ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪುಟ್ಟಿಯ ದಿನಚರಿ

ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ
ಹತ್ತಿರ ಹೋಗಲು ನಗುತಾಳೆ
ಹಾಡಿ ಹಾಡಿ ಕುಣಿತಾಳೆ

ಹಾಲು ಬೇಕು ಅಂತಾಳೆ
ಕೊಟ್ಟರೆ ಹಾಲು ಚಲ್ತಾಳೆ
ಅಮ್ಮ ಪೆಟ್ಟು ಕೊಡುತಾಳೆ
ಪೆಟ್ಟಿಗೆ ಹೆದರಿ ಓಡ್ತಾಳೆ

ಮತ್ತೆ ಬಂದು ಕರಿತಾಳೆ
ಆಟ ಆಡು ಅಂತಾಳೆ
ಆಡಲು ಹೋದರೆ ಬೀಳ್ತಾಳೆ
ಬಿದ್ದು ಬಿದ್ದು ಏಳ್ತಾಳೆ

ಅಮ್ಮ ಅಡಿಗೆ ಮಾಡ್ತಾಳೆ
ಇವಳೂ ಹೋಗಿ ನೋಡ್ತಾಳೆ
ಊಟ ಹಾಕು ಅಂತಾಳೆ
ತರಲು ಊಟ ಓಡ್ತಾಳೆ

ಅಮ್ಮ ಹೋಗಿ ಹಿಡಿತಾಳೆ
ಹೈಚೇರ್ ಮೇಲೆ ಕೂರ್‍ಸ್ತಾಳೆ
ಭಾರೀ ಜೋರು ಮಾಡ್ತಾಳೆ
ಇವಳು ಸುಮ್ನೆ ತಿಂತಾಳೆ

ಊಟ ಮುಗಿಸಿ ಏಳ್ತಾಳೆ
ನಿದ್ದೆ ಬರುತ್ತೆ ಅಂತಾಳೆ
ಅಮ್ಮ ತಟ್ಟಿ ಹಾಡ್ತಾಳೆ
ಇವಳು ನಿದ್ದೆ ಮಾಡ್ತಾಳೆ

ನಿದ್ದೆ ಮುಗಿದು ಏಳ್ತಾಳೆ
ಮತ್ತೆ ಶುರು ಮಾಡ್ತಾಳೆ
ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ

( ಹೈ ಚೇರ್ ಅಂದರೆ ಮಕ್ಕಳನ್ನು  ಬೆಲ್ಟ್ ಹಾಕಿ ಕಟ್ಟಿ ಕೂರಿಸಿ ಊಟ ಮಾಡಿಸಲೆಂದೇ ಇರುವ ಕುರ್ಚಿ )

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
tvsrinivas41's picture

ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ
ಅನುಭವದ ಮಾತುಗಳಿರಬೇಕು.
ಮಕ್ಕಳ ಮನಸ್ಸಿನಲ್ಲಿ ಏನು ದ್ವಂದ್ವ ಇರಬಹುದು ಎನ್ನುವುದರ ಬಗ್ಗೆ ಬರೆಯಲು ಪ್ರಯತ್ನಿಸಿ. ಅದು ಬಲು ಕಷ್ಟ. ಏಕೆಂದರೆ ಮಕ್ಕಳಿಗೆ ಯೋಚನೆಗಳೇ ಇಲ್ಲವೆನ್ನುತ್ತಾರೆ. ಆದರೂ ಅವರುಗಳು ಎಲ್ಲವನ್ನೂ ಕುತೂಹಲವಾಗಿ ನೋಡುವುದನ್ನು ನೋಡಿದರೆ ಹಿರಿಯರನ್ನು ಅನುಸರಿಸಬೇಕು ಅನ್ನುವ ಅಂಶ ಕಲಿಯುತ್ತಿರುತ್ತಾರೆ ಅಂತ ನನ್ನ ಅನಿಸಿಕೆ. ಅಂತಹ ಬರಹಗಳು ಬಹಳ ಕಡಿಮೆ.
ಜಿ.ಪಿ,ರಾಜರತ್ನಂ ಮತ್ತು ಸಂಗಮೇಶ ಅವರ ಕವನಗಳನ್ನು ಓದಿದ್ದೀನಿ. ಅಂತಹದ್ದು ಬಹಳವಾಗಿ ಬರಬೇಕಿದೆ.

ತವಿಶ್ರೀನಿವಾಸ

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ