ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ರಾಗಿ ಮುದ್ದೆ ಮಿಶಿನ್! (Finger Millet machine)

June 27, 2008 - 5:20pm — yuvapremi

ಬರುತ್ತಿದೆ ರಾಗಿ ಮುದ್ದೆ ಮಾಡೊ ಮಿಶಿನ್........!  ಹೆಂಗಸರೆಲ್ಲ ಬಹುಶಃ ಗಾಬರಿಯಾದಂತ ಕಾಣ್ತಾಯಿದೆಯಲ್ಲ........!!

ಹೌದು, ಮುದ್ದೆ ಮಾಡೊ ಯಂತ್ರ ಬಂದರೆ ಹೆಂಗಸರಿಗೆ ಅರ್ಧ ಗೇಟ್ ಪಾಸ್ ಕೊಟ್ಟ ಹಾಗೆ ಅಲ್ವೆ ? (ತಮಾಶೆಗೆ ಹೇಳಿದೆ, ನನ್ನನ್ನು ತರಾಟೆಗೆ ತೆಗೆದುಕೊಳ್ಳಬೇಡಿ ಪ್ಲೀಸ್...!!) Smiling

ಕರ್ನಾಟಕದಲ್ಲಿನ ಎಲ್ಲ ಜಿಲ್ಲೆಯಲ್ಲು ರಾಗಿ ಮುದ್ದೆ ಅಷ್ಟು ಪ್ರಸಿದ್ದಿ ಇಲ್ಲವೆಂಬುದು ನನಗೆ ಬಂದಂತಹ ಸುದ್ದಿ.
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿಗೆ ಬಹಳ ಪ್ರಸಿದ್ದಿ ಇದೆ ಹಾಗೆಯೇ ಕರಾವಳಿಯಲ್ಲಿ ಇಡ್ಲಿ,ದೋಸೆ ಹಾಗು ಹಬೆಯಲ್ಲಿ ಮಾಡಿದ ಪದಾರ್ಥಗಳು ಪ್ರಸಿದ್ದಿ ಅಂತಲೊ ಕೇಳಿದ್ದೇನೆ.
ಆದರೆ ನಮ್ಮ ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುದ್ದೆ ಎಂದರೆ ಮನೆಯಲ್ಲಿನ ಮಂದಿಯ ಮೈ ಪುಳಕವಾಗುತ್ತದೆ. ಅಂತೆಯೆ ಈ ಪ್ರಾಂತದ ವಧುವರಾನ್ವೇಷಣೆಯಲ್ಲಿನ ಸೆರಮಾಲೆಯ ಪ್ರಶ್ನಾವಳಿಯಲ್ಲಿ ಹುಡುಗಿಗೆ ರಾಗಿ ಮುದ್ದೆ ಮಾಡಲು ಬರುವುದೆ ಎನ್ನುವುದೊ ಕೊಡ ಒಂದು.
ಮುದ್ದೆ ಮಾಡಲು ಬರುವುದಿಲ್ಲ ಅಂದ್ರೆ ಹುಡುಗಿಯನ್ನು ಬಹಳ ಸ್ಟೈಲಿಶ್ ಅಂಡ್ ಮಾಡರ್ನ್ ಅಂತಲು ಹಲವು ಬಾರಿ ಹೆಸರಿಸಲಾಗಿ ತಿರಸ್ಕರಿಸಲಾಗುತ್ತದೆ. Sad

(ದಯವಿಟ್ಟು ಕರ್ನಾಟಕವನ್ನು ರಾಗಿ ಮುದ್ದೆ ತರಹ ಕಿತ್ತು ವಿಂಗಡಿಸಿದೆ ಎಂದು ಶಪಿಸ ಬೇಡಿ...!!)

ಅದಲ್ಲದೆ ರಾಗಿ ಮುದ್ದೆ ಎಂದರೆ ಗಂಡಸರಿಗೊಂತು ಗುಂಡು ಹಾಕಿದಷ್ಟು ಗಮ್ಮತ್ತಿರುವ ತೀರ್ಥದಂತೆ. ಅದಕ್ಕಾಗಿ ನಮ್ಮ ಹುಡುಗರು ರಾಗಿ ಮುದ್ದೆ ಮಾಡುವ ಮಡದಿಯನ್ನ ನೀಡು ತಂದೆ ಎನ್ನುತ್ತ ಕನಸಿನ ಮನಸಿನಲ್ಲಿ ದೇವರಲ್ಲಿ ಉರುಳುಸೇವೆಯನ್ನು ಮಾಡುತ್ತಿರುತ್ತಾನೆ.

ರಾಗಿ ಮುದ್ದೆಯನ್ನು ಕೇವಲ ಮಾಡಲು ಬಂದರೆ ಸಾಲದು, ಸರಿಯಾಗಿ ಗುಂಡಾಕಾರದಲ್ಲಿ ಗಂಟುಗಳಿಲ್ಲದೆ ಕಿತ್ತು ತಿನ್ನಲು ಬಹು ಸುಲಭವೆನಿಸುವಂತೆ ಮಾಡಬೇಕು.ಆದರೆ ಈಗಿನ ಯುಗದಲ್ಲಿ ಹುಡುಗಿಯರು ರಾಗಿಯನ್ನೆ ಮರೆತಿರುವುದರಿಂದ ಮುದ್ದೆ ಎಲ್ಲಿ ಬಂದೀತು ಹೇಳಿ. Shocked

ಇಂತಹ ಕಟು ಸತ್ಯವನ್ನು ನುಂಗಿ, ರಾಗಿಮುದ್ದೆಯನ್ನು ನುಂಗಲು ಆಗದಕ್ಕೆ ವ್ಯಥೆ ಪಡುತ್ತಲಿರುವ ನಮ್ಮ ನಿಮ್ಮಂತಹ ಅವಿವಾಹಿತ ಹುಡುಗರನ್ನು ಶ್ರೀ ರಾಗಿ ಗುಡ್ಡ ಆಂಜನೇಯ ಸ್ವಾಮಿಯೇ ಕಾಪಾಡಬೇಕು. Sad

ಆದರೆ ಹೆದರ ಬೇಡಿ ಗೆಳೆಯರೆ, ನಾನಿರುವುದೆ ನಿಮಗಾಗಿ....!!  Eye-wink

ನಾನು ಈಗತಾನೆ ನನ್ನ ಸ್ನೇಹಿತರ ಹತ್ತಿರ ಮಾತನಾಡುತಿದ್ದೆ. ಆತ ನನಗೆ ತನ್ನ ಸಾಪ್ಟವೇರ್ ಮಾಡ್ಯುಲ್ ಮುಗಿದಿದೆಯೇ ಎಂದು ಕೇಳಿದರು, ಅದಕ್ಕ ನಾನು "ಏನು ಮಾಡ್ಯುಲ್ ಮುಗಿಯೋದ ?, ನಿಮ್ಮ ಮಾಡ್ಯುಲ್ ಏನು ರಾಗಿ ಮುದ್ದೆ ಮಾಡಿದಷ್ಟು ಸುಲಭವೇ...!" (ನನಗೆ ರಾಗಿ ಮುದ್ದೆ ಮಾಡಲು ಸ್ವಲ್ಪವೊ ಕಷ್ಟವಿಲ್ಲ, ಅದಕ್ಕೆ ಹೀಗೆ ಹೇಳಿದ್ದು) ಎಂದೆ.
ಅದಕ್ಕೆ ಅವರು "ರಾಗಿ ಮುದ್ದೆ ಮಾಡಲು ಯಂತ್ರಗಳು ಇಲ್ಲವೆ ದೊಡ್ಡ ದೊಡ್ಡ ಹೋಟಲ್ ನಲ್ಲಿ ಅಂದರು"..!

ಅವರ ಮಾತು ನಿಜ, ದೊಡ್ಡ ದೊಡ್ಡ ಹೋಟಲ್ ನಲ್ಲಿ ರಾಗಿ ಮುದ್ದೆ ಮಾಡುವ ಯಂತ್ರವಿದೆ ಆದರೆ ಅದು ಬರೆ ಅರ್ಧ ಕೆಲಸವನ್ನು ಮಾಡುತ್ತದೆ. ಅಂದರೆ ಈ ಯಂತ್ರಗಳು ಬರೆ ಕುದಿಯುವ ರಾಗಿ ಹಿಟ್ಟನ್ನು ತಿರುಗುವ ಕೆಲಸವನ್ನು ಮಾಡುತ್ತದೆ.ಆದರೆ ದೊಡ್ಡ ದೊಡ್ಡ ಹೋಟಲ್ ನಲ್ಲಿ ಇರುವ ಯಂತ್ರಕ್ಕು ನಮಗೊ ಏನು ಸಂಬಂಧ ? ನಾವು ಪ್ರತಿ ದಿವಸ ಹೋಟಲ್ಗೆ ಹೋಗೊದಕ್ಕೆ ಆಗೊದಿಲ್ಲ ಅಲ್ವ ?? Shocked

ಅದಕ್ಕೆ ನನ್ನ ಮಂಡೆಯಲ್ಲಿ ಮೆಲ್ಲನೆ ಮೊಡಿದ ಮಂತ್ರ ಏನು ಗೊತ್ತೆ ? ಅದೆ ನಾವು ಏಕೆ ಒಂದು ಕಂಪ್ಯಾಟಿಬಲ್ ಅಂಡ್ ಮೊಬೈಲ್ ರಾಗಿ ಮುದ್ದೆ ಮಾಡುವ ಯಂತ್ರವನ್ನು ಕಂಡುಹಿಡಿಯ ಬಾರದು ಎಂದು.
ನೀವು ಕೇಳಬಹುದು, ರಾಗಿ ಮುದ್ದೆ ಏನು ಪ್ರಪಂಚದ ತಿನಿಸು ಅಲ್ಲವಲ್ಲ, ಅದಕ್ಕೆ ಅಷ್ಟು ಕರ್ಚು ಮಾಡಿ ರಿಸರ್ಚ್ ಮಾಡಿ ಯಂತ್ರ ಯಾಕೆ ಅಂತ..!
ಆದರು ಅಂತದೊಂದು ಯಂತ್ರವಿದ್ದರೆ ಹೇಗಿರುತ್ತದೆ , ಅದರಿಂದ ನಮ್ಮ ದೇಹಾರೋಗ್ಯ ಹೇಗಿರುತ್ತದೆ ಅಂತ ಯೋಚನೆ ಮಾಡಿ..! Smiling

ಯಂತ್ರದ ಆಕಾರ ಮತ್ತು ಕಾರ್ಯವೈಕರಿ:

 

raagi mudde machine

೧) ಈ ರಾಗಿ ಮುದ್ದೆ ಮಾಡುವ ಯಂತ್ರವು ನಮ್ಮ ಓವನ್ ಗಿಂತ ಸ್ವಲ್ಪವೆ ಅಗಲ ಅಳತೆಯುಳ್ಳದ್ದಾಗಿರಬೇಕು.
೨) ಯಂತ್ರವು ದಬ್ಬಾಕಾರದಲ್ಲಿ ಇರಬೇಕು.
೩) ಯಂತ್ರದ ಮೇಲ್ಬಾಗದಲ್ಲಿ ೨ ಬಾಯಿ ಇರಬೇಕು.
ಅ) ಮೊದಲನೆ ಬಾಯಿಯಲ್ಲಿ ರಾಗಿ ಹಿಟ್ಟು ಹಾಕಲು.
ಆ) ಎರಡನೆ ಬಾಯಿಯಲ್ಲಿ ಯಂತ್ರವೇ ನಿಗದಿ ಪಡಿಸಿರುವ ನಿರ್ದಿಷ್ಟ ಅಳತೆಯ ನೀರು ಸುರಿಯಲು (ಮುದ್ದೆ ಗಂಜಿಯಗುವುದನ್ನು ತಡೆಯಲು ಇದು ಬಹಳ ಮುಖ್ಯ).
೪) ಯಂತ್ರದ ಮುಂಬಾಗದಲ್ಲಿ ರಾಗಿ ಮುದ್ದೆ ತಯಾರಾಗಿ ಹೊರಬರಲು ಬಾಯಿ ಇರಬೇಕು.
೬)ಈ ಯಂತ್ರವು ನಮ್ಮ ಸ್ಟಾರ್ಬಗ್ಸ್ ಕಾಫ಼ಿ ವೆಂಡಿಂಗ್ ಯಂತ್ರದ ತರಹ ಮೇಲೆ ರಾಗಿ ಹಾಕಿ ನೀರು ಹಾಕಿದರೆ, ಸ್ವಲ್ಪ ಸಮಯದ ನಂತರ ಬಿಸಿ ಬಿಸಿ ಮುದ್ದೆಯನ್ನು ತಿರುಪತಿ ಲಾಡು ಇಟ್ಟಂತೆ ನಮ್ಮ ಕೈಗೆ ಇಡಬೇಕು.

ಇಂತಹ ಒಂದು ಯಂತ್ರವು ನಮ್ಮ ಅವಿವಾಹಿತ ಹುಡುಗರಿಗೆ ಒಂದು ವರದಾನವಾಗುತ್ತದೆ ಅಲ್ಲವೆ ? Smiling

ಈ ಯಂತ್ರದಿಂದ ಅತಿ ಹೆಚ್ಚಿನ ರೀತಿಯಲ್ಲಿ ಹೊಟ್ಟೆಗೆ, ನಾಡಿಗೆ, ದೇಶಕ್ಕೆ ಮತ್ತು ಪ್ರಪಂಚಕ್ಕೆ ಬಹಳ ಉಪಯೋಗವಿದೆ ರೀ......!!

ಈ ಯಂತ್ರದಿಂದಾಗುವ ಉಪಯೋಗಗಳು :  

೧) "ಅಮೇರಿಕಾಕೆ ಬಂದ್ರು ಅನ್ನಕ್ಕೆ ಅತ್ರಂತೆ" ನೋಡಿ. ನಮಗೆ ರಾಗಿ ಮುದ್ದೆ ಸಿಗಬಹುದಿದ್ದರೆ ನಾವು ಏಕೆ ಅನ್ನಕ್ಕೆ ಮೊರೆ ಹೋಗಬೇಕು. ರಾಗಿ ಇಂದ ಅನ್ನಕ್ಕೆ ಅಂಟಿರುವ ಬೇಲೆಯ ಕಳಂಕ  ತಪ್ಪುತ್ತದೆ. Smiling
೨) ಹೆಚ್ಚಾಗಿ ರಾಗಿ ಕರ್ನಾಟಕದವರು ಮಾತ್ರವೆ ಉಪಯೋಗಿಸುವುದರಿಂದ, ನಾವು ಉಪಯೋಗಿಸದ ಅನ್ನವನ್ನು ಆಫ಼್ರಿಕಾದಂತಹ ಕಂಡಗಳಲ್ಲಿ ಹಸಿವಿನಿಂದ ಪ್ರಾಣ ಬಿಡುತ್ತಿರುವವರಿಗೆ ವಿತರಿಸಬಹುದು. ಇದರಿಂದ ಪ್ರಪಂಚದ ಆಹಾರ ಕೊರತೆ ನೀಗುತ್ತದೆ ಅಲ್ಲವೆ ? Smiling
೩) ನಾರಿ ಮಣಿಗಳು ಮುದ್ದೆ ಮಾಡಲು ಬರದುದಕ್ಕೆ ತಮ್ಮ ಪತಿಯರಿಂದ ರಾಗಿ ತಿರುಗುವ ಕೋಲಿನಿಂದ ಒದೆ ತಿನ್ನುವ ಸ್ತಿತಿ ತಪ್ಪುತ್ತದೆ. Sad
೪) ಎಲ್ಲದಕಿಂತ ಮಿಗಿಲಾಗೆ, ಗಂಡಸರು ರಾಗಿ ಮುದ್ದೆಗಾಗಿ ಹೆಂಗಸರ ಮೊರೆ ಹೋಗಬೇಕಾಗಬಹುದಾದ ಎಲ್ಲ ಸಂದರ್ಭವನ್ನು ತಪ್ಪಿಸುತ್ತದೆ. ಇದರಿಂದ ಗಂಡಸರು ಸೆಲ್ಪ್ ಡಿಪೆಂಡೆಂಟ್ ಆಗುತ್ತಾರೆ. Smiling
೫) ಇಂತಹ ರಾಗಿ ಮುದ್ದೆ ಯಂತ್ರದಿಂದ ಜನಸ್ಯಂಖೆ ನಿಯಂತ್ರಣ ಕೋಡ ಮಾಡಬಹುದುಪ್ಪ. ಹೇಗೆ ಅಂದ್ರ ? Shocked
ಮದುವೆಯಾದರೆ ತಾನೆ ಜನಸ್ಯೆಂಖೆ ಹೆಚ್ಚುವ ಪ್ರಮೇಯ ? ಇಂತಹ ಒಂದು ರಾಗಿ ಮುದ್ದೆ ಯಂತ್ರವನ್ನು ಇಟ್ಟುಕೊಂಡ ನಮ್ಮ ಹುಡುಗರು ಕಿರಿಯ ವಯಸಿನಲ್ಲೆ ಮದುವೆಗೆ ಗಂಟುಬೀಳುವುದು ತಪ್ಪುತ್ತದೆ ಅಲ್ಲವೆ ? Eye-wink

ನೋಡಿ, ಯೋಚನೆ ಮಾಡಿ.
ನಾವು ರಾಗಿ ಮುದ್ದೆ ಮೋಹಿತರನೆಲ್ಲ ಒಂದೆಡೆ ಒಟ್ಟುಗೊಡಿಸಿ ಸಂಘ ಕಟ್ಟಿ ರಾಗಿ ಮುದ್ದೆ ಡೆವಲಪ್ಮೆಂಟ್ ಟೀಮ್ ಮಾಡಿಕೊಳ್ಳೋಣ. Smiling

ಇಂತಹ ಒಂದು ಪ್ರಪಂಚಕ್ಕೆ ಹಿತಬಯಸುವ ಯಂತ್ರವನ್ನು ಮಾಡಲು ನಮ್ಮ ಯಡಯೊರಪ್ಪ ರಿಂದ ರಾಜ್ಯದ ಬಡ್ಜಟ್ ನಲ್ಲಿ ಒಂದಷ್ಟು ದುಡ್ಡು ಕೊಡ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳೋಣ. Smiling

ನೀವು ಏನ್ಹೇಳ್ತೀರಿ ??

ಹೆಂಗಸರು "ಅಬ್ಬ ನಮ್ಮ ಕೈಗೆ ಬಿಡುಗಡೆ ಸಿಗ್ತು" ಅಂತ ಅಂದ್ಕೊಬೇಡಿ. ನಾವು ಇನ್ನು ಸಾರು ಮಾಡುವ ಯಂತ್ರ ಮಾಡಿಲ್ಲ. ಅದು ಇನ್ನೊ ನಿಮ್ಮ ಜವಾಬ್ದಾರಿಯೆ ಅಲ್ಲವೆ. (ಬೇಸರ ಮಾಡ್ಕೊಬೇಡಿ ಪ್ಲೀಸ್..!)

ಇನ್ನೊಂದು ಮುಖ್ಯ ವಿಚಾರ : ಈ ಐಡಿಯಾ ತಂದಿಟ್ಟ ನಮಗೆ ಯಂತ್ರ ತಯಾರಿಸುವ ಮುನ್ನ ಪೇಟೆಂಟ್ ತರಹ ಒಂದಷ್ಟು ಹಣವನ್ನು ಕೊಡಬೇಕುಪ್ಪ. ಸರಿನಾ....!

[ನಾನು ಈ ಮೇಲೆ ಬರೆದಿರುವುದರಲ್ಲಿ ಎಲ್ಲವು ಸತ್ಯವಿದೆ..! ಆದಕಾರಣ ಈ ಮೇಲೆ ಹೇಳಿರುವುದಕೆಲ್ಲ ನಾನು ಮಾತ್ರವೇ ಜವಾಬ್ದಾರನು, ನನ್ನ ಕಂಪ್ಯುಟರ್ ಅಲ್ಲ]
-ಯುವಪ್ರೇಮಿ

  • ಚಿಂತನೆ
~.~
  • Login or register to post comments
  • 517 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2008 - 6:53pm — vikashegde

ಉ: ರಾಗಿ ಮುದ್ದೆ ಮಿಶಿನ್...! Raagi cookie machine..!!

vikashegde's picture

ಹ್ಹ ಹ್ಹ.. ಯುವಪ್ರೇಮಿಗಳೇ ಸೂಪರ್ .

ಆ ಚಿತ್ರ ಅಂತೂ ಅದ್ಭುತ.

ಯಾವುದಾದರೂ ಮ್ಯಾಗಜೀನ್ ಗೆ (ಸುಧಾ ಇತ್ಯಾದಿ) ಕಳಿಸಿಕೊಡಿ ಈ ಲೇಖನವನ್ನು. ಚೆನ್ನಾಗಿರುತ್ತದೆ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 6:54pm — yuvapremi

ಉ: ರಾಗಿ ಮುದ್ದೆ ಮಿಶಿನ್...! Raagi cookie machine..!!

yuvapremi's picture

ಹೌದೆ ? ಹಾಗಿದ್ರೆ ಕಂಡಿತ ಕಳಿಸಿಕೊಡ್ತಿನಿ..! Smiling

ವಂದನೆಗಳು...!!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:37pm — Rajeshwari

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

Rajeshwari's picture

ಸಾರು,ಹುಳಿ,ಗೊಜ್ಜು,ಚಟ್ನಿ, ಹೀಗೆ ಎಲ್ಲಾ ಮಾಡೋದಕ್ಕು ಒಂದು ಯಂತ್ರ ಕಂಡು ಹಿಡಿದಿದ್ರೆ ತುಂಬ ಅನುಕೂಲವಾಗುತ್ತಿತ್ತೇನೊ, ನಮಗೂ ಕೂಡ ರೆಸ್ಟ್ ಸಿಗುತ್ತೆ.
ಆಗ ಯಾರ ಹಂಗು ಯಾರಿಗೂ ಇರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 7:43pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಹೊ...! ಒಬ್ಬಟು ಯಾಕೆ ಬಿಟ್ರಿ...?? Eye-wink
ಹೌದು, ಎಲ್ಲದಕ್ಕು ಯಂತ್ರಗಳು ಇದ್ದರೆ ಬಹಳ ಉಪಯುಕ್ತ ಹಾಗು ಯಾರ ಹಂಗೊ ಯಾರಿಗು ಬೇಕಿಲ್ಲ. Smiling
ಆದರೆ ಯಂತ್ರವಿದ್ದಮೇಲೆ ಬದುಕಲು ಕಾರಣಗಳೆ ಇಲ್ಲದಂತಾದರೆ ಏನು ಮಾಡುವುದು...!! Shocked

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:21pm — cmariejoseph

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

cmariejoseph's picture

ಬಿಸಿ ರಾಗಿಮುದ್ದೆ ಜೊತೆಗೆ ನಾಟಿ ಕೋಳಿ ಸಾರು ಇದ್ದರೆ ಅದರ ಗಮ್ಮತ್ತೇ ಬೇರೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:25pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಹೋ...!!
ಹಾಗದ್ರೆ ನಿಮಗೆ ನಾಟಿ ಕೋಳಿ ಸಾರು ಮಾಡುವ ಯಂತ್ರ ಬೇಕೆ ? ಕೋಳೀ ಹಿಡಿಯುವ ಯಂತ್ರ ಕೊಡ ಮಡಬಹುದು..! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:36pm — Rajeshwari

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

Rajeshwari's picture

ಹೌದಲ್ವಾ ಅದನ್ನು ಸೇರಿಸಿಕೊಳ್ಳಿ ಪರ್ವಾಗಿಲ್ಲ. ಬದುಕುವ ಅಗತ್ಯ ಏತಕ್ಕೆ ಬೇಕೆಂದರೆ ಅವನ್ನು ಕೊಂಡುಕೊಳ್ಳಲು.....ಏನಂತೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:32pm — poornimas

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

poornimas's picture

ಸೂಪರ್ರಾಗಿದೆ ರಾಗಿ ಮುದ್ದೆ ಮೆಶೀನ್!
ಹಾಗೇ ಸ್ವಲ್ಪ ಬೇರೆ ಬೇರೆ ಶೇಪ್ಸ್ ಮುದ್ದೆ ಮಾಡೋ ಥರ ವ್ಯವಸ್ಥೆನೂ ಮಾಡಿಬಿಡಿ. ಮಕ್ಕಳಿಗೆ ಮುದ್ದೆ ಕೋಲು ಮಾಡಿಕೊಡೋ ಕಷ್ಟವೂ ತಪ್ಪುತ್ತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:39pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಇಲ್ಲಪ್ಪ...!! ಅವೆಲ್ಲ ಪ್ರಕೃತಿಯ ನೀತಿಗೆ ವಿರೋಧವಾಗುತ್ತದೆ. Sad

ಮಕ್ಕಳಿಗೆ ತಾಯಂದಿರೆ ತುತ್ತು ಮಾಡಿ ಉಣಿಸಬೇಕು. ಇಲ್ಲ ವಾದರೆ ನಾಳೆ ಅವರು ನಿಮ್ಮನ್ನು ಬಿಟ್ಟು ರಾಗಿ ಮುದ್ದೆ ಯಂತ್ರವನ್ನು ಮಮ್ಮಿ ಅಂತ ಕರೆದರು ಕರೆಯಬಹುದು...! Shocked

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:49pm — poornimas

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

poornimas's picture

ಹೋಗಲಿ ಬಿಡಿ, ರಾಗಿ ಮುದ್ದೇ ಮಾಡಕ್ಕೆ ಅಲ್ಲದಿದ್ದರೂ ಮಕ್ಕಳಿಗೆ ತಿನ್ನಿಸಕ್ಕಾದರೂ ಅಮ್ಮ ಬೇಕಾದಳಲ್ಲಾ Smiling

ನೀವು ಈ ಲೇಖನವನ್ನು ಇನ್ನಿತರ ಪತ್ರಿಕೆಗಳಿಗೆ ಖಂಡಿತ ಕಳಿಸಿ, ಬಹಳ ಸೊಗಸಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 8:54pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಅನಂತ ವಂದನೆಗಳು ಮ್ಯಾಡಮ್...!! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 10:30pm — raghava

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

raghava's picture

ಇಲ್ಲಿ ಯೋಚಿಸಿದ್ದ ಹಾಗೆ ಮೈಕ್ರೋವೇವ್ ನಲ್ಲಿ ಮುದ್ದೆ ಮಾಡೋ ಪ್ರಯತ್ನ ಮಾಡಿದ್ದೆ ... ಅಡಿಗೆ ಮನೆ/ಮೈಕ್ರೋವೇವ್ ಎಲ್ಲ ರಣಾ ರಾಡಿ ಆಗಿದ್ದೇ ಬಂತು Smiling ಮರೆಯಲಾರದ ಅನುಭವ ...

--_ರಾಘವ_
http://raghavan.vinay.googlepages.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2008 - 11:20pm — hpn

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

hpn's picture

ಹೆ ಹೆ. ಈ ಬಗ್ಗೆ ಬ್ಲಾಗ್ ಮಾಡು ಮಾರಾಯ Smiling

(ಹಾಗೆಯೇ ಈಗ ಹಾಕಿಕೊಂಡಿರುವ ಫೋಟೋ ಎಷ್ಟು ವರ್ಷ ಹಳೇದು?)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 3:25pm — sreekrishna

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

sreekrishna's picture

Ee tarahada idia tumba olleyadu . adare orginalnallaShTu taste irutte illavo gottilla. idarinda hudugiyarigantu tumba anukulavagabahudu. city hudugiyaru idarinda mudde madi gandandirinda shahabbas padeyabahudu. Any how Thanks to good idiea.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 4:22pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಶ್ರೀ ಕೃಷ್ಣ ರವರೆ,

ಐಡಿಯಾ ಮೆಚ್ಚಿದಕ್ಕೆ ವಂದನೆಗಳು. Smiling
ಹೌದು, ಒರಿಜಿನಲ್ ಮುದ್ದೆಯಷ್ಟು ಈ ಯಂತ್ರ ರುಚಿ ನೀಡದಿರಬಹುದು. ಆದರೆ ಮುದ್ದೆಗೆ ಒರಿಜಿನಲ್ ರುಚಿಯಾವುದು ? ನಮ್ಮ ಮೈಸೊರು ಮಲ್ಲಿಗೆಗೆ ಹೇಗೆ ಪೇಟೆಂಟ್ ಸಿಕ್ಕಿದ್ಯೊ ಹಾಗೆ ಮೊದಲು ಮುದ್ದೆಗೆ ಪೇಟೆಂಟ್ ದೊರಕಲಿ. ಆವಾಗ ಮಾತ್ರ ಮುದ್ದೆಯ ರುಚಿ ಸ್ಟ್ಯಾಂಡರ್ಡ್ ರುಚಿಯಂತಿದೆಯೊ ಇಲ್ಲ ವಿಚಿತ್ರ ರುಚಿಯೊ ಎಂದು ಯೋಚಿಸಬಹುದು. Eye-wink

ಈ ಯಂತ್ರದಿಂದ ಹೆಚ್ಚಿನ ರೀತಿಯಲ್ಲಿ ನಮ್ಮ ನಿಮ್ಮಂತಹ ಹುಡುಗರಿಗೆ ಉಪಯುಕ್ತ ಎಂಬುದು ನಮ್ಮ ಅನಿಸಿಕೆ ಏಕೆಂದರೆ ಇಂದಿನ ಜಾಹತೀಕ ಪ್ರಪಂಚದಲ್ಲಿ ಮನೆಬಿಟ್ಟು ಕಾಡು ಸೇರಿರುವ ಹುಡುಗರಿಗೆ ಅಡುಗೆ ಬಹಳ ಕಷ್ಟಕರ....! Sad
ಟೀವಿ ಬಂದಮೇಲೆ ರೇಡಿಯೋ ಹೇಗೆ ಬಡವಾಗಿ ಮೊಲೆ ಸೇರಿತೊ ಹಾಗೆ ಸಿಟಿ ಗಂಡಂದಿರು ಹೆಂಡತಿಯರಿಗೆ ಮೊರೆ ಹೋಗದೆ, ತಾವೆ ಯಂತ್ರದ ಮೊರೆ ಹೋಗಿ ಮುದ್ದೆ ಕೈಗಿತ್ತ ಯಂತ್ರದ ಬೆನ್ನನ್ನು ತಟ್ಟಿ ಶಾಭಾಶ್ ಎಂದೆಂದರು ವಿಚಿತ್ರವಲ್ಲ ಅಲ್ಲವೆ.....!!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 4:05pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಹಃ ಹ್ಃ...!! ರಾಗವ್ ರವರೆ,

ನಿಮ್ಮ ಮೈಕ್ರೊ-ವೇವ್ ರಾಗಿ ಮುದ್ದೆ ಪ್ರಯತ್ನ ನಿಮ್ಮ ಅಡುಗೆ ಹಾಗು ಅಡುಗೆ ಮನೆಯನ್ನ ರಾಡಿ ಮಾಡಿತು ಎಂಬುದು ವಿಷಾದಕರ ಸುದ್ದಿ. Sad
ಆದರೆ ನನ್ನ ಈ ಮೇಲಿನ ಉಪಾಯವು ಅರ್ಧ ಮೈಕ್ರೊವೇವ್ ಕ್ರಿಯೆಯನ್ನು ಮಾತ್ರ ಒಳಗೊಂಡಿದೆ (ಹಿಟ್ಟು ಬಿಸಿ ಮಾಡುವುದು).

ಇಲ್ಲಿ ನಾನು ಬಹಳ ಟೆಕ್ನಿಕಲ್ ವಿಷಯವನ್ನು ಮಂಡಿಸಿದೆ ಎಂದು ನೀವು ಯೋಚಿಸಬಹುದು. ಆದರೆ ರಾಗಿ ಮುದ್ದೆ ಮಾಡಲು ಮೈಕ್ರೊವೇವ್ ಅಪಘಾತಕ್ಕೆ ಬಾಗಿಲು ತೆರೆದಿಟ್ಟಂತೆ.

ರಾಗಿ ಮುದ್ದೆ ಹೇಗೆ ಅಸಾದಾರಣ ಆಹಾರವೊ ಹಾಗೆಯೇ ರಾಗಿ ಮುದ್ದೆ ಮಾಡಲು ಅಸಾದಾರಣ ಬುದ್ದಿ ಮತ್ತು ತಂತ್ರಜ್ನಾನ ಬೇಕು. Smiling
ಸುಮ್ಮನೆ ರಾಗಿಯನ್ನು ನೀರಿನಲ್ಲಿ ಹಾಕಿ ಕುದಿಸಿದಷ್ಟಕ್ಕೆ ರಾಗಿ ಮುದ್ದೆಯಾಗುವುದಿಲ್ಲ ನೀವು ಹೇಳಿದ ಹಾಗೆ ರಾಡಿಯಾಗುವುದು ನಿಸ್ಚಿತ ಹೌದು..! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 4:17pm — rameshbalaganchi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

rameshbalaganchi's picture

ಹೌದು ಯುವಪ್ರೇಮಿಗಳೆ, ಎಲ್ಲ ಸರಿ, ಆದ್ರೆ ಮುದ್ದೆ ಅನ್ನೋದಕ್ಕೆ’ಕುಕಿ’ ಅಂತಾರೆ ಅಂತ ನಿಮಗೆ ಯಾರು ಹೇಳಿದ್ದು? ’ಕುಕಿ’ ಅಂದ್ರೆ ಬಿಸ್ಕತ್ತಿನ ಥರದ ಸಿಹಿ ತಿಂಡಿ ( ಥರ ಏನ್ಬಂತು ಬಿಸ್ಕತ್ತೇ)
ಇಲ್ಲಿ ನೋಡಿ dictionary ಅರ್ಥ ಏನ್ಹೇಳತ್ತೆ ಅಂತ:
'cookie' = A small flat cirsp baked cake, especially one made from sweetened dough' (ಸಿಹಿ ಹಿಟ್ಟಿನಿಂದ ತಯಾರಾದ, ಸಣ್ಣ, ಚಪ್ಪಟೆಯಾದ, ಗರಿಗರಿಯಾದ ಬೇಯಿಸಿದ ಅಪ್ಪಚ್ಚಿ)
ಈಗ ಹೇಳಿ!! ’ಮುದ್ದೆಯಂತ್ರ’ ಮಾಡಕ್ಕೆ ಹೊರಟು ಬಿಸ್ಕತ್ ತಯಾರಿಸೋ ಯಂತ್ರ ಮಾಡ್ಬಿಟ್ರಲ್ಲ!! Eye-wink. ಮರಿಜೋಸೆಫರು ಮಾಡಿದ ನಾಟಿಕೋಳಿ ಸಾರೆಲ್ಲ ದಂಡವಾಯ್ತಲ್ಲ!! ಹೋಗ್ಲಿ ಬಿಡಿ, ಇನ್ನೂ ಪೇಟೆಂಟ್‌ಗೆ ಅಪ್ಲೈ ಮಾಡದಿದ್ರೆ, ಮೊದಲು ಸರಿಯಾದ ಮೆಷೀನ್ ತಯಾರು ಮಾಡಿ ಆಮೇಲೆ ಅಪ್ಲೈ ಮಾಡ್ಕೊಳ್ಳಿ. ಸುಮಾರು ಬಿಸ್ಕತ್ ಕಾರ್ಖಾನೆಗಳಿರುವ ಬೆಂಗ್ಳೂರಲ್ಲಿ ನಿಮ್ಮ ’ಮುದ್ದೆಯಂತ್ರ’ ಅರ್ಧರೇಟ್‌ಗೆ ಬಿಕರಿಯಾಗಬಹುದು. Eye-wink

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 4:41pm — yuvapremi

ಉ: ರಾಗಿ ಮುದ್ದೆ ಮಿಶಿನ್! (Raagi cookie machine)

yuvapremi's picture

ಹಃ ಹಃ ರಮೇಶ್ ಸರ್,

ಈ ಕುಕ್ಕಿ ಎಂದು ಹೆಸರಿಟ್ಟಿದ್ದು ನಾನಲ್ಲ, ನಾನು ಎಲ್ಲೊ ಮುದ್ದೆಯನ್ನು ಕುಕ್ಕಿ ಎಂದು ಕರೆದದ್ದನ್ನು ನೋಡಿದ್ದೆ. ಆದರೆ ಬಿಸ್ಕತ್ತಿಗು ರಾಗಿ ಕುಕ್ಕಿಗೊ ಯಾವ ರೀತಿಯ ಸಂಭಂದವಿಲ್ಲ.
ಬಹುಶಃ ಈ ವೆಸ್ಟ್ರನ್ ದೇಶದವರಿಗೆ ಅರ್ಥಮಾಡಿಸಲು ರಾಗಿ ಮುದ್ದೆಯನ್ನು ಒಂದು ರೀತಿಯ ಕುಕ್ಕಿ ತರಹದ ತಿನಿಸು ಅಂತ ಯಾರೊ ಕರೆದಿರಬಹುದು. Smiling

ಆದರೆ ಈ ರಾಗಿ ಮುದ್ದೆಗೆ ಸರಿಯಾದ ಇಂಗ್ಲಿಷ್ ಹೆಸರು ಬಂದು Finger Millet ಎಂಬುದು. Eye-wink

ಮತ್ತೆ ಸರ್, ನೀವು ನನ್ನನ್ನು ಬಹಳ ಭಯಪಡಿಸುತ್ತಿದ್ದೀರ. ಏಕಂದರೆ ನಾನು ನೆನ್ನೆ ರಾತ್ರಿಯಲ್ಲ ನಿದ್ರೆ ತೊರೆದು ರಾಗಿಮುದ್ದೆ ಯಂತ್ರದ ಬಗ್ಗೆ ಒಂದು ನಕ್ಷೆಯನ್ನು ಕೊಡ ತಯಾರಿಸಿಯಾಗಿತ್ತು. Sad
ಆ ನಕ್ಷೆಯಂತೆ ಈ ಯಂತ್ರವು ರಾಗಿಮುದ್ದೆಯನ್ನೆ ಮಾಡುತ್ತದೆ, ರಾಗಿ ಬಿಸ್ಕತ್ ಅಲ್ಲ......!! Eye-wink
ಮರಿ ಜೋಸೆಫ಼ರ ನಾಟಿ ಕೋಳಿ ಸಾರು ದಂಡವೇನು ಆಗಿಲ್ಲ ಬಿಡಿ, ಏಕೆಂದರೆ ಅವರ ನಾಟಿಕೋಳಿಯನ್ನು ರುಚಿ ಕೆಡದಂತೆ ಸಂರಕ್ಷಿಸಲು ತಂಗಳುಪೆಟ್ಟಿಗೆ ಯಂತ್ರ (Fridge) ಇದೆಯಲ್ವ...!! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 2:56pm — roopablrao

ಉ: ರಾಗಿ ಮುದ್ದೆ ಮಿಶಿನ್! (Finger Millet machine)

roopablrao's picture

ಯುವಪ್ರೇಮಿಗಳೇ
ಮೊದಲು ರೆಡಿ ಮಾಡೀಪಾ ಮೊದಲು ತಗೊಳೋಳು ನಾನೆ.
ಹಾಗೆ ಸಾರು, ಹುಳಿ , ಪಲ್ಯ ಇದಕ್ಕೂ ಒಂದೊಂದು ಡಬ್ಬಿ ರೆಡಿ ಮಾಡಿ.
ಉಪ್ಪಿನ ಹಾಗು ಖಾರದ ರುಚಿ ಅದೇ ಗ್ರಹಿಸಿ ನಮಗೆ ಮಾಡಿಕೊಡಬೇಕು

ಆದರೆ ನಿಮ್ಮ ಚಿಂತನೆ ತುಂಬಾ ಚೆನ್ನಾಗಿದೆ , ತಮಾಷೆಯಲ್ಲ.

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:04pm — vikashegde

ಉ: ರಾಗಿ ಮುದ್ದೆ ಮಿಶಿನ್! (Finger Millet machine)

vikashegde's picture

ಹಾಗೆಯೇ ತಿನ್ನಿಸಿ ಕೈತೊಳೆಸಿ ಕೊಡೋ ಮೆಷಿನ್ನೂ ರೆಡಿ ಮಾಡಿಬಿಡಿ. ಈಗಿನ್ ಹುಡ್ಗೀರಿಗೆ ಭಾರಿ ಖುಷಿಯಾಗತ್ತೆ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 3:56pm — yuvapremi

ಉ: ರಾಗಿ ಮುದ್ದೆ ಮಿಶಿನ್! (Finger Millet machine)

yuvapremi's picture

ವಿಕಾಸ್ ರವರೆ, ನಿಮಗೆ ಒಂದು ವಿಷಯ ಗೊತ್ತ ?

ಮನುಷ್ಯನಿಗೆ ಬಹಳ ವರ್ಷಗಳ ಹಿಂದೆ ಬಾಲ ಇತ್ತಂತೆ. ಆದರೆ ಮನುಷ್ಯ ಅದನ್ನು ಉಪಯೋಗಿಸದೆ ಮಾಯ ಆಯ್ತಂತೆ. Shocked

ಹಾಗೆ ಅಡುಗೆ ಮಾಡೊದಲ್ಲದೆ ಊಟ ಕೂಡ ಮಾಡಿಸಿ, ಕೈ ತೊಳೆಸಿ, ಬಾಯಿ ಒರೆಸಿ ಮಲಗಿಸೊಕೆ ಯಂತ್ರ ಮಾಡಿದ್ರೆ ಮುಂದೊಂದು ದಿನ ಮನುಷ್ಯಾನೆ ಮಾಯ ಆಗ್ಬಿಡ್ತಾನೆ. ಆಗ ಬರೆ ಯಂತ್ರ ಯುಗಗಳು ಬಂದುಬಿಡುತ್ತವೆ ಅಲ್ಲವೆ ? Eye-wink

ತಮಾಶೆಗೆ ಹೇಳಿದೆ...!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 3:50pm — yuvapremi

ಉ: ರಾಗಿ ಮುದ್ದೆ ಮಿಶಿನ್! (Finger Millet machine)

yuvapremi's picture

ವಂದನೆಗಳು ರೊಪ ಮೇಡಮ್,

ಕಂಡಿತ ಈ ಯಂತ್ರವನ್ನು ತಯಾರಿಸೋಣ. ಅದೊ ಅಲ್ಲದ ನಮ್ಮ ಕರ್ನಾಟಕದ ಟೆಕ್ನಾಲಜಿ ಸದ್ದಿಲ್ಲದೆ ನಶಿಸಿಹೊಗ್ತಾಯಿದೆ. ಇದನ್ನ ತಡೆಯಲಾದರು ನಮ್ಮ ಊರಿನಲ್ಲೆ ಹೊಸ ಹೊಸ ಆವಿಷ್ಕಾರಗಳನ್ನ ನಾವು ಕೈಗೆತ್ತಿಕೊಳ್ಳಬೇಕು. Smiling

ಆದ್ರೇ ಒಂದು ವಿಷಯ, ಸಾರು, ಹುಳಿ, ಪಲ್ಯಕೆಲ್ಲ ಯಂತ್ರ ಮಾಡಿಬಿಟ್ರೆ ಗಂಡಸರು ತಮ್ಮ ಹೆಂಡತಿಯರ ಮೇಲೆ ಕೋಪಿಸಿಕೊಂಡು ಜಗಲ ಮಾಡೋದಕ್ಕೆ ಕಾರಣಾನೆ ಇಲ್ಲದಂಗೆ ಆಗುತ್ತಲ್ಲ. Shocked

"ಗಂಡ ಹೆಂಡಿರ ಜಗಳ ಉಂಡು ಮಲಗೊತನಕ" ಅಂದ ಹಾಗೆ ಜಗಳವೇ ಇಲ್ಲ ಅಂದ್ರೆ ಉಣ್ಣೊದು ಯಾವಾಗ ? Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 11:43pm — ರೇಖಾ

ಉ: ರಾಗಿ ಮುದ್ದೆ ಮಿಶಿನ್! (Finger Millet machine)

ರೇಖಾ's picture

ನಿಮ್ಮ ಬರಹ ಓದಿದ ಮೇಲೆ ನನಗೊಂದು ಡೌಟ್‌ ಬರತೊಡಗಿದೆ.

ಬಹುಶಃ ನಿಮಗೆ ಮುದ್ದೆ ಮಾಡಕ್ಕೆ ಬರದಿರೋ ಹುಡುಗಿಯೇ ಸಿಗೋ ಛಾನ್ಸಿದೆ. ಅದನ್ನು ಮುಂಚೆಯೇ ಊಹಿಸಿದ್ದಿರೇನೋ ಎಂಬಂತೆ ನೀವು ಮಷಿನ್‌ ತಯಾರಿಯಲ್ಲಿದ್ದೀರಿ.

ಇಲ್ಲದಿದ್ದರೆ ಇಷ್ಟೊಂದು ರೀಸರ್ಚ್‌ ಮಾಡಿ, ರೇಖಾಚಿತ್ರ ಹಾಕಿ ಮುದ್ದೆ ಮಷಿನ್‌ ಐಡಿಯಾ ಹೀಗೆ ಬ್ಲಾಗ್‌ನಲ್ಲಿ ಹಾಕ್ತಿದ್ರಾ? ಮುದ್ದೆ ಮಾಡಕ್ಕೆ ಬರದೋರು ಮಾಡರ್ನ್‌ ಹುಡುಗಿಯರಾದ್ರೆ, ಮುದ್ದೆ ಮಷಿನ್‌ ಕಂಡು ಹಿಡಿದ ವ್ಯಕ್ತಿಗೆ ಯಾವ ಹೆಸರು ಕೊಡಬೇಕು?

ತುಂಬ ಚೆನ್ನಾಗಿದೆ ನಿಮ್ಮ ಬರಹ. ಓದಿ, ನಕ್ಕು, ಪ್ರತಿಕ್ರಿಯೆಗಳನ್ನು ಓದಿ, ಇನ್ನಷ್ಟು ನಕ್ಕು, ಅಪ್ಪಟ ಮುದ್ದೆ-ಸಾರು ಸವಿದಷ್ಟೇ ಸಂತೋಷವಾಯಿತು.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 7, 2008 - 6:02pm — yuvapremi

ಉ: ರಾಗಿ ಮುದ್ದೆ ಮಿಶಿನ್! (Finger Millet machine)

yuvapremi's picture

ರೇಖಾ ಮ್ಯಾಡಮ್..!!

ನೀವು ನನ್ನ ಮೇಲೆ ದಯೆ ತೋರಿಸಿ ಪ್ಳೀಸ್...!! ನನ್ನ ಜನ್ಮವೆಲ್ಲ ಆಡುಗೆ ಮನೆ ಕಾಯೊದ್ರಲ್ಲೆ ಆಗೊದ್ರೆ ನಾನು ದೇಶ ಸೇವೆ ಮಾಡೋದು ಯಾವಾಗ ? Sad

ಒಂದು ಪಕ್ಷ ನೀವು ಹೇಳಿದ ಹಾಗೆ ಏನಾದ್ರು ಮುದ್ದೆ ಮಾಡೋಕೆ ಬರದಿರೊ ಮಡದಿ ಸಿಕ್ಕಿದ್ರೆ ಮದ್ವೆ ಮಾರನೆ ದಿವಸವೆ ಅವಳ ಅಪ್ಪನ ಮನೆಗೆ ಬಸ್ ಹತ್ತಿ ಹೋಗೋಕ್ಕೆ ಟಿಕೆಟ್ ರೆಡಿ ಮಾಡಿಸ್ತೀನಿ...!!

ಇಲ್ಲ ಅಂದ್ರೆ ಈ ರಾಗಿ ಮುದ್ದೆಯನ್ನು ತಯಾರಿಸಲು ತಗುಲುವ ಕೋಟಿ ರೊಪಾಯಿ ವೆಚ್ಚವನ್ನು ಹುಡುಗಿಯ ಅಪ್ಪ ಬರಿಸಿದರೆ ಮಾತ್ರ ಮದುವೆ ಅಂತ ಹೇಳ್ತೀನಿ...!! Eye-wink

ಈ ಲೇಖನವನ್ನು ಓದಿ ಪ್ರತಿಕ್ರಯಿಸಿ, ಪ್ರೋತ್ಸಾಹ ನೀಡಿದಕ್ಕೆ ನಿಮಗೆ ನಮ್ಮ ರಾಗಿ ಮುದ್ದೆ ಯಂತ್ರವನ್ನು ಒಂದು ವರ್ಷ ಉಪಯೋಗಿಸುವ ಆಫ಼ರ್...!! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
  • ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
  • ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
  • ಮುದ್ದೆ-ನಿದ್ದೆ
  • ಹೊಸ ಛಂದ ಪುಸ್ತಕಗಳು
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 51 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator