ಸಮಸ್ಯೆಗಳ ಸುಳಿಯಲ್ಲಿ
ಸಮಸ್ಯೆಗಳ ಸುಳಿಯಲ್ಲಿ
ಮಣ್ಣಾಗಿ ಬಿದ್ದಿದ್ದೆ ನಾನಾಗ ಉದ್ದೇಶರಹಿತ ಜಡವಾಗಿ,
ನಿಧಿ ತುಂಬುವಾಸೆ ಚಿಗುರಿತಾಗ, ಮಡಕೆಯಾಕಾರ ನಾತಾಳಿದಾಗ,
ಬದುಕುವಾಸೆ ಉಂಟಾಯ್ತು ನೂರಾರು ಕನಸುಗಳ ಹೊತ್ತು,
ಆದರೇನಿದು ತಲೆಯೆಲ್ಲಾ ಭಾರ ನಿಧಿಯಲ್ಲ ತುಂಬಿರುವುದೆನ್ನಲ್ಲಿ!
ಅಲ್ಲೊಂದು ಇಲ್ಲೊಂದು ಎಂದು ಮೊದಲಾಯ್ತು
ಧುತ್ತೆಂದು ಎದುರಾಯ್ತು ನೂರು ಸಾವಿರ ಲಕ್ಷ,
ಕಣ್ಣಿಟ್ಟಲ್ಲೆಲ್ಲಾ ಕಾಡುತಿವೆ ರಕ್ಕಸಾಕೃತಿಯ ಕಲೆಗಳು
ಉಂಟಾಯ್ತು ಎಲ್ಲೆಲ್ಲೂ ಅನಂತಾನಂತ ಸಮಸ್ಯೆಗಳು
ದಿನದಿಂದ ದಿನಕೆ ಹೆಚ್ಚುತಿರುವಾಗ ನಾಲಿಗೆಯ ಚಾಚಿ ನುಂಗುತಿರುವಾಗ
ದೃತಿಗೆಡುವ ಹೃದಯ ನಲುಗುತಿಹುದಿಲ್ಲಿ
ಹೌದು, ಬದುಕಿಹುದು ಸಮಸ್ಯೆಗಳ ಸುಳಿಯಲ್ಲಿ.

- Login or register to post comments
- 518 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಸಮಸ್ಯೆಗಳ ಸುಳಿಯಲ್ಲಿ
ಶೈಲಾ ಅವರೇ!! ಸಂಪದಲ್ಲಿ ನಿಮ್ಮನ್ನು ಇದೇ ಮೊದಲ ಬಾರಿಗೆ ನೋಡಿದ್ದು, ಸಂಪದಕ್ಕೆ ಸ್ವಾಗತ. ಶಿಕ್ಷಕಿಯಾದ (ಒಮ್ಮೆ ಗುರುಗಳಾದವರು, ಎಂದೆಂದೂ ಗುರುಗಳೇ) ನಿಮಗೆ ಶಿಷ್ಯನ ಉತ್ತರ.
ತಿಳಿದಿರಲು ನಾನಾಗ ಬದುಕು ಸಮಸ್ಯೆಗಳ ಸುಳಿಯೆಂದು,
ತೂರಿಬಂದೊಂತು ಕನಸಿನ ಹೊಳಪು.
ಕೇಳಿಸಿತಾಗ ಗತ್ತಿನ ಕವಿವಾಣಿ,
ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ
ಹಿಗ್ಗದೆಯೇ ಕುಗ್ಗದೆಯೆ ನುಗ್ಗಿ ನಡೆಮುಂದೆ.
ಅರಿವೇ ಗುರುವಾಗಿಸಿ, ಕಣಸ ಅರಸಲಣಿಯಾಯಿಗೆ,
ಹುಡುಕುನೋಟಕೆ ಕಂಡಿತು ಮೋಹಕ ಸಿರಿಯು.
ಹೌದು, ಕನಸ ಕಣಸಾಗಿಸಿ, ಕಣ ಕಣವೂ ದುಡಿಸಿ,
ನನಸಾಗಿಸಿಕೊಳ್ಳುವ ಬದುಕಿದು ಬಂಗಾರವಹುದು.
ಬದುಕೇ ಬಂಗಾರವಾಯಿತು!!!!!
ಉ: ಸಮಸ್ಯೆಗಳ ಸುಳಿಯಲ್ಲಿ
ಸುನಿಲ್ ಜಯಪ್ರಕಾಶ್ರವರೆ,
ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಿಮ್ಮ ಕವನದಂತೆ ನಾನು ನಡೆದುಕೊಳ್ಳುತ್ತೇನೆ. ನಿಮ್ಮ ಕವನ ಅದ್ಭುತವಾಗಿದೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ.
ಉ: ಸಮಸ್ಯೆಗಳ ಸುಳಿಯಲ್ಲಿ
ಶೈಲಾ ಅವರೇ ಸಂಪದಕ್ಕೆ ಸ್ವಾಗತ!!
ಇದು ಏರು ಪೇರಿನ ಜೀವನ,
ಎದುರಿಸಿ ನಡೆಯದಿರ್ದರೆ ಇಲ್ಲಿ,
ಕಷ್ಟವೇ ಹಾಸಿಗೆ, ನೋವೇ ಹೊದಿಕೆ
ಬರಡು ಹಾದಿ, ದೀನ ಬದುಕು
ಇಲ್ಲಿ ಕನಸುಗಳೆಲ್ಲ ಮರೀಚಿಕೆ,
ಬಯಕೆ ಬೇಯುವುದು, ಮನಕೆ ಬೇಗುದಿಯು,
ಬೆಂಕಿಯ ಮಳೆಯು, ಸಿಡಿಲ ಬಡಿತವು,
ಹೆಜ್ಜೆಯೊಂದಂದೂ ಭಾರವಾಗುವುದು,
ಸುಡು ನೆತ್ತರ ಬುಗ್ಗೆಯವುದು
ಹಾಗೆಂದು ಜೀವ ಬಳಲಬಾರದು,
ಗಟ್ಟಿ ಗುಂಡಿಗೆಯೊಂದಿಗೆ ಪುಟಿದೆಳಬೇಕು
ಸವಿಯೋ ಮನಸಿದ್ದರೆ ಇಲ್ಲಿ ತುತ್ತಿಗೊಂದು ಸಿಹಿ ಜೇನು
ತಂಪಿನ ಗೂಡು, ಗೆಲುವೆ ಬಲವು
ಐಸಿರಿಯು ನಮ್ಮಾಳು, ಸುಖವು ಬೆನ್ನಾಳು
ಕನಸು ಕುದುರುವುದು, ಕತ್ತಲೆ ಹೆದರುವುದು,
ಆಯಾಸವಿರದ ಪಯಣ, ಹತ್ತಿರವಾದ ಗುರಿ,
ಇದೆಲ್ಲ ನಮ್ಮದಾಗುವುದು...
ಉ: ಸಮಸ್ಯೆಗಳ ಸುಳಿಯಲ್ಲಿ
ಕವಿಯವರ ಕವನಕ್ಕೆ ಸೇರಿಸಬಹುದು -
ಆದರೆ ಈ ದುರ್ಧರದ ಪ್ರಪಂಚದಲ್ಲಿ ದಾತರಿಹರು
ಈ ದಾತರು ಕೊಡುವರು ಹಣ ಇನ್ಶೂರೆನ್ಸ್ ಸೋಪಾನ
ಹಾಕುವರು ಚಿತ್ರ ಅಖಬಾರಿನಲ್ಲಿ ಇವನಲ್ಲಿದ್ದವನು ಸತ್ತನಂತೆ ಹಿಂದಿನ ದಿನ
ನೋಡಿದ್ದರಂತೆ ನೆರೆಯವರು ಸತ್ತವಂಗೆ ಸಲ್ಲಿಸುವವರು ಅಂತ್ಯ
ಸಂಸ್ಕಾರ ಖ್ಯಾತಿಯನು ಇಲ್ಲಿದೆ ರಕ್ಷಣೆ, ಮನ್ನಣೆ ಖಂಡಿತವಾಗಿಯೂ
ಅದಕೊಂದೇ ಶರತ್ತದು ಕೇವಲ ನನ್ನ ಸಾವು !! ನಾ..... ಸತ್ತರೆ ಹಾಕುವರೆರಡು
ಖಂಡಿತಾ ಕಣ್ಣೀರು ಅವರವರ ಫೀಲ್ ಗುಡ್ ಆಶಯದ / ಶಾಂತಿಯ ಲೆಕ್ಕದಲ್ಲಿ
- ಅರವಿಂದ
ಉ: ಸಮಸ್ಯೆಗಳ ಸುಳಿಯಲ್ಲಿ
ಶೈಲ ಅವರೆ, ನೀವು ಬಹುವಚನದಲ್ಲಿ ಮಾತಾಡಿಸಿದರೆ ನನಗೆ ತುಂಬಾ ಮುಜುಗರವಾಗುವದು.