ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಶ್ರೀಪಾದರಾಜರು

June 19, 2008 - 2:53pm — madhava_hs


ಇದೇ ತಿಂಗಳ ೧೭ ನೇ ತೇದಿಯಂದು ೧೪ನೇ ಶತಮಾನದ ಮಹಾನ್ ಭಕ್ತ, ದಾಸಕೂಟದ ಹರಿಕಾರ ಶ್ರೀಪಾದರಾಜರ ಆರಾಧನೆ ನಡೆಯಿತು. ಅವರ ಒಂದು ಚಿಕ್ಕ ಪರಿಚಯ ಕೊಡುವ ಲೇಖನ ಇದು.

ಶ್ರೀಪಾದರಾಜರ ಬಾಲ್ಯದ ಹೆಸರು ಲಕ್ಶ್ಮೀನಾರಾಯಣ ಎಂದು. ಅವರು ೧೪೧೨ ರಲ್ಲಿ ಬೆಂಗಳೂರು ಸಮೀಪದ ಅಬ್ಬೂರಿನಲ್ಲಿ ಜನಿಸಿದರು. ಒಮ್ಮೆ ಪದ್ಮನಾಭತೀರ್ಥರ ಶಿಷ್ಯಗಣದವರಲ್ಲೊಬ್ಬರಾದ ೮ ನೇ ಪೀಠಾದಿಪತಿ ಸ್ವರ್ಣವರ್ಣಾತೀರ್ಥರು ಅಬ್ಬೂರಿನ ಮೂಲಕ ಸಾಗುತ್ತಿದ್ದಾಗ ಆಟವಾಡುತ್ತಿದ್ದ ಈ ಬಾಲಕನನ್ನು ಗಮನಿಸಿ, ಮಾತನಾಡಿಸಿ ಅವನಲ್ಲಿದ್ದ ಅಪಾರ ಶಕ್ತಿಯನ್ನು ಗಮನಿಸಿ ೫ನೇ ವರ್ಷಕ್ಕೆ ಸನ್ಯಾಸ ಕೊಡಿಸಿ ವಿಧ್ಯಾಭ್ಯಾಸ ಮಾಡಿಸಿದರು. ಅಬ್ಬೂರು ಎಷ್ಟುದೂರ ಇದೇ ಎಂದು ಕೇಳಿದ್ದಕ್ಕೆ ’ಮುಳುಗುತ್ತಿರುವ ಸೂರ್ಯನನ್ನು ನೋಡಿರಿ, ನಾವು ಇಲ್ಲಿ ಇನ್ನೂ ಆಟವಾಡುತ್ತಿರುವುದನ್ನು ನೋಡುತ್ತಿದ್ದೀರಿ. ಅಬ್ಬೂರು ಎಷ್ಟುದೂರ ಇದೆ ಎಂದು ಊಹಿಸಿಕೊಳ್ಳಿ’ ಎಂದರಂತೆ. ಶ್ರೀಪಾದರಾಜರು ಧೃವಾಂಶ ಸಂಭೂತರೆಂದು ನಂಬಿಕೆಇದೆ. ಶ್ರೀವ್ಯಾಸರಾಯರು ಇವರ ಶಿಷ್ಯರಲ್ಲೊಬ್ಬರು.

ಕೃತಿಗಳು: ಇವರು ಭ್ರಮರಗೀತ, ಗೋಪಿಗೀತ, ಮಧ್ವನಾಮ ಮೊದಲಾದ ಕೃತಿಗಳನ್ನು ರಚಿಸಿದರು. ಇಂದಿಗೂ ಇವುಗಳನ್ನು ನಿತ್ಯಪಾರಾಯಣ ಮಾಡುವವರೂ ಇದ್ದಾರೆ. ಇವರ ಕೆಲವು ಹೆಸರಾಂತ ಕೃತಿಗಳು ’ನೀ ಇಟ್ಟಂಗೆ ಇರುವೆನೋ ಹರಿಯೇ’, ’ಕಂಗಳಿನ್ಯಾತಕಯ್ಯಾ ಕಾವೇರಿ ರಂಗನ ನೋಡದಾ’, ’ಭೂಷಣಕೆ ಭೂಷಣವು...’ ಇತ್ಯಾದಿ. ’ರಂಗ ವಿಠಲ’ ಎಂಬ ಅಂಕಿತದಿಂದ ಅವರು ಹಾಡುಗಳನ್ನು ರಚಿಸಿದರು. ವಾಗ್ವಜ್ರ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚನೆ ಮಾಡಿದರು.

ಮಹಿಮೆಗಳು:
ಒಮ್ಮೆ ಅಬ್ಬೂರಿನಲ್ಲಿ ಇವರು ದೇಶಪರ್ಯಟನೆಗಳನ್ನೆಲ್ಲಾ ಮುಗಿಸಿಕೊಂಡು ಬಂದ ಕಾಲಕ್ಕೆ ಊರಿನ ಹಿರಿಯರು ಗಂಗಾಸ್ನಾನ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಅವರ ಇಚ್ಚ್ಚೆಯನ್ನು ಪೂರೈಸಲೋಸುಗ ಆಚಾರ್ಯರು ಒಂದು ಸ್ಥಳದಲ್ಲಿ ಕುಳಿತು ಗಂಗೆಯ ಆವಾಹನೆಗಾಗಿ ತಪಸ್ಸನ್ನಾಚರಿಸಲಾಗಿ ತಮ್ಮ ಕಮಂಡಲದಿಂದ ಗಂಗೆ ಉಕ್ಕಿ ಹರಿದಳಂತೆ. ಹಾಗಾಗಿ ಇಂದಿಗೂ ನರಸಿಂಹ ತೀರ್ಥವೆಂದು ಹೇಳುವ ಆ ಪುಷ್ಕರಿಣಿಯಲ್ಲಿ ಸ್ನಾನಗೈದರೆ ಗಂಗಾಸ್ನಾನದಷ್ಟು ಫಲ ಎಂದು ಆಸ್ತಿಕರು ನಂಬಿದ್ದಾರೆ. ನರಸಿಂಹ ತೀರ್ಥ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸಮೀಪ ಮುಳಬಾಗಿಲಿನಿಂದ ೧ ಕಿ.ಮೀ ದೂರದಲ್ಲಿದೆ.

ಆಚಾರ್ಯರು ಎಲ್ಲೇಇರಲಿ ನಿತ್ಯ ದೇವರಿಗೆ ೬೪ ಬಗೆಯ ಅಡುಗೆ ಮಾಡಿ ನೈವೇದ್ಯಮಾಡುತ್ತಿದ್ದರಂತೆ. ಒಮ್ಮೆ ಕಾಡಿನ ಮಾರ್ಗವಾಗಿ ಶಿಷ್ಯರ ಸಮೇತ ಸಾಗುತ್ತಿದ್ದಾಗ ಕೆಲವರು ಅವರನ್ನು ಪರೀಕ್ಷಿಸಲೋಸುಗ ಯಾವುದೇ ಪದಾರ್ಥಗಳು ಸಿಗದಂತೆ ಮಾಡಿದರಂತೆ. ಆದರೆ ಅಂದು ಕಾಡಿನ ಮಧ್ಯೆ ವ್ಯಾಪಾರಿಯೊಬ್ಬ ಬಂದು ಆಚಾರ್ಯರಿಗೆ ಅಗತ್ಯವಿದ್ದ ಪದಾರ್ಥಗಳನ್ನೆಲ್ಲಾ ಒದಗಿಸಿದ. ಕಾರಣ ಕೇಳಲಾಗಿ ಆತ ತಿರುಪತಿಗೆ ಪಯಣಿಸುತ್ತಿದ್ದಾಗಿಯೂ, ಹಿಂದಿನ ದಿನ ಸಪ್ನದಲ್ಲಿ ’ಪಕ್ಕದ ಕಾಡಿನಲ್ಲಿ ಒಬ್ಬರು ಮಹಾತ್ಮರು ಬರುತ್ತಿದ್ದಾರೆ, ನೀನು ತಿರುಪತಿಗೆ ಸಮರ್ಪಿಸಲು ತಂದಿರುವ ವಸ್ತುಗಳನ್ನು ಅವರಿಗೇ ಕೊಟ್ಟರೆ ನಮಗೇ ಸಮರ್ಪಿಸಿದಂತೆ’ ಎಂದು ಕನಸಾಯಿತಂತೆ.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 363 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 20, 2008 - 7:55pm — hpn

ಉ: ಶ್ರೀಪಾದರಾಜರು

hpn's picture

ಶ್ರೀಪಾದರಾಜರ ಮಹಿಮೆಗಳ ಬಗ್ಗೆ ಗೊತ್ತಿಲ್ಲ. ಆದರೆ ನರಸಿಂಹತೀರ್ಥ ನಿಜವಾಗಲೂ ಒಳ್ಳೆಯ ಜಾಗ. ಅಲ್ಲಿಗೆ ಹೋದರೆ ಒಂದು ರೀತಿಯ ನೆಮ್ಮದಿ ಇರತ್ತೆ. ನಾವೆಲ್ಲ ನರಸಿಂಹತೀರ್ಥಕ್ಕೆ ಹೋದಾಗ ಎಲ್ಲರೂ ಮಠದೊಳಗಿದ್ದರೆ ನಾನು ಮಾತ್ರ ನರಸಿಂಹ ತೀರ್ಥದ ಕಟ್ಟೆಯ ಮೇಲೆ ಸುಮ್ಮನೆ ಕುಳಿತಿರುತ್ತಿದ್ದೆ. ಘಂಟೆಗಟ್ಟಲೆ ಅಲ್ಲಿ ಕುಳಿತರೂ ಬೇಜಾರಾಗೋದಿಲ್ಲ!

ನಾ ತೆಗೆದ ಅಲ್ಲಿನ ಫೋಟೋಗಳು ಇಲ್ಲಿದೆ ನೋಡಿ:
ನರಸಿಂಹ ತೀರ್ಥ
ಮುಳುಬಾಗಿಲು
ಕುರುಡುಮಲೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 20, 2008 - 8:28pm — rameshbalaganchi

ಉ: ಶ್ರೀಪಾದರಾಜರು

rameshbalaganchi's picture

ಚಿತ್ರಗಳು ಚೆನ್ನಾಗಿವೆ ಹರಿಪ್ರಸಾದ್. ನಿಮಗೆ ಗೊತ್ತಾ? ತೀರ್ಥಹಳ್ಳಿಗೆ ಹತ್ತಿರದಲ್ಲಿ ಇಲ್ಲೂ ಒಂದು ಮುಳುಬಾಗಿಲು ಇದೆ. Smiling

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 20, 2008 - 9:27pm — hpn

ಉ: ಶ್ರೀಪಾದರಾಜರು

hpn's picture

ಕೇಳಿದೀನಿ ಆದರೆ ನೋಡಿಲ್ಲ.

ಅಂಬುತೀರ್ಥ ನೋಡಿದೀನಿ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2008 - 4:31am — rameshbalaganchi

ಉ: ಶ್ರೀಪಾದರಾಜರು

rameshbalaganchi's picture

ಅಂಬುತೀರ್ಥ ಅಷ್ಟೆ ಅಲ್ಲ, ಅಲ್ಲಿಗೆ ಹತ್ತಿರದ ಅರಳಸುರಳಿ ಬಳಿ ಇರುವ ’ಅಚ್ಚಕನ್ಯೆ’ ಜಲಪಾತ ಕೂಡ ಸಖತ್ತಾಗಿದೆ. ಒಮ್ಮೆ ಭೇಟಿಕೊಡುವ ಸಂದರ್ಭ ಬಂದರೆ ಮರೆಯದೆ ನೋಡಿ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?
  • ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"
  • ನವರಾತ್ರಿಯ ಮೊದಲ ದಿನ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
  • ನವರಾತ್ರಿಯ ನಾಲ್ಕನೇ ದಿನ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • vinayak.mdesai
    ಉ: ಸ್ವಲ್ಪನಗಿ
    October 13, 2008 - 12:42pm
  • veena
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:40pm
  • mahesha
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:40pm
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:34pm
  • mahesha
    ಉ: ಬಸವನ ಹುಳು...
    October 13, 2008 - 12:31pm
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:30pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:23pm
  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator