ಲವ್ ಅಟ್ ಫಸ್ಟ್ ಸೈಟ್ ?
ಬಸ್ ಸ್ಟಾಪ್‌ಗೆ ಬರುತ್ತಿದ್ದಂತೆ ಅವಳ ಮನದಲ್ಲಿ ಆತಂಕ ಎಂದಿನಂತೆ ಇಂದೂ ಸೀಟ್ ಸಿಗುವುದಿಲ್ಲ ಆದರೆ ಬಸ್ ಮಿಸ್ ಆದರೆ ಮತ್ತೆ ಆ ಕೆಟ್ಟ ಮೂತಿಯ ಬಾಸ್‍ನ ಹತ್ತಿರ ಉಗಿಸಿಕೊಳ್ಳಬೇಕು .
"ಬೆಳಗ್ಗೆ ಬೇಗ ಎದ್ದ್ದೇಳ್ರಿ ಯಾಕೆ ರಾತ್ರಿ ನಿದ್ದ್ದೆ ಬರೋದಿಲ್ವಾ ?" ಅಂತ ಕುಹಕ ಪ್ರಶ್ನೆ ಬೇರೆ .
ಮನೇಲಿ ಕಾಯಿಲೆ ಬಿದ್ದ ಅಮ್ಮಂಗೆ , ಡ್ಯೂಟಿಗೆ ಟೈಮ್ ಆಗಿರೋ ಅಪ್ಪನಿಗೆ ಕಾಲೇಜಿಗೆ ಹೋಗೊ ತಮ್ಮಂಗೆ ಅಡಿಗೆ ಮಾಡಿ ತಿಂಡಿ ಮಾಡಿ ಬರುವಷ್ಟಲ್ಲಿ ಮಾಗಿ ಹೋಗುತ್ತಿರುವ ವಯಸನ್ನು ಲೆಕ್ಕಿಸಲೂ ಸಮಯವಾದರೂ ಎಲ್ಲಿದೆ?.
ಎಲ್ಲಿದ್ದಾನೋ ಆ ಪುಣ್ಯಾತ್ಮ ಮದುವೆಯಾಗಲು ಬರುವವನು ತನ್ನ ಕಷ್ಟವನ್ನೆಲ್ಲಾ ದೂರ ಮಾಡಿದರೆ ಸಾಕು.
ಅವಳು ಬಸ್ ಸ್ಟಾಂಡ್ ತಲುಪಿಯೇ ಇರಲಿಲ್ಲ ಅಷ್ಟರಲ್ಲಿ ಅವಳನ್ನು ದಾಟಿಕೊಂಡು ಬಸ್ ಮುಂದೆ ಹೋಗಿ ನಿಂತಿತು .
ಬಸ್ ಹೋಗಿ ಬಿಡುತ್ತದೆ ಎಂಬ ಆತಂಕದಿಂದ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಓಡಿದಳು ಬಸ್ ಸ್ಟಾರ್ಟ್ ಆಗಿಯೇ ಬಿಟ್ತಿತು ಹಾಗು ಮುಂದೆ ಓಡುತಿದ್ದವಳಿಗೆ ಹಿಂದಿನ ಬಾಗಿಲಿನಿಂದ ಒಂದು ಚಾಚಿದ ಕೈ ಕಾಣಿಸಿತು.
ಚಾಚಿದ ಕೈ ಇವಳನ್ನು ಕರೆಯುತ್ತಿತ್ತು
ಆ ಕೈ ಹಿಡಿದಳು ಆತ ಅವಳನ್ನು ಹಿಡಿದು ಮೇಲೆ ಹತ್ತಿಸಿದ
ಜನ ಜಂಗುಳಿಯಿಂದ ಬಸ್ಸು ಅರೆಗತ್ತಲ್ಲಾಗಿತ್ತು
ಅವಳು ಇನ್ನೂ ಸಾವರಿಸಿಕೊಂಡಿರಲಿಲ್ಲ . ಬಸ್ ತುಂಬ ಜನವೋ ಜನ ಸ್ವಲ್ಪ ಹೊತ್ತು ಹಾಗೆ ನಿಂತಿದ್ದಳು. ನಂತರ ತಾನು ಅವನ ಮೇಲೆ ಒರಗಿದ್ದು ಗಮನಕ್ಕೆ ಬಂದಾಗ ಸಂಕೋಚದಿಂದ ದೂರ ಸರಿದು ಆತನ ಮುಖ ನೋಡಿ ಥ್ಯಾಂಕ್ಸ್ ಹೇಳಿದಳು.
ಅವಳ ಸ್ಪರ್ಶದಿಂದಲೋ ಏನೂ
ಆತನೂ ವಿದ್ಯುತ್ ಶಾಕ್‌ಗೆ ಒಳಗಾದವನಂತೆ ಗರ ಬಡಿದ ಹಾಗೆ ನಿಂತು ಅವಳನ್ನೇ ನೋಡುತ್ತ ಪೆಚ್ಚು ಪೆಚ್ಚಾಗಿ ನಕ್ಕು ಪರವಾಗಿಲ್ಲ ಎಂದ.
ಅವಳ ಕಣ್ಣಲ್ಲಿ ಮಿಂಚು ಅವನ ಮೈಯ್ಯಲ್ಲಿ ಮಿಂಚು
ಮುಂದೆ ಹೋಗಬಹುದಾದಷ್ಟು ಜಾಗವಿದ್ದರೂ ಅಲ್ಲೇ ನಿಂತು ಮುಂದೆ ಹೋಗುವಂತೆ ನಟಿಸಿದಳು
"ಹೆ ಹೆ ಮುಂದೆ ಜಾಗ ಇಲ್ಲ ಇಲ್ಲೇ ನಿಂತುಕೊಳ್ಳಿ ಆಮೇಲೆ ಸ್ವಲ್ಪ ಜನ ಖಾಲಿ ಆದ ಮೇಲೆ ಮುಂದೆ ಹೋಗಿ" ಆತ ಅವಳ ಕಣ್ಣನ್ನೇ ನೋಡುತ್ತಾ ಹೇಳಿದ.
ಇವಳೂ ಹೂ ಎನ್ನುವಂತೆ ತಲೆ ಆಡಿಸಿದಳು.
ಕೊಂಚ ಕಾಲ ಮೌನ ರಾಜ್ಯವಾಳಿತು ಬಸ್ ಕುಲುಕಿದಾಗಲೆಲ್ಲಾ ಇಬ್ಬರೂ ಹತ್ತಿರವಾಗಿ ಮತ್ತೆ ದೂರವಾಗುತ್ತಿದ್ದರು.
ನಂತರ ಇವಳಲ್ಲಿ ಏನೂ ಆಸೆ ಚಿಗುರತೊಡಗಿತು ಆತ ಚೆಲುವಾಂತ ಚೆನ್ನಿಗನಂತೆ ಕಾಣತೊಡಗಿದ
ಅವನಿಗೂ ಈಕೆ ದೇವಲೋಕದ ಅಪ್ಸರೆಯಂತೆ ಭಾಸವಾಗತೊಡಗಿತು
ಕಣ್ಣಲ್ಲಿ ಪ್ರೇಮ ಸಂದೇಶ ರವಾನೆಯಾಗತೊಡಗಿದವು. ಕನಸುಗಳು ಅಲ್ಲಿಂದ ಎಲ್ಲೆಲ್ಲೋ ಹಾರಾಡಿತು
ಅಷ್ತರಲ್ಲಿ ಕಿಟಕಿಗೆ ಅಡ್ಡ ನಿಂತಿದ್ದ ಒಬ್ಬ ಇಳಿದು ಹೋದ
ಬೆಳಕು ಪೂರ್ಣವಾಗಿ ಬಂ ತು
ಈಕೆ ತನ್ನ ಚೆಲುವನನ್ನು ನೋಡಲು ತಿರುಗಿದಳು
" ಛೀ ಥೂ ಕೊಳಕ " ಮನಸಲ್ಲಿ ಅಂದುಕೊಂಡಳು ಮಾಸಿದ ಬಟ್ಟೆ, ಕುರುಚಲು ಗಡ್ಡ
ಅಬ್ಬಾಬ್ಬ ಏನೂ ಮಾತಾಡದೇ ಮುಂದೆ ಹೋಗಲು ನುಗ್ಗಿದಳು
ಈತ ತನ್ನ ಮನ ಕದ್ದವಳ ಮತ್ತೊಮ್ಮೆ ಬೆಳಕಿನಲ್ಲಿ ನೋಡಲು ಅವಳತ್ತ ಕಣ್ಣಾಡಿಸಿದ
" ಅಯ್ಯೋ ಇದೇನು ಹೀಗಿದಾಳೆ ಮುಖದ ಮೇಲೆ ಗುಳ್ಳೆ ಬೇರೆ"
ಅಬ್ಬ ಹಿಂದೆ ಹೋಗಿ ಬಿಡುವುದೇ ವಾಸಿ ಎಂದುಕೊಂಡು ಆತ ಇನ್ನೂ ಹಿಂದೆ ಹೋದ
ಅವಳು ಹಿಂದೆ ನೋಡದೇ ಮುಂದೆ ನುಗ್ಗಿದಳು
ಲವ್ ಅಟ್ ಫಸ್ಟ್ ಸೈಟ್ ಕೊನೆಯ ಸೈಟ್ ಗೂ ಕಾಯದೆ ಕೊನೆಯಾಗಿತ್ತು

- Login or register to post comments
- 665 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲವ್ ಅಟ್ ಫಸ್ಟ್ ಸೈಟ್ ?
ಮೊದಲರ್ದ ಭಾಗ ಟೇಬಲ್ ಮೇಲೆ ತಬಲಾ ತರಹ ಬಡಿಯುತ್ತಾ ಓದುತ್ತಿದ್ದೆ , ಎಲ್ಲಾ ಸೆಕೆಂಡ್ ಹಾಫ್ ಅಲ್ಲಿ ಸ್ಟಾಪ್ ಆಗೋಯ್ತು

ಸಕತ್ತಾಗಿ ಬರೀತೀರ ಕಣ್ರೀ
ನಿಮ್ಮವನೇ,
ಅರವಿಂದ
ಉ: ಲವ್ ಅಟ್ ಫಸ್ಟ್ ಸೈಟ್ ?
ತುಂಬಾ ವಂದನೆಗಳು


http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
ಚೆನ್ನಾಗಿತ್ತು ರೂಪ!
ಉ: ಲವ್ ಅಟ್ ಫಸ್ಟ್ ಸೈಟ್ ?
ಥ್ಯಾಂಕ್ಸ್ ಕಲ್ಪನಾ

http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
Ree Roopa avare kate enoo chennagide . aadare antya Ee reeti irabaradaagittu.
ಉ: ಲವ್ ಅಟ್ ಫಸ್ಟ್ ಸೈಟ್ ?
ಕತೆ ಚೆನ್ನಾಗಿದೆ ಎಂದದ್ದಕ್ಕೆ ಥ್ಯಾಂಕ್ಸ್
ಆದರೆ ಅಂತ್ಯ ಹಾಗೆ ಇರಬೇಕು ಎನ್ನುವ ಕಾರಣಕ್ಕೆ ಟೈಟಲ್ ಮುಂದೆ ? ಹಾಕಿದ್ದು
http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
ಲವ್ ಅಟ್ ಫಸ್ಟ್ ಸೈಟೊ ಸೆಕೆಂಡ್ ಸೈಟೊ...!!
ಈ ಸೈಟಿನ ಬೆಲೆಗಳು ಜಾಸ್ತಿಯಾದ ದಿನಗಳಿಂದ ಯಾವ ಸೈಟೊ ಸಿಗದಂತಾಗಿದೆ.

ಸದ್ಯಕ್ಕೆ ಯಾವುದಾದರೊಂದು ಸೈಟು ನಮ್ಮ ಕಣ್ಣುಗಳಿಗೆ ಕೆಲವು ಸೆಕೆಂಡ್ಗಳಷ್ಟು ಸುಖ ಕೊಟ್ಟರೆ ಸಾಕು ಅಲ್ಲವೆ ?
ಕಥೆ ಸುಂದರವಾಗಿದೆ ರೊಪ ಮ್ಯಾಡಮ್..!!
ನಿಮ್ಮ ಕಥೆಯ ಮೇಲೆ ನನಗೆ ಲವ್ ಅಟ್ ಫಸ್ಟ್ ಸೈಟ್ ಆಯ್ತು....!!
-ಯುವಪ್ರೇಮಿ
ಉ: ಲವ್ ಅಟ್ ಫಸ್ಟ್ ಸೈಟ್ ?
ನಾನು ನಮ್ಮ ಏರಿಯಾದಲ್ಲಿ ಒಂದು ಸೈಟ್ ಮಾಡೋಣ ಅಂತ ಕಾದಿದ್ದೆ ಬಂತು ಯಾವ ಸೈಟ್‌ಗೂ ನನ್ನ ಮೇಲೆ ಲವ್ ಆಗಿಲ್ಲವೇನೋ ಬಾರಿ ಬೆಲೆ ಕೇಳ್ತಿವೆ
"ಕಥೆ ಸುಂದರವಾಗಿದೆ ರೊಪ ಮ್ಯಾಡಮ್..!!"
ರೋಪ ಅಲ್ಲ ರೂಪ
ಕತೆ ಸುಂದರವಾಗಿದೆ ಎಂದದ್ದಕ್ಕೆ ಥ್ಯಾಂಕ್ಸ್
http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
ನೀವು ಕತೆಗಳನ್ನ ಚೆನ್ನಾಗಿ ಬರೀತೀರ. ಪತ್ರಿಕೆಗಳಿಗೆ ಏಕೆ ಕಳಿಸಿಕೊಡಬಾರದು ಅಂತ ?!
**************************
http://vikasavada.blogspot.com/
**************************
ಉ: ಲವ್ ಅಟ್ ಫಸ್ಟ್ ಸೈಟ್ ?
ಪತ್ರಿಕೆ ಕಳಿಸೋ ಅಷ್ಟು ತಾಳ್ಮೆ , ಸಮಯ ನನಗೆ ಇಲ್ಲ ವಿಕಾಸ್ ಅದೇ ಸಮಸ್ಯೆ
http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
ಚಂದ ಕತೆ ಬರೆಯೋವಷ್ಟು ತಾಳ್ಮೆ ಇರುವಾಗ ಕಳಿಸೋವಷ್ಟು ತಾಳ್ಮೆಯೂ ಇದ್ರೆ ಚೆನ್ನಾಗಿತ್ತು.
ಈಗಂತೂ ಹೇಗಿದ್ರೂ ಸಾಫ್ಟ್ ಕಾಪಿಯನ್ನೇ ಮೇಲ್ ಮಾಡಬಹುದು.
ನನಗಂತೂ ಬರೆಯಲೂ ತಾಳ್ಮೆ ಇಲ್ಲ
**************************
http://vikasavada.blogspot.com/
**************************
ಉ: ಲವ್ ಅಟ್ ಫಸ್ಟ್ ಸೈಟ್ ?
ಮೊದಲರ್ಧ ಓದುವಾಗ ಮಾಮೂಲು ಅನಿಸ್ತು. ಅಂತ್ಯ ನೈಜವಾಗಿ ಮೂಡಿಬಂದಿದೆ. ಖುಷಿ ಆಯ್ತು.
ಜಯಲಕ್ಷ್ಮೀ.ಪಾಟೀಲ್.
ಉ: ಲವ್ ಅಟ್ ಫಸ್ಟ್ ಸೈಟ್ ?
ತುಂಬಾ ಥ್ಯಾಂಕ್ಸ್ ಜಯಲಕ್ಷ್ಮಿಯವರಿಗೆ
ದಿನನಿತ್ಯ ಬಸ್‌ಗಳಲ್ಲಿ ನಡೆಯೋ ಕತೆ ಇದು
http://thereda-mana.blogspot.com/
ರೂಪ
ಉ: ಲವ್ ಅಟ್ ಫಸ್ಟ್ ಸೈಟ್ ?
ಸಿಕ್ಕಾಪಟ್ಟೇ ನಗು ಬ೦ತೂ !
ಉ: ಲವ್ ಅಟ್ ಫಸ್ಟ್ ಸೈಟ್ ?
ರೂಪಾ ಅವರೇ,
ಬೆಳಕು ಚೆನ್ನಾಗಿದ್ದಾಗಲೇ ಅಲ್ಲವೇ ನಿಜ ರೂಪ ಗೊತ್ತಾಗೋದು? ಆಕರ್ಷಣೆ ಅದ್ಯಾವುದನ್ನೂ ಗಮನಿಸುವುದಿಲ್ಲ. ಮೊದಮೊದಲು ಚೆನ್ನಾಗಿದೆ ಎಂದು ಅನ್ನಿಸುವುದು ಈ ಕಾರಣಕ್ಕೆ ಅನ್ನೋದನ್ನು ನಿಮ್ಮ ಕತೆಯ ಅಂತ್ಯ ಒತ್ತಿ ಹೇಳಿದೆ.
ನಿತ್ಯದ ಜಂಜಡಗಳ ನಡುವೆಯೂ ಇಂಥವನ್ನು ಗುರುತಿಸುತ್ತೀರಲ್ಲ? ನೀವು ನಿಜಕ್ಕೂ ಸೂಕ್ಷ್ಮಮತಿಗಳು.
- ರೇಖಾ ಚಾಮರಾಜ
ಉ: ಲವ್ ಅಟ್ ಫಸ್ಟ್ ಸೈಟ್ ?
ಹಹ್ಹ.... ಚೆನ್ನಾಗಿದೆ ಇನ್ನೂ ಇಂತಹ ಕಥೆ ಬರೆಯಿರಿ....
ಉ: ಲವ್ ಅಟ್ ಫಸ್ಟ್ ಸೈಟ್ ?
ಹ್ಹ ಹ್ಹ ಹ್ಹ ಹ್ಹಾ !!!!!
ಎಂಥಾ ಟ್ವಿಸ್ಟ್ ಕೊಟ್ಟಿದ್ದೀರ !!!!
ನಾನು "ಸಂಪದ" ದ ಸದಸ್ಯನಾಗಿದ್ದರೂ ಬಹಳಷ್ಟು ಲೇಖನಗಳನ್ನ ಓದಲಿಕ್ಕೆ ಸಮಯ ಸಿಕ್ಕಿರಲಿಲ್ಲ... ನಿಮ್ಮ ಲೇಖನದ ಟೈಟಲ್ ನನ್ನ ಓದೋಹಾಗೆ ಮಾಡ್ತು. ಓದಿದ್ದಕ್ಕೆ ಖುಷಿ ಆಯ್ತು.
ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ