ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

June 27, 2008 - 6:38pm — keerthi2kiran
ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್‌ಕುಂಡ್.

ವರ್ಷದ ೧೧ ತಿಂಗಳು ಹೆಪ್ಪುಗಟ್ಟಿರುವ ಈ ಕೆರೆ ಕರಗಿದಾಗ ಕಾಣುವುದು ಹಲವು ಶತಮಾನಗಳಷ್ಟು ಹಳೆಯದಾದ ನೂರಾರು ಮಾನವರ ಹಾಗೂ ಕುದುರೆಗಳ ಅಸ್ಥಿಪಂಜರಗಳು . ೫೦೨೯ಮೀ ಗಳಷ್ಟು ಎತ್ತರದಲ್ಲಿ ಜನ ಜೀವನವೇ ಇಲ್ಲದ ಪ್ರದೇಶದಲ್ಲಿ ಇಷ್ಟೊಂದು ಅಸ್ಥಿಪಂಜರಗಳು ಬಂದದ್ಡಾದರೂ ಹೇಗೆ? ಇಲ್ಲಿಯ ವರೆಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ದೊರೆತಿಲ್ಲ. ಆದರೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಯಾತ್ರೆಗಾಗಿ ಹೊರಟಿದ್ದ ನೂರಾರು ಜನ ಹೇಗೋ ರೂಪ್‌ಕುಂಡ್ ಬಳಿ ಸಮಾಧಿಯಾದರು. ಸ್ಥಳೀಯ ಜನರು ಹೇಳುವ ಪ್ರಕಾರ ಹಿಮಾಲಯದ ಪುಣ್ಯಭೂಮಿಯಲ್ಲಿ ಮೋಜುಮಾಡುತ್ತಿದ್ದ ರಾಜನ ಪರಿವಾರ ನಂದಾ ದೇವಿಯ ಕೋಪಕ್ಕೆ ಗುರಿಯಾಗಿ ಹಿಮಪಾತದಲ್ಲಿ ನಶಿಸಿ ಹೋಯಿತಂತೆ. ಇನ್ನೊಂದು ಥಿಯರಿಯ ಪ್ರಕಾರ ಯುಧ್ಧ ಮಾಡಿ ಹಿಂದಿರುಗುತ್ತಿದ್ದ ಕಾಶ್ಮೀರಾದ ರಾಜ ಮತ್ತು ಅವನ ಸೇನೆ ದಾರಿ ತಪ್ಪಿ ರೂಪ್‌ಕುಂಡ್ ಬಳಿ ಹಿಮಪಾತಕ್ಕೆ ಸಿಕ್ಕಿ ನಶಿಸಿ ಹೋಗಿರಬಹುದು. ಕಾರ್ಬನ್ ಡೇಟಿಂಗ್ ನಿಂದ ತಿಳಿದು ಬಂದದ್ದು ಈ ಆಸ್ಥಿ ಪಂಜರಗಳು ೫೦೦-೮೦೦ ವರ್ಷ ಹಳೆಯದಿರಬಹುದು ಎಂದು.
ಅದೇನೇ ಆಗಲಿ, ರೂಪ್‌ಕುಂಡ್ ನ ದಾರಿಯಲ್ಲಿ ಕಾಣಸಿಗುವ ಪ್ರಕೃತಿ ಸೌಂದರ್ಯ ಅವರ್ಣನೀಯ. ನೈನಿತಾಲ್ ನಿಂದ ೩೦೦ಕಿ.ಮೀ. ದೂರದಲ್ಲಿರುವ ಮುನ್ಡೋಲಿ ಎಂಬ ಹಳ್ಳಿ ಯಿಂದ ಶುರುವಾಗುತ್ತದೆ ರೂಪ್ ಕುಂಡಕ್ಕೆ ಕಾಲುದಾರಿ.

ದಟ್ಟ ಕಾಡಿನಲ್ಲಿ ಒಂದು ದಿನ ಪೂರ್ತಿ ನಡೆದ ಮೇಲೆ ಸಿಗುತ್ತದೆ ಬೇಡಿನಿ ಬುಗ್ಯಾಲ್. ಬುಗ್ಯಾಲ್ ಎಂದರೆ ಹುಲ್ಲುಗಾವಲು ಎಂದು. ೨೫೦೦ಮೆ. ಗಳ ಎತ್ತರದ ಈ ಹುಲ್ಲುಗಾವಲಿನಲ್ಲಿ ಅನೇಕ ರೀತಿಯ ಹೂವುಗಳನ್ನೂ ಕಾಣಬಹುದು. (ವಿಂಡೊಸ್ XPಯ ವಾಲ್‌ಪೇಪರ್ ಚಿತ್ರ ಇಲ್ಲೇ ತೆಗೆದಿರಬಹುದೇನೋ ಎಂದು ನನಗೆ ಈಗಲೂ ಸಂದೇಹ Smiling)

ಇಲ್ಲಿಂದ ತ್ರಿಶೂಲ್, ನಂದಾ ಘು೦ಟಿ ಪರ್ವತಗಳು ಬಹಳ ಹತ್ತಿರದಲ್ಲಿ ಕಾಣುತ್ತವೆ.

ದೂರದಲ್ಲಿ ಚೌಕಂಭಾ, ನೀಲ್ ಕ೦ಠ್ ಮುಂತಾದ ಪಾರ್ವತಗಳೂ ಕಾಣುತ್ತವೆ. ಇನ್ನೊಂದು ದಿನ ನಡೆದರೆ ಸಿಗುತ್ತದೆ ಕೈಲು ವಿನಾಯಕನ ಗುಡಿ.

ಇಲ್ಲಿಂದ ಮುಂದೆ ಸಿಗುವ ಜಾಗ ಬಗುವಾಬಾಸಾ. ಬಗುವಾಬಾಸಾ ದಾರಿಯಲ್ಲಿ ಯಾವಾಗಲೂ ಪ್ರತೀಕೂಲ ಹವಾಮಾನವಿರುತ್ತದೆ. ದಾರಿ ಕಾಣಿಸದಷ್ಟು ಮಂಜು, ನಡೆಯಲಾರದಷ್ಟು ಹಿಮ. ಬಗುವಾಬಾಸಾದಿಂದ ಮುಂದೆ ಹತ್ತಲು ೭೦ ಡಿಗ್ರೀ ಎತ್ತರದ ಗೋಡೆ. ಜೊತೆಗೆ ಎತ್ತರದ ಕಾರಣದಿಂದ ಬರುವ ತಲೆನೋವು, ಆಮ್ಲಜನಕದ ಕೊರತೆ. ಆದರೆ ಹವಾಮಾನ ತಿಳಿಯಾದಾಗ ಕಾಣುವುದು ಸ್ವರ್ಗ. ಹಿಮಾಚ್ಛಾದಿತ ಪರ್ವತಗಳು, ಬಿಸಿಲಿಗೆ ಹೊಳೆಯುವ ಹಿಮನದಿಗಳು, ಎಲ್ಲಿ ನೋಡಿದರೂ ಬರೀ ಹಿಮ. ಹೀಗೆ ರೂಪ್‌ಕುಂಡ್ ತಲುಪಿದರೆ ಹವಾಮಾನ ಚೆನ್ನಾಗಿದ್ದಲ್ಲಿ ಮುಂದೆ ಜುರಾಂಗಲಿ ಪಾಸ್ ಅಥವಾ ಶಿಲಾ ಸಮುದ್ರ ಹಿಮನದಿ ಕಡೆಗೆ ಹೋಗಬಹುದು. ಇಲ್ಲವೇ ಬ೦ದ ದಾರಿಯಲ್ಲೇ ಹಿಂದಿರುಗಬಹುದು.

ವಿ.ಸೂ.: ನಾವು ಹೋದ ವರ್ಷ ಹೋದಾಗ ಹವಾಮಾನ ಕೆಟ್ಟಿದ್ದರಿನ್ದ ನಮಗೆ ಕೈಲು ವಿನಾಯಕದಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ.

  • ಪ್ರವಾಸ ಕಥನ
~.~
  • Login or register to post comments
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2008 - 8:46pm — ravikh

ಉ: ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ravikh's picture

ಬಹಳ ಸುಂದರವಾಗಿದೆ ಈ ಜಾಗ, ಹಾಗೂ ನಿಮ್ಮ ಕಥನ.

ವಂದನೆಗಳೊಂದಿಗೆ,
ರವಿಶಂಕರ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 12:37am — hpn

ಉ: ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

hpn's picture

ಈ ಬರಹ ವಿಶೇಷ ಲೇಖನವಾಗಿ ಕಳೆದೆರಡು ದಿನ ಮುಖಪುಟದಲ್ಲಿತ್ತು. ಯಾರಿಗೂ ಹೆದರಿಸಲಿಲ್ಲ ಅನ್ಕೋತೀನಿ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 9:21am — keerthi2kiran

ಉ: ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

keerthi2kiran's picture

ಭಯ ಪಟ್ಟು ಯಾರೂ ಈ ಲೇಖನವನ್ನು ಓದೇ ಇಲ್ಲ. Smiling ಅದಕ್ಕೇ ಬರೀ ೧೦೦ ಹಿಟ್ಸ್ ಮತ್ತು ಎರಡೇ ಕಾಮೆಂಟ್ಸ್. Sad
ಕೀರ್ತಿ ಕಿರಣ್ ಎಂ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 4:24pm — girish.rajanal

ಉ: ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

girish.rajanal's picture

ಸಖತ್ತಾಗಿದೆ ನಿಮ್ಮ ಚಾರಣ. ಮತ್ತು ರೋಪಕುಂಡ್ ಸರೋವರ.
ಚಿತ್ರಗಳು ಬಹಳ ಚೆನ್ನಾಗಿವೆ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾತೋಪಂಥ್ ಸರೋವರ
  • ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
  • ನಾಯಿಯನ್ನು ಹಿಂಬಾಲಿಸಿದ ಕತೆ
  • ಕರುಣಾಳು ಬಾ ಬೆಳಕೆ
  • ತಾಯಿ.
Syndicate content

ಲೇಖಕರು

keerthi2kiran's picture

ಪೂರ್ಣ ಹೆಸರು
ಕೀರ್ತಿ ಕಿರಣ್ ಎಂ

ಪರಿಚಯ

ಬೆಂಗಳೂರಿನಲ್ಲಿರುವ ಅ(ಲ್ಪ)ಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಕೋಡಿಗನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕ ಮತ್ತು ಹಿಮಾಲಯದಲ್ಲಿ ಕೆಲವು ಟ್ರೆಕಿಂಗುಗಳನ್ನು ಮಾಡಿದ್ದೇನೆ. ಕಾದಂಬರಿಗಳನ್ನು ಓದುವುದು ಇನ್ನೊಂದು ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator