ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

June 14, 2008 - 3:10pm — vinnu264

ಸಂಸ್ಕೃತಿ ಎಂದ ಕೂಡಲೇ ಎಲ್ಲ ಕನ್ನಡಿಗರು ಹೆಮ್ಮೆಯಿಂದ ಬೀಗತ್ತಿದ್ದ ಕಾಲವೊಂದಿತ್ತು.. ಆ ಅಭಿಮಾನ ಈಗೇಕೋ ನಶಿಸುತಿದೆ ಎಂದು ಅನ್ನಿಸುವುದಿಲ್ಲವೇ?? ನಮ್ಮ ಸಂಸ್ಕೃತಿಯಲ್ಲೇನೂ ಕೊರತೆಯುಂಟಾಗಿಲ್ಲ ಆದ್ರೆ ಅದನ್ನ ಅನುಸರಿಸುವವರ, ಅನುಭವಿಸುವವರ ಕೊರತೆ ಎದ್ದು ಕಾಣುತಿದೆ. ನಾವು ಒಳ್ಲೆಯದೆಲ್ಲವನ್ನು ಒಪ್ಪಿಕೊಳ್ಳಬೇಕು ನಿಜ ಹಾಗಂತ ನಮ್ಮ ತನವನ್ನು ತೊರೆಯಬೇಕೆಂದೇನು ಇಲ್ಲವಲ್ಲ..
ನಮ್ಮ ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಇಂದಿನ ವಿಷಯವೇನಲ್ಲ, ಇದಕ್ಕೇನು ಕಾರಣ? ಪರಿಹಾರವೇನು??
ಹಿಂದನಂತೆ ರಾಮಾಯಣ, ಮಹಾಭಾರತದ ಕಥೆ ಹೇಳುವ ಅಜ್ಜ-ಅಜ್ಜಿಯಂದಿರಿಲ್ಲ, ಇದ್ದರೂ ಅದನ್ನು ಕೇಳುವ ತಾಳ್ಮೆ ಮಕ್ಕಳಿಗಿಲ್ಲ. ಮಕ್ಕಳಿಗಿದ್ದರೂ ಅವರ ತಂದೆ-ತಾಯಿ ಬಿಡಬೇಕಲ್ಲ. ಇದು ಸ್ಪರ್ಧಾತ್ಮಕ ಜಗತ್ತು ಎಂಬ ಹಣೆಪಟ್ಟಿ ನೀಡಿ ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದೇವೆ. ಮಕ್ಕಳಲ್ಲಿ ಅವರ ಭವಿಷ್ಯದ ಬಗೆಗಿನ ಕನಸುಗಳನ್ನು ನಾವು ರೂಪಿಸುವ ಯತ್ನವನ್ನು ಮಾಡುತ್ತಿದ್ದೇವೆಯೋ ಹೊರತು ನಮ್ಮ ಸಂಸ್ಕೃತಿಯ ಹಿನ್ನೆಲೆಯೇನು? ಅದರಲ್ಲಿರುವ ಸ್ವಾರಸ್ಯ ಎಂತದ್ದು? ಎಂಬುದನ್ನು ಹೇಳುವುದನ್ನೆ ಮರೆಯುತ್ತಿದ್ದೇವೆ.

ತುಂಡು ಬಟ್ಟೆಯ ತೊಟ್ಟು ತಿರುಗುವವರು ಒಂದೆಡೆಯಾದರೆ, ಮದ್ಯವ್ಯಸನಗಳ ದಾಸರಾಗಿ ಅದು ತಮ್ಮ ಪ್ರತಿಷ್ಟೆ ತೋರುತ್ತದೆ ಎಂದು ತೂರಾಡುವವರು ಮತ್ತೊಂದು ಕಡೆ. ಇಂಥಹ ವಾತಾವರಣದಲ್ಲಿ ಬೆಳೆವ ಮಕ್ಕಳ ಗತಿ???
ಹಣದ ಹಿಂದೆ ಬಿದ್ದಿರುವ ಜನ, ಮಾನವೀಯತೆಯನ್ನು ಮರೆತಿದೆ, ಸ್ವಂತ ಮಕ್ಕಳು, ತಂದೆ-ತಾಯಿಯರನ್ನೂ ನೋಡಿ ಕೊಳ್ಳಲಾಗದಷ್ಟು ವೇಗದಲ್ಲಿ ಅವರು ಓಡುತ್ತಿದ್ದಾರೆ.
"ಹಣವೇ ಎಲ್ಲ ಮಾನ, ಮಾನವತತ್ವಕ್ಕೆ ಇಲ್ಲಿ ಬೆಲೆಯೇ ಇಲ್ಲ."

ಹೀಗೆ ಸಾಗಿದರೆ ನಾವು ಮುಟ್ಟುವ ದಡವಾದರು ಯಾವುದು?? ಈ ದಾರಿಯಲಿಲ್ಲ ಅಜ್ಜ-ಅಜ್ಜಿಯರ ಆ ನೀತಿ ಕಥೆಗಳು, ಕೇಳುವುದಿಲ್ಲ ಶರಣರು ದಾಸರು ಹೇಳಿದ ಜೀವನದ ಅರ್ಥಗಳು, ಕಾಣುವುದಿಲ್ಲ ಮಾನವ ಬದುಕಿನ ಸಾರ್ಥಕತೆಯ ತತ್ವಗಳು ತೋರುವ ದಾರಿಗಳು. ಇವೆಲ್ಲಾ ಅಂಗವೈಕಲ್ಯತೆಗಳ ರಹಿತ ನಾವು ಸಾಗುತಿರುವುದಾದರೂ ಎಲ್ಲಿಗೆ, ಎಲ್ಲಿಗೆ, ಎಲ್ಲಿಗೆ? ನಮ್ಮ ಬಾಳ ಪಯಣ ಎಲ್ಲಿಗೆ??

~.~
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 17, 2008 - 12:47am — hpn

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

hpn's picture

ಒಂದು ಪ್ರಶ್ನಾರ್ಥಕ ಚಿಹ್ನೆ ಸಾಕಲ್ಲವೆ? ಮೂರು ಮೂರು ಯಾಕೆ?

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 8:18am — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಇದೊಂದು ಉತ್ತರವಿಲ್ಲದ ಪ್ರಶ್ನೆ, ಉತ್ತರ ಕೊಟ್ಟರು ಅದು ಅಪೂರ್ಣವಾಗಿರುತ್ತದೆ. ಅದಕ್ಕೆ ಮೂರು ಪ್ರಶ್ನಾರ್ಥಕ ಚಿಹ್ನೆ, ಮೂರಕ್ಕೆ ಮುಕ್ತಾಯ ಅನ್ನೋ ಮಾತು ಕೇಳಿಲ್ಲವೇ? ಇದೆಯ ಇದಕ್ಕೆ ನಿಮ್ಮಲ್ಲಿ ಉತ್ತರ?

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 11:42am — ಶ್ರೀನಿವಾಸ ವೀ. ಬ೦ಗೋಡಿ

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

ಶ್ರೀನಿವಾಸ ವೀ. ಬ೦ಗೋಡಿ's picture

vinnu264 wrote:
ಪರಿಹಾರವೇನು??

ಹಾಗಿದ್ದರೆ ೨ ಪ್ರಶ್ನಾರ್ಥಕ ಚಿಹ್ನೆಯ ಅರ್ಥವೇನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 12:06pm — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ಅವರವರ ಬಯಕೆ ಅವರವರ ಹರಕೆ
ಎನಗೆ ಯಾಕೆ ಅದರ ತುರಿತುರಿ ತುರಿಕೆ?

ತುಂಡು ಬಟ್ಟೆಯಾದರೇನು
ಕಣ್ಣು ಮುಚ್ಚಿಕೊ ನೀನು

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 11:34pm — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಪೋಲಿಸರು ಯಾಕೆಬೇಕು, ಕೋಲೆ ಸುಲಿಗೆ ಅತ್ಯಾಚಾರ ಮಾಡೋದನ್ನ ನೋಡೋಕಾಗ್ದಿದ್ರೆ ಕಣ್ಣು ಮುಚ್ಚಿಕೊಂಡು ಕೂತ್ರಾಯ್ತಲ್ವಾ ನಾವೂ?? ಅದಕ್ಕೆನಾ ನಾವು ಮನುಷ್ಯರು ಅಂತ ಸೃಷ್ಟಿಯಾಗಿರೋದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಇನ್ನೂ ಪ್ರತಿಕ್ರಿಯೆ ಬೇಡ...

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2008 - 10:20am — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ನಾವ್ ಮನುಶ್ಯರು ಅಂತ ಸ್ರುಶ್ಟಿಯಾಗಿಲ್ಲ

ನಂಮಂನು ಮನುಶ್ಯ ಅಂತ ನಾವೇ ಕರೆದುಕೊಂಡಿದ್ದೀವಿ...

ಸಂಸ್ಕ್ರುತಿ ಅನ್ನೋದರ ಡೆಪೆನಿಶನ್ನು ಹಾಕಲು ಯಾರಿಗೂ ಹಕ್ಕಿಲ್ಲ.. ಒಬ್ಬೊಬ್ಬನಿಗೂ ಒಂದೊಂದು ಸಂಸ್ಕ್ರುತಿ ಇರ್‍ತದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 9:18am — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಸಂಸ್ಕೃತಿ ಎಂದರೆ ನಮ್ಮ ದಿನಚರಿ, ನಾವು ನಡೆದುಕೊಳ್ಳುವ ರೀತಿ. ನಾವು ಸಾರ್ವಜನಿಕವಾಗಿ ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸೋ ಹಕ್ಕು ಎಲ್ಲರಿಗೂ ಇರುತ್ತದೆ. ನಾನು ನಮ್ಮ ನಡವಳಿಕೆಯಲ್ಲಿನ ಬದಲಾವಣೆಗಳು ಉತ್ತಮವಾಗಿರಬೇಕೆಂದು ನಂಬಿದವನು. ಧೂಮಪಾನ ಒಳಿತಲ್ಲವೆಂದು ಗೊತ್ತು ನೀವು ಬೇಕಿದ್ರೆ ಸೇದಿ ಅದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಬೇಡ. ಅದು ಬೆರೆಯವರ ಮೇಲೆ ದುಷ್ಪರಿಣಾಮ ಬೀರುತ್ತೆ. ಇದೊಂದೆ ಅಲ್ಲ ಇಂಥ ಹಲವು ವಿಷಯಗಳಿವೆ. ಅವುಗಳನ್ನ ಅರಿತು ಬದಲಾಗೋಕಾಗದಿದ್ರೆ ನಮ್ಮನ್ನ ನಾವು ಮನುಷ್ಯರು ಅಂಥ ಅದ್ಕೋಳ್ಳೋದಾದ್ರು ಯಾಕೆ? ಅದಕ್ಕು ಎನದ್ರು ಯೋಗ್ಯತೆ ಇರ್ಬೇಕಲ್ವಾ?

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 12:07pm — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ಯೋಗ್ಯತೆ/ತಕ್ಕುಮೆಯ ತೀರ್ಮಾನದ ಅಂಕೆ ಒಬ್ಬರ ಬಳಿ ಕೊಟ್ಟವರು ಯಾರು?

ಒಬ್ಬ ದಿನಾ ಜೀನ್ಸ್ ಅಲ್ಲೇ ಆಪೀಸಿಗೆ ಬರೋದು.. ಶೂ ಹಾಕಲ್ಲ.. ಅದಕ್ಕೆ ಒಬ್ಬ ಬಂದು ಹಿಂಗಾ ಆಪೀಸಿಗೆ ಬರೋದು ಅಂದ. ಅದಕ್ಕೆ ನೀನು ನನ್ನ ಮಾನ್ಯೇಜರಾ? ಎಚ್ಚಾರ? ನೀನ್ ಯಾರು ಕೇಳಕ್ಕೆ’ ಅಂತ ಗದರಿ ಕೇಳಿದ.. ಕೇಳಿದವರು ಸುಮ್ನೆ ಹೋದನೇನೋ ಸರತಿ, ತನಗೆ ಅವಮಾನ ಆಯಿತು ಅಂತ ವಡವಡ ಅಂದ.
ಅವರ ಮಾನ್ಯೇಜರು ಮತ್ತು ಅವರು ಇಬ್ಬರೂ ಒಡಂಬಡಿಕೆ ಮಾಡಿಕೊಂಡವರಂತೆ ಆಪೀಸಿಗೆ ಟಿ-ಶರ್ಟು ಜೀನ್ಸ್ ಅಲ್ಲೇ ಬರ್ತಾರೆ. ನೋಡಿ ಅಲ್ಲೇ ಒಂದು ಹೊಸ ಸಂಸ್ಕೃತಿ ಹುಟ್ಟಿಕೊಂಡಿತು. ಬಳಿಕ ಹೆಚ್ಚೆಚ್ಚು ಮಂದಿ ಆಪೀಸಿಗೆ ಜೀನ್ಸಲ್ಲೇ ಬರಕ್ಕೆ ಸುರು ಮಾಡಿದ್ದಾರೆ.. ಏಕೆಂದರೆ ಜೀನ್ಸು ಅವರಿಗೆ ಆರಾಮು.

ಎಲ್ಲರಿಗೆ ಅವರ ಸಂಸ್ಕೃತಿ ಉಡುಗೆ, ಊಟ ಹೇಗಿರಬೇಕು ಅಂತ ತೀರ್ಮಾನಿಸೋ ಹಕ್ಕು ಯೋಗ್ಯತೆ ಹುಟ್ಟುತ್ತಾ ಬಂದಿದೆ.. ಅದಂನು ತೀರ್ಮಾನಿಸಲು, ನೀಡಲು ಯಾವ ದೊಣ್ಣೇನಾಯಕ ಬೇಕಿಲ್ಲ.

ಸಿಗರೇಟು ಪಬ್ಲಿಕಲ್ಲಿ ಸೇದ್ತಾರೆ. ಅದನ್ನು ನಿಲ್ಲಿಸಲು ಆಗಲ್ಲ. ಅವರನ್ನು ಬಯ್ದು ’ಸುಸಂಸ್ಕೃತ’ ಎಂದು ಮನೆಯಲ್ಲಿ ಮರೆದು ತೂಗಬೋದಶ್ಟೇ!! ಸಿಗರೇಟಂನು ಇಶ್ಟಪಡುವ ಮಂದಿಯ ಇಶ್ಟದ ವಿಲ್/will ಪವರ್‍ ಮುಂದೆ ಅದಂನು ವಿರೋದಿಸುವ ಮಂದಿ ವಿಲ್ ಪವರ್‍ ಕಡಮೆ. ಕೆಲವರು ಸುಮ್ನೆ ’ಸುಸಂಸ್ಕೃತ’ ಎಂದು ತೋರಿಕೆಗೋಸುಗ ಸಿಗರೇಟು ಸೇದೋರನ್ನ, ಹೆಂಡ ಕುಡಿಯೋರನ್ನ, ಸಿನಿಮ ನೋಡರನ್ನ ತಮ್ಮ ಮನೆಯ ಹಿತ್ತಲಲ್ಲಿ ಕುಳಿತು ಅನ್ತಇರ್ತಾರೆ.

ಇದನ್ನೇ ನಾವು ಹಲವು ಸರತಿ ಸಂಸ್ಕೃತಬೇನೆ ಮತ್ತು ಸುಸಂಸ್ಕೃತಬೇನೆ ಎಂದು ಕರೆದಿರೋದು. ಇದೇ ಒಂದು ಬಗೆಯ ಮಾನಸಿಕೆ ಸ್ತಿತಿ ಮತ್ತು ಮರಳು. ಅದರಿಂದ ಹಲವರು ಹೊರಬಂದು ಪ್ರೀ ಆಗ್ತಾರೆ, ಕೆಲವರಿಗೆ ಅದರಿಂದ ಹೊರಬರಲು ಆಗೋದೇ ಇಲ್ಲ.

"ಬೇರೊಬ್ಬರನ್ನು ಬದಲಾಯಿಸಬೇಕಾದರೆ, ಮೊದಲು ನಾವು ಬದಲಾಗಲು ರೆಡಿ ಇದ್ದೀವ ಅಂತ ನೋಡಿಕೋ ಬೇಕು. ಹೇಗೆ ನಾವು ಬದಲಾಗಲು ತಯಾರಿಲ್ಲವೋ ಹಾಗೆ ಬೇರೆಯವರು ಬದಲಾಗಲು ತಯಾರಿರುವುದಿಲ್ಲ." --- ಯಾರು ಒಬ್ಬರು ಹೇಳಿದ ಮಾತು!!

ಇಲ್ಲಿ ಎಲ್ಲಾ ಮಾತುಗಳು ಜನೆರಲ್ಲಾಗಿದೆ.. ಒಬ್ಬರ ಕುರಿತಿಲ್ಲ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 12:24pm — hamsanandi

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

hamsanandi's picture

Quote:

ಸಿಗರೇಟು ಪಬ್ಲಿಕಲ್ಲಿ ಸೇದ್ತಾರೆ. ಅದನ್ನು ನಿಲ್ಲಿಸಲು ಆಗಲ್ಲ. ಅವರನ್ನು ಬಯ್ದು ’ಸುಸಂಸ್ಕೃತ’ ಎಂದು ಮನೆಯಲ್ಲಿ ಮರೆದು ತೂಗಬೋದಶ್ಟೇ!! ಸಿಗರೇಟಂನು ಇಶ್ಟಪಡುವ ಮಂದಿಯ ಇಶ್ಟದ ವಿಲ್/will ಪವರ್‍ ಮುಂದೆ ಅದಂನು ವಿರೋದಿಸುವ ಮಂದಿ ವಿಲ್ ಪವರ್‍ ಕಡಮೆ. ಕೆಲವರು ಸುಮ್ನೆ ’ಸುಸಂಸ್ಕೃತ’ ಎಂದು ತೋರಿಕೆಗೋಸುಗ ಸಿಗರೇಟು ಸೇದೋರನ್ನ, ಹೆಂಡ ಕುಡಿಯೋರನ್ನ, ಸಿನಿಮ ನೋಡರನ್ನ ತಮ್ಮ ಮನೆಯ ಹಿತ್ತಲಲ್ಲಿ ಕುಳಿತು ಅನ್ತಇರ್ತಾರೆ.

ಯಾಕ್ರೀ ಆಗ್ಬಾರ್ದು ಸಿಗರೇಟನ್ನ ಪಬ್ಲಿಕ್ಕಲ್ಲಿ ಸೇದೋದು? ಅವರು ಸೇದಿ ಹಾಳಾದ್ರೆ ಹಾಳಾಗ್ಲಿ - ಊರವರಿಗೆಲ್ಲ ಸೆಕೆಂಡ್-ಹ್ಯಾಂಡ್ ಹೊಗೆ ಕುಡಿಸಿ ಕ್ಯಾನ್ಸರ್ ತರೋದನ್ನ ವಿಲ್-ಪವರ್ ಅದು ಇದು ಅಂತ ಯಾಕೆ ಸಮರ್ಥಿಸಿಕೋಬೇಕು?

ಸಿಗರೇಟು ಸುಡುವುದೇ ಆಗ್ಲಿ, ಕುಡಿಯುವುದೇ ಆಗಲಿ, ಅಥವ ಸಂಗೀತ ಹಾಡೋದೇ ಆಗ್ಲಿ, ಅದು ಅವರವರ ವೈಯಕ್ತಿಕ ವಿಚಾರ .ಅದನ್ನ ಮನೇಲಿ ಮಾಡ್ಕೊಳ್ಳಲಿ Smiling ಪರ್ವಾಗಿಲ್ಲ. ಅದು ಬಿಟ್ಟು...

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 12:32pm — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ಹಂಸಾನಂದಿಗಳೇ,

ನಾವು ಹೋಗಿ ಸೇದಬೇಡಿ ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ಹೇಳೋ ಬಗ್ಗೆ ತಪ್ಪಿಲ್ಲ..

ಅದನ್ನು ಬಿಟ್ಟು ’ನೀನು ಸಿಗರೇಟು ಸೇದ್ತೀಯ, ನಿಂಗೆ ಸಂಸ್ಕೃತಿ ಇಲ್ಲ. ನೀನು ಸಂಸ್ಕೃತಿ ಹಾಳು ಮಾಡ್ತೀಯ’ ಅಂದ ’ಸಂಸ್ಕೃತಿ’, ’ಸಂಸ್ಕಾರ’ ಅಂದ ಪದಗಳ ಬಳಕೆ ಮಾಡಿದರೆ ತಪ್ಪು.

ಅವರವರ ವಯ್ಯಕ್ತಿಕ ವಿಚಾರ ಅಲ್ವೇ ಸಂಸ್ಕೃತಿ, ದರ್ಮ, ಮುಂತಾದವು...

ನಾನು ಹೇಳಿದ್ದು ’ಸಿಗರೇಟು ಸೇದೋದನ್ನ’ ಹೆಲ್ತ್ ಮೇಲೆ ವಿರೋದಿಸೋದು ಸರಿ, ಅದನ್ನ ನಮ್ಮ ಕೆಟ್ಟ-ಸಂಸ್ಕೃತಿ ಎಂದು ವಿರೋದಿಸೋದು ಸರಿಯಿಲ್ಲ.

ವೇದಬಲ್ಲ ನೀವು ಹೇಳಿ ಸುರಪಾನದ ಬಗ್ಗೆ ವೇದದಲ್ಲಿ ಎಶ್ಟು ಕಡೆ ಹೆಮ್ಮೆಯಿಂದ ಬಂದಿಲ್ಲ. ಸೂರ್ಯಧ್ಯಾನ ಮಾಡಿದವನಿಗೆ ಸಕ್ಕತ್ತಾಗಿ ಸುರೆ ಸಿಗುವುದು ಅಂದ ವೇದವಾಕ್ಯವಿಲ್ಲವೇ. ಹಾಗಂತ ವೇದವು ಸಂಸ್ಕೃತಿವಿರೋಧವೇ!! ವೇದವನ್ನು ಸಂಸ್ಕೃತಿ ಎಂದು ಯಾಕೆ ಎಣಿಸಬೇಕು...ವೇದ ವೇದವಾಗೇ ಇರಬೋದಲ್ಲ.. ಒಂದು ಹೊತ್ತಗೆ, ಅರಿವಿನ ಗುಪ್ಪೆ.!! ಅದೇ ಇಲ್ಲೂ ಕೂಡ..!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 5:40pm — Sunil Jayaprakash

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

Sunil Jayaprakash's picture

ಹಂಸಾನಂದಿ, ಶ್ :ಮೆತ್ತಗೆ: "ಪಬ್ಲಿಕಲ್ಲಿ ಸಿಗರೇಟು ಸೇದೋದು ಸಭ್ಯತೆ ಅಲ್ಲ" ಅಂತ ಸಂಸ್ಕೃತ ಪದ ಬಳಸಿ ಹೇಳಬಾರದಂತೆ. "ಪಬ್ಲಿಕ್ಕಲ್ಲಿ ಸಿಗರೇಟು ಸೇದೋದು ಎಟಿಕ್ವೆಟ್/ಮ್ಯಾನರ್ಸ್ ಅಲ್ಲ" ಅಂತ ಇಂಗ್ಲೀಷ್ ಪದ ಯೂಸ್ ಮಾಡಿ ಹೇಳಿದರೆ, ಅದು ರಾಂಗ್ ಅಲ್ವಂತೆ !!!!@!@#@!

ಇನ್ನೊಂದು ವಿಚಾರ, ಗೊತ್ತಾ, "ಸಿಗರೇಟು (ofcourse ಪಬ್ಲಿಕ್ಕಲ್ಲಿ) ಸೇದುವವರನ್ನು ಅಸಭ್ಯರು ಅನ್ನಬಾರದಂತೆ, ಆದರೆ ಸಿಗರೇಟು ಸೇದುವವರು, ಸಿಗರೇಟು ಸೇದದವರನ್ನು ಕುರಿತು ಗಾಂಧಿ, ಗಾಂಧಿತುಂಡು, ಶಾಸ್ತ್ರಿ, ಶಾಸ್ತ್ರತೊಗೊಂಬಂದು, ಜುಟ್ಟು, ಪೂಜಾರಿ" ಹೀಗೆಲ್ಲ ಕರೆಯಬಹುದಂತೆ. ಅವೆಲ್ಲ ತಪ್ಪು ಅಂತ ಅನ್ನಿಸುವುದಿಲ್ಲವಂತೆ!!!!!!!!@@@

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 6:16pm — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ಟಿಟ್ ಪಾರ್‍ ಟ್ಯಾಟ್...!!

ಇವರು ಅನ್ಲಿ ಅವರು ಅಂತಾರೆ!! ಸರಿ ಹೋಯ್ತು.. ಕೊನೆ ನಡೆಯೋದೇನಿದ್ದರೂ ಸಿಗರೇಟು ಸೇದೋರದ್ದೇ!! Smiling ಅವರು ಸೇದಿ ಹೊಗೆ ಮುಕಕ್ಕೆ ಬಿಟ್ರೇ ಬಿಡಿಸಿಕೊಂಡು ಹೋಗದೇ ಹೊರತು.. ಅವರನ್ನು ಎದುರಿಸುವ ತಾಕತ್ತು ’ಗಾಂದಿ’ಗಳಿಗುಂಟೇ! Smiling

ಅದಕ್ಕೆ ಸಿಗರೇಟು ಸೇದೋರ ಗೆಳೆತನ ಮಾಡಿ, ಅವರಿಗೆ ಗೆಳೆತನದಿಂದ ’ಲೋ ಪ್ಲೀಸ್ ಸೇದಬೇಡ, ಹೊಗೆಯಿಂದ ಸಾಯ್ತೀಯ’ ಅಂತ ಹೇಳಬೇಕು. ಅದನ್ನ ಬಿಡ್ಡು ’ರೀ ಮ್ಯಾನರ್ಸ್ ಇಲ್ವ" ಅಂದರೇ ’ನೀನ್ಯಾರು ಹೇಳಕ್ಕೆ’ ಅಂತಾರೆ. Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 7:30pm — roopablrao

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

roopablrao's picture

ಮಹೇಶ್
ಇನ್ನೊಂದು ಸ್ವಲ್ಪ ದಿನ. ಮದುವೆ ಆಗಲಿ .
ಸಿಗರೇಟ್ ಸೇದಬಾರದು ಎನ್ನುವವರ ಗುಂಪಿಗೆ ನೀವು ಸೇರುತ್ತೀರಾ Smiling
ನಿಮ್ಮ ಹೆಂಡತಿ ನಿಮ್ಮ ಕಿವಿ ಹಿಡಿದು ಹಾಗೆ ಹೇಳುವಂತೆ ಮಾಡುತ್ತಾರೆ ನೋಡುತ್ತೀರಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 9:45am — mahesha

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

mahesha's picture

ರೂಪಕ್ಕ

ನಾನ್ ಸಿಗರೇಟು ಸೇದೋದರ ವಿರೋದವೇ...

ಅದರೇ ಅದು ಹೆಲ್ತಿಗೆ ಒಳ್ಳೇದಲ್ಲ ಎಂದು ಹೇಳಿ ಹೊರತು, ಸಂಸ್ಕೃತ ಸಂಸ್ಕಾರ ಅಂತ ತಲೆ ತಿನ್ನಬೇಡಿ ಅಂತ ನನ್ನ ಮಾತು...

ನಾನ್ ಸಿಗರೇಟು ಸೇದೋ ನನ್ ಗೆಳೆಯರಿಗೆ ಎಶ್ಟು ಸರತಿ ಹೇಳ್ತೀನಿ. ’ಸಿಗರೇಟನ್ನು ಹೋಗಿ ಮನೆಯಾಚೆ ಸೇದು.. ಇಲ್ಲಿ ಹೊಗೆ ತುಂಬಿಕೊಳ್ತದೆ’ ಅಂತ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 11:37pm — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ನಾವು ಸಿಗರೇಟ್ ಸೇದೋದನ್ನ ಸಂಸ್ಕೃತಿಯ ವಿರೋದ ಎನ್ನುತ್ತಿಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸೇದೋದನ್ನ ಸಂಸ್ಕೃತಿ ಅಲ್ಲ ಅಂತಿರೋದು. ಯಾಕಂದ್ರೆ ಅದರ ದುಷ್ಪರಿಣಾಮ ಆ ಅಮಾಯಕ ಜನರ ಮೇಲೂ ಅಗುತ್ತದೆ ಎಂಬ ಸಾಮಾನ್ಯ ತಿಳುವಳಿಕೆ (ಕಾಮನ್ ಸೆನ್ಸ್) ಇಂದ. ಸಂಸ್ಕೃತಿ ಅಂದ್ರೇನೂಂತ ಹೇಳ್ತೀರಾ? ಅದೇ ನಮ್ಮ ನಡವಳಿಕೆ, ನಮ್ಮ ಜೀವನದ ರೀತಿ ಅಲ್ವಾ? ಹಾಗಿದ್ಮೇಲೆ!! ನಿಮ್ಮ ಸ್ನೇಹಿತರಿಗೆ ಯಾರು ಇರದೇ ಇರೊ ಸ್ಥಳಕ್ಕೆ ಹೋಗಿ ಸೇದೋಕೆ ಹೇಳೋದು ಉತ್ತಮ.

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 7:44pm — Sunil Jayaprakash

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

Sunil Jayaprakash's picture

’ಲೋ ಪ್ಲೀಸ್ ಸೇದಬೇಡ, ಹೊಗೆಯಿಂದ ಸಾಯ್ತೀಯ’

ಅಂದ್ರೆ, "ನಾನ್ ತಾನೇ, ಸಾಯೋದು, ನೀನಲ್ವಲ್ಲಾ" ಅಂತ ಹೇಳೋ ಧಿಮಾಕಿನ ಸೊ-ಕಾಲ್ಡ್ ಗೆಳೆಯರೂ ಇರುತ್ತಾರೆ.

"ಒಂದು ದೇಶದ ಕಾನೂನು ಪಾಲನೆಗೆ, 'ಪ್ಲೀಸ್' ಅಂತ ಅಂಗಲಾಚಿ ಬೇಡಿಕೊಳ್ಳುವ ಸ್ಥಿತಿ ಯಾವ ದೇಶಕ್ಕೂ ಯಾವ ಕಾಲಕ್ಕೂ ಬರದೇ ಇರಲಿ".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2008 - 11:42pm — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ನೀನು ಸಾಯೋದಾದ್ರೆ ಸಾಯಿ ಮಾರಾಯ ಅದಕ್ಕೆ ಅಂತ ಅಮಾಯಕರಿಗೂ ಯಾಕೆ ಆ ರೋಗ ಹಂಚ್ತೀಯಾ ಅಂತ ಅವರ ದಾಟಿಲೇ ಹೇಳಿ. ನಾವು ಯಾವಾಗ್ಲೂ ಗಾಂಧಿ ಆದ್ರೆ ನಡಿಯೋಲ್ಲ, ನೇತಾಜಿ, ಭಗತ್ ಸಿಂಗ್ ಆಗಬೇಕು. ಇದರ ಅವಶ್ಯಕತೆ ನಮ್ಮಲ್ಲಿದೆ.

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 6:19pm — kpbolumbu

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

kpbolumbu's picture

Laughing out loud
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 7:34pm — Sunil Jayaprakash

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

Sunil Jayaprakash's picture

Supreme Court bans smoking in public places - http://www.rediff.com/news/2001/nov/02sc.htm.

ಪಬ್ಲಿಕ್ಕಲ್ಲಿ ಸಿಗರೇಟು ಸೇದೋದು ಕಾನೂನು ಮುರಿದಂತೆ !!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2008 - 11:52am — roopablrao

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

roopablrao's picture

ವಿನು ಅವರೇ
ನಿಜಕ್ಕೂ ಸಂಸ್ಕೃತಿಯ ಬಗ್ಗೆ ನಿಮ್ಮ ಕಳಕಳಿ ಮೆಚ್ಚುವಂತಹದ್ದೇ. ಆದರೆ ನಿಮ್ಮ ಈ ಕಾಳಜಿ ಎಲ್ಲಾ ಯುವಜನರಲ್ಲಿ ಕಾಣುವುದಿಲ್ಲ
ತುಂಡು ಬಟ್ಟೆಯೇ ಇನ್ನು ನಮ್ಮ ಸಂಸ್ಕೃತಿಯಾದರೂ ಆಶ್ಚರ್ಯವಿಲ್ಲ. ಸಂಬಂಧಗಳ ಮೌಲ್ಯತೆ ನಶಿಸುತ್ತಿದೆ.
ಏನೂ ಮಾಡಲಾಗುವುದಿಲ್ಲ
"ಬರೀ ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ "

ಪ್ರವಾಹದ ವಿರುದ್ದ ಹೋಗುವ ಧೈರ್ಯ ಇದ್ದರೆ ವಿರುದ್ದವಾಗಿ ಈಜಬೇಕು

ಇಲ್ಲವಾದರೆ ಪ್ರವಾಹದ ಜೊತೆ ನಾವು ಕೊಚ್ಚಿ ಹೋಗಬೇಕು

ನೀವು ಕೊಟ್ಟ ??? ಸಾಲದು ಇದು ????????????????????????????????????????????? ಆಗಬೇಕು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2008 - 12:56pm — ಶ್ರೀನಿಧಿ

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

ಶ್ರೀನಿಧಿ's picture

ನಾವು ಸಂಸ್ಕೃತಿಯನ್ನು ನಮ್ಮದೇ ಕಣ್ಣುಗಳಿಂದ, ಕೇವಲ ೧೦ ವರ್ಷಗಳ ಹಿಂದಿನ ಕಿಟಕಿಯಿಂದ ನೋಡುತ್ತೇವೆ. ಅದೇಕೋ ನಮಗೆ ಯಾವಾಗಲೂ ಅನ್ನಿಸುವುದು ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಅಂತಲೇ. ತುಂಬಾ alarmist ಅನ್ನಿಸುವ ಭಾವನೆಗಳು ನಮ್ಮವು.

ಸಂಸ್ಕೃತಿ ಎಂದಿಗೂ ನಶಿಸುವುದಿಲ್ಲ. ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಇದೊಂದು evolution ಅಷ್ಟೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 9:07am — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಹೌದು ಆ ಬದಲಾವಣೆಯು ಉತ್ತಮವಾಗಿರಬೇಕು ಆಗ ಆ ಬದಲಾವಣೆಗೊಂದು ಬೆಲೆ ಮತ್ತು ಅರ್ಥ ಇರುತ್ತದೆ. ನಾನು ಬದಲಾವಣೆ ಬೇಡ ಎನ್ನುತ್ತಿಲ್ಲ ಅಥವಾ ಅದು ತಪ್ಪು ಎನ್ನುತ್ತಿಲ್ಲ ಬದಲಾವಣೆಯಾಗಿರುವ ರೀತಿ ಸರಿಯಿಲ್ಲ ಎನ್ನುತ್ತಿದ್ದೇನೆ ಅಷ್ಟೆ. "ಹಳೆಬೇರು ಹೊಸ ಚಿಗುರು" ಇರಬೇಕು ಆದ್ರೆ ಇಲ್ಲಿ ಬಾಳೆ ಗಿಡದಲ್ಲಿ ಮಾವುಬೆಳೆಯುತ್ತೇ ಅನ್ನೋ ರೀತಿ ಬದಲಾವಣೆ ಅಗ್ತಿದೆ.

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 9:27am — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಹಾಗೆಂದು ನಾವು ಬೆತ್ತಲಾಗಬೇಕೆ? ಇರಬೇಕು ಇದ್ದು ಜಯಿಸಬೇಕು, ಗೆಲುವು ಸಧ್ಯವಿಲ್ಲವೆಂದು ಸುಮ್ನೆಕುಳಿತರೆ? ಆಗದು ಎಂದು ಕಯಿಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಅದು ಪ್ರವಾಹವಲ್ಲ ಒಂದು ಅಲೆ ಅಷ್ಟೆ.

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 9:31am — vinnu264

ಉ: ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

vinnu264's picture

ಹಾಗೆಂದು ನಾವು ಬೆತ್ತಲಾಗಬೇಕೆ? ಇರಬೇಕು ಇದ್ದು ಜಯಿಸಬೇಕು, ಗೆಲುವು ಸಧ್ಯವಿಲ್ಲವೆಂದು ಸುಮ್ನೆಕುಳಿತರೆ? ಆಗದು ಎಂದು ಕಯಿಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಅದು ಪ್ರವಾಹವಲ್ಲ ಒಂದು ಅಲೆ ಅಷ್ಟೆ.

ಶೈವಿ:- )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಾತ
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಕನ್ನಡತನ
  • Abroad ಅನ್ನೋ ಮಾಯೆ...
Syndicate content

ಲೇಖಕರು

vinnu264's picture

ಪೂರ್ಣ ಹೆಸರು
ವಿನಯಕುಮಾರ (ಶೈವಿ)

ಪರಿಚಯ

ನಾನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನವನು. ನಟನೆ, ಕವನಗಳ ರಚನೆ,ಗಾಯನ ನನ್ನ ನೆಚ್ಚಿನ ಹವ್ಯಾಸಗಳು. ಮತ್ತು ನಟನಾಗುವುದು ನನ್ನ ಹೆಬ್ಬಯಕೆ. ನಾನು ಎಂಬಿಎ ಪದವಿಧರ, ಕೆಲಸ ಹುಡುಕ್ತಾ ಇದೀನಿ. ಅಪ್ಪಟ ಕನ್ನಡ ಪ್ರೇಮಿಗಳಲ್ಲಿ ನಾನೂ ಒಬ್ಬ. ತಂಗಿಯರೆಂದರೆ ನನಗೆ ಪ್ರಾಣ,, ಅವರಿಂದಲೆ ನನ್ನ ಕವನ ಬರೆಯುವ ಶಕ್ತಿ ಹೆಚ್ಚಿತೆಂದರೆ ತಪ್ಪಾಗಲಾರದು. ಅವರು ನನ್ನ ಸ್ಪೂರ್ತಿ.

ನಾನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನಾಗಿದ್ದವನು. ಈಗಲೂ ನನ್ನಲ್ಲಿ ಸೇವಾಭಾವನೆ ಇದೆ. ನಾನೊಬ್ಬ ರಕ್ತದಾನಿ. ನಟನಾಗುವ ಅವಕಾಶದ ಆಕಾಂಕ್ಷಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 157 ಅತಿಥಿಗಳು ಆನ್ಲೈನ್ ಇರುವರು.


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator