ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

June 30, 2008 - 9:07pm — kalpana

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ ಸಾಮರ್ಥ್ಯವನ್ನು ಸೀಮಿತಗೊಳಿಸದೆ, ರಾಜಕೀಯ ಇತ್ಯಾದಿಯ ಬಗ್ಗೆ ಬರೆದು, ಸಮಾಜವು ಮಹಿಳಾ ಲೇಖಕಿಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕೆಂದು.

ನನಗೆ ಹಲವು ಬಗೆಗಳಲ್ಲಿ ಇದು ತಪ್ಪು ಎನ್ನಿಸಿತು.
ಒಂದು, ಸಮಾಜದಲ್ಲಿ ಸಾಮಾನ್ಯ ಗೃಹಿಣಿಗೆ ಈ ನಡುವೆ ಬೆಲೆ ಬಹಳ ಕಡಿಮೆಯಾಗಿದೆ. ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರುತ್ತಾಳೆಂದರೆ, ಅಯ್ಯೊ, ಅಷ್ಟೇನಾ? ಎಂದು ಹೆಂಗಸರೇ ಅವಳನ್ನು ಅಲ್ಲಗೆಳೆಯುತ್ತಾರೆ! ಒಂದು ಕುಟುಂಬವನ್ನು ಸರಿಯಾಗಿ ಪೋಷಿಸಬೇಕಾದರೆ ಒಬ್ಬ ಗೃಹಿಣಿ ಪಡುವ ಶ್ರಮವನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ, ಅವಳಿಗೆ ದುಡ್ಡೂ ಸಿಗುವುದಿಲ್ಲ! ಇಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದ ಯಾರ್ಯಾರಿದ್ದೀರೋ ಒಂದು ಕ್ಷಣ ನಿಮ್ಮ ಚಿಕ್ಕಂದಿನಲ್ಲಿ ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹೇಗಿರುತ್ತಿತ್ತೆಂದು ನೆನೆಸಿಕೊಳ್ಳಿ. ಆಗ ಮನೆಯಲ್ಲಿರುವ ತಾಯಿಯ ಮಹಿಮೆ ಅರ್ಥವಾಗುತ್ತೆ. ಹೀಗಿರುವಾಗ, ಗೃಹಿಣಿಯ ಹಿರಿಮೆಯನ್ನು ಎತ್ತಿ ಹಿಡಿಯುವುದನ್ನು ಬಿಟ್ಟು, ಅಡುಗೆ, ಕುಟುಂಬದ ಬಗ್ಗೆ ಬರೆಯುವುದೂ ಸಹ ಕೀಳೆಂದರೆ ಹೇಗೆ?

ಎರಡು, ಮಹಿಳೆಗ್ಯಾಕೆ ತಾನು ಗಂಡಸರಿಗೆ ಸಮ ಎಂದು ತೋರಿಸುವ ಉತ್ಕಟ ಆಸೆ? ಪುರುಷರು ರಾಜಕೀಯ ಇತ್ಯಾದಿಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ. ಹಾಗಂತ, ಅವರು ಅವು ತೆಳು ವಿಷಯಗಳು, ನಾವು ಅಡುಗೆಯ ಬಗ್ಗೆ ಬರೆಯಬೇಕು. ಹೆಂಗಸರಿಗೆ ಸಮ ಆಗಬೇಕು. ಇಲ್ಲದಿದ್ದರೆ, ನಾವು ಸಮಾಜದಲ್ಲಿ ಮುಖ ತೋರಿಸಲು ಲಾಯಕ್ಕಿಲ್ಲ ಎಂದೇನು ಎಣಿಸುವುದಿಲ್ಲ ಬದಲಿಗೆ, ಹೆಂಗಸರಿಗೂ ಅಡುಗೆ, ಸಂಸಾರ ವಿಷಯಗಳು ತೂಕದ್ದಲ್ಲ ಎನ್ನುವ ಭಾವನೆ ಬರಿಸುತ್ತಾರೆ! ಹೆಂಗಸರು, ಸಮಾಜದ ದೃಷ್ಟಿಕೋನದಲ್ಲಿರುವ ಡೊಂಕು ತಿದ್ದದೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೋಗುತ್ತಾರೆ. ಇದು ನೋಡಿ, ವಿಪರ್ಯಾಸ.

ಮೂರು, ಎರಡನೆಯ ಪಾಯಿಂಟನ್ನೆ ವಿಸ್ತರಿಸುತ್ತ, ಮಹಿಳೆ ತಾನು ಗಂಡಸಾಗಬೇಕೆಂದು ಬಯಸದೆ, ತನ್ನ ಹೆಣ್ತನಕ್ಕೆ ಗೌರವ ಕೊಡುವುದನ್ನು ಸಮಾಜಕ್ಕೆ ಕಲಿಸಬೇಕು. ಅಂದರೆ, ಪ್ರಕೃತಿ ಅವಳನ್ನು ಯಾವುದಕ್ಕಾಗಿ ಸೃಷ್ಟಿಸಿದೆಯೋ ಅದನ್ನು ಸಮಾಜ ಗುರುತಿಸಿ ಅದಕ್ಕೆ ಬೆಲೆ ಕೊಡುವಂತೆ ಕೇಳಬೇಕು. ಅದು ಬಿಟ್ಟು, ತಾನೂ ಗಂಡಸು ಮಾಡುವುದೆಲ್ಲವನ್ನೂ ಮಾಡಿದರೆ ತನಗೆ ಬೆಲೆ ಸಿಗುತ್ತೆಂಬ ಭ್ರಮೆಯ ಹಿಂದೆ ಹೋಗಬಾರದು. ಇದು ಉಪದೇಶದ ಹಾಗೆ ಅನ್ನಿಸಿದರೂ, ಸ್ವಲ್ಪ ವಿಶ್ಲೇಷಿಸಿದರೆ, ನಿಜದ ಅರಿವಾಗುತ್ತೆ.

  • ಪ್ರಚಲಿತ
~.~
  • Login or register to post comments
  • 369 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 6, 2008 - 11:26pm — ರೇಖಾ

ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ರೇಖಾ's picture

ನಿಮ್ಮ ವಾದಕ್ಕೆ ನನ್ನ ಪೂರ್ತಿ ಸಮ್ಮತಿ ಇದೆ ಕಲ್ಪನಾ ಅವರೇ.

ನಾನೂ ಮನೆಯಲ್ಲಿಯೇ ಇರುವವಳು. ಹಾಗಂತ ನನಗೆ ಅದರ ಬಗ್ಗೆ ಕೀಳರಿಮೆ ಇಲ್ಲ. ಗೌರಿಯನ್ನು ಸಲಹುತ್ತ ನಾನು ಒಬ್ಬ ಗಂಡಸು ಮಾಡಬಹುದಾದ ಕೆಲಸಕ್ಕಿಂತ ಹೆಚ್ಚಿಗೇ ಮಾಡುತ್ತಿದ್ದೇನೆ. ಇದು ಕೆಲಸವಲ್ಲವಾ? ಸಂಬಳ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಇದನ್ನು ಕೀಳು ಎಂದು ಹೇಳಲಾದೀತಾ?

ನಾನು ಪಲ್ಲವಿಯವರ ಬರಹ ಇನ್ನೂ ಓದಿಲ್ಲ. ಓದಿದರೆ, ಬಹುಶಃ ನೀವು ಬರೆದ ರೀತಿಯಲ್ಲಿಯೇ ಪ್ರತಿಕ್ರಿಯೆ ಬರೆದೇನು. ಗಂಡಸರನ್ನು ಅನುಸರಿಸುವುದೇ ಹೆಣ್ಣುಮಕ್ಕಳ ಕೆಲಸವಾಗಬಾರದು. ತನಗೆ ಸಾಮರ್ಥ್ಯ ಇರುವ ಕ್ಷೇತ್ರಗಳ ಬಗ್ಗೆ ಆಕೆ ಬರೆಯುವುದರಲ್ಲಿ ತಪ್ಪೂ ಇಲ್ಲ, ಅದು ಕೀಳರಿಮೆಯ ಕೆಲಸವೂ ಅಲ್ಲ.

ಇದೊಂದು ಉತ್ತಮ ಚರ್ಚೆಯಾಗಬಲ್ಲ ವಿಷಯ ಎಂದು ನಾನು ಅಂದುಕೊಂಡಿದ್ದೇನೆ. ರೂಪಾ ಈ ಬಗ್ಗೆ ಏನು ಹೇಳುತ್ತಾರೆ?

- ರೇಖಾ ಚಾಮರಾಜ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 9:41am — kalpana

ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

kalpana's picture

ರೇಖಾರವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಪಲ್ಲವಿಯವರ ಈ ಲೇಖನದ(http://sampada.net/blog/pallavidharwad/22/06/2008/9411) ಕೆಳಗಿನ ಪ್ರತಿಕ್ರಿಯೆಯಲ್ಲಿ ಈ ಮಾತು ಬಂದಿತ್ತು. ಪಲ್ಲವಿಯವರ ಅಭಿಪ್ರಾಯ ನಾನೇ ತಪ್ಪಾಗಿ ಅರ್ಥ ಮಾಡಿಕೊಂಡೆನೋ ಏನೋ ಗೊತ್ತಿಲ್ಲ. ಆದರೆ ಈ ವಿಷಯವಾಗಿ ನನ್ನ ನಿಲುವಂತೂ ನೀವು ಹೇಳಿದ ಹಾಗೆ ಇದೆ. ನನಗೆ ನೀವು ಬರೆದ "ಗಂಡಸರನ್ನು ಅನುಸರಿಸುವುದೇ ಹೆಣ್ಣುಮಕ್ಕಳ ಕೆಲಸವಾಗಬಾರದು. ತನಗೆ ಸಾಮರ್ಥ್ಯ ಇರುವ ಕ್ಷೇತ್ರಗಳ ಬಗ್ಗೆ ಆಕೆ ಬರೆಯುವುದರಲ್ಲಿ ತಪ್ಪೂ ಇಲ್ಲ, ಅದು ಕೀಳರಿಮೆಯ ಕೆಲಸವೂ ಅಲ್ಲ." ಎಂಬ ಮಾತು ಇಷ್ಟವಾಯಿತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
  • ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
  • ಸ್ತ್ರೀವಾದಿ ಏಕಾಗಬಾರದು?
  • ವಿಜಯದಾಸರು
  • ಅಡುಗೆಯ ಸಂಭ್ರಮ
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 177 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator