ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಭಿಕ್ಷೆ.-ಮಾನವೀಯತೆ...

June 30, 2008 - 3:24pm — Jayalaxmi.Patil

ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ್‍ನ ಸಿಗ್ನಲ್ ಬಳಿ ನನ್ನಂತೆ ನಿಮ್ಮಲ್ಲಿ ಕೆಲವರಾದರೂ ಗಮನಿಸಿರಲೇಬೇಕು. ಎರಡೂ ಕಡೆ ಭಿಕ್ಷುಕರ ಹಾವಳಿ ವಿವಿಧ ರೀತಿಯಲ್ಲಿ.ಅವರದ್ದೊಂದು ದೊಡ್ಡ ಟೀಮ್ ಇದೆ! ಸೊಂಟದಲ್ಲಿ ಮಗುವನ್ನಿಟ್ಟುಕೊಂಡೊ, ಬೆನ್ನಿಗೆ ಕಟ್ಟಿಕೊಂಡೊ ಅಳು ಮುಖ ಮಾಡಿಕೊಂದು ಹರೆಯದ ಹುಡುಗಿಯೊಬ್ಬಳು ಭಿಕ್ಷೆ ಕೇಳುತ್ತಿದ್ದರೆ ಬೆಂಗಳೂರಿಗೆ ಹೊಸಬರಾದರೆ ನಿಮಗೆ ಅಯ್ಯೋ ಪಾಪ ಎನಿಸದಿರದು. ಖಂಡಿತ ೫೦ಪೈಸೆ ಕೊಡಬೇಕೆಂದುಕೊಂಡವರು ೧-೨ ರೋಪಾಯಿ ಕೊಟ್ಟಿಬಿಡುತ್ತೀರಿ!!! ಸ್ನಾನ ಮಾಡದ,ಎಣ್ಣೆ ಕಾಣದ ತಲೆಗೂದಲಿನ,ಕೊಳಕು ಬಟ್ಟೆಯ,ಕಣ್ಣಲ್ಲಿ ಪಿಸಿರಿನೊಂದಿಗೆ ನೀರು ತುಂಬಿಕೊಂಡ ಚಿಕ್ಕ ಮಕ್ಕಳನ್ನು ಕಂಡರ ನಿಮಗೆ ಅಯ್ಯೋ ಪಾಪ ಅನಿಸದೆಯೆ ಇರುತ್ತದೆಯೆ?...ಅವರೀಗೂ ಭಿಕ್ಷೆ ಹಾಕುತ್ತೀರಿ. "ಎಲ್ಲೊ ಸ್ವಲ್ಪ ನನ್ನಿಂದ ಸಹಾಯವಾಯ್ತು" ಅನ್ನೊ ಸಮಾಧಾನ ನಿಮಗೆ. ಆದರೆ ನನ್ನಂಥವರಿಗೆ...? ನನಗಂತೂ "ಆಹಾ! ಇವರ ಹಾಗೆ ಇಷ್ಟು ನೈಜವಾಗಿ ನಾನು ಭಿಕ್ಷುಣಿಯ ಪಾತ್ರ ಮಾಡಿದರೆ ಆಸ್ಕರ್ ಅವಾರ್ಡ್ ಖಂಡಿತ ನನಗೇ ಸಿಗುತ್ತೆ!!" ಅನ್ನುವಷ್ಟು ಅಚ್ಚರಿ. ನಿಜಕ್ಕು ನಾನೆಷ್ಟು ಅವರಿಂದ ಪ್ರೇರಣೆಗೊಂಡಿದ್ದೇನೆಂದರೆ 'ನನಗೇನಾದರು ಅಂಥದ್ದೊಂದು ಪಾತ್ರ ದೊರಕಿದರೆ' ಪ್ರಶಸ್ತಿ ನನಗೇ ಕಟ್ಟಿಟ್ಟದ್ದು ತಿಳಿದುಕೊಳ್ಳಿ!

ಈ ಎರಡೂ ಸಿಗ್ನಲ್ಲಿನಲ್ಲಿ ಏನಿಲ್ಲವೆಂದರೂ ಕನಿಷ್ಟ ೧೦-೧೨, ೧೦-೧೨ ಜನ ಭಿಕ್ಷುಕರಿದ್ದಾರೆ! ಅವರಿಗೊಬ್ಬ ಬಾಸ್! ನೀವು ಕರುಣೆಯಿಂದ ಯಾವುದಾದರು ಭಿಕ್ಷೆ ಬೇಡುವ ಒಂದು ಪುಟ್ಟ ಮಗುವಿನೊಂದಿಗ ಒಂದ್ನಾಲ್ಕು ಮಾತಾಡಿದಿರೋ ಅಲ್ಲಿ ಆ ಬಾಸ್ ಪ್ರತ್ಯಕ್ಷನಾಗಿ ಮಗುವನ್ನು ಬಯ್ಯುತ್ತಾ ಅದನ್ನು ಅಲ್ಲಿಂದ ಓಡಿಸುತ್ತಾನೆ. ಕನ್ನಡದ ಯಾವುದೊ ಒಂದು (ಕ್ಷಮಿಸಿ ಹೆಸರು ನೆನಪಿಲ್ಲ) ಸಿನೇಮಾದಲ್ಲಿ ಈ ಭಿಕ್ಷಾ ಬ್ಯೂಸಿನೆಸ್ ಬಗ್ಗೆ ವಿವರವಾಗಿ ತೋರಿಸಿದ್ದಾರೆ. ಈಗ ಈ ಭಿಕ್ಷುಕರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ನೇರವಾಗಿ ಭಿಕ್ಷೆ ಬೇಡುವುದರ ಬದಲಾಗಿ ear buds ಮಾರುವುದು!! "ಅದರಲ್ಲೇನು ತಪ್ಪು? ಭಿಕ್ಷೆ ಬೇಡಿ ತಿನ್ನುವುದರ ಬದಲಾಗಿ ದುಡಿದು ತಿನ್ನಲು ಪ್ರಯತ್ನಿಸುತ್ತಿದ್ದಾರಲ್ಲ ಅದು ತಪ್ಪೆ?!" ಎಂದು ನೀವು ನನ್ನನ್ನೇ ಬೈಯಬಹುದು. ಸ್ವಲ್ಪ ಇರಿ, ಅವರು ನಮಗೆ ಆ ear buds ಮಾರುವುದು ದುಪ್ಪಟ್ಟು ರೇಟಿಗೆ!! ೫ ರೂಪಾಯಿಗೆ ಸಿಗುವ ಅದನ್ನು ಅವರು ನಮಗೆ ೧೦ ರೂಪಾಯಿಗೆ ಕೊಂಡುಕೊಳ್ಳಲು ಅಂಗಲಾಚುತ್ತಾರೆ. ನೀವು 'ಅಂಗಡಿಯಲ್ಲಿ ಜಾನ್ಸನ್ ಬಡ್‍ಗೆ ಹೆಚ್ಚು ದುಡ್ಡು ಕೊಡುತ್ತೇವೆ,ಅದಕ್ಕಿಂತ ಇದು ವಾಸಿಯಲ್ಲವೆ?' ಅಂದುಕೊಂಡು ಖುಷಿಯಿಂದಲೇ ಅವರ ಹತ್ತಿರ ಕೊಂಡುಕೊಳ್ಳುತ್ತೀರಿ. ಅಲ್ಲಿಗೆ ಮೊದಲು ನಿಮ್ಮ ಕರುಣೆಯ ಕೃಪೆಯಿಂದ ೧-೨ ರೂಪಾಯಿ ಗಿಟ್ಟಿಸುತ್ತಿದ್ದ ಆ ಭಿಕ್ಷುಕ ಈಗ ೫ ರೂಪಾಯಿ ಗಿಟ್ಟಿಸುತ್ತಾನೆ,ಜೊತೆಗೆ ನಿಮ್ಮ ಕರುಣೆಯ ಹಂಗಿಲ್ಲ! ... ನಿಮಗೆ ಇವರ ಈ ಮರ್ಮ ಅರ್ಥವಾದ ನಂತರ ನೀವು ಮೊದಲಿನಂತೆ ಭಿಕ್ಷುಕರನ್ನು ಕರುಣೆಯಿಂದ ನೋಡಲು ಸಾಧ್ಯವಾಗುವುದೇ? ನನಗಂತೂ ಇವರುಗಳಿಂದಾಗಿ ಇತ್ತೀಚಿಗೆ ನಿಜವಾದ ಅಸಹಾಯಕರ್ಯಾರೊ, ಢೋಂಗಿ ಯಾರೊ ತಿಳಿಯದಂತಾಗಿ ಗೊಂದಲವಾಗುತ್ತಿದೆ. ಸಹಾಯ ಮಾಡಲೊ ಬೇಡವೊ ಎಂಬ ಗೊಂದಲ. ಇದರಿಂದಾಗಿ ಮೆಲ್ಲನೆ ಮಾನವೀಯತೆ ಹಿಂದೆ ಸರಿದು ಅದರ ಜಾಗದಲ್ಲಿ ಅನುಮಾನ, ಅಸಡ್ಡೆ ಮನೆ ಮಾಡತೊಡಗಿದರೆ ನಿಜವಾದ ಅಸಹಾಯಕರ ಗತಿ ಏನು?

  • ಚುಟುಕು ಬರಹ
~.~
  • Login or register to post comments
  • 410 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 30, 2008 - 5:34pm — vikashegde

ಉ: ಭಿಕ್ಷೆ.-ಮಾನವೀಯತೆ...

vikashegde's picture

ನಿಜ, ಬೆಂಗಳೂರಿನಂತ ನಗರಗಳಲ್ಲಿ ಬಿಕ್ಷೆ ಅನ್ನುವುದು ದೊಡ್ಡ ಬಿಸಿನೆಸ್ಸು!. ಎಷ್ಟ್ರು ವ್ಯವಸ್ಥಿತವಾಗಿ ನೆಡೆಯುತ್ತದೆಂದರೆ ಅದರದ್ದೊಂದು ದೊಡ್ಡ ಜಾಲವೇ ಇದೆ.
ಎಲ್ಲ ಸರಿಯಾಗಿದ್ದೂ ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಕರುಣೆ ಹುಟ್ಟಿಸಿ ದುಡ್ಡು ಪಡೆಯುವವರೊದ್ದೊಂದು ಪಡೆಯಿದ್ದರೆ, ಮಕ್ಕಳ ಕೈಕಾಲು ಮುರಿದು ಭಿಕ್ಷೆಗೆ ಕೂಡಿಸಿ ಆ ಹಣವನ್ನು ತೆಗೆದುಕೊಳ್ಳುವ ಇನ್ನೊಂದು ಪಡೆ ! ಕೆಲವೊಂದು ಪಾರ್ಕುಗಳಲ್ಲಂತೂ ಇವರ ಹಾವಳಿ ವಿಪರೀತ. ಒಬ್ಬರಾದಮೇಲೊಬ್ಬರು ಬರುತ್ತಲೆ ಇರುತ್ತಾರೆ. ರೋಸಿ ಹೋಗುತ್ತದೆ.

ಇಯರ್ ಬಡ್ಸ್ ಅಥವಾ ಇನ್ನೇನನ್ನೋ ಮಾರುವುದು ಒಂದು ರೀತಿ ಒಳ್ಳೆಯದೇ ಬಿಡಿ. ಅಂಗಡಿಯವರು ಕೂಡ ಇದೇ ರೀತಿ ಜಾಸ್ತಿ ದುಡ್ಡು ಇಟ್ಟು ದೋಚುತ್ತಾರೆ. ಇವರು ರಸ್ತೆಯಲ್ಲೇ ಒಂದೆರಡು ರೂಪಾಯಿ ಜಾಸ್ತಿ ಪಡೆದುಕೊಳ್ಳುತ್ತಾರಷ್ಟೆ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 10:08pm — Jayalaxmi.Patil

ಉ: ಭಿಕ್ಷೆ.-ಮಾನವೀಯತೆ...

Jayalaxmi.Patil's picture

ಒಂದೆರಡು ರೂಪಾಯಿ ಹೆಚ್ಚಿಗೆ ಕೊಟ್ಟರೆ ತಪ್ಪಿಲ್ಲ ಅನ್ನೋದು ನಿಜವಾದರೂ ಅದರಿಂದ ಸಹಾಯವಾಗೋದು ಆ ಭಿಕ್ಷುಕರಿಗಲ್ಲ ಅನ್ನೋದು ನೋವಿನ ವಿಷಯ ವಿಕಾಸ್. ಅವರ ಸ್ಥಿತಿ ಅದರಿಂದ ಎಳ್ಳಷ್ಟೂ ಬದಲಾಗೊಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:43pm — roshan_netla

ಉ: ಭಿಕ್ಷೆ.-ಮಾನವೀಯತೆ...

roshan_netla's picture

ವಿಜಯ ಕರ್ನಾಟಕದಲ್ಲಿ ಒಮ್ಮೆ ಬರೆದಿದ್ರು ... ದಾರಿ ಬದಿಯಲ್ಲಿ ಮಾರೊ ಇಯರ್ ಬಡ್ಸ್ ಬಾರಿ ಹಾನಿಕಾರಕ.. ಅವುಗಳನ್ನು ಆಸ್ಪತ್ರೆಗಳ ತ್ಯಾಜ್ಯ ಗಳಲ್ಲಿ ಸಿಗುವ ಹತ್ತಿಗಳಿಂದ ಮಾಡುತ್ತಾರೆ ಅಂತ. ಆದುದರಿಂದ ಇಂತವುಗಳನ್ನು ತೆಗೆದು ಕೊಳ್ಳುವಾಗ ಜಾಗ್ರತೆ ವಹಿಸಿ. ಆಟಿಕೆ ಗಳೊ, ಇನ್ಯಾವುದೊ ತೊಂದರೆ ಕೊಡದ ವಸ್ತುಗಳಾದರೆ ಅಡ್ಡಿ ಇಲ್ಲ ಅನಿಸುತ್ತದೆ. ದುಡ್ಡು ಕೊಟ್ಟು ರೊಗಗಳನ್ನು ಕೊಂಡುಕೊಳ್ಳಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 7:42pm — Rajeshwari

ಉ: ಭಿಕ್ಷೆ.-ಮಾನವೀಯತೆ...

Rajeshwari's picture

ಈಗ ಭಿಕ್ಷೆ ಎಂಬುದು ಒಂದು ಬುಸಿನೆಸ್ಸ್ ಆಗಿದೆ, ಅನುಕಂಪದ ಅನುಕರಣೆಯಿಂದ ದುಡ್ಡನ್ನು ಸಂಗ್ರಹಿಸಿ, ಮನೆಗಳನ್ನು ಕಟ್ಟಿಕೊಂಡು, ಬಡ್ಡಿಗೆ ದಡ್ಡನ್ನು ಕೊಡುತ್ತಾರೆ. "ಭಿಕ್ಷುಕರು ಈಗ ಲಕ್ಷಾಧಿಪತಿಗಳು".

ನಿಜಕ್ಕು ಅಸಹಾಯಕರು ಸಹಾಯ ಕೇಳಿದಾಗ ಅನುಮಾನಿಸುವಂತಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 8:32pm — yuvapremi

ಉ: ಭಿಕ್ಷೆ.-ಮಾನವೀಯತೆ...

yuvapremi's picture

ಸತ್ಯದ ಸಂಗತಿಯಂದರೆ ಭಿಕ್ಷೆಗೆ ಮಾನವೀಯತೆಯ ಯೋಗ್ಯತೆ ಇಲ್ಲವೇ ಇಲ್ಲ.
ಭಿಕ್ಷೆ ಬೇಡೂವುದೆ ೨೪/೭ ಕೆಲಸವಾದಲ್ಲಿ ಅವರು ನ್ಯಾಯರೀತಿಯಲ್ಲಿ ಕೆಲಸಮಾಡುವುದಾದರು ಎಂದು. :x

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 10:03pm — Jayalaxmi.Patil

ಉ: ಭಿಕ್ಷೆ.-ಮಾನವೀಯತೆ...

Jayalaxmi.Patil's picture

೨೪/೭ ಭಿಕ್ಷೆ ಬೇಡುವವರು ಆರೋಗ್ಯವಂತ ಮೈಗಳ್ಳರಾದಲ್ಲಿ ನಿಮ್ಮ ಮಾತಿಗ ಖಂಡಿತೆ ನನ್ನ ಅನುಮೋದನೆ ಇದೆ ಯುವಪ್ರೇಮಿ. ಆದರೆ ನೆಮ್ಮದಿಯ ಸ್ವಸ್ಥ ಬದುಕು ಎಲ್ಲರ ಪಾಲಿಗೂ ಲಭ್ಯವಿರೊಲ್ಲ ಅನ್ನುವುದು ವಾಸ್ತವಾಂಶ. ಎಷ್ಟೋ ಜನ ದುಡೀಯಲು ಅಸಮರ್ಥರಾದ ಬಡತನದ ರೇಖೆಗಿಂತಲೂ ಕೆಳಗಿರುವ ಅಂಗವಿಕಲರು, ಮಕ್ಕಳಿಂದ ಹೊರ ಹಾಕಲ್ಪಟ್ಟ ನಿಶ್ಯಕ್ತ ಹಿರಿಯರು, ಪರದೇಸಿ ಪುಟ್ಟ ಕಂದಮ್ಮಗಳು ಭಿಕ್ಷೆ ಬೇಡಿ ಉಣ್ಣದೆ ಗತಿ ಇಲ್ಲ. ಅಂಥವರ ಬಗ್ಗೆ ಮಾನವೀಯತೆ ತೋರದಿದ್ದರೆ ಹೇಗೆ ಹೇಳಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 10:48pm — hamsanandi

ಉ: ಭಿಕ್ಷೆ.-ಮಾನವೀಯತೆ...

hamsanandi's picture

ಭಿಕ್ಷೆ ಬಿಸಿನೆಸ್ ಆಗಿರುವುದು ಹೊಸ ವಿಚಾರವೇನಲ್ಲ Smiling

ಓದಿಲ್ಲದವರು, ಆರ್ಥರ್ ಕಾನನ್ ಡಾಯಲ್ ನ "The Man with the Twisted Lip" ಎಂಬ ಕಥೆಯನ್ನು ಖಂಡಿತ ಓದಿ!

ವಿಕಿಪಿಡಿಯಾದ ಈ ಕೆಳಗಿನ ಪುಟದಲ್ಲಿ, ಕಥೆಯ ಸಾರಾಂಶವಿದೆ. ಕೊನೆ ತಿಳಿಯಲು ಇಷ್ಟವಿಲ್ಲದವರು, ಈ ಕೊಂಡಿಯನ್ನು ಚಿಟಕಿಸಬೇಡಿ! ಶೆರ್ಲಾಕ್ ಹೋಮ್ಸ್ ಪ್ರತಿ ಸಮಸ್ಯೆಯನ್ನು ಬಿಡಿಸುವ ರೀತಿಯನ್ನು ಓದುವುದೇ ಒಂದು ಸೊಗಸು!

http://en.wikipedia.org/wiki/The_Man_with_the_Twisted_Lip

ಹಿಂದೆ ವಾಸುದೇವರಾವ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದದ್ದು ಮಯೂರದಲ್ಲಿ ಪ್ರಕಟವಾಗಿತ್ತೋ ಏನೋ ಎಂಬ ಮಸುಕು ನೆನಪು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 12:20am — kalpana

ಉ: ಭಿಕ್ಷೆ.-ಮಾನವೀಯತೆ...

kalpana's picture

ಜಯಲಕ್ಷ್ಮಿಯವರೆ,
ಹೀಗೊಂದು ಗಾದೆಯಿದೆ,
Give a man a fish, he eats for one day,
Teach him to fish, and he eats for a lifetime.

ಸಹಾಯ ಮಾಡುವ ಇಚ್ಛೆಯಿದ್ದರೆ, ನಿಮಗೆ ತಿಳಿದಿರುವ ಬಡಕುಟುಂಬದ ಮಗುವನ್ನು ಓದಿಸಿ ಅಥವ ಒಂದು ತಿಂಗಳ ಶಾಲಾಶುಲ್ಕ ಕಟ್ಟಿ. ಕೂತು ತಿನ್ನುವ ಸೋಮಾರಿಗಳಿಗೆ ನಿಮ್ಮ ಅಮೂಲ್ಯ ಹಣ, ಸಮಯ ಪೋಲು ಮಾಡಬೇಡಿ. ಅಕಸ್ಮಾತ್ ಮಾಡಿದರೆ, ನಂತರ ಅದು ಸದ್ವಿನಿಯೋಗವಾಯಿತೇ ಎಂಬ ಚಿಂತೆ ಮಾಡಬೇಡಿ. ಇದರಿಂದ ನಿಮ್ಮ ಹಣ, ಸಮಯದ ಜೊತೆಗೆ ಮನಃಶಾಂತಿಯ ಪೋಲು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 10:46am — Jayalaxmi.Patil

ಉ: ಭಿಕ್ಷೆ.-ಮಾನವೀಯತೆ...

Jayalaxmi.Patil's picture

ಕಲ್ಪನ, ನಿಮ್ಮ ಸಲಹೆ ಅಮೂಲ್ಯವಾದುದು ಮತ್ತು ವಾಸ್ತವ. ಅದನ್ನೀಗಾಗಲೆ ನನ್ನ ಕೈಲಾದ ಮಟ್ಟಿಗೆ ಮಾಡುತ್ತಲಿದ್ದೇನೆ. ಬೀದಿಯಲ್ಲಿ ನಿಂತು ಭಿಕ್ಷೆ ಬೇಡುವವರ ಕುರಿತು, ಅವರಿಂದಾಗಿ ಮಾನವೀಯತೆಯ ಜಾಗದಲ್ಲಿ ಅನುಮಾನ, ಅಸಡ್ಡೆ ಮನೆ ಮಾಡುತ್ತ ಹೋದಲ್ಲಿ ಒದಗುವ ಅಪಾಯದ ಕುರಿತು ನಾನು ಮಾತಾಡುತ್ತಿದ್ದೇನೆ. ಸರಕಾರ ಇವರುಗಳಿಗಾಗಿಯೆ ವಸತಿ,ಶಿಕ್ಷಣದ, ಉದ್ಯೋಗದ ವ್ಯವಸ್ಥೆ ಮಾಡಿದೆ ಎಂದು ಕೇಳಿಪಟ್ಟಿದ್ದೇನೆ. ಆದರೆ ಅದಕ್ಕೆ ಒಗ್ಗದ ಜನ ಬೀದಿಗಿಳಿದು ಭಿಕ್ಷೆ ಬೇಡುತ್ತಾರೆ,ಅಂಥವರಿಗಾಗೇ ಕಾದು ಕುಳಿತ ಭಿಕ್ಷಾ ಬಾಸ್‍ಗಳು ಅವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ! ಇಂಥವರಿಂದಾಗಿ ನಾನಾ ಕಾರಣಗಳಿಂದ ಬೀದಿ ಪಾಲಾದ ಎಷ್ಟೋ ಅಸಹಾಯಕ ಜೀವಗಳು ಸರಕಾರ ಮಾಡಿದ ಅನೂಕಲತೆಯ ಬಗ್ಗೆ ಗೊತ್ತಿರದೆ,ಮೈಗಳ್ಳರ ಲೀಸ್ಟಿನಲ್ಲಿ ಸೇರಿಹೋಗುತ್ತಾರಲ್ಲಾ ಅವರೆಡೆಗಿನ ಮಾನವೀಯತೆ ಕುರಿತು ನಾನು ಮಾತಾಡುತ್ತಿರೋದು. ನನ್ನಂಥ ಮಧ್ಯಮ ವರ್ಗದ ಗೃಹಿಣಿಯರು ಮನಸಿದ್ದಲ್ಲಿ ಒಂದು ಲಿಮಿಟ್ಟಿನವರೆಗೆ ಮಾತ್ರ ಯಾರಿಗಾದರು ಸಹಾಯ ಮಾಡಬಲ್ಲೆವು. ಇದೂ ಕೂಡಾ ವಾಸ್ತವ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 9:32pm — kalpana

ಉ: ಭಿಕ್ಷೆ.-ಮಾನವೀಯತೆ...

kalpana's picture

ಹೌದು, ಜಯಲಕ್ಷ್ಮಿಯವರೆ. ಆದರೆ, ಇದಕ್ಕೆ ಪರಿಹಾರ ನನಗೂ ಗೊತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 1:35pm — roopablrao

ಉ: ಭಿಕ್ಷೆ.-ಮಾನವೀಯತೆ...

roopablrao's picture

ಇವುಗಳ ಹಿಂದೆ ಮತ್ತೊಂದು ಕರ್ಮಖಾಂಡವಿದೆ. ಬಾಡಿಗೆಗೆ ಮಗುವನ್ನು ತಂದು ಬಿಕ್ಷೆ ಬೇಡುವುದು
ನಾನು ಈಗಾಗಲೆ ಬರೆದಿರುವ ಈ ಕತೆ ಅದನ್ನೇ ಹೇಳುತ್ತದೆ ಈ ಕೊಂಡಿಯನ್ನು ನೋಡಿ

http://www.sampada.net/blog/roopablrao/24/06/2008/9450

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 1:36pm — roopablrao

ಉ: ಭಿಕ್ಷೆ.-ಮಾನವೀಯತೆ...

roopablrao's picture

ಸಾರಿ ಕರ್ಮಕಾಂಡ ಅಂತ ಓದಿಕೊಳ್ಳಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 1:36pm — roopablrao

ಉ: ಭಿಕ್ಷೆ.-ಮಾನವೀಯತೆ...

roopablrao's picture

ಸಾರಿ ಕರ್ಮಕಾಂಡ ಅಂತ ಓದಿಕೊಳ್ಳಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 6:32pm — Jayalaxmi.Patil

ಉ: ಭಿಕ್ಷೆ.-ಮಾನವೀಯತೆ...

Jayalaxmi.Patil's picture

ನೀವು ಬರೆದ ಕತೆ ಓದಿದೆ ರೂಪಾ. ಚಿಕ್ಕದಾಗಿ ಚೊಕ್ಕವಾಗಿದೆ. ನಿಜ ಮಗುವನ್ನು ಬಾಡಿಗೆಗೆ ತೆಗೆದುಕೊಂಡು ಭಿಕ್ಷೆ ಬೇಡುವುದು ನಾನೂ ಕೇಳಿ ತಿಳಿದಿದ್ದೇನೆ.

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 1:40pm — mahesha

ಉ: ಭಿಕ್ಷೆ.-ಮಾನವೀಯತೆ...

mahesha's picture

Smiling ಇವರಿಂದಾಗಿ ಕಾರಿನ ಗಾಜುಗಳನ್ನು ಇಳಿಸುವ ಹಾಗಿಲ್ಲ ಸಿಗ್ನಲ್ಲಲ್ಲಿ.

ಹೆಚ್ಚಿನವರಿಗೆ ಕನ್ನಡ ಬರಲ್ಲ. ಸುಮ್ನೆ ಅಡ್ಡಡ್ಡ ಬಂದ್ ಸಾಯ್ತಾರೆ.. ನನಗೆ ಎಲ್ಲಿ ಇವರಿಗೆ ಒಂದು ದೀಸ ಸಿಟ್ಟಿಂದ ಗುದ್ದುಬಿಟ್ತೀನ ಅಂತ ಹದರಿಕೆ.

ಟ್ರಾಪಿಕ್ ಪೋಲೀಸರು ಇದರಲ್ಲಿ ಸೇರಿರಬೇಕು.. ಇಲ್ಲದೇ ಇದ್ರೆ ರಿಂಗ್ ರೋಡಲ್ಲಿ ಇವರ ಕಾಟ ನೋಡಿಕೊಂಡು ಸುಮ್ನೇ ಇರ್ತಿದ್ರ?

ಇವರ ಜೊತೆಗೆ ಹೆಣ್ಣಿಗರ ಕಾಟಬೇರೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 7:15pm — cmariejoseph

ಉ: ಭಿಕ್ಷೆ.-ಮಾನವೀಯತೆ...

cmariejoseph's picture

ಅದು ಹೇಗೆ ವರ್ಷದ ೩೬೫ ದಿನವೂ ಈ ಹೆಂಗಸರು ಎಳೆ ಕೂಸೊಂದನ್ನು ಜೋತುಹಾಕಿಕೊಂಡು ಭಿಕ್ಷಾಟನೆ ಮಾಡುತ್ತಾರೆ ಎಂಬುದೇ ಆಶ್ಚರ್ಯ. ಈ ಅಲೆಮಾರಿ ಜನ ಯಾವುದಾದರೂ ಬಯಲಿನಲ್ಲಿ ಪ್ಲಾಸ್ಟಿಕ್ ಟೆಂಟ್ ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಕೆಲವೆಡೆಗಳಲ್ಲಿ ಮರದ ನೆರಳೇ ಇವರಿಗೆ ಆಸರೆಯಾಗುತ್ತದೆ. ಮಳೆ ಬಂದರೆ ಹತ್ತಿರದ ಅಂಗಡಿಗಳ ಜಗುಲಿಗಳೇ ಆಶ್ರಯತಾಣವಾಗುತ್ತವೆ. ಗಂಡಸರಾಗಲೀ ಹೆಂಗಸರಾಗಲೀ ಇವರಿಗೆ ಕೆಲಸ ಮಾಡಿ ಗೊತ್ತಿಲ್ಲ. ಆದರೂ ನಿರುಮ್ಮಳವಾಗಿ ಬದುಕುತ್ತಾರೆ. ಬೆಳ್ಳಂಬೆಳಗ್ಗೆಯೇ ವಾಸದೆಡೆಯಿಂದ ಹೊರಟು ವಿವಿಧ ದಿಕ್ಕುಗಳನ್ನು ಹಂಚಿಕೊಂಡು ಭಿಕ್ಷೆ ಬೇಡಲು ಹೊರಡುತ್ತಾರೆ. ಬೆಳಗ್ಗೆಯೂ ತಂಗಳು ಸಿಗುತ್ತದೆ, ಹಾಗೆಯೇ ರಾತ್ರಿಯೂ ಮಿಕ್ಕಿದನ್ನ ಮಿಕ್ಕಿದ ಸಾರು ಸಿಗುತ್ತದೆ. ಅಡಿಗೆ ಮಾಡುವ ತಾಪತ್ರಯವೇ ಇಲ್ಲ. ಭಿಕ್ಷೆ ಬೇಡುವುದು ಹವ್ಯಾಸ ಉಳಿದಂತೆ ಕದಿಯುವುದೇ ಇವರ ಚಾಳಿ. ಭಿಕ್ಷೆ ಬೇಡಲು ಮಗು ಒಂದು ನೆಪ ಅಷ್ಟೆ.
ಈ ಜನಾಂಗದ ಯುವಕರು ಜನನಿಬಿಡ ಜಾಗಗಳಲ್ಲಿ ಅಥವಾ ಕಿಕ್ಕಿರಿದ ಬಸ್ಸುಗಳಲ್ಲಿ ಚಾಕಚಕ್ಯತೆಯಿಂದ ಪರ್ಸ್ ಎಗರಿಸಿ ಮಟಾಮಾಯವಾಗುತ್ತಾರೆ. ಹೆಂಗಸರೂ ಅಷ್ಟೆ, ಬಸ್ಸಿನೊಳಗೆ ಜೋತಾಡಿಕೊಂಡೇ ಮಹಿಳೆಯರ ವ್ಯಾನಿಟಿ ಬ್ಯಾಗಿನಿಂದ ಮೊಬೈಲುಗಳನ್ನೂ ಹಣವನ್ನೂ ಎಗರಿಸಿಬಿಡುತ್ತಾರೆ. ಇದು ತಿಳಿದ ಕೆಲ ಬಸ್ಸಿನ ಕಂಡಕ್ಟರುಗಳೂ ಚಾಲಕರೂ ಇವರನ್ನು ಬಸ್ಸು ಹತ್ತಗೊಡುವುದಿಲ್ಲ.
ಬೆಳೆದ ಮಕ್ಕಳು ಆಟವಾಡುತ್ತಾ ಇಲ್ಲವೇ ಇಯರ್ ಬಡ್ ನಂತಹ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ಕಾಲ ಕಳೆಯುತ್ತಾರೆ, ಪಾರ್ಕಿಂಗ್ ಜಾಗದಲ್ಲಿ ನಿಂತು ವಾಹನದವರು ಬಂದಾಗ ವಾಹನವನ್ನು ಸ್ವಲ್ಪ ಒರೆಸಿದಂತೆ ಮಾಡಿ ಹಣಕ್ಕೆ ಕೈಚಾಚುತ್ತಾರೆ, ಕಡ್ಡಾಯ ಪ್ರಾಥಮಿಕ ಶಿಕ್ಷಣದ ವ್ಯಾಪ್ತಿಗೆ ಇವರು ಬರುವುದಿಲ್ಲವೇನೋ? ಪುಟ್ಟ ಮಕ್ಕಳು ಬಸ್ಸು ನಿಂತೆಡೆಯಲ್ಲಿ ಲಾಗ ಹಾಕುತ್ತಾ ಸರ್ಕಸ್ ನಡೆಸುತ್ತಾರೆ. ಗರ್ಭಿಣಿ ಹೆಂಗಸರು ಆ ಸರ್ಕಸ್ಸಿಗೆ ಡೋಲು ಹೊಡೆಯುತ್ತಾರೆ. ಆದರೆ ಅವರ ಸುಪ್ತ ಮನ ಯಾವಾಗಲೂ ವಸ್ತುಗಳನ್ನು ಎಗರಿಸಲು ಹೊಂಚು ಹಾಕುತ್ತಲೇ ಇರುತ್ತದೆ. ಗಂಡು ಹೆಣ್ಣೆಂಬ ಬೇಧವಿಲ್ಲದೆ ಎಲ್ಲರೂ ಸಾರಾಯಿ ಕುಡಿದು ರಾತ್ರಿ ಬಹುಹೊತ್ತಿನವರೆಗೆ ಜಗಳಾಡುತ್ತಾರೆ. ಯಾವ ಸಮಾಜ ಸೇವಾ ಸಂಸ್ಥೆಗೂ ಇವರು ನಿಲುಕುವುದಿಲ್ಲ. ಇವರಿಗೆ ಯಾವ ದೇವರುಗಳೂ ಇಲ್ಲ. ಸ್ನಾನ ಶುಚಿತ್ವ ಬೇಕಾಗಿಲ್ಲ. ಇನ್ನು ಮತಪಟ್ಟಿಯಲ್ಲಿ ಇವರ ಹೆಸರಿಲ್ಲ, ರೇಷನ್ ಕಾರ್ಡೂ ಇವರಿಗಿಲ್ಲ ಏಕೆಂದರೆ ಇವರಿಗೆ ವಿಳಾಸವೇ ಇಲ್ಲ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!
  • ಹೀಗೂ ಜೀವಿಸಬಹುದೇ?
  • ಪಾಪ..ತಾಯಿ ಚಿಕ್ಕಮಗುವನ್ನು ಎತ್ತಿಕೊಂಡೇ ಭಿಕ್ಷೆ ಬೇಡುತ್ತಿರುವುದು. ಚಿತ್ರ ಕೃಪೆ: ಗೂಗಲ್ ಇಮೇಜ್.
  • ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ
  • ಹಸಿವು
Syndicate content

ಲೇಖಕರು

Jayalaxmi.Patil's picture

ಪೂರ್ಣ ಹೆಸರು
ಜಯಲಕ್ಷ್ಮೀ.ಪಾಟೀಲ್.

ಪರಿಚಯ

ಓದುವ, ಸ್ವಲ್ಪ ಬರೆಯುವ ಹವ್ಯಾಸವಿದೆ. ಸಂಗೀತ ಇಷ್ಟ. ಅಭಿನಯ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿಮಾನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator