಗಳ ಸಂಖ್ಯೆ ಅಧಿಕವಾಗುತ್ತಿವೆ. ಸಂಬಂಧಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಜೀವನ, ಕುಟುಂಬ ವ್ಯವಸ್ಥೆಗಳು ಚಿಂತೆಯ ಗೂಡಾಗಿ ಪರಿಣಮಿಸಿದೆ!

ಇಂತಿರುವಾಗ ಹಿರಿಯರು ಹೇಳುವ ಉಪದೇಶಗಳಿಗೆ ಕಿವಿಗೊಡದೆ "its my life" ಎಂದು ಮನಸೋ ಇಚ್ಛೆ ಮಜಾ ಮಾಡುವ ಯುವಜನಾಂಗಕ್ಕೆ ತನ್ನ ತಪ್ಪುಗಳು ಅರಿವಿಗೆ ಬರುವಾಗ ಕಾಲ ಮೀರಿರುತ್ತದೆ!. ಇನ್ನೂ ಕೆಲವು ಮಾತಾಪಿತರಂತೂ ಮಕ್ಕಳ ಎಲ್ಲಾ ಇಚ್ಛೆಗಳಿಗೂ "ಗ್ರೀನ್ ಸಿಗ್ನಲ್" ತೋರಿಸಿ ಅವರ ದಾರಿ ತಪ್ಪುವಂತೆ ಮಾಡುತ್ತಾರೆ. ಇಲ್ಲಿ ಯಾರನ್ನು ದೂಷಿಸಲಿ? ಎಲ್ಲವೂ ಕಾಲದ ಲೀಲೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ!. ಅಂತೂ ಒಟ್ಟಿನಲ್ಲಿ ಬಾಯ್‌ಫ್ರೆಂಡ್, ಗರ್ಲ್ ಫ್ರೆಂಡ್, ಡೇಟಿಂಗ್ ಎಲ್ಲವೂ ನವಯುಗದ ಟ್ರೆಂಡ್... ಏನಂತೀರಿ?

  • ಪ್ರಚಲಿತ
~.~
  • Login or register to post comments
  • 431 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2008 - 9:43am — mahesha

ಉ: ಡೇಟಿಂಗ್ ಎಂಬ ಟ್ರೆಂಡ್

mahesha's picture

೧) ಮೊದಲನೆಯದಾಗಿ, ಇಂತ ಟಾಪಿಕ್ಕಿನ ಬಗ್ಗೆ ಹೆಂಗಸರು ಬರೆದುದಕ್ಕೆ ನನ್ನಿ ಮತ್ತು ಹಾರಯ್ಕೆಗಳು.

೨) ಡೇಟಿಂಗ್ ಅನ್ನೋದು ನಮ್ಮ ದೇಶದಲ್ಲೂ ಇತ್ತು. ಇಂದು ಹಲವು ಬುಡಕಟ್ಟಲ್ಲಿದೆ.

ಇನ್ನು ಬೆಂಗಳೂರಲ್ಲಿ ನೀವು ಹೇಳಿದಶ್ಟು ಸಲೀಸಾಗಿ ಇಲ್ಲ... ಡೇಟಿಂಗ್ ಮಾಡೋ ಮಂದಿಯೇ ಬೇರೆ.. ಅವರು ಅಬ್ಬಬ್ಬ ಅಂದರೇ ೧% ಕೂಡ ಇಲ್ಲ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:23am — srinivasps

ಉ: ಡೇಟಿಂಗ್ ಎಂಬ ಟ್ರೆಂಡ್

srinivasps's picture

>> ಇನ್ನು ಬೆಂಗಳೂರಲ್ಲಿ ನೀವು ಹೇಳಿದಶ್ಟು ಸಲೀಸಾಗಿ ಇಲ್ಲ... ಡೇಟಿಂಗ್ ಮಾಡೋ ಮಂದಿಯೇ ಬೇರೆ.. ಅವರು ಅಬ್ಬಬ್ಬ ಅಂದರೇ ೧% ಕೂಡ ಇಲ್ಲ.

ಹಂಗಂತಾ ನಾನು ಅಂದುಕೊಂಡಿದ್ದೆ...ಆದರೆ ನಿಜಾಂಶ ಬೇರೆ ಅಂತ ನನ್ನಕ್ಕ ಹೇಳ್ತಾಳೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:30am — mahesha

ಉ: ಡೇಟಿಂಗ್ ಎಂಬ ಟ್ರೆಂಡ್

mahesha's picture

ಹವುದಾ ಸಂತಸದ ಸುದ್ದಿ... Smiling

ಸಂಪದದಲ್ಲೂ ಒಂದು ಡೇಟಿಂಗ್ ಚಾಟ್ ತೆರೇಬೇಕು...

ಹರಿ ಕಾರ್ಯನಿರತನಾಗು! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:02am — vikashegde

ಉ: ಡೇಟಿಂಗ್ ಎಂಬ ಟ್ರೆಂಡ್

vikashegde's picture

ಚೆನ್ನಾಗಿ ಬರೆದಿದ್ದೀರಿ. ನಮ್ಮ ದೇಶದಲ್ಲಿ dating ಹೆಸರಿನಲ್ಲಿ ಒಂದಿಷ್ಟು ಯುವ ಜನಾಂಗ ದಾರಿ ತಪ್ಪುತ್ತಿರುವುದು, ಅವು ಮುಂದೆ ಜೀವನದಲ್ಲಿ ವೈವಾಹಿಕ, ಇನ್ನಿತರ ಸಂಭಂಧಗಳಿಗೆ ಮಾರಕವಾಗಿ ಪರಿಣಮಿಸುತ್ತಿರುವುದು ನಿಜ. ಮೊದಲೆಲ್ಲ ಕೇವಲ ಒಂದಿಷ್ಟು ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಈ boyfriend, girlfriend, dating ಸಂಸ್ಕೃತಿ ಈಗ ಎಲ್ಲಾ ವರ್ಗಗಳಲ್ಲು ವ್ಯಾಪಿಸುತ್ತಿರುವುದು ಸಮಾಜದ ದುರಂತವೇ ಸೈ.

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?
  • ಪ್ರೀತಿ..........?
  • ಬಾಡದಿರು ಸ್ನೇಹದ ಹೂವೇ...
  • ನಾವು ಭಾರತೀಯರು ಏಕೆ ಹೀಗೆ?
  • ಚಾ(ವ)ಡಿ ಪಟ್ಟಾಂಗ
Syndicate content

ಲೇಖಕರು

rashmi_pai's picture

ಪೂರ್ಣ ಹೆಸರು
Rashmi Pai

ಪರಿಚಯ

ನನ್ನ ಊರು ಗಡಿನಾಡಾದ ಕಾಸರಗೋಡು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ ಕತೆ, ಕವಿತೆ, ಭಾಷಣ ಮೊದಲಾದವುಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ನೆಚ್ಚಿನ ಗೆಳೆಯನಾದ ಪ್ರಕೃತಿಯೊಂದಿಗೆ ಒಡನಾಟ ನಡೆಸುವುದು ಹಾಗೂ ಸ್ವಪ್ನಲೋಕದಲ್ಲಿ ವಿಹರಿಸುವುದೆಂದರೆ ನನಗಿಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 99 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator