ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ನೀವು ಏನ್ಹೇಳ್ತೀರಿ ?

June 22, 2008 - 10:32am — yuvapremi

ಅನುಪ್ ಕುಮಾರ್ ರವರು ಹೇಳಿದಂತೆ (http://sampada.net/blog/anupkumart/16/02/2007/3200)

"ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ. ಇನ್ನೂ ಕೇಳಿ. ಕಿ.ಮಿ ಗೆ ತಲೆಗೆ ೧ ರೂ ಕೇಳುತ್ತಾರೆ. ಇನ್ನೂ ಕೇಳಿ. ಇಂಧನದ ಬೆಲೆ ಇಳಿದರೆ ಈ ಬಸ್ಸಿನ ಚೀಟಿಯ ಬೆಲೆ ಇಳಿಯುವುದಿಲ್ಲ. ನಿರ್ವಾಹಕನಿಗೆ ಚಿಲ್ಲರೆಯ ತೊಂದರೆಯಾಗುತ್ತದಂತೆ. ಇದು ಯಾವ ಲೋಕದ ಗಣಿತ ಶಾಸ್ತ್ರ ಸ್ವಾಮೀ. ಹೇಗೆ ತರ್ಕ ಮಾಡುವುದು ಇದನ್ನು. ತರ್ಕಶಾಸ್ತ್ರವೇ ಬಿದ್ದು ಹೋಗಿದೆ ಇಲ್ಲಿ. ಏಕೆ ಬಿದ್ದಿದೆ ಅಂದರೆ ಇದು ನಿರ್ಣಯವಾಗುವುದು ಉನ್ನತ ಅಧಿಕಾರಿ, ಮಂತ್ರಿಗಳ ಸಭೆಯಲ್ಲಿ. ಇದು ಹಾಸ್ಯ. ಇದನ್ನು ಇಲ್ಲಿಗೆ ಬಿಡಿ. ಇನ್ನು ವಾಸ್ತವಿಕತೆಗೆ ಬರುವ.

ನಾನು ಇದು ವರೆಗೂ ವಿವರಿಸಿದ್ದು ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬೆ.ಮ.ಸಾ.ಸಂ) ಬಸ್ಸಿನ ದರ. ಇದೇ ಬೆಲೆ ಏರಿಕೆ ಬೇರೆ ರಾಜ್ಯಗಳಲ್ಲಿ ಆಗಿದ್ದಿದ್ದರೆ ಬಸ್ಸಿನೊಡನೆ ಆ ಅಧಿಕಾರಿ ಮಂತ್ರಿಗಳನ್ನು ಸುಡುತ್ತಿದ್ದರು. ಮಾದಲಿ ಬಿಡಿ. ನಾವು ಸೌಜನ್ಯರು. ಎಲ್ಲದರಲ್ಲೂ ಸೌಜನ್ಯ ತೋರಿಸುತ್ತೇವೆ. ಕಷ್ಟ ನಮ್ಮ ಮನೆಯ ಬಾಗಿಲಿಗೆ ಬರುವ ತನಕ ಅದು ನಮ್ಮ ಕಷ್ಟವಲ್ಲ ಎಂದು ಭಾವಿಸುವ ಜನರು ನಾವು.

ಬಹಳಷ್ಟು ಐ.ಟಿ ಜನರಿಗೆ ಈ ಬೆಲೆಯೇರಿಕೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರುಗಳು ಬಸ್ಸಿನಲ್ಲೇ ಓಡಾಡುವುದಿಲ್ಲ. ಇದು ಪರಿಣಾಮ ಬೀರುತ್ತಿರುವುದು ದಿನಗೂಲಿ ಜನರ ಮೇಲೆ, ನಗರದ ಸುತ್ತ ಇರುವ ಗ್ರಾಮೀಣ ಜನರ ಮೇಲೆ ಹಾಗು ಮಧ್ಯಮ ದರ್ಜೆಯ ಜನರ ಮೇಲೆ. ಬರುವ ೨೦೦೦ರೂ ಸಂಭಳದಲ್ಲಿ ಕನಿಷ್ಟ ೫೦೦ರೂ ಬಸ್ಸಿಗೆ ಬೇಕು. ಆಲೋಚನೆ ಮಾಡಿ ಸ್ವಾಮೀ. ತರಕಾರಿ, ಹಣ್ಣು, ದಿನಸಿ ಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಈಗ ೭%. ಜೀವನ ನಡೆಸುವುದು ಸುಲಭವೇ? ಇದಕ್ಕೆ ನಮ್ಮ ತರ್ಕಶಾಸ್ತ್ರದಲ್ಲಿ "Good Inflation predicts Healthy Economy" ಅನ್ನುತ್ತಾರೆ. ಎಂಥಾ ವಿಪರ್ಯಾಸ ಕಣ್ರಿ.

ವಿಷಯಕ್ಕೆ ಮರಳಿ ಬರುವ. ಈ ಪಟ್ಟಿ ನೋಡಿ, ಗಮನಿಸಿ್, ಎಚ್ಚೆತ್ತುಕೊಳ್ಳಿ. (ಶಿವಮೊಗ್ಗೆ, ಚಿಕ್ಕಮಗಳೂರು, ದಾವಣಗೆರೆ, ಚೆನ್ನೈ ನಗರಗಳ ಬಸ್ಸಿನ ದರ ಇದೆ)

ದೂರ ಬೆಂಗಳೂರಲ್ಲಿ ಬೇರೆ ನಗರಗಳಲ್ಲಿ

೩ ಕಿ.ಮೀ ರೂ ೫ ರೂ ೨ - ರೂ ೩

೬ ಕಿ.ಮೀ ರೂ ೭ ರೂ ೩ - ರೂ ೫

೯ ಕಿ.ಮೀ ರೂ ೮ ರೂ ೫ - ರೂ೭

ಪುನಹ ಹೇಳಬಯಸುತ್ತೇನೆ. ೫೦ ಮಂದಿ ಹೊರಬಲ್ಲ ಬಸ್ಸಿನಲ್ಲಿ ಕಿ.ಮೀ ೧ ರೂ ದರ ನಿಗದಿ ಮಾಡುವ ಆ ಸಭೆಯ ಸದಸ್ಯರಿಗೆಲ್ಲಾ ಬುದ್ಧಿಭ್ರಮಣೆಯಾಗಿರಬೇಕು ಕಣ್ರಿ. ನಾವು ಕಟ್ಟುವ ತೆರಿಗೆಯಲ್ಲಿ ಅವರೆಲ್ಲಾ ಕಾರು ಪಡೆದು ಓಡಾಡುತ್ತಾರೆ. ಅದಕ್ಕಾದರೂ ನೀಯತ್ತು ಬೇಡವೇ ಭೋಳಿ ಮಕ್ಕಳಿಗೆ?

ನಮ್ಮ ಮಹಾನಗರಿಯಲ್ಲಿ ಜನರಲ್ಲಿಲ್ಲದ ಒಗ್ಗಟ್ಟೇ ಇದಕ್ಕೆಲ್ಲಾ ಕಾರಣ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಎಲ್ಲರೂ ಸೇರಿ ಒಂದು ಶಾಂತಿಯುತವಾದ ಪ್ರತಿಭಟನೆಯನ್ನೋ, ಅಥವಾ ಸರ್ಕಾರಕ್ಕೆ ಒಂದು ಮನವಿ ಪತ್ರವನ್ನೋ ಸಿದ್ಧಮಾಡಬೇಕು. ಈ ಮಾಹಿತಿ ತಲುಪಿಸಿ. ನಿಮ್ಮ ಸ್ನೇಹಿತರನ್ನೆಲ್ಲ ಸೇರಿಸಿ.

ಬೆ.ಮ.ಸಾ.ಸಂ ಮಹಾಜನರ ಸಾರಿಗೆ. ಮಹಾರಾಜರ ಸಾರಿಗೆ ಆಗಲು ಬಿಡಬಾರದು.

ಇಂತೀ,
ಅನುಪ್ ಮಲೆನಾದು "

ನೀವು ಹೇಳುತ್ತಿರುವುದು ಅಕ್ಷರ ಸಹಿತವಷ್ಟೆ ಅಲ್ಲ, ಕೊಂಬು ದೀರ್ಗಗಳ ಸಹಿತ ಸತ್ಯ.


ನಮ್ಮ BMTC ನವರು ವಾಷಿಕ ಆದಾಯ ಅಂತ ೨೦೦೭-೦೮ ಸಾಲಿನಲ್ಲಿ ಸುಮಾರು ೧೪೦.೨೩ ಕೋಟಿ ಗಳಷ್ಟು ಇದೆ. ಕಳೆದ ವರ್ಷದ ಲಾಭ ೨೨೪ ಕೋಟಿಯು BMTC ಹಿತಿಹಾಸದಲ್ಲೆ ಅತಿ ಹೆಚ್ಚು ಅಂತ ಹೇಳಬಹುದು ಬಿಡಿ.

ಅಲ್ಲ ಈ BMTC ಈ ಲಾಭವನ್ನ ಹೇಗ/ ಏಕೆ ಮಾಡುತ್ತಲಿದೆ ಅನ್ನೋದು ನನಗೊಂತು ಗೊತ್ತಾಗ್ತ ಇಲ್ಲ.
ಯಾರಿಗಾದರು ಇದನ್ನ ಕೇಳಿದರೆ ಅವರು ಒಂದು ದೊಡ್ಡ ಪಟ್ಟಿಯನ್ನೆ ರೆಡಿ ಮಾಡಿ ಮುಂದಿಡುತ್ತಾರೆ. ಅವು ಈ ರೀತಿ ಇವೆ

ಹೊಸ ಬಸ್ ಕರೀದಿ
ವಾಹನ ರಿಪೇರಿ
ವಾಹನ ದ್ವಂಸ ನಿರ್ವಹಣೆ
ಇಂಧನ
ಚಾಲಕನ ಸಂಬಳ
ಮುಂತಾದವು

ಅಲ್ಲ ಸ್ವಾಮಿ, ಈ BMTC ನವರು ಲಾಭದ ದ್ರುಷ್ಟಿಯಲ್ಲಿ ಏಕೆ ಬಸ್ ನಡೆಸಬೇಕು ? ನಮ್ಮ ಜನರು ಕಟ್ಟುತ್ತಲಿರುವ ತೆರಿಗೆ ಸರ್ಕಾರಕ್ಕೆ ಸಾಲ್ತಾ ಇಲ್ವೆ ??
ಈಗಿನ ಲೆಕ್ಕದಲ್ಲಿ ಪ್ರತಿಯೊಬ್ಬ ಪ್ರಯಾಣಿಕನು ತೆತ್ತುತಿರುವ ಟಿಕೆಟ್ ದರವು BMTC ನವರು ಹೇರಿರುವ ಬಸ್ ಉಪಯೋಗದ ಕರ್ಚು,ಚಾಲಕನ ಸಂಬಳ,ಇಂದನ ಎಲ್ಲವು ಸೆರುತ್ತದೆ ಅಲ್ಲವೆ. ಅದರ ಮೇಲು ಇವರಿಗೆ ನೂರಾರು ಕೋಟಿಗಳ ಲಾಭದ ಅವಶ್ಯಕತೆಯಾದರು ಏಕಿದೆ ಅಂತ ಯಾರಾದ್ರು ತಿಳಿದಿದ್ದೀರ ?

ಅಲ್ಲದೆ ಈ BMTC ನವರು ಹೇಳುತ್ತಿರುವ ನೊರಾರು ಕೋಟಿಗಳ ಲಾಭವು ಕೊನೆಯದಾಗಿ ಸರ್ಕಾರದ ಖಜಾನೆಗೆ ಬೀಳುವ ಲಾಭ. ಅಂದರೆ ವಾಹನ ದ್ವಂಸ ನಿರ್ವಹಣೆ, ಇನ್ಶುರೆನ್ಸ್, ತುರ್ತು ಸಂಗ್ರಹ ಅಂತ ಸುಮಾರು ೨೦೦ ಕೋಟಿಯಷ್ಟು ಬಿಟ್ಟು ಉಳಿದ ೧೪೦ ಕೋಟಿಯ ಲೆಕ್ಕ ನಮ್ಮ ಕಣ್ಮುಂದೆ ಇಟ್ಟು ಸರ್ಕಾರ ಸೇರುವ ಲಾಭ.

ನಮ್ಮ ಸರ್ಕಾರ ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಮೇಲೆ ಎಂತೆಲ್ಲ ತೆರಿಗೆ ಹಾಕುತ್ತಿದೆ ಎಂದರೆ,

ಬೆಳಿಗೆ ಎದ್ದು ಹಲ್ಲು ಉಜ್ಜವ ಹಲ್ಲು ಪುಡಿಗೆ ತೆರಿಗೆ
ಸೋಪಿಗೆ ತೆರಿಗೆ
ಶ್ಯಾಂಪುಗೆ ತೆರಿಗೆ
ಸೆಂಟಿಗೆ ತೆರಿಗೆ
ಆಹಾರ ತೆರಿಗೆ
ಸ್ವಂತ ವಾಹನ ತೆರಿಗೆ (ಇದ್ದಲ್ಲಿ)

ಒಂದೆ ಎರಡೆ, ತೆರಿಗೆಯ ಮೇಲೆ ತೆರಿಗೆ.
ಇದ್ಯಾವುದರ ಮೇಲಿನ ತೆರಿಗೆ ಕಟ್ಟುವುದು ತಪ್ಪು ಎಂಬುದು ನನ್ನ ವಾದವಲ್ಲ. ಇದನ್ನು ನಾವು ಕಟ್ಟಲು ನಮಗೆ ಸ್ವಲ್ಪವು ನೋವಿಲ್ಲ.

 

BMTC profit

 


ಆದರೆ, ನಾವು ಪ್ರತಿ ನಿತ್ಯ ಮುಂಜಾನೆದ್ದು ಕೆಲಸಕ್ಕೆ ಹೋದರೆ ತಾನೆ ಸರ್ಕಾರಕ್ಕೆ ನಮ್ಮ ಸಂಬಳದಲ್ಲಿ ಟ್ಯಾಕ್ಸ್ ಕಟ್ಟೋಕೆ ಆಗೋದು. ಈ ಕೆಲಸಕ್ಕೆ ಹೋಗಲು BMTC ಉಪಯೋಗಿಸಬೇಕಾಗುತ್ತದೆ.
ಈಗಾಗಲೆ ತೆರಿಗೆಯ ಮೇಲೆ ತೆರಿಗೆ ಕಟ್ಟಿ ತತ್ತರಿಸಿ ಹೋಗಿರುವ ನಮ್ಮ ಜನರಿಗೆ ಈ BMTC ಯ ಪ್ರಯಾಣ ದರದಿಂದ ಎಂತಹ ಅನ್ಯಾಯ ಆಗ್ತಾಇದೆ ಅನ್ಸೋದಿಲ್ವೆ ನಿಮಗೆ ??
ನಮ್ಮ ಬೆಂಗಳೊರಿನಲ್ಲಿ ಇರುವವರೆಲ್ಲ ಸಾಪ್ಟವೇರ್ ಇಂಜಿನಿಯರ್ ಅಲ್ಲವಲ್ಲ.
ನಮ್ಮಲ್ಲಿ ೮೦% ಕೊಲಿ ಕಾರ್ಮಿಕರು,ಅಂಗಡಿ ವಹಿವಾಟು ಮುಂತಾದುವನ್ನು ಮಾಡಿ ಬದುಕುತಿರುವ ಬಡ ಜನರು ಸ್ವಾಮಿ. ಆದುದರಿಂದ ಈ ಬಡ ಜನರ ಕುತ್ತಿಗೆ ಹಿಸುಕುತ್ತಿರುವ ಈ BMTC ಲಾಭದ ವ್ಯವಹಾರ ಎಷ್ಟರ ಮಟಿಗೆ ಸರಿ ? ನೀವೇ ಹೇಳಿ ?

ಎಲ್ಲದಕಿಂದ ಮುಖ್ಯವಾಗಿ, ಈ ರೀತಿಯ ಅತಿ ಹೆಚ್ಚು ಲಾಭವನ್ನು ಕರ್ನಾಟಕದಲ್ಲಿ BMTC ಮಾತ್ರವೆ ಮಾಡುತಿದ್ದು, ನೆರೆಯ ಚೆನ್ನೈ, ಹೈದರಬಾದ್, ಮುಂಬೈ BMTC ಗೊ ಅತಿ ಕಡಿಮೆ ಇದೆ.

ನಿಮಗೆ ಇನ್ನೊಂದು ವಿಷಯ ತಿಳಿದಿದೆಯೆ ? ನಮ್ಮ BMTC ನವರು ಎಂದಾದರು ನಷ್ಟವಾಯ್ತು ಅಂದರೆ ಅದು ಅವರಿಗೆ ಆಗುತ್ತಿರುವ ನಷ್ಟವಲ್ಲ, ಅದು ಅವರು ಕನಸಿನಲ್ಲಿ ಅಂದುಕೊಂಡ ಲಾಭಕಿಂತ ಕಡಿಮೆ ಬಂದಾಗ, ಈ ವಾಹನ ಸಚಿವರು ಪಂಚೆಯೆತ್ತಿ ಕುಣಿದಾಡುವ ರೀತಿ ಅದು.

೨೦೦೬-೦೬ ಲಾಭ ೧೧೪.೫೮ ಕೋಟಿ, ೨೦೦೬-೨೦೦೭ ಟಾರ್ಗೆಟ್ ೨೨೪ ಕೋಟಿ (ಇದನ್ನು ಇವರು ಗಳಿಸಿ ಆಗಿದೆ). ಇದು ಎಂತ ನ್ಯಾಯವಯ್ಯ ??

ನನ್ನ ಮೇಲಿನ ಮಾತಿನ ಸಾರಂಶವೇನೆಂದರೆ,

ಈ ನಮ್ಮ BMTC ಯ ಟಿಕೆಟ್ ನಿರ್ವಹಣ ವ್ಯವಹಾರ ನಮ್ಮ ಜನರಿಗೆ ನ್ಯಾಯವಾದ ರೀತಿಯಲ್ಲಿ ಇಲ್ಲ, ಮತ್ತು ಅಗತ್ಯಕಿಂತ ಹೆಚ್ಚು ಹಣವನ್ನು ಜನರ ಮೇಲೆ ಏರಲಾಗಿದೆ ಎನ್ನುವುದು ನಮ್ಮ ಕಣ್ಣಿಗೆ ಎದ್ದು ಕಾಡುತ್ತಿದೆ.
ಈ BMTC ನವರು ಬಸ್ಸುಗಳನ್ನು ಕೊಳ್ಳುವಾಗ ಕ್ಯಾಪಿಟಲ್ ಇನ್ವೆಶ್ಟ್ಮೆಂಟ್ ಅಂತ ಕೊಂಡುಕೊಂಡು, ಅದರ ಪೊರ್ಣ ಮೊತ್ತವನ್ನು ಬಸ್ಸಿನ ಜೀವಾವದಿವರೆಗು ಹಂಚಿದ ಬಾಗವನ್ನು ಮಾತ್ರ ಪ್ರಯಾಣಿಕನ ಟಿಕೆಟ್ಟಿನಲ್ಲಿ ಸೇರಿಸಬೇಕು.

ಅಂತೆಯೆ ಉಪಯೋಗಿಸುವ ಇಂದನ, ಪ್ರಯಾಣಿಕನ ಸಂಬಳ, ವಾಹನ ರಿಪೇರಿ ಮತ್ತಿತರ ಮೊತ್ತವನ್ನು ಮಾತ್ರ ಪ್ರಯಾಣಿಕನ ಟಿಕೆಟ್ಟಿಗೆ ಸೇರಿಸ ಬೇಕು.
ವಾಹನ ಗಲಭೆಗಳಿಂದ ದ್ವಂಸವಾದಲ್ಲಿ ಅದನ್ನು ತುಂಬಲು ವಿಮಾ ಕಂಪನಿಗಳು ಕೋಟ್ಯಾಂತರ ಹಣವನ್ನು ಈಗಾಗಲೆ ಪಡೆಯುತ್ತಿವೆ,ಇದು ಅವರ ಜವಾಬ್ದಾರಿ ಅಲ್ಲವೆ ?

ಇದನ್ನು ಬಿಟ್ಟು, ಪ್ರತಿ ಸಾರಿ ಒಂದು ಲೀಟರ್ ಇಂದನದ ಮೇಲೆ 3 ರೊ ಹೆಚ್ಚಾದರೆ, ಈ BMTC ನವರು 10 ರೊ ಹೆಚ್ಚಿಸುವುದು ಯಾವ ಸೀಮೆಯ ನ್ಯಾಯ ಹೇಳಿ.

ಈ ಮೇಲೆ ಹೇಳಿರುವುದೆಲ್ಲವನ್ನು ಬಿಟ್ಟು, ನಮ್ಮ BMTC ಅದಿಕಾರಿಗಳು ತಮ್ಮ ಹೆಂಡತಿ ಮಕ್ಕಳ ಬೊಕ್ಕಸಕ್ಕೆ ಬಹಳಶ್ಟು ಲಾಭಮಾಡುತ್ತಿರುವ ವಿಷಯ ನಮಗೆಲ್ಲ ತಿಳಿದಿದೆ.

BMTC should provide a value based service to people so that they can pay tax to govt, instead they should not irritate people by becoming a burden above the existing tax.

ನೀವು ಏನ್ಹೇಳ್ತೀರಿ ?

"ಮಾಡಿದುಣ್ಣೋ ಮಹರಾಯ"
-ಯುವಪ್ರೇಮಿ

  • ಚಿಂತನೆ
~.~
  • Login or register to post comments
  • 220 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 4:48am — pallavi.dharwad

ಉ: ನೀವು ಏನ್ಹೇಳ್ತೀರಿ ?

pallavi.dharwad's picture

ಉತ್ತಮ ಲೇಖನ ಯುವಪ್ರೇಮಿಯವರೇ,

ಬಿಎಂಟಿಸಿ, ಕೆಎಸ್ಸಾರ್ಟಿಸಿ ಇವು ಸಾರ್ವಜನಿಕ ಸೇವಾ ಸಂಸ್ಥೆಗಳಂತೆ ವರ್ತಿಸಬೇಕೇ ವಿನಾ ಲಾಭಕ್ಕಾಗಿಯೇ ಯತ್ನಿಸಬೇಕಾದ ಖಾಸಗಿ ಸಂಸ್ಥೆಗಳಲ್ಲ. ಹಾಗಂತ ಅವು ಲಾಭ ಮಾಡಬಾರದು ಎಂದೇನೂ ಇಲ್ಲ. ಸಾರ್ವಜನಿಕರು ಕಷ್ಟದಲ್ಲಿದ್ದಾಗ, ಅವರಿಗೆ ಹೊರೆಯಾಗದಂತೆ ಅವು ಸೇವೆ ನೀಡಬೇಕು. ಸರ್ಕಾರಕ್ಕೆ ಸರ್ಕಾರವೇ ಲಾಭಕೋರ ದೃಷ್ಟಿಯಿಂದ ವರ್ತಿಸಿದರೆ ಜನ ಅಡ್ಡಮಾರ್ಗದ ಮೂಲಕ ಬಚಾವಾಗಲು ಯತ್ನಿಸುತ್ತಾರೆ. ಇದು ಅನಾಚಾರಕ್ಕೆ, ಅಕ್ರಮ ಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ.

ತೆರಿಗೆ ಇಳಿಸಲು ಲಾಭಾಂಶದ ಪ್ರಮುಖ ಪಾಲನ್ನು ಕೊಡಬೇಕಾಗಿದ್ದು ಸರ್ಕಾರಿ ಸಂಸ್ಥೆಗಳ ಕರ್ತವ್ಯ. ತೈಲೋತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಇಳಿಸಿದಂತೆ, ಬಸ್‌ ಪ್ರಯಾಣ ದರವನ್ನೂ ವೈಜ್ಞಾನಿಕ ದೃಷ್ಟಿಯಿಂದ ರೂಪಿಸುವ, ಎಲ್ಲಕ್ಕಿಂತ ಮುಖ್ಯವಾಗಿ, ಜನಪರವಾಗಿಸುವ ನಿಟ್ಟಿನಲ್ಲಿ ಮಾಡಬೇಕಿದೆ. ದಯವಿಟ್ಟು ನಿಮ್ಮ ಬರವಣಿಗೆಯನ್ನು, ಕೊಂಚ ತಿದ್ದಿ, ಗಾತ್ರ ಕಿರಿದುಗೊಳಿಸಿ, ಬೈಗುಳ ತೆಗೆದುಹಾಕಿ, ದಿನಪತ್ರಿಕೆಗಳ ಓದುಗರ ಓಲೆ, ವಾಚಕರ ವಾಣಿ ವಿಭಾಗಕ್ಕೆ ಕಳಿಸಿಕೊಡಿ. ತಮ್ಮನ್ನು ಹೇಗೆ ಲೂಟಿ ಮಾಡಲಾಗುತ್ತಿದೆ ಎಂಬುದನ್ನು ಜನರೂ ಅರ್ಥ ಮಾಡಿಕೊಳ್ಳಲಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 1:56pm — yuvapremi

ಉ: ನೀವು ಏನ್ಹೇಳ್ತೀರಿ ?

yuvapremi's picture

ವಂದನೆಗಳು ಪಲ್ಲವಿಯವರೆ,

ಇದು ಕೇವಲ BMTC ಯದಷ್ಟೆ ಅಲ್ಲ, ನಮ್ಮ ಸರ್ಕಾರದ ಎಷ್ಟೋ ಯೋಜನೆಗಳು ಕೇವಲ ಲಾಭದ ದೃಶ್ಟಿಯಿಂದಲೇ ಹುಟ್ಟಿ ಬೆಳೆಯುತ್ತಿವೆ. Sad
ನಮ್ಮ ಬಡವರನ್ನು ಜನ್ಮ ಜನ್ಮಕ್ಕು ಬಡವರನ್ನಾಗಿಸಿಯೇ ಸರ್ಕಾರ ಜೀವಿಸುತಿದೆ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • BMTC - ಬೆಂಗಳೂರು "ಮಹಾರಾಜರ" ಸಾರಿಗೆ ನಿಗಮ
  • ಇವರೀಗ ಯಾವ ಕಾಲದಲ್ಲಿದ್ದಾರೆ!
  • ಮೆಟ್ರೋ ರೈಲು ಸರಿ ಆದರೆ ಹಳಿ ತಪ್ಪು ದಾರಿ
  • ಅಬ್ಬಬ್ಬಾ ಬೆಂಗಳೂರಿನ ಭಯಾನಕ ಟ್ರಾಫಿಕ್
  • ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 159 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator