ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಪುಣೆಯಲ್ಲಿನ CDAC ನಲ್ಲಿ ಸದ್ಯದಲ್ಲೆ ಭಾರತೀಯ ಎಲ್ಲಾ ಭಾಷೆಗಳ ಇನ್‍ಸ್ಕ್ರಿಪ್ಟ್ ಕೀ ಲೇಔಟ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಮಾವೇಶ ನಡೆಯುವ ಸಾಧ್ಯತೆ ಇದೆ(ದಿನಾಂಕವಿನ್ನೂ ನಿಗದಿತಗೊಂಡಿಲ್ಲ). ಇನ್‍ಸ್ಕ್ರಿಪ್ಟ್ ಒಂದೇ ಅಲ್ಲದೆ ಬೇರಾವುದೆ ಕೀ ಲೇಔಟ್(ಇನ್‍ಸ್ಕ್ರಿಪ್ಟ್ ಹಾಗು ಕೆಜಿಪಿ) ಗಳಿಗೆ ಸಂಬಂಧಪಟ್ಟ ಯಾವುದೆ ತೊಂದರೆಗಳಿದ್ದರೂ ಅಲ್ಲಿ ಚರ್ಚಿಸಲಾಗುವುದು. ಆದ್ದರಿಂದ ನಿಮಗೆ ಅಂತಹಾ ಯಾವುದೆ ಸಮಸ್ಯೆ ಕಂಡು ಬಂದಿದ್ದಲ್ಲಿ ಇಲ್ಲಿ ತಿಳಿಸಿ. ನಾನು ಅಲ್ಲಿ ಭಾಗವಹಿಸುವ ಸಂಭಾವ್ಯವಿರುವುದರಿಂದ ಆ ಸಮಸ್ಯೆಗಳನ್ನು ಅಲ್ಲಿ ಚರ್ಚೆಗೆ ಇರಿಸಬಹುದಾಗಿದೆ.
ಅಂದ ಹಾಗೆ ಸದ್ಯದಲ್ಲಿನ ಕೆಜಿಪಿ ಕೀ ಲೇಔಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕೆ ಮೈಸೂರಿನ ಶ್ರೀಧರ್ ಅವರು ಪರಿಹಾರವನ್ನು ಕಂಡು ಹಿಡಿದಿದ್ದು, ಅದು ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ ಅದು ಸಾರ್ವಜನಿಕವಾಗಿ ಎಲ್ಲಾ ಲಿನಕ್ಸ್ ವಿತರಣೆಗಳಲ್ಲಿ ಲಭ್ಯವಾಗಬೇಕೆಂದರೆ ಇನ್ನೂ ಅಪ್‍ಸ್ಟ್ರೀಮ್‍ನಲ್ಲಿ ಸೇರಿಸಲ್ಪಡಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಿಕ್ಕುಳಿದ ಕೀ ಲೇಔಟ್‍ಗೆ ಸಂಬಂಧಿಸಿದ ಏನೆ ಸಮಸ್ಯೆಗಳಿದ್ದರೂ ಇಲ್ಲಿ ತಿಳಿಸಿ ಅಥವ ನನಗೆ ನೇರವಾಗಿ ಮೈಲ್ ಮಾಡಿ.

- Login or register to post comments
- 474 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
Inscript ಲೇ ಔಟ್ ನಲ್ಲಿ 'ಓ' (ಅಥವ 'ಒ' ಅನ್ಸತ್ತೆ) asterisk keyಗೆ ಮ್ಯಾಪ್ ಮಾಡಲಾಗಿದೆ. ಅದನ್ನು ಕೆಳಗೆ ಯಾವುದಾದರೂ convenient ಕೀ ಮ್ಯಾಪಿಂಗಿಗೆ ತರಬೇಕು.
ಹೆಚ್ಚಿನ ಮಾಹಿತಿಯೊಂದಿಗೆ ಆಮೇಲೆ ಬರೆಯುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಇದು ಎಷ್ಟು ಹಿಂದಿ-ಸೆಂಟ್ರಿಕ್ ಅಲ್ವಾ?
ದೇವನಾಗರಿಯಲ್ಲಿಲ್ಲದ ’ಎ’ ’ಒ’ ಗಳು ಇರುವ ದಕ್ಷಿಣದ ಭಾಷೆಗಳಿಗೆ ಮಾತ್ರ ತಾನೆ ಈ ತೊಂದರೆ? ಅದಕ್ಕೆ ಹೀಗಿರ್ಬೋದು
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ನಿಜ. Inscript ದೇವನಾಗರಿಗೇ ಹೇಳಿ ಮಾಡಿಸಿದಂತಿದೆ. ಆದರೆ ಅದೊಂದು ಕೀ ಕೆಳಗಿಳಿಸಿಬಿಟ್ಟರೆ ಕನ್ನಡಕ್ಕೂ ಉತ್ತಮ
Inscript ಬಳಸಿ ಟೈಪಿಸುವ ಸ್ನೇಹಿತರ ಕನ್ನಡ ಟೈಪಿಸುವ ವೇಗವನ್ನು ಗಮನಿಸಿರುವೆ. ಪಟಪಟನೆ ಇಂಗ್ಲೀಷ್ ಟೈಪಿಸಿದಂತೆ ಟೈಪಿಸಿಬಿಡುತ್ತಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಸರ್,
ಬರಹದಲ್ಲಿ ಮೂ ಬರೆಯಲು ಬರುತ್ತಿಲ್ಲ ಮಾ ಮತ್ತು ಮೂ ಎರಡು ಒಂದೇ ಥರ ಅನಿಸುತ್ತೆ.
ಇದು ಮೋ ಥರ ಬರಬೇಕು.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಇದು ಬರಹದ ಸಮಸ್ಯೆಯಲ್ಲ. ಮೈಕ್ರೋಸಾಫ್ಟ್ ಕಂಪೆನಿಯವರ ತುಂಗ ಫಾಂಟಿನ ಸಮಸ್ಯೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಚಿಟುಕಿಸಿ.
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಗಿರೀಶ್, ಇದು ಕೀ ಮ್ಯಾಪಿನ ತೊಂದರೆಯಲ್ಲ, ನಿಮ್ಮಲ್ಲಿರುವ ಫಾಂಟಿನ (ತುಂಗ ಫಾಂಟಿನ) ತೊಂದರೆ.
ಸರಿಪಡಿಸಿಕೊಳ್ಳಲು ಹೊಸ ತುಂಗ ಫಾಂಟು ಅಥವ ಕೇದಗೆ ಹಾಕಿಕೊಳ್ಳಿ. (ಈ ಬಗ್ಗೆ ಸಂಪದದಲ್ಲಿ ಸುಮಾರು ಚರ್ಚೆಯಾಗಿ ಹೋಗಿದೆ! ನೀವು ಓದಿರಲಿಕ್ಕಿಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
nanage ubantu nalli hRudaya anta type madaLu Aguttilla. dayaviTTu sahAya mADi
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಮೊದಲು ಕನ್ನಡದಲ್ಲಿ ಬರೀರಿ
ಉಬುಂಟುನಲ್ಲಿ kn-itrans ಆಯ್ಕೆ ಬಳಸುತ್ತಿದ್ದರೆ 'ಋ' ಟೈಪಿಸಲು 'R^i' ಬಳಸಬೇಕು.
ಆದರೆ ನಿಮಗಿಷ್ಟವಾದುದಕ್ಕೆ ಇದರಲ್ಲಿ ಬದಲಾಯಿಸಿಕೊಳ್ಳುವುದು ಸುಲಭ. /usr/share/m17n/kn-itrans.mim ಫೈಲು ತೆಗೆದು ನೋಡಿ. ಅದು self explanatory.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಇನ್ಸಕ್ರಿಪ್ಟ್ ಬಳಸುತ್ತಿರುವಿರಾದರೆ, ಹೀಗೆ ಮಾಡಿ. u=o/ (ನಾಲ್ಕೇ ನಾಲ್ಕು ಕೀ ಸ್ಟ್ರೋಕು). ಒಟ್ನಲ್ಲಿ ಋ ಬರಿಸೋಕ್ಕೆ = ಒತ್ತಬೇಕು.
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಹರಿ ಮತ್ತು ಹಂಸಾನಂದಿ ಹೇಳುತ್ತಿರುವುದರಲ್ಲಿ ನಿಜವಿದೆ. ಹರಿ ಹೇಳಿದ್ದರಲ್ಲಿ ತುಸು ವ್ಯತ್ಯಾಸವಿದ್ದರೂ, ಇನ್ಸಕ್ರಿಪ್ಟಿನಲ್ಲಿ "ಒ" ಒತ್ತಕ್ಕೆ ತ್ರಾಸವಿರುವುದಂತೂ ದಿಟ. ಇನ್ಸಕ್ರಿಪ್ಟಿನಲ್ಲಿ ಒ ಒತ್ತಕ್ಕೆ ` ಒತ್ತಬೇಕು. ಇದಕ್ಕೆ ಟಿಲ್ಡೆ ಕಾರೆಕ್ಟರ್ ಅಂತಾರೆ. Left Tab ಮೇಲಿರುತ್ತದೆ.
ಶಂಕರಪ್ರಸಾದರಲ್ಲಿ ನಾನು ನೀಡಬೇಕಂತಿರುವ ಸಲಹೆ
ಟಿಪ್ಪಣಿ
೧. ಕನ್ನಡದ ಮಟ್ಟಿಗೆ (ಬಹುಶಃ ಬೇರೆ ತೆನ್ನುಡಿಗಳಿಗೂ ಅನ್ವಯಿಸಬಹುದು) ಹೇಳುವುದಾದರೆ Shift X ಖಾಲಿಯಿದೆ. ಆದರೆ ದೇವನಾಗರಿಯಲ್ಲಿ Shift X ಅನ್ನು ँ (ಉದಾ कँ ) ಗೆ ಮ್ಯಾಪ ಮಾಡಲಾಗಿದೆ. ಇದನ್ನು ಬದಲಿಸಬೇಕು.
೨. X ಅನ್ನು ಂ (ಉದಾ: ಅಂ) ಗೆ ಮ್ಯಾಪ್ ಮಾಡಲಾಗಿದೆ.
ಈಗ ಸಲಹೆ ಇಂತಿದೆ
1. X ಅನ್ನು "ಒ" ಗೆ ಮ್ಯಾಪ್ ಮಾಡಬೇಕು. ಏಕೆಂದರೆ ಅದರ ಪಕ್ಕದ Z "ಎ" ಗೆ ಮ್ಯಾಪಾಗಿದೆ.
2. Shift X ಅನ್ನು "ಅಂ" ಗೆ ಮ್ಯಾಪ್ ಮಾಡಬೇಕು.
3. ದೇವನಾಗರಿಯ कँ ಅನ್ನು ` - tilde characterಇಗೆ ಮ್ಯಾಪ್ ಮಾಡಲಿ.
ಈ ಮೂರು ಸಾಧ್ಯವಿಲ್ಲದಿದ್ದರೆ ಮತ್ತೊಂದು ವಿಧಾನ.
1. Shift X ಅನ್ನು "ಒ" ಗೆ ಮ್ಯಾಪ್ ಮಾಡಬೇಕು.
2. ಆಗ ಖಾಲಿಯಾಗುವ ` - tilde character ಅನ್ನು कँ ಗೆ ಮ್ಯಾಪ್ ಮಾಡಬೇಕು.
ಉ: ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ
ಸುನಿಲ್,
ನಿನ್ನ ಸಲಹೆಯನ್ನು ನೋಟ್ ಮಾಡಿಕೊಂಡಿದ್ದೇನೆ. ಆದರೆ ನಾವು ಕನ್ನಡಕ್ಕೆ ಅನುಕೂಲವಾಗುವ ರೀತಿಯ ಬದಲಾವಣೆಗಾಗಿ ಕೇಳಬಹುದೆ ಹೊರತು ದೇವನಾಗರಿಯ ಮ್ಯಾಪಿಂಗ್ ಅನ್ನು ಬದಲಾಯಿಸುವಂತೆ ಕೇಳುವುದು ಬಹುಷಃ ಸಾಧ್ಯವಿಲ್ಲ..