ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಹಿಮಾ-ಲಯ

June 2, 2008 - 9:07am — madhava

ಈ ವರ್ಷದ ನೊಬೆಲ್ ಪುರಸ್ಕಾರವನ್ನು ಶ್ರೀಮಾನ್ ಲ.ನಾ.ಭಟ್ ರವರಿಗೆ ನೀಡಲಾಗಿದೆ. ತೀರ ಪ್ರದೇಶದ ಜೀವಿಗಳು ಸಮುದ್ರ ಮಟ್ಟದ ಏರಿಕೆಯಿಂದಾಗಿ ಮೃತಪಟ್ಟಿದ್ದು ಅದು ಇನ್ನು 1000 ವರ್ಷಗಳ ನಂತರ ನಮಗೆ ಇಂಧನವಾಗಿ ದೊರಕಲಿದ್ದಾರೆ ಎನ್ನುವ ಮಹತ್ತರವಾದ ಸಂಶೋಧನೆಗೆ ಅವರಿಗೆ ಪುರಸ್ಕಾರ ದೊರಕಿದೆ. ಎಲ್ಲ ತೀರ ಪ್ರದೇಶಗಳು ಮುಳುಗಿ ಪರ್ವತ ಪ್ರದೇಶಗಳೆಂದು ಬಿಂಬಿತವಾಗಿದ್ದ ಭೂ ಪ್ರದೇಶಗಳು ಮಾತ್ರ ಉಳಿದಿದ್ದು ಎಲ್ಲ ಜನರು ಅಲ್ಲಿಗೆ ಲಗ್ಗೆ ಇಟ್ಟು ಕುಳಿತಿದ್ದಾರೆ. ಭಾರತದ ಹಿಮಾಲಯ ಪರ್ವತವು ಹಿಮವನ್ನು
ಕಳೆದುಕೊಂಡು ಹಿಮಾ-ಲಯವಾಗಿ ಈಗ ವಾಸಯೋಗ್ಯವಾಗಿದೆ. ಅಲ್ಲಿ ಭಾರತದ ಮಹಾಜನತೆಯೂ, ಪಾಕಿಸ್ತನ, ಚೀನಾ ಮತ್ತು ಅಕ್ಕಪಕ್ಕದ ದೇಶಗಳ ಮಹಾಜನರು ಜೀವಿಸುತ್ತಿದ್ದಾರೆ. ಎಲ್ಲ ಖಂಡಗಳ ಎತ್ತರದ ಭಾಗಗಳು ಮಾತ್ರ ಉಳಿದಿದ್ದು ಮತ್ತೆಲ್ಲ ಜಲಪ್ರಳಯದಲ್ಲಿ ಮುಳುಗಿಹೋಗಿವೆ. ಅಲ್ಲಿಗೆ ಹಿಂದೂಗಳು, ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಯಹೂದಿಗಳು, ಪ್ಯಾಲಿಸ್ತೇನಿಯನ್ನರು ಮುಂತಾದ ಮತ ಭಾಂದವರೆಲ್ಲರು ಲಗ್ಗೆ ಇಟ್ಟು ಸಂಸಾರ ನಡೆಸುತ್ತಿದ್ದಾರೆ. ಹಿಂದಿನ ಹಾಗಲ್ಲದೆ ತಮ್ಮ ಮತ ಭಾಂದವರ ಸಂಖ್ಯೆಯನ್ನು ವೃದ್ಧಿಸಲು ಕೆಲವರಿಗೆ ಈಗ ಅನುಕೂಲವಾಗಿದೆ. ತಮ್ಮ ಜಾಗವೆಂದು ಹೇಳಿ ಭಯೋತ್ಪಾದನೆಯನ್ನು ಮಾಡುತ್ತಿದ್ದವರಿಗೆ ಅವರ ಜಾಗವೆಲ್ಲ ನೀರಿನಲ್ಲಿ ಮುಳುಗಿ ಕೆಲಸವಿಲ್ಲದಂತಾಗಿದೆ. ಹಿಮಾ-ಲಯಕ್ಕೊಸ್ಕರ ಭಾರತ, ಪಾಕಿಸ್ತಾನ, ಚೀನಾ ಮುಂತಾದವೆಲ್ಲ ಹೊಸ ಯುದ್ಧಗಳನ್ನು ಪ್ರಾರಂಭಿಸಿವೆ. ಓಂದು ತಮಾಶೆಯೆಂದರೆ ಈಗ ಇವುಗಳಿಗೆಲ್ಲ ಖಂಡಾಂತರ ಕ್ಷಿಪಣಿಗಳ ಅಗತ್ಯವಿಲ್ಲ. ಎಲ್ಲರು ಅಲ್ಲಲ್ಲೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.

ಮಹಾಜನರಿಗೆಲ್ಲ ಊಟದ ಕೊರತೆ ಉಂಟಾಗಿದೆ. ಗಾಂಧಿ ತಮ್ಮ ಉಪವಾಸವನ್ನು ಪುನ: ಪ್ರಾರಂಭಿಸಿದ್ದಾರೆ. ಊಟದ ಕೊರತೆಯನ್ನು ನೀಗಿಸಲು ಎಲ್ಲರು ಪ್ರತಿ ಸೋಮವಾರ ಉಪವಾಸ ಕೈಗೊಳ್ಳಿರೆಂದು ಉಪದೇಶಿಸುತ್ತಿದ್ದಾರೆ. ಮುಸಲ್ಮಾನ ಹಿಂದೂಗಳೆಲ್ಲ ಒಂದೆಂದು, ಒಟ್ಟಿಗೆ ಬಾಳಿದರೆ ಮಾತ್ರ ನೆಮ್ಮದಿ ಸಾಧ್ಯ ಎಂದು ಚಳುವಳಿ ಸಾರಿದ್ದಾರೆ. ತೆರೇಸಾ ಹೊಸ ಹೊಸ ಸಾಂಕ್ರಮಿಕ ರೋಗಗಳಿಂದ ಜರ್ಜರಿತರಾದವರ ಶುಶ್ರೂಷೆ ಕೈಗೊಂಡಿದ್ದಾರೆ. ನಾಸಾದವರು ಸಮಸ್ಯೆಗೆ ಪರಿಹಾರ ಅನ್ಯ ಗ್ರಹಗಳ ಆಕ್ರಮಣದಿಂದ ಮಾತ್ರ ಸಾಧ್ಯವೆಂದು ನಂಬಿದ್ದಾರೆ. ಮತ್ತು ಆ ದಿಶೆಯಲ್ಲಿ ಸತತ ಪ್ರಯತ್ನ ನಡೆಸಿದ್ದಾರೆ. ಉಪಗ್ರಹಗಳು ಮಾತ್ರ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾವ ಭಗಗಳು ಹಿಮವನ್ನು ಯಾವ ಯಾವ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ ಮತ್ತು ಎಷ್ಟು ವಾಸಯೋಗ್ಯವಾಗಿ ಪರಿವರ್ತಿತವಾಗುತ್ತಿವೆ ಎಂಬ ಮಾಹಿತಿಯನ್ನು ತಪ್ಪದೆ ರವಾನಿಸುತ್ತಿವೆ. ಹಿಮಾ-ಲಯ, ಆಲ್ಫ್ಸ್ ಮುಂತಾದ ಪರ್ವತಗಳನ್ನು ನೋಡಿದರೆ ಜಾತ್ರೆಯ ನೆನಪಾಗುತ್ತಿದೆ. ಹಿಂದೊಮ್ಮೆ ಶಾಂತವಾಗಿ ಅನೇಕ ಋಷಿ ಮುನಿಗಳ ಜ್ಞಾನ ವೃದ್ಧಿಯ ಸ್ಥಳಗಳಾಗಿದ್ದವಿಂದು ಕೊಲೆ, ಕಳ್ಳತನ, ಸುಲಿಗೆ, ವ್ಯಭಿಚಾರ, ಯುದ್ಧ, ರಾಜಕೀಯ, ಕಪಟ, ಮೋಸಗಳ ಆಗರವಾಗಿದೆ.

ಸಿಂಗಪುರ ಸರ್ಕಾರವು ತಮ್ಮ ಪ್ರಜೆಗಳಿಗೆ ಇನ್ನು ಮಕ್ಕಳನ್ನು ಹೆರಬೇಡಿ. ನೀವು ಮಾತ್ರ ಬದುಕಿ ಸಾಯಿರಿ, ಮಾನವ ಸಂಪತ್ತಿನ ಅವಶ್ಯಕತೆ ಇನ್ನಿಲ್ಲ, ನಿಮ್ಮ ವಿಧಿಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂಬ ಹೊಸ ತೀರ್ಮಾನವನ್ನು ಕೈಗೊಂಡಿದ್ದಾರೆ. ಪಾಕಿಸ್ತಾನದ ಜನತೆ ಜಮ್ಮು ಮತ್ತು ಕಾಶ್ಮೀರದ ತೀರಾ ಅವಶ್ಯಕತೆಯಲ್ಲಿದ್ದಾರೆ, ಹಾಗಾಗಿ ಆ ಭಾಗಗಳನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ಚಿಂತಿಸಲಾಗಿವುದೆಂದು ನೆಹರು ಸರ್ಕಾರ ಹೇಳಿದೆ. ಅಮೆರಿಕವು ಅಣು ಒಪ್ಪಂದದ ವಿಚಾರದಲ್ಲಿ ಹೊಸ ನೀತಿಯನ್ನು ರಚಿಸಲಾಗುವುದೆಂದು ಹೇಳಿದೆ. ಹಲವಾರು ದೇಶಗಳು ನೀರಿನಡಿಯಲ್ಲಿ ಮುಳುಗಿಹೋಗಿರುವುದರಿಂದ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು, ಇರುವ ದೇಶಗಳು ಸಹಾಯಕ್ಕೆ ಮುಂದೆ ಬರಬೇಕೆಂದು ವಿಶ್ವಸಂಸ್ಥೆ ಕೇಳಿಕೊಂಡಿದೆ.

ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಂದಿಬೆಟ್ಟದಲ್ಲಿ ಹೊಸ ಸರ್ಕಾರ ರಚಿಸಿದ ಮಾನ್ಯ ಶ್ರೀ ಯಡಿಯೂರಪ್ಪನವರು ಏನು ತೀರ್ಮಾನ ಕೈಗೊಳ್ಳುತ್ತಾರೆಂದು ಕಾದು ನೋಡಲು ತೀರ್ಮಾನಿಸಲಾಗಿದೆ.

-ಮಾಧವ

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 422 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 11:00am — Sunil Jayaprakash

ಉ: ಹಿಮಾ-ಲಯ

Sunil Jayaprakash's picture

ಏನೋ (ಏಕವಚನ ಏಕಂದ್ರೆ, ನೀನು ಕೂಡ ನನ್ನ ವಾರಿಗೆಯವನ ಹಾಗೇ ಕಾಣ್ತಾ ಇದ್ದೀಯಾ, ಅದಕ್ಕೆ) ಇದು ಮಾಧವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 11:43am — madhava

ಉ: ಹಿಮಾ-ಲಯ

madhava's picture

ಕ್ಷಮಿಸಿ.., ಇದು ಭೂ ತಾಪಮಾನದ ಪರಿಣಾಮ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 4:36pm — girish.rajanal

ಉ: ಹಿಮಾ-ಲಯ

girish.rajanal's picture

ನೆಲದ ತಾಪಮಾನ ಏರಿಕೆಯ ವಿಷಯವಾಗಿ ಸಂಪದದಲ್ಲಿ ಒಂದು ’ಅರಿವು’ ಶುರು ಮಾಡುವ ಅಗತ್ಯವಿದೆ.
ಏನಂತಿರಾ?............

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 3:20pm — madhava

ಉ: ಹಿಮಾ-ಲಯ

madhava's picture

ನಿಮ್ಮ ಸಲಹೆ ಸೂಕ್ತವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • ತಮಿಳು ಸಾಫ್ಟ್ ವೇರ್ ಕ೦ಪನಿ
  • ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದೇ ?
  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಭುಟ್ಟೊ ಬಗೆಗೆ ಇನ್ನಷ್ಟು
Syndicate content

ಲೇಖಕರು

madhava's picture

ಪೂರ್ಣ ಹೆಸರು
ಮಾಧವ

ಪರಿಚಯ

ಆ... ಏನ್ ಹೇಳ್ಲಿ? ಪರಿಚಯ ಮಡ್ಕೊಳ್ಳೋವಂತ ಭಾರಿ ಕುಳ ಏನ್ ಅಲ್ಲ. ಆದ್ರೂ ಇನ್ನೊಂದ್ಸಲಿ ಸಿಕ್ಕಾಗ ಇರಸು ಮುರಸು ಬೇಡ ಅಂತ ಹೇಳ್ತೀನಿ... ನೀಚಡಿ ಸ್ವಂತ ಊರಾದ್ರು, ಬೆಳೆದಿದ್ದೆಲ್ಲ ಹೆಗ್ಗೋಡಲ್ಲಿ. ಕರೆಕ್ಟಾಗಿ ನೀನಾಸಂ ಹಿಂದ್ಗಡಿಗೇ ನಮ್ಮ ಮನೆ ಇತ್ತು. 10ನೇ ಕ್ಲಾಸ್ ವರೆಗೂ ಬೇಕಾದ್ದು ಬೇಡದೇಹೋಗಿದ್ದು ಎಲ್ಲಾ ಹೆಗ್ಗೋಡಲ್ಲೇ ಮಾಡಿ, ಪಿಯುಸಿಗೆ ಎನೋ ಮಾಡ್ತೀನಂತ ಉಡುಪಿಗೆ ಹೋಗಿ ಏನೂ ಮಾಡಕ್ಕಾಗಿಲ್ಲ. ನಾನೂ ಎಲ್ರಂಗೆ ಬೆಂಗಳೂರಲ್ಲಿ ಇಂಜಿನಿಯರಿಂಗ್ ಮಾಡಿ ಈಗ ಟಾಟಾ ದವರ ಕೈ ಕೆಳಗೆ ಹೊಟ್ಟೆಪಾಡಿಗೋಸ್ಕರ ಕೆಲಸ ಮಾಡ್ತಿದೀನಿ... ಅಷ್ಟೇ... ಇನ್ನು ಏನೂ ಸಾಧಿಸಿಲ್ಲ. ಬ್ಯಾಗ್ರೌಂಡೆಲ್ಲಾ ನೋಡಿ, ಎಲ್ಲಾ ಒಳ್ಳೆ ಭವಿಷ್ಯ ಇದೆ ಅಂತಾ ಹೇಳ್ತಾರೆ. ಅದು ನಾನ್ ಬದ್ಕಿರೊವರ್ಗೂ ಭವಿಷ್ಯ ಆಗೇ ಇರತ್ತೇನೋ ಅಂತ ಇತ್ತೀಚೆಗೆ ಭಯ ಶುರುವಾಗ್ತಿದೆ. ಅಂತಾ ಒಳ್ಳೇ ಹವ್ಯಾಸ ಯಾವ್ದೂ ಇಲ್ದೇ ಹೋದ್ರೂ ಕೆಟ್ಟದ್ದು ಅನ್ನಿಸ್ಕೊಳೋದ್ಯಾವ್ದನ್ನೂ ಇನ್ನೂ ಬೆಳೆಸ್ಕೊಂಡಿಲ್ಲ ಅಂದ್ಕೊಂಡಿದೀನಿ. ಯಾಕೆ ಅಂದ್ರೆ ನಂಗೆ ಒಳ್ಳೇದಾಗಿ ಕಾಣೋದು ನಿಮ್ಗೆ ಕೆಟ್ಟದ್ದಾಗಿರ್ಬಹುದು. ಅಷ್ಟೇ, ಇನ್ನೇನಿಲ್ಲ... ಇನ್ನೊಂದ್ಸಾರಿ ಸಿಕ್ಕಾಗ ಮಾತಾಡೋಣ... ಬರ್ಲಾ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವ
  • ಬಿಡುಗಡೆಯ ನಂತರದ ಬೇಡಿಗಳು (೪)
  • ತಿಳಿ ಹಾಸ್ಯ ಮರೆತಿಲ್ಲ!
  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 4:41pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:18pm
  • dhanu.vijai
    ಉ: ಕಾದಿರುವೆ ನಿನಗಾಗಿ
    August 30, 2008 - 4:14pm
  • ಸಂಗನಗೌಡ
    ಉ: ಕಾದಿರುವೆ ನಿನಗಾಗಿ
    August 30, 2008 - 3:36pm
  • kadakolla05
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 2:09pm
  • srinivasps
    ಉ: ಕಚೇರಿ ಎಂಬ ನರಕ-೧
    August 30, 2008 - 1:56pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator