ಜವರಾಯನಿಗಿಲ್ಲ ಕರುಣೆ ಒಂದಿನಿತೂ
ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್‍ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್‌ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................
ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................

- Login or register to post comments
- 861 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ಚಿಕ್ಕದಾಗಿದ್ದರೂ ಮನಸ್ಸಿಗೆ ತಟ್ಟುವಂತಿದೆ..
ಒಮ್ಮೆಗೇ ನಿರಂಜನರ (ಅವರದ್ದೇ ಇರಬೇಕು, ಯಾರಾದರೂ ಗೊತ್ತಿದ್ದರೆ ತಿಳಿಸಿ) ’ಕೊನೆಯ ಗಿರಾಕಿ’ ಅನ್ನುವ ಸಣ್ಣ ಕಥೆ, ಮತ್ತೆ ಅಶ್ವತ್ಥರ ಇನ್ನೊಂದು ಕಥೆ ( ಹೆಸರಂತೂ ಮರೆತಿದ್ದೇನೆ) ನೆನಪಾದವು.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ತುಂಬಾ ಧನ್ಯವಾದಗಳು
ಇಂತಹ ಘಟನೆಗಳು ದಿನನಿತ್ಯದ ಬದುಕಿನಲ್ಲಿ ನಡೆದರೂ ಯಾರಿಗೂ ತಿಳಿಯುವುದಿಲ್ಲ
http://thereda-mana.blogspot.com/
ರೂಪ
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
"ಜವರಾಯ ಬಂದರೆ ಬರಿಗೈಲಿ ಬರಲಿಲ್ಲ
ಕುಡುಗೋಲು ಕೋಲಲೊಂದ್ಹೆಗಲೇರಿ ಕೋಲೆನ್ನ ಕೋಲೆ" ಎಂಬ ಜನಪದ ಕಾವ್ಯ ನೆನಪಿಗೆ ಬಂತು
"ಏರಿದವನು ಚಿಕ್ಕವನಿರಬೇಕು"
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ಆಕಸ್ಮತ್ತಾಗಿ ನಿಮ್ಮ ಬ್ಲಾಗ್ ಓದಿದೆ. ನಿಮ್ಮ ಬರವಣಿಗೆ ಚೆನ್ನಾಗಿದೆ. ನಿಮ್ಮ ಪ್ರಯತ್ನ ಕೂಡ ಮೆಚ್ಚುವಂಥದ್ದೆ. ಅಪರೂಪಕ್ಕೊಮ್ಮೆ ಸ್ವಲ್ಪ ಭಿನ್ನವಾದ ಹೆಣ್ಣಿನ ಬಗ್ಗೆ ಓದಿದ ಖುಷಿಯಾಯಿತು. ಗಂಡಸರ ಬಗೆಗಿನ ನಿಮ್ಮ ಅಭಿಪ್ರಾಯ ತಕ್ಕ ಮಟ್ಟಿಗೆ ಸರಿ. ಆದರೆ, ಎಲ್ಲಾ ಗಂಡಸರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡಿ. ನಿಮ್ಮೆಲ್ಲಾ ಪ್ರಯತ್ನಗಳಿಗೆ ಶುಭ ಕೋರುವೆ.
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ಶಶಿಯವರೇ
ನನಗೇನೂ ಗಂಡಸರ ಬಗೆಗೆ ಕೆಟ್ಟ ಅಭಿಪ್ರಾಯ ಇಲ್ಲ
ಒಂದೇ ತಕ್ಕಡಿಯಲ್ಲಿ ಇಡೋ ಮಾತೆಲ್ಲಿ
ಬರವಣಿಗೆ ಚೆನ್ನಾಗಿದೆ ಎಂದಿದ್ದಕ್ಕೆ ಧನ್ಯವಾದಗಳು
http://thereda-mana.blogspot.com/
ರೂಪ
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ಲೇಖನ ಹೃದಯ ಮಿಡಿಸುವಂತಿದೆ. ಆದರೆ ಕಣ್ಣು ಬಿಡುವ ಮೊದಲೇ ಈ ಕ್ರೂರ ಲೋಕವೆಂಬ ಅಂಧಕಾರಕ್ಕೆ ಕಾಲಿರಿಸಿದ ಆ ಅನಾಥ ಮಗುವಿನ ಬಗ್ಗೆ ಆಕೆಗಿಂತಲೂ ಹೆಚ್ಚಿನ ಅನುಕಂಪ ಮೂಡಿ ಬಂದಿತು. ಇಂದಿನ ದಿನಮಾನಗಳಲ್ಲಿ ಇಂತಹ ಪ್ರಸಂಗಗಳನ್ನು ದಿನ ನಿತ್ಯ ಪತ್ರಿಕೆಗಳು ಪ್ರಕಟಮಾಡುತ್ತಿವೆ. ಕಸದ ತೊಟ್ಟಿಯಲ್ಲಿ ಅಥವಾ ಮೋರಿಯಲ್ಲಿ ಚೊಚ್ಚಿಲ ಮಕ್ಕಳು ಸಿಗುತ್ತಿದ್ದು, ಹರಯದ ’ಮದ’ದಲ್ಲಿ ಮೆರೆಯುತ್ತಿರುವ ಹೆಣ್ಣು-ಗಂಡುಗಳ ಅನೈತಿಕ ಸಂಬಂಧದಿಂದಾಗಿ ಉದ್ಭವಿಸಿದ ಇಂತಹ ಬೇಡದ ಮಕ್ಕಳು ಮುಂದಿನ ಸಮಾಜ ಕಂಟಕರಾಗಿ ಬೆಳೆಯುವ ಸಾಧ್ಯತೆಗಳು ಹೆಚ್ಚು. ಇದರ ಬಗ್ಗೆಯೂ ಯೋಚನೆ ಮಾಡಬೇಕಲ್ಲವೇ ರೂಪಾರವರೇ?
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ಇದು ನಿತ್ಯ ನಡೆಯುವ ಗೋಳು ಸಾರ್
ಇದಕ್ಕೆ ಯಾರು ಹೊಣೆ. ?
http://thereda-mana.blogspot.com/
ರೂಪ
ಉ: ಜವರಾಯನಿಗಿಲ್ಲ ಕರುಣೆ ಒಂದಿನಿತೂ
ನಿಜಕ್ಕೂ ಮನ ಕಲಕುವಂತಿದೆ , ತಂದೆ ಮಾಡಿದ ಪಾಪಕ್ಕೆ ಈಗ ಆ ಮಗು ಶಿಕ್ಷೆಗೆ ಗುರಿಯಾಗಿದೆ.