ಗ್ರಹ-ತಾರೆಗಳ (ಜಿ.ಟಿ) ನಾರಾಯಣ ತೇ ನಮೋ ನಮೋ...
ಭಾನುವಾರ (ಜೂನ್ ೨೯, ೨೦೦೮) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣದ ಲೇಖನ ಇಲ್ಲಿದೆ.
ಇದರಲ್ಲಿ ಸಂಪದ, ಜಿಟಿಎನ್ ಅವರೊಂದಿಗೆ ಸಂಪದದ ಸಂದರ್ಶನ ಪಾಡ್‌ಕಾಸ್ಟ್, ಇಸ್ಮಾಯಿಲ್... ಇತ್ಯಾದಿ ಉಲ್ಲೇಖಗೊಂಡಿವೆ.
- ಶ್ರೀವತ್ಸ ಜೋಶಿ

- Login or register to post comments
- 344 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗ್ರಹ-ತಾರೆಗಳ (ಜಿ.ಟಿ) ನಾರಾಯಣ ತೇ ನಮೋ ನಮೋ...
ಆಲೋಚನೆಗೆ ಹತ್ತಿಸಿತು!
ಇಸ್ಮಾಯಿಲರು ಆ ಬ್ಲಾಗ್ ಬರೆದು ಹಾಕಿದಾಗ ನಾವುಗಳು ಮಾತನಾಡಿಕೊಂಡಿದ್ವು - "ಓದುತ್ತಿದ್ದಂತೆ ಇಬ್ಬರು ಹುಡುಗರು ಅವರ ತಂದೆಯೊಡಗೂಡಿ ಜಿ ಟಿ ಎನ್ ಬರೆದ ಪುಸ್ತಕ ಹಿಡಿದು ನಕ್ಷತ್ರಗಳನ್ನು ಗುರುತುಹಿಡಿಯಲು ಮಾಡುತ್ತಿದ್ದ ಪ್ರಯತ್ನದ ಮನಸ್ಸಿನೆದುರು ಮೂಡಿ ಹೋಯ್ತು - ಅಷ್ಟು ಚೆನ್ನಾಗಿ ಬರೆದಿದ್ದಾರಲ್ವ?" ಅಂತ.
ಸಮಯೋಜಿತ ಬರಹ.
ಇತ್ತೀಚೆಗೆ ಹೊರಬಂದ "ಮಗಳು ಕಂಡ ಕುವೆಂಪು" ಪುಸ್ತಕದಲ್ಲೂ ಜಿ ಟಿ ಎನ್ ರವರ "ನಕ್ಷತ್ರಗಳು" ಪುಸ್ತಕದ ಬಗ್ಗೆ ತಾರಿಣಿ ಚಿದಾನಂದರು ಬರೆದಿದ್ದಾರೆ. ಕುವೆಂಪು ಹೇಗೆ "ನಕ್ಷತ್ರಗಳು" ಪುಸ್ತಕ ಹಿಡಿದು ಅವರುಗಳಿಗೆ ವಿವಿಧ ನಕ್ಷತ್ರಗಳ ಹೆಸರುಗಳನ್ನು ತಿಳಿಸಿ ಗುರುತಿಸಲು ಸಹಾಯಮಾಡುತ್ತಿದ್ದರು ಎಂಬುದರ ಬಗ್ಗೆ ಬರೆದಿದ್ದಾರೆ.
ನಾಳೆ ಲೇಖನ ಓದಿ ಸಂಪದಕ್ಕೆ ಬರುವ ಮತ್ತಷ್ಟು ಬರಹಗಾರ/ಬರಹಗಾರ್ತಿಯರಿಗಿರಬಹುದಾದ ಕನ್ನಡದಲ್ಲಿ ವಿಜ್ಞಾನ ಬರೆಯುವ ಆಸಕ್ತಿ ಜಿ ಟಿ ಎನ್ ರ ಕೊಡುಗೆಯನ್ನು ಮುಂದುವರೆಸಿಕೊಂಡು ಹೋಗುವ ಹಲವರನ್ನು ಸೃಷ್ಟಿಸಬಹುದು ಎಂಬ ಸಂಭವ(prospect) ಹಂಚಿಕೊಳ್ಳುತ್ತ ಅದನ್ನು ಇಂತಹ ಲೇಖನಗಳಿಂದ ಸಾಧ್ಯವಾಗಿಸುತ್ತಿರುವ ನಿಮಗೆ ಸಮುದಾಯದ ಪರವಾಗಿ ಈ ಮೂಲಕ ವಂದನೆಗಳನ್ನು ತಲುಪಿಸುತ್ತಿರುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa