ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಗರೀಬ್ ರಥ

June 7, 2008 - 5:34pm — muralihr

ಗರೀಬ್ ರಥ

Lallo

ಲಲ್ಲೂ ಪ್ರಸಾದ್ ಯಾದವ್ ಬಗ್ಗೆ ನೂರಾರು ಜನ ಕೆಟ್ಟದಾಗಿ ಮಾತಾಡೋದು ಕೇಳಿದ್ದೇನೆ. ಆದರೆ ಇತ್ತೀಚೆಗೆ ರೈಲಿನಲ್ಲಿ ಅಧಿಕ ಪ್ರಯಾಣ ಮಾಡಿ ಭಾರತೀಯ ರೈಲಿನಲ್ಲಿ ಆಗಿರುವ ಉತ್ತಮ ಮಟ್ಟದ ಬದಲಾವಣೆಗಳನ್ನು ಕ೦ಡು ನ೦ಗೆ ಅವರ ಬಗ್ಗೆ ಗೌರವ ಮೂಡಿದೆ. ಅವರು ತ೦ದ ಎಷ್ಟೋ ಬದಲಾವಣೆಗಲಲ್ಲಿ ಒ೦ದು ಹೊಸ ಐಡಿಯಾ - ಗರೀಬ್ ರಥ .

ಇದು ಪೂರ್ತಿ AC ರೈಲು - ರಿಯಾಯತಿ ದರದಲ್ಲಿ ಪ್ರಾಯಾಣ ಮಾಡಬಹುದು.

ನಾನು ಹೈದರಾಬಾದಿನಿ೦ದಾ ಬೆ೦ಗಳೂರಿಗೆ ಬರುವಾಗ ಮೊದಲು ವೋಲ್ವೋ Volvo ಬಸ್ಸ್
ನಲ್ಲಿ ಬ೦ದೆ. ಟಿಕೇಟ್ ಬುಕ್ ಮಾಡಿಸಿದ್ದು ಒಬ್ಬ ಏಜೆ೦ಟ್ ಮೂಲಕ. ಒ೦ದು ಸಾವಿರ ಕೊಟ್ಟು ಟಿಕೇಟ್ ಪಡೆದಿದ್ದು.ಬಸ್ಸ್ ಬೆ೦ಗಳೂರು ಸೇರುವುದಕ್ಕೆ ಸುಮಾರು ಹದಿನೈದು ಘ೦ಟೆಗಳು ಬೇಕಿತ್ತು. ಅದೂ ಅಲ್ಲದೇ ಟಿಕೆಟ್ ಗಾಗಿ ಮುನ್ನೂರು ರೂ ಜಾಸ್ತಿ ಕೊಟ್ಟಿದ್ದು ಬೇರೆ. ಹೀಗೆ ಬಸ್ಸ್ ಎ೦ದರೆ ಬೇಜಾರಾಗಿ ಏರೋಪ್ಲೇನ್ ನಲ್ಲಿ ಟಿಕೇಟ್ ಬುಕ್ ಮಾಡಿದೆ.

ಸಿಟಿ ಟ್ಯಾಕ್ಸಿ ಮು೦ಜಾನೆ ಬರೋದು ತಡವಾಗಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪ್ರಾಣವೇ ಹಾರುವಷ್ಟು ವೇಗವಾಗಿ ಟ್ಯಾಕ್ಸಿ ಚಲಿಸುತಿತ್ತು. ವಿಮಾನ ನಿಲ್ದಾಣ ಮನೆಯಿ೦ದಾ ದೂರವಿರುವುದರಿ೦ದ ಹಾಗೂ ಅಲ್ಲಿಗೆ ಹೋಗಲು ಮೂರು ನಾಲ್ಕು ಘ೦ಟೆ ಮು೦ಚಿತವಾಗಿ ಸಿದ್ದತೆ ಮಾಡಿ ಕೊಳ್ಳುವ ತಲೆನೋವಿನ ಎದೆ ನೋವಿನ ಪ್ರಸ೦ಗದಿ೦ದ ಮುಕ್ತಿ ಪಡೆಯಲು ರಾತ್ರಯ ರೈಲು ಪಯಣವೇ ಸು:ಖಕರವೆನ್ನಿಸಿತು.
ರೈಲೇ ನ೦ಗೆ ಗತಿ ಎನ್ನಿಸಿ - ರೈಲಿನತ್ತ ಕಣ್ಣ ಹಾಯಿಸಿದೆ. ಟಿಕೇಟ್ ಆನ್ ಲೈನ್ ಬುಕ್ ಮಾಡಿ ಪಯಣ ಪ್ಲಾನ್ ಮಾಡಿದೆ.

ಮೊನ್ನೆ ಈ ಗರಿಬ್ ರಥದಲ್ಲಿ ಬ೦ದೆ. ಬೆಲೆ ಕೇವಲ ಐನೂರು,(500/-) ಆದರೆ ಬಸ್ಸಿಗಿ೦ತಾ ನೂರು ಪಾಲು ವಾಸಿ.ವಿಮಾನಕಿನ್ನಾ ಹತ್ತು ಪಾಲು ವಾಸಿ. ಗರಿಬ್ ರಥ ಬೇರೆ ಬೇರೆ ಊರುಗಳಿ೦ದಾ ಬಿಟ್ಟಿರುವ ಸ೦ಗತಿ ಖುಷಿ ತ೦ದಿತು. ಆದು ಬೆಳಿಗ್ಗೆ ಏಳ್ ಘ೦ಟೆಗೆ ಕರೆಕ್ಟಾಗಿ ಬ೦ತು.ರಾತ್ರಿ ಪೂರ್ತಿ ನಿದ್ದೆ ಮಾಡ್ಕೊ೦ಡು ಬ೦ದೆ. ಈ ತರಹ ರೈಲುಗಳು ನಮ್ಮ ದೇಶಕ್ಕೆ ಇನ್ನು ಹೆಚ್ಚು ಹೆಚ್ಚು ಬೇಕಾಗಿದೆ.

ಸದ್ಯಕ್ಕೆ ಬೆ೦ಗಳೂರು ಹೈದರಾಬಾದಿನಲ್ಲಿ ಮಾತ್ರ ಇರುವ ಈ ರೈಲು ಬೆ೦ಗಳೂರು - ಮ೦ಗಳೂರಿನ ರೂಟ್ ನಲ್ಲಿ ಬಿಟ್ರೇ ಲಾಭವಿದೆ.
ಬೆ೦ಗಳೂರು - ಮು೦ಬಾಯಿ ರೂಟ್ ನಲ್ಲಿ ಬಿಟ್ರೇ ತು೦ಬಾ ಅನುಕೂಲ. ಬೆ೦ಗಳೂರು - ಚೆನೈ ರೂಟ್ ನಲ್ಲಿ ಸಾಕಷ್ಟು ರೈಲುಗಳಿರುವುದರಿ೦ದಾ ಈ ರೂಟ್ ನಲ್ಲಿ ಬೇಕಿಲ್ಲಾ ಅ೦ದ್ಕೋತ್ತೀನಿ. ಆದರೆ ರಾತ್ರಿ ಒ೦ದು ಹನ್ನೊ೦ದು ಘ೦ಟೆಗೆ ಗರೀಬ್ ರಥ ಬಿಟ್ರೇ ಸೂಪರ್ ಹಿಟ್ ಆಗಬಹುದು.

ಮತ್ತೊ೦ದು ವಿಷಯ ನೀವು http://www.irctc.co.in ನಿ೦ದಾ ಟಿಕೇಟ್ ಆನ್ ಲೈನ್ ಬುಕ್ ಮಾಡ ಬಹುದು.
ನೀವು ಇಲ್ಲಿ ಸದ್ಯಕ್ಕೆ ಇರುವ ರೈಲುಗಳ ಪಟ್ಟೀ ಓದ ಬಹುದು -
http://www.indianrailways.gov.in/Tag0708/Pdf/Garib_Rath.pdf

ಹೈದರಾಬಾದಿಗೆ ಪಯಣ ಬೆಳೆಸುವವರು ತಪ್ಪದೇ ಬಡವರ ರಥದಲ್ಲಿ ಪ್ರಯಾಣ ಮಾಡಿ.

  • ಪ್ರವಾಸ ಕಥನ
~.~
  • Login or register to post comments
  • 297 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2008 - 5:50pm — shivannakc

ಉ: ಗರೀಬ್ ರಥ

shivannakc's picture

ಹಾಯ್ (ಕೊಳಲು) ಮುರಳಿ,

ಲಾಲುನಾ ನೀವೇ ಅಲ್ಲಾ, ವಿದೇಶಿ ವಿದ್ಯಾರ್ಥಿಗಳೊ ಬಂದು ಪಾಠ ಕೇಳಿ ಹೊಗಳಿದ್ರು. ಆದರೆ ಆತ ಭಲೇ ಚಾಣಾಕ್ಷ. ಇರೋ ಬರೋ ರೈಲು ಯೋಜನೆಗಳನ್ನೆಲ್ಲಾ ಬಿಹಾರಕ್ಕೆ ವರ್ಗಾಹಿಸಿದ್ದಾನೆ. ಎಲ್ಲೊ ಆಗೊಂದು ಈಗೊಂದು ರೈಲು ಈ ಕಡೆ ಬಿಟ್ತವ್ನೆ. ರೈಲಿನಿಂದ ಬಂದ ಕಾಸ್ ನ್ನೆಲ್ಲಾ ಗುಡ್ಡೆ ಹಾಕಿ, Infrastructure ಗೆ ಒಂದ್ ಬಿಡಿಗಾಸನ್ನು ಕೊಡದೆ ಬರಿ ಲಾಭ ತೋರುಸ್ತಾವ್ನೆ ಅಂಥಾ ಬರೋಬ್ಬರಿ ನೂರಕ್ಕೆ 98 ಮಂದಿ ಮಾತಾಡ್ಕೊತಾವ್ರೆ. ಆದ್ರೂ ಲಾಲುಯಿಂದ ರೈಲು ಬಹಳ ಸುಧಾರಿಸಿದೆ ಅಂದ್ರೆ ತಪ್ಪಾಗಕ್ಕಿಲ್ಲ ಬಿಡು.

ಸುಖಕರ ಪ್ರವಾಸಕ್ಕೆ ರೈಲೇ ಸೂಕ್ತ ಅಂತ ತಿಳಿಸಿದ್ದೀರಿ ಅದ್ರೆ ಏನ್ ಮಾಡೋದು ಲಾಲು ಯಾವಾಗ ಕರ್ನಾಟಕಕ್ಕೆ ಹೆಚ್ಚು ರೈಲು ಬಿಡ್ತಾನೋ ಆ ಮುರಳಿಗೇ ಗೊತ್ತು!!!

ತುಂಬಾ ದಿನ ಆದ್ಮೇಲೆ ಕಾಮೆಂಟ್ಸ್ ಬರೀತಿವ್ನಿ... ಬಯ್ಯಬೇಡ... ಬೇಜಾರು ಮಾಡ್ಕೊಬೇಡ....!

ಶಿವಣ್ಣ.

"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈಗೆಟಕುತಿದೆ ರೈಲು
  • ಕನ್ನಡ ಬಾಷೆಗೆ ಕುತ್ತು!.
  • ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?
  • ಊಹಿಸಿ ಯಾಕೆ ಆಂತ
  • ಸ೦ನ್ಯಾಸ ಎ೦ದರೆ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 283 ಅತಿಥಿಗಳು ಆನ್ಲೈನ್ ಇರುವರು.


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator