ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’

August 3, 2005 - 10:53am — pavanaja

ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿ ನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.”/೧/

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿದ್ದುಕೊಂಡು ಅದ್ಭುತ ಸಾಧನೆ ಗೈದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನೊಬ್ಬ ಕನ್ನಡಿಗ ಬಿ. ವಿ. ಜಗದೀಶರನ್ನು ನಾನು ಸಂದರ್ಶಿಸಿದಾಗ ಕೇಳಿದ ಪ್ರಶ್ನೆ: “ನೀವು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತದ್ದು ನೀವು ಮುಂದೆ ಮಾಹಿತಿ ತಂತ್ರಜ್ಞಾನ ಪರಿಣತನಾಗಿ ಮೂಡಿ ಬರಲು ಏನೂ ತೊಂದರೆ ಆಗಲಿಲ್ಲವೇ?”. ಅದಕ್ಕೆ ಅವರ ಉತ್ತರ: “ಖಂಡಿತಾ ಇಲ್ಲ. ಸಾಧನೆಗೆ ಬೇಕಾದುದು ಶ್ರದ್ಧೆ ಮತ್ತು ಇಚ್ಛಾಶಕ್ತಿ ಮಾತ್ರ. ಹಾಗೆ ನೋಡಿದರೆ ನಾನು ಇಂಜಿನಿಯರಿಂಗ್‌ನಲ್ಲಿ ಓದಿದ್ದು ಕಂಪ್ಯೂಟರ್ ಸಯನ್ಸ್ ಕೂಡಾ ಅಲ್ಲ.”/೨/

ಈ ಎರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರಣವಿದೆ. ಕರ್ನಾಟಕ ಮತ್ತು ಬೆಂಗಳೂರು ಮಾಹಿತಿ ತಂತ್ರಜ್ಞಾನ (ಮಾತಂ) ಕ್ಷೇತ್ರದಲ್ಲಿ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಖ್ಯಾತಿ ಮಾಡಿವೆ. “ತಮ್ಮ ಮಕ್ಕಳು ಮಾತಂ ಕ್ಷೇತ್ರದಲ್ಲೇ ಉದ್ಯೋಗವನ್ನು ಪಡೆಯಬೇಕು. ಗಣಕಗಳ ಭಾಷೆ ಇಂಗ್ಲೀಷ್. ಆದುದರಿಂದ ನಾವು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು” -ಎಂಬ ಹುಚ್ಚು ಭ್ರಮೆಗಳನ್ನು ಪ್ರತಿ ಪೋಷಕರೂ ತಮ್ಮ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಈ ಕಲ್ಪನೆಗಳು ಸಂಪೂರ್ಣ ತಪ್ಪು ಎಂಬುದನ್ನು ಮಾತಂ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಗೈದ ಗಣ್ಯರೇ ಹೇಳುತ್ತಿದ್ದಾರೆ ಎಂಬುದು ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಸಂರ್ಶನಗಳಲ್ಲಿವೆ.

ಮಾತಂ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಗೈದಿರುವ ಅಪಾರ ‘ಸಾಧನೆ’ ಕಡೆಗೆ ಸ್ವಲ್ಪ ಗಮನ ನೀಡೋಣ. ೨೦೦೪-೦೫ ರಲ್ಲಿ ಬೆಂಗಳೂರಿನ ಮಾತಂ ರಫ್ತು ೨೨,೦೦೦ ಕೋಟಿ ರೂ. ಇದು ದೇಶದ ಒಟ್ಟು ಮಾತಂ ರಫ್ತಿನ ೩೦% ರಷ್ಟಾಗುತ್ತದೆ. ನಿಜಕ್ಕೂ ‘ಹೆಮ್ಮೆ’ ಪಡುವ ಸಾಧನೆ. ನಮ್ಮ ದೇಶದ ಒಟ್ಟು ಉತ್ಪಾದನೆಗೆ ಮಾತಂ ಕ್ಷೇತ್ರದ ಕೊಡುಗೆ ಎಷ್ಟು ಗೊತ್ತೇ? ಕೇವಲ ೨%. ಇಷ್ಟು ಮಾತ್ರವಲ್ಲ. ಜಾಗತಿಕ ಮಾತಂ ಕ್ಷೇತ್ರಕ್ಕೆ ಭಾರತದ ಕೊಡುಗೆ ಕೇವಲ ೧.೪%. ದೇಶದ ಒಟ್ಟು ೧೦೦ ಕೋಟಿ ಜನಸಂಖ್ಯೆಯಲ್ಲಿ ಮಾತಂ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಸುಮಾರು ೧೦ ಲಕ್ಷ ಮಂದಿ. ಅದರಲ್ಲಿ ಸುಮಾರು ೨.೫ ಲಕ್ಷ ಮಂದಿ ಬೆಂಗಳೂರಿನಲ್ಲಿದ್ದಾರೆ. ೨೦೧೦ರಲ್ಲಿ ಇದು ೫ ಲಕ್ಷವನ್ನು ತಲುಪುವ ನಿರೀಕ್ಷೆಯಿದೆ. ಇದರಲ್ಲಿ ಕನ್ನಡಿಗರ ಪಾಲು ಸುಮಾರು ೧.೫ ಲಕ್ಷ ಇರಬಹುದು. ಕರ್ನಾಟಕದ ಜನಸಂಖ್ಯೆ ಸುಮಾರು ೪ ಕೋಟಿ. ಅಂದರೆ ಈ ೧.೫ ಲಕ್ಷ ಉದ್ಯೋಗಕ್ಕಾಗಿ ೪ ಕೋಟಿ ಮಂದಿ ಇಂಗ್ಲೀಷಿಗೆ ಜೋತು ಬೀಳಬೇಕೆ? ಈಗಾಗಲೇ ಖ್ಯಾತನಾಮರು ತಿಳಿಸಿದಂತೆ ಮಾತಂ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕಾಗಿಲ್ಲ. ಹಾಗಿದ್ದರೆ ಈ ಮಾತಂ ಕ್ಷೇತ್ರದಲ್ಲಿ ಇಂಗ್ಲೀಷ್ ಪ್ರಾವೀಣ್ಯ ಬೇಡವೇ? ಬೇಕು. ಯಾರಿಗೆ ಗೊತ್ತೆ? ಕಾಲ್‌ಸೆಂಟರ್‌ಗಳಲ್ಲಿ ದುಡಿಯುವವರಿಗೆ. ಅವರ ಸಂಖ್ಯೆ ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು ೫೦ ಸಾವಿರ ಇದೆ. ೨೦೧೦ರಲ್ಲಿ ಇದು ಒಂದು ಲಕ್ಷವನ್ನು ತಲುಪಬಹುದು. ಇದರಲ್ಲಿ ಕನ್ನಡಿಗರ ಪಾಲು ಸುಮಾರು ೩೦ ಸಾವಿರ ಇರಬಹುದಷ್ಟೆ. ಅಂದರೆ ಈ ೩೦,೦೦೦ ಕೆಲಸಗಳಿಗಾಗಿ ೪ ಕೋಟಿ ಕನ್ನಡಿಗರು ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕೆ?

ಮಾತಂ ಕ್ಷೇತ್ರದಲ್ಲಿ ನಮ್ಮ ಸಾಧನೆ ಕಡೆ ಇನ್ನಷ್ಟು ಗಮನ ಹರಿಸೋಣ. ಭಾರತೀಯರು ಅತಿಥಿ ಸೇವೆಗೆ ಪ್ರಖ್ಯಾತರು. ಈಗಿನ ಮಾತಂ ಯುಗದಲ್ಲಿ ಕೇವಲ ಸೇವೆಗೆ ಖ್ಯಾತರು. ಮಾತಂ ಕೆಲಸಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ. ಭಾರತೀಯ ಮಾತಂ ಕಂಪೆನಿಗಳು ಸೇವೆಗೆ ಮಾತ್ರ ಹೆಸರು ಮಾಡಿದ್ದಾರೆ. ಅಮೇರಿಕದ ಬಹುಪಾಲು ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ದಾಟಿಸುತ್ತಿದ್ದಾರೆ. ಆದರೆ ಅವು ಯಾವುವೂ ತಾಂತ್ರಿಕವಾಗಿ ಉನ್ನತ ಮಟ್ಟದ ಕೆಲಸಗಳಲ್ಲ. ಬಹು ಸರಳವಾದ, ಹತ್ತನೇ ತರಗತಿ ಪಾಸಾದ ಯಾರು ಬೇಕಾದರೂ ಮಾಡಬಲ್ಲ ತಂತ್ರಾಂಶ ಸೇವೆಗಳು ಮತ್ತು ತಂತ್ರಾಂಶಾಧಾರಿತ ಸೇವೆಗಳು. ಭಾರತದ ಮಾತಂ ರಫ್ತಿನ ಶೇಕಡ ೯೫ರಷ್ಟು ಸೇವೆಯಿಂದಲೇ ಬರುತ್ತಿದೆ. ಅಮೇರಿಕಾದ ಕಂಪೆನಿಗಳಿಗೆ ಅಲ್ಲೇ ಕೆಲಸಕ್ಕೆ ಜನ ನೇಮಿಸಿದರೆ ಎಷ್ಟು ಖರ್ಚು ಬರುತ್ತದೋ ಅದರ ಹತ್ತನೇ ಒಂದರಷ್ಟು ಖರ್ಚಿನಲ್ಲಿ ಭಾರತೀಯರಿಂದ ಭಾರತದಲ್ಲೇ ಕೆಲಸ ಮಾಡಿಸಿಕೊಳ್ಳಬಹುದು. ಮಾತಂ ಕ್ಷೇತ್ರದ ಉತ್ಪನ್ನಗಳೇನಿದ್ದರೂ ಅಮೇರಿಕದ ಕಂಪೆನಿಗಳಿಂದ ಬರುತ್ತಿವೆ. ಅಲ್ಲಿ ಕೆಲಸಗಾರರಾಗಿ ಭಾರತೀಯರಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ಮಾತಂ ಉತ್ಪನ್ನ ಯಾವುದೂ ಇಲ್ಲ. ನಾವು ಮಾತಂ ಕ್ಷೇತ್ರದಲ್ಲಿ ತುಂಬ ಮುಂದೆ ಇದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುವಾಗ ಈ ಒಂದು ಅಂಶವನ್ನು ಚೆನ್ನಾಗಿ ಗಮನಿಸಬೇಕು. ಮಾತಂ ಕ್ಷೇತ್ರದಲ್ಲಿ ನಮ್ಮವರು ಅಮೇರಿಕ ಮತ್ತು ಯುರೋಪಿನ ದೇಶಗಳಿಗೆ ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರೆ ಅದು ತುಂಬ ನಿಷ್ಠುರ ಮಾತು ಎನ್ನಿಸಬಹುದು. ಆದರೆ ಇದು ಬಹುಮಟ್ಟಿಗೆ ಸತ್ಯ ಸಂಗತಿಯಾಗಿದೆ.

ಈಗ ಹೇಳಿ. “ನೀವು ನಿಮ್ಮ ಮಕ್ಕಳನ್ನು ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲೇ ಕಲಿಸಿ ವಿದೇಶಗಳಿಗೆ ಕೂಲಿಗಳನ್ನಾಗಿ ತಯಾರಿಸಲು ಇಚ್ಛಿಸುತ್ತೀರಾ?”

ಉಲ್ಲೇಖ:
/೧/
/೨/

[ಉಷಾಕಿರಣ, ಏಪ್ರಿಲ್ ೨೧, ೨೦೦೫]

  • ಚಿಂತನೆ
~.~
  • Login or register to post comments
  • 983 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 3, 2005 - 1:34pm — olnswamy

ತುಂಬ ನಿಜ

olnswamy's picture

ಶ್ರೀ ಪವನಜ ಅವರ ಮಾತು ತುಂಬ ನಿಜ. ಮಾತಂ ಕ್ಷೇತ್ರದಲ್ಲಿ ಬಲು ದೊಡ್ಡ ಹುದ್ದೆಯಲ್ಲಿರುವ ನನ್ನ ಗೆಳೆಯರೊಬ್ಬರು ಹೇಳಿದ್ದು ಇದು. ಇಂದು ಐಟಿಯಲ್ಲಿ ಕೆಲಸಮಾಡುತ್ತಿರುವ ತಂತ್ರಜ್ಞರಲ್ಲಿ ಬಹುಪಾಲು ಕರ್ನಾಟಕದ ಜಿಲ್ಲಾಕೇಂದ್ರಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಬಂದ ಹುಡುಗ/ಹುಡುಗಿಯರಂತೆ. ಇಂಗ್ಲಿಷಿಗೂ ತಂತ್ರಜ್ಞಾನಕ್ಕೂ, ಅದರಿಂದ ದೊರೆಯುವ ಅತಿ ಹೆಚ್ಚಿನ ಸಂಬಳ ಇತ್ಯಾದಿಗಳಿಗೂ ಇಂಗ್ಲಿಷಿಗೂ ಗಂಟುಹಾಕುವುದು ಸರಿಯಲ್ಲ. ಸ್ವತಃ ತಂತ್ರಜ್ಞರೂ ಆದ ಪವನಜ ಅವರ ಮಾತನ್ನು ಕನ್ನಡ ಭಾಷಿಕರೆಲ್ಲ ಇನ್ನೂ ಗಟ್ಟಿಯಾಗಿ ಚೀರಿ ಹೇಳುವ ಅಗತ್ಯವಿದೆ.
ಆದರೆ ಇಂಗ್ಲಿಷ್ ಭಾಷೆಯ ಮೂಲಕ ಕನ್ನಡ ಪಡೆಯಬೇಕಾದ ಸಂಪತ್ತು ಅಪಾರವಾಗಿದೆಯಲ್ಲ ಅದರ ಬಗ್ಗೆ ನಿರ್ಲಕಷ್ಯವೂ ಸಲ್ಲದು. ಎಲ್ಲರೂ ಇಂಗ್ಲಿಷ್ ಕಲಿಯಬೇಕಿಲ್ಲ, ಆದರೆ ಚೆನ್ನಾಗಿ ಇಂಗ್ಲಿಷ್ ಕಲಿಯುವ ಅವಕಾಶ ಎಲ್ಲರಿಗೂ ಇರಬೇಕು. ಮಕ್ಕಳಿಗೆ ಇತರವಿಷಯಗಳನ್ನು ತಿಳಿಯುವ ಮಾಧ್ಯಮ ಮಾತ್ರ ಕನ್ನಡವೇ ಅಗಿರಬೇಕು. ಪವನಜರಿಗೆ ಥ್ಯಾಂಕ್ಸ್.
ತಮ್ಮ ಮಕ್ಕಳು ಇಂಗ್ಲಿಷ್ ಕೂಲಿಗಳಾಗಬೇಕೆಂಬ ಅಪೇಕ್ಷೆ ಅಪ್ಪ ಅಮ್ಮಂದಿರಿಗೆ ಯಾಕೆ ಹುಟ್ಟಿದೆಯೋ!
ನಾಗಭೂಷಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 4, 2006 - 8:14am — venkatesh

ಇಂಗ್ಲೀಶ್ ಕೂಲಿಗಳು....

venkatesh's picture

ಡಾ. ಪವನಜ ರವರ ಮಾತುಗಳಲ್ಲಿ ಕನ್ನಡ ಯುವವರ್ಗ ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆನ್ನುವ 'ಕಳಕಳಿ ಇದೆ. ಅವರ ಮಾತಿನ ಹಿನ್ನೆಲೆ ಯನ್ನು ಅರ್ಥಮಾಡಿಕೊಳ್ಳಬೇಕು.
ಇಂಗ್ಲೀಶ್, ಸದ್ಯಕ್ಕೆ ಮಾಹಿತಿ ತಂತ್ರಜ್ಞಾನದಲ್ಲಿ ಬೇಕೆ ಬೇಕು ಎನ್ನುವಂತೆ ಛಾಪನ್ನು ಒತ್ತಿದೆ.
ಇನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಶ್ ಸೇರಿದಂತೆ ಇನ್ನು ಹಲವು ಭಾಷೆಗಳಲ್ಲಿ ಪರಿಣತೆ ಸಾಧಿಸ ಬೇಕಾಗಿಬಂದಿರುವ ಪರಿಸ್ಥಿತಿಯನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳದೆ ವಿಧಿಯಿಲ್ಲ. ಆದರೆ 'ಒನಾಮ' ದಿಂದಲೆ ಇಂಗ್ಲೀಶ್ ಕಡೆ ಅತಿ ಹೆಚ್ಚು ಜೊತುಬೀಳುವುದು ಸರಿಯಲ್ಲ. ಇಂಗ್ಲಿಶ್ ನ 'ಎಟುಕು' ಭಾರಿಯಿರುವ ಸಮಯದಲ್ಲಿ ಅದನ್ನು ನಿರಾಕರಿಸುವುದು ಮೂರ್ಖತನ. ಹಿಂದೆ ನಮ್ಮವರು ಹೇಳುತ್ತಿದ್ದ ಮಾತನ್ನು ನೆನೆಯೊಣ. 'ಸಕಲ ವಿದ್ಯಾಪಾರಂಗತ' ನಾಗು ಎಂದು ದೊಡ್ಡವರು ಹರಸುತ್ತಿದ್ದರು. ಕುದುರೆ ಸವಾರಿ, ಕತ್ತಿವರಸೆ, ಮಲ್ಲಯುದ್ಧ, ಈಜು,ಎಲ್ಲಾ ಶಾಸ್ತ್ರ ಗಳಲ್ಲೂ ಪಾಂಡಿತ್ಯ ಇತ್ಯಾದಿ; ಈಗ ಸದ್ಯಕ್ಕೆ ಬೇಕಾಗಿರುವುದು ಉದರ ನಿರ್ವಹಣೆಗೆ ವಿದ್ಯೆ ! ಹೊಟ್ಟೆ ಹಸಿದಾಗ ಯಾವ ಶಾಸ್ತ್ರ ಸಹಾಯಕ್ಕೆ ಬರುತ್ತೆ ಸ್ವಾಮಿ, ಹೇಳಿ ?? ತಾಯ್ನುಡಿಯಲ್ಲಿ ಚೆನ್ನಾಗಿ ಅರ್ಥವತ್ತಾಗಿ ತಿಳಿಹೇಳಬಹುದು. ನಿಧಾನವಾಗಿ ಬೆರೆ ಎಲ್ಲಾ ಕಲಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2006 - 4:09pm — muralihr

ಉದರ ನಿರ್ವಹಣೆಗೆ ವಿದ್ಯೆ

muralihr's picture

ಸ್ವಾಮಿ,

ಸಾಪ್ಟ ವೇರ ಇ೦ಜಿನಿಯರ್‍ ಗಳಿಗೆ ಹೊಟ್ಟೆ ತು೦ಬ್ಸೋಕ್ಕು ಸಮಯ ಇರೋಲ್ಲಾ, ಬರೀ ಜೇಬು ತು೦ಬ್ಸೋ ಅಬ್ಬರದಲ್ಲಿರುತ್ತಾರೆ. ಇನ್ನು ನಿದ್ದೆ ಪಾಪ ವಿಮಾನ ನಿಲ್ದಾಣದಲ್ಲೋ , ಅಥವ ಕ್ಯಾಬ್ ನಲ್ಲೋ . ಊಟ ಕ೦ಪನಿ ಕ್ಯಾ೦ಟೀನಿನಲ್ಲಿ ಹಾಕುವ ತಮ್ಮಸ್ಸಿನ ಅಡಿಗೆ.  ಸ೦ಸಾರ ಕೂಡ ಬಿಟ್ಟು ಕೆಲಸ ಮಾಡಿದಗ ಬರೋ ಪ್ರೆಸರ್ (Pressure).  ಅದರಿ೦ದ ನಿಮ್ಮ ವಾಕ್ಯವನ್ನು -- ಬದಲಾಯಿಸಿ , ಉದರ ನಿರ್ವಹಣೆಗೆ ವಿದ್ಯೆ ==>> ಜೇಬು ತು೦ಬ್ಸೋ ವಿದ್ಯೆ.

ಮುರಳಿ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2006 - 5:50pm — ಸಂಗನಗೌಡ

ನಿಂಬೆ ಮತ್ತು ಹುಣಸೆ

ಸಂಗನಗೌಡ's picture

ಪವನಜರೇ, ಈ ಪಿತ್ತಕ್ಕೆ ಇಂಗ್ಲೀಸೊಂದೇ ಕಾರಣವಲ್ಲ, ಸಕ್ಕದವೂ ಕಾರಣ. ಸಕ್ಕದ ನಿಂಬೆಯಾದರೆ, ಪರಂಗಿ ನುಡಿ ಹುಣಸೆ. ಈ ಎರಡರಿಂದಾಗಿ ಈಗಿನ ಬೆರಕೆ ಕನ್ನಡದ ಹಾಲು ಕುಡಿದವರಿಗೆ ಪಿತ್ತ ಗ್ಯಾರಂಟಿ, ಈಗಿನ 'ದಿನಪತ್ರಿಕೆ' (ಕನ್ನಡದಲ್ಲಿ ಪತ್ತಿಗೆ ಎಂದರಾಗದೇ?) ಮತ್ತು 'ಪುಸ್ತಕ'(ಹೊತ್ತಿಗೆ ಎಂದರಾಗದೇ?) ಗಳಲ್ಲಿ 'ಸಕ್ಕದೋತ್ಸವ', ಸಿನಿಮಾ, ಟಿ.ವಿ ಗಳಲ್ಲಿ 'ಇಂಗ್ಲೀಸೋತ್ಸವ' ಇಂತದರಲ್ಲಿ ಎಲ್ಲಿದೆ ಕನ್ನಡ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡವೆನೆ ಸುಂಕವ ಹೇರುವುದೀ ನಾಡು
  • ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ರಾಜ್ಯೋತ್ಸವ
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಮಾಹಿತಿ ತಂತ್ರಜ್ಞಾನ, ಕನ್ನಡ ಮತ್ತು ಶಿಕ್ಷಣ ಬಗ್ಗೆ ಅರ್ಧ ದಿನದ ಕಾರ್ಯಾಗಾರ
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)
  • ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 554 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator