ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಹಣದುಬ್ಬರ - ಕೆಲವೊಂದು ಕಿವಿ ಮಾತು

June 21, 2008 - 10:19pm — Sunil Jayaprakash

ಗೆಳೆಯರೇ, ನಿಮಗೀಗಾಗಲೇ ತಿಳಿದಿರುವಂತೆ, ಇನಫ್ಲೇಶನ್ ಎರಡಂಕಿಯನ್ನು ದಾಟಿದೆ. ಇದಕ್ಕೆ ಹಲವು ಕಾರಣಗಳಿದೆ. ದೇಶದ ಈ ಆರ್ಥಿಕ ಸಂಕಷ್ಟದ ಸಮಯದಲ್ಲಿ ಕೆಲವೊಂದಷ್ಟು ಸರಳ ಸೂತ್ರಗಳನ್ನು ಪಾಲಿಸೋಣ.(*)

ಈ ಹಣದುಬ್ಬರ ಜಾಸ್ತಿಯಾದಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಮುಖ್ಯವಾಗಿ ಎಣ್ಣೆ, ಬೇಳೆ ಕಾಳುಗಳು, ದಿನಸಿಗಳು. ಇದರ ಬಿಸಿ ಮೊದಲು ತಟ್ಟೋದು ಹೊಟೇಲುಗಳಿಗೆ ಮತ್ತು ಬೇಕರಿಗಳಿಗೆ. ಹಾಗಾಗಿ, ಹೊಟೇಲುಗಳು, ಖರ್ಚನ್ನು ಸರಿದೂಗಿಸಲು, ಕಳಪೆ(**) ಗುಣಮಟ್ಟದ ವಸ್ತುಗಳನ್ನು ಬಳಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಮುಂದಿನ ಕೆಲವು ವಾರಗಳು (ಅಥವಾ ತಿಂಗಳುಗಳು ???, ಹಾಗಾಗದಿರಲಿ ಅಂತ ಆಶಿಸೋಣ) ಮನೆಯ ಹೊರಗಡೆ ತಿನ್ನುವಾಗ ಸ್ವಲ್ಪ ಜಾಗರೂಕರಾಗಿರೋಣ.

೧. ತೆರೆದಿಟ್ಟ ತಿನಿಸುಗಳಿಗಿಂತ ಆದಷ್ಟು ಪ್ಯಾಕ್ ಮಾಡಿದ ಒಣತಿನಿಸುಗಳು ಉತ್ತಮ.
೨. ಎಣ್ಣೆ ಪದಾರ್ಥಗಳಾದ ಗೋಬಿ ಮಂಚೂರಿ, ಬೋಂಡ, ಪೂರಿ, ದೋಸೆಗಳನ್ನು, ಚನ್ನಾ ಬತೂರಾಗಳನ್ನು ಆದಷ್ಟು ದೂರವಿಡೋಣ.
೩. ಮುಖ್ಯವಾಗಿ ಬೇಕರಿ ತಿನಿಸುಗಳಾದ, ಪಪ್ಸು, ಪಲ್ಯ ಬನ್, ಬ್ರೆಡ್ ಟೋಸ್ಟ್ ಇವುಗಳನ್ನು ಅವಾಯ್ಡೋಣ.
೪. ಹೊಟೇಲುಗಳಲ್ಲಿ ಸಿಹಿತಿನಿಸುಗಳನ್ನು ಮೆಲ್ಲುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು. ಸಕ್ಕರೆ ಪಾಕವನ್ನು ಯಾವ ರೀತಿ ಮಾಡಿರುತ್ತಾರೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ.
೪. ಗೆಳೆಯರು/ಕೊಲೀಗ್ಸು ಒಂದೇ ಕಡೆ ಕೆಲಸಕ್ಕೆ ಹೋಗುವುದಿದ್ದರೆ, ಆದಷ್ಟು ಒಟ್ಟಿಗೇ ಹೋಗುವ, ಬರುವ ಸಮಯಗಳನ್ನು ರೂಢಿಮಾಡಿಕೊಳ್ಳೋಣ. ಇದರಿಂದ ತುಂಬಾ ಮುಖ್ಯವಾದ ಪೆಟ್ರೋಲ್ ಉಳಿತಾಯವಾಗುತ್ತದೆ. ತೈಲಬೆಲೆ ೧೪೦ ಡಾಲರ್/ಬ್ಯಾರೆಲ್ ಆಸುಪಾಸಿನಲ್ಲಿದೆ.
೫. ಮಹಾನಗರಗಳಲ್ಲಿರುವ ಈಗಿನ ಒಟ್ಟಾರೆ ಮಧ್ಯಮವರ್ಗ ಅಗತ್ಯಕ್ಕಿಂತ ಹೆಚ್ಚಿನ ಖರ್ಚುಮಾಡುತ್ತಿರುವುದು ಹಣದುಬ್ಬರಕ್ಕೆ ಮತ್ತೊಂದು ಕಾರಣವಿರಬಹುದು. ಕಡೇಪಕ್ಷ ಈಗಲಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು, ಅಗತ್ಯವಿಲ್ಲದ ಖರ್ಚುಗಳನ್ನು ಮಾಡುವುದು ಬೇಡ. ಇನಫ್ಲೇಶನ್ ೧೧ರ ಆಸುಪಾಸಿನಲ್ಲಿರುವುದು ಎಂಥದ್ದೇ ದೇಶದ ಪ್ರಗತಿಗಾದರೂ ಮಗ್ಗುಲಮುಳ್ಳೇ.

* - ಈ ಸೂತ್ರಗಳನ್ನು, ಯಾವಾಗಲೂ ಪಾಲಿಸಬೇಕು. ಆದರೆ ಈಗ ಇವುಗಳ ಪ್ರಸ್ತುತತೆ ತುಂಬಾ ಹೆಚ್ಚಿದೆ.
** - ಎಲ್ಲ ಹೊಟೇಲುಗಳೂ, ಬೇಕರಿಗಳೂ ಈ ರೀತಿ ಇರುತ್ತವೆ ಅಂತಲ್ಲ. ಸಾರ್ವಜನಿಕರಾಗಿ ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು ಅಂತ ಅಷ್ಟೇ.

  • ಪ್ರಚಲಿತ
~.~
  • Login or register to post comments
  • 501 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 22, 2008 - 2:04am — sushil

ಉ: ಹಣದುಬ್ಬರ - ಕೆಲವೊಂದು ಕಿವಿ ಮಾತು

sushil's picture

ಕಿವಿಮಾತು ಛಂದೈತಿ..
ನನ್ನಿ ಸುನಿಲ.

-ಸುಶೀಲ್.
ಜಗದಲಿ ಎಲ್ಲವ ತಿಳಿಯುತಲಿ ನಾವು ತಿಳಿಯದಾದೆವು ನಮ್ಮನ್ನೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 9:09am — ASHOKKUMAR

ಉ: ಹಣದುಬ್ಬರ - ಕೆಲವೊಂದು ಕಿವಿ ಮಾತು

ASHOKKUMAR's picture

http://www.indianexpress.com/res/i/mediumImages/M_Id_29377.gif
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದು ವಿಶ್ವ ಪರಿಸರ ದಿನ - Do I care?
  • ಬ್ರೆಡ್ ಬೋಂಡ
  • ಹಣದುಬ್ಬರ
  • ಯಾಕೆ 'ನೋ' ಅಂದ್ರಿ ಡಾಕ್ಟ್ರೆ?
  • ಬದನೇಕಾಯಿ ಎಣಗಾಯಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator