ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸಿನಿಮಾ ಯಾವುದಕ್ಕೆ ಸ್ಫೂರ್ತಿ?

June 9, 2008 - 9:49pm — Rajeshwari

ಹಿಂದೆ ಸಿನಿಮಾ ಎಂದರೆ ಮನೊರಂಜನೆ ಅಂತ ಅಂದ್ಕೊಂಡಿದ್ದೆ , ಇತ್ತೀಚೆಗೆ ಮನೊರಂಜನೆಗೆ ಬದ್ಲು ಮಾರಕವಾಗಿದೆ. ಹಿಂದಿನ ಸಿನಿಮಾಗಳಲ್ಲಿ ನೀತಿ, ಸಾತ್ವಿಕ ಪಾತ್ರಗಳು ,ಒಂಥರ ಚೆನ್ನಾಗಿರುತ್ತಿತ್ತು. ಹಿಂದೆ ಒಂದು ಸಿನಿಮ ಬಂತು, ಅದಾದ್ಮೇಲೆ ಕೆಲವು ಹುಡುಗರು ಆಸಿಡ್ಗಳನ್ನು ಹಾಕೋಕೆ ಸ್ಟಾರ್ಟ್ ಮಾಡಿದ್ರು, ತಮ್ಮ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ. ಇದು ಯಾಕೆ ಹೀಗೆ, ಹುಡುಗಿಯರಿಗೆ ಅವರಿಗೇ ಆದ ಒಂದು ಕಲ್ಪನೆ, ಆಸೆ, ಪ್ರತಿಯೊಂದು ಅಭಿಪ್ರಾಯ ಇರುತ್ತದೆ, ಅದಕ್ಕೋಸ್ಕರ ಆಸಿಡ್ ಹಾಕೋದು ಎಷ್ಟರ ಮಟ್ಟಿಗೆ ಸರಿ?
ಒಂದು ಸಿನಿಮದಲ್ಲಿ entrance examಗೆ lecturer ಹೋಗಿ ಬರೆಯೋದು, ಈ ಕಡೆ ಸ್ಟೂಡೆಂಟ್ ಆಟ ಆಡೋದು, ಎಕ್ಸಾಮ್ನಲ್ಲಿ ಮೋಬೈಲ್ ನಲ್ಲಿ ಉತ್ತರಗಳನ್ನು ಕೇಳೋದು ನಂತರ ಅವನಿಗೆ ಪ್ರಥಮ ಸ್ಥಾನ. ಇದೇ ರೀತಿ KPSE ಯಲ್ಲಿ ಒಂದು ಸ್ಟೂಡೆಂಟ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾಳೆ ಇಂತ ಸೀನ್ಸ್ ಇದ್ರೆ ಸೋಮಾರಿ ಸ್ಟೂಡೆಂಟ್ಸ್ಗೆ ಬಿಟ್ಟಿ ಐಡಿಯ ಹೊಳೆಯುತ್ತೆ. ಇದರಿಂದ ಎಶ್ಟೋ ಬುದ್ದಿವಂತ ಸ್ಟೂಡೆಂಟ್ಸ್ಗೆ ನಿರುತ್ಸಾಹ, ಬೇಜಾರು, ಜೊತೆಗೆ ಆಕ್ರೋಶ. ಇಂತ ಫಿಲ್ಮ್ಸ್ ಯಾಕೆ ತೆಗಿತಾರೆ? ನಮ್ಮ ಅಧಿಕಾರಿಗಳ ನಿರ್ಲಕ್ಶ್ಯ , ಬೇಜವಬ್ದಾರಿತನ ಇವೆಲ್ಲಾ ಇಲ್ಲದಿದ್ದರೆ ಮೊಬೈಲನ್ನು ಎಕ್ಸಾಮ್ ಹಾಲ್ ಗೆ ಬಿಡುತ್ತಿರಲ್ಲಿಲ್ಲ. "ಹಣ ಕೊಟ್ಟರೆ ಹೆಣ ಕೂಡ ಬಾಯಿ ಬಿಡುತ್ತೆ" ಅಂತ ಕೇಳಿದ್ದೆ, ಈಗ ಅದರ ಒಳ ಅರ್ಥ ಗೊತ್ತಾಗ್ತಿದೆ , ಹಣಕ್ಕೋಸ್ಕರ ಎಲ್ಲಾ ಕಾನೂನುಗಳನ್ನು ಕೂಡ ಮುರಿದುಹಾಕುತ್ತಾರೆ. ಇಂತ ವ್ಯವಸ್ಥೆ ಯಾವಾಗ ಹೋಗುತ್ತೊ? ಇಂಥದುಕ್ಕೆ ಯಾಕೆ ಎಕ್ಸಾಮ್ ನೆಡೆಸುತ್ತಾರೆ? ಇದೊಂದು ಉದಾಹರಣೆ ಅಷ್ಟೆ .
ಸಾಪ್ಟ್ ವೇರ್ ಇಂಜಿನೀಯರ್ಗಳು ಸ್ಪೀಡ್ ಸಿನಿಮಾದಿಂದ ಸ್ಪೂರ್ತಿ ಪಡೆದು ದರೋಡೆ ನೆಡೆಸಿದ್ದು , ಐಷರಾಮಿ ಜೀವನಕೋಸ್ಕರ. ವಿದ್ಯಾವಂತರೇ ಹೀಗೆ ಮಾಡಿದ್ರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದಂತಿದೆ, ಈ ರೀತಿಯಿಂದ ಬಂದ ಹಣದಿಂದ ಹೇಗೆ ತಾನೆ ಐಷರಾಮಿ ಜೀವನ ನೆಡೆಸುತ್ತಾರೆ?
ಸಿನಿಮಾದಲ್ಲಿರುವ ಒಳ್ಳೆಯ ನೀತಿಗಳನ್ನು, ಜೀವನದ ಮೌಲ್ಯಗಳನ್ನು, ದೇಶಪ್ರೇಮವನ್ನು ಬೆಳಸಿಕೊಳ್ಳೋದು, ಲಂಚದ ವಿರುದ್ದ ಹೋರಾಡೋದು, ಇವೆಲ್ಲವನ್ನು ರೂಢಿಸಿಕೊಂಡ್ರೆ ನಾವು ಒಳ್ಳೆ ಸಮಾಜವನ್ನು ನಿರ್ಮಾಣ ಮಾಡ್ಬಹುದು.

  • ಚುಟುಕು ಬರಹ
~.~
  • Login or register to post comments
  • 905 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2008 - 10:38pm — uniquesupri

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

uniquesupri's picture

ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಲಕ್ಷಾಂತರ ಮಂದಿಯ ನಡುವೆ ಒಬ್ಬನೇ ಒಬ್ಬ ಮಹಾತ್ಮ ಗಾಂಧಿಯಾದದ್ದು. ಇದನ್ನು ಸ್ಪೂರ್ತಿ ಎನ್ನಲಾಗುತ್ತದೆಯೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 11:31pm — Rajeshwari

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

Rajeshwari's picture

ಯಾಕನ್ನಬಾರದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 11:43pm — shylaswamy

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

shylaswamy's picture

Uniquesupri ಅವರೆ,
ಸತ್ಯ ಹರಿಶ್ಚಂದ್ರ ನೋಡಿ ಗಾಂಧಿಯವರು ಮಹಾತ್ಮ ಆಗಿರಬಹುದು. ಆದರೆ ಎಲ್ಲರೂ ಮಹಾತ್ಮರು ಆಗಲು ಸಾಧ್ಯವಿಲ್ಲ ಎಂಬುದು ಸತ್ಯ. ಹಾಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ಬರುವ ಕೆಟ್ಟ ವಿಚಾರಗಳನ್ನು ಬಹಳಬೇಗ ಮನಸ್ಸಿಗೆ ಇಳಿಸಿಕೊಳ್ಳುವ ಅವಶ್ಯಕತೆ ಇದೆಯೇ? ಹಾಗೆ ಕೆಟ್ಟದ್ದಕ್ಕೆ ಸಿನಿಮಾ ಸ್ಪೂರ್ತಿ ಆಗಬಹುದಾದರೆ ಒಳ್ಳೆಯ ವಿಚಾರಗಳಿಗೆ ಏಕೆ ಆಗಬಾರದು ಎಂಬುದೇ ರಾಜೇಶ್ವರಿಯವರ ಅಭಿಪ್ರಾಯ ಇರಬಹುದಲ್ಲವೆ? ರಾಜೇಶ್ವರಿಯವರು ಉದಾಹರಿಸಿ ಕೊಟ್ಟ ಸಿನಿಮಾದೃಶ್ಯಗಳು ಯುವ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತವೆ. ಅವುಗಳನ್ನು ತಡೆಗಟ್ಟ ಬಾರದೇಕೆ? ಇಂದು ಯುವಜನತೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮ ಅಂದರೆ ಸಿನಿಮಾ ಆಗಿರುವಾಗ ಯುವಕರಿಗೆ ಅದು ಮಾರ್ಗದರ್ಶಿಯಾಗಲಿ ಎಂದು ರಾಜೆಶ್ವರಿಯವರ ಆಶಯ ಆಗಿರಬಹುದಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 12:27am — Rajeshwari

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

Rajeshwari's picture

ನಿಮ್ಮ ಪ್ರತಿಕ್ರಿಯೆಗೆ ದನ್ಯವಾಧಗಳು, ನನ್ನ ಆಶಯಯವನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:29am — gururajkodkani

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

gururajkodkani's picture

ಗುಱುಱಾಜ
www.kannadaguru.blogspot.com

ರಾಜೇಶ್ವರಿಯವರ ಉದ್ದೇಶವೇನೋ ಚೆನ್ನಾಗಿದೆ, ದುರ೦ತವೆ೦ದರೇ ಹೆಚ್ಚಿನ ಜನ ಚಿತ್ರದಲ್ಲಿನ ಒಳ್ಳೆಯ ಮೌಲ್ಯಗಳ ಬದಲು ಕೆಟ್ಟ ವಿಚಾರಗಳನ್ನೇ ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ.ನೆಚ್ಚಿನ ಹೀರೊ ಸಿಗರೇಟು ಸೇದುತ್ತಾನೆ೦ಬ ಕಾರಣಕ್ಕೆ ಅಭಿಮಾನಿ ಅವನ ಶೈಲಿಯಲ್ಲಿಯೇ ಸಿಗರೇಟು ಸೇದಿದ೦ತೆ.ಇತ್ತೀಚೆಗೆ ಒ೦ದು ಸಿನಿಮಾ ಬ೦ದಿತ್ತು.ನಾಯಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯ ಪ್ರೇಮಪಾಶಕ್ಕೆ ಸಿಲುಕಿ,ಅವಳನ್ನು ಓಡಿಸಿಕೊ೦ಡು ಹೋಗುವ ಆ ನ೦ತರ ಅವರು ಪಡುವ ಪರಿಪಾಟಲುಗಳ ಬಗ್ಗೆ ಅದರಲ್ಲಿ ತೋರಿಸಲಾಗಿತ್ತು. ನಿಜ ಹೇಳಬೇಕೆ೦ದರೇ ,ಅದನ್ನು ನೋಡಿದವರಿಗೆ ಅಪ್ರಾಪ್ತ ವಯಸ್ಸಿನ ಪ್ರೇಮ ಪ್ರಕರಣಗಳ ಸಮಸ್ಯೆಗಳು,ದುರ೦ತಗಳು ಅರ್ಥವಾಗುತ್ತವೆ.ಆದರೆ ಚಿತ್ರ ನೋಡಿದ ಅನೇಕ ಹುಡುಗ ಹುಡುಗಿಯರು ಸಿನಿಮಾದ ಶೈಲಿಯಲ್ಲಿಯೇ ಮನೆ ಬಿಟ್ಟು ಪರಾರಿಯಾದರು!.ನನಗನ್ನಿಸಿದ ಪ್ರಕಾರ ಚಿತ್ರದ ಮೂಲ ಉದ್ದೇಶದ ದುರ್ಬಲ ನಿರೂಪಣೆ,ಋಣಾತ್ಮಕ ಅ೦ಶಗಳ ವಿಜೃ೦ಭಣೆ ಇವೆಲ್ಲದಕ್ಕೂ ಕಾರಣವಿರಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:37am — roopablrao

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

roopablrao's picture

ಆ ಚಿತ್ರದ ಹಾಡು ನೋಡಿದ ನಮ್ಮ ಮನೆಗೆ ಕೆಲಸಕ್ಕೆ ಬರುವ ಲಕ್ಶ್ಮಿಯ ೧೪ ವರ್ಷದ ಮಗಳು ಈಗಾಗಲೆ ಯಾರಿಗೋ ಲೈನ್ ಹೊಡೆಯಲು ಸ್ಕೆಚ್ ಹಾಕುತ್ತಿದ್ದಾಳೆ Smiling
ಉಲ್ಲಾಸದ ಹೂ ಮಳೆ ಹೇಳಿಕೊಂಡು ಕುಣಿಯೋದೇ ಕೆಲಸ
ಯಾಕೆ ಪುಷ್ಪ ಹೇಗೆ ಹಾಡ್ಕೊಂಡು ಕುಣೀತಿಯಾ ಅಂದರೆ ಥೇಟ್ ಅಮೂಲ್ಯ ಥರಾನೆ ನಾಚಿಕೊಳ್ತಾಳೆ.
ಆ ಹುಡುಗೀಗೂ ನನ್ನಷ್ಟೆ ವಯಸಾ ಮೇಡಂ ಅಂತ ನೂರ್ ಸಲ ಕೇಳಿದಾಳೆ. ಹೌದು ಅಂದ ತಕ್ಷಣ ಅವಳ ಕಣ್ಣಲ್ಲಿ ಮಿಂಚು Smiling

ಒಟ್ಟಿನಲ್ಲಿ ಸಿನಿಮಾ ಪ್ರೀತಿ ಹರಡಲು ಸ್ಪೂರ್ತಿಯಾಗಿದೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:15pm — manjunath s reddy

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

manjunath s reddy's picture

ಸಿನಿಮಾ ಯಾವುದಕ್ಕೆ ಸ್ಪೂರ್ತಿ ...

ಎನ್ನುವುದಕ್ಕಿಂತ.. ಸ್ಪೂರ್ತಿಯ ಉದ್ದೆಶದಿಂದ ಚರ್ಚೆಯ ಅವಶ್ಯಕತೆ ಇಲ್ಲವೆನ್ನಬಹುದೇನೊ..

ಕಾರಣ..

ಸಿನಿಮಾ ಎನ್ನುವುದು ಲಲಿತಕಲೆಗಳ ಸಮೂಹ ಮಾದ್ಯಮವಾಗಿರುವುದರಿಂದ ಅದು ಅಬಿವ್ಯಕ್ತಿಯ ಪರಿದಿಯಲ್ಲೇ ನಿಲ್ಲುತ್ತದೆಯೇ ಹೊರತು ಸ್ಪೂರ್ತಿಯಾಗಿಯಲ್ಲ...
ದ್ರುಶ್ಯದ ಪ್ರಬಾವದಿಂದ ಪ್ರಬಾವಿತನಾಗಿ ಅನುಕರಿಸುವುದು ಮಾನವನ ಹುಟ್ಟಿನಿಂದ ಬಂದ ಸಹಜ ಗುಣ...ಸಿನಿಮಾ ಎಂದೂ ಸ್ಪೂರ್ತಿಯ ಉದ್ದೇಶದಿಂದ ನಿರ್ಮಾಣವಾಗುವುದಿಲ್ಲ... ಕೆಲವೊಂದು ಸಿನಿಮಾಗಳು ಆ ಉದ್ದೇಶದಿಂದ ನಿರ್ಮಾಣವಾದರು ಅದನ್ನು ಎಷ್ಟು ಜನ ಸ್ವೀಕರಿಸುತ್ತಾರೆ ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ.

ಉದಾ; ಗಾಂದಿ ಕುರಿತಾದ ಸಿನಿಮಾ ಒಂದು ದಿನವೂ ಚಿತ್ರ ಮಂದಿರದಲ್ಲಿ ಓಡುವುದಿಲ್ಲ... 'ಓಡು'ತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 7:46pm — yuvapremi

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

yuvapremi's picture

ಇಂತಹ ಒಂದು ಚರ್ಚೆ ನಮ್ಮಲ್ಲಿ ಬಹಳ ತಡವಾಗಿ ಆಗಿದ್ದರು, ಆಗಿದ್ದನ್ನು ಕಂಡು ನನ್ನ ಮನಸಿಗೆ ಒಂದು ರೀತಿಯ ಸಂತೋಷವಾಗಿದೆ.

ನಾವು ಮನುಷ್ಯರು, ಸಿಕ್ಕಿದೆಲ್ಲವನ್ನು ಅಣಕ ಮಾಡಿ, ಅನುಕರಣೆ ಮಾಡುತ್ತೇವೆ. ಆದರೆ ಮಾನವನು ಎಂದೊ ಒಳ್ಳೆಯದನ್ನು ಅನುಕರಣೆ ಮಾಡಲು ಇಚ್ಚಿಸುವುದಿಲ್ಲ.
ಇದೆಲ್ಲದಕ್ಕು ಕಾರಣ ಒಬ್ಬ ವ್ಯಕ್ತಿ ತಾನು ಅತಿ ಬೇಗ ಗುರುತಿಸಲ್ಪಡಬೇಕು ಎಂಬುದು.

ಉದಾ : ಒಂದು ಮಹಿಳೆಯರ ಕಾಲೇಜಿನ ಬಳಿ ನಾಲ್ಕು ಹುಡುಗರು ಹೋಗುತಿದ್ದರೆ ಅದರಲ್ಲಿ ಯಾರಾದರು ಒಬ್ಬ ಅಲ್ಲಿ ಕಾಣುವ ಯಾವುದೊ ಪರಿಚಯವಿಲ್ಲದ ಹುಡುಗಿಗೆ ಕೈ ಎತ್ತಿ "ಹಾಯ್" ಎಂದರೆ ಆ ಗುಂಪಿನಲ್ಲಿ ಅವನೆ ರಾಜ.

ಇಂತಹ ಒಂದು ಸಣ್ಣ ವರ್ತನೆಯಿಂದ ಆ ಹುಡುಗ ಪರೋಕ್ಷವಾಗಿ ಪ್ರೇರೇಪಿಸಲ್ಪಟ್ಟು ಮತ್ತಿತ್ತರ ಕಾರ್ಯಗಳನ್ನು ಮಾಡಲು ಮುಂದಾಗುತ್ತಾನೆ.

ಅದಲ್ಲದೆ ನೀವು ಪ್ರಶ್ನಿಸಲ್ಪಡುವ ಸಿನಿಮಾಗಳು ಎಂತಹ ಬೇಜವಾಬ್ದಾರಿ ಕೆಲಸಗಳನ್ನು ನಮ್ಮ ಕೈಗಳಲ್ಲಿ ಮಾಡಿಸುತ್ತದೆ ಎಂದರೆ, ರಾಮಾಯಣ ಮಹಾಭಾರತದಂತಹ ಕಾರ್ಯಕ್ರಮಗಳನ್ನು ಬಿಟ್ಟು ಕ್ರೈಮ್ ಸ್ಟೋರಿ,ಕಳ್ಳ ಕಾಕರ ಕತೆಗಳಿಗೆ ಹೆಚ್ಚಿನ ಉತ್ಸಾಹ ಮೊಡಿಸುವಂತೆ ಮಾಡುತ್ತದೆ.

ನಮ್ಮ ಸಿನಿಮಾಗಳ ಮೊಲಗಳು ಎಲ್ಲಿವೆ ಎಂದರೆ ಬರೆ ದುಡ್ಡು ಮಾಡುವುದು,ಚಿತ್ರವನ್ನು ವಿಚಿತ್ರವಾಗಿ ತೆಗೆದರೆ ಅತಿ ಹೆಚ್ಚಿನ ಲಾಭ ಮಾಡಬಹುದೆಂದು, ರೋಲ್ ಕಾಲ್,ಕೊಲೆ,ದ್ವೇಷ,ರೋಷಗಳೆ ತುಂಬಿರುವ ದ್ರುಶ್ಯಗಳನ್ನು ರೀಲಿನಲ್ಲಿ ತುಂಬಿ ಲಾಭಿ ಮಾಡುತ್ತಿದ್ದಾರೆ.
ಅದಲ್ಲದೆ ಇನ್ನೊಂದು ವಿಷಯವನ್ನು ಗಮನಿಸಿದರೆ, ಈ ಚಿತ್ರಗಳನ್ನು ತೆಗೆಯುತ್ತಿರುವವರು ಎಂತವರು ?
ರಾತ್ರೊ ರಾತ್ರಿ ದುಡ್ಡು ಬಂದು, ಅರ್ಧ ರಾತ್ರಿಯಲ್ಲಿ ಚೆತ್ರಿ ಹಿಡಿದು ಹಣ ಎಣಿಸುವ ಉಪಾಯ ಶೃಷ್ಟಿಸುವ ರಿಯಲ್ ಎಷ್ಟೇಟ್ ಮಾಲಿಕರು,ದಳ್ಳಾಳಿಗಳು,ಲೇವಾದೇವಿಗಾರರು.

ಇಂತಹ ದುಡ್ಡಿನ ದೊಡ್ಡಪ್ಪಂದಿರು ನಮ್ಮಲ್ಲಿ ದಡ್ಡತನವನ್ನು ತುಂಬುತ್ತಿದ್ದರು ಸರ್ಕಾರವಾಗಲಿ ಮತ್ತಿತರ ಸಂಘ ಸಂಸ್ತೆಗಳಾಗಲಿ ಉಸುರೆತ್ತದೆ ಕೊತಿದೆ ಏಕೆ ?

ಸಿನಿಮಾಗಳೆಂದರೆ ಅದು ಬರೆ ತೆರೆಯ ಮೇಲೆ ಕುಣಿದಾಡುವ ಕೋಣಗಳಲ್ಲ, ಸಿನಿಮಾಗಳು ನಮ್ಮ ಸಂಸ್ಕೃತಿ,ಸಭ್ಯತೆ,ಪ್ರೀತಿ,ನಂಬಿಕೆ,ದೇಶ ಪ್ರೇಮ ಇವೆಲ್ಲವನ್ನು ಬೆಳೆಸಿ ಉಳಿಸುವಂತಹ ಒಂದು ಅತ್ಯುತ್ತಮ ಮಾದ್ಯಮ. ಇಂತಹ ಶಕ್ತಿ ದೇವಸ್ತಾನದಲ್ಲಿರುವ ದೇವರಲ್ಲು ಇಲ್ಲ ಬಿಡಿ.

ಕೊನೆಯದಾಗಿ ಸಿನಿಮಾಗಳು ಹೇಗಿರಬೇಕು ಎಂದರೆ, ಯಾರಾದರು ಅನ್ಯ ದೇಶದ ಪ್ರವಾಸಿಗನಿಗೆ ನಮ್ಮ ಒಂದು ಸಿನಿಮಾದ ಸಿ ಡಿ ಕೈಗೆ ಕೊಟ್ಟು ಒಮ್ಮೆ ನೋಡಿ ಎಂದರೆ ಅದನ್ನು ಅವನು ನೋಡಿ ನಾವು ಯಾರು, ನಮ್ಮ ನೆಲದ ಮಹತ್ವ ವೇನು, ನಮ್ಮ ಸಂಸ್ಕ್ರುತಿ ಏನು ಎಂಬುದನ್ನು ಕೆಲ ಗಂಟೆಗಳಲ್ಲೆ ಅರಿತು ನಮ್ಮ ಮುಂದೆ ಕೈಮುಗಿದು ನಮಿಸಬೇಕು. ಅದು ಸಿನಿಮಾಗಳ ಶಕ್ತಿ.

ನಾನು ಇಲ್ಲಿ ಹೇಳಿದೆಲ್ಲ ಹೇಳುವುದಕ್ಕೆ ಸರಿ, ಮಾಡುವುದಕಲ್ಲ ಎನ್ನುವವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆದರು ಅಳುತಿರುವ ಕೊರಗಿಗೆ ಮತ್ತಷ್ಟು ದ್ವನಿಗಳ ಕೈ ಸೇರಿ ಇಲ್ಲಿ ಆಗುತಿರುವ ಅನ್ಯಾಯವನ್ನು ವಿರೋಧಿಸಲು ಮುಂದಾಗುತ್ತಾರೆ ಎಂಬುದೆ ನಮ್ಮ ಆಶಯ.

ಸಮಾಜ ಸಂರಕ್ಷಣ ಹೊಣೆ ಇಲ್ಲದ ಕತೆಗಳೆಲ್ಲವು ಸಮಾಜವನ್ನು ಹಾಳುಮಾಡುವುದಿಲ್ಲ (ಉದಾ: ನಾನೊಬ್ಬ ಕಳ್ಳ, ದಾರಿ ತಪ್ಪಿದ ಮಗ), ಆದರೆ ಸಮಾಜದ ಹೊಣೆ ಎಂದರೆ ಮತ್ತೊಬ್ಬರನ್ನು ಹೇಗೆ ಹಾಳುಮಾಡುವುದು ಎಂದು ತೋರುವುದೆ ಅಮಾನವೀಯ ಕಾರ್ಯ, ಇಂತಹ ಚಿತ್ರಗಳು ಒಂದರ ಮೇಲೊಂದು ತೆರೆ ಕಾಣುತಿರುವುದು ಮಾನವ ಜನ್ಮದ ಅವಮಾನ (ಉದಾ: ನಂದಾ ಲವ್ಸ್ ನಂದಿತ, ಮೆಜಷ್ಟಿಕ್).

ವಂದನೆಗಳು
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 4:25am — Rajeshwari

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

Rajeshwari's picture

ನಿಮ್ಮೆಲ್ಲಾ ಪ್ರತಿಕ್ರಿಯೆಗಳಿಗೆ ದನ್ಯವಾದಗಳು. ಈ ಲೇಖನ ಬರೆಯುವಾಗ ತುಂಬಾ ಹಿಂಜರಿಕೆ ಇತ್ತು ಇದು ನನ್ನ ಜೀವನದಲ್ಲಿ ಮೊಟ್ಟ ಮೊದಲ ಲೇಖನ.

ದನ್ಯವಾದಗಳು
ರಾಜೇಶ್ವರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 4:41pm — yuvapremi

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

yuvapremi's picture

ಇಂತಹ ಒಂದು ವಿಷಯವನ್ನು ನೀವು ನಮ್ಮಲ್ಲಿ ಹಂಚಿಕೊಂಡದ್ದು ನಮಗೆ ಬಹಳ ಸಂತಸದ ತಂದಿದೆ.

ಮುಂದೆಂದು ಹಿಂಜರಿಕೆ ಬೇಡ, ಹೀಗೆ ಬರೆಯುತಿರಿ. Smiling
ಇಲ್ಲಿ ಇರುವವರೆಲ್ಲ ನಿಮ್ಮವರೆ, ನಿಮ್ಮಂತವರೆ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 20, 2008 - 8:34pm — Rajeshwari

ಉ: ಸಿನಿಮಾ ಯಾವುದಕ್ಕೆ ಸ್ಫೂರ್ತಿ?

Rajeshwari's picture

ದನ್ಯವಾದಗಳು
ರಾಜೇಶ್ವರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾ ನೋಡಿದ ಸಿನಿಮಾ - ಆಕ್ಸಿಡೆಂಟ್
  • ಹುಡುಗಿಯರ ಹಾಡುಗಳ ಪಾಡು
  • ನಾವು ಕನ್ನಡಿಗರು ಯಾಕೆ ವಿಲನ್ ಆಗುತ್ತಿವಿ ಪ್ರತಿಬಾರಿ ??
  • ಇದು ಯಾಕೆ ಹಿಂಗೆ?
  • ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
Syndicate content

ಲೇಖಕರು

Rajeshwari's picture

ಪೂರ್ಣ ಹೆಸರು
Rajeshwari

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 125 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator