ಸಾಮಾನ್ಯವೇ?
ಸಾಮಾನ್ಯವೇ?
ಮೇಲಕ್ಕೇರಿದವ ಇಳಿಯಲೇಬೇಕು
ನಿಧಿ ಶೋಧನೆ ಎಂದರೆ
ಸಾಮಾನ್ಯವೇ?
ಇಳಿದಿಳಿದು ದಣಿಯಲೇಬೇಕು
ಹನಿಹನಿಗೂಡುವುದೆಂದರೆ
ಸಾಮಾನ್ಯವೇ?
ದಣಿದಣಿದು ಹೆಣಗಾಡಲೇಬೇಕು
ಕಳೆದುದು ದೊರಕುವುದೆಂದರೆ
ಸಾಮಾನ್ಯವೇ?
ಹೆಣಗಾಡಿ ಹುಡುಕಾಡಲೇಬೇಕು
ನೆಲದಾಳದಾ ನಿಧಿ ಎಂದರೆ
ಸಾಮಾನ್ಯವೇ?
ಹುಡುಕಿದರೂ ಇಳಿದಿಳಿದು ದಣಿದರೂ
ವರುಣನ ಕರುಣೆಗೆ
ಬರ ತರಿಸಿದ ನಮ್ಮಪರಾಧವೇನು
ಸಾಮಾನ್ಯವೇ?

- Login or register to post comments
- 130 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: