ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಮೊದಲ ದಿನ ಮೌನ...

May 31, 2008 - 4:43pm — pallavi.dharwad

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು, ಕೇಕೆ, ಉಲ್ಲಾಸ ಕಂಡು ವೇದಿಕೆ ಮೇಲೆ ಗಂಡನೊಂದಿಗೆ ಕೂತಿದ್ದ ಮಾಧವಿ ಸಿಕ್ಕಾಪಟ್ಟೆ ಅಸೂಯೆಪಟ್ಟಿದ್ದಳು. ಅಲ್ಲಿಂದಲೇ ನಮ್ಮ ಮೊಬೈಲ್‌ಗಳಿಗೆ ಫೋನ್‌ ಮಾಡಿ, ’ನನ್ನ ಒಬ್ಬಾಕಿನ್ನ ಮ್ಯಾಲೆ ಬಿಟ್ಟು, ನೀವು ಹರಟಿ ಹೊಡಿತಾ ಕೂತಿರೇನ್ರೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಆದರೂ ಅವಳಿಗೆ ಬಹುತೇಕ ಗೆಳತಿಯರು ಮದುವೆಗೆ ಬಂದಿದ್ದು ಖುಷಿ. ಎಲ್ಲರೂ ನಗುನಗುತ್ತ ಇದ್ದುದನ್ನು ಕಂಡು ಡಬಲ್‌ ಖುಷಿ. ಅದು ನಮಗೆ ಗೊತ್ತಿದ್ದರಿಂದಲೇ, ’ನಿನಗೇನೆ ಜೊತಿಗೆ ಗಂಡ ಅದಾನ. ಇನ್ಮೇಲೆ ನಮ್ಮ ಹಂಗ ನಗೋ ಹಂಗಿಲ್ಲ. ಮದುವೆಯಾಗವರ್ಗೆ ನಮ್ಮುನ್ನ ನಗಾಕ ಬಿಡ ಮಾರಾಯ್ತಿ’ ಎಂದು ಫೋನ್‌ನಲ್ಲೇ ಗದರಿಸಿ ನಮ್ಮ ಮಾತು-ಕತೆ ಮುಂದುವರೆಸಿದ್ದೆವು.

ಈಗ ಮಾಧವಿ ಗಂಡನ ಮನೆಗೆ ಹೊರಟಿದ್ದಾಳೆ. ಬೆಳಿಗ್ಗೆಯಿಂದ ಮುಖದಲ್ಲಿ ಮಂಕು. ಹುಟ್ಟಿ ಬೆಳೆದ ಮನೆ ಬಿಟ್ಟು ಹೋಗಬೇಕು. ಹೊಸ ಜಾಗದಲ್ಲಿ ಹೇಗೋ ಏನೋ ಎಂಬ ಅಳುಕು. ಆಕೆ ಬದುಕಬೇಕಾಗಿರುವುದು ಅಪರಿಚಿತ ವ್ಯಕ್ತಿಗಳೊಂದಿಗೆ, ಅಪರಿಚಿತ ಮನೆಯಲ್ಲಿ. ಯಾರ ಮನಸ್ಸು ಹೇಗೋ ಏನೋ. ಮಾತು ಆಡಿದರೆ ಕಷ್ಟ, ಆಡದಿದ್ದರೂ ಕಷ್ಟ ಎಂಬ ಅರಿವಿನಿಂದ ಕಂಗಾಲಾಗಿದ್ದಳು.

ನಾವೆಲ್ಲ ಸಮಾಧಾನ ಹೇಳಿದೆವು. ’ಬದುಕಿನ ಅನಿವಾರ್ಯ ಅಂಗ ಇದು ಮಾಧು. ಸುಮ್ಮನಿರು, ನೀನು ಹೇಗಿರ್ತೀಯೋ ಎಲ್ಲ ಹಾಗೇ ಆಗ್ತದ. ಮನಸ್ಸು ಗಟ್ಟಿ ಮಾಡ್ಕೋ. ಗೌರವದೊಂದಿಗೆ ಮಾತಾಡು. ಆದರೆ, ಯಾರಾದ್ರೂ ನಿನ್ನ ವಿಧೇಯತೆ ಮೇಲೆ ಸವಾರಿ ಮಾಡಕ್ಕೆ ಬಂದ್ರೆ ಮಾತ್ರ ಸುಮ್ಮನೇ ಸಹಿಸಿಕೋಬ್ಯಾಡ. ಒಮ್ಮೆ ಸುಮ್ಮನಿದ್ದರೆ ಮುಂದೆ ಅದೇ ರೂಢಿ ಆಗ್ತದೆ’ ಎಂದೆಲ್ಲ ಮಹಾ ಅನುಭವಸ್ಥರಂತೆ ಮಾತನಾಡಿದೆವು. ಹಳೆಯ ನೆನಪುಗಳನ್ನು ಮತ್ತೊಮ್ಮೆ ಹೊರ ತೆಗೆದು ಹಂಚಿಕೊಂಡೆವು. ನಾವೂ ಆಕೆಯೊಂದಿಗೆ ಕಣ್ಣೀರು ಹಾಕಿದೆವು. ಆಕೆಯನ್ನು ಹತ್ತಿಸಿಕೊಂಡ ಗಾಡಿ ಕಾಣದಾದಾಗ ಎಂಥದೋ ಖಾಲಿ ಭಾವ.

ಮನೆಯಲ್ಲಿ ಕೂತವಳಿಗೆ ಮಾಧವಿಯದೇ ನೆನಪು. ನಾನೂ ಒಂದಲ್ಲ ಒಂದಿನ ಅಪ್ಪ-ಅವ್ವನ ಮನೆ ಬಿಟ್ಟು ಹೋಗಬೇಕು. ಯಾರೋ ಅಪರಿಚಿತನೊಂದಿಗೆ ಜೀವನಪೂರ್ತಿ ಕಳೆಯಬೇಕು. ಯಾಕೆ? ಇದು ಯಾರು ಮಾಡಿದ ನೀತಿ? ಎಂದೆಲ್ಲ ಮನಸ್ಸು ತಳಮಳಿಸಿತು. ಗೊತ್ತಿರದ ವ್ಯಕ್ತಿಯೊಂದಿಗೆ ಹೇಗೆ ಬದುಕುವುದು ಎಂಬ ದಿಗಿಲು ಹೆಚ್ಚಾಗುತ್ತ ಹೋದಂತೆ, ಅವ್ವನ ಹತ್ತಿರ ಹೋದೆ. ದುಗುಡ ಹೇಳಿಕೊಂಡೆ. ಆಕೆ ನಕ್ಕಳು. ನಾನೂ ಹಂಗೇ ಬಂದಿದ್ದು ಪಲ್ಲು. ನಿಮ್ಮಪ್ಪನ್ನ ಮೊದಲು ನೋಡಿದ್ದೇ ಮದುವೆ ದಿನದಂದು ಎಂದಳು. ಈಗ ನಾವು ಚೆನ್ನಾಗೇ ಇದ್ದೇವಲ್ಲ? ’ಯಾವಾಗ್ಲೂ ಇದು ಹಂಗ ಪುಟ್ಟಿ. ಇರೋ ಜಾಗ ಬಿಟ್ಟು ಇನ್ನೆಲ್ಲೋ ಬದುಕು ಶುರು ಮಾಡ್ತೀವಿ. ಕ್ರಮೇಣ ಅದೇ ಅಭ್ಯಾಸವಾಗಿಬಿಡ್ತದ. ಇದು ಮದುವೆಗಷ್ಟ ಸೀಮಿತ ಅನ್ಕೋಬ್ಯಾಡ. ಹುಡುಗ್ರನ್ನ ನೋಡು. ನೌಕರಿ ಹುಡುಕ್ಕಂಡು ಎಲ್ಲೆಲ್ಲೋ ಹೋಗ್ತಾವು. ಏನೆಲ್ಲ ಕಷ್ಟಪಡ್ತಾವು. ಅವ್ರು ಕೂಡ ಬದುಕೋದು ಅಪರಿಚತಳ ಜೊತೆಗೇ ಅಲ್ಲಾ? ಮೊದಮೊದ್ಲು ಇದು ಅನ್ಸೋದ ಹಿಂಗ. ಕ್ರಮೇಣ ಅಭ್ಯಾಸ ಆಗ್ತದ’ ಎಂದು ಸಮಾಧಾನ ಹೇಳಿದಳು.

ಅಷ್ಟೇ ಅಲ್ಲ, ’ಇನ್ನೊಂದು ವಾರದಾಗ ಮಾಧವಿನ ನಿನಗ ಫೋನ ಮಾಡಿ ಹೇಳ್ತಾಳ: ತಾನೆಷ್ಟು ಆರಾಮ ಇದ್ದೀನಿ ಅಂತ. ಬೇಕಾದ್ರ ನೋಡು’ ಎಂದು ಸವಾಲೂ ಎಸೆದಳು.

ಅದಕ್ಕಾಗಿ ಒಂದು ವಾರವೇನೂ ಬೇಕಾಗಲಿಲ್ಲ. ಎರಡೇ ದಿನದೊಳಗೆ ಮಾಧವಿ ಫೋನ್‌ ಮಾಡಿದಳು. ಧ್ವನಿಯಲ್ಲಿ ಧಾವಂತವಿಲ್ಲ. ಆರಾಮದೀನಿ ಪಲ್ವಿ. ಏನೂ ಸಮಸ್ಯಾ ಇಲ್ಲ. ಎಲ್ರೂ ಚೆಂದ ನೋಡ್ಕಂತಾರ. ನೀನೂ ಲಗೂ ಮದ್ವಿ ಆಗು ಎಂದು ಹಿರಿಯಳಂತೆ ಬುದ್ಧಿವಾದ ಹೇಳಿದಳು.

ನಾನು ಅವಾಕ್ಕಾಗಿದ್ದೆ. ಕೆ.ಎಸ್‌. ನರಸಿಂಹಸ್ವಾಮಿಯವರ ’ಮೊದಲ ದಿನ ಮೌನ’ ಗೀತೆ ಅಣಕಿಸಿತು.

ಸುಮ್ಮನೇ ಕೂತ ನನ್ನನ್ನು ನೋಡಿ ಅವ್ವ ನಕ್ಕಳು.

- ಪಲ್ಲವಿ ಎಸ್‌.

  • ಅನುಭವ ಕಥನ
~.~
  • Login or register to post comments
  • 425 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2008 - 7:38pm — uniquesupri

ಉ: ಮೊದಲ ದಿನ ಮೌನ...

uniquesupri's picture

ಎಲ್ರೂ ಏಕಾಂಗಿಯೇ... ಬಂದದ್ದು ಒಬ್ಬನೇ ಹೋಗುವುದೂ ಒಬ್ಬನೇ ಎನ್ನುವ ಸರಳ ಮಾತು ಕೇವಲ ವೈರಾಗ್ಯದ ತತ್ವಜ್ಞಾನಿಯ ಕನವರಿಕೆಯಾಗಬೇಕಿಲ್ಲ. ಹುಟ್ಟಿದಾಗ ಅಪ್ಪ-ಅಮ್ಮನೂ ಅಪರಿಚಿತರೇ ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2008 - 11:41am — pallavi.dharwad

ಉ: ಮೊದಲ ದಿನ ಮೌನ...

pallavi.dharwad's picture

ಎಲ್ರೂ ಏಕಾಂಗಿ ಎಂಬ ಮಾತು ನಿಜ. ಬರುವಾಗ ಹಾಗೂ ಹೋಗುವಾಗಲೂ ಒಬ್ಬರೇ ಎಂಬುದೂ ನಿಜ. ಅದಕ್ಕೆಂದೇ ಬದುಕಿದ್ದಾಗ ಎಲ್ಲರೊಂದಿಗೆ ಬೆರೆಯಬೇಕು. ಒಬ್ಬರ ಅನುಭವ, ಸಹಾಯ ಇನ್ನೊಬ್ಬರ ಜೀವನವನ್ನು ಅರಳಿಸಬಲ್ಲುದು. ಅದೇ ರೀತಿ, ಅವರ ಅನುಭವ ಹಾಗೂ ಕಾಣ್ಕೆ ನಮ್ಮದಾಗಬಹುದು. ಹೊಂದಾಣಿಕೆಯೇ ಬದುಕು. ದ್ವೀಪಗಳಿದ್ದರೇನಂತೆ, ಸೇತುವೆಗಳನ್ನು ಕಟ್ಟಿಕೊಳ್ಳಬಹುದಲ್ಲ!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊದಲ ದಿನ ಮೌನ...
  • ಮತ್ತೆ ಮಳೆ ಹುಯ್ಯುತಿದೆ
  • ಮತ್ತೆ ಮಳೆ ಹುಯ್ಯುತಿದೆ
  • ಅನಾಮಧೇಯರಾಗಿರುವ ಖುಷಿ!
  • ಅನಾಮಧೇಯರಾಗಿರುವ ಖುಷಿ
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator