ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಹೀಗು ಉಂಟೆ ನಮ್ಮಜ್ಜಿ...!!

June 22, 2008 - 7:45am — yuvapremi

ಇದಾದದ್ದು ೫-೬ ತಿಂಗಳ ಹಿಂದೆ. ಭಾರತದಿಂದ ಬಹಳ ದೊರವಿರುವ ಕಾರಣ ತಿಂಗಳಿಗೊಮ್ಮೆ ಬೆಂಗಳೊರಿನಲ್ಲಿರುವ ಕುಟುಂಬದವರಿಗೆಲ್ಲ ದೊರವಾಣಿ ಕರೆ ಮಾಡುವುದು ನನ್ನ ಪ್ರತಿ ತಿಂಗಳ ಕ್ರಿಯೆಯಾಗಿತ್ತು. ಅಂದು ನನಗೆ ಮದ್ಯ ರಾತ್ರಿ, ಮನೆಗೆ ಒಂದು ಕರೆ ಮಾಡೋಣವೆಂದು ನನ್ನ ಮೊಬೈಲ್ ತೆಗೆದೆ. ಅದು ಅಲ್ಲದೆ ಕಳೆದ ವರ್ಷವಷ್ಟೆ ನನ್ನ ಅಕ್ಕನ ಮಗಳು ಜನಿಸಿದ್ದಳು. ನಮ್ಮ ಕುಟುಂಬದಲ್ಲಿ ನನ್ನ ಅಕ್ಕ ಬಿಟ್ಟರೆ ಈ ಮಗುವೆ ಮತ್ತೊಂದು ಹೆಣ್ಣು, ಆದಕಾರಣ ನನಗೆ ಈ ಮಗುವನ್ನು ಕಂಡರೆ ಬಹಳ ಅಕ್ಕರೆ. ಮೊಬೈಲ್ ಗುಂಡಿಯನ್ನು ಒತ್ತಿದ ೫ ಸೆಕೆಂಡ್ನಲ್ಲಿ ಕರೆ ಮನೆ ಸೇರಿತು. ಅಲ್ಲಿಂದ ನಮ್ಮ ಅಜ್ಜಿ ರಿಸೀವರ್ ಕೈ ಹಿಡಿದು ಹಲೊ..., ಏನೊಪ್ಪ, ಇಷ್ಟು ದಿವ್ಸವಾಯ್ತು, ಹೇಗಿದ್ದೀಯ, ಊಟ ಆಯ್ತ, ಏನು ಅಡುಗೆ ಮಾಡಿದ್ದೆ ಅಂದ್ರು.

ನಾನು ಇಲ್ಲಿನ ಚಳಿಗೆ ನಡುಗುತ್ತ ಚನ್ನಾಗಿದ್ದಿನಿ ಅವ್ವ (ಅಜ್ಜಿ) , ಊಟ ಆಯ್ತು, ಬೇಳೆ ಸಾರು, ಅನ್ನ ಮಾಡಿದ್ದೆ. ಈ ಅಡುಗೆ ಕಷ್ಟ ನಮ್ಮ ಶತ್ರುಗೊ ಬೇಡ, ದಿನದ ಗಂಟೆಗಳೆಲ್ಲ ಅದ್ರಲ್ಲೆ ಹೊಗ್ಬಿಡುತ್ತದೆ, ಹೇಗು ನಮ್ಮ ಅಕ್ಕಂಗೆ ಹೆಣ್ಣು ಹುಟ್ಟಿದೆ, ಬೇಗ ಬೆಳೆದು ದೊಡ್ಡವಳಾದ್ರೆ ನನಗೆ ಅಡುಗೆ ಮಾಡಿಕೊಡೊಕೆ ಸಹಾಯವಾಗುತ್ತೆ ಅಂದೆ...!

ಅದಕ್ಕೆ, ನಮ್ಮ ಅಜ್ಜಿ ಹೌದು ಹೌದು, ಅದು ಸರಿ...! ಈ ಮಗು ಬೆಳೆಯೊಷ್ಟ್ರಲ್ಲಿ ನಿನ್ನ ತಲೆ ಬೆಳ್ಳಗಾಗುತ್ತೆ ಅಂದ್ರು.

ನಾನು, ಮಗು ಮನೆನಲ್ಲಿ ಇದ್ಯ ಅಂದೆ, ಅದಕ್ಕೆ ನಮ್ಮ ಅಜ್ಜಿ ಹೌದು ಮನೆ ನಲ್ಲಿ ಇದ್ದಾಳೆ. ಆದ್ರೆ ನೀನು ಯಾಕೆ ತಡವಾಗಿ ಪೋನ್ ಮಾಡಿದೆ. ಆಗ್ಲೆ ಅವಳು ಮಲಗಿ ಬಿಟ್ಳು ಅಂದ್ರು.

ನನಗೆ ಎಲ್ಲಿಲ್ಲದ ಬೇಸರ. ಅಂತಹ ಚಳಿನಲ್ಲಿ ಕರೆಮಾಡಿದೆ ಮಗುವಿನ ರಾಗಾನೊ, ಕೊಗೊ ಏನನ್ನು ಕೇಳೊಕೆ ಆಗ್ಲಿಲ್ವಲ್ಲ ಅಂತ.

ತಕ್ಷಣ ನಾನು ನಮ್ಮ ಅಜ್ಜಿಗೆ, ಹೌದ ಮಲಗಿಬಿಟ್ಳ ? ನಾನು ಕರೆ ಮಾಡಿದ್ದೇನೆ ಅಂತ ಹೇಳಿ ಮಗು ಮೈ ಗಿಂಟಿ ಎಬ್ಬಿಸಿ ಅಂದೆ.... ?

ಅದಕ್ಕೆ ನಮ್ಮ ಅಜ್ಜಿ ನಾನು ಅಂದಿದ್ದೆ ಸರಿ ಅಂತ ಮಗುವಿನ ಅಣ್ಣಂದಿರನ್ನ ಕರೆಸಿ "ಲೊ ನಿಮ್ಮ ತಂಗೀನ ಎತ್ಕೊಂಡು ಬನ್ರೊ ಅಂದ್ರು..!"

ನಾನು ಒಂದು ಕ್ಷಣ ಮಂಕಾಗಿ "ಎನ್ ಮಾಡ್ತಾ ಇದ್ದೀಯ ಅವ್ವ ಅಂದೆ", ಅದಕ್ಕೆ ನಮ್ಮ ಅಜ್ಜಿ, ನೀನೆ ಹೇಳಿದ್ಯಲ್ಲ "ಮಗು ಮೈ ಗಿಂಟಿ ಎಬ್ಬಿಸು ಅಂತ, ಅದಕ್ಕೆ ಮೈ ಗಿಂಟೋಕೆ ಹೇಳ್ತಾ ಇದ್ದೀನಿ" ಅನ್ನೋದೆ...!!

ನಾನು ಅರೆಕ್ಷಣ ನಕ್ಕು, ಅಲ್ಲ ಅಜ್ಜಿ ನಾನು ಮೈ ಗಿಂಟಿ ಅಂದ್ರೆ ನೀವು ಗಿಂಟೊಕೆ ಹೋಗ್ಬಿಡೋದೆ, ನಾನು ತಮಾಷೆ ಮಾಡಿದೆ ಅಂದೆ.

ನಮ್ಮ ಅಜ್ಜಿ ಹೌದೆ, ನೀನು ಹಾಗೆ ಅಂದ್ಯ ಅಂದ್ರು....!

ನಾನು ನನ್ನ ಮನಸಿನಲ್ಲಿ, ಸದ್ಯ ಮೈ ಗಿಂಟೋಕೆ ಮಾತ್ರೆ ಹೇಳಿದೆ, ಇನ್ನೇನಾದರು ನಾನು ಹೇಳಿ ನಮ್ಮ ಅಜ್ಜಿ ಅದನ್ನೆ ಮಾಡಿದ್ರೆ ಏನು ಗತಿ ಅಂದ್ಕೊಂಡೆ?

ಕೃಷ್ಣ ಪರಮಾತ್ಮ, ನಮ್ಮ ಅಜ್ಜಿ ಜೊತೆ ಮಾತು ಅಸಾದ್ಯ ಮತ್ತು ಎಚ್ಚರ ಅಂದುಕೊಂಡು ಅಂದಿನ ಕರೆಯನ್ನ ಕಟ್ ಮಾಡಿದೆ.

ನೀವೆ ನೋಡಿ, ಹೀಗು ಉಂಟೆ ನಮ್ಮಜ್ಜಿ......... ??

-ಯುವಪ್ರೇಮಿ

  • ಅನುಭವ ಕಥನ
~.~
  • Login or register to post comments
  • 285 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 4:51am — pallavi.dharwad

ಉ: ಹೀಗು ಉಂಟೆ ನಮ್ಮಜ್ಜಿ...!!

pallavi.dharwad's picture

ದೂರದಲ್ಲಿರುವ ಮೊಮ್ಮಗನ ಆಸೆ ಅಜ್ಜಿಗೆ ಅರ್ಥವಾಗಿದೆ. ಹಾಗಂತ, ಮಗೂನ್ನ ಎಬ್ಬಿಸಲು ಕಳಿಸಿರಲಿಕ್ಕಿಲ್ಲ. ಹಾಗೆ ಹೇಳುವ ಮೂಲಕ ನಿಮ್ಮಾಸೆಯನ್ನು ಈಡೇರಿಸಿದ ತೃಪ್ತಿ ಆಕೆಯದು.

ಅಜ್ಜಿಯರೇ ಹಾಗೆ, ಮಾಗಿ ರುಚಿಯಾದ ದ್ರಾಕ್ಷಿಯಂತೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 2:03pm — yuvapremi

ಉ: ಹೀಗು ಉಂಟೆ ನಮ್ಮಜ್ಜಿ...!!

yuvapremi's picture

ನಮ್ಮಜ್ಜಿ ಅಷ್ಟು ಮಾಗಿಲ್ಲ ಬಿಡಿ ಪಲ್ಲವಿಯವರೆ,

ಏನು ಅಬ್ಬಬ್ಬ ಅಂದ್ರೆ ೧೬-೧೮ ವಯಸು ಅಷ್ಟೆ..!! Smiling

ನಕ್ಕುಬಿಡಿ ಮತ್ತೆ, ನಮ್ಮಜ್ಜಿ ಎಂದಾದರು ನನಗೆ ವಯಸಾಯ್ತು ಅಂದರೆ ನಾನು ಹೇಳುವುದೇ ಹೀಗೆ..!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಉತ್ತರಿಸಿ
  • ಕಿರುಮನೆ, ನಡುಮನೆ....
  • ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
  • ಅತ್ತೆ-ಸೊಸೆ
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 106 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator