ಪಲ್ಲವಿ ವಿಷಯವಾಗಿ...
ಬ್ಲಾಗ್ ಮಿತ್ರರೇ...
ಪಲ್ಲವಿ ಸಂಪದಕ್ಕೆ ಬಂದಾಗ್ಲಿಂದಾನೂ ಅವಳನ್ನ ನೋಡ್ತಾನೇ ಇದ್ದೀನಿ. ನಿಮ್ಮ ಹಾಗೇ ನಾನೂ ಯಾರಪ್ಪಾ ಇದು? ಎಂದು ಹುಬ್ಬೇರಿಸಿದ್ದುಂಟು. ಆದ್ರೆ ಪ್ರತಿಕ್ರಿಯಿಸಿಲ್ಲ. ನಿಮ್ಮ ಹಾಗೂ ಅವಳ ನಡುವೆ ಏರ್ಪಟ್ಟ ಸವಾಲ್ ಜವಾಬ್ ನ್ನ ತಪ್ಪದೇ ಗಮನಿಸ್ತಾ ಹೋದೆ. ಅವಳ ಬರಹ, ವಿಚಾರಧಾರೆ, ಪ್ರತಿಕ್ರಿಯಿಸುವ ಚಾಕಚಕ್ಯತೆ ಎಲ್ಲವೂ ವಿಶೇಷ ಗಮನ ಸೆಳೆಯಿತು. ಈ ಬೆಳವಣಿಗೆ ಕಂಡಾಗ ಅಕ್ಷರಗಳನ್ನೇ ಉಸಿರಾಡುತ್ತ ಅಕ್ಷರಗಳನ್ನೇ ಧ್ಯಾನಿಸುವವಳು ಪಲ್ಲವಿ ಎಂಬುದು ದಟ್ಟವಾಗುತ್ತಾ ಹೋಯಿತು. ವಯಸ್ಸಿಗೆ ಮೀರಿದ ಅನುಭಾವ, ಗಟ್ಟಿ ಭಾವವಲಯ ಅವಳದು. ಅವಳಿಗದು ಅರಿವಿದೆಯೋ ಇಲ್ಲವೋ.... ಸಂಪದದ ಮೂಲಕ ತನ್ನೊಂದಿಗೆ ಇತರರನ್ನೂ ಬೆಳೆಸುತ್ತ ಸಾಗಿರುವ (ಅಕ್ಷರ ಕಾಯಕ) ವೈಶಾಲ್ಯ ನಿಜಕ್ಕೂ ಖುಷಿ ವಿಷಯ.
ಎನಿ ವೇ ಗುಡ್ ಲಕ್ ಪಲ್ಲವಿ..... ಜಿಡ್ಡು ಹಿಡಿದ, ಸವೆಕಲಾದ, ವಿಚಾರಧಾರೆಯಿಂದ ಆಚೆ ಬರಲು ಹವಣಿಸುವ ಪ್ರಯತ್ನಕ್ಕೆ ಮನದಲ್ಲೇ ನನ್ನದೊಂದು ಪುಟ್ಟ ಧನ್ಯವಾದ.
ಇದನ್ನು ಬರೆಯಲು ಪ್ರೇರೇಪಿಸಿದ ಸುನಿಲ್ ಜಯಪ್ರಕಾಶ್ ಅವರಿಗೆ ‘ವಿಶೇಷ’ ಧನ್ಯವಾದಗಳು....

- Login or register to post comments
- 290 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪಲ್ಲವಿ ವಿಷಯವಾಗಿ...
ಅಬ್ಬಾ ಎ೦ಥಾ ಕೊ-ಆಪರಶನ .
ನಮಸ್ಕಾರ ಶ್ರಿದೇವಿಯವರೆ. ನನಗು ಪಲ್ಲವಿಯವರ ಲೇಖನಗಳನ್ನು ಒದಿ ತು೦ಬಾ ಖುಶಿ ಆಗುತ್ತೆ.
ಇನ್ನೊ೦ದು ಸ್ವಾರ್ಥದ ಭಾವನೆ ಎ೦ದರೆ ಪಲ್ಲವಿ ನಮ್ಮ ಭಾಗದವರು ಅ೦ದ್ರೆ ಉತ್ತರ ಕರ್ನಾಟಕದವರು( ಧಾರವಾಡ). ಅದಕ್ಕೆನೆ ತಪ್ಪದೆ ಅವರ ಲೇಖನಗಳನ್ನು ಓದುತ್ತೆನ,
ನನ್ನ ಅಪರಿಚಿತ ಸೋದರಿಗೆ ಕೊಟ್ಟ ಸ್ಪೂರ್ತಿಯನ್ನು ಎಲ್ಲ ಬರಹಗಾರಿಗು ನೀಡಿ.
ನಮಸ್ಕಾರ.
ಅನ೦ತಶಯನ ಸ೦ಜೀವ.
ಉ: ಪಲ್ಲವಿ ವಿಷಯವಾಗಿ...
ಅನಂತಶಯನ ಅವರೆ,
ಸ್ವಾರ್ಥ ಭಾವ ಅಲ್ಲ. ಅಭಿಮಾನ, ಎಳೆತ ಅಷ್ಟೇ. ಯಾರು ಎಲ್ಲಿದ್ದರೇನು? ಯಾರಾದರೇನು? ಚೆನ್ನಾದ ಬರಹ ಎಲ್ಲವನ್ನೂ ಮೀರಿ ಓದಿಸಿಕೊಂಡು ಹೋಗುತ್ತದೆ. ಅಷ್ಟೇ ಅಲ್ಲ ವ್ಯಕ್ತಿಗಿಂತ ಅಭಿವ್ಯಕ್ತಿ ಮುಖ್ಯ. ಇನ್ನು ಸ್ಫೂರ್ತಿಯ ವಿಷಯವಾಗಿ ಹೇಳಬೇಕೆಂದರೆ ಎಲ್ಲ ಕ್ರೆಡಿಟ್ ಸಂಪದಕ್ಕೆ.
ಉ: ಪಲ್ಲವಿ ವಿಷಯವಾಗಿ...
ಎಲ್ಲಾ ಸರಿ ಒಪ್ಕೊತೀನಿ.
ಆದರೆ ಈ ಪಲ್ಲವಿರವರು ಯಾಕೆ ಇತ್ತೀಚೆಗೆ ಕಾಣ್ತಾಯಿಲ್ಲ.
ಕವಿತೆ ಬರಿಯೋಣು ಬಾರ ಅಂತ ಕರೆದು ತಮ್ಮೂರಿನ ಹೊರಗಿರೊ ಭಾವಿ ಹತ್ರ ಹಾಡಾತಾ ಕೂತಂಗಿದೆ.

ಹುಡುಗರನ್ನು ಸೆಳೆಯುವುದು ಹೇಗೆ ಅನ್ನುವ ಬತ್ತಿ ಹಚ್ಚಿ ಕೈಕೊಟ್ಟು ಎಲ್ಲಿಗೆ ಹೋದ್ರು ಇವರು ?
-ಯುವಪ್ರೇಮಿ
ಉ: ಪಲ್ಲವಿ ವಿಷಯವಾಗಿ...
ಹೌದು. . .ಪಲ್ಲವಿ ಇತ್ತೀಚೆಗೆ ಏನೂ ಬರೆದಿಲ್ಲ. ಅವಳ ಲೇಖನಗಳ ದಾಟಿ ನೋಡಿದ್ರೆ ಅನ್ಸತ್ತೆ. ಅವಳು ಸಕತ್ ಮೂಡಿ ಅಂತ. ಲಹರಿ ಬಂದ್ರೆ ಬರೀತಾ ಇರ್‍ತಾಳೆ. ಇಲ್ಲಾಂದ್ರೆ ಕಂಬಳಿ ಹೊದ್ಕೊಂಡ್ ಮಲ್ಕೊಂಡ್ ಬಿಡ್ತಾಳೆ.. ಒಂದು ಓಪನ್ ಲೆಟರ್ ಬರೆದ್‌ಬಿಡಿ ಸುಪ್ರೀತ್ ಅವ್ಳಿಗೆ. . .ನೋಡೋಣ ಮಜ.
ಉ: ಪಲ್ಲವಿ ವಿಷಯವಾಗಿ...
ಹೌದು ಸುಪ್ರೀತ್,
ಒಂದು ದೊಡ್ಡ ಓಪನ್ ಪತ್ರ ಬರೀರಿ. ನಾನು ಬೇಕಿದ್ರೆ ಸಹಿ ಹಾಕ್ತೀನಿ.
ಹಾಗೆ ಪಲ್ಲವಿರವರು ಬರ್ತಾ ದಾರವಾಡ್ ಪೇಡ ತರೋಕೆ ಹೇಳಿ.
-ಯುವಪ್ರೇಮಿ